Tag: Gubbi Srinivas

  • ತುಮುಲ್ ಚುನಾವಣೆಯಲ್ಲಿ ಸಿಎಂ ಬಣ ಮೇಲುಗೈ – ಗುಬ್ಬಿ ಶಾಸಕ ಬಹಿರಂಗ ಅಸಮಾಧಾನ

    ತುಮುಲ್ ಚುನಾವಣೆಯಲ್ಲಿ ಸಿಎಂ ಬಣ ಮೇಲುಗೈ – ಗುಬ್ಬಿ ಶಾಸಕ ಬಹಿರಂಗ ಅಸಮಾಧಾನ

    ತುಮಕೂರು: ತುಮಕೂರು ಹಾಲು ಒಕ್ಕೂಟದ (TUMUL) ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದೆ. ಸಚಿವರಾದ ಪರಮೇಶ್ವರ್ ಮತ್ತು ರಾಜಣ್ಣ ತಮ್ಮ ಬೆಂಬಲಿಗರಾದ ಪಾವಗಡ ಶಾಸಕ ವೆಂಕಟೇಶ್‌ರನ್ನು (H Venkatesh) ತುಮುಲ್ ಅಧ್ಯಕ್ಷರನ್ನಾಗಿಸಿದ್ದಾರೆ. ಇದೇ ಮೊದಲ ಬಾರಿಗೆ ನಾಮನಿರ್ದೇಶಿತ ಸದಸ್ಯರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದೆ.

    ಈ ಬೆಳವಣಿಗೆಯಿಂದ ಪತ್ನಿಯನ್ನು ತುಮುಲ್ ಅಧ್ಯಕ್ಷರನ್ನಾಗಿ ಮಾಡಲು ಮುಂದಾಗಿದ್ದ ಗುಬ್ಬಿ ಶಾಸಕ ಶ್ರೀನಿವಾಸ್‌ರನ್ನು (Gubbi Srinivas) ಕೆರಳಿಸಿದೆ. ಸಚಿವ ರಾಜಣ್ಣ ಮತ್ತು ಪರಮೇಶ್ವರ್ ವಿರುದ್ಧ ಶ್ರೀನಿವಾಸ್ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಇಬ್ಬರು ಸೇರಿಕೊಂಡು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಸಚಿವರ ವರ್ತನೆ ಬಗ್ಗೆ ಸಿಎಂ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಹುಟ್ಟಿನಿಂದ ಸಿಗುವ ಪೌರತ್ವ ರದ್ದು – ಅಮೆರಿಕದಲ್ಲಿ ಹೆಚ್ಚಾಯ್ತು ಭಾರತೀಯ ಗರ್ಭಿಣಿಯರ ಸಿಸೇರಿಯನ್‌ ಹೆರಿಗೆ ಬೇಡಿಕೆ

    ಆದರೆ ಇದಕ್ಕೆಲ್ಲಾ ರಾಜಣ್ಣ ಡೋಂಟ್ ಕೇರ್ ಎಂದಿದ್ದಾರೆ. ಪ್ರಕರಣಕ್ಕೆ ದಲಿತ ಟ್ವಿಸ್ಟ್ ಕೊಟ್ಟಿದ್ದಾರೆ. ಪರಮೇಶ್ವರ್ ನಂಗೇನು ಗೊತ್ತಿಲ್ಲಪ್ಪ ಎಂದು ಜಾರಿಕೊಂಡಿದ್ದಾರೆ. ಗುಬ್ಬಿ ಶ್ರೀನಿವಾಸ್‌ಗೆ ಅನ್ಯಾಯ ಆಗಿದೆ ಪಾಪ ಎಂದು ಬಿಜೆಪಿ ಶಾಸಕ ಸುರೇಶ್‌ಗೌಡ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯವಾಡಲು ಡಿವೋರ್ಸ್‌ ಮೊರೆ; ಕೇಸ್ ಕೋರ್ಟ್‌ನಲ್ಲಿರುವಾಗ್ಲೇ ಹೆಂಡ್ತಿ ಮನವೊಲಿಸಲು ಬಂದು ಸುಟ್ಟು ಕರಕಲು

  • ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ JDS ಇಬ್ಬರು ಶಾಸಕರು ಉಚ್ಚಾಟನೆ

    ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ JDS ಇಬ್ಬರು ಶಾಸಕರು ಉಚ್ಚಾಟನೆ

    ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್‌ನಿಂದ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲಾಗಿದೆ.

