Tag: GST Tax

  • ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

    ಇಂದು, ನಾಳೆ ಹಾಲು ಮಾರಾಟ ಬಂದ್ – ಟೀ, ಕಾಫಿ ಇಲ್ಲ.. ಓನ್ಲಿ ಲೆಮನ್, ಬ್ಲ್ಯಾಕ್ ಟೀ ಸಿಗುತ್ತೆ ಅಂತ ಬೋರ್ಡ್

    – ಬೆಂಗಳೂರಿನ ಹಲವೆಡೆ ಹಾಲು, ಮೊಸರು ಮಾರಾಟ ಇಲ್ಲ; ಕಪ್ಪುಪಟ್ಟಿ ಧರಿಸಿ ವರ್ತಕರ ಪ್ರತಿಭಟನೆ
    – ಕೆಲವೆಡೆ ಎಂದಿನಂತೆ ನಡೆಯುತ್ತಿದೆ ಹಾಲು ಮಾರಾಟ

    ಬೆಂಗಳೂರು: ಜಿಎಸ್‌ಟಿ ಟ್ಯಾಕ್ಸ್ (GST Tax) ನೋಟಿಸ್‌ಗೆ ಅಸಮಾಧಾನ ಹೊರಹಾಕಿರುವ ಸಣ್ಣ ವರ್ತಕರು (Small Traders) ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದು ಮತ್ತು ನಾಳೆ ಹಾಲು ಮಾರಾಟ ನಿಲ್ಲಿಸಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಸಣ್ಣ ಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ಕೊಟ್ಟ ಬೆನ್ನಲ್ಲೆ ಇಂದಿನಿಂದ ಬೇಕರಿ ಕಾಂಡಿಮೆಂಟ್‌ಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನ ಬಳಕೆ ಮತ್ತು ಮಾರಾಟ ನಿಲ್ಲಿಸಲಾಗಿದೆ. ಹಲವು ಕಾಂಡಿಮೆಂಟ್, ಬೇಕರಿಗಳಲ್ಲಿ ಬೆಳಗ್ಗೆಯೇ ನೋ ಟೀ ಕಾಫಿ, ಓನ್ಲಿ ಲೆಮನ್ ಟೀ, ಬ್ಲ್ಯಾಕ್ ಟೀ ಅನ್ನೋ ಬೋರ್ಡ್ಗಳನ್ನ ಹಾಕಲಾಗಿದೆ. ಇದನ್ನೂ ಓದಿ: GST ನೋಟಿಸ್‌ ಕೊಟ್ಟ ಕೋತಿ ಕೆಲಸ ರಾಜ್ಯ ಸರ್ಕಾರದ್ದು- ನೋಟಿಸ್ ವಾಪಸ್ ಪಡೆಯಬೇಕು: ಸಿ.ಟಿ.ರವಿ

    ಬೆಂಗಳೂರಿನ ರಾಜಾಜಿನಗರದ ಕಾಂಡಿಮೆಟ್ಸ್ಗಳಲ್ಲಿ ಇಂದು, ನಾಳೆ ಹಾಲು ಮಾರಾಟ ಸ್ಥಗಿತಗೊಳಿಸಲಾಗಿದೆ. ಟೀ, ಕಾಫಿ ಸಿಗಲ್ಲ.. ಏನಿದ್ರೂ ಲೆಮೆನ್ ಮತ್ತು ಬ್ಲ್ಯಾಕ್ ಟೀ ಸಿಗುತ್ತೆ ಎಂದು ಗ್ರಾಹಕರಿಗೆ ಬೋರ್ಡ್ ಮೂಲಕ ತಿಳಿಸಲಾಗಿದೆ.

    ಇಂದಿನಿಂದ ಮೂರು ದಿನ ಹಾಲು, ಮೊಸರು ಮಾರುವುದಿಲ್ಲ. ಟ್ಯಾಕ್ಸ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗುತ್ತೇವೆ. ಟೀ, ಕಾಫಿಯಲ್ಲಿ ಹಾಲು ಬಳಸುವುದಿಲ್ಲ. ಲೆಮೆನ್ ಮತ್ತು ಬ್ಲ್ಯಾಕ್‌ ಟೀ ಅಷ್ಟೇ ಮಾರುತ್ತೇವೆ ಎಂದು ಸಣ್ಣ ವರ್ತಕರು ‘ಪಬ್ಲಿಕ್ ಟಿವಿ’ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಕಾಂಡಿಮೆಂಟ್ಸ್ ವ್ಯಾಪಾರಿಗಳು ಬೋರ್ಡ್ ಕೂಡ ಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ಟ್ಯಾಕ್ಸ್!

