Tag: guitar

  • ನೆಟ್ಟಿಗರ ಮನಗೆಲ್ಲುತ್ತಿರುವ ಗಿಳಿ ಹಾಡು – ವೀಡಿಯೋ ವೈರಲ್

    ನೆಟ್ಟಿಗರ ಮನಗೆಲ್ಲುತ್ತಿರುವ ಗಿಳಿ ಹಾಡು – ವೀಡಿಯೋ ವೈರಲ್

    ಮಾಲೀಕ ಹೇಳಿದ ಕೆಲಸವನ್ನು ಸಾಮಾನ್ಯವಾಗಿ ಗಿಳಿಗಳು ಮಾಡುತ್ತವೆ. ಆದರೆ ಗಿಳಿಯೊಂದು ತನ್ನ ಮಾಲೀಕ ನುಡಿಸುತ್ತಿದ್ದ ಗಿಟಾರ್ ವಾದ್ಯಕ್ಕೆ ಹಾಡನ್ನು ಹಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ‘ಫ್ಲಾಪ್ ಇರಾ ಆರೆಂಜ್ ಕೋಟ್ ಗಾಯ್’ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಮಾಲೀಕ ಫ್ರಾಂಕ್ ಗಿಟಾರ್ ನುಡಿಸುವ ಅಭ್ಯಾಸ ಹೊಂದಿದ್ದು, ಅವರು ಗಿಟಾರ್ ನುಡಿಸುವಾಗಲೆಲ್ಲ ಗಿಳಿ ಮೆಲೋಡಿಯಾಗಿ ಹಾಡು ಹೇಳುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಕೋವಿಡ್-19ನಿಂದ ತಪ್ಪಿಸಿಕೊಳ್ಳಲು ಈ ವ್ಯಕ್ತಿ ಬೈಕ್‍ಗೆ ಮಾಡಿದ್ದೇನು ಗೊತ್ತಾ?

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, 35 ಲಕ್ಷ ವೀವ್ಸ್ ಆಗಿದ್ದು, 70 ಸಾವಿರ ರೀ ಟ್ವೀಟ್ ಮತ್ತು 262 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಈ ವೀಡಿಯೋ ನೋಡಿ ಅನೇಕ ಮಂದಿ ಇದು ಅದ್ಭುತ ಗಿಳಿ ಇಲ್ಲಿಯವರೆಗೂ ಇಂತಹ ಗಿಳಿಯನ್ನು ನಾನು ನೋಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.

  • ಬೌನ್ಸರ್ ಗಳು ನನ್ನನ್ನು ಪಬ್‍ನಿಂದ ಹೊರ ಹಾಕಿದ್ದೆ ಸ್ಫೂರ್ತಿ ಆಯ್ತು!

    ಬೌನ್ಸರ್ ಗಳು ನನ್ನನ್ನು ಪಬ್‍ನಿಂದ ಹೊರ ಹಾಕಿದ್ದೆ ಸ್ಫೂರ್ತಿ ಆಯ್ತು!

    ಬೆಂಗಳೂರು: ಕನ್ನಡ ನಾಡಿನಲ್ಲಿ `ಮೂರೇ ಮೂರು ಪೆಗ್ಗಿಗೆ’ ಹಾಡಿನ ಮೂಲಕ ಫೀನಿಕ್ಸ್ ನಂತೆ ಎದ್ದು ಬಂದ ಅದೇ ಚಂದನ್ ಶೆಟ್ಟಿ ಬಿಗ್ ಬಾಸ್ ವೇದಿಕೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಬಿಗ್ ಬಾಸ್ ಪಟ್ಟವನ್ನು ತಮ್ಮದಾಗಿಸಿಕೊಂಡ ಚಂದನ್ ಶೆಟ್ಟಿಗೆ ಚಿತ್ರರಂಗ ಹಾಗೂ ಸಹ ಸ್ಪರ್ಧಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

    ಕನ್ನಡಿಗರ ಮನಗೆದ್ದು ಬಿಗ್ ಬಾಸ್ ಪಟ್ಟ ಅಲಂಕರಿಸಿದ ಚಂದನ್ ಶೆಟ್ಟಿ ಸೋಮವಾರ ರಾತ್ರಿ ಪಬ್ಲಿಕ್ ಟಿವಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಚಂದನ್ ಅವರಿಗೆ ಶುಭಾಶಯ ತಿಳಿಸಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ಇದೇ ಸಂದರ್ಭದಲ್ಲಿ ಬಂದಂತಹ ಅಭಿಮಾನಿಯೊಬ್ಬ ತಮ್ಮ ಹೊಸ ಗಿಟಾರ್ ಮೇಲೆ ಚಂದನ್ ಅವರ ಅಟೋಗ್ರಾಫ್ ಪಡೆಯಲು ಇಚ್ಛಿಸಿದ್ದರು. ಕೂಡಲೇ ಚಂದನ್ ಶೆಟ್ಟಿ ಅವರು ಅಭಿಮಾನಿಯ ಆಸೆ ಈಡೇರಿಸಿದ್ರು. ನಂತರ ಆ ಗಿಟಾರ್ ಹಿಡಿದು ಹಾಡನ್ನು ಕೂಡ ಹಾಡಿದ್ದರು. ಈ ಮೂಲಕ 108 ದಿನಗಳ ಬಳಿಕ ಗಿಟಾರ್ ಹಿಡಿದಿದ್ದು, ಇದು ನನಗೆ ಖುಷಿ ತಂದಿದೆ ಅಂತ ಅವರು ಹೇಳಿದ್ರು.