    ಗುಬ್ಬಿ ಶ್ರೀನಿವಾಸ್, ಕೋಲಾರ ಶ್ರೀನಿವಾಸ ಗೌಡ ಉಚ್ಚಾಟನೆ‌ಗೊಳಿಸಿ ಜೆಡಿಎಸ್‌ ಆದೇಶ ಹೊರಡಿಸಿದೆ. ಇಂದು ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ರಾರಾ ರಕ್ಕಮ್ಮ ಹಾಡಿಗೆ ರೇಣುಕಾಚಾರ್ಯ ಭರ್ಜರಿ ಸ್ಟೆಪ್ಸ್

    ರಾಜ್ಯಸಭಾ ಚುನಾವಣೆಯಲ್ಲಿ ತಾವು ಪಕ್ಷದ ಅಧಿಕೃತ ಅಭ್ಯರ್ಥಿಯಾದ ಡಿ.ಕುಪೇಂದ್ರರೆಡ್ಡಿ ಅವರಿಗೆ ಮತ ನೀಡದೇ, ಅವರ ವಿರುದ್ಧವಾಗಿ ನಿಮ್ಮ ಪ್ರಥಮ ಪ್ರಾಶಸ್ತ್ಯ ಮತವನ್ನು ಬಿಜೆಪಿ ಅಭ್ಯರ್ಥಿ ಲೆಹರ್‌ಸಿಂಗ್‌ ಮತ್ತು ದ್ವಿತೀಯ ಮತವನ್ನು ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಅವರಿಗೆ ನೀಡಿರುವ ಬಗ್ಗೆ ಹೆಚ್‌.ಡಿ.ರೇವಣ್ಣ ಅವರು ನೀಡಿರುವ ವರದಿಯಲ್ಲಿ ವಿವರಿಸಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಈಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಗುಬ್ಬಿ ಶ್ರೀನಿವಾಸ್‌ ಅವರು ಖಾಲಿ ಪೇಪರ್‌ ಅನ್ನು ಬ್ಯಾಲೆಟ್‌ ಬಾಕ್ಸ್‌ಗೆ ಹಾಕಿ ಸಂಚಲನ ಮೂಡಿಸಿದ್ದರು. ಇದಕ್ಕೂ ಮೊದಲು ಜೆಡಿಎಸ್‌ನ ಶ್ರೀನಿವಾಸ್‌ ಗೌಡ ಅವರು ಅಡ್ಡ ಮತದಾನ ಮಾಡಿದ್ದರು.

    Live Tv

  • ಜೆಡಿಎಸ್‍ನಿಂದ ಶಾಸಕ ಗುಬ್ಬಿ ಶ್ರೀನಿವಾಸ್, ಶ್ರೀನಿವಾಸ್ ಗೌಡ ಉಚ್ಚಾಟನೆ

    ಜೆಡಿಎಸ್‍ನಿಂದ ಶಾಸಕ ಗುಬ್ಬಿ ಶ್ರೀನಿವಾಸ್, ಶ್ರೀನಿವಾಸ್ ಗೌಡ ಉಚ್ಚಾಟನೆ

    ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಜೆಡಿಎಸ್ ಗುಬ್ಬಿ ಶ್ರೀನಿವಾಸ್ ಮತ್ತು ಶ್ರೀನಿವಾಸ್ ಗೌಡರನ್ನು ಉಚ್ಚಾಟನೆ ಮಾಡಲು ಜೆಡಿಎಸ್‍ನಿಂದ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ನಾಳೆಯೇ ಆದೇಶ ಹೊರಡಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪಷ್ಟನೆ ನೀಡಿದರು.

    ಬೆಂಗಳೂರಿನಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಇಬ್ಬರನ್ನು ಅಮಾನತು ಮಾಡಲಾಗಿದೆ. ಕುಮಾರಸ್ವಾಮಿ ಅವರು ಬೆಂಗಳೂರಿನ ಹೊರಗೆ ಇದ್ದಾರೆ. ನಾಳೆ ಅವರ ಬಳಿ ಸಹಿ ಪಡೆದ ಬಳಿಕ ನಾಳೆ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದರು.

    ಇಬ್ಬರ ಸದಸ್ಯತ್ವ ರದ್ದು ಮಾಡಲು ಬುಧವಾರ ಸ್ಪೀಕರ್‌ಗೆ ದೂರು ಕೊಡುತ್ತೇವೆ. ಇಬ್ಬರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ. ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಅಡ್ಡ ಮತದಾನ ಮಾಡಿಸಿದ್ದಾರೆ. ಹೀಗಾಗಿ ಅನರ್ಹ ಮಾಡಿ ಎಂದು ಮನವಿ ಮಾಡುತ್ತೇವೆ. ಈಗ ಇರುವ ಸ್ಪೀಕರ್ ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ಸ್ಪೀಕರ್ ಸರಿಯಾಗಿ ನಿರ್ಣಯ ಮಾಡದೇ ಹೋದರೆ ಕೋರ್ಟ್ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.

    ಗುಬ್ಬಿ ಶ್ರೀನಿವಾಸ್ ತಪ್ಪು ಮಾಡಿಲ್ಲ ಅಂದರೆ ಅವತ್ತೆ ಹೇಳಬೇಕಿತ್ತು. ಮತ ಪತ್ರ ಮುಚ್ಚಿಕೊಂಡು ಯಾಕೆ ಮತ ಹಾಕಿದರು? ಆಮೇಲೆ ಯಾಕೆ ಕುಮಾರಸ್ವಾಮಿ ಬಗ್ಗೆ ಮಾತಾಡಿದರು. ಈಗ ಯಾಕೆ ಆಣೆ ಪ್ರಮಾಣ ಮಾಡುತ್ತಾರೆ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ದ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟಿಕೆಟ್ ಇದ್ದೂ ಪ್ರವೇಶ ನಿರಾಕರಿಸಿದ ಏರ್‌ಇಂಡಿಯಾಕ್ಕೆ 10 ಲಕ್ಷ ದಂಡ

    Congress

    ಕೆಪಿಸಿಸಿ ಅಧ್ಯಕ್ಷರೇ ಬಿಜೆಪಿಗೆ ಮತ ಹಾಕಿಸಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಹೀಗೆ ಆಗಿದೆ. ಸೋನಿಯಾ ಗಾಂಧಿ, ಸುರ್ಜೇವಾಲಾ ಯಾಕೆ ಮೌನವಾಗಿ ಇದ್ದಾರೆ. ಇವರು ಮೌನವಾಗಿ ಇರೋದು ನೋಡಿದರೆ ಇವರು ಕೂಡಾ ಶಾಮೀಲಾಗಿದ್ದಾರೆ ಅನ್ನಿಸುತ್ತದೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: ಅಂದು ಜಯಾ ಜೈಲಿಗೆ, ಇಂದು ಸಂಕಷ್ಟದಲ್ಲಿ ಸೋನಿಯಾ, ರಾಹುಲ್‌ – ಇದು ಸ್ವಾಮಿ ದೂರಿನ ಕರಾಮತ್ತು

    ಅಡ್ಡ ಮತದಾನದ ಬಗ್ಗೆ ಮಾತಾಡೋದು ಬಿಟ್ಟು ಇಡಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಯಾಕೆ. ಕಾಂಗ್ರೆಸ್‍ನವರು ಯಾಕೆ ಇಡಿ ದಾಳಿ ಬಗ್ಗೆ ಪ್ರತಿಭಟನೆ ಮಾಡುತ್ತಾ ಇದ್ದಾರೆ. ಇಲ್ಲಿ ನಮ್ಮ ಶಾಸಕರಿಂದ ಅಡ್ಡ ಮತದಾನ ಮಾಡಿಸಿಕೊಂಡಿದ್ದಾರೆ. ಇದು ಸರಿನಾ? ಇಲ್ಲಿ ಅಡ್ಡ ಮತದಾನ ಮಾಡಿಸಿ, ಅಲ್ಲಿ ಇಡಿ ದಾಳಿ ಬಗ್ಗೆ ಪ್ರತಿಭಟನೆ ಮಾಡೋಕೆ ಅವರಿಗೆ ಯಾವ ನೈತಿಕತೆ ಇದೆ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

  • ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

    ರಾಜ್ಯಸಭಾ ಚುನಾವಣೆ: ಜೆಡಿಎಸ್‌ಗೆ ಬಿಗ್ ಶಾಕ್ ಕೊಟ್ಟ ಗುಬ್ಬಿ ಶ್ರೀನಿವಾಸ್

    ಬೆಂಗಳೂರು: ಜೆಡಿಎಸ್ ನಾಯಕರಿಗೆ ಗುಬ್ಬಿ ಶ್ರೀನಿವಾಸ್ ಶಾಕ್ ಕೊಟ್ಟಿದ್ದಾರೆ. ಇಂದಿನ ರಾಜ್ಯಸಭಾ ಚುನಾವಣೆಯಲ್ಲಿ ಶ್ರೀನಿವಾಸ್ ಖಾಲಿ ಪೇಪರ್ ಅನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿ ಸಂಚಲನ ಮೂಡಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ. ಸಾಯಂಕಾಲ ಇವರ ಹಣೆಬರಹ ಗೊತ್ತಾಗುತ್ತದೆ. ನಮ್ಮ ಪಕ್ಷದಲ್ಲಿ ನಿಂತು ನಮಗೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಮೊದಲ ಅಡ್ಡಮತದಾನ

    ಗುಬ್ಬಿ ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಹಾಕಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಒಂದು ವೇಳೆ ಯಾರಿಗೂ ಮತ ಹಾಕದೇ ಖಾಲಿ ಬ್ಯಾಲೆಟ್ ಹಾಕಿದರೆ ಮತ ತಿರಸ್ಕೃತವಾಗಲಿದೆ. ಸಂಜೆ ಚುನಾವಣಾ ಎಣಿಕೆಯ ವೇಳೆ ಎಲ್ಲವೂ ಸ್ಪಷ್ಟವಾಗಲಿದೆ. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ರೇವಣ್ಣ ಮತ ತಿರಸ್ಕೃತವಾಗುತ್ತಾ?

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಗುಬ್ಬಿ ಶ್ರೀನಿವಾಸ್ ಅವರು ನಾನು ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಜೆಡಿಎಸ್ ಶ್ರೀನಿವಾಸ ಗೌಡ ಅವರು ಅಡ್ಡ ಮತದಾನ ಮಾಡಿದ್ದರು.

