Tag: Guiness Record

  • ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

    ಮಹಾ ಕುಂಭಮೇಳದಲ್ಲಿ ನಾಲ್ಕು ಗಿನ್ನಿಸ್ ದಾಖಲೆಗೆ ತಯಾರಿ

    ಪ್ರಯಾಗ್‌ರಾಜ್: ಕಳೆದೊಂದು ತಿಂಗಳಿಂದ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳದಲ್ಲಿ (Maha Kumbh Mela) ನಾಲ್ಕು ಹೊಸ ದಾಖಲೆಗಳನ್ನು ಮಾಡಲು ಉತ್ತರ ಪ್ರದೇಶ (Uttar Pradesh) ಸರ್ಕಾರ ತಯಾರಿ ಮಾಡಿಕೊಂಡಿದ್ದು, ಇದಕ್ಕಾಗಿ ಗಿನ್ನಿಸ್ ಬುಕ್ ಆಫ್ ವಲ್ಡ್ ರೆಕಾರ್ಡ್ (Guinness World Records) ತಂಡವೂ ಪ್ರಯಾಗ್‌ರಾಜ್ ತಲುಪಿದೆ.

    ಇಲ್ಲಿಯವರೆಗೆ ತ್ರಿವೇಣಿ ಸಂಗಮದಲ್ಲಿ 48 ಕೋಟಿಗೂ ಹೆಚ್ಚು ಜನರು ಪುಣ್ಯ ಸ್ನಾನ ಮಾಡಿದ್ದಾರೆ. ಇದು ಈಗಾಗಲೇ ವಿಶ್ವದ ಅತಿದೊಡ್ಡ ದಾಖಲೆಯಾಗಿದೆ. ಇದರ ನಡುವೆ ಫೆ.14 ರಿಂದ 17ರ ನಡುವೆ ನಾಲ್ಕು ಹೊಸ ದಾಖಲೆಗಳನ್ನು ನಿರ್ಮಿಸಲು ಸ್ಥಳೀಯ ಆಡಳಿತ ಸಜ್ಜಾಗಿದೆ. ಇದನ್ನೂ ಓದಿ: ಮಹಾ ಕುಂಭಮೇಳದಿಂದ ಹಿಂದಿರುಗುವಾಗ ಹೃದಯಾಘಾತದಿಂದ ವ್ಯಕ್ತಿ ಸಾವು

    ಮೊದಲ ದಿನ ಫೆಬ್ರವರಿ 14 ರಂದು 15,000 ನೈರ್ಮಲ್ಯ ಕಾರ್ಮಿಕರು ಸಂಗಮ ಪ್ರದೇಶದಲ್ಲಿ ಗಂಗಾ ನದಿಯ ದಡದ 10 ಕಿ.ಮೀ ಉದ್ದವನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸಲಿದ್ದಾರೆ. 2019ರ ಕುಂಭಮೇಳದಲ್ಲಿ 10 ಸಾವಿರ ನೈರ್ಮಲ್ಯ ಕಾರ್ಮಿಕರು ಒಟ್ಟಾಗಿ ಗುಡಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ರಮೇಶ್ ಜಾರಕಿಹೊಳಿ ಭಾಗಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ

    ಫೆಬ್ರವರಿ 15 ರಂದು 300 ಉದ್ಯೋಗಿಗಳು ನದಿಗೆ ಇಳಿದು ಸ್ವಚ್ಛತಾ ಅಭಿಯಾನವನ್ನು ವೇಗಗೊಳಿಸಲಿದ್ದಾರೆ. ಫೆಬ್ರವರಿ 16 ರಂದು ತ್ರಿವೇಣಿ ಮಾರ್ಗದಲ್ಲಿ 1000 ಇ-ರಿಕ್ಷಾಗಳನ್ನು ಓಡಿಸಿದ ದಾಖಲೆಯೂ ನಿರ್ಮಾಣವಾಗಲಿದೆ. ಫೆಬ್ರವರಿ 17 ರಂದು 10 ಸಾವಿರ ಜನರ ಕೈ ಮುದ್ರೆಗಳನ್ನು ತೆಗೆದುಕೊಳ್ಳುವ ದಾಖಲೆಯನ್ನು ಸಹ ಮಾಡಲಾಗುವುದು. ನಾಲ್ಕು ದಾಖಲೆಗಳನ್ನು ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮೇಳದ ಅಧಿಕಾರಿ ವಿಜಯ್ ಕಿರಣ್ ಆನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ದರ ಬದಲಾವಣೆ, ಶೀಘ್ರವೇ ಪರಿಷ್ಕೃತ ಪಟ್ಟಿ ಪ್ರಕಟ: ಬಿಎಂಆರ್‌ಸಿಎಲ್‌

