Tag: gujarat assembly election

  • ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ

    ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ

    ಗಾಂಧಿನಗರ: ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್ ವಿಧಾನಸಭೆಗೆ (Gujarat Assembly Election) ಇಂದು ಮೊದಲ ಹಂತದ ಮತದಾನ ನಡೆಯಲಿದೆ. ಅಬ್ಬರದ ಪ್ರಚಾರದ ಬಳಿಕ ಇಂದು ಮೊದಲ ಹಂತದ ಮತದಾನ ನಡೆಯುತ್ತಿದ್ದು, 89 ಕ್ಷೇತ್ರಗಳಲ್ಲಿ 788 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ಮೋದಿ ತವರು ರಾಜ್ಯದಲ್ಲಿ ಈ ಬಾರಿ ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ತವರು ರಾಜ್ಯ ಗುಜರಾತ್‍ನ 19 ಜಿಲ್ಲೆಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಗುಜರಾತ್‍ನ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‍ನ ವಿಧಾನಸಭಾ ಕ್ಷೇತ್ರಗಳ 14,382 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಇದನ್ನೂ ಓದಿ: ಮತ್ತೆ ಪುಂಡಾಟ ಮೆರೆದ ಮರಾಠಿಗರು – ಬೆಳಗಾವಿಯಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ

    ಕಚ್, ಸುರೇಂದ್ರನಗರ, ರಾಜ್‍ಕೋಟ್, ಮೊರ್ಬಿ, ಜಾಮ್‍ನಗರ್, ದ್ವಾರಕಾ, ಜುನಾಗಢ್, ಪೋರಬಂದರ್, ಅಮ್ರೇಲಿ, ಗಿರ್ ಸೋಮನಾಥ್, ಬೋಟಾಡ್, ಭಾವನಗರ, ಭರೂಚ್, ನರ್ಮದಾ, ಡ್ಯಾಂಗ್ಸ್, ತಾಪಿ, ಸೂರತ್, ನವಸಾರಿ ಮತ್ತು ವಲ್ಸಾದ್ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಸಾಂಪ್ರದಾಯಿಕವಾಗಿ ಎದುರಾಳಿಗಳಾದ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಜೊತೆಗೆ ಈ ಬಾರಿ ಆಪ್ (AAP) ಕೂಡಾ ಸೇರ್ಪಡೆಯಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆಪ್ ಸಿಎಂ ಅಭ್ಯರ್ಥಿ ಇಸುದಾನ್ ಗಡ್ವಿ, ಗುಜರಾತ್ ಮಾಜಿ ಸಿಎಂ ಪುರುಷೋತ್ತಮ ಸೋಲಂಕಿ, ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಮೊದಲ ಹಂತದಲ್ಲಿ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.

    ಮೊದಲ ಹಂತದಲ್ಲಿ ಬಿಜೆಪಿ 9 ಕಾಂಗ್ರೆಸ್ 6 ಮತ್ತು ಎಎಪಿ ಐದು ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೊದಲ ಹಂತದಲ್ಲಿ ಕಣದಲ್ಲಿರುವ ಒಟ್ಟು 788 ಅಭ್ಯರ್ಥಿಗಳಲ್ಲಿ 718 ಪುರುಷರು ಮತ್ತು 70 ಮಹಿಳೆಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ ಮೊದಲ ಹಂತದಲ್ಲಿ 57 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಭಾರತೀಯ ಬುಡಕಟ್ಟು ಪಕ್ಷದ 14 ಅಭ್ಯರ್ಥಿಗಳು, 339 ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್‌ ಸೇವನೆ ಆರೋಪ – NCB ಅಧಿಕಾರಿಗಳಿಂದ 3 ಯುವತಿಯರು ವಶಕ್ಕೆ