  • ಹಾಲಿ ಶಾಸಕನಿಗೆ ಬಾಗಿಲು ಮುಚ್ಚಿದ ಜೆಡಿಎಸ್ – ದೇವೇಗೌಡರಿಂದ್ಲೇ ಡೋರ್ ಕ್ಲೋಸ್ ಸಂದೇಶ

    ಹಾಲಿ ಶಾಸಕನಿಗೆ ಬಾಗಿಲು ಮುಚ್ಚಿದ ಜೆಡಿಎಸ್ – ದೇವೇಗೌಡರಿಂದ್ಲೇ ಡೋರ್ ಕ್ಲೋಸ್ ಸಂದೇಶ

    ತುಮಕೂರು: ಸ್ವಪಕ್ಷದ ವಿರುದ್ಧವೇ ಹೇಳಿಕೊಡುತ್ತಾ ತಮ್ಮ ನಾಯಕರ ವಿರುದ್ಧ ಆಗಾಗ ಗುಡುಗುತ್ತಿದ್ದ ಗುಬ್ಬಿ ಜೆಡಿಎಸ್ ಶಾಸಕ ಎಸ್ ಆರ್ ಶ್ರೀನಿವಾಸ್‍ಗೆ ಇಂದಿನಿಂದ ಅಧಿಕೃತವಾಗಿ ಜೆಡಿಎಸ್ ಬಾಗಿಲು ಮುಚ್ಚಿದೆ. ಗುಬ್ಬಿ ಕ್ಷೇತ್ರದಲ್ಲಿ ಪರ್ಯಾಯ ನಾಯಕನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ಕುಮಾರಸ್ವಾಮಿ ಬಾಗಿಲು ಮುಚ್ಚಿದ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಕುಮಾರಸ್ವಾಮಿ ತೀರ್ಮಾನಕ್ಕೆ ವರಿಷ್ಠ ದೇವೇಗೌಡರು ಅಧಿಕೃತ ಮೊಹರು ಒತ್ತಿದ್ದಾರೆ. ಈ ನಡುವೆ ಶಾಸಕ ಶ್ರೀನಿವಾಸ್‍ಗೆ ಇತ್ತ ಜೆಡಿಎಸ್ ಇಲ್ಲದೇ, ಅತ್ತ ಕಾಂಗ್ರೆಸ್ ಅಲ್ಲದ ಅತಂತ್ರಭಾವ ಮೂಡಿದೆ.

    ಕಳೆದ 2 ವರ್ಷಗಳಿಂದ ಮಾತೃಪಕ್ಷ ಜೆಡಿಎಸ್ ಮತ್ತು ಪಕ್ಷದ ನಾಯಕರ ವಿರುದ್ಧ ಶಾಸಕ ಗುಬ್ಬಿ ಶ್ರೀನಿವಾಸ್ ಹರಿಹಾಯುತ್ತಿದ್ದರು. ಕುಮಾರಸ್ವಾಮಿ ವಿರುದ್ಧವೇ ಹೆಚ್ಚಾಗಿ ಹೇಳಿಕೆ ಕೊಡ್ತಿದ್ದ ಶ್ರೀನಿವಾಸ್‍ಗೆ ನಿನ್ನೆ ಜೆಡಿಎಸ್ ಕಠಿಣ ಸಂದೇಶವೊಂದು ರವಾನಿಸಿದೆ. ತುಮಕೂರಿನ ಗುಬ್ಬಿ ಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪರ್ಯಾಯ ನಾಯಕನನ್ನು ಜೆಡಿಎಸ್‍ಗೆ ಸೇರಿಕೊಳ್ಳುವ ಮೂಲಕ ಮಾತೃಪಕ್ಷದ ಬಾಗಿಲು ಶ್ರೀನಿವಾಸ್‍ಗೆ ಮುಚ್ಚಲಾಗಿದೆ. ಇದನ್ನೂ ಓದಿ: ಅತ್ತೆ ಮನೆಗೆ ಮತ ಕೇಳಲು ಹೋದ ಸಿಎಂ ಬಸವರಾಜ ಬೊಮ್ಮಾಯಿ

    ಸಮಾವೇಶದಲ್ಲಿ ಪಕ್ಷದ ಸೇರಿದ ಬಿಜೆಪಿಯ ಸಿ.ಎಸ್.ಪುರ ನಾಗರಾಜು ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಪಡಿಸುತ್ತಾರೆ ಎಂದು ಕುಮಾರಸ್ವಾಮಿ ಘೋಷಿಸಿದ್ದಾರೆ. ಜೆಡಿಎಸ್‍ನಲ್ಲಿ ಗುಬ್ಬಿ ಶ್ರೀನಿವಾಸರ ಅಧ್ಯಾಯ ಮುಗಿದ ಬಗ್ಗೆ ಪಕ್ಷದ ವರಿಷ್ಠ ದೇವೇಗೌಡರು ಸಹ ಅಧಿಕೃತ ಮುದ್ರೆ ಒತ್ತಿದ್ದಾರೆ. ಈ ಮೂಲಕ ಜೆಡಿಎಸ್ ಜೊತೆಗಿನ ಎಲ್ಲ ನಂಟು ಶ್ರೀನಿವಾಸ ಕಳೆದುಕೊಂಡಿದ್ದಾರೆ ಎಂಬ ಸಂದೇಶವನ್ನು ದೇವೇಗೌಡರು ಹರಿಬಿಟ್ಟಿದ್ದಾರೆ. ಇದು ಗುಬ್ಬಿ ಶ್ರೀನಿವಾಸ್‍ಗೆ ಇನ್ನಿಲ್ಲದ ಆಘಾತ ತಂದಿದೆ. ಇದನ್ನೂ ಓದಿ: ಪ್ರೇಮ ವೈಫಲ್ಯ – ವೀಡಿಯೋ ಮಾಡಿಟ್ಟು ಜಿಮ್ ಟ್ರೈನರ್ ಆತ್ಮಹತ್ಯೆ