    2019ರಲ್ಲಿ ಮೂರು ದಾಖಲೆ:
    2019ರ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ಮೂರು ದಾಖಲೆಗಳನ್ನು ಮಾಡಲಾಗಿದ್ದು, ಇವು ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿವೆ. ಇದರಲ್ಲಿ 500ಕ್ಕೂ ಹೆಚ್ಚು ಶಟಲ್ ಬಸ್‌ಗಳನ್ನು ಓಡಿಸುವ ಮೂಲಕ ಅತಿದೊಡ್ಡ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸುವ ದಾಖಲೆಯನ್ನು ಸೃಷ್ಟಿಸಲಾಯಿತು. ಇದನ್ನೂ ಓದಿ: ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ

    ಎರಡನೇ ದಾಖಲೆಯು 10,000 ನೈರ್ಮಲ್ಯ ಕಾರ್ಮಿಕರನ್ನು ನೇಮಿಸಿಕೊಳ್ಳುವ ಮೂಲಕ ಅತಿದೊಡ್ಡ ನೈರ್ಮಲ್ಯ ಮತ್ತು ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಸಂಬಂಧಿಸಿತ್ತು. ಮೂರನೆಯದಾಗಿ, 7,500 ಜನರ ಕೈ ಮುದ್ರಣಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಬಾರಿ ಕೈಮುದ್ರೆ ಮತ್ತು ಸ್ವಚ್ಛತಾ ವ್ಯವಸ್ಥೆಗೆ ಸಂಬಂಧಿಸಿದ ಎರಡು ದಾಖಲೆಗಳನ್ನು ಮುರಿಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸುವ ಉದ್ದೇಶ ಹೊಂದಿದೆ. ಇದನ್ನೂ ಓದಿ: UnSold ಪ್ಲೇಯರ್‌, ಟೂರ್ನಿ ಅರ್ಧದಲ್ಲೇ ಆರ್‌ಸಿಬಿ ಸೇರ್ಪಡೆ, ಸ್ಫೋಟಕ ಶತಕ ಸಿಡಿಸಿ ದಾಖಲೆ – ಪಾಟಿದಾರ್‌ಗೆ ನಾಯಕ ಪಟ್ಟ ಸಿಕ್ಕಿದ್ದು ಹೇಗೆ?

  • ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

    ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

    ನವದೆಹಲಿ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ (Ayodhya) ಈ ಬಾರಿಯ ದೀಪಾವಳಿಗೆ (Deepavali) ಹೊಸ ದಾಖಲೆ ಸೃಷ್ಟಿಸಲು ತಯಾರಿ ನಡೆದಿದೆ. ಈ ಬಾರಿಯ ದೀಪಾವಳಿಗೆ 24 ಲಕ್ಷ ಹಣತೆಗಳನ್ನು ಹಚ್ಚಲು ಸರ್ಕಾರ ತಿರ್ಮಾನಿಸಿದ್ದು, ದೀಪೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಒಟ್ಟು 51 ಘಾಟ್‌ಗಳಲ್ಲಿ 24 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಹಚ್ಚಲಾಗುತ್ತದೆ.

