ಹಾಸನ: ಅತಿಥಿ ಉಪನ್ಯಾಸಕಿಯೊಬ್ಬರು (Guest Lecturer) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚನ್ನರಾಯಪಟ್ಟಣದ (Channarayapatna) ಗಾಯಿತ್ರಿ ಬಡಾವಣೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿಯನ್ನು ದೀಪಾ (34) ಎಂದು ಗುರುತಿಸಲಾಗಿದೆ. ಮೃತ ದೀಪಾ ಅವರು ಅವಿವಾಹಿತರಾಗಿದ್ದು, ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – 8 ಮಂದಿ ದುರ್ಮರಣ
ಬೆಂಗಳೂರು: ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ನಿಯೋಗವು ಇಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿತು.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಕೂಡ ಅಶ್ವಥ್ ನಾರಾಯಣ್ ಅವರನ್ನು ಭೇಟಿ ಮಾಡಿದ ಸಮಯದಲ್ಲಿ ಇದ್ದರು. ಈ ವೇಳೆ ಅತಿಥಿ ಉಪನ್ಯಾಸಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಆದಷ್ಟು ಬೇಗ ಪರಿಹಾರ ನೀಡುವಂತೆ ನಿಯೋಗವು ಮನವಿ ಸಲ್ಲಿಸಿತು. ಇದನ್ನೂ ಓದಿ: ಮಾರ್ಚ 15 ರಿಂದ 23 ರ ವರೆಗೆ ರಾಜ್ಯದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅತಿಥಿ ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ಸದಸ್ಯರು, ಅತಿಥಿ ಉಪನ್ಯಾಸಕರ ಸಂಘಟನೆಗಳು ಮತ್ತು ಸಂಬಂಧಿಸಿದ ಎಲ್ಲರೊಂದಿಗೂ ಚರ್ಚಿಸಿ, ಶೀಘ್ರದಲ್ಲೇ ಪರಿಹಾರ ಕಂಡುಹಿಡಿಯಲಾಗುವುದು ಎಂದು ಭರವಸೆ ನೀಡಿದರು.
ನಿಯೋಗದಲ್ಲಿ ಸಂಘಟನೆಯ ಅಧ್ಯಕ್ಷ ಡಾ.ರಘು ಅಕಮಂಚಿ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ಎಬಿವಿಪಿ ಮುಖಂಡರಾದ ಸ್ವಾಮಿ ಮೊದಲಾದವರು ಇದ್ದರು.
ಬೆಂಗಳೂರು: ಅತಿಥಿ ಉಪನ್ಯಾಸಕರು ಸರ್ಕಾರಕ್ಕೆ ಇಟ್ಟಿರುವ ಬೇಡಿಕೆಗಳು ದುಬಾರಿಯಾದುವೇನಲ್ಲ. ಅವರು ಕೇಳುತ್ತಿರುವುದಿಷ್ಟೆ, ತಾವು ಮಾಡುತ್ತಿರುವ ಸೇವೆಗೆ ಕನಿಷ್ಟ ಭದ್ರತೆ ನೀಡಿ, ವರ್ಷದ ಎಲ್ಲ ತಿಂಗಳು ಸಂಬಳ ನೀಡಿ ಮತ್ತು ನೀಡುತ್ತಿರುವ ಸಂಬಳವನ್ನು ಘನತೆಯಿಂದ ಬದುಕುವುದಕ್ಕೆ ಬೇಕಾಗುವಷ್ಟನ್ನು ಹೆಚ್ಚಿಸಿ ಎಂಬುದಷ್ಟೆ ಅವರ ಬೇಡಿಕೆ ಎಂದು ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಅತಿಥಿ ಉಪನ್ಯಾಸಕರ ಜೊತೆ ಮಾನವೀಯತೆಯಿಂದ ವರ್ತಿಸುವಂತೆ ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಏನಿದೆ:
ರಾಜ್ಯದ 440 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವ 14,183 ಉಪನ್ಯಾಸಕರು ಹಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ಈಗ ನೀಡುತ್ತಿರುವುದಕ್ಕೆ ಗರಿಷ್ಟ ಇನ್ನೂರು ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ನೀಡಿದರೆ ಈ ಸಮಸ್ಯೆ ಬಗೆ ಹರಿಯುತ್ತದೆ. ಆದರೆ ಸರ್ಕಾರ ಅವರ ಬೇಡಿಕೆಗಳ ಕುರಿತು ಕಣ್ಣು, ಕಿವಿಗಳನ್ನು ಮುಚ್ಚಿಕೊಂಡು ಕೂತಿದೆ. ಸರ್ಕಾರದ ಈ ನಿರ್ಲಕ್ಷ್ಯ ಅಮಾನವೀಯವಾದುದು. ಕಳೆದ ಎರಡು ವರ್ಷಗಳಲ್ಲಿ ಪ್ರತಿ ವಸ್ತುಗಳ ಬೆಲೆಯೂ ದುಪ್ಪಟ್ಟಾಗಿದೆ. ಆದ್ದರಿಂದ ಸರ್ಕಾರ ನೀಡುತ್ತಿರುವ ಪುಡಿಗಾಸಿನಲ್ಲಿ ಇವರು ಬದುಕುವುದು ಹೇಗೆ?. ಇದನ್ನೂ ಓದಿ: ಲಾಠಿ ಚಾರ್ಜ್ ಪ್ರಕರಣ ಸಿಐಡಿಗೆ ಒಪ್ಪಿಸುತ್ತೇನೆ: ಆರಗ ಜ್ಞಾನೇಂದ್ರ
ಈ ಉಪನ್ಯಾಸಕರುಗಳು ಎಂ.ಎ, ಎಂ.ಎಸ್ಸಿ, ಎಂ.ಕಾಂ, ಪಿಎಚ್,ಡಿ ಪದವಿ ಪಡೆದಿದ್ದಾರೆ. ಯುಜಿಸಿ ನಡೆಸುವ ಅರ್ಹತಾ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆ. ಇವರಿಗೆ ತಿಂಗಳಿಗೆ 11 ರಿಂದ 13 ಸಾವಿರ ರೂಪಾಯಿಗಳನ್ನು ಮಾತ್ರ ಗೌರವಧನವೆಂದು ನೀಡಲಾಗುತ್ತಿದೆ. ಅದೂ ವರ್ಷದಲ್ಲಿ ಕೇವಲ 8 ತಿಂಗಳಿಗೆ ಮಾತ್ರ ನೀಡಲಾಗುತ್ತಿದೆ. ಈ ಸಂಬಳವು ಯುಜಿಸಿ ಸಂಬಳ ಪಡೆಯುತ್ತಿರುವ ಉಪನ್ಯಾಸಕರ ಸಂಬಳದ ಹತ್ತನೇ ಒಂದು ಮತ್ತು ಇಪ್ಪತ್ತನೆ ಒಂದು ಭಾಗವೂ ಅಲ್ಲ. ಈ ಅತಿಥಿ ಉಪನ್ಯಾಸಕರು ಕೂಡ ಯುಜಿಸಿ ಸಂಬಳ ಪಡೆಯುವ ಉಪನ್ಯಾಸಕರಷ್ಟೆ ಪರಿಣಾಮಕಾರಿಯಾಗಿ ಪಾಠ-ಪ್ರವಚನಗಳನ್ನು ಮಾಡುತ್ತಾರೆ. ಆದರೂ ಅತಿ ಕಡಿಮೆ ಗೌರವಧನ ಪಡೆಯುತ್ತಾರೆ. ಹಾಗಾಗಿಯೆ ಇದನ್ನು ಕೆಲವರು ಶೋಷಣೆ ಎಂದು ಕರೆದಿದ್ದಾರೆ.
