Tag: Guests

  • ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಗಮಿಸಲಿರುವ ಗಣ್ಯರಿಗೆ ದೊರೆಯಲಿದೆ ವಿಶೇಷ ಉಡುಗೊರೆ – ಏನಿದು ಸ್ಪೆಷಲ್ ಗಿಫ್ಟ್?

    ಲಕ್ನೋ: ಜನವರಿ 22 ರಂದು ಪ್ರಾಣ ಪ್ರತಿಷ್ಠಾ (Pran Prathishta) ಅಥವಾ ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನಿಸಲಾದ ಎಲ್ಲಾ ಗಣ್ಯ ಅತಿಥಿಗಳಿಗೆ (Guest) ಈ ಸಂದರ್ಭದಲ್ಲಿ ವಿಶೇಷ ಉಡುಗೊರೆಗಳನ್ನು (Special Gift) ನೀಡಲಾಗುವುದು ಎಂದು ದೇವಾಲಯದ ಟ್ರಸ್ಟ್ ಬುಧವಾರ ತಿಳಿಸಿದೆ.

    ಅಯೋಧ್ಯೆಯಲ್ಲಿ (Ayodhya) ರಾಮಮಂದಿರ (Ram Mandir) ನಿರ್ಮಾಣ ಮತ್ತು ನಿರ್ವಹಣೆಗಾಗಿ ಸ್ಥಾಪಿಸಲಾದ ಟ್ರಸ್ಟ್‌ನಿಂದ ಪವಿತ್ರ ಪ್ರಸಾದದ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಗೀತಾ ಪ್ರೆಸ್‌ನಿಂದ ‘ಅಯೋಧ್ಯೆ ದರ್ಶನ’ ಪುಸ್ತಕದ ಪ್ರತಿಗಳನ್ನು ನೀಡಲಾಗುತ್ತದೆ. ನಿರ್ದಿಷ್ಟವಾಗಿ, 10,000 ಪ್ರತಿ ಪುಸ್ತಕವನ್ನು ಈ ಸಂದರ್ಭಕ್ಕಾಗಿ ಮುದ್ರಿಸಲಾಗುತ್ತದೆ.

    ʼಅಯೋಧ್ಯಾ ದರ್ಶನʼ ಪುಸ್ತಕದಲ್ಲಿ ಏನಿದೆ?
    ‘ಅಯೋಧ್ಯಾ ದರ್ಶನ’ ಪುಸ್ತಕವು ನಗರದ ಇತಿಹಾಸ, ಪುರಾತನ ಮಹತ್ವ, ರಾಮಾಯಣಕ್ಕೆ ಸಂಬಂಧಿಸಿದ ಅಧ್ಯಾಯಗಳು ಮತ್ತು ದೇವಾಲಯಗಳ ಬಗ್ಗೆ ವಿವರಗಳನ್ನು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. ಪುಸ್ತಕದ ಮುಖಪುಟದಲ್ಲಿ ಭಗವಾನ್ ರಾಮನ ಚಿತ್ರಣ ಮತ್ತು ರಾಮಮಂದಿರದ ಚಿತ್ರವಿದೆ. ಅಲ್ಲದೇ ಪ್ರತಿಷ್ಠಾಪನಾ ಸಮಾರಂಭದ ದಿನಾಂಕವನ್ನೂ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ: ಮತ್ತೆ 500 ಕಾರ್ಮಿಕರಿಗೆ ಬುಲಾವ್‌, 4000 ಕಾರ್ಮಿಕರಿಂದ ಹಗಲಿರುಳು ಕೆಲಸ

