Tag: Guari Lankesh

  • ನಾಲ್ಕು ಗಂಟೆಯ ಮೊದಲೇ ನಡೆದಿತ್ತು ಗೌರಿ ಹತ್ಯೆಯ ಪ್ಲಾನ್!

    ನಾಲ್ಕು ಗಂಟೆಯ ಮೊದಲೇ ನಡೆದಿತ್ತು ಗೌರಿ ಹತ್ಯೆಯ ಪ್ಲಾನ್!

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ನಾಲ್ಕು ಗಂಟೆಯ ಮೊದಲೇ ಪ್ಲಾನ್ ನಡೆದಿತ್ತು. ಆಗಂತುಕನೊಬ್ಬ ಸಂಜೆ ನಾಲ್ಕು ಗಂಟೆಗೆ ಮನೆಯ 30 ಅಡಿ ದೂರದಲ್ಲಿಯೇ ಗೌರಿಗಾಗಿ ಕಾದು ಕುಳಿತ್ತಿದ್ದ ಮಾಹಿತಿ ಈಗ ವಿಶೇಷ ತನಿಖಾ ತಂಡ(ಎಸ್‍ಐಟಿ) ಮೂಲಗಳಿಂದ ಸಿಕ್ಕಿದೆ.

    ಸಂಜೆ ನಾಲ್ಕು ಗಂಟೆಗೆ ಗೌರಿ ಅವರ ಮನೆಯ ಬಳಿ ಬಂದ ವ್ಯಕ್ತಿಯೊಬ್ಬ ಅವರು ಬರುವುದನ್ನು ಕಾದು ಕುಳಿತಿದ್ದ. ಆತ ಸುಳಿದಾಡುತ್ತಿರುವ ದೃಶ್ಯ ಗೌರಿ ಅವರ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಆ ಸಿಸಿಟಿವಿ ದೃಶ್ಯಾವಳಿಯಲ್ಲೂ ಸಹ ಕೊಲೆಗಾರನ ಚಹರೆ ಪತ್ತೆಯಾಗಿಲ್ಲ. ಆಗಂತುಕ ಸಂಜೆ ನಾಲ್ಕು ಗಂಟೆಗೆ ಹೆಲ್ಮೆಟ್ ಧರಿಸಿ ಏಕಾಂಗಿಯಾಗಿ ಬಂದಿದ್ದನು. ಕೊಲೆ ಮಾಡುವ ಸಂದರ್ಭದಲ್ಲಿ ಕೂಡ ಹೆಲ್ಮೆಟ್ ಧರಿಸಿದ್ದನು.

    ನಾಲ್ಕು ಗಂಟೆಗೆ ಸಿಕ್ಕ ದೃಶ್ಯಾವಳಿಯಲ್ಲೂ ಮತ್ತು ಕೊಲೆ ಮಾಡುವ ಸಂದರ್ಭದಲ್ಲಿ ಸಿಕ್ಕ ದೃಶ್ಯಾವಳಿ ಸಾಮ್ಯತೆ ಇದೆ. ಸಾಮ್ಯತೆ ಇದ್ದಿದ್ರಿಂದಲೇ ಆತನೇ ಕೊಲೆಗಾರ ಅನ್ನೋ ಅನುಮಾನ ಹೆಚ್ಚಾಗಿದ್ದು ತನಿಖೆ ತೀವ್ರಗೊಂಡಿದೆ.

    ಆದರೆ ನಾಲ್ಕು ಗಂಟೆಗೆ ಬಂದು ಸಿಸಿಟಿವಿಯಲ್ಲಿ ಸಿಕ್ಕಿಬಿದ್ದ ವ್ಯಕ್ತಿ ಪ್ರದೇಶದಿಂದ ಹೊರ ಹೋಗಿಲ್ಲ ಮತ್ತು ಹೊರ ಹೋಗುವ ಯಾವುದೇ ದೃಶ್ಯಾವಳಿ ಲಭ್ಯವಾಗಿಲ್ಲ. ಈ ಮಾಹಿತಿ ಆಧರಿಸಿ ಕೊಲೆಗಾರ ಅಲ್ಲಿಯೇ ಕುಳಿತಿದ್ದ ಎನ್ನುವ ಅನುಮಾನವೂ ಈಗ ವ್ಯಕ್ತವಾಗಿದೆ.