ತಮ್ಮನ್ನು ಸರ್ಕಾರ ಶೋಷಣೆ ಮಾಡುತ್ತಿದೆ ಎಂಬ ಅತಿಥಿ ಉಪನ್ಯಾಸಕರ ಮಾತಿಗೆ ಸಚಿವರೊಬ್ಬರು ಕೆರಳಿ ಪ್ರತಿಭಟನಾಕಾರರನ್ನು ನಿಂದಿಸಿದ್ದಾರೆಂದು ಪತ್ರಿಕೆಗಳು ವರದಿ ಮಾಡಿವೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರದ ನಿಲುವು ಖಂಡನೀಯವಾದುದು. ಎನ್‍ಇಪಿ ಜಾರಿಗೆ ತಂದ ಮೊದಲ ರಾಜ್ಯ, ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಸುಸ್ಥಿರ ಅಭಿವೃದ್ಧಿ ಗುರಿ ಹಾಕಿಕೊಂಡಿದ್ದೇವೆ ಇತ್ಯಾದಿ ಹೇಳಿಕೊಂಡು ಕಳಪೆ ಯಂತ್ರೋಪಕರಣಗಳನ್ನು ಅಳವಡಿಸಲು ಸಾವಿರಾರು ಕೋಟಿ ಖರ್ಚು ಮಾಡುತ್ತಿರುವ ಸರ್ಕಾರ, ತಮ್ಮ ಕೆಲಸಕ್ಕೆ ನ್ಯಾಯ ಒದಗಿಸಿ ಎಂದು ಕೇಳುವ ಅತಿಥಿ ಉಪನ್ಯಾಸಕರನ್ನು ನಿಂದಿಸುವುದು, ಹಂಗಿಸುವುದು ಅಮಾನವೀಯ ನಡವಳಿಕೆಯಾಗುತ್ತದೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು
ಯಂತ್ರಗಳು ಮನುಷ್ಯರಿಗೆ ಸಾಮಾಜಿಕ ಶಿಕ್ಷಣವನ್ನು ಕಲಿಸಲಾರವು. ಮನುಷ್ಯತ್ವವನ್ನು ಹೇಳಿಕೊಡಲಾರವು. ಈ ಕೆಲಸವನ್ನು ಅನ್ನ ತಿನ್ನುವ ಮನುಷ್ಯರೆ ಮಾಡಬೇಕು. ಅತಿಥಿ ಉಪನ್ಯಾಸಕರು ತರಗತಿಗಳನ್ನು ತೆಗೆದುಕೊಳ್ಳದ ಕಾರಣದಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗದೆ ಕಾರಿಡಾರುಗಳಲ್ಲಿ ಓಡಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡು ವಿದ್ಯಾರ್ಥಿಯೊಬ್ಬ ಜೀವನ್ಮರಣದ ಸ್ಥಿತಿಯಲ್ಲಿ ಕೆ.ಸಿ ಜನರಲ್ ಆಸ್ಪತ್ರೆಯ ಐಸಿಯುನಲ್ಲಿದ್ದಾನೆಂದು ವೈದ್ಯರೊಬ್ಬರು ಇಂದು ಹೇಳುತ್ತಿದ್ದರು.
ಸರ್ಕಾರ ಕೂಡಲೇ ಗಮನ ಹರಿಸಿ ಆ ವಿದ್ಯಾರ್ಥಿಗೆ ಉತ್ತಮ ಚಿಕಿತ್ಸೆ ಕೊಡಿಸಿ ಗಾರೆ ಕೆಲಸ ಮಾಡುವ ಬಡ ಕೂಲಿಕಾರನ ಮಗನನ್ನು ಉಳಿಸಿಕೊಡಬೇಕೆಂದು ಒತ್ತಾಯಿಸುತ್ತೇನೆ. ಸಮರ್ಪಕ ಸಂಬಳವಿಲ್ಲದೆ ಕೋವಿಡ್ ಸಂದರ್ಭದಲ್ಲಿ ಅನೇಕ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಯಿಲೆಗಳಿಗೆ ಚಿಕಿತ್ಸೆ ಪಡೆದುಕೊಳ್ಳಲಾಗದೆ ಅಸುನೀಗಿದ್ದಾರೆ. ಹಾಗಾಗಿ ಸರ್ಕಾರ ಇವರನ್ನು ಇನ್ನಷ್ಟು ಶೋಷಣೆ ಮಾಡದೆ ಅವರ ಸರಳ ಬೇಡಿಕೆಗಳನ್ನು ಈಡೇರಿಸಿ ಕೂಡಲೇ ಬಗೆಹರಿಸಿ ಅವರುಗಳು ತರಗತಿಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕೆಂದು ಆಗ್ರಹಿಸುತ್ತೇನೆ.
