Tag: gujarat

  • ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ – ಅಪ್ರಾಪ್ತ ಚಾಲಕನಿಗೆ ಸ್ಥಳೀಯರಿಂದ ಧರ್ಮದೇಟು

    ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ – ಅಪ್ರಾಪ್ತ ಚಾಲಕನಿಗೆ ಸ್ಥಳೀಯರಿಂದ ಧರ್ಮದೇಟು

    – ಅದೃಷ್ಟವಶಾತ್‌ ಬಾಲಕಿ ಪಾರು

    ಗಾಂಧಿನಗರ: ಅಹಮದಾಬಾದ್‌ನ (Ahmedabad) ನೋಬಲ್‌ನಗರದಲ್ಲಿ ಅಪ್ರಾಪ್ತನೊಬ್ಬ ಚಲಾಯಿಸುತ್ತಿದ್ದ ಕಾರು (Car) ಮೂರು ವರ್ಷದ ಬಾಲಕಿಗೆ (Accident) ಡಿಕ್ಕಿಯಾಗಿದೆ. ‌

    ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸರೆಯಾಗಿದ್ದು, ಬಾಲಕಿಗೆ ಕಾರಿನ ಮುಂಭಾಗ ಡಿಕ್ಕಿಯಾಗಿ ಕೆಳಕ್ಕೆ ಬಿದ್ದಿದ್ದಾಳೆ. ಅದೃಷ್ಟವಶಾತ್‌ ಬಾಲಕಿ ಕಾರಿನ ನಡು ಭಾಗದಲ್ಲಿ ಕೆಳಗೆ ಬಿದ್ದಿದ್ದಾಳೆ. ಕಾರು ಮುಂದೆ ಚಲಿಸುತ್ತಿದ್ದಂತೆ, ಹಿಂಬದಿಯಿಂದ ಎದ್ದು ನಡೆದು ಬಂದಿದ್ದಾಳೆ. ಈ ವೇಳೆ ಅಪ್ರಾಪ್ತ ಕಾರು ನಿಲ್ಲಿಸಿ ಬಾಲಕಿ ಬಳಿ ಬಂದಿದ್ದಾನೆ. ಇದನ್ನೂ ಓದಿ: ಟಿಪ್ಪರ್‌, ಇನ್ನೋವಾ ನಡುವೆ ಡಿಕ್ಕಿ – ಚಾಲಕ ಸಜೀವ ದಹನ

    ಸ್ಥಳಕ್ಕೆ ಬಂದ ಸ್ಥಳೀಯ ನಿವಾಸಿಗಳು ಬಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಕಪಾಳಮೋಕ್ಷ ಮಾಡಿದ್ದಾರೆ. ಬಾಲಕನಿಗೆ ಕಪಾಳಮೋಕ್ಷ ಮಾಡುವ ವೀಡಿಯೋ ವೈರಲ್‌ ಆಗಿದೆ. ಈ ಸಂಬಂಧ ಚಾಲಕನ ವಿರುದ್ಧ ಅಹಮದಾಬಾದ್ ಪೊಲೀಸರು ಬಿಎನ್ಎಸ್ ಸೆಕ್ಷನ್ 281, 125(ಎ), ಮತ್ತು ಮೋಟಾರು ವಾಹನ ಕಾಯ್ದೆ ಸೆಕ್ಷನ್ 177, 184, 181 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಕಾರಿನ ಕೀಗಳನ್ನು ಅಪ್ರಾಪ್ತರಿಗೆ ನೀಡಬಾರದು. ಅವರಿಗೆ ಸಿಗದಂತೆ ಇಡಬೇಕು ಎಂದು ಒಬ್ಬರು ಅಪಘಾತದ ವೀಡಿಯೋಗೆ ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು ಪವಾಡಗಳು ಸಂಭವಿಸುತ್ತವೆ ಎಂಬುದಕ್ಕೆ ಈ ವೀಡಿಯೊ ಪುರಾವೆಯಾಗಿದೆ. ಆದರೆ ಪ್ರತಿ ಬಾರಿಯೂ ಅದು ಸಂಭವಿಸಲ್ಲ. ರಸ್ತೆ ಆಟದ ಮೈದಾನವಲ್ಲ, ಪೋಷಕರು ಯಾವಾಗಲೂ ಮಕ್ಕಳ ಮೇಲೆ ಕಣ್ಣಿಡಬೇಕು ಎಂದು ಬರೆದುಕೊಂಡಿದ್ದಾರೆ.

    ಮತ್ತೊಬ್ಬರು, ಅಪ್ರಾಪ್ತ ವಯಸ್ಕನಿಗೆ ಕಾರಿನ ಕೀ ಹೇಗೆ ಸಿಕ್ಕಿತು? ಅವನ ಪೋಷಕರನ್ನು ಶಾಶ್ವತವಾಗಿ ಜೈಲಿಗೆ ಹಾಕಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬೆಳಗಾವಿ | ಭಿಕ್ಷೆ ಬೇಡುತ್ತಾ ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಹರಿದ ಲಾರಿ – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಇದೆ: ಗುಜರಾತ್‌ ಕ್ಯಾಬಿನೆಟ್ ಮಿನಿಸ್ಟರ್‌ ಆದ ಪತ್ನಿಗೆ ಜಡೇಜಾ ವಿಶ್‌

    ನಿಮ್ಮ ಸಾಧನೆಗಳ ಬಗ್ಗೆ ಹೆಮ್ಮೆ ಇದೆ: ಗುಜರಾತ್‌ ಕ್ಯಾಬಿನೆಟ್ ಮಿನಿಸ್ಟರ್‌ ಆದ ಪತ್ನಿಗೆ ಜಡೇಜಾ ವಿಶ್‌

    ಗಾಂಧೀನಗರ: ಗುಜರಾತ್‌ ಸರ್ಕಾರದಲ್ಲಿ ಕ್ಯಾಬಿನೆಟ್‌ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪತ್ನಿ ರಿವಾಬಾಗೆ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಅಭಿನಂದನೆ ತಿಳಿಸಿದ್ದಾರೆ.