  • 2005ರಲ್ಲಿ ಗೌರಿ ಲಂಕೇಶ್‍ಗೆ ಪಿಸ್ತೂಲ್ ತೋರಿಸಿದ್ದ ಇಂದ್ರಜಿತ್ ಲಂಕೇಶ್

    2005ರಲ್ಲಿ ಗೌರಿ ಲಂಕೇಶ್‍ಗೆ ಪಿಸ್ತೂಲ್ ತೋರಿಸಿದ್ದ ಇಂದ್ರಜಿತ್ ಲಂಕೇಶ್

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ 2005 ರಲ್ಲಿ ಗೌರಿ ಲಂಕೇಶ್‍ಗೆ ಪಿಸ್ತೂಲ್ ತೋರಿಸಿ ಇಂದ್ರಜಿತ್ ಬೆದರಿಕೆ ಹಾಕಿದ್ದರು. ಲಂಕೇಶ್ ಪತ್ರಿಕೆ ಒಡೆತನದ ವಿಷಯಕ್ಕೆ ಇಂದ್ರಜಿತ್ ಹಾಗೂ ಗೌರಿ ಲಂಕೇಶ್ ನಡುವೆ ಜಗಳವಾಗಿತ್ತು. ಈ ಪ್ರಕರಣದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

    2000ರಲ್ಲಿ ಲಂಕೇಶ್ ಮೃತ ಪಟ್ಟಿದ್ದರು. ಲಂಕೇಶ್ ಸಾವನಪ್ಪಿದ ಬಳಿಕ ಗೌರಿ ಲಂಕೇಶ್ ಅವರು ಲಂಕೇಶ್ ಪತ್ರಿಕೆಯ ಸಂಪಾದಕಿ ಆಗಿದ್ದರು. ಈ ವೇಳೆ ಪತ್ರಿಕೆಯಲ್ಲಿ ಪ್ರಕಟವಾದ ಕೆಲ ವರದಿಗಳಿಗೆ ಇಂದ್ರಜಿತ್ ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ವೈಮನಸ್ಸು ಕೂಡ ಉಂಟಾಗಿತ್ತು. 15 ಫೆಬ್ರವರಿ 2005 ರಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ತನ್ನ ಸಹೋದರ ಇಂದ್ರಜಿತ್ ವಿರುದ್ಧ ಗೌರಿ ಲಂಕೇಶ್ ದೂರುನೀಡಿದ್ದರು. ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆಂದು ಗೌರಿ ಲಂಕೇಶ್ ದೂರು ನೀಡಿದ್ದರು.

    ನಂತರ ಪ್ರತಿಯಾಗಿ ಗೌರಿ ಲಂಕೇಶ್ ವಿರುದ್ಧ ಇಂದ್ರಜಿತ್ ಲಂಕೇಶ್ ಪ್ರತಿ ದೂರು ದಾಖಲಿಸಿದ್ದರು. ಪತ್ರಿಕೆಗೆ ಸಂಬಂಧ ಪಟ್ಟ ದಾಖಲೆ ಹಾಗೂ ಕಂಪ್ಯೂಟರ್ ಕದ್ದೊಯ್ದಿದ್ದಾರೆಂದು ಇಂದ್ರಜಿತ್ ದೂರು ದಾಖಲಿಸಿದ್ದರು. ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ಮುಗಿಸಿದ ನಂತರ ನ್ಯಾಯಾಧೀಶರ ಮುಂದೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದ್ದರು. ಈ ವಿಚಾರದ ಬಗ್ಗೆ ಈಗ ಮತ್ತೆ ಮಾಹಿತಿ ಪಡೆಯಲು ಎಸ್‍ಐಟಿ ಟೀಂ ಮುಂದಾಗಿದ್ದಾರೆ. ಮಾಹಿತಿ ಪಡೆದ ಬಳಿಕ ಸಂಬಂಧ ಪಟ್ಟವರ ವಿಚಾರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ.

