Tag: Gruhalakshmi

  • ಇಂದಿನಿಂದ ಗೃಹಲಕ್ಷ್ಮಿಯರ ಖಾತೆಗೆ ಹಣ: ಲಕ್ಷ್ಮಿ ಹೆಬ್ಬಾಳ್ಕರ್‌ ಘೋಷಣೆ

    ಇಂದಿನಿಂದ ಗೃಹಲಕ್ಷ್ಮಿಯರ ಖಾತೆಗೆ ಹಣ: ಲಕ್ಷ್ಮಿ ಹೆಬ್ಬಾಳ್ಕರ್‌ ಘೋಷಣೆ

    ಮಂಡ್ಯ: ತಾಂತ್ರಿಕ ಕಾರಣದಿಂದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ (Gruhalakshmi Scheme) ಹಣ ಜಮೆ ಆಗಿರಲಿಲ್ಲ. ಇಂದಿನಿಂದ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಜಮೆ ಆಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಘೋಷಣೆ ಮಾಡಿದ್ದಾರೆ.

    ಮಂಡ್ಯದ (Mandya) ಜನಾಂದೋಲನದಲ್ಲಿ (Janandolana) ಮಾತನಾಡಿದ ಅವರು, ನಿನ್ನೆ ಡಿಸಿಎಂ ಭಾಷಣ ಮಾಡುವಾಗ ಗೃಹಲಕ್ಮಿ ಹಣ ಬಂದಿಲ್ಲ ಎಂದು ಮಹಿಳೆಯರು ಹೇಳಿದ್ದರು. ತಾಂತ್ರಿಕ ಕಾರಣದಿಂದ ಹಣ ಬಂದಿರಲಿಲ್ಲ. ಇಂದಿನಿಂದ ಜೂನ್, ಜುಲೈ ತಿಂಗಳ ಹಣ ಖಾತೆಗೆ ಜಮೆಯಾಗಲಿದೆ. ನುಡಿದಂತೆ ನಡೆಯುವವರು ಕಾಂಗ್ರೆಸ್‌ನವರು. ನಮಗೆ ಸಿಕ್ಕ ಅಧಿಕಾರದಲ್ಲಿ ಜನರಿಗೆ ಒಳ್ಳೆಯದು ಮಾಡುತ್ತೇವೆ. ಬರಗಾಲದಲ್ಲಿ ಪರಿಹಾರ ಕೊಡಲು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ ಬಿಜೆಪಿ ಭ್ರಷ್ಟ ಸರ್ಕಾರ ಬಂಡವಾಳಶಾಹಿಗಳ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: Bangladesh Unrest |ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಾಜಾ ಮನೆಗೆ ನುಗ್ಗಿ ಬೆಂಕಿ

    ಪೆನ್ ಡ್ರೈವ್ ಹಂಚುವ ಮೂಲಕ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿದ್ದಾರೆ ಅಂತಿರಲ್ಲಾ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಕುಟುಂಬ ಒಂದು ಕುಟುಂಬ ಅಲ್ವಾ? ನಿಮಗೆ ನಾಚಿಗೆ ಆಗಲ್ವಾ? ಪೆನ್‌ಡ್ರೈವ್ ಹಂಚಿದ್ದು ಪ್ರೀತಂಗೌಡ ಅಂತ ತಾವೇ ಒಪ್ಪಿಕೊಂಡ್ರಲ್ಲ. ಕುಮಾರಣ್ಣ ದೇವೇಗೌಡರ ಕುಟುಂಬಕ್ಕೆ ವಿಷ ಎರೆದರು ಅಂತೀರಾ. ಆದರೆ ದೌರ್ಜನ್ಯಕ್ಕೊಳಗಾದ ಮಹಿಳೆಯರ ಕುಟುಂಬ, ಕುಟುಂಬ ಅಲ್ವಾ? ನೂರಾರು ಮಹಿಳೆಯರ ಮರ್ಯಾದೆ ಬೀದಿ ಪಾಲು ಆಯ್ತಲ್ಲಾ, ನಿಮಗೆ ನಾಚಿಕೆ ಆಗಲ್ವಾ? ಜನಪ್ರತಿನಿಧಿ ಆಗಲು ನಿಮಗೆ ಯಾವ ನೈತಿಕತೆ ಇದೆ? ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಜಿರೆಯ ಸುರ್ಯ ದೇವಸ್ಥಾನಕ್ಕೆ ರಾಧಿಕಾ ಜೊತೆಗೂಡಿ ಆಗಮಿಸಿ ಹರಕೆ ತೀರಿಸಿದ ಯಶ್‌

