Tag: gujarat electin results 2017

  • ಗುಜರಾತ್‍ನಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ ಗತಿ ಏನಾಯ್ತು?

    ಗುಜರಾತ್‍ನಲ್ಲಿ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಆಪ್ ಗತಿ ಏನಾಯ್ತು?

    ನವದೆಹಲಿ: ಗುಜರಾತ್ ಹಾಗೂ ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಜರಾತ್‍ನಲ್ಲಿ ಬಿಜೆಪಿ ಸತತ 6ನೇ ಬಾರಿ ಸರ್ಕಾರ ರಚಿಸಲು ಸಿದ್ಧವಾಗ್ತಿದೆ. ಹಾಗೆ ಕಾಂಗ್ರೆಸ್ ಕೂಡ ಉತ್ತಮ ಸಾಧನೆ ಮಾಡಿದೆ ಎಂದೇ ಸುದ್ದಿಯಾಗ್ತಿದೆ. ಆದ್ರೆ ಈ ಮಧ್ಯೆ ಗುಜರಾತ್‍ನ ಒಟ್ಟು 182 ಕ್ಷೇತ್ರಗಳಲ್ಲಿ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಾರ್ಟಿ ಧೂಳಿಪಟವಾಗಿದೆ.

    2 ವರ್ಷಗಳ ಹಿಂದೆ ದೆಹಲಿಯಲ್ಲಿ ಬಿಜೆಪಿಯನ್ನೇ ಮುಳುಗಿಸಿದ್ದ ಆಪ್ ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧೆಯೊಡ್ಡಿದ್ದು ಬಿಟ್ಟರೆ ಉಳಿದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವರಂತೂ ಎರಡಂಕಿ ಮತಗಳನ್ನ ಪಡೆದಿದ್ದಾರೆ.

    ಆಪ್ ತನ್ನ ಇರುವಿಕೆಯನ್ನ ತೋರಿಸಿದ ಮೂರು ಕ್ಷೇತ್ರಗಳೆಂದರೆ ಚೋಟಾ ಉದೇಪುರ್, ವಂಕಾನೇರ್ ಹಾಗೂ ಬಾಪೂನಗರ್. ಚೋಟಾ ಉದೇಪುರ್‍ನಲ್ಲಿ ಆಪ್‍ನ ಅರ್ಜುನ್ ಭಾಯ್ ವಸಿಂಗ್‍ಭಾಯ್ ರತ್ವಾ 4500 ಮತಗಳನ್ನ ಪಡೆದಿದ್ದು, ಗುಜರಾತ್ ನಲ್ಲಿ ಇದೇ ಆಪ್ ನ ಅತ್ಯುತ್ತಮ ಸಾಧನೆ ಎಂದು ವರದಿಯಾಗಿದೆ.

    ಚೋಟಾ ಉದೇಪುರ್ ಕ್ಷೇತ್ರದಲ್ಲಿ ಗೆಲುವಿನ ಅಂತರವನ್ನ ನೋಡಿದಾಗ ರತ್ವಾ ಅವರ ಮತಗಳಿಕೆ ಗಮನಾರ್ಹವಾಗಿದೆ. ಇಲ್ಲಿ ಜಯ ಗಳಿಸಿರೋ ಕಾಂಗ್ರೆಸ್‍ನ ಮೋಹನ್ ಸಿನ್ ಚೋಟುಭಾಯ್ ಬಿಜೆಪಿಯ ಜಶುಭಾಯ್ ಭಿಲುಭಾಯ್ ರತ್ವಾ ಅವರನ್ನ ಕೇವಲ 1000 ಮತಗಳಿಂದ ಸೋಲಿಸಿದ್ದಾರೆ.

    ಅದರಂತೆ ವಾಂಕನೇರ್‍ನಲ್ಲಿ ಆಪ್‍ನ ಶೇರಾಸಿಯಾ ಉಸ್ಮಾಂಗನಿ ಹುಶೇನ್ 3000 ಕ್ಕೆ ಹತ್ತಿರದ ಮತಗಳನ್ನ ಗಳಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಮತ್ತೊಮ್ಮೆ ಗೆಲುವಿನ ಅಂತರ 3 ಸಾವಿರ ಮತಗಳಿಗಿಂತ ಕಡಿಮೆ.