    ‘ನಿಮ್ಮ ಮತ್ತು ನಿಮ್ಮ ಸಾಧನೆಗಳ ಬಗ್ಗೆ ತುಂಬಾ ಹೆಮ್ಮೆ ಇದೆ. ನೀವು ಅದ್ಭುತ ಕೆಲಸ ಮಾಡುತ್ತಲೇ ಇರುತ್ತೀರಿ. ಎಲ್ಲಾ ವರ್ಗದ ಜನರಿಗೂ ಸ್ಫೂರ್ತಿಯಾಗುತ್ತೀರಿ ಎಂದು ನಾನು ಭಾವಿಸಿದ್ದೇನೆ. ಗುಜರಾತ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ನಿಮಗೆ ಉತ್ತಮ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಜೈ ಹಿಂದ್’ ಎಂದು ಪತ್ನಿಗೆ ಜಡೇಜಾ ಎಕ್ಸ್‌ ಪೋಸ್ಟ್‌ ಮೂಲಕ ವಿಶ್‌ ಮಾಡಿದ್ದಾರೆ.‌ ಇದನ್ನೂ ಓದಿ: ಗುಜರಾತ್‌ ಸಂಪುಟ ಪುನಾರಚನೆ – ಜಡೇಜಾ ಪತ್ನಿ ರಿವಾಬಾಗೆ ಮಿನಿಸ್ಟರ್‌ ಪಟ್ಟ

    ಗುಜರಾತ್‌ನಲ್ಲಿಂದು (Gujarat) ನಡೆದ ಸಂಪುಟ ವಿಸ್ತರಣೆ ಕಾರ್ಯಕ್ರಮದಲ್ಲಿ ಹರ್ಷ ಸಾಂಘ್ವಿ (Harsh Sanghavi) ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಲ್ಲದೇ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ (Rivaba Jadeja) ಸೇರಿ 26 ಸಚಿವರೂ ಪ್ರಮಾಣ ಸ್ವೀಕರಿಸಿದರು.

    ಭೂಪೇಂದ್ರ ಪಟೇಲ್‌ (Bhupendra Patel) ಸಂಪುಟದ 16 ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಗಾಂಧಿನಗರದ ಮಹಾತ್ಮ ಮಂದಿರ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ 26 ಸದಸ್ಯರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಜಾತಿ ಮತ್ತು ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಕೆಲವರಿಗೆ, ವಿಪಕ್ಷಗಳಿಂದ ಬಿಜೆಪಿ ಸೇರ್ಪಡೆಯಾದ ಕೆಲ ನಾಯಕರನ್ನ ಗುರುತಿಸಿ ಸಚಿವ ಸ್ಥಾನ ನೀಡಿರುವುದು ಹಿರಿಯ ನಾಯಕರ ಮೆಚ್ಚುಗೆಗೂ ಪಾತ್ರವಾಗಿದೆ. ಇದನ್ನೂ ಓದಿ: ಯಶಸ್ವಿಯಾಗಿ ಮೊದಲ ಹಾರಾಟ ನಡೆಸಿದ ತೇಜಸ್ ಎಂಕೆ1ಎ ಯುದ್ಧ ವಿಮಾನ

    2027ರ ವಿಧಾನಸಭಾ ಚುನಾವಣೆಯನ್ನ ಗುರಿಯಾಗಿಟ್ಟು ಸಮುದಾಯದ ನಾಯಕರು, ಕಾರ್ಯಕರ್ತರ ಮೇಲೆ ಹಿಡಿತ ಸಾಧಿಸುವ ನಾಯಕರನ್ನ ಸಂಪುಟಕ್ಕೆ ಆಯ್ಕೆ ಮಾಡಲಾಗಿದೆ. ಅದರಂತೆ ಪಾಟಿದಾರ್ ಸಮುದಾಯದ ಆರು ಮಂದಿ, ಪರಿಶಿಷ್ಟ ಜಾತಿಯಿಂದ ಮೂವರು, ಆದಿವಾಸಿ ಸಮುದಾಯದ ನಾಲ್ವರು, ಕ್ಷತ್ರಿಯ ಸಮುದಾಯದ ಇಬ್ಬರು, ಒಬಿಸಿ ಸಮುದಾಯದ ಎಂಟು ಮಂದಿ ಹಾಗೂ ಬ್ರಾಹ್ಮಣ ಮತ್ತು ಜೈನ ಸಮುದಾಯ ತಲಾ ಒಬ್ಬೊಬ್ಬರಿಗೆ ಸಚಿವ ಸ್ಥಾನ ನೀಡಲಾಯಿತು.

  • ಅಹಮದಾಬಾದ್‌ನಲ್ಲಿ ನಡೆಯಲಿದೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌

    ಅಹಮದಾಬಾದ್‌ನಲ್ಲಿ ನಡೆಯಲಿದೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌

    ಲಂಡನ್‌: 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಗುಜರಾತಿನ ಅಹಮದಾಬಾದ್‌ನಲ್ಲಿ (Ahmedabad)  ನಡೆಯಲಿದೆ.  2030ರ ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games 2030) ಆಯೋಜನೆ ಮಾಡಲು ಕಾಮನ್‌ವೆಲ್ತ್ ಗೇಮ್ಸ್‌ನ ಕಾರ್ಯನಿರ್ವಾಹಕ ಮಂಡಳಿ ಅಹಮದಾಬಾದ್‌ ನಗರವನ್ನು ಶಿಫಾರಸು ಮಾಡಿದೆ.

    2030 ರ ಗೇಮ್ಸ್‌ ಆಯೋಜನೆಗೆ ನೈಜೀರಿಯಾ ತನ್ನ ರಾಜಧಾನಿ ಅಬುಜಾ ನಗರವನ್ನು ಬಿಡ್‌ಗೆ ಕಳುಹಿಸಿತ್ತು. ಆದರೆ ಅಬುಜಾ ನಗರದಲ್ಲಿ 2034ರ ಗೇಮ್ಸ್‌ ನಡೆಯುವ ಸಾಧ್ಯತೆಯಿದೆ.   ಕುರಿತು ಅಂತಿಮ ನಿರ್ಧಾರವು ನವೆಂಬರ್ 26 ರಂದು ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಡ ಮಹಾಸಭೆಯಲ್ಲಿ ಪ್ರಕಟವಾಗಲಿದೆ.