    ಆದರೆ, ಹಲವು ಕಡೆ ಎಂದಿನಂತೆ ಹಾಲು ಮಾರಾಟ ನಡೆಯುತ್ತಿದೆ. ಇಂದು ಕಾರ್ಮಿಕ ಪರಿಷತ್‌ನಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಮನವಿ ಮಾಡಲಿದ್ದಾರೆ. ಬಸವೇಶ್ವರ ನಗರ, ಮಾಗಡಿ ರಸ್ತೆ ಸುತ್ತಮುತ್ತ ಪ್ರತಿಭಟನೆಗೆ ಮುಂದಾಗಲಿದ್ದಾರೆ.

    ರಾಜಾಜಿನಗರದ 10ನೇ ಮುಖ್ಯ ರಸ್ತೆಯಲ್ಲಿ ಇರುವ ಕಾಂಡಿಮೆಂಟ್ಸ್‌ಗಳಲ್ಲಿ ಹಾಲು ಮಾರಾಟ ಬಂದ್ ಮಾಡಲಾಗಿದೆ. 10ನೇ ಕ್ರಾಸ್‌ನ ಬ್ರಹ್ಮಶ್ರೀ ಕಾಫಿ ಬಾರ್ ಸೇರಿದಂತೆ ಹಲವು ಕಡೆ ಹಾಲು ಮಾರಾಟ ಮಾಡುತ್ತಿಲ್ಲ. ಎರಡು ದಿನ ಹಾಲು ಮಾರಾಟ ಆಗದೇ ಹೋದರೆ ನಷ್ಟ ಆದರೂ ಪರವಾಗಿಲ್ಲ, ನ್ಯಾಯ ಸಿಗಬೇಕು ಎನ್ನುತ್ತಿದ್ದಾರೆ ವರ್ತಕರು.

  • ಬೆಂಗಳೂರಿನ ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ಟ್ಯಾಕ್ಸ್!

    ಬೆಂಗಳೂರಿನ ನಂದಿನಿ ಬೂತ್‌ಗೆ 1 ಕೋಟಿ 3 ಲಕ್ಷ ಟ್ಯಾಕ್ಸ್!

    ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಿಂದ ಸಣ್ಣ ಉದ್ದಿಮೆದಾರರಿಗೆ ನೋಟಿಸ್ ಪರ್ವ ಮುಂದುವರೆದಿದೆ. ಇದೀಗ ಬೆಂಗಳೂರಿನಲ್ಲಿ (Bengaluru) ನಂದಿನಿ ಬೂತ್‌ನವರಿಗೆ ಕೋಟಿ ಕೋಟಿ ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ.

    ಬೆಂಗಳೂರಿನ ಉಲ್ಲಾಳದ ನಂದಿನಿ ಬೂತ್‌ನ (Nandini Booth) ರವಿ ಅನ್ನೋರಿಗೆ 1 ಕೋಟಿ 3 ಲಕ್ಷ ರೂ. ಟ್ಯಾಕ್ಸ್ ಕಟ್ಟುವಂತೆ ನೋಟಿಸ್ ಬಂದಿದೆ. ಹೀಗಾಗಿ ಅಂಗಡಿ ಮಾಲೀಕ ಸಹಜವಾಗಿಯೇ ಗಾಬರಿಯಾಗಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಭೂಕಂಪನ ಅನುಭವ – 3.2 ತೀವ್ರತೆ ದಾಖಲು