    ಈ ಕಾರ್ಯಕ್ರಮದ ಭಾಗವಾಗಿ ಉಡುಗೊರೆಯಾಗಿ ಕೊಡುವ ಎಲ್ಲಾ 10,000 ಪುಸ್ತಕಗಳು ಗೋರಖ್‌ಪುರದ ಗೀತಾ ಪ್ರೆಸ್‌ನಿಂದ ‘ಸುಪ್ರೀಮ್ ಆಫರಿಂಗ್’ ಎಂಬ ಶೀರ್ಷಿಕೆಯ ವಿಶೇಷ ಟಿಪ್ಪಣಿಯನ್ನು ಒಳಗೊಂಡಿರುತ್ತದೆ. ಈ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಅತಿಥಿಗಳಿಗೆ ‘ಅಯೋಧ್ಯೆ ದರ್ಶನ’ ಪುಸ್ತಕವನ್ನು ನೀಡಲಾಗುವುದು. ಆದರೆ ಆಯ್ದ ಕೆಲವು ವಿಶೇಷ ಅತಿಥಿಗಳು ಮೂರು ಹೆಚ್ಚುವರಿ ಪುಸ್ತಕಗಳನ್ನು ಸ್ವೀಕರಿಸುತ್ತಾರೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರದ ಒಳಗಿನ ಚಿತ್ರಣ ಹೇಗಿದೆ? ಇಲ್ಲಿದೆ ಕೆಲವು ಫೋಟೋಸ್

    ಸರಿಸುಮಾರು 100 ಅತಿಥಿಗಳಿಗೆ ‘ಅಯೋಧ್ಯಾ ಮಾಹಾತ್ಮ್ಯ’ (ಅಯೋಧ್ಯೆಯ ಮಹಿಮೆ), ‘ಗೀತಾ ದೈನಂದಿನಿ’ (ಗೀತಾ ಡೈರಿ), ಮತ್ತು ಭಗವಾನ್ ರಾಮನ ಕುರಿತ ಲೇಖನವನ್ನು ಒಳಗೊಂಡ ‘ಕಲ್ಯಾಣ ಪಾತ್ರ’ ಪತ್ರಿಕೆಯ ವಿಶೇಷ ಆವೃತ್ತಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ‘ಕಲ್ಯಾಣ’ ಪತ್ರಿಕೆಯ ವಿಶೇಷ ಆವೃತ್ತಿಯನ್ನು ಮೊದಲು 1972 ರಲ್ಲಿ ಪ್ರಕಟಿಸಲಾಯಿತು. ಗೀತಾ ಪ್ರೆಸ್ ಅಯೋಧ್ಯೆಯ ವೈಭವದ ಬಗ್ಗೆ ವಿವಿಧ ಲೇಖನಗಳನ್ನು ಒಳಗೊಂಡಿರುವ ‘ಅಯೋಧ್ಯಾ ಮಾಹಾತ್ಮ್ಯ’ ಪುಸ್ತಕವನ್ನು ಸಹ ಪ್ರಸ್ತುತಪಡಿಸುತ್ತದೆ. ಆರ್ಟ್ ಪೇಪರ್‌ನಲ್ಲಿ 45 ಪುಟಗಳ ಮುದ್ರಿತ ಚಿತ್ರಗಳನ್ನು ಹೊಂದಿರುವ ಈ ಪುಸ್ತಕವು ಓದುಗರಿಗೆ ದೃಶ್ಯ ರಸದೌತಣವಾಗಿದೆ. ಇದನ್ನೂ ಓದಿ: 39 ದಿನಗಳಲ್ಲಿ ಶಬರಿಮಲೆಗೆ 204 ಕೋಟಿ ರೂ. ಆದಾಯ- ಕಳೆದ ವರ್ಷ ಎಷ್ಟಿತ್ತು?

    ʼಗೀತಾ ದೈನಂದಿನಿʼ ಡೈರಿಯ ವಿಶೇಷತೆಯೇನು?
    ಇದಲ್ಲದೆ, ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ, ಗೀತಾ ಪ್ರೆಸ್ ಇಂಗ್ಲಿಷ್ ಮತ್ತು ಹಿಂದಿ ದಿನಾಂಕಗಳೊಂದಿಗೆ ಭಗವದ್ಗೀತೆಯ ಶ್ಲೋಕಗಳನ್ನು ಒಳಗೊಂಡಿರುವ ‘ಗೀತಾ ದೈನಂದಿನಿ’ ಡೈರಿಯನ್ನು ನೀಡುತ್ತದೆ. ದಿನಚರಿಯು ಉಪವಾಸ, ಹಬ್ಬಗಳು ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದ ಬಗ್ಗೆ ವಿವರಗಳನ್ನು ಒಳಗೊಂಡಿದೆ. ಇದು ವರ್ಷವಿಡೀ ಮಾಹಿತಿಯನ್ನು ಹುಡುಕುವ ವ್ಯಕ್ತಿಗಳಿಗೆ ಜನಪ್ರಿಯ ಆಯ್ಕೆಯಾಗಿದೆ. ಇದನ್ನೂ ಓದಿ: Ayodhya Ram Mandir – ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರ ಕಂಪ್ಲೀಟ್‌ ಲಿಸ್ಟ್‌