    ಇದನ್ನೂ ಓದಿ:  ವಿಂಡೀಸ್‌ 2-0 ವೈಟ್‌ವಾಶ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ; ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಗೆಲುವು

    ಕಾಮನ್‌ವೆಲ್ತ್ ಗೇಮ್ಸ್‌ನ ಮಧ್ಯಂತರ ಅಧ್ಯಕ್ಷರಾದ ಡಾ. ಡೊನಾಲ್ಡ್ ರುಕರೆ ಮಾತನಾಡಿ, 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಮತ್ತು ನೈಜೀರಿಯಾಗಳು ತೋರಿದ ಪ್ರಸ್ತಾಪಕ್ಕೆ ನಾವು ಕೃತಜ್ಞರಾಗಿದ್ದೇವೆ. ಎರಡೂ ನಗರಗಳ ಪ್ರಸ್ತಾಪಗಳು ಸ್ಪೂರ್ತಿದಾಯಕವಾಗಿದ್ದವು. ನಮ್ಮ ಶತಮಾನೋತ್ಸವ ಕ್ರೀಡಾಕೂಟವನ್ನು ನಾವು ಎದುರು ನೋಡುತ್ತಿದ್ದು, ಗ್ಲ್ಯಾಸ್ಗೋದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ನಮ್ಮ ಸದಸ್ಯರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ 2010 ರಲ್ಲಿ ಭಾರತ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜನೆ ಮಾಡಿತ್ತು. 2036 ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತ ಈಗಾಗಲೇ ಬಿಡ್‌ ಸಲ್ಲಿಸಿದೆ.

  • ಬೆಳ್ಳಿ ವಸಂತಕ್ಕೆ ಕಾಲಿಟ್ಟು ಸತತ 24 ವರ್ಷಗಳ ಅಧಿಕಾರವಧಿ ಪೂರೈಸಿದ ಮೋದಿ

    ಬೆಳ್ಳಿ ವಸಂತಕ್ಕೆ ಕಾಲಿಟ್ಟು ಸತತ 24 ವರ್ಷಗಳ ಅಧಿಕಾರವಧಿ ಪೂರೈಸಿದ ಮೋದಿ

    – 2001ರಿಂದ 13 ವರ್ಷ ಗುಜರಾತ್ ಸಿಎಂ, 2014ರಿಂದ ಪಿಎಂ ಆಗಿರುವ ಮೋದಿ

    ನವದೆಹಲಿ: ಸತತ 24 ವರ್ಷಗಳ ಅಧಿಕಾರವಧಿ ಪೂರೈಸಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೆಳ್ಳಿ ವಸಂತಕ್ಕೆ ಕಾಲಿಟ್ಟಿದ್ದಾರೆ.

    2001ರಲ್ಲಿ ಅ.7ರಂದು ಗುಜರಾತ್ (Gujarat) ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಸರ್ಕಾರಗಳ ಮುಖ್ಯಸ್ಥರಾಗಿ ಅಧಿಕಾರದಲ್ಲಿದ್ದಾರೆ. 2001ರಿಂದ 2014ರ ಮಧ್ಯಭಾಗದವರೆಗೆ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ನಂತರ 2014ರಲ್ಲಿ ಪ್ರಧಾನಿಯಾಗಿ ಪದೋನ್ನತಿ ಹೊಂದಿ ಈವರೆಗೂ ಕಳೆದ 11 ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ.ಇದನ್ನೂ ಓದಿ: ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್‌ ಮಿನಿಸ್ಟರ್‌- ಜೆಡಿಎಸ್‌ ಕಿಡಿ

    ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಮೋದಿ, ತಾವು ಮೊದಲ ಸಲ ಸಿಎಂ ಹಾಗೂ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಿದ ಫೋಟೋ ಹಂಚಿಕೊಂಡಿದ್ದಾರೆ. ಜನರ ಜೀವನ ಸುಧಾರಿಸುವುದು ಮತ್ತು ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನನ್ನ ನಿರಂತರ ಪ್ರಯತ್ನವಾಗಿದೆ. ಭಾರತವಾಸಿಗಳ ನಿರಂತರ ಆಶೀರ್ವಾದದಿಂದಾಗಿ ನಾನು ಸರ್ಕಾರದ ಮುಖ್ಯಸ್ಥನಾಗಿ 25ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಭಾರತದ ಜನರಿಗೆ ನನ್ನ ಕೃತಜ್ಞತೆಗಳು. ಇಷ್ಟು ವರ್ಷಗಳಿಂದ, ಜನರ ಜೀವನವನ್ನು ಸುಧಾರಿಸಲು ಮತ್ತು ನಮ್ಮೆಲ್ಲರನ್ನೂ ಪೋಷಿಸಿದ ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ಗುಜರಾತ್‌ನಲ್ಲಿ ಸತತ 3 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು (BJP) ಗೆಲುವಿನತ್ತ ಮುನ್ನಡೆಸಿದ ನಂತರ, ಅವರು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಒಕ್ಕೂಟವನ್ನು ಸತತ 3 ರಾಷ್ಟ್ರೀಯ ಚುನಾವಣೆಗಳಲ್ಲಿ ಗೆಲ್ಲಿಸಿದ್ದಾರೆ. ಮೋದಿ ಎಂದಿಗೂ ಚುನಾವಣಾ ಸೋಲನ್ನು ಎದುರಿಸಿಲ್ಲ. 13 ವರ್ಷ ಮುಖ್ಯಮಂತ್ರಿ ಹಾಗೂ 11 ವರ್ಷ ಪ್ರಧಾನಮಂತ್ರಿಯಾಗಿ ಅತೀ ದೀರ್ಘಾವಧಿಗೆ ನಿರಂತರವಾಗಿ ಅಧಿಕಾರದಲ್ಲಿರುವ ಅಂದರೆ ಸರ್ಕಾರದ ಮುಖ್ಯಸ್ಥ ಆಗಿರುವ ಏಕೈಕ ವ್ಯಕ್ತಿ ಎಂಬ ಕೀರ್ತಿ ಮೋದಿ ಅವರಿಗಿದೆ.