ತುಮಕೂರು: ಸರ್ಕಾರಿ ಕಾಲೇಜುಗಳಂದ್ರೆ ಅಲ್ಲಿ ಸಾಮಾನ್ಯವಾಗಿ ಬಡ ವಿದ್ಯಾರ್ಥಿಗಳೇ ಹೆಚ್ಚು ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ಕಷ್ಟನೋ, ಸುಖನೋ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂದು ಅಪ್ಪ-ಅಮ್ಮಂದಿರು ತಮ್ಮ ಮಕ್ಕಳನ್ನು ಶಾಲೆಗೆ ಕಳುಸುತ್ತಾರೆ. ಆದರೆ ಅತಿಥಿ ಉಪನ್ಯಾಕರಿಗೆ ಸಂಬಳ ಕೊಡುವ ನೆಪದಲ್ಲಿ ಬಡ ವಿದ್ಯಾರ್ಥಿಗಳಿಂದ ಪ್ರಾಂಶುಪಾಲ ಲಕ್ಷ ಲಕ್ಷ ಲೂಟಿ ಮಾಡಿರೋದು ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ತಿಪಟೂರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಳೆದ ಐದಾರು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿಗಳಿಂದ ಕಾಲೇಜು ಅಭಿವೃದ್ಧಿ ಹೆಸರಿನಲ್ಲಿ ಪ್ರಾಂಶುಪಾಲ ಅಲ್ಲಮಪ್ರಭು ಮತ್ತು ಎಫ್‍ಡಿಎ ಸುನಿಲ್ ಕೂರ್ಗಿ ಇಬ್ಬರೂ ಜತೆಯಾಗಿ ಹಣ ಪೀಕ್ತಿದ್ದಾರೆ. ಸರ್ಕಾರದಿಂದ ಬಿಡುಗಡೆಯಾದ ವೇತನವನ್ನು ತನ್ನ ಕುಟುಂಬದವರ ಖಾತೆಗೆ ಜಮೆ ಮಾಡುತ್ತಿದ್ದಾರೆ.
ಎರಡು ವರ್ಷದಲ್ಲಿ ಸರಿಸುಮಾರು 20 ಲಕ್ಷ ರೂಪಾಯಿ ಲಪಟಾಯಿಸಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ 40 ಲಕ್ಷ ಹಣವನ್ನು ಇದೇ ರೀತಿ ಗೋಲ್‍ಮಾಲ್ ಮಾಡಿದ್ದಾರೆ. ಈ ಅಕ್ರಮದ ಆರೋಪದ ಬಗ್ಗೆ ಪದವಿಪೂರ್ವ ಕಾಲೇಜುಗಳ ಉಪನಿರ್ದೇಶಕರ ಕೈವಾಡವೂ ಇದೆ ಎನ್ನಲಾಗ್ತಿದೆ. ಆದರೆ ಈ ಆರೋಪವನ್ನು ಉಪನಿರ್ದೇಶಕ ನರಸಿಂಹಮೂರ್ತಿ ತಳ್ಳಿಹಾಕಿದ್ದಾರೆ.
ಒಟ್ಟಾರೆಯಾಗಿ ಕಾಲೇಜು ಅಭಿವೃದ್ಧಿ ಹೆಸರಲ್ಲಿ ಹಣ ನುಂಗುತ್ತಿದ್ದ ಇಬ್ಬರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಯಚೂರು: ಕೊರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ಬಾಗಿಲು ಮುಚ್ಚಿರುವುದರಿಂದ ಜಿಲ್ಲೆಯ ಅತಿಥಿ ಉಪನ್ಯಾಸಕರೊಬ್ಬರು ದಿನಗೂಲಿ ಕುರಿಗಾಯಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟ ನಿಭಾಯಿಸಲು ನಿತ್ಯ 200ರೂ ಕೂಲಿಯಂತೆ ಕುರಿ ಮೇಯಿಸಲು ಹೋಗುತ್ತಿದ್ದಾರೆ.
ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ದೇವದುರ್ಗ ತಾಲೂಕಿನ ಹುಲಿಗುಡ್ಡ ಗ್ರಾಮದ ವೀರನಗೌಡ ವೇತನವಿಲ್ಲದೇ ಸಂಕಷ್ಟಕ್ಕೆ ಒಳಗಾಗಿ ಕುರಿ ಮೇಯಿಸುತ್ತಿದ್ದಾರೆ. ಎಂಎ, ಬಿಎಡ್ ಪದವೀಧರ ವೀರನಗೌಡ ಸರ್ಕಾರಿ ಪದವಿ ಕಾಲೇಜು ಮಸ್ಕಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಇಬ್ಬರು ಮಕ್ಕಳಿರುವ, ಕೂಡು ಕುಟುಂಬದ ವೀರನಗೌಡ ಸಿಇಟಿ ಹಾಗೂ ಕೆಸೆಟ್ ಸಹ ಮಾಡಿಕೊಂಡಿದ್ದಾರೆ. ಕಳೆದ ಆರೇಳು ತಿಂಗಳಿಂದ ವೇತನ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ವೀರನಗೌಡ ಆರ್ಥಿಕ ಸಂಕಷ್ಟ ನಿಭಾಯಿಸಲು ಕಾಡು, ಮೇಡು ಅಲೆದು ಕುರಿ ಕಾಯುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಕಡೆ ಗಮನಹರಿಸಬೇಕು ಅಂತ ವೀರನಗೌಡ ಮನವಿ ಮಾಡಿದ್ದಾರೆ.