    ದೇವಾಲಯದ ಮೊದಲ ಹಂತವು ಪೂರ್ಣಗೊಳ್ಳುವ ಹಂತದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22 ರಂದು ರಾಮಲಲ್ಲಾ ವಿಗ್ರಹದ ‘ಪ್ರಾಣ ಪ್ರತಿಷ್ಠೆ’ಯಲ್ಲಿ ಭಾಗವಹಿಸಲಿದ್ದಾರೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯದ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರ ಮತ್ತು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿದೆ. ಇದನ್ನೂ ಓದಿ: Ram Mandir: ಭಗವಾನ್‌ ರಾಮನ ಅಜ್ಜಿ ಮನೆಯಿಂದ 3,000 ಕ್ವಿಂಟಾಲ್‌ ಅಕ್ಕಿ, ಅತ್ತೆ ಮನೆಯಿಂದ 1,100 ತಟ್ಟೆ ಉಡುಗೊರೆ

  • ಮದುವೆ ಹಾಲ್‍ಗೆ ಬೆಂಕಿ ಬಿದ್ದರೂ ಅತಿಥಿಗಳು ಊಟದಲ್ಲಿಯೇ ಮಗ್ನ

    ಮದುವೆ ಹಾಲ್‍ಗೆ ಬೆಂಕಿ ಬಿದ್ದರೂ ಅತಿಥಿಗಳು ಊಟದಲ್ಲಿಯೇ ಮಗ್ನ

    ಮುಂಬೈ: ಮದುವೆ ಹಾಲ್‍ಗೆ ಬೆಂಕಿ ಬಿದ್ದರೂ ನಿರ್ಲಕ್ಷಿಸಿದ ಅತಿಥಿಗಳು ಭೋಜನ ಸವಿಯುವುದರಲ್ಲೇ ತಲ್ಲೀನರಾದ ಘಟನೆ ಮಹಾರಾಷ್ಟ್ರ  ಥಾಣೆಯಲ್ಲಿ ನಡೆದಿದೆ.

    ಥಾಣೆ ಜಿಲ್ಲೆಯ ಭಿವಂಡಿ ಸಮೀಪದ ಅನ್ಸಾರಿ ಮದುವೆ ಹಾಲ್‍ನಲ್ಲಿ ಭಾನುವಾರ ರಾತ್ರಿ ಬೆಂಕಿ ಭುಗಿಲೆದ್ದಿತ್ತು. ಮದುವೆ ಹಾಲ್ ಸಮೀಪದ ಸ್ಟೋರ್ ರೂಮಿನಿಂದ ಬೆಂಕಿ ಹರಡಿದೆ ಎನ್ನಲಾಗಿದೆ. ಜೊತೆಗೆ ಪಕ್ಕದಲ್ಲೇ ನಿಲ್ಲಿಸಿದ್ದ ಹಲವಾರು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಇದನ್ನು ನೋಡಿಯೂ ನಿರ್ಲಕ್ಷಿಸಿದ ಅತಿಥಿಗಳು ಭೋಜನ ಸವಿಯುವುದರಲ್ಲೇ ಮಗ್ನರಾಗಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ‘ಅಪ್ಪು ಸರ್ಕಲ್’ ಉದ್ಘಾಟನೆ ಮಾಡಿದ ಯರಪ್ಪನಹಳ್ಳಿ ಗ್ರಾಮಸ್ಥರು


    ವೀಡಿಯೋದಲ್ಲಿ ಏನಿದೆ?: ಮದುವೆ ಹಾಲ್‍ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅತಿಥಿಗಳು ಊಟ ಮಾಡುತ್ತಿದ್ದರು. ಬೆಂಕಿ ಬಿದ್ದಿರುವುದನ್ನು ನೋಡುತ್ತಿದ್ದ ಅತಿಥಿಗಳು ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ನೋಡುತ್ತಾ ಭೋಜನ ಸವಿಯುತ್ತಿದ್ದರು. ಈ ದೃಶ್ಯವನ್ನು ಅಲ್ಲಿದ್ದ ಹಲವರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನೂ ಓದಿ: ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್

