Tag: Guarantee Card

  • ಕಾಂಗ್ರೆಸ್‌ ಜನರನ್ನು ಮಾತ್ರವಲ್ಲ ಸಿಎಂ ವಿಚಾರದಲ್ಲಿ ಡಿಕೆಶಿಯನ್ನೂ ಯಾಮಾರಿಸಿದೆ – ಸಂಸದ ಮುನಿಸ್ವಾಮಿ ವ್ಯಂಗ್ಯ

    ಕಾಂಗ್ರೆಸ್‌ ಜನರನ್ನು ಮಾತ್ರವಲ್ಲ ಸಿಎಂ ವಿಚಾರದಲ್ಲಿ ಡಿಕೆಶಿಯನ್ನೂ ಯಾಮಾರಿಸಿದೆ – ಸಂಸದ ಮುನಿಸ್ವಾಮಿ ವ್ಯಂಗ್ಯ

    ನವದೆಹಲಿ: ಮುಖ್ಯಮಂತ್ರಿಯಾಗುವ ಲೆಕ್ಕಚಾರದಲ್ಲಿದ್ದ ಡಿ.ಕೆ. ಶಿವಕುಮಾರ್‌ರನ್ನ (DK Shivakumar) ಕಾಂಗ್ರೆಸ್ (Congress) ಯಾಮಾರಿಸಿದೆ. ಈಗ ಜನರನ್ನೂ ಯಾಮಾರಿಸಲು ಶುರು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊದಲು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕೋಲಾರ ಸಂಸದ ಮುನಿಸ್ವಾಮಿ (Muniswamy) ಆಗ್ರಹಿಸಿದರು.

    ಗ್ಯಾರಂಟಿಗಳಿಗೆ (Congress Guarantee) ಹಾಕಿದ ಕಂಡೀಷನ್ ಬಗ್ಗೆ ನವದೆಹಲಿಯಲ್ಲಿ ಮಾತನಾಡಿದ ಅವರು, ಜನರಿಗೆ ಕಾಂಗ್ರೆಸ್ ಸುಳ್ಳು ಗ್ಯಾರಂಟಿ ನೀಡಿ ಯಾಮಾರಿಸಿದೆ. ಚುನಾವಣೆ ಪ್ರಚಾರದ ಸಮಯದಲ್ಲಿ ಐದು ಗ್ಯಾರಂಟಿ ಘೋಷಣೆ ವೇಳೆ ಯಾವುದೇ ಕಂಡೀಷನ್ ಬಗ್ಗೆ ಹೇಳಲಿಲ್ಲ. ಎಲ್ಲರಿಗೂ ಫ್ರೀ ಎಂದರು. ಈಗ ವಿದ್ಯುತ್ ಬಿಲ್‌ನಲ್ಲಿ ಕಂಡೀಷನ್ ಹಾಕಿದೆ. 12 ತಿಂಗಳ ಬಳಕೆಯ ಮೇಲೆ 10% ಸರಾಸರಿ ಹೆಚ್ಚಿಸಿದೆ. ಯುವನಿಧಿ, ಗೃಹಲಕ್ಷ್ಮಿ ಯೋಜನೆಯಲ್ಲಿ ಮೋಸ ಮಾಡುತ್ತಿದ್ದಾರೆ. ಅತ್ತೆ ಸೊಸೆ ಜಗಳಕ್ಕೆ ಕಾರಣವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟ್ಯಾಕ್ಸ್ ಕಟ್ಟೋರು ಯಾರೂ ಗೃಹಲಕ್ಷ್ಮಿ ಬೇಕು ಅಂತ ಕೇಳ್ತಿಲ್ಲ: ಡಿಕೆಶಿ

    ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾತಿ ಜನಾಂಗಗಳನ್ನು ನೋಡದೇ ಎಲ್ಲರಿಗೂ ಯೋಜನೆಗಳನ್ನು ನೀಡಿದೆ. ಜನರಿಗೆ ಏನು ಬೇಕು ಎಲ್ಲ ನೀಡಿದೆ. ನಾವು ತಂತ್ರ ಮತ್ತು ಕುತಂತ್ರಗಳಿಂದ ಗೆದ್ದಿದ್ದೇವೆ ಎಂದು ಹಿಂದೆ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈಗ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಂಡೀಷನ್ ಹಾಕಿ ಕರ್ನಾಟಕವನ್ನು ದಿವಾಳಿ ಮಾಡಲು ಹೊರಟಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಮನೆಗೆ ಕಳುಹಿಸಲಿದ್ದಾರೆ. ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್ ಜನರಿಗೆ ಮಾತ್ರ ಟೋಪಿ ಹಾಕಿಲ್ಲ. ಡಿ.ಕೆ ಶಿವಕುಮಾರ್ ಅವರನ್ನೂ ಯಾಮಾರಿಸಿದೆ. ಕಾಂಗ್ರೆಸ್‌ಗೆ 135 ಸ್ಥಾನಗಳು ಬಂದಾಗ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗುವ ಉಮೇದಿನಲ್ಲಿದ್ದರು. ಅವರ ಮುಖದಲ್ಲಿ ಆಗ ಖುಷಿಯೇ ಬೇರೆ ಇತ್ತು. ಅವರು ಮುಖ್ಯಮಂತ್ರಿಯಾಗಲಿಲ್ಲ. ಫಲಿತಾಂಶದಲ್ಲಿದ್ದ ಖುಷಿ ಅವರ ಮುಖದಲ್ಲಿ ಈಗ ಕಾಣುತ್ತಿಲ್ಲ ಎಂದು ಕುಟುಕಿದರು. ಇದನ್ನೂ ಓದಿ: ಶ್ರೀಲಂಕಾ, ಪಾಕಿಸ್ತಾನ ರೀತಿಯ ಪರಿಸ್ಥಿತಿ ಕರ್ನಾಟಕಕ್ಕೆ ಬರಬಾರದು: ಪ್ರತಾಪ್ ಸಿಂಹ

  • ಮನೆಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ, ಎಲ್ಲರಿಗೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

    ಮನೆಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ, ಎಲ್ಲರಿಗೂ ಗ್ಯಾರಂಟಿ ಕೊಡಲು ಸಾಧ್ಯವಿಲ್ಲ: ಸತೀಶ್ ಜಾರಕಿಹೊಳಿ

    ಬೆಳಗಾವಿ: ಚುನಾವಣೆಯಲ್ಲಿ ಮನೆಮನೆಗೆ ಗ್ಯಾರಂಟಿ ಕಾರ್ಡ್ (Guarantee Card) ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ. ನಿರ್ಗತಿಕರು, ಬಡವರು ಯಾರಿದ್ದಾರೆ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆ ತಲುಪಿಸುತ್ತೇವೆ ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

    ಬೆಳಗಾವಿ (Belagavi) ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ಬಹಳಷ್ಟು ನಿರೀಕ್ಷೆಗಳನ್ನು ನಮ್ಮ ಸರ್ಕಾರದ ಮೇಲೆ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ನಾವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇವೆ. ನಾವು ಗ್ಯಾರಂಟಿ ಈಡೇರಿಸಲು ಸಿದ್ಧರಿದ್ದೇವೆ. ಆದರೆ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಗ್ಯಾರಂಟಿ ನೀಡಿದ್ದು ನಾವು, ಅವರಲ್ಲ. ಗ್ಯಾರಂಟಿ ಯೋಜನೆ ಈಡೇರಿಸಲು ಸಮಯ ಬೇಕು. ಯೋಜನೆ ಜಾರಿಗಾಗಿ ಈಗಾಗಲೇ ಸಿದ್ಧತೆ ನಡೆದಿವೆ. ನಾವು ಜಾರಿಗೊಳಿಸುತ್ತೇವೆ ಎಂದರು. ಇದನ್ನೂ ಓದಿ: ನೂತನ ಸಂಸತ್ ಭವನ ಪ್ರವೇಶದ ಅನುಭವ ಹಂಚಿಕೊಂಡ ಸಂಸದೆ, ನಟಿ ಸುಮಲತಾ

    ಸ್ವಾಮೀಜಿಗಳ ಆಶೀರ್ವಾದ ಮತ್ತು ಮಾರ್ಗದರ್ಶನ ಪಡೆಯಲು ಬೈಲೂರು ಮಠಕ್ಕೆ ಬಂದಿರುವೆ. ನಿಜಗುಣಾನಂದ ಸ್ವಾಮೀಜಿ ಹಾಗೂ ನಮ್ಮ ಹೋರಾಟ ಒಂದೇ ಇದೆ. ಸ್ವಾಮೀಜಿಗಳ ಜೊತೆಗೂಡಿ ಮೌಢ್ಯದ ವಿರುದ್ಧ ಹೋರಾಟ ಮಾಡಿದ್ದೇವೆ. ಸ್ವಾಮೀಜಿಗೆ ಮತ್ತಷ್ಟು ಶಕ್ತಿ ತುಂಬಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸಿಎಂ ಆಗಿಯೇ ಆಗ್ತಾರೆ: ಲಕ್ಷ್ಮಿ ಹೆಬ್ಬಾಳ್ಕರ್

    ಜಗಜ್ಯೋತಿ ಬಸವೇಶ್ವರ, ಬುದ್ಧ, ಅಂಬೇಡ್ಕರ್ ವಿಚಾರ ಎಲ್ಲೆಡೆ ತಲುಪಿಸಬೇಕು. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಬಂದಿದೆ. ಈ ವಿಚಾರವನ್ನು ತಲುಪಿಸುವ ಕಾರ್ಯ ಮಾಡುತ್ತೇವೆ. ಹಿಂದಿನಿಂದಲೂ ನಾನು ಮಾನವ ಬಂಧುತ್ವ ವೇದಿಕೆ ಮೂಲಕ ಈ ಕಾರ್ಯ ಮಾಡಿದ್ದೇನೆ. ನಿಜಗುಣಾನಂದ ಸ್ವಾಮೀಜಿ ಕೂಡ ಹೋರಾಟ ಮಾಡಿದ್ದಾರೆ, ನಾವೂ ಕೈ ಜೋಡಿಸಿದ್ದೇವೆ. ನಮ್ಮ ಸರ್ಕಾರ ಬಸವೇಶ್ವರರ ವಿಚಾರಧಾರೆಯಲ್ಲಿ ನಡೆಯುತ್ತದೆ. ಹಿಂದಿನ ಸಿದ್ದರಾಮಯ್ಯ (Siddaramaiah) ಸರ್ಕಾರ ಎಲ್ಲಾ ಕಚೇರಿಗಳಲ್ಲಿ ಬಸವಣ್ಣನ ಫೋಟೊ ಹಾಕಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನೂತನ ಸಂಸತ್ ಭವನದಲ್ಲಿ ಸೆಂಗೋಲ್ ಪ್ರತಿಷ್ಠಾಪನೆ ಶುಭ ಸಂಕೇತ: ಕಾಶೀ ಜಗದ್ಗುರು

    ಬಸವಣ್ಣನನ್ನು (Basavanna) ವಿಶ್ವಗುರು ಎನ್ನುತ್ತಾರೆ. ಆದರೆ ಅವರನ್ನು ವಿಶ್ವಕ್ಕೆ ಪರಿಚಯಿಸುವ ಕೆಲಸವಾಗಿಲ್ಲ. ಬಸವಣ್ಣನನ್ನು ಅರಿತರೆ ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ನಿಜಗುಣಾನಂದ ಸ್ವಾಮೀಜಿಗಳ ವೈಚಾರಿಕ ಹೋರಾಟ ಇನ್ನೂ ಹೆಚ್ಚಾಗಲಿ, ನಮ್ಮ ಸಹಕಾರವೂ ಅವರಿಗೆ ಇರಲಿದೆ ಎಂದರು. ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಉದ್ಘಾಟನೆಯ ಸವಿನೆನಪಿಗೆ ವಿಶೇಷ ಅಂಚೆ ಚೀಟಿ, 75 ರೂ. ನಾಣ್ಯ ಬಿಡುಗಡೆ

  • ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ – ಪ್ರತಾಪ್‌ ಸಿಂಹ

    ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ಮೇಲೆ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ – ಪ್ರತಾಪ್‌ ಸಿಂಹ

    ಮೈಸೂರು: ಕಾಂಗ್ರೆಸ್‌ (Congress) ರಾಜ್ಯದಲ್ಲಿ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಕಾರ್ಯಕರ್ತರು (BJP Workers) ಅಪಾಯದಲ್ಲಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ಆತಂಕಪಟ್ಟಿದ್ದಾರೆ.

    ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ಅಧಿಕಾರಕ್ಕೆ ಬಂದಮೇಲೆ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಜಾಸ್ತಿಯಾಗಿ, ನಮ್ಮ ಕಾರ್ಯಕರ್ತರನ್ನ ಟಾರ್ಗೆಟ್‌ ಮಾಡುತ್ತಿದ್ದಾರೆ, ಇದರಿಂದ ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನ ಅಪಾಯಕ್ಕೆ ಸಿಲುಕಿಸಿದ್ದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ. ಮುಂದಿನ ದಿನಗಳಲ್ಲಿ ಉತ್ತಮ ರಾಜಕಾರಣ ಮಾಡೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಯಾರೂ ಕಟ್ಟಬೇಡಿ: ಪ್ರತಾಪ್ ಸಿಂಹ

    ಬಿಜೆಪಿ ಕೇಂದ್ರ ಸರ್ಕಾರದಲ್ಲಿ ಉತ್ತಮ ಕೆಲಸಗಳನ್ನ ಮಾಡಿದೆ. ರಾಜ್ಯದಲ್ಲಿಯೂ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಸರ್ಕಾರ ಉತ್ತಮ ಸೇವೆ ಮಾಡಿತ್ತು. ಆದ್ರೆ ನಾವು ಅವುಗಳನ್ನ ಜನರಿಗೆ ತಿಳಿಸುವಲ್ಲಿ ವಿಫಲರಾಗಿದ್ದೇವೆ. ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಕಾರ್ಡ್‌ ನೋಡಿದ ಕೂಡಲೇ ಜನರು ಗ್ಯಾರಂಟಿ ಕೊಟ್ಟೇ ಬಿಟ್ರು ಅಂತಾ ವೋಟ್‌ ಹಾಕಿದ್ದಾರೆ. ನಾನು ಗ್ಯಾರಂಟಿಗಳ ಪರ ಇದ್ದೇನೆ. ಆದ್ರೆ ಅರ್ಥವ್ಯವಸ್ಥೆಗೆ ಹೊಡೆತ ಬೀಳದಂತೆ ನೋಡಿಕೊಳ್ಳಬೇಕು ಅಷ್ಟೇ ಎಂದು ಮನವಿ ಮಾಡಿದ್ದಾರೆ.

    ಈ ಬಾರಿ ಕಾಂಗ್ರೆಸ್‌ ಗೆದ್ದಿದೆ ಅಂದ ಮಾತ್ರಕ್ಕೆ ಎಲ್ಲವೂ ಮುಗಿದು ಹೋಯಿತು, ಇದೇ ಶಾಶ್ವತ ಎಂದಲ್ಲ. ಪ್ರತೀ ಚುನಾವಣೆಯಲ್ಲೂ ಫಲಿತಾಂಶ ಬದಲಾಗುತ್ತೆ. ಮೀಸಲಾತಿ ನೀಡಿ ಒಳ್ಳೆ ಕೆಲಸ ಮಾಡಿದ್ದರೂ ನಾವು ಮನವರಿಕೆ ಮಾಡಿಕೊಡುವಲ್ಲಿ ವಿಫಲರಾದ್ವಿ. ನಾವು ಉಚಿತ ಬಸ್‌ ಪಾಸ್‌ ಸೇವೆ ಮಾಡಿದ್ವಿ, ಪ್ರಧಾನ ಮಂತ್ರಿ ಅನ್ನ ಕಲ್ಯಾಣ ಯೋಜನೆ ಮಾಡಿದ್ವಿ, ಅವುಗಳನ್ನ ಜಾರಿ ಮಾಡಿದ್ದರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹಿಸುವುದನ್ನು ನಿಲ್ಲಿಸಿ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

    ನಾನು ನಮ್ಮ ಕಾರ್ಯಕರ್ತರಿಗೆ ಅಂತರಾಳದಿಂದ ಕೇಳುತ್ತೇನೆ. ಏಕೆಂದರೆ ಚುನಾವಣೆಯಲ್ಲಿ ನಮ್ಮ ಪರವಾಗಿ ಓಡಾಡಿಕೊಂಡು ಕೆಲಸ ಮಾಡೋರು ಅವರು, ಸೋತ ಅಭ್ಯರ್ಥಿ ಇನ್ನು 5 ವರ್ಷ ಬೇರೆ ವ್ಯವಹಾರ ಮಾಡಿಕೊಂಡಿರ್ತಾರೆ. ಆದ್ರೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿಲ್ಲ ಅಂತಾ ನಿಜವಾಗಿಯೂ ನೋವಾಗಿರೋದು ನಮ್ಮ ಕಾರ್ಯಕರ್ತರಿಗೆ. ಜೊತೆಗೆ ಮಂಗಳೂರು, ಕೊಡಗು ಭಾಗಗಳಲ್ಲಿ ಘರ್ಷಣೆಗಳಾಗುತ್ತಿದ್ದು, ನಮ್ಮ ಕಾರ್ತಕರ್ತರನ್ನ ಅಪಾಯಕ್ಕೆ ಸಿಲುಕಿಸಿದ್ದೇವೆ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ ಭಾವುಕರಾದರು.