    ಬುಧವಾರದಿಂದ 3 ದಿನಗಳ ಕಾಲ ಹಾಲು ಮಾರಾಟ ಬಂದ್ ಮಾಡುವ ವರ್ತಕರ ನಿರ್ಧಾರಕ್ಕೆ ಕೆಲ ನಂದಿನಿ ಬೂತ್‌ಗಳಿಂದ ಬೆಂಬಲ ಸಿಕ್ಕಿದೆ. ಇದನ್ನೂ ಓದಿ: ಪತಿಯನ್ನ ಪತ್ನಿ ನದಿಗೆ ತಳ್ಳಿದ್ದ ಆರೋಪ ಪ್ರಕರಣಕ್ಕೆ ಟ್ವಿಸ್ಟ್ – ಪತಿ ವಿರುದ್ಧ ಮಹಿಳಾ ಠಾಣೆಯಲ್ಲಿ ಕೇಸ್ ದಾಖಲು

    ಜಿಎಸ್‌ಟಿ ನೋಟಿಸ್‌ಗೆ ಸಣ್ಣಪುಟ್ಟ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಆತಂಕಕ್ಕೆ ಒಳಗಾದ ವ್ಯಾಪಾರಿಗಳು ಜು.25 ರಂದು ಸಂಪೂರ್ಣ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ಕಾರ್ಮಿಕ ಪರಿಷತ್ ಕಚೇರಿಯಲ್ಲಿ ನಗರದ ಕಾಂಡಿಮೆಟ್ಸ್, ಬೇಕರಿ ಅಂಗಡಿ ಮಾಲೀಕರು ಸಭೆ ನಡೆಸಿ, ಬಂದ್ ತೀವ್ರತೆ, ಎಲ್ಲೆಲ್ಲಿ ಪ್ರತಿಭಟನೆ ಮಾಡಬೇಕು ಎಂದು ಚರ್ಚಿಸಿದ್ದಾರೆ.

  • ಜು.23, 24 ರಂದು ಹಾಲು, ಸಿಗರೇಟ್ ಮಾರಾಟ ಬಂದ್

    ಜು.23, 24 ರಂದು ಹಾಲು, ಸಿಗರೇಟ್ ಮಾರಾಟ ಬಂದ್

    ಬೆಂಗಳೂರು: ಜಿಎಸ್‌ಟಿ ಟ್ಯಾಕ್ಸ್ (GST Tax) ವಿರುದ್ಧ ವರ್ತಕರು ಸಮರ ಸಾರಿದ್ದಾರೆ. ಜು.23, 24 ರಂದು ಹಾಲು (Milk), ಸಿಗರೇಟ್ ಮಾರಾಟ ಬಂದ್‌ಗೆ ಕರೆ ಕೊಟ್ಟಿದ್ದಾರೆ.

    ಜು.25 ರಂದು ಬೇಕರಿ, ಕಾಂಡಿಮೆಟ್ಸ್, ಸಣ್ಣಪುಟ್ಟ ಅಂಗಡಿಗಳು ಎಲ್ಲವೂ ಬಂದ್ ಆಗಲಿವೆ. ಬೆಂಗಳೂರಿನ ಪ್ರತಿ ಏರಿಯಾದಲ್ಲೂ ಪ್ರತಿಭಟನೆಗೆ ಪ್ಲ್ಯಾನ್ ಮಾಡಲಾಗಿದೆ. ಆದರೆ, ವ್ಯಾಪಾರಸ್ಥರನ್ನ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ತೆರಿಗೆ ಹಣ ಕಟ್ಟಲು ಸೆಟ್ಲಿಮೆಂಟ್ ಮಾಡಿಕೊಳ್ಳಿ ಎಂದು ಅಂಗಡಿಗಳ ಬಳಿ ಅಧಿಕಾರಿಗಳು ಬರುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆರೋಪ ಮಾಡುತ್ತಿದ್ದಾರೆ. ಇದನ್ನೂ ಓದಿ: ಜಿಎಸ್‌ಟಿ ಮಾಡಿರೋದು ಕೇಂದ್ರ ಸರ್ಕಾರ – ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್‌ ನೋಟಿಸ್‌ ವಿಚಾರಕ್ಕೆ ಸಿಎಂ ರಿಯಾಕ್ಷನ್‌