  • ಮಗನ ಮದ್ವೆಗೆ 50ಕ್ಕಿಂತ ಹೆಚ್ಚಿನ ಅತಿಥಿಗಳ ಆಹ್ವಾನ- 6.26 ಲಕ್ಷ ದಂಡ

    ಮಗನ ಮದ್ವೆಗೆ 50ಕ್ಕಿಂತ ಹೆಚ್ಚಿನ ಅತಿಥಿಗಳ ಆಹ್ವಾನ- 6.26 ಲಕ್ಷ ದಂಡ

    – ಅತಿಥಿಗಳಲ್ಲಿ 15 ಮಂದಿಗೆ ಕೊರೊನಾ ದೃಢ
    – ಸೋಂಕಿತರ ಖರ್ಚಿಗಾಗಿ ರಾಜ್ಯ ಸರ್ಕಾರ ದಂಡ

    ಜೈಪುರ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರ ಅನೇಕ ನಿರ್ಬಂಧವನ್ನು ಹೇರಿದೆ. ಆದರೂ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಕುಟುಂಬವೊಂದು ಮದುವೆಗೆ 50ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಇದಕ್ಕಾಗಿ 6.26 ಲಕ್ಷ ರೂಪಾಯಿ ದಂಡವನ್ನು ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಭಡಾಡಾ ಮೊಹಲ್ಲಾ ನಿವಾಸಿ ಘಿಸುಲಾಲ್ ರತಿ ಜೂನ್ 13 ರಂದು ತಮ್ಮ ಮಗನ ಮದುವೆಗೆ ಒಂದು ಸಮಾರಂಭವನ್ನು ಏರ್ಪಡಿಸಿದ್ದರು. ಈ ಸಮಾರಂಭಕ್ಕೆ 50ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಈ ಮೂಲಕ ಘಿಸುಲಾಲ್ ರತಿ ಸರ್ಕಾರ ಕೋವಿಡ್-19 ನಿರ್ವಹಣೆಗೆ ಆದೇಶಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

    ಕಾರ್ಯಕ್ರಮದ ನಂತರ 15 ಅತಿಥಿಗಳಲ್ಲಿ ಕೊರೊನಾ ಇರುವುದು ದೃಢವಾಗಿದೆ. ಅಲ್ಲದೇ ಅವರಲ್ಲಿ ಒಬ್ಬ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಭಟ್ ತಿಳಿಸಿದ್ದಾರೆ.

    ಈ ಸಂಬಂಧ ಜೂನ್ 22 ರಂದು ರತಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.

    ಕೊರೊನಾ ಪಾಸಿಟಿವ್ ಬಂದ ರೋಗಿಗಳಿಗೆ ಐಸೋಲೇಷನ್ ವಾರ್ಡ್, ಕ್ವಾರಂಟೈನ್ ಸೌಲಭ್ಯ, ಆಹಾರ, ಅಂಬುಲೆನ್ಸ್ ವ್ಯವಸ್ಥೆ ಮಾಡಲು ರಾಜ್ಯ ಸರ್ಕಾರವು 6,26,600 ರೂಪಾಯಿಯನ್ನು ದಂಡವಾಗಿ ವಿಧಿಸಲಾಗಿದೆ. ಆ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡುವಂತೆ ಕುಟುಂಬಕ್ಕೆ ತಿಳಿಸಲಾಗಿದೆ ಎಂದು ಭಟ್ ಹೇಳಿದ್ದಾರೆ.