ಬಳ್ಳಾರಿ: ಕೊರೊನಾ ಮಾಹಾಮಾರಿಯಿಂದಾಗಿ ಕೆಲಸ ಇಲ್ಲದೆ ಸಂಬಳ ಇಲ್ಲದೆ ಸಂಸಾರ ನಡೆಸಲು ಸಾಧ್ಯವಾಗದ ಸ್ಥಳೀಯ ಅತಿಥಿ ಉಪನ್ಯಾಸಕರ ಸಹಾಯಕ್ಕೆ ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಮುಂದಾಗಿದ್ದಾರೆ.
ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಸ್ಪಂದಿಸಿ, ಅವರಿಗೆಲ್ಲ ಆಹಾರದ ಕಿಟ್‍ಗಳನ್ನು ನೀಡಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಸೇರಿದಂತೆ 200ಕ್ಕೂ ಹೆಚ್ಚಿನ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಇದೇ ಸಮಯದಲ್ಲಿ ಎಲ್ಲ ಅತಿಥಿ ಉಪನ್ಯಾಸಕರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿದ್ದಾರೆ.
ಈ ವೇಳೆ ಮಾತನಾಡಿದ ನೇಮಿರಾಜನಾಯ್ಕ್, ಹಲವಾರು ತಿಂಗಳುಗಳಿಂದ ಸಂಬಳವಿಲ್ಲದೆ ಅತ್ಯಂತ ಕಷ್ಟದ ಸ್ಥಿತಿಯಲ್ಲಿರುವ ಈ ಅತಿಥಿ ಉಪನ್ಯಾಸಕರಿಗೆ ಸರ್ಕಾರ ನೆರವಾಗಬೇಕು. ನಾಡಿದ್ದು ಬಳ್ಳಾರಿ ಜಿಲ್ಲೆಯ ಅತಿಥಿ ಉಪನ್ಯಾಸಕರ ನಿಯೋಗವನ್ನು ಉಪಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ರವರ ಬಳಿ ಕರೆದುಕೊಂಡು ಹೋಗುತ್ತೇನೆ. ಅವರೊಂದಿಗೆ ಚರ್ಚಿಸಿ ಸಂಬಳ ಹೆಚ್ಚಳ, ಕೆಲಸದ ಖಾಯಂ ಮಾಡಲು ಬೇಕಾದ ನೆರವು ನೀಡುವುದಾಗಿ ತಿಳಿದ್ದಾರೆ.
ಕೊಪ್ಪಳ: ಕಾಲೇಜೊಂದರ ಅತಿಥಿ ಉಪನ್ಯಾಸಕನೊಬ್ಬ ಪ್ರೀತಿಸುವ ನಾಟಕವಾಡಿ ವಿದ್ಯಾರ್ಥಿನಿಗೆ ವಂಚಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಯಲಬುರ್ಗಾ ಮೂಲದ ಬಾಳಪ್ಪ ಹಡಪದ ವಂಚಿಸಿದ ಉಪನ್ಯಾಸಕನಾಗಿದ್ದು, ಹೊನ್ನತೆಮ್ಮ (20) ಮೋಸ ಹೋದ ವಿದ್ಯಾರ್ಥಿನಿ. ಕೊಪ್ಪಳ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿರೋ ಬಾಳಪ್ಪ ಕಳೆದ ಮೂರು ವರ್ಷದಿಂದ ವಿದ್ಯಾರ್ಥಿನಿಯನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.
ಆದ್ರೆ ಇದೀಗ ಬಾಳಪ್ಪ ಬೇರೊಂದು ಮದುವೆಯಾಗಿದ್ದಾನೆ. ಹೀಗಾಗಿ ಇದೀಗ ವಿದ್ಯಾರ್ಥಿನಿ ಆತ ತನ್ನನ್ನು ಪಿಯುಸಿಯಲ್ಲಿದ್ದಾಗಿನಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸದ್ಯ ಮೋಸ ಮಾಡಿದ ಅತಿಥಿ ಉಪನ್ಯಾಸಕನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.