Tag: Guhawati

  • ತಾಯಿಯ ಪ್ರಿಯಕರನಿಂದ್ಲೇ 10 ವರ್ಷದ ಮಗನ ಕೊಲೆ – ಸೂಟ್‌ಕೇಸ್‌ನಲ್ಲಿ ಶವ ಪತ್ತೆ

    ತಾಯಿಯ ಪ್ರಿಯಕರನಿಂದ್ಲೇ 10 ವರ್ಷದ ಮಗನ ಕೊಲೆ – ಸೂಟ್‌ಕೇಸ್‌ನಲ್ಲಿ ಶವ ಪತ್ತೆ

    ದಿಸ್ಪುರ್: ತಾಯಿಯ ಪ್ರಿಯತಮನಿಂದ 10 ವರ್ಷದ ಮಗ ಕೊಲೆಯಾಗಿರುವ ಘಟನೆ ಆಸ್ಸಾಂನ (Assam) ಗುವಾಹಟಿಯಲ್ಲಿ (Guwahati) ನಡೆದಿದೆ.

    ಆರೋಪಿಯನ್ನು ಜಿತುಮೋನಿ ಹಲೋಯ್ ಎಂದು ತಿಳಿಯಲಾಗಿದ್ದು, ಮೃತ ಬಾಲಕನ ದೇಹ ಸೂಟ್‌ಕೇಸ್‌ವೊಂದರಲ್ಲಿ ಪತ್ತೆಯಾಗಿದೆ.ಇದನ್ನೂ ಓದಿ: ಭಾರತ ಮತ್ತಷ್ಟು ಸೇಡು ತೀರಿಸಿಕೊಳ್ಳಬೇಕು, ಕೇಂದ್ರಕ್ಕೆ ನಮ್ಮ ಬೆಂಬಲ ಇದೆ: ಆರ್‌.ವಿ ದೇಶಪಾಂಡೆ

    ಕಳೆದ ಶನಿವಾರ ತನ್ನ ಮಗ ಟ್ಯೂಷನ್‌ನಿಂದ ಮನೆಗೆ ಬಂದಿಲ್ಲ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಗುವಾಹಟಿಯ ಪೊದೆಯೊಂದರ ಬಳಿ ಬಿದ್ದಿದ್ದ ಸೂಟ್‌ಕೇಸ್‌ನಲ್ಲಿ ಬಾಲಕನ ಮೃತದೇಹ ಪತ್ತೆಯಾಗಿತ್ತು. ಬಳಿಕ ಮೃತ ಬಾಲಕನ ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ತನ್ನ ಪತಿಯಿಂದ ಬೇರ್ಪಟ್ಟು ಆರೋಪಿ ಜಿತುಮೋನಿ ಹಲೋಯ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಿಳಿದುಬಂದಿದೆ.

    ಬಳಿಕ ಆರೋಪಿಯನ್ನು ವಿಚಾರಣೆ ನಡೆಸಿ, ಸೂಟ್‌ಕೇಸ್ ಪತ್ತೆಯಾದ ಸ್ಥಳಕ್ಕೆ ಕರೆದುಕೊಂಡು ಹೋದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಮೃತ ಬಾಲಕನ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೊಲೆಯಲ್ಲಿ ಆಕೆಯ ಪಾತ್ರವಿದೆಯಾ ಎಂದು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಮಹಿಳೆಯಿಂದ ಬೇರ್ಪಟ್ಟಿರುವ ಪತಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.ಇದನ್ನೂ ಓದಿ: ಭಾರತ-ಪಾಕ್‌ ಉದ್ವಿಗ್ನತೆಯಿಂದ ಬಂದ್‌ ಆಗಿದ್ದ 32 ಏರ್‌ಪೋರ್ಟ್‌ಗಳು ಮತ್ತೆ ಕಾರ್ಯಾರಂಭ