    ಪ್ರಧಾನಿ ಮೋದಿ ಸತತ 24 ವರ್ಷಗಳ ಅಧಿಕಾರವಧಿ ಪೂರೈಸಿದ ಹಿನ್ನೆಲೆ ಅಮಿತ್ ಶಾ, ರಾಜನಾಥ್ ಸಿಂಗ್, ಜೆ.ಪಿ. ನಡ್ಡಾ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.ಇದನ್ನೂ ಓದಿ: ಮಧ್ಯಪ್ರದೇಶ | ಕಿಲ್ಲರ್ ಕಾಫ್ ಸಿರಪ್ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದ 6 ಮಕ್ಕಳು ಸಾವು

  • ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    ಮುಂಬೈಗೆ ಸೈಕ್ಲೋನ್ `ಶಕ್ತಿʼಯ ಭೀತಿ – ಸೋಮವಾರ ಗುಜರಾತ್‌ಗೂ ಅಪ್ಪಳಿಸಲಿದೆ ಚಂಡಮಾರುತ

    – `ಶಕ್ತಿ’ ಹೆಸರು ಕೊಟ್ಟಿದ್ದೇ ಲಂಕಾ; ಅ.7ರ ವರೆಗೆ ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ

    ಮುಂಬೈ: ಅರಬ್ಬಿ ಸಮುದ್ರದಲ್ಲಿ ಶಕ್ತಿ ಚಂಡಮಾರುತ (Shakti Cyclone) ಅಬ್ಬರ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಅ.7ರ ವರೆಗೆ ಮಹಾರಾಷ್ಟ್ರದಲ್ಲಿ (Maharashtra) ಭಾರೀ ಮಳೆಯ ಎಚ್ಚರಿಕೆ ನೀಡಿದೆ. ಇದು ಮುಂಗಾರು ಬಳಿಕ ಅರಬ್ಬಿ ಸಮುದ್ರದಲ್ಲಿ ಅಪ್ಪಳಿಸುವ ಮೊದಲ ಚಂಡಮಾರುತವಾಗಿದೆ.

    ಚಂಡಮಾರುತ ಬೀಸುವ ಹಿನ್ನೆಲೆ ಮುಂಬೈ (Mumbai), ಥಾಣೆ, ಪಾಲ್ಘರ್, ರಾಯಗಡ್, ರತ್ನಗಿರಿ ಮತ್ತು ಸಿಂಧುದುರ್ಗ ಸೇರಿದಂತೆ ಮಹಾರಾಷ್ಟ್ರದ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹವಾಮಾನ ಇಲಾಖೆಯು ಮಹಾರಾಷ್ಟ್ರದ ಒಳಭಾಗಗಳಲ್ಲಿ, ಅದ್ರಲ್ಲೂ ಮುಖ್ಯವಾಗಿ ಪೂರ್ವ ವಿದರ್ಭ ಮತ್ತು ಮರಾಠವಾಡದ ಕೆಲ ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ.

    ಉತ್ತರ ಕೊಂಕಣದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಈ ಬೆನ್ನಲ್ಲೇ ಸ್ಥಳೀಯ ಆಡಳಿತ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಿದೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

    ಗುಜರಾತ್‌ಗೆ ಅಪ್ಪಳಿಸಲಿದೆ ಚಂಡಮಾರುತ
    ಹವಾಮಾನ ಇಲಾಖೆ (IMD) ವಿಜ್ಞಾನಿ ಅಭಿಮನ್ಯು ಚೌಹಾಣ್ ಪ್ರಕಾರ, ಈಶಾನ್ಯ ಅರೇಬಿಯನ್‌ ಸಮುದ್ರದಲ್ಲಿ (Arabian Sea) ಚಂಮಾರುತ ತೀವ್ರಗೊಂಡಿದೆ. ಗಂಟೆಗೆ 18 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಹೀಗಾಗಿ ಅಕ್ಟೋಬರ್‌ 6ರಂದು ಬೆಳಗ್ಗಿನ ವೇಳೆಗೆ ಚಂಡಮಾರುತವು ಗುಜರಾತ್‌ ಕಡೆಗೆ ಬೀಸುವ ನಿರೀಕ್ಷೆಯಿದೆ. ಆದಾಗ್ಯೂ ರಾಜ್ಯದಲ್ಲಿ ಮಳೆಯ ಪರಿಣಾಮ ಕಡಿಮೆ ಇರಲಿದ್ದು, ಗಾಳಿಯು ಗಂಟೆಗೆ 40-55 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ; ತಯಾರಿ ಪರಿಶೀಲಿಸಿದ ಕೇಂದ್ರ ಚುನಾವಣಾ ಆಯೋಗ

    ಶಕ್ತಿ ಚಂಡಮಾರುತ ಎದುರಿಸಲು ಸಕಲ ತಯಾರಿ
    ಇನ್ನೂ ಶಕ್ತಿ ಚಂಡ ಮಾರುತ ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರ (Maharashtra Government) ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ವಿಪತ್ತು ನಿರ್ವಹಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಬೇಕು, ಕರಾವಳಿ ಮತ್ತು ತಗ್ಗು ಪ್ರದೇಶಗಳಲ್ಲಿ ನೆಲೆಸಿರುವ ಜನರನ್ನ ಸ್ಥಳಾಂತರಿಸಲು ಕ್ರಮ ವಹಿಸಬೇಕು, ಮೀನುಗಾರರು ಸಮುದ್ರಕ್ಕಿಳಿದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ‌