    ಕಾರ್ಯಕ್ರಮಕ್ಕೂ ಮುನ್ನ ಇಂದು ಬೆಳಗ್ಗೆ ಸಂಭ್ರಮಾಚರಣೆಯಲ್ಲಿ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ರಾಮಾಯಣವನ್ನು ಆಧರಿಸಿದ ಹದಿನಾರು ಕೋಷ್ಟಕಗಳು ಯಾತ್ರೆಯಲ್ಲಿ ಭಾಗವಹಿಸಿದ್ದವು. ನಗರದಲ್ಲಿ ಶ್ರೀರಾಮನ ಜೀವನಗಾಥೆಯನ್ನು ಬಿಂಬಿಸುವ ಮರಳು ಕಲೆಯನ್ನೂ ಮಾಡಲಾಗಿದೆ. ಇದನ್ನೂ ಓದಿ: ಮತ್ತೆ ಚರ್ಚೆಯಲ್ಲಿ ಏಕರೂಪ ನಾಗರಿಕ ಸಂಹಿತೆ – ಉತ್ತರಾಖಂಡದಲ್ಲಿ ಮೊದಲು ಕಾನೂನು ಜಾರಿಗೆ ಸಿದ್ಧತೆ

    2017ರಿಂದ ರಾಮಮಂದಿರ ಪ್ರದೇಶದಲ್ಲಿ ಉತ್ಸವವನ್ನು ಆಯೋಜಿಸಲಾಗುತ್ತಿದೆ ಮತ್ತು ಪ್ರತಿ ವರ್ಷ ಹೊಸ ದಾಖಲೆಯನ್ನು ಸೃಷ್ಟಿಸುತ್ತಿದೆ. ಈ ಬಾರಿಯ ದೀಪೋತ್ಸವದಲ್ಲಿ ಹೊಸ ದಾಖಲೆ ಸೃಷ್ಟಿಯಾಗಲಿದೆ. 50 ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಉತ್ತರ ಪ್ರದೇಶದ (Uttar Pradesh) ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಹೇಳಿದ್ದಾರೆ. ಇದನ್ನೂ ಓದಿ: ತಿಹಾರ್‌ ಜೈಲಿನಿಂದ ಬಂದು ಅನಾರೋಗ್ಯ ಪೀಡಿತ ಪತ್ನಿ ಭೇಟಿಯಾದ ಮನೀಶ್ ಸಿಸೋಡಿಯಾ

    2017ರಲ್ಲಿ 51,000 ಹಣತೆಗಳನ್ನು ಹಚ್ಚಲಾಗಿತ್ತು. 2019ರಲ್ಲಿ 4.10 ಲಕ್ಷ ಹಣತೆಗಳನ್ನು ಬೆಳಗಿದ್ದು, 2020ರಲ್ಲಿ 6 ಲಕ್ಷಕ್ಕೂ ಹೆಚ್ಚು, 2021ರಲ್ಲಿ 9 ಲಕ್ಷಕ್ಕೂ ಅಧಿಕ, 2022ರಲ್ಲಿ ಸುಮಾರು 15 ಲಕ್ಷ ದೀಪಗಳನ್ನು ಹಚ್ಚಲಾಗಿತ್ತು. ಇದು ವಿಶ್ವ ದಾಖಲೆಗೆ ಸಾಕ್ಷಿಯಾಗಿತ್ತು. ಈ ವರ್ಷ 2023ರಲ್ಲಿ 24 ಲಕ್ಷ ದೀಪ ಹಚ್ಚುವ ಮೂಲಕ ಹೊಸ ಗಿನ್ನಿಸ್ ದಾಖಲೆ (Guinness Record) ಬರೆಯಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಭಯೋತ್ಪಾದಕರಿಗೆ 85 ಕೋಟಿ ರೂ. ಫಂಡಿಂಗ್ – ಪ್ರಕರಣಕ್ಕೆ ದುಬೈ ಲಿಂಕ್

    ಆಚರಣೆಯ ಸಮಯದಲ್ಲಿ ಸೂಕ್ತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಅಯೋಧ್ಯೆಯನ್ನು 14 ಪೊಲೀಸ್ ವಲಯಗಳಾಗಿ ವಿಂಗಡಿಸಿದ್ದೇವೆ ಎಂದು ಅಯೋಧ್ಯೆ ರೇಂಜ್ ಐಜಿ ಪ್ರವೀಣ್ ಕುಮಾರ್ ಹೇಳಿದರು. ಭದ್ರತಾ ಸಿದ್ಧತೆಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಹ ಬಳಸಲಾಗಿದೆ. ರಾಮ್ ಕಿ ಪೈಡಿಯಲ್ಲಿರುವ ವಿವಿಐಪಿ ಆವರಣವನ್ನು ಶ್ವಾನದಳದೊಂದಿಗೆ ಪರಿಶೀಲಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ- 6 ಗ್ಯಾರಂಟಿ ಘೋಷಿಸಿದ ತೆಲಂಗಾಣ ಕಾಂಗ್ರೆಸ್

    ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 24 ಲಕ್ಷ ದೀಪಗಳನ್ನು  ಬೆಳಗಿಸಲಾಗುತ್ತದೆ. 20 ಕೋಟಿ ರೂ.ಗಳ ಬೃಹತ್ ಬಜೆಟ್‌ನಲ್ಲಿ ಜಿಲ್ಲಾಡಳಿತ ಬೆಳಕು-ಧ್ವನಿ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದ್ದು, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ನಿರೀಕ್ಷೆ ಇದೆ. ರಾಮ್ ಕಿ ಪೈಡಿಯಲ್ಲಿ ಬೆಳಗುವ ಒಂದು ದೀಪಕ್ಕೆ 51 ರೂ. ಮತ್ತು 51 ದೀಪಗಳಿಗೆ 1,100 ರೂ.ಗಳನ್ನು ನೀಡುವ ಮೂಲಕ ಈವೆಂಟ್‌ನಲ್ಲಿ ಭಾಗಿಯಾಗಲು ಸಾಮಾನ್ಯ ಜನರಿಗೆ ಸರ್ಕಾರ ಅವಕಾಶ ನೀಡಿದೆ. ಇದನ್ನೂ ಓದಿ: ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದೇ ಹಿಂದೂ ಧರ್ಮದಿಂದ: ಜಾವೇದ್ ಅಖ್ತರ್

  • 66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    66 ವರ್ಷದ ನಂತ್ರ ಉಗುರು ಕಟ್ – ಈಗ ಶಾಶ್ವತ ಅಂಗವೈಕಲ್ಯಕ್ಕೆ ತುತ್ತು!

    ನ್ಯೂಯಾರ್ಕ್: 66 ವರ್ಷಗಳ ಬಳಿಕ ಪುಣೆಯ ನಿವಾಸಿ ತನ್ನ ವಿಶ್ವದ ಅತ್ಯಂತ ಉದ್ದನೆಯ ಉಗುರುಗಳನ್ನ ಕತ್ತರಿಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲಾಗಿದ್ದಾರೆ.

    ಶ್ರೀಧರ್ ಚಿಲ್ಲಾಸ್ 82 ವರ್ಷದವರಾಗಿದ್ದು, ತಮ್ಮ ಎಡಗೈ ಬೆರಳುಗಳಲ್ಲಿ ಉದ್ದನೆಯ ಉಗುರುಗಳನ್ನ ಬೆಳೆಸಿಕೊಂಡು ವಿಶ್ವ ದಾಖಲೆ(ಗಿನ್ನಿಸ್ ದಾಖಲೆ) ಮಾಡಿದ್ದರು. ಚಿಲ್ಲಾಸ್ 1985 ರಿಂದ ತಮ್ಮ ಉಗುರುಗಳನ್ನ ಬೆಳೆಸಲು ಆರಂಭಿಸಿದ ಇವರು ಸುಮಾರು 31 ಅಡಿ ಉದ್ದದಷ್ಟು ಉಗುರುಗಳನ್ನ ಬೆಳೆಸಿಕೊಂಡು ಈಗ ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ.