    ಇನ್ನು ಪಾಟಿದಾರ್ ಪ್ರಾಬಲ್ಯವಿರೋ ಉಂಜಾ ಕ್ಷೇತ್ರದಲ್ಲಿ ಆಪ್‍ನ ರಮೇಶ್ ಪಟೇಲ್ 8ನೇ ಸ್ಥಾನದಲ್ಲಿದ್ದು, 400ಕ್ಕಿಂತ ಕಡಿಮೆ ಮತ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್‍ನ ಡಾ. ಆಶಾ ಪಟೇಲ್ 80,927 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

    ವರದಿಗಳ ಪ್ರಕಾರ ಆಪ್ ಸುಮಾರು 30 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದ್ದರೂ, 10 ಸ್ಥಾನಗಳ ಮೇಲೆ ಮಾತ್ರ ಗಮನ ಹರಿಸಲು ತೀರ್ಮಾನಿಸಿತ್ತು. ಆಂತರಿಕ ಸಮೀಕ್ಷೆಯ ಪ್ರಕಾರ ಆಪ್ ಈ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂಬ ನಿರೀಕ್ಷೆಯಲ್ಲಿತ್ತು. ಆ ಹತ್ತು ಕ್ಷೇತ್ರಗಳಲ್ಲಿ ಉಂಜಾ, ಚೋಟಾ ಉದೇಪುರ್ ಹೊರತುಪಡಿಸಿ ಉಳಿದ ಕಡೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಅವರು ಪಡೆದ ಮತಗಳು ಈ ಕೆಳಕಂಡಂತಿವೆ

    ಪಲಂಪುರ್- ನಭಾನಿ ರಮೇಶ್‍ಕುಮಾರ್ ಖೇಮ್‍ರಾಜ್‍ಬಾಯ್ (452 ಮತಗಳು)
    ರಾಜ್‍ಕೋಟ್(ಪೂರ್ವ)- ಅಜಿತ್ ಘುಸಾಭಾಯ್ ಲೋಕಿಲ್(1927 ಮತಗಳು)
    ಗೋಂಡಾಲ್- ಕುಂಟ್ ನಿಮಿಶಾಬೇನ್ ಧೀರಜ್‍ಲಾಲ್(2179 ಮತಗಳು)
    ಲಾತಿ ಎಂಡಿ ಭಾನುಭಾಯ್ ಮಂಜಾರಿಯಾ( 797 ಮತಗಳು)
    ಕಮ್ರೇಜ್- ರಾಮ್ ಧಡುಕ್(1454 ಮತಗಳು)
    ಕರಂಜ್- ಮೆಹ್ತಾ ಜಿಗ್ನೇಶ್ ಧೀರಜ್‍ಲಾಲ್(325 ಮತಗಳು)
    ಪರ್ದಿ ಡಾ ರಾಜೀವ್ ಶಂಭುನಾತ್ ಪಾಂಡೇ ( 539 ಮತಗಳು)
    ಧ್ರಾಂಗಧ್ರಾ- ದಧಾನಿಯಾ ಕಮ್ಲೇಶ್ ಮುಲ್ಜಿಭಾಯ್(505 ಮತಗಳು)

  • ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

    ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

    ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಆದರೂ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂಬ ವಿಶ್ಲೇಷಣೆ ಶುರುವಾಗಿದೆ. ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ? ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ ಅಂಶಗಳೇನು ಅನ್ನೋದು ಇಲ್ಲಿದೆ.

    ಕಾಂಗ್ರೆಸ್ ಗೆದ್ದಿದ್ದೆಲ್ಲಿ?: ಮೋದಿ ಹವಾ ನಡುವೆಯೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. 1990ರ ಬಳಿಕ ಕಾಂಗ್ರೆಸ್ಸಿನದು ಅತ್ಯುತ್ತಮ ಸಾಧನೆಯಾಗಿದೆ. ಕಡೆ ಕ್ಷಣದಲ್ಲಿ ಹಿಂದೂ ದೇವಾಲಯಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದು ವರದಾನವಾಗಿ ಪರಿಣಮಿಸಿದೆ.