    ಸೈಕ್ಲೋನ್‌ ಶಕ್ತಿ ಈಗ ಎಲ್ಲಿದೆ?
    ಹವಾಮಾನ ಇಲಾಖೆ ಪ್ರಕಾರ, ಶಕ್ತಿ ಚಂಡಮಾರುತವು ಪ್ರಸ್ತುತ ಗುಜರಾತ್‌ನ ನಲಿಯಾದಿಂದ ನೃಋತ್ಯಕ್ಕೆ ಸುಮಾರು 270 ಕಿಮೀ ದೂರದಲ್ಲಿ, ಪೋರ್‌ಬಂದರ್‌ನಿಂದ ಪಶ್ಚಿಮಕ್ಕೆ 300 ಕಿಮೀ ಮತ್ತು ದಕ್ಷಿಣಕ್ಕೆ 360 ಕಿಮೀ ದೂರದಲ್ಲಿದೆ. ಸುಮಾರು 8 ಕಿಮೀ ವೇಗದಲ್ಲಿ ವಾಯುವ್ಯ ದಿಕ್ಕಿಗೆ ಚಲಿಸುತ್ತಿದ್ದು, 100 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದನ್ನೂ ಓದಿ: ಪಾಕಿನ ಎಫ್‌-16 , ಜೆಎಫ್‌-17 ಯುದ್ಧ ವಿಮಾನಗಳನ್ನು ಹೊಡೆದಿದ್ದೇವೆ: ಏರ್ ಚೀಫ್ ಮಾರ್ಷಲ್

    `ಶಕ್ತಿ’ ಹೆಸರು ಕೊಟ್ಟಿದ್ದೇ ಶ್ರೀಲಂಕಾ
    ʻಶಕ್ತಿʼ ಚಂಡಮಾರುತದ ಹೆಸರು ಗಮನ ಸೆಳೆದಿದೆ. ಆದ್ರೆ ಚಂಡಮಾರುತಕ್ಕೆ ʻಶಕ್ತಿʼ ಎಂದು ಹೆಸರು ಕೊಟ್ಟಿದ್ದೇ ಶ್ರೀಲಂಕಾ. ವಿಶ್ವ ಹವಾಮಾನ ಸಂಸ್ಥೆ (WMO) ಹಾಗೂ ಏಷ್ಯಾ ಮತ್ತು ಪೆಸಿಫಿಕ್‌ನ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ESCAP) ನಿರ್ವಹಿಸುವ ಸಂಘಟಿತ ವ್ಯವಸ್ಥೆಯ ಅಡಿಯಲ್ಲಿ ಶ್ರೀಲಂಕಾ ʻಶಕ್ತಿʼ ಎಂದು ಹೆಸರಿಸಿದೆ. 2020ರಲ್ಲಿ ಪರಿಚಯಿಸಲಾದ ಈ ಸಂಘಟಿತ ವ್ಯವಸ್ಥೆಯು ಬಾಂಗ್ಲಾದೇಶ, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸದಸ್ಯರಾಷ್ಟ್ರಗಳನ್ನು ಒಳಗೊಂಡಿದೆ.

    ಚಂಡಮಾರುತವನ್ನು ಸುಲಭವಾಗಿ ಗುರುತಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಇದಕ್ಕೆ ಹೆಸರುಗಳನ್ನು ನೀಡಲಾಗುತ್ತದೆ. ಈ ಋತುವಿನ ಮೊದಲ ಚಂಡಮಾರುತ ಇದಾಗಿದೆ. ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ‘ಶಕ್ತಿ’ ಅಬ್ಬರ – ಮಹಾರಾಷ್ಟ್ರದಲ್ಲಿ ಅ.7ರವರೆಗೆ ಭಾರೀ ಮಳೆ ಸಾಧ್ಯತೆ

  • ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕಟ್ – ಶಿಕ್ಷಕಿ ವಜಾ

    ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕಟ್ – ಶಿಕ್ಷಕಿ ವಜಾ

    ಗಾಂಧೀನಗರ: ತಲೆಗೂದಲಿಗೆ ಎಣ್ಣೆ ಹಚ್ಚದಿದ್ದಕ್ಕೆ ವಿದ್ಯಾರ್ಥಿನಿಯ ಕೂದಲು ಕತ್ತರಿಸಿದ ಘಟನೆ ಗುಜರಾತ್‌ನ (Gujarat) ಖಾಸಗಿ ಶಾಲೆಯಲ್ಲಿ ನಡೆದಿದೆ.

    ಮಂಗಳವಾರ (ಸೆ.23) ವಿದ್ಯಾರ್ಥಿನಿ ಶಾಲೆಗೆ ತೆರಳಿದಾಗ ತಲೆಗೂದಲಿಗೆ ಎಣ್ಣೆ ಹಚ್ಚಿರಲಿಲ್ಲ. ಇದನ್ನು ಕಂಡ ದೈಹಿಕ ಶಿಕ್ಷಕಿ ವಿದ್ಯಾರ್ಥಿಯ ಕೂದಲನ್ನು ಬ್ಲೇಡ್‌ನಿಂದ ಕತ್ತರಿಸಿದ್ದಾರೆ. ಇದನ್ನೂ ಓದಿ: ಗಣತಿಗೆ ಆಧಾರ್ ಕಾರ್ಡ್ ಬಳಕೆಗೆ ಆಕ್ಷೇಪ- ತಡೆ ನೀಡಿದ್ರೆ 350 ಕೋಟಿ ಬರುತ್ತಾ: ಹೈಕೋರ್ಟ್ ಪ್ರಶ್ನೆ

    ಮನೆಗೆ ಮರಳಿದ ಮಗಳ ಕೂದಲು ಗಮನಿಸಿದಾಗ ಪೋಷಕರಿಗೆ ವಿಷಯ ತಿಳಿದಿದ್ದು, ಕೂಡಲೇ ಜಿಲ್ಲಾ ಶಿಕ್ಷಣ ಅಧಿಕಾರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಅಧಿಕಾರಿಗಳು ಶಿಕ್ಷಕಿಯನ್ನು ವಜಾಗೊಳಿಸಿದ್ದಾರೆ.