    ಕುಮಾರಸ್ವಾಮಿ ವಿರುದ್ಧ ಮಾತಾಡಿದ್ರೂ ದೇವೇಗೌಡರ ವಿರುದ್ಧ ಮಾತಾಡದ ಶ್ರೀನಿವಾಸ್ ಗೌಡರು, ತಮ್ಮನ್ನು ಪಕ್ಷದಲ್ಲಿ ಉಳಿಸಿಕೊಳ್ತಾರೆ ಎಂಬ ನಂಬಿಕೆ ಈಗ ಹುಸಿ ಆಗಿದೆ. ಇನ್ನೊಂದೆಡೆ ಶ್ರೀನಿವಾಸ್ ಕಾಂಗ್ರೆಸ್‍ಗೆ ಸೇರುವುದಕ್ಕೂ ಸ್ಥಳೀಯ ಕಾಂಗ್ರೆಸ್ ಮುಖಂಡತ ವಿರೋಧ ಹೆಚ್ಚಾಗಿದೆ. ಬೇರೆ ಪಕ್ಷದಿಂದ ಹೊರ ಹಾಕಿದವರು ನಮಗೆ ಬೇಡ ಎನ್ನುತ್ತಿದ್ದಾರೆ. ಈ ಮೂಲಕ ಶ್ರೀನಿವಾಸ್ ಅವರು ಇತ್ತ ಜೆಡಿಎಸ್ಸೂ ಇಲ್ಲ, ಅತ್ತ ಕಾಂಗ್ರೆಸ್ಸೂ ಇಲ್ಲದೇ ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ 160 ಬಡವರ ಮನೆಗಳ ನೆಲಸಮಕ್ಕೆ ನೋಟಿಸ್ – ಬಲಾಢ್ಯರಿಗೆ ಯಾಕಿಲ್ಲ ನೋಟಿಸ್?

    ಗುಬ್ಬಿ ಶ್ರೀನಿವಾಸ್ ತಮ್ಮ ಮನದ ನೋವನ್ನು ಹೊರ ಹಾಕಿದ್ದು, ಸಮಾವೇಶದಿಂದ ದೂರ ಇಟ್ಟು ನನಗೆ ಅವಮಾನ ಮಾಡಿದ್ದಾರೆ. ನಾನು ಯಾವತ್ತೂ ಪಕ್ಷ ಬಿಡ್ತೀನಿ ಅಂದಿರಲಿಲ್ಲ. ಯಾಕೆ ಹೀಗೆ ಮಾಡಿದ್ರೋ ಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ‘ತೆನೆ’ ಪಕ್ಷದ ‘ಹೊರೆ’ ಇಳಿಸಿದರೂ ಶ್ರೀನಿವಾಸ್‍ಗೆ ಕಾಂಗ್ರೆಸ್ ಪಕ್ಷ ಕೈ ಹಿಡಿಯುವ ಸಾಧ್ಯತೆ ತೀರಾ ಕಡಿಮೆ ಇದೆ. ಪಕ್ಷದಲ್ಲಿನ ಆಂತರಿಕ ಮನಸ್ತಾಪಗಳನ್ನು ಬಹಿರಂಗಗೊಳಿಸಿ ಸಂಕಷ್ಟಕ್ಕೆ ಸಿಲುಕಿರುವ ಶ್ರೀನಿವಾಸ್ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗ್ತಿದೆ.

  • ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಬಸ್ ಪಾಸ್ ಇಲ್ಲ

    ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಬಸ್ ಪಾಸ್ ಇಲ್ಲ

    ಬೆಂಗಳೂರು: ವಿದ್ಯಾರ್ಥಿಗಳಿಗೆ ಈ ವರ್ಷವೂ ಉಚಿತ ಬಸ್ ಪಾಸ್ ಸಿಗುವುದಿಲ್ಲ ಎಂದು ನೂತನ ಶಿಕ್ಷಣ ಸಚಿವ ಗುಬ್ಬಿ ಶ್ರೀನಿವಾಸ್ ಪರೋಕ್ಷವಾಗಿ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡುವ ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ ಜಾರಿಕೊಂಡರು. ಹಿಂದಿನ ಸರ್ಕಾರದಲ್ಲಿ ಉಚಿತ ಪಾಸ್ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನು ತಡೆ ಹಿಡಿಯಲಾಗಿದೆ. ಈ ಸಂಬಂಧ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

    ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಕರ್ಯ ಸಮಸ್ಯೆಗಳಿವೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಈಗಾಗಲೇ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಮೂಲ ಸೌಕರ್ಯ ವಂಚಿತ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ. ಅನುದಾನವನ್ನು ನೋಡಿಕೊಂಡು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

    ಕನ್ನಡ ಮಾಧ್ಯಮ ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ. ಆದರೂ ಪ್ರತಿವರ್ಷ 20 ರಿಂದ 30 ಶಾಲೆಗಳು ಮುಚ್ಚುತ್ತಿವೆ. ಶಿಕ್ಷಣ ವ್ಯಾಪಾರೀಕರಣ ಆಗುತ್ತಿರುವುದು ಇದಕ್ಕೆ ಕಾರಣ. ಖಾಸಗಿ ಶಿಕ್ಷಣ ಸಂಸ್ಥೆಗಳು ಹಳ್ಳಿಗಳಿಗೂ ವ್ಯಾನ್ ಕಳಿಸಿ ಮಕ್ಕಳನ್ನು ಕರೆತರುತ್ತಿವೆ. ಇದೆಲ್ಲವನ್ನು ಗಮದಲ್ಲಿಟ್ಟುಕೊಂಡು ಕನ್ನಡ ಶಾಲೆಗಳ ಅಭಿವೃದ್ಧಿಗೊಳಿಸಬೇಕಿದೆ ಎಂದರು.

    ಸಿಬಿಎಸ್‍ಸಿ, ಐಸಿಎಸ್‍ಸಿ ಗಳಲ್ಲಿ ಕೂಡ ಕನ್ನಡ ಕಡ್ಡಾಯಗೊಳಿಸಿ, ಅನುಷ್ಠಾನಕ್ಕೆ ತರಲಾಗುವುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಪಠ್ಯಪುಸ್ತಕ ಬದಲಾವಣೆ ಮಾಡುತ್ತೇವೆ. ಪ್ರಾದೇಶಿಕತೆ ಒಳಗೊಂಡ ಪಠ್ಯ ರಚನೆಗೆ ನಿರ್ಧಾರ ನಡೆದಿದೆ. ದೆಹಲಿ ಹಾಗೂ ಕೇರಳ ಶಿಕ್ಷಣ ಪದ್ಧತಿಯ ಬಗ್ಗೆ ಅಧ್ಯಯನ ನಡೆಸಲು ನಿಯೋಗ ಕಳಿಸಲಾಗುತ್ತದೆ. ಅಲ್ಲಿನ ವ್ಯವಸ್ಥೆ, ಪಠ್ಯ ಪುಸ್ತಕ ಅಧ್ಯಯನ ಮಾಡಿ ಪುಸ್ತಕ ಬದಲಾವಣೆ ಮಾಡುವ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು.

    ಗ್ರಂಥ ಪಾಲಕರ ವೇತನ ಹೆಚ್ಚಳದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ಗ್ರಂಥ ಪಾಲಕರು ಮಂಗಳವಾರ ನನ್ನನ್ನು ಭೇಟಿ ಮಾಡಿದರು. ಈ ಮೂಲಕ ವೇತನ ಹೆಚ್ಚಳ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಕೆಲವು ಗ್ರಂಥಾಲಯಗಳು ಆರ್ ಡಿಪಿಆರ್ ಅಡಿ ಬರುತ್ತವೆ. ಹೀಗಾಗಿ ಆ ಇಲಾಖೆ ಜೊತೆಗೂ ಚರ್ಚೆ ಮಾಡಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.