    30 ಕಡೆ ರಾಹುಲ್ ಗಾಂಧಿ ಕೈಗೊಂಡ ರ‍್ಯಾಲಿಗಳಿಂದ ಚೇತರಿಕೆಯಾಗಿದೆ. ಮತ್ತೊಂದು ಕಡೆ ಜಿಗ್ನೇಶ್ ಮೆವಾನಿ, ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಪ್ರಚಾರ ವರದಾನವಾಗಿದೆ. ರಾಹುಲ್ ಸೇರಿ, ನಾಲ್ವರು ಯುವ ನಾಯಕರೇ ಕಾಂಗ್ರೆಸ್ಸಿಗೆ ಆನೆಬಲ ಅಂತಾರೆ ರಾಜಕೀಯ ವಿಶ್ಲೇಷಕರು.

    ಬಿಜೆಪಿ ಸೋತಿದ್ದೆಲ್ಲಿ?: ಗ್ರಾಮೀಣ ಪ್ರದೇಶಗಳಲ್ಲಿ ಮೋದಿ ತಂತ್ರ ವರ್ಕ್ ಔಟ್ ಆದಂತಿಲ್ಲ. 2012ಕ್ಕೆ ಹೋಲಿಸಿದರೆ ಬಿಜೆಪಿ ಕಳೆದುಕೊಂಡಿದ್ದೇ ಹೆಚ್ಚು. ಮೋರ್ಬಿ, ಅಮ್ರೇಲಿ, ತಾಪಿ, ಡಾಂಗ್ಸ್, ನರ್ಮದಾ ಜಿಲ್ಲೆಗಳಲ್ಲಿ ಶೂನ್ಯ ಸಂಪಾದನೆಯಾಗಿದೆ. 1995ರ ನಂತರ ಇದು ಬಿಜೆಪಿಯ ಕಳಪೆ ಸಾಧನೆ ಅಂತ ವಿಶ್ಲೇಷಿಸಲಾಗಿದೆ.

    ಇದನ್ನೂ ಓದಿ: ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?

    
     
    
     
    
     
     
    
      
    
    
     
  • ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?

    ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ? ಕಾಂಗ್ರೆಸ್ ಸೋತಿದ್ದೆಲ್ಲಿ?

    ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಗುಜರಾತ್‍ನಲ್ಲಿ ಸತತ 6ನೇ ಬಾರಿಗೆ ಸರ್ಕಾರ ರಚನೆಗೆ ಸಿದ್ಧವಾಗ್ತಿದೆ. ಗುಜರಾತ್‍ನಲ್ಲಿ ಬಿಜೆಪಿ ಗೆಲುವಿಗೆ ವರದಾನವಾಗಿದ್ದೇನು ಹಾಗೂ ಕಾಂಗ್ರೆಸ್ ಸೋಲಿಗೆ ಕಾರಣವಾದ ಅಂಶಗಳೇನು ಅನ್ನೋದು ಇಲ್ಲಿದೆ.

    ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದ್ದೆಲ್ಲಿ?: ವಿಕಾಸ, ರಾಮಮಂದಿರ ಜಪದಿಂದ ಬಿಜೆಪಿಗೆ ಗೆಲುವು ಸಿಕ್ಕಿದೆ. ನಗರ ಪ್ರದೇಶಗಳಲ್ಲಿ ಮೋದಿ ರ‍್ಯಾಲಿ ವರದಾನವಾದಂತಿದೆ. 34 ಕಡೆ ಮೋದಿ ರ‍್ಯಾಲಿ ನಡೆಸಿದ್ದು ಬಿಜೆಪಿಗೆ ಪ್ಲಸ್ ಪಾಯಿಂಟ್. ವಿಶೇಷವಾಗಿ ಯುವ ಮತದಾರರು ಮೋದಿ ಮುಖವನ್ನು ನೋಡಿ ಮತ ಹಾಕಿದ್ದಾರೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಮೀಸಲಾತಿ ಪರ ಪಟೇಲ್ ಸಮುದಾಯವರು ಹೋರಾಟ ನಡೆಸಿದರೂ ಬಹಳಷ್ಟು ಹೋರಾಟಗಾರರು ಬಿಜೆಪಿ ಸೇರ್ಪಡೆಯಾಗಿದ್ದರು. ಈ ಮಧ್ಯೆ ಹಾರ್ದಿಕ್ ಪಟೇಲ್ ಸೆಕ್ಸ್ ಸಿಡಿ ಬಿಡುಗಡೆಯಾದ ಬಳಿಕ ಹಾರ್ದಿಕ್ ಪಟೇಲ್ ವಿರೋಧಿಗಳ ಸಂಖ್ಯೆ ಜಾಸ್ತಿಯಾಗಿದ್ದು ಬಿಜೆಪಿಗೆ ವರದಾನವಾಯಿತು.

    ಗುಜರಾತ್‍ನಲ್ಲಿ ಕಾಂಗ್ರೆಸ್ ಸೋತಿದ್ದೆಲ್ಲಿ?: ನವಸಾರಿ, ಅರ್ವಾಲಿ ಜಿಲ್ಲೆಗಳಲ್ಲಿ ಶೂನ್ಯ ಸಂಪಾದನೆಯಾಗಿದೆ. ಮಣಿಶಂಕರ್ ಅಯ್ಯರ್ ‘ನೀಚ’ ಪದ ಬಳಕೆ ಕಾಂಗ್ರೆಸ್‍ಗೆ ದೊಡ್ಡ ಹೊಡೆತ ನೀಡಿದೆ. ‘ರಾಮಮಂದಿರ’ ಕುರಿತ ಕಪಿಲ್ ಸಿಬಲ್ ಹೇಳಿಕೆಯಿಂದಲೂ ಡ್ಯಾಮೇಜ್ ಆಗಿದೆ ಅಂತ ವಿಶ್ಲೇಷಿಸಲಾಗಿದೆ.

    ಇದರ ಜೊತೆಯಲ್ಲೇ ಗುಜರಾತ್‍ನಲ್ಲಿ ಭೀಕರ ನೆರೆ ಬಂದಾಗಲೂ ರಾಜ್ಯಸಭೆಗೆ ನಿಂತಿದ್ದ ಅಹ್ಮದ್ ಪಟೇಲ್ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ ಗೆ ಶಿಫ್ಟ್ ಆಗಿದ್ದರು. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಪ್ರಚಾರ ನಡೆಸಿದ್ದರಿಂದ ಮತ್ತೊಮ್ಮೆ ಜನ ಕಮಲದ ಕೈ ಹಿಡಿದ್ದಾರೆ.

    ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?

  • ಅಣಬೆ ಕೇಕ್ ಕತ್ತರಿಸಿ ಬಿಜೆಪಿ ಸಂಭ್ರಮಾಚರಣೆ

    ಅಣಬೆ ಕೇಕ್ ಕತ್ತರಿಸಿ ಬಿಜೆಪಿ ಸಂಭ್ರಮಾಚರಣೆ

    ನವದೆಹಲಿ: ಗುಜರಾತ್ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಅಣಬೆ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡೋ ಮೂಲಕ ಕಾಂಗ್ರೆಸ್‍ನ ಅಲ್ಪೇಶ್ ಠಾಕೂರ್‍ಗೆ ಟಾಂಗ್ ನೀಡಿದ್ದಾರೆ.

    ಪಕ್ಷದ ದೆಹಲಿ ಘಟಕದ ವಕ್ತಾರರಾದ ತಜಿಂದರ್ ಸಿಂಗ್ ಅಲ್ಪೇಶ್ ಠಾಕೂರ್ ಟಾಂಗ್ ಕಡುವ ಸಲುವಾಗಿ ಅಣಬೆ ಕೇಕ್ ಕತ್ತರಿಸೋ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ.

    ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ್ ಠಾಕೋರ್ ಚುನಾವಣಾ ಪ್ರಚಾರದ ವೇಳೆ ಮೋದಿ ತೈವಾನ್ ಅಣಬೆ ತಿಂದು ಬೆಳ್ಳಗಾಗಿದ್ದಾರೆ ಎಂದು ಹೇಳಿಕೆ ನೀಡಿದ್ದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಈ ಒಂದು ಅಣಬೆ ಬೆಲೆ 80 ಸಾವಿರ ರೂ. ದಿನಕ್ಕೆ 5 ಅಣಬೆಗಳನ್ನ ಮೋದಿ ತಿಂತಾರೆ ಅಂತ ಅಲ್ಪೇಶ್ ಹೇಳಿದ್ದರು.

    ಮೋದಿ ನನ್ನಂತೆ ಕಪ್ಪಗಿದ್ದರು. ಆದ್ರೆ ವಿದೇಶಿ ಅಣಬೆ ತಿಂದು ಬೆಳ್ಳಗಾದ್ರು ಎಂದು ಅಲ್ಪೇಶ್ ಹೇಳಿದ್ದರು.

    ಇನ್ನು ಗುಜರಾತ್‍ನ ರಾಧಾನ್‍ಪುರ್ ನಿಂದ ಸ್ಪರ್ಧಿಸಿದ್ದ ಅಲ್ಪೇಶ್ ಠಾಕೂರ್‍ ಜಯ ಸಾಧಿಸಿದ್ದಾರೆ.

  • ಯಾರನ್ನೂ ಭೇಟಿಯಾಗ್ದೆ ಗುಜರಾತ್ ಚುನಾವಣೆ ಫಲಿತಾಂಶದ ಮಾಹಿತಿ ಪಡೆಯುತ್ತಿರೋ ಬಿಎಸ್‍ವೈ

    ಯಾರನ್ನೂ ಭೇಟಿಯಾಗ್ದೆ ಗುಜರಾತ್ ಚುನಾವಣೆ ಫಲಿತಾಂಶದ ಮಾಹಿತಿ ಪಡೆಯುತ್ತಿರೋ ಬಿಎಸ್‍ವೈ

    ಬೆಂಗಳೂರು: ಗುಜರಾತ್ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಫಲಿತಾಂಶದ ಮಾಹಿತಿ ಪಡೆಯುತ್ತಿದ್ದಾರೆ.

    ಚುನಾವಣೆ ಮತ ಎಣಿಕೆಯಲ್ಲಿ ಪಕ್ಷಗಳ ಮುನ್ನಡೆ ಕ್ಷಣ ಕ್ಷಣಕ್ಕೂ ತೀವ್ರ ಕುತೂಹಲ ಮೂಡಿಸುತ್ತಿದ್ದು, ಬಿಎಸ್‍ವೈ ಯಾರನ್ನೂ ಭೇಟಿಯಾಗಿಲ್ಲ. ಭೇಟಿಯಾಗಲು ಬಂದ ಸಾರ್ವಜನಿಕರಿಗೆ ಬಿಎಸ್‍ವೈ ಭೇಟಿಯ ಅವಕಾಶ ಸಿಕ್ಕಿಲ್ಲ.

    ಯಾರನ್ನೂ ಭೇಟಿಯಾಗದೆ ಚುನಾವಣೆ ಫಲಿತಾಂಶದ ಮಾಹಿತಿ ಪಡೆಯುತ್ತಿರುವ ಯಡಿಯೂರಪ್ಪ, ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.

    ಭಾರೀ ಕುತೂಹಲ ಮೂಡಿಸುತ್ತಿರುವ ಗುಜರಾತ್ ಚುನಾವಣೆಯ ಫಲಿತಾಂಶಗಳು ನಿಮಿಷ ನಿಮಿಷಗಳಲ್ಲಿ ಬದಲಾಗುತ್ತಿದೆ. ಆರಂಭದ ಮತ ಎಣಿಕೆಯ ವೇಳೆ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ ತಿಳಿದುಬರಲಿದೆ.