Tag: GSR

  • ಭಾರತದಲ್ಲೂ ಶುರುವಾಗಲಿದೆ ಕ್ರ್ಯಾಶ್‌ ಟೆಸ್ಟಿಂಗ್‌ – ಆಟೋಮೊಬೈಲ್‌ಗಳಿಗೆ ಸ್ಟಾರ್ ರೇಟಿಂಗ್‌: ನಿತಿನ್‌ ಗಡ್ಕರಿ

    ಭಾರತದಲ್ಲೂ ಶುರುವಾಗಲಿದೆ ಕ್ರ್ಯಾಶ್‌ ಟೆಸ್ಟಿಂಗ್‌ – ಆಟೋಮೊಬೈಲ್‌ಗಳಿಗೆ ಸ್ಟಾರ್ ರೇಟಿಂಗ್‌: ನಿತಿನ್‌ ಗಡ್ಕರಿ

    ನವದೆಹಲಿ: ಭಾರತದ ಮಾರುಕಟ್ಟೆಯಲ್ಲಿರುವ ಕಾರುಗಳಿಗೆ ಸ್ಟಾರ್ ರೇಟಿಂಗ್ ನೀಡುವ ಹೊಸ ಪ್ರಸ್ತಾವನೆಯೊಂದಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಒಪ್ಪಿಗೆ ಸೂಚಿಸಿದ್ದಾರೆ.

    ಕಾರುಗಳ ಹೊಸ ಮೌಲ್ಯಮಾಪನ ಕಾರ್ಯಕ್ರಮದ ಮೂಲಕ ಕ್ರ‍್ಯಾಶ್ ಟೆಸ್ಟ್‌ಗಳಲ್ಲಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಭಾರತದಲ್ಲಿನ ಆಟೋ ಮೊಬೈಲ್‌ಗಳಿಗೆ ಸ್ಟಾರ್ ರೇಟಿಂಗ್‌ಗಳನ್ನು ನೀಡುವ ಕಾರ್ಯವಿಧಾನ ಇದಾಗಿದೆ. ಇದನ್ನೂ ಓದಿ: ಆಫ್ಘನ್‌ನಲ್ಲಿ ಭೂಕಂಪನ: ಸಾವಿನ ಸಂಖ್ಯೆ 1,150ಕ್ಕೆ ಏರಿಕೆ, 3 ಸಾವಿರ ಮನೆಗಳು ನಾಶ

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಕಾರುಗಳ ಹೊಸ ಮೌಲ್ಯಮಾಪನ ಪದ್ಧತಿ ಭಾರತ್ ಎನ್‌ಸಿಎಪಿ ಗ್ರಾಹಕ ಕೇಂದ್ರಿತ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಗ್ರಾಹಕರು ತಮ್ಮ ಸ್ಟಾರ್-ರೇಟಿಂಗ್‌ಗಳ ಆಧಾರದ ಮೇಲೆ ಸುರಕ್ಷಿತ ಕಾರುಗಳನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದು ಮೂಲ ಉಪಕರಣ ನಡುವೆ ಆರೋಗ್ಯಕರ ಸ್ಪರ್ಧೆಯನ್ನೂ ಉತ್ತೇಜಿಸುತ್ತದೆ. ಸುರಕ್ಷಿತ ವಾಹನಗಳನ್ನು ತಯಾರಿಸಲು ಭಾರತದಲ್ಲಿ ತಯಾರಕರು ಸಹ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ರಾಹುಲ್ ಗಾಂಧಿ ಕಚೇರಿ ಧ್ವಂಸ

    ನಾನು ಕಾರುಗಳ ಹೊಸ ಅಸೆಸ್‌ಮೆಂಟ್ ಪ್ರೋಗ್ರಾಂ ಭಾರತ್ ಎನ್‌ಸಿಎಪಿಯನ್ನು ಪರಿಚಯಿಸಲು ಕರಡು ಜಿಎಸ್‌ಆರ್ ಅಧಿಸೂಚನೆಯನ್ನೂ ಅನುಮೋದಿಸಿದ್ದೇನೆ. ಇದರಲ್ಲಿ ಭಾರತದಲ್ಲಿನ ಆಟೋ ಮೊಬೈಲ್‌ಗಳು ಕ್ರ‍್ಯಾಶ್ ಟೆಸ್ಟ್‌ಗಳಲ್ಲಿನ  ಕಾರ್ಯಕ್ಷಮತೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್‌ಗಳನ್ನು ನೀಡಲಿವೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.

    ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: ಕ್ರ‍್ಯಾಶ್ ಟೆಸ್ಟ್‌ಗಳ ಆಧಾರದ ಮೇಲೆ ಭಾರತೀಯ ಕಾರುಗಳ ಸ್ಟಾರ್ ರೇಟಿಂಗ್‌ಗಳು ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ಮಾತ್ರವಲ್ಲದೆ ಭಾರತೀಯ ಆಟೋ ಮೊಬೈಲ್‌ಗಳ ರಫ್ತು – ಯೋಗ್ಯತೆ ಹೆಚ್ಚಿಸಲೂ ನಿರ್ಣಾಯಕವಾಗಿದೆ ಎಂದು ಹೇಳಿದ್ದಾರೆ.

    ಆಟೋಮೊಬೈಲ್ ಹಬ್ ಆಗಿಸುವ ಉದ್ದೇಶ: ಭಾರತ್ ಎನ್‌ಸಿಎಪಿಯ ಪರೀಕ್ಷಾ ಪ್ರೋಟೋಕಾಲ್ ಅನ್ನು ಜಾಗತಿಕ ಕ್ರ‍್ಯಾಶ್-ಟೆಸ್ಟ್ ಪ್ರೋಟೋಕಾಲ್‌ಗಳೊಂದಿಗೆ ಜೋಡಿಸಲಾಗುತ್ತದೆ. ಈ ಮೂಲಕ EOMಗಳು ತಮ್ಮ ವಾಹನಗಳನ್ನು ಭಾರತದ ಆಂತರಿಕ ಪರೀಕ್ಷಾ ಸೌಲಭ್ಯಗಳಲ್ಲೇ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ ಭಾರತ್ ಎನ್‌ಸಿಎಪಿ ನಮ್ಮ ಆಟೋಮೊಬೈಲ್ ಉದ್ಯಮವನ್ನು ಆತ್ಮನಿರ್ಭರ್ ಮಾಡುವಲ್ಲಿ ಭಾರತವನ್ನು ವಿಶ್ವದ ಅಗ್ರ ಆಟೋ ಮೊಬೈಲ್ ಹಬ್ ಮಾಡುವ ಉದ್ದೇಶ ಹೊಂದಿದ್ದೇವೆ. ಈ ಉದ್ದೇಶವನ್ನು ಸಾಧಿಸಿ ತೋರಿಸಲು ಆಟೋಮೊಬೈಲ್ ಉದ್ಯಮದಲ್ಲಿ ಕ್ರ‍್ಯಾಶ್ ಕಾರು ಟೆಸ್ಟಿಂಗ್ ಆಧರಿಸಿ ಸ್ಟಾರ್ ರೇಟಿಂಗ್ ನೀಡುವುದು ನಿರ್ಣಾಯಕ ಸಾಧನವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವ್ಯಾಖ್ಯಾನಿಸಿದ್ದಾರೆ.

    ಏನಿದು ಕ್ರ್ಯಾಶ್‌ ಟೆಸ್ಟ್?: ಕ್ರ‍್ಯಾಶ್ ಪರೀಕ್ಷೆಯು ತುರ್ತು ಪರಿಸ್ಥಿತಿಯ ಉದ್ದೇಶಗಳಿಗಾಗಿ ಮಾಡುವ ಪರೀಕ್ಷಾ ವಿಧಾನ. ಅಪಘಾತಗಳಲ್ಲಿ ಪ್ರಯಾಣಿಕರು ಮತ್ತು ಚಾಲಕರಿಗೆ ಅಪಾಯಗಳನ್ನು ಕಡಿಮೆ ಮಾಡುವ ರೀತಿಯಲ್ಲಿ ವಾಹನದ ರಚನೆಯ ಸುರಕ್ಷತೆಯನ್ನು ನಿರ್ಣಯಿಸುವುದು. ದೋಷಗಳನ್ನು ಗುರುತಿಸುವುದು ಹಾಗೂ ರಕ್ಷಣಾ ವ್ಯವಸ್ಥೆಯ ದಕ್ಷತೆಯನ್ನು ಸುಧಾರಿಸುವುದು.

    Live Tv