    ಮೊದಲ ಪಬ್ ಅನುಭವ ಹಂಚಿಕೊಂಡ ಶೆಟ್ರು: ಮೈಸೂರಿನಲ್ಲಿ ಚಂದನ್ ಗಿಟಾರ್ ಹಿಡಿದುಕೊಂಡು ಹೋಗಿದ್ದಾಗ ಒಂದು ಘಟನೆ ನಡೆದಿತ್ತು. ಈ ಘಟನೆಯಿಂದ ತುಂಬಾ ಬೇಸರವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಈಗ ಈ ಘಟನೆಯ ಬಗ್ಗೆ ಮೊದಲ ಬಾರಿ ಹೇಳಲು ಇಷ್ಟಪಡುತ್ತೇನೆ ಅಂದ ಶೆಟ್ರು, ಮೈಸೂರಿನ ಬಸ್ ಸ್ಟಾಪ್ ಹತ್ತಿರವಿರುವ ಪಬ್‍ಗೆ ನನ್ನ ಗಿಟಾರ್ ಹಿಡಿದುಕೊಂಡು ಹೋಗಿದ್ದೆ. ಅದು ನಾನು ಮೊದಲ ಬಾರಿಗೆ ಪಬ್‍ಗೆ ಹೋಗಿರುವುದು. ಅಲ್ಲಿ ಹೋದ ಮೇಲೆ ಕನ್ನಡ ಹಾಡನ್ನು ಹಾಕಲು ಹೇಳಿದೆ. ಆದರೆ ಅವರು ಒಪ್ಪಲಿಲ್ಲ. ನಾನು ತುಂಬಾನೇ ಒತ್ತಾಯ ಮಾಡಿದೆ ಆಗ ಬೌನ್ಸರ್ ಗಳು ನನ್ನನ್ನು ಹಿಡಿದು ಪಬ್‍ನಿಂದ ಹೊರ ಹಾಕಿದ್ದರು. ಅವರು ನನ್ನನ್ನು ಹೊರ ಹಾಕಿರುವುದೇ ಇಂದು ನನಗೆ ಸ್ಫೂರ್ತಿ ಆಯಿತು. ಈ ಘಟನೆಯಿಂದ ನಾನು ಬೇಸರಗೊಂಡೆ. ಆದರೆ ಅಂದೇ ನಾನು ಮುಂದಿನ ದಿನಗಳಲ್ಲಿ ನನ್ನ ಹಾಡುಗಳು ಈ ಪಬ್ ನಲ್ಲಿ ಪ್ಲೇ ಆಗ್ಲೇಬೇಕು ಎಂದು ಡಿಸೈಡ್ ಮಾಡಿದೆ. ಪರಿಣಾಮ ಈಗ ಇಡೀ ಕರ್ನಾಟಕ, ದುಬೈ, ಆಸ್ಟ್ರೇಲಿಯಾ ಹಾಗೂ ಜರ್ಮನಿಯ ಪಬ್ ಗಳಲ್ಲಿ ಈ ಹಾಡು ಪ್ಲೇ ಆಗುತ್ತಿರುವುದಕ್ಕೆ ನನಗೆ ಸಂತಸ ತಂದಿದೆ ಎಂದರು.

    105 ದಿನ ಬಿಗ್‍ಬಾಸ್ ಮನೆಯಲ್ಲಿ ಭರ್ಜರಿ ಮನರಂಜನೆ ನೀಡಿ ಜನರ ಮನ ಗೆದ್ದಿದ್ದ ಚಂದನ್ ಶೆಟ್ಟಿಯನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಸಾವಿರಾರು ಜನರೊಂದಿಗೆ ಆಗಮಿಸಿದ್ದರು. ನಗರದಲ್ಲಿರೋ ಆಂಜನೇಯ ದೇವಸ್ಥಾನಕ್ಕೆ ತೆರಳಿ ಚಂದನ್ ಶೆಟ್ಟಿ ಪೂಜೆ ಸಲ್ಲಿಸಿ ಪಬ್ಲಿಕ್ ಟಿವಿಗೆ ಆಗಮಿಸಿದ್ದರು.