    ಗೌರಿ ಲಂಕೇಶ್ ಫಾರ್ಮ್ ಹೌಸ್‍ನಲ್ಲೂ ಶೋಧ ನಡೆಸಿದ ಪೊಲೀಸರು ಅಲ್ಲಿದ್ದ ಇಬ್ಬರು ಕೆಲಸಗಾರರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಫಾರ್ಮ್ ಹೌಸ್ ಹಂಚಿಕೆ ವಿಚಾರವಾಗಿ ಗೌರಿ ಲಂಕೇಶ್ ಹಾಗೂ ಕುಟುಂಬಸ್ಥರ ನಡುವೆ ಅಸಮಾಧಾನ ಇತ್ತು. ಇದೇ ವಿಚಾರಕ್ಕೆ ಆಗಾಗ ಜಗಳವಾಡುತ್ತಿದ್ದರು ಎಂದು ಎಸ್‍ಐಟಿ ಗಮಕ್ಕೆ ತಂದಿದ್ದಾರೆ. ಕಳೆದ ಸೋಮವಾರ ವಿಶೇಷ ತಂಡ ಭೇಟಿ ನೀಡಿ ಶೋಧ ಕಾರ್ಯ ನಡೆಸಿದ್ದರು. ಗೌರಿ ಲಂಕೇಶ್ ಕಚೇರಿಯಲ್ಲೂ ಎಸ್‍ಐಟಿ ತಂಡ ಪರಿಶೀಲನೆ ನಡೆಸಿದರು. ಈ ವೇಳೆ ಮಹತ್ವದ ದಾಖಲೆಗಳಿರುವ ಗೌರಿ ಲಂಕೇಶ್‍ಗೆ ಸೇರಿದ ಲ್ಯಾಪ್‍ಟಾಪ್ ಹಾಗೂ ಎರಡು ಪೆನ್ ಡ್ರೈವ್ ಎಸ್‍ಐಟಿ ವಶಕ್ಕೆ ಪಡೆದಿದ್ದಾರೆ. ಗೌರಿ- ಇಂದ್ರಜಿತ್ ನಡುವಿನ ಹಳೆ ಜಗಳದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

    ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯಲ್ಲಿ ಅತಿದೊಡ್ಡ ವಿಶೇಷ ತಂಡವನ್ನು ರಚಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ 100 ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಈ ಹಿಂದೆ ಕಲಬುರ್ಗಿ ಪ್ರಕರಣದಲ್ಲಿ 70 ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಕೊಲೆ ಪ್ರಕರಣಕ್ಕೆ 100 ಮಂದಿ ಅಧಿಕಾರಿಗಳ ನಿಯೋಜನೆ ಆಗಿದ್ದಾರೆ.