    ಈ ಕುರಿತು ವಿದ್ಯಾರ್ಥಿನಿಯ ತಾಯಿ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಚಿಕ್ಕ ಚಿಕ್ಕ ವಿಷಯಗಳಿಗೆ ಶಿಕ್ಷೆ ಕೊಡುತ್ತಾರೆ. ಒಂದು ಪುಸ್ತಕ ಮರೆತರೂ ಕೂಡ 100 ಬಸ್ಕಿ ಹೊಡೆಸುತ್ತಾರೆ. ಇದರಿಂದ ನಮ್ಮ ಮಕ್ಕಳು ಶಾಲೆಯೆಂದರೆ ಹೆದರುತ್ತಾರೆ. ಇದಕ್ಕೂ ಮುನ್ನ ಈ ಶಾಲೆಯಲ್ಲಿ ಇದೇ ರೀತಿಯ ವಿಷಯಗಳು ನಡೆದಿದೆ ಎಂದು ತಿಳಿಸಿದ್ದಾರೆ.

    ಜಿಲ್ಲಾ ಶಿಕ್ಷಣ ಅಧಿಕಾರಿ ವಿಪುಲ್ ಮೆಹ್ತಾ ಮಾತನಾಡಿ, ಎರಡು ಶಾಲೆಗಳ ವಿರುದ್ಧ ಪೋಷಕರು ದೂರು ನೀಡಿದ್ದಾರೆ. ಎರಡೂ ಪ್ರಕರಣದಲ್ಲಿಯೂ ಮಕ್ಕಳ ಕೂದಲು ಕತ್ತರಿಸುವ ಬಗ್ಗೆ ಆರೋಪಿಸಿದ್ದಾರೆ. ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ಹಾಗೂ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಯೂಟ್ಯೂಬರ್‌ ಮುಕಳೆಪ್ಪ ಮದುವೆ ಪ್ರಕರಣ – ವಿವಾಹ ನೋಂದಣಾಧಿಕಾರಿ ಕಚೇರಿ ಬಂದ್‌

  • ಗುಜರಾತ್‌ ಕಡಲ ತೀರದಲ್ಲಿ ಸೊಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಗುಜರಾತ್‌ ಕಡಲ ತೀರದಲ್ಲಿ ಸೊಮಾಲಿಯಕ್ಕೆ ಹೊರಡಬೇಕಿದ್ದ ಹಡಗಿಗೆ ಬೆಂಕಿ – ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

    ಗಾಂಧಿನಗರ: ಗುಜರಾತ್ (Gujarat) ಪೋರ್‌ಬಂದರ್‌ನ (Porbandar) ಸುಭಾಷ್‍ನಗರ ಜೆಟ್ಟಿಯಲ್ಲಿ ಲಂಗರು ಹಾಕಿದ್ದ ಸೊಮಾಲಿಯಕ್ಕೆ (Somalia) ಸರಕು ಸಾಗಿಸುವ ಹಡಗಿಗೆ (Fire Accident) ಬೆಂಕಿ ಹೊತ್ತಿಕೊಂಡಿದೆ.

    ಸೋಮವಾರ (ಸೆ.22) ಮುಂಜಾನೆ ಈ ಅವಘಡ ಸಂಭವಿಸಿದೆ. ಸಮುದ್ರದಲ್ಲಿ ನಿಂತಿದ್ದಾಗ ಬೆಂಕಿ ಹೊತ್ತಿದ್ದು, ಭಾರೀ ಜ್ವಾಲೆಗಳು ಮತ್ತು ದಟ್ಟವಾದ ಕಪ್ಪು ಹೊಗೆ ಹಡಗನ್ನು ಆವರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಡಗಿಗೆ ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇದನ್ನೂ ಓದಿ: ಕೇರಳದ ಬೇಪೂರ್ ಆಳಸಮುದ್ರದಲ್ಲಿ ಹಡಗು ಅಗ್ನಿ ದುರಂತ – 6 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

    ಬೆಂಕಿ ತೀವ್ರಗೊಳ್ಳುತ್ತಿದ್ದಂತೆ, ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಯಿತು. ನಂತರ ಅಧಿಕಾರಿಗಳು ಅಕ್ಕಪಕ್ಕದಲ್ಲಿದ್ದ ಬೇರೆ ಹಡಗುಗಳಿಗೆ ಬೆಂಕಿ ತಗಲುವುದನ್ನು ತಪ್ಪಿಸಲು, ಸಮುದ್ರದದ ಮಧ್ಯಕ್ಕೆ ಎಳೆದೊಯ್ದಿದ್ದಾರೆ. ಬಳಿಕ ಬೆಂಕಿ ನಂದಿಸಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳ ವರದಿಯಾಗಿಲ್ಲ. ಈ ಅವಘಡಕ್ಕೆ ಕಾರಣವೇನೆಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ.

    ಜಾಮ್‌ನಗರ ಮೂಲದ ಹೆಚ್‌ಆರ್‌ಎಂ & ಸನ್ಸ್ ಒಡೆತನದ ಈ ಹಡಗಿನಲ್ಲಿ ಅಕ್ಕಿ ಮತ್ತು ಸಕ್ಕರೆಯನ್ನು ಲೋಡ್‌ ಮಾಡಿ ಸೊಮಾಲಿಯಾದ ಬೊಸಾಸೊಗೆ ಕಳುಹಿಸಲಾಗುತ್ತಿತ್ತು. ಇದನ್ನೂ ಓದಿ: Kerala | ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ

  • ಪ್ರಧಾನಿಗೆ ತಾನು ಬಿಡಿಸಿದ ಚಿತ್ರ ಕೊಟ್ಟು ಭಾವುಕನಾದ ಬಾಲಕ – ವೇದಿಕೆಯಿಂದಲೇ ಸಮಾಧಾನ ಮಾಡಿದ ಮೋದಿ

    ಪ್ರಧಾನಿಗೆ ತಾನು ಬಿಡಿಸಿದ ಚಿತ್ರ ಕೊಟ್ಟು ಭಾವುಕನಾದ ಬಾಲಕ – ವೇದಿಕೆಯಿಂದಲೇ ಸಮಾಧಾನ ಮಾಡಿದ ಮೋದಿ

    ಗಾಂಧಿನಗರ: ಭಾವನಗರದ (Bhavnagar) ರ‍್ಯಾಲಿಯಲ್ಲಿ ಪ್ರಧಾನಿ ಮೋದಿ (Narendra Modi) ಭಾಷಣ ಮಾಡುತ್ತಿದ್ದ ವೇಳೆ ಬಾಲಕನೋರ್ವ ತಾನು ಬಿಡಿಸಿದ ಚಿತ್ರವನ್ನು ಮೋದಿಗೆ ನೀಡಿ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.