    ಗುಜರಾತ್‍ನಲ್ಲಿ ಆಡಳಿತಾರೂಢ ಬಿಜೆಪಿಗೆ ಸುಮಾರು ಮೂರು ದಶಕಗಳ ಆಡಳಿತ ವಿರೋಧಿ ಅಲೆಯಿದೆ. ಈ ಮಧ್ಯೆ ಗುಜರಾತ್ ರಾಜಕೀಯದಲ್ಲಿ ಆಮ್ ಆದ್ಮಿ ಪಕ್ಷದ ತ್ವರಿತ ಬೆಳವಣಿಗೆ ಬಿಜೆಪಿಗೆ ದಿಗಿಲು ಹುಟ್ಟಿಸಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಅಕಾಲಿಯಂತಹ ಹಳೆಯ ಪಕ್ಷಗಳು ಆಮ್ ಆದ್ಮಿಪಕ್ಷದ ಮುಂದೆ ಮಂಡಿಯೂರಿವೆ. ದೆಹಲಿ ಮತ್ತು ಪಂಜಾಬ್ ಮಾದರಿಯಲ್ಲಿ ಗುಜರಾತ್‍ನ ಜನರಿಗೆ ಅಗ್ಗದ ವಿದ್ಯುತ್ ಮತ್ತು ನೀರನ್ನು ನೀಡುವ ಭರವಸೆಯನ್ನು ನೀಡಿದೆ. ಕಳೆದ ಒಂದು ವರ್ಷದಿಂದ ಆಮ್ ಆದ್ಮಿ ಪಕ್ಷದ ಇಬ್ಬರು ನಾಯಕರಾದ ಕೇಜ್ರಿವಾಲ್ ಹಾಗೂ ಮನಿಶ್ ಸಿಸೋಡಿಯಾ ಗುಜರಾತ್‌ನಲ್ಲಿ ನಿರಂತರ ಪ್ರವಾಸ ಮಾಡಿದ್ದು, ಮೂರು ದಶಕದಿಂದ ಬಿಜೆಪಿ ಮಣಿಸಲು ಸಾಧ್ಯವಾಗದ ಕಾಂಗ್ರೆಸ್‍ಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಸೋಲಿಸಲು ನಾವೇ ಸಮರ್ಥ ಎನ್ನುವ ಸಂದೇಶ ರವಾನಿಸಿದ್ದಾರೆ. ವಿರೋಧ ಪಕ್ಷವಾಗಿರುವ ಕಾಂಗ್ರೆಸ್‍ಗೂ ಇರುವ ವಿರೋಧಿ ಅಲೆಯನ್ನೇ ಎಎಪಿ ನಾಯಕರು ಹೊಸ ಅವಕಾಶ ಎನ್ನುವಂತೆ ಬಳಸಿಕೊಳ್ಳುತ್ತಿದ್ದಾರೆ.

    ಆಮ್ ಆದ್ಮಿ ಪಕ್ಷವು ಇಲ್ಲಿಯವರೆಗೆ ಎರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಆಮ್ ಆದ್ಮಿ ಪಕ್ಷ ಸಾಧಿಸಿರುವ ಎರಡು ಪ್ರಮುಖ ಯಶಸ್ಸುಗಳು ಕಾಂಗ್ರೆಸ್ ವಿರುದ್ಧವೇ ಆಗಿದೆ. ದೆಹಲಿ ಹಾಗೂ ಪಂಜಾಬ್‌ನಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಸೋಲಿಸಿ ಅಧಿಕಾರ ಹಿಡಿದಿದೆ. ಈ ಎರಡು ರಾಜ್ಯಗಳಲ್ಲಿ ಬಿಜೆಪಿ ಬಹಳಷ್ಟು ದುರ್ಬಲವಾಗಿತ್ತು. ಆದರೆ ಗುಜರಾತ್‍ನಲ್ಲಿ ಎಎಪಿಗೆ ಸುಲಭವಾಗಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಬಿಜೆಪಿಯನ್ನು ಆಡಳಿತದಿಂದ ಕೆಳಗಿಳಿಸಿದ ಇತಿಹಾಸ ಆಮ್ ಆದ್ಮಿ ಪಕ್ಷಕ್ಕೆ ಇಲ್ಲ. ಅದಾಗ್ಯೂ ಆಪ್ ಈ ಪ್ರಯತ್ನದಲ್ಲಿದ್ದು, ಇಂದು ಗೆಲುವು ಯಾರತ್ತ ಎನ್ನುವುದಕ್ಕೆ ಸಣ್ಣ ಸುಳಿವು ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಸಿಎಂ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು – ಮನೀಶ್ ಸಿಸೋಡಿಯಾ ಆರೋಪ

    ದೆಹಲಿ ಸಿಎಂ ಕೇಜ್ರಿವಾಲ್ ಹತ್ಯೆಗೆ ಬಿಜೆಪಿ ಸಂಚು – ಮನೀಶ್ ಸಿಸೋಡಿಯಾ ಆರೋಪ

    ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆ (Gujarat Assembly Election) ಹಾಗೂ ದೆಹಲಿಯ ಮಹಾನಗರಪಾಲಿಕೆ (MCD) ಚುನಾವಣಾ ಸೋಲಿನ ಭೀತಿಯಿಂದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಗಂಭೀರ ಆರೋಪ ಮಾಡಿದ್ದಾರೆ.