  • 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಯಾರೂ ಕಟ್ಟಬೇಡಿ: ಪ್ರತಾಪ್ ಸಿಂಹ

    200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಯಾರೂ ಕಟ್ಟಬೇಡಿ: ಪ್ರತಾಪ್ ಸಿಂಹ

    ಮೈಸೂರು: ಜೂನ್ 1ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ (Electricity Bill) ಬಂದರೆ ಬಿಲ್ ಕಟ್ಟಬೇಡಿ. 200 ಯೂನಿಟ್ ಮೇಲೆ ಎಷ್ಟು ಹೆಚ್ಚುವರಿ ಬಳಸುತ್ತೀರೋ ಅದಕ್ಕೆ ಮಾತ್ರ ಬಿಲ್ ಕಟ್ಟಿ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ರಾಜ್ಯದ ಜನತೆಗೆ ತಿಳಿಸಿದ್ದಾರೆ.

    ಮೈಸೂರಿನಲ್ಲಿ (Mysuru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ (Congress) ಮುಖ ನೋಡಿ ಯಾರೂ ಮತ ಹಾಕಿಲ್ಲ. ಗ್ಯಾರಂಟಿ ಕಾರ್ಡ್ (Guarantee Card) ನೋಡಿ ಮತ ಹಾಕಿದ್ದಾರೆ, ಅದು ನೆನಪಿರಲಿ. ನಾವು ಸೋತಿದ್ದೇವೆ, ಸತ್ತಿಲ್ಲ. ಕೊಟ್ಟ ಭರವಸೆ ಈಡೇರಿಸಿ. ಜೂನ್ 1ರವರೆಗೆ ಕಾಯುತ್ತೇನೆ. ಗ್ಯಾರಂಟಿಗಳಿಗೆ ಷರತ್ತು ಹಾಕಿದರೆ ಜೂನ್ 1ರಿಂದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: New Parliament Building – ಕರ್ನಾಟಕ ವಿಧಾನಸೌಧದ ಉದಾಹರಣೆ ನೀಡಿ ಕಾಂಗ್ರೆಸ್‌ಗೆ ಸಂಬಿತ್‌ ಪಾತ್ರ ತಿರುಗೇಟು

    ರಾಜಸ್ಥಾನದಲ್ಲಿ (Rajasthan) ಕಾಂಗ್ರೆಸ್ ಇದೇ ರೀತಿ ಭರವಸೆ ನೀಡಲಾಗಿತ್ತು. ಇಲ್ಲಿಯವರೆಗೆ ಇದು ಜಾರಿಯಾಗಿಲ್ಲ. ಸಿದ್ದರಾಮಯ್ಯ (Siddaramaiah) ಅಥವಾ ನಾನು ಯಾರೂ ಆರ್ಥಿಕ ತಜ್ಞರಲ್ಲ. ಸಿಎಂ ಕುರ್ಚಿ ಎನ್ನುವುದು ಯಾರ ಸ್ವತ್ತೂ ಅಲ್ಲ. ಆದರೆ ಪೊಲೀಸ್ ವ್ಯವಸ್ಥೆ ಎನ್ನುವುದು ಶಾಶ್ವತವಾಗಿ ಇರುತ್ತದೆ. ವಿಧಾನಸೌಧದಲ್ಲಿ ಕೂತು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತೀರಾ? ಮೊದಲು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುವುದನ್ನು ನಿಲ್ಲಿಸಿ. ಫೆಬ್ರವರಿಯಲ್ಲಿ ಅಶ್ವಥ್ ನಾರಾಯಣ್ ನೀಡಿದ ಹೇಳಿಕೆಗೆ ಈಗ ಧಮ್ಕಿ ಹಾಕಿ ಎಫ್‌ಐಆರ್ (FIR) ಮಾಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 200 ಯೂನಿಟ್ ಫ್ರೀ – ವಿದ್ಯುತ್‌ ಉಪಕರಣ ಖರೀದಿಗೆ ಫುಲ್ ಡಿಮ್ಯಾಂಡ್

    ವಿಧಾನಸಭಾ ಚುನವಣಾ ಫಲಿತಾಂಶದ ಪರಿಣಾಮ ಲೋಕಸಭಾ ಚುನಾವಣೆಯ ಮೇಲೆ ಬೀರಲ್ಲ. ದೇಶಕ್ಕೆ ಎಂತಹ ನಾಯಕ ಬೇಕು ಎಂಬುದು ಕನ್ನಡಿಗರಿಗೆ ಗೊತ್ತಿದೆ. ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ (BJP) ಎಚ್ಚೆತ್ತುಕೊಳ್ಳಬೇಕಿತ್ತು. ಅವತ್ತು ಎಚ್ಚೆತ್ತುಕೊಂಡಿದ್ದರೆ ಬಿಜೆಪಿಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಸ್ಕೀಂ ಪರ ನಾನಿದ್ದೇನೆ. ಆದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮ ವಿಧಾನಸಭೆಯಲ್ಲಿದೆ. ವಿತ್ತಿಯ ಹೊಣೆಗಾರಿಕೆ ಬಿಲ್ ಕರ್ನಾಟಕದಲ್ಲಿ ಪಾಸ್ ಆಗಿದೆ. ಮುಂದಿನ ತಲೆಮಾರನ್ನು ಅಪಾಯಕ್ಕೆ ತಳ್ಳಬೇಡಿ. ಗ್ಯಾರಂಟಿ ಕಾರ್ಡ್‌ನಲ್ಲಿ ಷರತ್ತು ಅನ್ವಯ ಎಂದು ಎಲ್ಲಿಯೂ ಹಾಕಿಲ್ಲ. ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು. ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಜೆಡಿಎಸ್ ಯುವ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ರಾಜೀನಾಮೆ