  • ವಿಡಿಯೋ: ಗಿಟಾರ್ ಬಾರಿಸುತ್ತಲೇ ಮೆದುಳು ಸರ್ಜರಿ ಮಾಡಿಸಿಕೊಂಡ ಬೆಂಗ್ಳೂರು ವ್ಯಕ್ತಿ

    ವಿಡಿಯೋ: ಗಿಟಾರ್ ಬಾರಿಸುತ್ತಲೇ ಮೆದುಳು ಸರ್ಜರಿ ಮಾಡಿಸಿಕೊಂಡ ಬೆಂಗ್ಳೂರು ವ್ಯಕ್ತಿ

    ಬೆಂಗಳೂರು: ವ್ಯಕ್ತಿಯೊಬ್ಬರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೆದುಳು ಸರ್ಜರಿಗೆ ಒಳಗಾಗಿದ್ದು, ಈ ವೇಳೆ ಅವರು ಗಿಟಾರ್ ಬಾರಿಸಿದ್ದಾರೆ.

    ಜುಲೈ 11 ರಂದು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ 37 ವರ್ಷದ ಅಭಿಷೇಕ್ ಪ್ರಸಾದ್ ಅವರಿಗೆ ಬ್ರೇನ್ ಸಕ್ರ್ಯೂಟ್ ಸರ್ಜರಿ ಮಾಡಲಾಗಿದೆ. ಈ ರೀತಿ ಸರ್ಜರಿ ನಡೆದಿರುವುದು ದೇಶದಲ್ಲಿ ಇದೇ ಮೊದಲು ಎಂದು ವರದಿಯಾಗಿದೆ. ಅಭಿಷೇಕ್ ಅವರಿಗೆ ಗಿಟಾರ್ ಬಾರಿಸುವುದೆಂದರೆ ಅಚ್ಚುಮೆಚ್ಚು. ಆದ್ರೆ ಗಿಟಾರಿಸ್ಟ್ ಡಿಸ್ಟೋನಿಯಾ ಎಂಬ ನರಸಂಬಂಧಿ ಕಾಯಿಲೆಯಿಂದಾಗಿ ಇವರ ಬೆರಳುಗಳನ್ನು ಆಡಿಸಲು ಆಗುತ್ತಿರಲಿಲ್ಲ.

    ಅಭಿಷೇಕ್ ಅವರಿಗೆ ಆಪರೇಷನ್ ನಡೆದ ಅಷ್ಟೂ ಹೊತ್ತು ಎಚ್ಚರವಾಗಿಯೇ ಇದ್ದರು. ಗಿಟಾರ್ ಬಾರಿಸಲು ಪ್ರಯತ್ನಿಸಿದಾಗಲೇ ಈ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆಯ ವೇಳೆಯೂ ಗಿಟಾರ್ ಬಾರಿಸಿದರು. ಯಾಕಂದ್ರೆ ರೋಗಿಯ ಪ್ರತಿಕ್ರಿಯೆಯಿಂದ ಎಲ್ಲಿ ಸರ್ಜರಿ ಮಾಡಬೇಕೋ ಆ ಗುರಿಯ ನಿರ್ದಿಷ್ಟ ಜಾಗ ತಿಳಿಯುವುದು ಮುಖ್ಯ ಎಂದು ವೈದ್ಯರು ವರದಿಗಾರರಿಗೆ ಹೇಳಿದ್ದಾರೆ.

    ಅಭಿಷೇಕ್ ಪ್ರಸಾದ್ ಬಿಹಾರ ಮೂಲದವರಾಗಿದ್ದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ಸಂತಸಗೊಂಡಿದ್ದಾರೆ. ವೈದ್ಯರು ಕೂಡ 100% ರಿಸಲ್ಟ್ ಸಿಗುತ್ತದೆಂದು ನಿರೀಕ್ಷಿಸಿರಲಿಲ್ಲ. ನನಗೆ ಹಾಗೂ ವೈದ್ಯರಿಗಿಬ್ಬರಿಗೂ ಇದೊಂದು ಅದ್ಭುತ ಅನುಭವ. ನಾನೀಗ ತುಂಬಾ ಉತ್ಸುಕನಾಗಿದ್ದೇನೆ. ಕೊನೆಗೂ ನನ್ನ ಕನಸನ್ನ ಈಡೇರಿಸಿಕೊಳ್ಳಬಹುದು. ಒಂದು ತಿಂಗಳ ನಂತರ ನಾನು ಗುಣಮುಖವಾದ ಬಳಿಕ ನಾನು ಗಿಟಾರ್ ನುಡಿಸಬಹುದು ಎಂದು ಹೇಳಿದ್ದಾರೆ.

    ಮೊದಲಿಗೆ ನನ್ನ ಬೆರಳುಗಳು ಗಟ್ಟಿಯಾಗಿರುತ್ತಿದ್ದವು. ಒಂದು ತಂತಿಯಿಂದ ಮತ್ತೊಂದಕ್ಕೆ ಬದಲಿಸಬೇಕಾದ್ರೆ ಕಷ್ಟವಾಗ್ತಿತ್ತು. ಈಗ ನನ್ನ ಬೆರಳುಗಳು ಸಂಪೂರ್ಣವಾಗಿ ಹೇಳಿದಂತೆ ಕೇಳುತ್ತಿವೆ ಎಂದಿದ್ದಾರೆ. ಅಭಿಷೇಕ್ ಅವರ ಆಸ್ಪತ್ರೆ ಬಿಲ್ ಸುಮಾರು 2 ಲಕ್ಷ ರೂ. ಆಗಿದೆ.