    ಕೇಜ್ರಿವಾಲ್ ಹತ್ಯೆಗೆ ಸಂಚು ರೂಪಿಸಿದ್ದು, ದೆಹಲಿ ಸಂಸದ ಮನೋಜ್ ತಿವಾರಿ (Manoj Tiwari) ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮನೋಜ್ ತಿವಾರಿ ಕೇಜ್ರಿವಾಲ್ ಭದ್ರತೆಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಮರು ದಿವಸ ಸಿಸೋಡಿಯಾ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ತಿಹಾರ್ ಜೈಲಿನ ಬಳಿಯೇ ಕೈ ನಾಯಕಿಯ ಕಾರು ಕಳ್ಳತನ – ವೀಡಿಯೋ ಪೋಸ್ಟ್ ಮಾಡಿ ಪಂಖೂರಿ ಪಾಠಕ್ ಕಿಡಿ

    ಅರವಿಂದ್ ಕೇಜ್ರಿವಾಲ್ ಅವರನ್ನ ಹತ್ಯೆ ಮಾಡಲು ಬಿಜೆಪಿ ಸಂಚು ರೂಪಿಸಿದೆ. ಸಂಸದ ಮನೋಜ್ ತಿವಾರಿ ಬಹಿರಂಗವಾಗಿಯೇ ತಮ್ಮ ಗುಂಡಾಗಳಿಗೆ ದಾಳಿ ಮಾಡುವಂತೆ ಹೇಳುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಯೋಜನೆ ರೂಪಿಸಿದ್ದಾರೆ. ಆದರೆ ಎಎಪಿ ಇಂತಹ ನೀಚ ರಾಜಕಾರಣಕ್ಕೆ ಹೆದರೋದಿಲ್ಲ. ಗೂಂಡಾಗಿರಿ ಮಾಡುವ ಜನರಿಗೆ ಅವರದ್ದೇ ರೀತಿಯಲ್ಲಿ ತಕ್ಕ ಉತ್ತರ ಕೊಡುತ್ತದೆ ಎಂದು ಸಿಸೋಡಿಯಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಮಹಿಳಾ ನಾಯಕಿ ವಿರುದ್ಧ ಅಶ್ಲೀಲ ಟೀಕೆ ಆಡಿಯೋ ವೈರಲ್‌ – ಬಿಜೆಪಿ ನಾಯಕ ಸಸ್ಪೆಂಡ್

    ಅರವಿಂದ್ ಕೇಜ್ರಿವಾಲ್ ಅವರ ಭದ್ರತೆಯ ಬಗ್ಗೆ ನಾನು ಕಳಕಳಿ ವ್ಯಕ್ತಪಡಿಸುತ್ತೇನೆ. ಏಕೆಂದರೆ ನಿರಂತರ ಭ್ರಷ್ಟಾಚಾರ, ಎಂಸಿಡಿ ಚುನಾವಣೆಯಲ್ಲಿ ಟಿಕೆಟ್ ಮಾರಾಟ, ಅತ್ಯಾಚಾರಿಗಳೊಂದಿಗೆ ಸ್ನೇಹ ಹಾಗೂ ಜೈಲಿನಲ್ಲಿ ಮಸಾಜ್ ಇಂತಹ ಹಲವು ಘಟನೆಗಳಿಂದ ಎಎಪಿ ಸ್ವಯಂ ಸೇವಕರು ಕೋಪಗೊಂಡಿದ್ದಾರೆ. ಅಲ್ಲದೇ ಕೆಲವು ಶಾಸಕರಿಗೂ ಥಳಿಸಿದ್ದಾರೆ. ದೆಹಲಿಯ ಮುಖ್ಯಮಂತ್ರಿಗಳಿಗೆ ಹೀಗೆ ಆಗಬಾರದು ಎಂದು ಹಿಂದಿಯಲ್ಲಿ ಮನೋಜ್ ತಿವಾರಿ ಟ್ವೀಟ್ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್ ವಿಧಾನಸಭೆ ಚುನಾವಣೆ – ಪಾಟಿದಾರರ ವೋಟು ಯಾರಿಗೆ?

    ಗುಜರಾತ್ ವಿಧಾನಸಭೆ ಚುನಾವಣೆ – ಪಾಟಿದಾರರ ವೋಟು ಯಾರಿಗೆ?