    ಜಿಎಸ್‌ಟಿ ನೋಟಿಸ್‌ಗೆ ಸಣ್ಣಪುಟ್ಟ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಆತಂಕಕ್ಕೆ ಒಳಗಾದ ವ್ಯಾಪಾರಿಗಳು ಜು.25 ರಂದು ಸಂಪೂರ್ಣ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಕಾರ್ಮಿಕ ಪರಿಷತ್ ಕಚೇರಿಯಲ್ಲಿ ನಗರದ ಕಾಂಡಿಮೆಟ್ಸ್, ಬೇಕರಿ ಅಂಗಡಿ ಮಾಲೀಕರು ಸಭೆ ನಡೆಸಿದ್ದರು. ಬಂದ್ ತೀವ್ರತೆ ಹೇಗಿರಬೇಕು, ಎಲ್ಲೆಲ್ಲಿ ಪ್ರತಿಭಟನೆ ಮಾಡಬೇಕು ಎಂದು ಚರ್ಚಿಸಿದ್ದರು.

    ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಬೇಕರಿ, ಕಾಂಡಿಮೆಟ್ಸ್ಗಳಿವೆ. ನೋಟಿಸ್ ಬಂದ ಕೆಲ ವ್ಯಾಪಾರಸ್ಥರನ್ನ ಅಧಿಕಾರಿಗಳು ಸಂಪರ್ಕಿಸಿ, ಸೆಟ್ಲ್ಮೆಂಟ್ ಮಾಡಿಕೊಳ್ಳಿ ಅಂತ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕೆಲವು ವ್ಯಾಪಾರಿಗಳನ್ನ ಕಚೇರಿಗೆ ಬನ್ನಿ ನಿಮಗಿರುವ ಗೊಂದಲದ ಬಗ್ಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡುತ್ತೀವಿ ಎಂದು ಆಹ್ವಾನಿಸುತ್ತಿದ್ದಾರೆ. ಈ ಆಹ್ವಾನವನ್ನ ತಿರಸ್ಕರಿಸಿರುವ ವ್ಯಾಪಾರಿಗಳು ಬಂದ್ ತೀವ್ರಗೊಳಿಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

    23, 24 ರಂದು ವ್ಯಾಪಾರಿಗಳು ಟೀ-ಕಾಫಿ ಬಂದ್ ಮಾಡಿ, ಕೈಗೆ ಕಪ್ಪುಪಟ್ಟಿ ಕಟ್ಟಿಕೊಳ್ಳಲಿದ್ದಾರೆ. 25ರಂದು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

    ಹಾಲು ಮಾರಾಟ ಬಂದ್ ಕುರಿತು ಪ್ರತಿಕ್ರಿಯಿಸಿದ ಕೆಎಂಎಫ್ ಎಂಡಿ ಶಿವಸ್ವಾಮಿ, ರೆಗ್ಯೂಲರ್ ಆಗಿ ಹಾಲನ್ನ ಮಾರಾಟ ಮಾಡ್ತಾ ಇದ್ದೇವೆ. ಎಲ್ಲಾ ಪಾರ್ಲರ್, ಫ್ರಾಂಚೈಸಿಗಳಲ್ಲಿ, ಬೀದಿಬದಿಗಳಲ್ಲಿ ಹಾಲು ಮಾರಾಟ ಮಾಡ್ತಾ ಇದ್ದೇವೆ. ಜಿಎಸ್‌ಟಿಗೆ ಸಂಬಂಧಪಟ್ಟಂತೆ ವರ್ತಕರು ಪ್ರತಿಭಟನೆ, ಮುಷ್ಕರ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಒಂದು ವೇಳೆ ಮುಷ್ಕರ ಮಾಡಿದರೆ, ನಾವು ನಮ್ಮ ಅಧಿಕಾರಿಗಳು, ಸಿಬ್ಬಂದಿ, ಮಾರಾಟ ವಿಭಾಗದ ಸಿಬ್ಬಂದಿ ಮುಖಾಂತರ ಪೂರೈಕೆ ಮಾಡುತ್ತೇವೆ. ಯಾವುದೇ ವ್ಯತ್ಯಯ ಆಗದೇ ಇರೋಥರ ನೋಡಿಕೊಳ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

    ಹಾಲು ಅತ್ಯವಶ್ಯಕ ಆಗಿರುವುದರಿಂದ ಆಸ್ಪತ್ರೆಗೆ, ಹೋಟೆಲ್‌ಗೆ ಪೂರೈಕೆ ಮಾಡಬೇಕಾಗುತ್ತೆ. ಒಂದು ವೇಳೆ ಪ್ರತಿಭಟನೆ ಆದರೆ ನಾವು ಮಾರುಕಟ್ಟೆ ಸಿಬ್ಬಂದಿ ಹಾಗೂ ನಮ್ಮ ಬೇರೆ ಬೇರೆ ಶಾಖೆ ಅಧಿಕಾರಿಗಳನ್ನ ಬಳಕೆ ಮಾಡಿಕೊಂಡು ಹಾಲು ಮಾರಾಟ ಮಾಡುತ್ತೇವೆಂದು ತಿಳಿಸಿದ್ದಾರೆ.

  • ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

    ಬಿಹಾರ ಎಲೆಕ್ಷನ್‌ಗೆ ಕರ್ನಾಟಕದಲ್ಲಿ ವಸೂಲಿ – ಜಿಎಸ್‌ಟಿ ನೋಟಿಸ್‌ಗೆ ಕೇಸರಿ ಬಿಗ್ ಟ್ವಿಸ್ಟ್

    ಬೆಂಗಳೂರು: ರಾಜ್ಯದ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಕೊಟ್ಟಿರೋ ಜಿಎಸ್‌ಟಿ ನೊಟೀಸ್‌ಗೆ ಬಿಜೆಪಿ (BJP) ಬಿಹಾರ ಎಲೆಕ್ಷನ್ (Bihar Election) ಲಿಂಕ್ ಕೊಟ್ಟಿದೆ.

    ಬಿಹಾರ ಎಲೆಕ್ಷನ್‌ಗಾಗಿ ಹಣ ಸಂಗ್ರಹಕ್ಕೆ ಸುರ್ಜೇವಾಲಾ ರಾಜ್ಯಕ್ಕೆ ಬಂದಿದ್ದಾರೆ. ಹಾಗಾಗಿ, ಸಿದ್ದರಾಮಯ್ಯ ಸರ್ಕಾರ ಹೂವು, ತರಕಾರಿ, ಟೀ ಅಂಗಡಿ, ಬೇಕರಿಗಳಿಗೆಲ್ಲಾ ನೋಟಿಸ್‌ ಕೊಟ್ಟು ಹಗಲು ದರೋಡೆ ಮಾಡ್ತಿದೆ ಅಂತ ಎಕ್ಸ್‌ನಲ್ಲಿ ಗಂಭೀರ ಆರೋಪ ಮಾಡಿದೆ. ಅಲ್ಲದೆ, ಸಹಾಯವಾಣಿಯನ್ನೂ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: 10 ವರ್ಷಗಳಿಂದ ಭಾರತದಲ್ಲಿ ಮಂಗಳಮುಖಿ ವೇಷದಲ್ಲಿದ್ದ ಅಬ್ದುಲ್ ಕಲಾಂ ಅರೆಸ್ಟ್‌

    ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (B Y Vijayendra) ಮಾತನಾಡಿ, ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹಿಸಲು ತೆರಿಗೆ ಇಲಾಖೆ ಮೂಲಕ ನೋಟಿಸ್ ಕೊಡ್ತಿದ್ದಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

    ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿ, ಈ ಬಗ್ಗೆ ಚರ್ಚೆ ಆಗ್ಬೇಕು. ಹಣಕಾಸು ಸಚಿವರು ಉತ್ತರ ಕೊಡ್ತಾರೆ ಅಂತ ಎಂದಿದ್ದಾರೆ. ಆದರೆ, ನೋಟಿಸ್ ಕೊಡೋದೇ ಕೇಂದ್ರ ಸರ್ಕಾರ ಅಂತ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಇದನ್ನೂ ಓದಿ: ʻಡೆವಿಲ್ʼ ಮೋಷನ್ ಪೋಸ್ಟರ್‌ ರಿಲೀಸ್‌ – ಖದರ್‌ ಲುಕ್‌ನಲ್ಲಿ ದರ್ಶನ್‌, ಡಿಬಾಸ್‌ ಫ್ಯಾನ್ಸ್‌ಗೆ ಹಬ್ಬ

    ಈ ಮಧ್ಯೆ, ವ್ಯಾಪಾರಿಗಳಿಗೆ ಜಿಎಸ್‌ಟಿ ಜಂಜಾಟ ಮುಂದುವರಿದಿದೆ. ಯುಪಿಐ ಬೇಡ, ಕ್ಯಾಶ್ ಕೊಡಿ ಅನ್ನೋ ವ್ಯಾಪಾರಿಗಳ ಸಂಖ್ಯೆ ದ್ವಿಗುಣ ಆಗ್ತಿದೆ. ಆದರೆ, ಗ್ರಾಹಕರು ಕ್ಯಾಶ್ ಇಲ್ಲ ಅಂತ ಪರದಾಡ್ತಿದ್ದಾರೆ.

  • ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

    ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಬರೆ; ಸಿಎಂ ಮಧ್ಯಪ್ರವೇಶಿಸಿ ಪರಿಹಾರ ಒದಗಿಸಲಿ: ಬೊಮ್ಮಾಯಿ ಆಗ್ರಹ

    ಬೆಂಗಳೂರು: ಕರ್ನಾಟಕದಲ್ಲಿ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರಿಗೆ ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ಜಿಎಸ್‌ಟಿ ಶಾಕ್ ಕೊಟ್ಟಿರುವಂಥದ್ದು ಅತ್ಯಂತ ಖಂಡನೀಯ. ಜಿಎಸ್‌ಟಿ ಕಾನೂನು ಅಡಿಯಲ್ಲಿ ವ್ಯಾಪಾರ ವಹಿವಾಟು ಮಾಡಲು ಕೆಲವು ರಿಯಾಯಿತಿ ಇದೆ. ಸಿಎಂ ಸಿದ್ದರಾಮಯ್ಯ (Siddaramaiah) ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿ ಕೂಡಲೇ ಸಣ್ಣ ವ್ಯಾಪಾರಸ್ಥರಿಗೆ ಪರಿಹಾರ ಒದಗಿಸಬೇಕೆಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ಆಗ್ರಹಿಸಿದ್ದಾರೆ.

    ಈ ಕುರಿತು ಎಕ್ಸ್ ಮೂಲಕ ಪ್ರತಿಕ್ರಿಯಿಸಿದ ಅವರು, ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳ ವಿಚಾರದಲ್ಲಿ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ (Commercial tax department), ದುಡುಕಿ ಹಲವಾರು ವರ್ಷದ ತೆರಿಗೆ ಅದರ ಮೇಲೆ ಬಡ್ಡಿ ಮತ್ತು ಇತರ ಚಾರ್ಜ್ ಹಾಕಿದೆ. ಈ ಮೂಲಕ ಸಣ್ಣ ಬೀದಿಬದಿ ವ್ಯಾಪಾರಸ್ಥರ ಮೇಲೆ ದೊಡ್ಡ ಹೊರೆ ಹೊರೆಸಿ ಅವರು ವ್ಯಾಪಾರ ಮುಚ್ಚುವ ಪರಿಸ್ಥಿತಿಗೆ ತಂದಿರುವುದು ಯಾರೂ ಕೂಡ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ ಕೇಸಲ್ಲಿ ಮೂರೂವರೆ ಗಂಟೆ ಪೊಲೀಸರಿಂದ ಗ್ರಿಲ್ – ಹೊರ ಬರ್ತಿದ್ದಂತೆ ಬೆಂಬಲಿಗರಿಂದ ಜೈಕಾರ

    ಸಂಬಂಧಪಟ್ಟ ಸಣ್ಣ ವ್ಯಾಪಾರಿಗಳ ಪ್ರತಿನಿಧಿಗಳನ್ನು ಕರೆದು ಚರ್ಚೆ ಮಾಡಿ, ಅವರಿಗೆ ಎಲ್ಲ ರೀತಿಯ ರಿಯಾಯಿತಿಗಳನ್ನು ಕೊಟ್ಟು ಕರ ಸಮಾಧಾನ ಯೋಜನೆ ಅಡಿಯಲ್ಲಿ ಯಾವ ರೀತಿ ತೆರಿಗೆದಾರರಿಗೆ ಸಹಾಯ ಮಾಡುತ್ತೇವೊ, ಅದೇ ರೀತಿ ಅವರಿಗೂ ಸಹಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: Uttar Pradesh | ಸ್ಕೂಲ್ ವ್ಯಾನ್‌ನಲ್ಲಿ 4 ವರ್ಷದ ಬಾಲಕಿ ಮೇಲೆ ರೇಪ್ – ಡ್ರೈವರ್ ಬಂಧನ