    ಮುಂದುವರಿದು ಮಾತನಾಡಿ, ಕರ್ನಾಟಕ ಜನತೆ ಬಿಜೆಪಿ ಭ್ರಷ್ಟಾಚಾರ ಕಂಡಿದೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ ಬಿಜೆಪಿ ಜೊತೆ ಕುಮಾರಣ್ಣ ರಾಜಕಾರಣ ಮಾಡ್ತಿದ್ದಾರೆ. ಇದರ ನಡುವೆ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಜೀರೋ ಸಿಕ್ಕಿದ್ದು, ರಾಜ್ಯಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಅನ್ಯಾಯಯವಾಗಿದೆ. ಇದೀಗ ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯಲು ಬಿಜೆಪಿ-ಜೆಡಿಎಸ್ ಗಿಮಿಕ್ ಮಾಡುತ್ತಿದ್ದಾರೆ. ಕ್ಲೀನ್ ಇಮೇಜ್ ಹಾಳು ಮಾಡಲು ಮುಡಾ ಹಗರಣ ಸಿದ್ದರಾಮಯ್ಯ ತಲೆಗೆ ಕಟ್ಟಲು ಯತ್ನಿಸುತ್ತಿದೆ. ಬಿಜೆಪಿ ಸರ್ಕಾರದಲ್ಲಾದ ಹಗರಣಗಳನ್ನು ಕರ್ನಾಟಕದ ಜನ ಮರೆತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಬಾಂಗ್ಲಾ ಕ್ರಾಂತಿ ಹಿಂದೆ ಪಾಕ್‌ ಕೈವಾಡ ಇದ್ಯಾ – ಸರ್ವಪಕ್ಷ ಸಭೆಯಲ್ಲಿ ರಾಹುಲ್‌ ಪ್ರಶ್ನೆಗೆ ಉತ್ತರ ಕೊಟ್ಟ ಜೈಶಂಕರ್‌

  • ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸರ್ಕಾರಿಂದ ಗುಡ್ ನ್ಯೂಸ್!

    ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಸರ್ಕಾರಿಂದ ಗುಡ್ ನ್ಯೂಸ್!

    ಬೆಂಗಳೂರು: ವರಮಹಾಲಕ್ಷ್ಮಿ (Varamahalakshmi) ಹಬ್ಬ ಸಮೀಪಿಸುತ್ತಿದ್ದಂತೆ ಮಹಿಳೆಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆಯಿದೆ. ಗೃಹಲಕ್ಷ್ಮಿ (Gruhalakshmi) ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆಯಾಗುವ ಸಾಧ್ಯತೆಯಿದೆ.

    ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿರಲಿಲ್ಲ. ಈಗ ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ಹಣ ಬಿಡುಗಡೆ ಪ್ರಕ್ರಿಯೆ ಆರಂಭವಾಗಿದ್ದು ನಾಳೆಯೊಳಗೆ 26.65 ಲಕ್ಷ ಅರ್ಹ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಕ್ಷಿಪ್ರಕ್ರಾಂತಿ – ಹಿಂದೂ ದೇವಸ್ಥಾನಗಳ ಮೇಲೆ ಪುಂಡರ ದಾಳಿ

    ಮೊದಲ ಹಂತದಲ್ಲಿ 533 ಕೋಟಿ ರೂ. ಪಾವತಿಯಾಗಲಿದೆ. ಮೊದಲ ಹಂತದಲ್ಲಿ ಬೆಳಗಾವಿ, ಕಲಬುರ್ಗಿ, ಬೀದರ್, ವಿಜಯಪುರ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಬೆಂಗಳೂರು, ಕೋಲಾರ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆಯಾಗಲಿದೆ. ಇದನ್ನೂ ಓದಿ: ರಾಜಾಶ್ರಯಕ್ಕೆ ಹಸೀನಾ ಯುಕೆಗೆ ಹೋಗೋದು ಯಾಕೆ? – ವಾಯುನೆಲೆಯಲ್ಲಿ ದೋವಲ್‌ ಭೇಟಿ

     

  • ಗೃಹಲಕ್ಷ್ಮಿ ಹಣ, ಸರ್ಕಾರದಿಂದ ಚಿಟ್‌ ಫಂಡ್‌ – ಏನಿದು ಹೊಸ ಪ್ಲ್ಯಾನ್‌?