    ಭಾಷಣದ ವೇಳೆ ಬಾಲಕ ತನ್ನ ಚಿತ್ರವನ್ನು ಹಿಡಿದುಕೊಂಡು ನಿಂತಿರುವುದನ್ನು ಗಮನಿಸಿದ ಮೋದಿ ಅದನ್ನು ತೆಗೆದುಕೊಂಡು ಬರುವಂತೆ ಸೂಚಿಸಿದರು. ತಾನು ಬಿಡಿಸಿದ ಚಿತ್ರವನ್ನು ಮೋದಿ ಸ್ವೀಕರಿಸಿದ ವೇಳೆ ಬಾಲಕ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ. ಈ ವೇಳೆ ವೇದಿಕೆಯಿಂದಲೇ ಮಾತನಾಡಿದ ಮೋದಿ, ನೀನು ಬಿಡಿಸಿದ ಚಿತ್ರ ನನಗೆ ತಲುಪಿದೆ, ಅಳಬೇಡ ಎಂದು ಬಾಲಕನಿಗೆ ಸಮಾಧಾನ ಮಾಡಿದ್ದಾರೆ. ಇದನ್ನೂ ಓದಿ: 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿ ಹೆಚ್ಚಿಸಿ – ಒಕ್ಕಲಿಗ ಸಭೆಯಲ್ಲಿ ನಿರ್ಣಯ

    ಅಲ್ಲದೇ ನಿನ್ನ ಮನೆಯ ಅಡ್ರೆಸ್ ಅದರಲ್ಲಿ ಬರೆದರೆ ಆದಷ್ಟು ಬೇಗ ನಿನಗೆ ಪತ್ರ ಬರೆಯುತ್ತೇನೆ ಎಂದು ಭರವಸೆ ನೀಡಿದರು. ಚಿಕ್ಕಚಿಕ್ಕ ಮಕ್ಕಳ ಪ್ರೀತಿಗಿಂತ ದೊಡ್ಡದು ಜೀವನದಲ್ಲಿ ಏನಿದೆ ಎಂದು ಮೋದಿ ಸಂತಸಪಟ್ಟರು. ಇದನ್ನೂ ಓದಿ: ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್‌

  • ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    – ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣವಾಗಲಿದೆ
    – ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ ಎಂದ ಪ್ರಧಾನಿ

    ಗಾಂಧಿನಗರ: ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ. ನಮಗೆ ವಿಶ್ವದಲ್ಲಿ ಯಾರೂ ಶತ್ರುಗಳಿಲ್ಲ (No Enemy). ಆದ್ರೆ ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಚ್ಚರಿಸಿದರು.

    ಗುಜರಾತ್‌ನ (Gujarat) ಭಾವನನಗರದಲ್ಲಿ ನಡೆದ ‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು 34,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು. ಬಳಿಕ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಟ್ರಂಪ್‌ 50% ಸುಂಕ ನೀತಿಗೆ ಗುದ್ದು ನೀಡಿದರು. ಆತ್ಮನಿರ್ಭರ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ, ಭಾರತದಲ್ಲೇ ತಯಾರಾದ ಉತ್ಪನ್ನ (Made In India) ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.

    ಇಂದು ಭಾರತ ವಿಶ್ವಬಂಧು ಭಾವನೆಯಿಂದ ಮುಂದುವರಿಯುತ್ತಿದೆ. ಹಾಗಾಗಿ ಜಗತ್ತಿನಲ್ಲಿ ನಮಗೆ ಯಾವುದೇ ದೊಡ್ಡ ಶತ್ರು ಇಲ್ಲ. ಆದ್ರೆ ಇತರರ ಮೇಲಿನ ಅವಲಂಬನೆಯೇ ನಮಗೆ ದೊಡ್ಡ ಶತ್ರು. ಆದ್ದರಿಂದ ನಾವು ಒಟ್ಟಾಗಿ ಈ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದು ಕರೆ ನೀಡಿದರು.

    ಮುಂದುವರಿದು, ವಿದೇಶಿ ಅವಲಂಬನೆ ಹೆಚ್ಚಾದಷ್ಟು ದೇಶದ ವೈಫಲ್ಯ ಹೆಚ್ಚಾಗುತ್ತದೆ. ಹಾಗಾಗಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ನಾವು ದೇಶದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆತ್ಮನಿರ್ಭರವಾಗಬೇಕು. ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಇತರ ದೇಶಗಳ ಮೇಲೆ ಬಿಡಬಾರದು. ಭವಿಷ್ಯದ ಪೀಳಿಗೆಯನ್ನು ಪಣಕ್ಕಿಡಬಾರದು. 140 ಕೋಟಿ ದೇಶವಾಸಿಗಳ ಭವಿಷ್ಯವನ್ನ ನಾವು ಇತರರಿಗೆ ಬಿಡಲು ಸಾಧ್ಯವಿಲ್ಲವೆಂದೂ ಪ್ರಧಾನಿ ಹೇಳಿದರು.