    ಮೈಸೂರಿನ ಅಭಿವೃದ್ಧಿಗಾಗಿ ನಾನು ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ. ಮೈಸೂರು ಮತ್ತು ಕೊಡಗು (Kodagu) ಅಭಿವೃದ್ಧಿಗಾಗಿ ಕೈಕಾಲು ಹಿಡಿದು ಅಂಗಲಾಚುತ್ತೇನೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಉಳಿದ ಸಮಯದಲ್ಲಿ ಅಭಿವೃದ್ಧಿ ರಾಜಕಾರಣ ಮಾಡೋಣ. ಈ ಕುರಿತು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ. ಅಭಿವೃದ್ಧಿ ಪರ ಇರುವವರನ್ನು ಜಿಲ್ಲಾ ಉಸ್ತುವಾರಿ ಮಾಡಿ. ಅಭಿವೃದ್ಧಿ ವಿಚಾರದಲ್ಲಿ ನಾನು ಸಿಎಂ ಮನೆಗೆ ಹೋಗುತ್ತೇನೆ ಎಂದರು. ಇದನ್ನೂ ಓದಿ: ಮಂತ್ರಿಗಿರಿ ಲಾಬಿಗೆ ಲೋಕಸಭೆ ದಾಳ – ಶಾಸಕರಿಗೆ ಷರತ್ತು ವಿಧಿಸಿದ ಕಾಂಗ್ರೆಸ್‌

  • ಗ್ಯಾರಂಟಿ ಯೋಜನೆ ಮನೆ ಮನೆ ತಲುಪುತ್ತಿದೆ: ಡಿಕೆ ಶಿವಕುಮಾರ್

    ಗ್ಯಾರಂಟಿ ಯೋಜನೆ ಮನೆ ಮನೆ ತಲುಪುತ್ತಿದೆ: ಡಿಕೆ ಶಿವಕುಮಾರ್

    ಬೆಂಗಳೂರು: ಕಾಂಗ್ರೆಸ್‌ನ (Congress) ಗ್ಯಾರಂಟಿ ಯೋಜನೆ ಮನೆ ಮನೆಗೆ ತಲುಪುತ್ತಿದೆ. ಸಮೀಕ್ಷೆಗಳು ಕೂಡಾ ಕಾಂಗ್ರೆಸ್‌ನ ಪರವಾಗಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಹೆಬ್ಬಾಗಿಲು ತೆರೆಯುತ್ತದೆ. ಈ ಬಾರಿ ಕಾಂಗ್ರೆಸ್ ಬಹುಮತದಿಂದ ಸರ್ಕಾರ ರಚನೆ ಮಾಡಲಿದೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (D.K.Shivakumar) ವಿಶ್ವಾಸ ವ್ಯಕ್ತಪಡಿಸಿದರು.

    2018ರಿಂದ ಜೆಡಿಎಸ್‌ನಿಂದ (JDS) ಡಿಕೆಶಿ ವಿರುದ್ಧ ಸ್ಪರ್ಧಿಸಿದ್ದ ನಾರಾಯಣ ಗೌಡ (Narayan Gowda) ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿಕೆ ಸುರೇಶ್ (D.K.Suresh) ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಈ ವೇಳೆ ಮಾತನಾಡಿದ ಅವರು, ಬೆಂಗಳೂರು (Bengaluru) ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ಆಗುತ್ತಿದೆ. 20-30 ವರ್ಷ ರಾಜಕೀಯ ಇತಿಹಾಸ ಪಿಜಿಆರ್ ಸಿಂಧ್ಯಾ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ನಾರಾಯಣ ಗೌಡ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಅಲ್ಲದೇ ಇವರು ರೈತ ಕುಟುಂಬದ ಪ್ರಮುಖ ನಾಯಕರಾಗಿದ್ದಾರೆ ಎಂದರು. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ

    ಡಿಕೆಶಿಗೆ ಒಳ್ಳೆಯದಾಗಬೇಕು ಎಂದು ತಾನು ತ್ಯಾಗ ಮಾಡಿದ್ದಾರೆ. ಜೊತೆಗೆ ಪ್ರಭಾಕರ್ ರೆಡ್ಡಿ ಕೂಡಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ. ಇಲ್ಲಿ ಹೊಸಬರು ಹಳಬರು ಎಂಬ ಪ್ರಶ್ನೆ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. 78 ಲಕ್ಷ ಸದಸ್ಯರು ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪೈಪೋಟಿ

    ತುಮಕೂರಿನಲ್ಲಿ ತನಗೆ ಕಣ್ಣೀರು ಹಾಕಿಸಿದವರನ್ನು ಸೋಲಿಸಿ ಎಂಬ ದೇವೇಗೌಡರ (H.D.Deve Gowda) ಕರೆಗೆ ಪ್ರತಿಕ್ರಿಯಿಸಿದ ಅವರು, ಅವರ ಭಾವನೆ, ಹಿರಿತನ ಹಾಗೂ ಅನುಭವಕ್ಕೆ ನಾವು ಸ್ಪರ್ಧೆ ಮಾಡಲು ಆಗುತ್ತಾ? ನಮ್ಮ ಕೈಯಲ್ಲಿ ಸ್ಪರ್ಧೆ ಮಾಡಲು ಆಗುವುದಿಲ್ಲ. ಅವರಿಗೆ ಒಳ್ಳೆಯದಾಗಲಿ. ಇಷ್ಟು ವಯಸ್ಸಾದರೂ ಇಷ್ಟು ದೊಡ್ಡ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಅವರಿಂದ ಕಲಿಯಬೇಕಾಗಿರುವುದು ಬಹಳಷ್ಟಿದೆ. ಅವರ ಛಲ, ಹೋರಾಟ ಹಾಗೂ ಅವರ ಆಯಸ್ಸು ಚನ್ನಾಗಿರಲಿ ಎಂದು ಹಾರೈಸಿದರು. ಇದನ್ನೂ ಓದಿ: ಕರ್ನಾಟಕ ಬಿಜೆಪಿ ಕಾರ್ಯಕರ್ತರಿಗೆ ಮೋದಿ ನೀಡಿದ ಸಂದೇಶ ಏನು?

    ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಕೊಡುತ್ತೇವೆ ಎಂದು ನಾವು ಭರವಸೆ ಕೊಟ್ಟಿಲ್ಲ. ಬಿಜೆಪಿಯ (BJP) ಪ್ರಣಾಳಿಕೆ ನೋಡಿ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದಾರೆ. ಸರ್ಕಾರದ ಅಧಿಕೃತ ಜಾಹೀರಾತಿನಲ್ಲೂ ಮಹಿಳೆಯರಿಗೆ ಮೂರು ಸಾವಿರ ಕೊಡುವ ಭರವಸೆ ಕೊಟ್ಟಿದ್ದಾರೆ. 3 ರಿಂದ 10 ಗಂಟೆ ಉಚಿತ ವಿದ್ಯುತ್ ಕೊಡುವ ಭರವಸೆ ಕೊಟ್ಟಿದ್ದಾರೆ. ಪ್ರಧಾನಿ ಮೋದಿ (Narendra Modi) ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡಿದ್ದು ಸಂತೋಷ ಎಂದರು. ಇದನ್ನೂ ಓದಿ: ರಾಮನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ: ನಿಖಿಲ್ ಕುಮಾರಸ್ವಾಮಿ

    ಗ್ಯಾಸ್ ದರ ಹೆಚ್ಚಳ ಆಗಿದ್ದಾಗ ಸಿಲಿಂಡರ್‌ಗೆ ಕೈಮುಗಿದು ವೋಟ್ ಹಾಕಿ ಎಂದು ಮೋದಿ ಕರೆ ಕೊಟ್ಟಿದ್ದರು. ಈಗ ನಾನೂ ಕೂಡಾ ಭಾಯಿಯೋ ಔರ್ ಬೆಹನೋ ಗ್ಯಾಸ್ ದರ ಏರಿಕೆ ಆಗಿದೆ ಸಿಲಿಂಡರ್‌ಗೆ ಕೈ ಮುಗಿದು ಮತದಾನ ಮಾಡಿ ಎಂದು ಕರೆ ಕೊಡುತ್ತೇನೆ. ಗೃಹ ಜ್ಯೋತಿ 200 ಯೂನಿಟ್, ಉಚಿತ ವಿದ್ಯುತ್, 2000 ಪ್ರತಿ ತಿಂಗಳು ಖಚಿತ, ಅನ್ನ ಭಾಗ್ಯ ಹತ್ತು ಕೆಜಿ ಅಕ್ಕಿ ನಿಶ್ಚಿತ, ಯುವ ನಿಧಿ ಖಂಡಿತಾ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮಾನ್ವಿ ಕ್ಷೇತ್ರದಲ್ಲಿ ಖಾತೆಯನ್ನೇ ತೆರೆಯದ ಬಿಜೆಪಿ – ಈ ಬಾರಿ ಯಾರ ಕೈ ಹಿಡಿಯಲಿದ್ದಾನೆ ಮತದಾರ?

    ಇಲ್ಲಿಯವರೆಗೆ ನಾಲ್ಕು ಘೋಷಣೆ ಮಾಡಿದ್ದೇವೆ. ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಜಾರಿ ಮಾಡುತ್ತೇವೆ. ಮೇ 10ನೇ ತಾರೀಕು ರಾಜ್ಯದ ಭವಿಷ್ಯ ಬದಲಾವಣೆಯ ದಿನ. ಗ್ಯಾರಂಟಿ ಕಾರ್ಡ್‌ಗೆ (Guarantee Card) ಮುದ್ರೆ ಹಾಕುವ ದಿನ. ಅಧಿಕಾರಕ್ಕೆ ಬಂದ ಮೊದಲನೇ ಕ್ಯಾಬಿನೆಟ್‌ನಲ್ಲೇ ನಿರ್ಧಾರ ಮಾಡುತ್ತೇವೆ. ಕೊಟ್ಟಿರುವ ನಾಲ್ಕು ಗ್ಯಾರಂಟಿ ಜಾರಿಗೊಳಿಸುತ್ತೇವೆ. ಜೂನ್ ತಿಂಗಳಲ್ಲಿ ಗ್ಯಾರಂಟಿ ಘೋಷಣೆ ಜಾರಿಗೊಳಿಸುತ್ತೇವೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲ್ಲ. ಅದಕ್ಕೆ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಜಾರಿಗೆ ತಂದಿಲ್ಲ ಎಂದರೆ ಮುಂದೆ ನಾವು ಮತ ಕೇಳುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಏಯ್ ಇದು ಯಾವ ಪ್ರಾರ್ಥನೆ! – ತಮಿಳು ನಾಡಗೀತೆ ನಿಲ್ಲಿಸಿ ಕನ್ನಡದ ನಾಡಗೀತೆ ಹಾಕಿಸಿದ ಈಶ್ವರಪ್ಪ

  • ಕಾಂಗ್ರೆಸ್ ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ- ಸಿ.ಎಂ ಇಬ್ರಾಹಿಂ

    ಕಾಂಗ್ರೆಸ್ ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ- ಸಿ.ಎಂ ಇಬ್ರಾಹಿಂ

    ಬೆಂಗಳೂರು: ಕಾಂಗ್ರೆಸ್ (Congress) ಗ್ಯಾರಂಟಿ ಅತ್ತೆ-ಸೊಸೆ ಮಧ್ಯೆ ಜಗಳ ತಂದಿಡುತ್ತಿದೆ. ಕಾಂಗ್ರೆಸ್ ಮನೆ ಮನೆಗೂ ಜಗಳ ಹಚ್ಚಲು ಹೊರಟಿದೆ. ಕಾಂಗ್ರೆಸ್ ಗ್ಯಾರಂಟಿಯನ್ನು ನಂಬಬೇಡಿ ಎಂದು ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಮನೆ ಒಡತಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳಿದ್ದಾರೆ. ಅತ್ತೆ-ಸೊಸೆ ಇರೋ ಮನೆ ಕಥೆ ಏನು? ಸೊಸೆಗೆ 2 ಸಾವಿರ ಕೊಟ್ಟರೆ ಅತ್ತೆಗೆ ಏನು ಕೊಡುತ್ತೀರಾ? ಅವರು ಹೊಡೆದಾಡಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕಾರ್ಮಿಕ ಇಲಾಖೆಯ ಎಡವಟ್ಟು; ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಕಾರ್ಮಿಕರು