    ಗೃಹಲಕ್ಷ್ಮಿ ಹಣ, ಸರ್ಕಾರದಿಂದ ಚಿಟ್‌ ಫಂಡ್‌ – ಏನಿದು ಹೊಸ ಪ್ಲ್ಯಾನ್‌?

    ಬೆಂಗಳೂರು: ಗ್ಯಾರಂಟಿ (Congress Guarantee) ಗಿಫ್ಟ್ ಕೊಟ್ಟ ಸರ್ಕಾರದಿಂದ ನಯಾ ಪ್ಲ್ಯಾನ್‌ ಸಿದ್ದವಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮಿ (Gruhalakshmi) ಗಿಫ್ಟ್ ಕೊಟ್ಟ ಸರ್ಕಾರ ಅದೇ ದುಡ್ಡನ್ನು ಮಹಿಳೆಯರು ಚಿಟ್‌ಫಂಡ್‌ನಲ್ಲಿ (Chit Fund) ಹೂಡಿಕೆ ಮಾಡುವ ಬೊಂಬಾಟ್ ಸ್ಕೀಮ್‌ನ್ನು ತರಲು ರೆಡಿ ಮಾಡಿದೆ.

    ಹೌದು. ಕೇರಳ ಮಾದರಿಯ ನಯಾ ಚಿಟ್‌ಫಂಡ್‌ನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಎಂಎಸ್‌ಐಎಲ್‌ನಿಂದ ಏಪ್ರಿಲ್‌ನಲ್ಲಿ ಈ ನಯಾ ಸ್ವರೂಪದ ಚಿಟ್‌ಫಂಡ್ ರಾಜ್ಯದ್ಯಾಂತ ಜಾರಿಯಾಗಲಿದೆ. ಪ್ರಮುಖವಾಗಿ ಮಹಿಳೆಯರನ್ನು ಈ ಚಿಟ್‌ಫಂಡ್‌ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಸರ್ಕಾರದ ಉದ್ದೇಶ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

     

    ಹೇಗಿರಲಿದೆ ಚಿಟ್‌ ಫಂಡ್‌?
    ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿರುವುದರಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಚಿಟ್‌ಫಂಡ್ ಉನ್ನತೀಕರಣಕ್ಕೆ ಪ್ಲ್ಯಾನ್‌ ಮಾಡಲಾಗಿದೆ.

    ಕೇರಳದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದ್ದು ಕರ್ನಾಟಕದಲ್ಲಿ ಸದ್ಯ ಚಿಟ್‌ಫಂಡ್ ಉದ್ಯಮ 300 ಕೋಟಿ ರೂ, ಮಾತ್ರವಿದೆ. 10 ಸಾವಿರ ಕೋಟಿ ರೂ. ಲಾಭದಾಯಕವಾಗಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.  ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘಗಳ ಮೂಲಕ ಚಿಟ್‌ಫಂಡ್ ಉದ್ಯಮ ಬಲಪಡಿಸುವ ಗುರಿಯನ್ನು ಹಾಕಲಾಗಿದೆ.

     

  • ಗೃಹಲಕ್ಷ್ಮಿ ಯೋಜನೆ ತಲುಪುವಂತೆ ಮಾಡಲು ಇಲಾಖೆ ವತಿಯಿಂದ ವಿಶೇಷ ಶಿಬಿರ: ಪ್ರಿಯಾಂಕ್ ಖರ್ಗೆ

    ಗೃಹಲಕ್ಷ್ಮಿ ಯೋಜನೆ ತಲುಪುವಂತೆ ಮಾಡಲು ಇಲಾಖೆ ವತಿಯಿಂದ ವಿಶೇಷ ಶಿಬಿರ: ಪ್ರಿಯಾಂಕ್ ಖರ್ಗೆ

    ಕಲಬುರಗಿ: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಲಾಭ ಎಲ್ಲಾ ಫಲಾನುಭವಿಗಳಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.

    ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ ಅವರು, ನಾಡಿನ ಮಹಿಳೆಯರ ಆರ್ಥಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾ, ಜನಪರ ಆಡಳಿತದ ಮೂಲಕ ನುಡಿದಂತೆ ನಡೆಯುತ್ತಿರುವ ನಮ್ಮ ಕಾಂಗ್ರೆಸ್ (Congress) ಸರ್ಕಾರವು ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಮತ್ತಷ್ಟು ಜನರಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವತಿಯಿಂದ ವಿಶೇಷ ಶಿಬಿರವನ್ನು ಆಯೋಜಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಕಾಂಗ್ರೆಸ್ ಪಕ್ಷ ಮಾತ್ರ: ಸಿದ್ದರಾಮಯ್ಯ

    ರಾಜ್ಯದ ಎಲ್ಲಾ 5,000ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಏಕಕಾಲದಲ್ಲಿ ಡಿಸೆಂಬರ್ 27ರಿಂದ 29ರವರೆಗೆ ಮೂರು ದಿನಗಳ ಕಾಲ ಆಧಾರ್ ಜೋಡಣೆ, ಬ್ಯಾಂಕಿಗೆ ಸಂಬಂಧಿಸಿದ ತೊಂದರೆ, ಇ-ಕೆವೈಸಿ ಅಪ್ಡೇಟ್, ಹೊಸ ಬ್ಯಾಂಕ್ ಖಾತೆ ಸಂಪರ್ಕ ಸೇರಿದಂತೆ ಹಲವು ಅಡೆತಡೆಗಳನ್ನು ನಿವಾರಿಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿದೆ. ಸಾರ್ವಜನಿಕರು ಈ ಅಭಿಯಾನದ ಸಂಪೂರ್ಣ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು. ಇದನ್ನೂ ಓದಿ: ಎಲ್ಲದಕ್ಕೂ ಇತಿಮಿತಿ ಇದೆ, ಕಾನೂನು ಕೈಗೆತ್ತಿಕೊಳ್ಳೋಕೆ ಬಿಡಲ್ಲ: ಡಿಕೆಶಿ

  • ದುಡ್ಡು ಕೊಡಿ ಪ್ಲೀಸ್‌ – ಇನ್ನೂ ಬಗೆಹರಿಯದ ಗೃಹಲಕ್ಷ್ಮಿ, ಅನ್ನಭಾಗ್ಯ ಸಮಸ್ಯೆ

    ದುಡ್ಡು ಕೊಡಿ ಪ್ಲೀಸ್‌ – ಇನ್ನೂ ಬಗೆಹರಿಯದ ಗೃಹಲಕ್ಷ್ಮಿ, ಅನ್ನಭಾಗ್ಯ ಸಮಸ್ಯೆ

    – ಪಬ್ಲಿಕ್‌ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಮಹಿಳೆಯರ ಆಕ್ರೋಶ

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ (Congress Guarantee) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ (Gruhalakshmi) ಯೋಜನೆ ಹಳ್ಳಹಿಡಿಯುತ್ತಿದ್ಯಾ ಎಂಬ ಅನುಮಾನ ಶುರುವಾಗಿದೆ.

    ಬೆಂಗಳೂರು, ಹಾಸನ, ರಾಯಚೂರು, ಮಂಡ್ಯ, ಕೋಲಾರ ಜಿಲ್ಲೆಯಲ್ಲಿ ಕೆಲವು ಮಹಿಳೆಯರಿಗೆ (Women) ಮೊದಲ ತಿಂಗಳ ಹಣ ಮಾತ್ರ ಬಂದಿದ್ದರೆ, ಕೆಲವರಿಗೆ ಮೂರು ತಿಂಗಳ ಹಣ ಬಂದಿದೆ. ಆದರೆ ಕಡು ಬಡವರು, ಬೀದಿ ಬದಿ ವ್ಯಾಪಾರಿಗಳಿಗೆ ಒಂದು ತಿಂಗಳ ಹಣವೂ ಬಂದಿಲ್ಲ. ಇದನ್ನೂ ಓದಿ: ಕೃಷಿ ಉಪಕರಣಗಳ ಬೆಲೆ ದುಪ್ಪಟ್ಟು – ಅಂದು 30 ಪೈಪ್‌, 5 ಸ್ಪ್ರಿಂಕ್ಲರ್‌ಗೆ 1,876 ರೂ. – ಈಗ 4,667 ರೂ.ಗೆ ಏರಿಕೆ

     

    ಅಧಿಕಾರಿಗಳನ್ನು ಪ್ರಶ್ನಿಸಿದರೆ ಆಧಾರ್ ಕಾರ್ಡ್ ನಂಬರ್, ಫೋನ್ ನಂಬರ್ ಸರಿಯಲ್ಲ ಎನ್ನುತ್ತಾರೆ. ಎಲ್ಲವನ್ನು ಸರಿಪಡಿಸಿದರೂ ಸಹ ಹಣ ಬಂದಿಲ್ಲ ಎಂದು ಸರ್ಕಾರದ ವಿರುದ್ದ ಮಹಿಳೆಯರು ಕಿಡಿಕಾರಿದ್ದಾರೆ.  ಇದನ್ನೂ ಓದಿ: ಹೊಸ ವರ್ಷಕ್ಕೆ ಎಣ್ಣೆ ಶಾಕ್ ಫಿಕ್ಸ್ – ಜನವರಿಯಿಂದ ಮದ್ಯದ ಬೆಲೆಯಲ್ಲಿ ಭಾರೀ ಏರಿಕೆ