  • 36 ರನ್ ಗೆ ಆಲೌಟಾಗಿದ್ದ ಕ್ರೀಡಾಂಗಣದಲ್ಲಿ ಇಂದು ಟಿ20 – ಸತತ 8ನೇ ಗೆಲುವಿನತ್ತ ಟೀಂ ಇಂಡಿಯಾ

    36 ರನ್ ಗೆ ಆಲೌಟಾಗಿದ್ದ ಕ್ರೀಡಾಂಗಣದಲ್ಲಿ ಇಂದು ಟಿ20 – ಸತತ 8ನೇ ಗೆಲುವಿನತ್ತ ಟೀಂ ಇಂಡಿಯಾ

    ಗುವಾಹಟಿ: ಆಸೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯ ಇಂದು ಇಲ್ಲಿನ ಬರ್ಸಪಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಈಗಾಗಲೇ ಟೀಂ ಇಂಡಿಯಾ 1-0 ಅಂತರದ ಮುನ್ನಡೆ ಸಾಧಿಸಿದೆ.

    ಟೀಂ ಇಂಡಿಯಾ ಈ ಪಂದ್ಯಕ್ಕಾಗಿ ಉತ್ತಮ ಅಭ್ಯಾಸವನ್ನೇ ನಡೆಸಿದೆ. ಪ್ರಾಕ್ಟೀಸ್ ವೇಳೆ ಟೀಂ ಇಂಡಿಯಾ ಆಟಗಾರರು ಫುಟ್ಬಾಲ್ ಆಡಿ ಗಮನ ಸೆಳೆದರು.

    ಸತತ 7 ವರ್ಷದ ಬಳಿಕ ಇಂದು ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಹೀಗಾಗಿ ಈ ಪಿಚ್ ಯಾವ ರೀತಿ ವರ್ತಿಸುತ್ತದೆ ಎಂದು ಹೇಳುವುದು ಕಷ್ಟ ಎಂದು ಕ್ರಿಕೆಟ್ ತಜ್ಞರು ಹೇಳಿದ್ದಾರೆ. ಈ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಇದಾಗಲಿದೆ.

    ಆಸೀಸ್ ಆಟಗಾರರಿಗೆ ಟೀಂ ಇಂಡಿಯಾದ ಸ್ಪಿನ್ ಬೌಲರ್ ಗಳಾದ ಕುಲದೀಪ್ ಯಾದವ್ ಹಾಗೂ ಚಾಹಲ್ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ. ಅದರಲ್ಲೂ ಚಾಹಲ್ ಗ್ಲೆನ್ ಮ್ಯಾಕ್ಸ್ ವೆಲ್ ಅವರನ್ನು ಈ ಪ್ರವಾಸದಲ್ಲಿ 4 ಬಾರಿ ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

    ಕಳೆದ ಸೀಸನ್ ನಲ್ಲಿ ನಡೆದ ರಣಜಿ ಪಂದ್ಯಾವಳಿಯಲ್ಲಿ ಹೈದರಾಬಾದ್ ತಂಡ ಇದೇ ಕ್ರೀಡಾಂಗಣದಲ್ಲಿ 36 ರನ್ ಗಳಿಗೆ ಆಲೌಟಾಗಿತ್ತು. 2010ರ ನವೆಂಬರ್ 28ರಂದು ಇಲ್ಲಿ ಕೊನೆಯ ಬಾರಿಗೆ ಭಾರತ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಿತ್ತು. ಆ ಪಂದ್ಯದಲ್ಲಿ ಭಾರತ 40 ರನ್ ಗಳ ಗೆಲುವು ಸಾಧಿಸಿತ್ತು.

    ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇದುವರೆಗೆ ಒಟ್ಟು 14 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಭಾರತ 10 ಹಾಗೂ ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆದ್ದಿವೆ. 2012ರ ನವೆಂಬರ್ 28ರ ನಂತರ ಭಾರತ ವಿರುದ್ಧ ನಡೆದ ಎಲ್ಲಾ ಟಿ20 ಪಂದ್ಯಗಳಲ್ಲೂ ಭಾರತವೇ ಗೆಲುವು ಸಾಧಿಸಿದೆ.