    ನವದೆಹಲಿ: ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Assembly Election) ಪ್ರಚಾರ ಭರದಿಂದ ಸಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಆದಿಯಾಗಿ ಬಿಜೆಪಿಯ (BJP) ಎಲ್ಲ ನಾಯಕರು ಅದ್ಧೂರಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಪ್ರತಿಪಕ್ಷಗಳಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ (Rahul Gandhi)  ಆಪ್‍ನಿಂದ (AAP) ಅರವಿಂದ್ ಕೇಜ್ರಿವಾಲ್ (Arvind Kejriwal) ಹೀಗೆ ಹಲವು ನಾಯಕರು ಗಾಂಧಿ ನಾಡಲ್ಲಿ ಠಿಕಾಣಿ ಹೂಡಿದ್ದಾರೆ.

    ಎಲ್ಲ ರಾಜ್ಯಗಳಂತೆ ಗುಜರಾತ್‍ನಲ್ಲಿ ಜಾತಿ ರಾಜಕಾರಣದ ಲೆಕ್ಕಾಚಾರ ನಡೆಯುತ್ತಿದ್ದು ಈ ಬಾರಿ ಪಾಟಿದಾರ್ ಸಮುದಾಯ ಯಾರಿಗೆ ಮತ ನೀಡಲಿದೆ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಕಳೆದ ಬಾರಿ ಪಾಟಿದಾರ್ ಹೋರಾಟ ತೀವ್ರಗೊಂಡಿದ್ದ ಹಿನ್ನೆಲೆ ಮತಗಳು ಕಾಂಗ್ರೆಸ್ (Congress) ಮತ್ತು ಬಿಜೆಪಿಯ ನಡುವೆ ಛಿದ್ರವಾಗಿದ್ದವು. ಕಾಂಗ್ರೆಸ್ ಕೊಂಚ ಹೆಚ್ಚು ಮತಗಳನ್ನು ಪಡೆದುಕೊಂಡಿತ್ತು. ಇದನ್ನೂ ಓದಿ: ಪುರುಷರು ಜೊತೆಯಲ್ಲಿರದಿದ್ದರೆ ಮಹಿಳೆಯರಿಗಿಲ್ಲ ಜಾಮಾ ಮಸೀದಿ ಪ್ರವೇಶ

    2017ರ ಚುನಾವಣೆಯಲ್ಲಿ ಪಾಟಿದಾರ್ ಸಮುದಾಯ ಬಲಿಷ್ಠವಾಗಿರುವ 40 ಕ್ಷೇತ್ರಗಳ ಪೈಕಿ 24 ಸ್ಥಾನಗಳಲ್ಲಿ ಬಿಜೆಪಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಸೌರಾಷ್ಟ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ಅಹಮದಾಬಾದ್ ಮತ್ತು ಗಾಂಧಿನಗರದ ನಗರ ಕೇಂದ್ರಗಳಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತು. 2012ರಲ್ಲಿ ಬಿಜೆಪಿ 28, ಕಾಂಗ್ರೆಸ್ 09 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಇದನ್ನೂ ಓದಿ: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಕಳೆದ ಬಾರಿ ಉತ್ತಮ ಸಾಧನೆ ಮಾಡಿದ್ದ ಕಾಂಗ್ರೆಸ್‍ಗೆ ಈ ಬಾರಿ ಹಿನ್ನಡೆಯಾಗಬಹುದು ಎನ್ನಲಾಗುತ್ತಿದೆ. ಪಾಟಿದಾರ್ ಹೋರಾಟ ಅಂತ್ಯವಾಗಿದೆ. ಹೋರಾಟದ ಪ್ರಮುಖ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಅವರು ಅಹಮದಾಬಾದ್ ಜಿಲ್ಲೆಯ ವಿರಾಮ್‌ಗಾಮ್‌ನಿಂದ ಸ್ಪರ್ಧಿಸುತ್ತಿದ್ದಾರೆ.