    ಒಂದು ರಾಷ್ಟ್ರ – ಒಂದು ದಾಖಲೆ
    ಇದೇ ವೇಳೆ ಭಾರತೀಯ ಪೋರ್ಟ್‌ (ಬಂದರು)ಗಳ ದಾಖಲಾತಿಗೆ ಸಂಬಂಧಿಸಿದ ಸುಧಾರಣೆಗಳನ್ನು ಪರಿಚಯಿಸುವುದಾಗಿ ಹೇಳಿದ ಅವರು, ಶೀಘ್ರದಲ್ಲೇ ಭಾರತೀಯ ಬಂಧರುಗಳಿಗೆ ʻಒಂದು ರಾಷ್ಟ್ರ – ಒಂದು ದಾಖಲಾತಿʼ ಎಂಬ ಹೊಸ ಸುಧಾರಣೆ ತರಲಿದ್ದೇವೆ. ಇದು ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.

    ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣ
    ಅಲ್ಲದೇ ಭಾರತದಲ್ಲಿ ತಯಾರಿಸಬೇಕಾದ ವೈವಿಧ್ಯಮಯ ಉತ್ಪನ್ನಗಳ ಕುರಿತು ಮಾತನಾಡಿ, ಚಿಪ್‌ ಆಗಲಿ ಶಿಪ್‌ ಆಗಲಿ ನಾವು ಎಲ್ಲವನ್ನೂ ಭಾರತದಲ್ಲೇ ತಯಾರಿಸಬೇಕು. ಅದಕ್ಕಾಗಿ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾವು ದೇಶದ ಸಂಪತನ್ನು ಕಾಪಾಡಿಕೊಳ್ಳಲು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

    ಇದೇ ವೇಳೆ ಭಾರತದಲ್ಲಿ ಉಕ್ಕಿನಿಂದ ತಯಾರಿಸಿದ ಐಎನ್‌ಎಸ್ ವಿಕ್ರಾಂತ್‌ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾವಲಂಬನೆಯ ಅಗಾಧ ಸಾಮರ್ಥ್ಯಕ್ಕೆ ಉದಾಹರಣೆ ನೀಡಿದರು. ಭಾರತ 40ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪರಿಚಯಿಯಿಸಿದೆ ಎಂದು ವಿವರಿಸಿದರು.

  • ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟಿಸಿದ ಮೋದಿ – ವಿಶೇಷತೆಗಳೇನು?

    ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್ ಉದ್ಘಾಟಿಸಿದ ಮೋದಿ – ವಿಶೇಷತೆಗಳೇನು?

    ಗಾಂಧಿನಗರ:  ಭಾರತದ ಅತಿದೊಡ್ಡ ಕ್ರೂಸ್ ಟರ್ಮಿನಲ್  (Cruise Terminal) ಅನ್ನು ಪ್ರಧಾನಿ ಮೋದಿ (Narendra Modi) ಶನಿವಾರ ಉದ್ಘಾಟಿಸಿದ್ದಾರೆ.

    ಗುಜರಾತ್‌ನ (Gujarat) ಭಾವನಗರದಲ್ಲಿ ನಡೆದ ‘ಸಮುದ್ರದಿಂದ ಸಮೃದ್ಧಿ’ ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಈ ಉದ್ಘಾಟನೆ ಮಾಡಿದರು. ಅಲ್ಲದೇ 34,200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಹಲವಾರು ಯೋಜನೆಗಳನ್ನು ಅನಾವರಣಗೊಳಿಸಿ, ಶಂಕುಸ್ಥಾಪನೆ ನೇರವೇರಿಸಿದರು. ಇದನ್ನೂ ಓದಿ: H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್‌ ಬನ್ನಿ: ಮೆಟಾ, ಮೈಕ್ರೋಸಾಫ್ಟ್‌ ಸೂಚನೆ

    ಇಂದಿರಾ ಡಾಕ್‌ನಲ್ಲಿರುವ ಈ ಅತ್ಯಾಧುನಿಕ ಸೌಲಭ್ಯವು ಭಾರತೀಯ ಕ್ರೂಸ್ ಪ್ರವಾಸೋದ್ಯಮಕ್ಕೆ ಮಹತ್ವದ ದ್ವಾರವಾಗಿ ಹೊರಹೊಮ್ಮಲಿದೆ. ಭಾರತದ ಮಹತ್ವಾಕಾಂಕ್ಷೆಯ ಬಂದರು ಅಭಿವೃದ್ಧಿ ಉಪಕ್ರಮದ ಭಾಗವಾಗಿ ನಿರ್ಮಿಸಲಾದ ಈ ಕ್ರೂಸ್ ಟರ್ಮಿನಲ್ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. 4,15,000 ಚದರ ಅಡಿಗಳಿಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ಮುಂಬೈ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್ ಅನ್ನು ವರ್ಷಕ್ಕೆ 1 ಮಿಲಿಯನ್ ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡಿ ನಿರ್ಮಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ – ಬಾಂಬ್ ಸ್ಕ್ವಾಡ್‌ನಿಂದ ಪರಿಶೀಲನೆ

    ಇದು ಏಕಕಾಲದಲ್ಲಿ 5 ಕ್ರೂಸ್ ಹಡಗುಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಪ್ರತಿ ವರ್ಷ 1 ಮಿಲಿಯನ್ ಪ್ರಯಾಣಿಕರನ್ನು ಅಥವಾ ದಿನಕ್ಕೆ ಸುಮಾರು 10,000 ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 72 ಚೆಕ್-ಇನ್ ಮತ್ತು ವಲಸೆ ಕೌಂಟರ್‌ಗಳನ್ನು ಹೊಂದಿರುವ ಟರ್ಮಿನಲ್ ಅನ್ನು ಪ್ರಯಾಣಿಕರಿಗೆ ಸುಗಮ, ಪರಿಣಾಮಕಾರಿ ಮತ್ತು ತೊಂದರೆಮುಕ್ತ ಅನುಭವವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ 300ಕ್ಕೂ ಹೆಚ್ಚು ವಾಹನಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಇದನ್ನೂ ಓದಿ: ಜಾತಿ ಕಾಲಂನಲ್ಲಿ ಕುರುಬ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್ ಬಗ್ಗೆ ಸಿಎಂ ಬಳಿ ಕೇಳಿದ್ದೇವೆ – ಎಂ.ಬಿ ಪಾಟೀಲ್