  • ಕೇಜ್ರಿವಾಲ್ 3.0  – ಪ್ರಮಾಣ ವಚನಕ್ಕೆ 50 ಮಂದಿ ವಿಶೇಷ ಅತಿಥಿಗಳು

    ಕೇಜ್ರಿವಾಲ್ 3.0 – ಪ್ರಮಾಣ ವಚನಕ್ಕೆ 50 ಮಂದಿ ವಿಶೇಷ ಅತಿಥಿಗಳು

    ನವದೆಹಲಿ: ಭಾರೀ ಬಹುಮತದೊಂದಿಗೆ ಮೂರನೇ ಬಾರಿ ದೆಹಲಿ ಜನರ ದಿಲ್ ಕದ್ದಿರುವ ಅರವಿಂದ ಕೇಜ್ರಿವಾಲ್ ಇಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿ ಹೃದಯ ಭಾಗದಲ್ಲಿರುವ ರಾಮಲೀಲಾ ಮೈದಾನದಲ್ಲಿ ಸರಳ ಕಾರ್ಯಕ್ರಮ ನಡೆಯಲಿದೆ.

    ಕೇಜ್ರಿವಾಲ್ ಜೊತೆಯ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರ ಗೌತಮ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಇತರೆ ರಾಜ್ಯದ ರಾಜಕೀಯ ಗಣ್ಯರನ್ನ ಆಹ್ವಾನಿಸಲಾಗುತ್ತೆ ಎನ್ನಲಾಗಿತ್ತು. ಆದರೆ ಯಾವುದೇ ರಾಜಕೀಯ ಗಣ್ಯರನ್ನ ಆಹ್ವಾನಿಸದಿರಲು ಆಪ್ ನಿರ್ಧರಿಸಿದೆ. ಪ್ರೊಟೊಕಾಲ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ದೆಹಲಿಯ ಬಿಜೆಪಿಯ ಏಳು ಸಂಸದರಿಗೂ ಆಹ್ವಾನ ನೀಡಿದೆ.

    50 ಮಂದಿ ವಿಶೇಷ ಅತಿಥಿಗಳು ಸಾಕ್ಷಿ:
    ರಾಜಕೀಯ ನಾಯಕರ ನೆರಳು ಬೀಳದಂತೆ ನೋಡಿಕೊಂಡಿರುವ ಅರವಿಂದ ಕೇಜ್ರಿವಾಲ್ ತಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳನ್ನು ಆಹ್ವಾನಿಸಿದ್ದಾರೆ. ದಿಲ್ಲಿ ನಿರ್ಮಾಣಕ್ಕೆ ಕಾರಣವಾದ 50 ಮಂದಿ ಪ್ರಮುಖರ ಜೊತೆಗೆ ಕೇಜ್ರಿವಾಲ್ ವೇದಿಕೆ ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ದಿಲ್ಲಿಯ ಪ್ರಸಿದ್ಧ ಸಿಗ್ನೇಚರ್ ಬ್ರಿಡ್ಜ್ ನ ವಿನ್ಯಾಸಕಾರರು, ಶಿಕ್ಷಕರು, ಬಸ್ ಮಾರ್ಷಲ್‍ಗಳು, ಕಂಡಕ್ಟರ್, ಅಗ್ನಿಶಾಮಕ ದಳದ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡವರ ಕುಟುಂಬ ವರ್ಗ, ಆಟೋರಿಕ್ಷಾ ಚಾಲಕರು, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ಐಐಟಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಪಿಡಬ್ಲ್ಯೂಡಿ ಎಂಜಿನಿಯರ್‌ಗಳು ಸೇರಿದಂತೆ ಒಟ್ಟಾರೆ 50 ಮಂದಿ ಪ್ರಮಾಣ ವಚನ ಸಮಾರಂಭದ ವೇದಿಕೆಯಲ್ಲಿ ಕೇಜ್ರಿವಾಲ್ ಜತೆಗೆ ಇರಲಿದ್ದಾರೆ.