    ಕಳೆದ ಬಾರಿ ಹೋರಾಟಕ್ಕೆ ಬೆಂಬಲ ನೀಡಿದ ಹಿನ್ನೆಲೆ ಹೆಚ್ಚು ಸ್ಥಾನ ಪಡೆಯುವಲ್ಲಿ ಸಫಲವಾಗಿತ್ತು. ಈ ಬಾರಿ ಹೋರಾಟವೂ ಇಲ್ಲ, ಹೋರಾಟ ನಾಯಕನೂ ಇಲ್ಲದಂತ ಪರಿಸ್ಥಿತಿ ಕಾಂಗ್ರೆಸ್‍ನಲ್ಲಿ ನಿರ್ಮಾಣವಾಗಿದೆ. ಮುಖ್ಯವಾಗಿ ಕೇಂದ್ರ ಸರ್ಕಾರದ 10% ಮೀಸಲಾತಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿರುವುದು ಬಿಜೆಪಿಗೆ ಹೆಚ್ಚು ಲಾಭ ತಂದುಕೊಡಬಹುದು ಎನ್ನಲಾಗುತ್ತಿದೆ.

    ಪಾಟಿದಾರ್‌ಗಳು ಗುಜರಾತ್‍ನಲ್ಲಿ ಹೆಚ್ಚು ಭೂಮಿ ಹೊಂದಿರುವವರು ಮತ್ತು ಕೃಷಿಕ ಜಾತಿ, ಗುಜರಾತ್‍ನ ಜನಸಂಖ್ಯೆಯ 12% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ ಮತ್ತು ರಾಜ್ಯದ ರಾಜಕೀಯದಲ್ಲಿ ಗಮನಾರ್ಹವಾದ ಹಿಡಿತವನ್ನು ಹೊಂದಿದ್ದಾರೆ. ಈ ಹಿನ್ನೆಲೆ ಆಪ್ ಕೂಡಾ ಹೆಚ್ಚಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಸದ್ಯಕ್ಕೆ 44 ಶಾಸಕರಿರುವ ಪಾಟಿದಾರ್ ಶಾಸಕರ ಸಂಖ್ಯೆ ಈ ಬಾರಿ ಹೆಚ್ಚಬಹುದು ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗುಜರಾತ್‌ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್‌ ಇಸುದನ್‌ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ

    ಗುಜರಾತ್‌ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್‌ ಇಸುದನ್‌ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ

    ನವದೆಹಲಿ: ಆಮ್ ಆದ್ಮಿ ಪಕ್ಷ (AAP) ಇಸುದನ್ ಗಧ್ವಿ (Isudan Gadhvi) ಅವರನ್ನು ಗುಜರಾತ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಶುಕ್ರವಾರ ಘೋಷಿಸಿದೆ. ಡಿ.1 ಮತ್ತು 5 ರಂದು ಎರಡು ಹಂತದಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆಗೆ (Gujarat Assembly Election) ಮತದಾನ ನಡೆಯಲಿದೆ.

    ಮಾಜಿ ಪತ್ರಕರ್ತ ಮತ್ತು ಟಿವಿ ನಿರೂಪಕ ಇಸುದನ್ ಗಧ್ವಿ ಅವರು, ಗುಜರಾತ್ ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಕುರಿತು ಎಎಪಿ ನಡೆಸಿದ ಸಮೀಕ್ಷೆಯಲ್ಲಿ ಶೇ.73 ರಷ್ಟು ಮತಗಳನ್ನು ಗಳಿಸಿದ್ದಾರೆ. ಪಂಜಾಬ್‌ನಲ್ಲಿ ಇದೇ ರೀತಿಯ ಸಮೀಕ್ಷೆಯ ನಂತರ ಪಕ್ಷವು ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿತ್ತು. ಇದನ್ನೂ ಓದಿ: ಗುಜರಾತ್‌ ಚುನಾವಣೆ – ಇಂದು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ

    ಇಸುದನ್ ಗಧ್ವಿ ಕಳೆದ ವರ್ಷ ಜೂನ್‌ನಲ್ಲಿ ಎಎಪಿ ಸೇರಿದ್ದರು. ಸದ್ಯ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ, ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯ ಸಿಎಂ ಅಭ್ಯರ್ಥಿಯ ರೇಸ್‌ನಲ್ಲಿದ್ದರು.

    ಗುಜರಾತ್ ವಿಧಾನಸಭೆ ಚುನಾವಣೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ವಿಧಾನಸಭೆಯ 182 ಸ್ಥಾನಗಳ ಪೈಕಿ ಮೊದಲ ಹಂತದಲ್ಲಿ 89 ಮತ್ತು ಎರಡನೇ ಹಂತದಲ್ಲಿ 93 ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ ವರ್ಷ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಬಿಜೆಪಿಗೆ ಅಧಿಕಾರ – ಆಪ್‌ಗೆ ಮೂರನೇ ಸ್ಥಾನ

    Live Tv
    [brid partner=56869869 player=32851 video=960834 autoplay=true]