    ಕಾಂಗ್ರೆಸ್ ಮತ್ತು ಬಿಜೆಪಿಯವರು (BJP) ಅತಂತ್ರ ಎಂದು ಹೇಳುತ್ತಿದ್ದಾರೆ. ಮುಂಡೇವು ಚೆನ್ನಾಗಿ ಕಾಣಲಿ ಅಂತ ಮೇಕಪ್ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ಗೂ ಪೂರ್ಣ ಬಹುಮತ ಬರೋದು ಇಷ್ಟ ಇಲ್ಲ. ಬಿಜೆಪಿ ಅಧಿಕಾರಕ್ಕೆ ಬರೋದಿಲ್ಲ. ಜೆಡಿಎಸ್ ಜನರ ಮನಸ್ಸಿನಲ್ಲಿದೆ. ಈ ಬಾರಿ ಅತಂತ್ರ ಸರ್ಕಾರ ಬರುವುದಿಲ್ಲ. ಜೆಡಿಎಸ್ ಸ್ವತಂತ್ರವಾಗಿ ಸರ್ಕಾರ ಮಾಡುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: JDS ಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಲಿದೆ, HDK ಸಿಎಂ ಆಗ್ತಾರೆ: ಇಬ್ರಾಹಿಂ

    ಜನರಿಗಾಗಿ ಅನೇಕ ಯೋಜನೆಗಳನ್ನು ಘೋಷಣೆ ಮಾಡಿದ್ದೇವೆ. ರೈತರ ಹೆಣ್ಣುಮಕ್ಕಳನ್ನು ಮದುವೆ ಆದರೆ 2 ಲಕ್ಷ ಕೊಡುತ್ತೇವೆ. ಎಕರೆಗೆ 10 ಸಾವಿರ ಬಿತ್ತನೆಗೆ ಕೊಡುತ್ತೇವೆ. 5 ವರ್ಷಗಳಲ್ಲಿ ನೀರಾವರಿ ಯೋಜನೆ ಮುಕ್ತಾಯ ಮಾಡುತ್ತೇವೆ. ಇದು ನಮಗೆ ರೈತರ ಬಗ್ಗೆ ಇರುವ ಕಾಳಜಿ ಎಂದರು. ಇದನ್ನೂ ಓದಿ: ನನಗೆ ವಯಸ್ಸಾಗಿದೆ, ಟಿಕೆಟ್ ಬೇಡ: ಶಾಸಕ ಎಂ.ವೈ ಪಾಟೀಲ್

    200 ಯುನಿಟ್ ವಿದ್ಯುತ್ ಎನ್ನುತ್ತಾರೆ. ಆದರೆ ನಾವು 3 ಫೇಸ್ ವಿದ್ಯುತ್ 24 ಗಂಟೆ ರೈತರಿಗೆ ಕೊಡುತ್ತೇವೆ. ರೈತರ ಪಂಪ್ ಸೆಟ್‌ಗೆ ಮೀಟರ್ ಇಲ್ಲ. ಇದು ಜೆಡಿಎಸ್ ಬದ್ಧತೆ. ಕಾಂಗ್ರೆಸ್ ಗ್ಯಾರಂಟಿ ನಂಬಬೇಡಿ ಎಂದು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ (Guarantee Card) ಬಗ್ಗೆ ಟೀಕಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಅಖಿಲ ಭಾರತೀಯ ಬ್ರಾಹ್ಮಣ ಮಾಹಾಸಂಘ ವಾಗ್ದಾಳಿ

  • ಗ್ಯಾರಂಟಿ ಕಾರ್ಡ್ ಹಂಚಲು ಹೋದಾಗ ಡೇಟಾ ಸಂಗ್ರಹ – ಕಾಂಗ್ರೆಸ್ ಕಾರ್ಯಕರ್ತೆಗೆ ಕ್ಲಾಸ್

    ಗ್ಯಾರಂಟಿ ಕಾರ್ಡ್ ಹಂಚಲು ಹೋದಾಗ ಡೇಟಾ ಸಂಗ್ರಹ – ಕಾಂಗ್ರೆಸ್ ಕಾರ್ಯಕರ್ತೆಗೆ ಕ್ಲಾಸ್

    ಬೀದರ್: ಗ್ಯಾರಂಟಿ  ಘೋಷಣೆಯ ನೆಪದಲ್ಲಿ ಡೇಟಾ ಸಂಗ್ರಹ (Data Collection) ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತೆಯನ್ನು ವ್ಯಕ್ತಿಯೊಬ್ಬರು ತರಾಟೆ ತೆಗೆದುಕೊಂಡ ಘಟನೆ ಬೀದರ್‌ನ (Bidar) ಓಲ್ಡ್ ಸಿಟಿಯಲ್ಲಿ ನಡೆದಿದೆ.

    ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ್ ಪರ ಗ್ಯಾರಂಟಿ ಕಾರ್ಡ್ (Guarantee Card) ಹಂಚುತ್ತಿದ್ದಾಗ, ಕಾಂಗ್ರೆಸ್ (Congress) ಕಾರ್ಯಕರ್ತೆಯನ್ನು ವ್ಯಕ್ತಿ ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral) ಆಗಿದೆ. ಇದನ್ನೂ ಓದಿ: ಇಂದು ಬಿಡುಗಡೆ ಆಗಬೇಕಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಗೆ ತಡೆ – ಡಿಕೆಶಿ ಹೇಳಿದ್ದೇನು? 