    ಬೇರೆ ರಾಜ್ಯಗಳಲ್ಲಿ ಈ ವಿಚಾರದಲ್ಲಿ ಏನೆಲ್ಲ ಕ್ರಮ ತೆಗೆದುಕೊಂಡಿದ್ದಾರೆ. ಸಣ್ಣ ವ್ಯಾಪಾರಸ್ಥರು ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಆ ಕ್ರಮ ಇಲ್ಲಿ ಕೂಡ ಅನ್ವಯಿಸಬೇಕೆಂದು ಆಗ್ರಹ ಮಾಡುತ್ತೇನೆ. ರಾಜ್ಯದಲ್ಲಿ ಹಣಕಾಸಿನ ತೊಂದರೆಯಾಗಿ ಬೊಕ್ಕಸ ಖಾಲಿಯಾಗಿರುವುದು ಮತ್ತು ಈ ವರ್ಷದ ಮೊದಲನೇಯ ತ್ರೈಮಾಸಿಕ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಗಾಬರಿಯಿಂದ ತೀವ್ರವಾದ ಕ್ರಮಕ್ಕೆ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಉನ್ನತ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

  • ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ – ಸದನ ಅಲ್ಲೋಲ ಕಲ್ಲೋಲ!

    ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರ; ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕೆಂಡಾಮಂಡಲ – ಸದನ ಅಲ್ಲೋಲ ಕಲ್ಲೋಲ!

    – ಇದು ವಿಷಕಾರುವ ಸರ್ಕಾರವೆಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ
    – ಸದನದಲ್ಲೇ ಬಾವಿಗಿಳಿದು ಬಿಜೆಪಿ ಧರಣಿ

    ಬೆಂಗಳೂರು: ಭಾರೀ ವಿರೋಧದ ನಡುವೆಯೂ ಗುರುವಾರ ಕಾಂಗ್ರೆಸ್‌ (Congress) ನೇತೃತ್ವದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ವಿರುದ್ಧ ಎರಡು ನಿರ್ಣಯ ಮಂಡಿಸಿತು.

    ಕೇಂದ್ರ ಸರ್ಕಾರ ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವು ತೆಗೆದುಕೊಳ್ಳಬೇಕು. ಎಂ.ಎಸ್ ಸ್ವಾಮಿನಾಥನ್ ವರದಿಯ ಶಿಫಾರಸುಗಳು ಜಾರಿ ಆಗಬೇಕು. ರೈತರ (Farmers) ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲು ಶಾಸನ ರೂಪಿಸಬೇಕು ಎಂಬ ನಿರ್ಣಯವನ್ನು ಸದನದಲ್ಲಿ ಅಂಗೀಕರಿಸಲಾಯಿತು. ಇದನ್ನೂ ಓದಿ: 40,000 ರೈಲು ಬೋಗಿಗಳಿಗೆ ಸಿಗಲಿದೆ ವಂದೇ ಭಾರತ್‌ನಂತೆ ಹೈಟೆಕ್‌ ಸ್ಪರ್ಶ – ಏನೆಲ್ಲಾ ವಿಶೇಷತೆ ಇರಲಿದೆ? 

    ಕಾನೂನು ಸಚಿವ ಹೆಚ್.ಕೆ ಪಾಟೀಲ್ (HK Patil) ಬಿಜೆಪಿ ಶಾಸಕರ ವಿರೋಧದ ನಡುವೆಯೂ ನಿರ್ಣಯ ಪ್ರತಿ ಓದಿದರು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 68,200 ಕೋಟಿ ರೂ. ತೆರಿಗೆ ನಷ್ಟ ಆಗಿದೆ ಎಂದು ಆರೋಪಿಸಿದರು. ಜೊತೆಗೆ ಕೇಂದ್ರದಿಂದ ಬರಬೇಕಾದ ಅನುದಾನ ತೆರಿಗೆ ಪಾಲು ಹಾಗೂ ಬರದ ಅಂಕಿ ಅಂಶ ಕುರಿತು ನಿರ್ಣಯ ಮಂಡಿಸಿದರು. ಕರ್ನಾಟಕಕ್ಕೆ ಅನ್ಯಾಯ ಆಗಿದೆ. ನಮ್ಮ ಹಕ್ಕು ಕಸಿದುಕೊಳ್ಳಲಾಗಿದೆ, ಈ ನಿರ್ಣಯವನ್ನು ಸದನ ಸರ್ವಾನುಮತದಿಂದ ಒಪ್ಪಬೇಕು ಎಂದು ಮನವಿ ಮಾಡಿದರು.