    ಚಿಲ್ಲಾಸ್ ಒಂದು ಬಾರಿ ತಮ್ಮ ತರಗತಿಯಲ್ಲಿ ಆಕಸ್ಮಿಕವಾಗಿ ಶಿಕ್ಷಕರ ಉದ್ದನೆಯ ಉಗುರನ್ನ ಮುರಿದು ಬಿಟ್ಟಿದ್ದರು. ಆ ಕಾರಣ “ನೀನು ಏನು ಮಾಡಿದ್ದೀಯ ಎಂಬುದು ನಿನಗೆ ಗೊತ್ತಿಲ್ಲ ಅದರ ಮಹತ್ವ ಏನು ಎನ್ನುವುದು ನಿನಗೆ ಎಂದು ಅರ್ಥವಾಗುವುದಿಲ್ಲ ಎಂದು ತರಗತಿಯಲ್ಲೇ ಬೈದಿದ್ದರು. ಅಂದಿನಿಂದ “ನಾನು ಅದನ್ನು ಒಂದು ಸವಾಲಾಗಿ ತೆಗೆದುಕೊಂಡೆ” ಎಂದು ಚಿಲ್ಲಾಸ್ ತಿಳಿಸಿದ್ದಾರೆ. ಇದನ್ನೂ ಓದಿ: 66 ವರ್ಷಗಳ ಬಳಿಕ ವಿಶ್ವದ ಅತ್ಯಂತ ಉದ್ದನೆಯ ಉಗುರು ಕಟ್: ವಿಡಿಯೋ ನೋಡಿ

    ಅಂದಿನಿಂದ ಕೇವಲ ತಮ್ಮ ಎಡಗೈ ಬೆರಳುಗಳ ಉಗುರುಗಳನ್ನ ಬೆಳೆಸಲು ಆರಂಭಿಸಿದ ಚಿಲ್ಲಾಸ್ ಸುಮಾರು 66 ವರ್ಷಗಳವರೆಗೆ ಮುಂದುವರಿಸಿದರು. ಅವರ ಉಗುರು ಸುಮಾರು 909.6 ಸೆ.ಮಿ ಉದ್ದವಿದ್ದು ಅದರ ತೂಕದಿಂದಾಗಿ ಅವರ ಎಡಗೈ ಶಾಶ್ವತವಾಗಿ ಹ್ಯಾಂಡಿಕ್ಯಾಪ್ ಆಗಿದೆ. ಮುಚ್ಚಿದ ಸ್ಥಿತಿಯಲ್ಲಿದ್ದ ಕೈ ಬಿಚ್ಚಲು ಸಾಧ್ಯವಾಗದೇ ಬೆರಳುಗಳನ್ನ ಸಹ ತಳ್ಳಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

    ಚಿಲ್ಲರ್ ಅವರ ಈ ಅಸಾಮಾನ್ಯ ಆಯ್ಕೆಯು ಅವರ ಸಾಮಾನ್ಯ ಜೀವನದಲ್ಲಿ ಯಾವುದೇ ಅಡಚಣೆಯನ್ನ ಉಂಟು ಮಾಡಲಿಲ್ಲ. ಅವರ ಪತ್ನಿ ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳ ಜೊತೆ ಖುಷಿಯಾಗಿಯೇ ಜೀವನ ನಡೆಸುತ್ತಿದ್ದಾರೆ. ಚಿಲ್ಲರ್ ಅವರಿಗೆ ವಯಸ್ಸಾದಂತೆ ಅವರ ಉದ್ದನೆಯ ಉಗುರು ಅವರ ಸಾಮಾನ್ಯ ಜೀವನ ಶೈಲಿ ನಡೆಸಲು ಒಂದು ಸವಾಲಾಗಿ ಪರಿಣಮಿಸಿತು. ರಾತ್ರಿ ಮಲಗುವಾಗ ತುಂಬ ಕಷ್ಟವಾಗುತ್ತಿತ್ತು. ಹಾಗಾಗಿ ತಮ್ಮ ಉಗುರುಗಳನ್ನ ಕಟ್ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಇದೀಗ ಶ್ರೀಧರ್ ಚಿಲ್ಲಾಸ್ ಅವರ ವಿಶ್ವದ ಅತೀ ಉದ್ದನೆಯ ಉಗುರುಗಳನ್ನ ಟೈಮ್ಸ್ ಸ್ಕ್ವೇರ್ ರಿಪ್ಲೇ ನ ಬ್ಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇದರ ಹೊರತು ಪಡಿಸಿ ಪ್ರಪಂಚದಾದ್ಯಂತ ಸುಮಾರು 20 ಗ್ಯಾಲರೀಸ್ ಹಾಗೂ 500 ಕ್ಕು ಹೆಚ್ಚು ಕಲಾಕೃತಿಯನ್ನ ಈ ಮ್ಯೂಸಿಯಂ ಹೊಂದಿದೆ.