  • ಎರಡು ಮೂರು ದಿನಗಳಲ್ಲಿ ಹಂತಕರ ಪತ್ತೆ ಹಚ್ಚಬಹುದು : ಎಚ್‍ಡಿಡಿ

    ಎರಡು ಮೂರು ದಿನಗಳಲ್ಲಿ ಹಂತಕರ ಪತ್ತೆ ಹಚ್ಚಬಹುದು : ಎಚ್‍ಡಿಡಿ

    ಬೆಂಗಳೂರು: ಸೂಕ್ತ ತನಿಖೆ ನಡೆಸಿ ಗೌರಿ ಅವರ ಹಂತಕರನ್ನು ಬಂಧಿಸಬೇಕು ಎಂದು ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಪದ್ಮನಾಭನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ಮೂರು ದಿನಗಳಲ್ಲಿ ಹಂತಕರ ಪತ್ತೆ ಹಚ್ಚಬಹುದು ಎಂಬ ವಿಶ್ವಾಸವಿದೆ. ಗೌರಿ ಅವರು ತಮಗೆ ಜೀವ ಭಯ ಇದೆ. ರಕ್ಷಣೆ ಕೊಡಿ ಅಂತಾ ಕೇಳಲು ಗೃಹ ಸಚಿವರನ್ನು ಭೇಟಿ ಮಾಡಲು ಉದ್ದೇಶಿಸಿದ್ದರು. ಅಷ್ಟರಲ್ಲೇ ಈ ಘಟನೆ ನಡೆದು ಹೋಗಿದೆ ಎಂದು ಹೇಳಿದರು.

    ಈ ಪ್ರಕರಣವನ್ನು ಸಿಎಂ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆ ಸೂಕ್ತವಲ್ಲ ಎಂದು ವಿಶೇಷ ತನಿಖಾ ದಳದ(ಎಸ್‍ಐಟಿ) ತನಿಖೆಗೆ ವಹಿಸಿದ್ದಾರೆ. ಹಂತಕರ ಸುಳಿವು ಸಿಕ್ಕಿದೆ. ಆದಷ್ಟು ಶೀಘ್ರದಲ್ಲೇ ಹಂತಕರ ಬಂಧನ ಆಗುವ ವಿಶ್ವಾಸವಿದೆ ಎಂದು ದೇವೇಗೌಡ ತಿಳಿಸಿದರು.

  • ಮನೆಯಲ್ಲೇ ಹತ್ಯೆ ಆಗಿರೋದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದನ್ನ ತೋರಿಸ್ತಿದೆ: ಕರಂದ್ಲಾಜೆ

    ಮನೆಯಲ್ಲೇ ಹತ್ಯೆ ಆಗಿರೋದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದನ್ನ ತೋರಿಸ್ತಿದೆ: ಕರಂದ್ಲಾಜೆ

    ಮಂಗಳೂರು: ಮನೆಯಲ್ಲೇ ಗೌರಿ ಲಂಕೇಶ್ ಹತ್ಯೆ ಆಗಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳುವ ಮೂಲಕ ಮಾಜಿ ಸಚಿವೆ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಲಬುರ್ಗಿ ಹಂತಕರನ್ನು ಇನ್ನೂ ಬಂಧಿಸಿಲ್ಲ. ಕೆಂಪಯ್ಯ ಮೂಲಕ ಸಿದ್ದರಾಮಯ್ಯ ಪೊಲೀಸರನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಡಿವೈಎಸ್‍ಪಿ ಗಣಪತಿ ಹತ್ಯೆ ವಿಚಾರದಲ್ಲಿ ಎಸಿಬಿ, ಸಿಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಸಿಬಿಐ ತನಿಖೆಯಿಂದ ರಾಜ್ಯ ಸರಕಾರದ ಕೈವಾಡ ಹೊರಬರಲಿದೆ ಎಂದು ತಿಳಿಸಿದರು.

    ಬಿಜೆಪಿ ಮಂಗಳೂರು ಚಲೋ ರ‍್ಯಾಲಿ ಬಗ್ಗೆ ಮಾತನಾಡಿದ ಅವರು, ರ‍್ಯಾಲಿಯನ್ನು ಹತ್ತಿಕ್ಕುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಎಚ್ಚರಿಕೆ ಗಂಟೆಯಾಗಲಿದೆ. ರಮಾನಾಥ ರೈಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಗುರುವಾರದ ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪಿಎಫ್‍ಐ, ಎಸ್‍ಡಿಪಿಐ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.

    ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ಈಗಲೇ ರಾಜಿನಾಮೆ ನೀಡಬೇಕು. ರಮಾನಾಥ ರೈ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.