    ನಿರ್ಣಯ ಮಂಡಿಸುತ್ತಿದ್ದಂತೆ ಬಿಜೆಪಿ ಶಾಸಕರು (BJP MPLs) ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ವಿಷ ಕಾರುವ ಸರ್ಕಾರ ಕೇಂದ್ರದ ವಿರುದ್ಧ ಪದೇ ಪದೇ ವಿಷ ಕಾರುವ ಸರ್ಕಾರ. ಕೇಂದ್ರ ಸರ್ಕಾರವನ್ನು ಬೈಯುವ ಸರ್ಕಾರ, ಇಂತಹ ಸರ್ಕಾರದ ವಿರುದ್ಧ ನಮ್ಮ ಧಿಕ್ಕಾರ ಧಿಕ್ಕಾರ ಎಂದು ಕೂಗಿ ಗದ್ದಲ ಎಬ್ಬಿಸಿದರು. ಸರ್ಕಾರದ ನಿರ್ಣಯ ಖಂಡಿಸಿ ಸದನದ ಬಾವಿಗಿಳಿದು ಧರಣಿ ನಡೆಸಿದರು.

    ತೀವ್ರ ವಿರೋಧದ ನಡುವೆಯೂ ಕೇಂದ್ರ ಸರ್ಕಾರದ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು. ಇದೇ ವೇಳೆ ಶಾಸಕ ಪ್ರಕಾಶ್ ಕೋಳಿವಾಡ್ ಕರ್ನಾಟಕದಲ್ಲಿ ಮೋಡ ಬಿತ್ತನೆ ಕುರಿತು ಖಾಸಗಿ ವಿಧೇಯಕ ಮಂಡಿಸಿದರು. ಇದನ್ನೂ ಓದಿ: Loksabha Election 2024: ದೆಹಲಿಯಲ್ಲಿ ಕೈಗೆ 3 ಸ್ಥಾನ ಬಿಟ್ಟು ಕೊಟ್ಟು 4 ಸ್ಥಾನಗಳಲ್ಲಿ AAP ಸ್ಪರ್ಧೆ?

    ನಿರ್ಣಯ: 1 ಅನುದಾನ ತಾರತಮ್ಯ ವಿರುದ್ಧ
    ಕರ್ನಾಟಕದ ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸದಂತೆ, ನಾಗರಿಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆಯ ಮತ್ತು ತಾರತಮ್ಯ ರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ತೆಗೆದುಕೊಳ್ಳಬೇಕು ಮತ್ತು ಕರ್ನಾಟಕದ ಜನತೆಯ ಹಿತರಕ್ಷಣೆಯ ವಿಷಯದಲ್ಲಿ ಯಾವುದೇ ಅನ್ಯಾಯವಾಗಬಾರದು.

    ನಿರ್ಣಯ: 2 ರೈತರಿಗೆ ಬೆಂಬಲ ಬೆಲೆ ಕುರಿತ ನಿರ್ಣಯ
    ರೈತರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರ ಶಾಸನ ರೂಪಿಸಬೇಕು. ರೈತರೊಂದಿಗೆ ಸಂಘರ್ಷದ ಹಾದಿ ತುಳಿಯದೇ ಅತ್ಯಂತ ನ್ಯಾಯಯುತವಾದ ಅವರ ಬೇಡಿಕೆಗಳನ್ನು ಈಡೇರಿಸಬೇಕು. ಇದನ್ನೂ ಓದಿ: ಚುನಾವಣೆ ಸ್ಪರ್ಧೆ ಕಾರಣಕ್ಕೆ ಪಕ್ಷಾಂತರ ಮಾಡಿರೋದು ಬೇಸರವಾಗಿದೆ: ಮುದ್ದಹನುಮೇಗೌಡ