    ವೇದಿಕೆಯ ಕೇಂದ್ರ ಬಿಂದು ಚೋಚಾ ಮಫ್ಲರ್ ಮ್ಯಾನ್:
    ದೆಲ್ಲಿ ಚುನಾವಣೆ ಫಲಿತಾಂಶ ದಿನ ಆಪ್ ಕೇಂದ್ರ ಕಚೇರಿ ಬಳಿ ಎಲ್ಲರ ಗಮನ ಸೆಳೆದಿದ್ದ ಚೋಟಾ ಮಫ್ಲರ್‌ಮ್ಯಾನ್ ಅಂತಲೇ ಫೇಮಸ್ ಆಗಿದ್ದ ಒಂದು ವರ್ಷದ ಅವ್ಯಾನ್ ಯಥಾವತ್ ಇಂದಿನ ಕಾರ್ಯಕ್ರಮದ ಕೇಂದ್ರ ಬಿಂದುವಾಗಲಿದ್ದಾನೆ. ಅರವಿಂದ ಕೇಜ್ರಿವಾಲ್ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವ್ಯಾನ್ ಯಥಾವತ್ ಪೋಷಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಅದ್ಧೂರಿಯಲ್ಲದ ತೀರ ಸರಳ ಎನಿಸಿದ ಅರ್ಥಬದ್ದ ಕಾರ್ಯಕ್ರಮಕ್ಕೆ ಆಪ್ ಪ್ಲಾನ್ ಮಾಡಿದ್ದು. ಇಂದಿನಿಂದ ಆಪ್‍ನ ಮತ್ತೊಂದು ಶೆಕೆ ದೆಹಲಿಯಲ್ಲಿ ಆರಂಭವಾಗಲಿದೆ.

  • ಸ್ಟೇಜ್ ನಿಂದ ಜಿಗಿದು, ಮದುವೆಗೆ ಬಂದಿದ್ದ ಪ್ರಿಯಕರನೊಂದಿಗೆ ಓಡಿ ಹೋದ ವಧು!

    ಸ್ಟೇಜ್ ನಿಂದ ಜಿಗಿದು, ಮದುವೆಗೆ ಬಂದಿದ್ದ ಪ್ರಿಯಕರನೊಂದಿಗೆ ಓಡಿ ಹೋದ ವಧು!

    ಗುಂಟೂರು: ವರನ ಜೊತೆ ಮದುವೆಯಾಗುವುದ್ದಕ್ಕೆ ನಿರಾಕರಿಸಿ ಅತಿಥಿಗಳ ಮುಂದೆಯೇ ವಧು ತನ್ನ ಪ್ರಿಯತಮನ ಜೊತೆ ಓಡಿ ಹೋಗಿರುವ ಸಿನಿಮೀಯ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

    ಗುಂಟೂರಿನ ಚರ್ಚ್‍ವೊಂದರಲ್ಲಿ ಮದುವೆಯ ಕಾರ್ಯಕ್ರಮ ನಡೆಯುತ್ತಿತ್ತು. ಮುಂಜಾನೆಯಿಂದ ಮದುವೆಯ ಎಲ್ಲಾ ಶಾಸ್ತ್ರ- ಸಂಪ್ರದಾಯಗಳು ನಡೆದಿದ್ದವು. ಆದ್ರೆ ವಧು ಮಾತ್ರ ಪ್ರಿಯತಮನ ಜೊತೆ ಓಡಿ ಹೋಗಲು ಮಾನಸಿಕವಾಗಿ ತಯಾರಾಗಿದ್ದಳು.

    ಕಾರ್ಯಕ್ರಮ ಶುರುವಾದ ಮೇಲೆ ಕ್ರೈಸ್ತ ಪುರೋಹಿತರು ಬೈಬಲ್ ಓದಲು ಆರಂಭಿಸಿದ್ದರು. ನಂತರ ಆಕೆಯನ್ನು ಮೆದುವೆಯಾಗಲು ನೀವು ತಯಾರಿದ್ದೀರಾ? ಎಂದು ಕೇಳಿದಾಗ ವರ, ನಾನು ತಯಾರಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ವಧುವನ್ನು ನೀವು ಮದುವೆಯಾಗಲು ತಯಾರಿದ್ದೀರಾ? ಎಂದು ಕೇಳಿದ್ದಕ್ಕೆ ಆಕೆ ಮದುವೆ ನಿರಾಕರಿಸಿದ್ದಾಳೆ.

    ಇದಾದ ಬಳಿಕ ವಧು ಸ್ಟೇಜ್ ನಿಂದ ಜಿಗಿದು ನಾನು ನನ್ನ ಪ್ರಿಯತಮನ ಜೊತೆ ಓಡಿ ಹೋಗುತ್ತಿದ್ದೀನಿ ಎಂದು ಎಲ್ಲರ ಮುಂದೆ ಹೇಳಿದ್ದಾಳೆ.