     ನೀವು ಬರೀ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಮಾತ್ರ ಹಂಚಿ. ಅದನ್ನು ಬಿಟ್ಟು ಐಡಿ ಕಾರ್ಡ್ (ID Card) ಕೇಳುವುದು ಐಪಿಸಿ ಸೆಕ್ಷನ್ 420 ಕೇಸ್ ಆಗುತ್ತದೆ ಎಂದು ವ್ಯಕ್ತಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ಸಿಗೆ ನಮ್ಮ ಡೇಟಾ ಸಂಗ್ರಹ ಮಾಡಲು ಏನು ಅಧಿಕಾರವಿದೆ ಎಂದು ವ್ಯಕ್ತಿ ಪ್ರಶ್ನೆ ಮಾಡುತ್ತಿದ್ದಂತೆ ನೀವು ಪಕ್ಕಾ ಬಿಜೆಪಿಯವರು (BJP) ಇರಬೇಕು ಎಂದು ಕಾರ್ಯಕರ್ತೆ ಆ ವ್ಯಕ್ತಿಗೆ ಪ್ರತ್ಯುತ್ತರ ನೀಡಿದ್ದಾರೆ. ಇಬ್ಬರ ನಡುವೆಯ ಮಾತುಕತೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಟಿಕೆಟ್ ಘೋಷಣೆಗೂ ಮುನ್ನವೇ ಅಭ್ಯರ್ಥಿಯಾದ ಮಂಡ್ಯ ಕಾಂಗ್ರೆಸ್ ಮುಖಂಡ

  • ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ಪ್ರಣಾಳಿಕೆಯಲ್ಲ ‘ಗ್ಯಾರೆಂಟಿ ಕಾರ್ಡ್’ ಬಿಡುಗಡೆ ಮಾಡಿದ ಆಪ್

    ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಸಿದ್ಧವಾಗಿರುವ ಆಮ್ ಆದ್ಮಿ ಪ್ರಣಾಳಿಕೆ ಬದಲು ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿದೆ. ಅಧಿಕಾರಕ್ಕೆ ಬಂದಲ್ಲಿ ಗ್ಯಾರೆಂಟಿ ಕಾರ್ಡ್ ನಲ್ಲಿರುವ ಹತ್ತು ಅಂಶಗಳನ್ನು ಕಡ್ಡಾಯವಾಗಿ ಜಾರಿ ಮಾಡುವ ಭರವಸೆ ನೀಡಿದೆ.

    ಇಂದು ದೆಹಲಿಯ ಪಕ್ಷದ ಕಚೇರಿಯಲ್ಲಿ ಗ್ಯಾರೆಂಟಿ ಕಾರ್ಡ್ ಬಿಡುಗಡೆ ಮಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ರಚನೆಯಾಗಿ ಹತ್ತು ದಿನಗಳಲ್ಲಿ ಕೆಲಸ ಆರಂಭಿಸುವ ಭರವಸೆ ನೀಡಿದ್ದಾರೆ.

    ಹತ್ತು ಅಂಶಗಳ ಗ್ಯಾರೆಂಟಿ ಕಾರ್ಡ್ ನಲ್ಲಿ ಶಾಲಾ ಮಕ್ಕಳಿಗೆ ಭಾನುವಾರ ಉಚಿತ ಬಸ್ ಪ್ರಯಾಣ ಅವಕಾಶ ನೀಡುವ ಭರವಸೆ ನೀಡಿದೆ. ಮಹಿಳೆಯರ ಸುರಕ್ಷತೆಗಾಗಿ ದೆಹಲಿ ಬಸ್ ಗಳಲ್ಲಿ ‘ಮೊಹಲ್ಲಾ ಮಾರ್ಷಲ್’ಗಳನ್ನ ನೇಮಕ ಮಾಡಲಿದೆ. 200 ಯೂನಿಟ್ ವಿದ್ಯುತ್ ಮತ್ತು 2000 ಲೀಟರ್ ನೀರಿನ ಉಚಿತ ಬಳಕೆಯನ್ನ ಮುಂದುವರಿಸುವ ಆಶ್ವಾಸನೆ ಗ್ಯಾರೆಂಟಿ ಕಾರ್ಡ್ ನಲ್ಲಿ ನೀಡಿದೆ.

    ದೆಹಲಿಯ ಎಲ್ಲ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ, ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಮತ್ತು ಎನ್‍ಸಿಆರ್ ಭಾಗದಲ್ಲಿ ಎರಡು ಕೋಟಿ ಸಸಿಗಳನ್ನು ನೆಡುವುದು, ಸಾರಿಗೆ ಉನ್ನತಿಕರಿಸುವ ನಿಟ್ಟಿನಲ್ಲಿ 11,000 ಹೆಚ್ಚುವರಿ ಬಸ್ ಗಳ ರಸ್ತೆಗಿಳಿಸುವುದು 500 ಕಿಮೀ ಮೆಟ್ರೊ ಲೈನ್ ಅಭಿವೃದ್ಧಿ ಪಡಿಸುವ ವಾಗ್ದಾನ ಆಮ್ ಆದ್ಮಿ ನೀಡಿದೆ.

    ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣ, ಅನಧಿಕೃತ ಕಾಲೋನಿಗಳಿಗೆ ರಸ್ತೆ ನೀರು, ಬೆಳಕಿನ ಸೌಲಭ್ಯ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅವಳವಡಿಕೆ, ನಿವಾಸ ರಹಿತರಿಗೆ ಸೂರು ಕಲ್ಪಿಸುವುದು, ಪಾರ್ಕ್ ಮತ್ತು ರೋಡ್ ಗಳನ್ನು ಸುಂದರಗೊಳಿಸುವುದು, ಯಮುನಾ ನದಿಯನ್ನ ಸ್ವಚ್ಛಗೊಳಿಸುವ ಆಶ್ವಾಸನೆ ನೀಡಲಾಗಿದೆ.