    ಬ್ಯಾಂಕ್ ಹಾಗೂ ಕಂಪ್ಯೂಟರ್ ಸೆಂಟರ್‌ಗಳಲ್ಲಿ ಗ್ಯಾರೆಂಟಿ ಯೋಜನೆ ಹಣದ ಬಗ್ಗೆ ವಿಚಾರಿಸಿ ನಿರಾಶರಾಗಿದ್ದೇವೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿದೆ.

     

    ಅನ್ನಭಾಗ್ಯದ ಹಣವೂ ಇಲ್ಲ:
    ಗ್ಯಾರಂಟಿಗಳನ್ನು ಈಡೇರಿಸುವ ಜಂಬದಲ್ಲಿರುವ ರಾಜ್ಯ ಸರ್ಕಾರ ಸಾಕಷ್ಟು ಜನ ಮಹಿಳೆಯರಿಗೆ ಗೃಹ ಲಕ್ಷ್ಮಿ ಇರಲಿ ಅನ್ನಭಾಗ್ಯ ಹಣವನ್ನೂ (Anna Bhagya Yojana) ಕೊಡುತ್ತಿಲ್ಲ

     

    ಕೋಲಾರ ನಗರದ ನೂರ್ ನಗರದಲ್ಲಿ ಸಾಕಷ್ಟು ಜನ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ 2 ಸಾವಿರ ಹಣ ಮಾತ್ರವಲ್ಲ ಅನ್ನಭಾಗ್ಯ ಯೋಜನೆಯ ಹಣ ಕೂಡ ಸಿಕ್ಕಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬರುತ್ತೆ ಹೋಗಿ ಎನ್ನುತ್ತಾರೆ. ಅಲ್ಲದೆ ಆಹಾರ ಇಲಾಖೆಯಲ್ಲಿ ಕೇಳಿದರೆ ಬ್ಯಾಂಕ್ ಆಧಾರ್ ಲಿಂಕ್ ಮಾಡಿ ಎನ್ನುತ್ತಾರೆ. ಬ್ಯಾಂಕ್‌ನಲ್ಲಿ ವಿಚಾರಿಸಿದರೆ ಆಹಾರ ಇಲಾಖೆಯಲ್ಲಿ ಕೇಳಿ ಎನ್ನುತ್ತಾರೆ. ಹಾಗಾಗಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಮಹಿಳೆಯರು ಸಿಟ್ಟು ಹೊರ ಹಾಕಿದ್ದಾರೆ.

     

  • ಬಾಗಲಕೋಟೆಯಲ್ಲಿ 50 ಸಾವಿರ ಮಂದಿಗೆ ಸಿಕ್ಕಿಲ್ಲ ಗೃಹಲಕ್ಷ್ಮಿಯ 2 ಸಾವಿರ ರೂ.!

    ಬಾಗಲಕೋಟೆಯಲ್ಲಿ 50 ಸಾವಿರ ಮಂದಿಗೆ ಸಿಕ್ಕಿಲ್ಲ ಗೃಹಲಕ್ಷ್ಮಿಯ 2 ಸಾವಿರ ರೂ.!

    ಬಾಗಲಕೋಟೆ: ಕಾಂಗ್ರೆಸ್‍ನ (Congress) ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯು ಪ್ರಮುಖವಾದದ್ದಾಗಿದೆ. ಮನೆಯೊಡತಿಗೆ ಎರಡು ಸಾವಿರ ನೀಡುವ ಯೋಜನೆ ಇದಾಗಿದ್ದು, ಇದರಿಂದ ಮಹಿಳಾಮಣಿಗಳು ಫುಲ್ ಖುಷ್ ಆಗಿದ್ದಾರೆ. ಆದರೆ ಇನ್ನೊಂದು ಕಡೆ ಅದೆಷ್ಟೋ ಮಹಿಳೆಯರು ಹಣ ಬಾರದೇ ಇಂದಿಗೂ ಅಲೆದಾಡುತ್ತಿದ್ದಾರೆ. ಅದೊಂದು ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಇಂದಿಗೂ 50 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಸಿಕ್ಕಿಲ್ಲ.

    ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಕೆಲವರಿಗೆ ಸಿಕ್ಕಿದ್ದರೆ, ಇನ್ನೂ ಕೆಲವರಿಗೆ ಸಿಕ್ಕಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ 2000 ರೂಪಾಯಿ ಹಣ ಇನ್ನೂ ದಕ್ಕಿಲ್ಲ. ಆಧಾರ್ ಸರಿಯಿಲ್ಲ, ಕೆವೈಸಿ, ರೇಷನ್ ಕಾರ್ಡ್ ತಿದ್ದುಪಡಿಗಾಗಿ ಮಕ್ಕಳ ಕಲ್ಯಾಣ ಇಲಾಖೆ, ಕರ್ನಾಟಕ ಒನ್ ಕೇಂದ್ರಗಳಿಗೆ ಯಜಮಾನಿಯರು ನಿತ್ಯ ಅಲೆದಾಡುವಂತಾಗಿದೆ. ಅಧಿಕಾರಿಗಳಿಗೆ ಕೇಳಿದ್ರೆ ತಾಂತ್ರಿಕ ಸಮಸ್ಯೆ ಅಂತಿದ್ದಾರೆ ಅಂತ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

    ಬಾಗಲಕೋಟೆ (Bagalkote) ಜಿಲ್ಲೆಯಲ್ಲಿ ಒಟ್ಟು 4 ಲಕ್ಷದ 34 ಸಾವಿರ 852 ಫಲಾನುಭವಿಗಳ ಗುರಿ ಹೊಂದಲಾಗಿದೆ. ಇದರಲ್ಲಿ 3 ಲಕ್ಷದ 80 ಸಾವಿರದ 312 ಮಂದಿ ನೊಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್ ತಿಂಗಳಲ್ಲಿ 3 ಲಕ್ಷದ 18 ಸಾವಿರದ 270 ಜನರಿಗೆ ತಲಾ 2 ಸಾವಿರ ರೂಪಾಯಿ ಬಂದರೆ 43 ಸಾವಿರದ 438 ಮಂದಿಗೆ ಹಣ (Gruhalakshmi Money) ಬಂದಿಲ್ಲ. ಸೆಪ್ಟಂಬರ್ ನಲ್ಲಿ 3 ಲಕ್ಷದ 17 ಸಾವಿರದ 606 ಜನರಿಗೆ ಹಣ ಬಂದರೆ ಅಗಸ್ಟ್ ನಲ್ಲಿ ಬಂದ ಫಲಾನುಭವಿಗಳ ಪೈಕಿ ಸೆಪ್ಟಂಬರ್ ನಲ್ಲಿ 664 ಮಂದಿಗೆ ಹಣ ಸಿಕ್ಕಿಲ್ಲ.

    ಜಿಲ್ಲೆಯಲ್ಲಿ 46,408 ಮಹಿಳೆಯರ ಹೆಸರು ನೊಂದಣಿ ಆಗಿಯೇ ಇಲ್ಲ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಕೆವೈಸಿ, ರೇಷನ್ ಕಾರ್ಡ್ ತಿದ್ದುಪಡಿ ಸೇರಿದಂತೆ ತಾಂತ್ರಿಕ ಕಾರಣದಿಂದ ಇಷ್ಟೆಲ್ಲ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ.  ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ – ಕುಡುಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?

    ಒಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ‌ (Gruhalakshmi Scheme) ಕೆಲವರಿಗೆ ಪ್ರಸಾದವಾದರೆ ಕೆಲವರಿಗೆ ಕೈಗೆಟುಕದೆ ನಿರಾಸೆಯಾಗಿದೆ. ಆದಷ್ಟು ಬೇಗ ತಾಂತ್ರಿಕ ಸಮಸ್ಯೆಗಳನ್ನು ಸರಿದೂಗಿಸಿ ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕಿದೆ.

  • ಮನೆಬಾಗಿಲಿಗೇ ಅಂಗನವಾಡಿ ಕಾರ್ಯಕರ್ತೆಯರು – ದುಡ್ಡು ಜಮೆಯಾಗದ `ಗೃಹಲಕ್ಷ್ಮಿ’ಯರ ದಾಖಲೆ ಸಂಗ್ರಹ

    ಮನೆಬಾಗಿಲಿಗೇ ಅಂಗನವಾಡಿ ಕಾರ್ಯಕರ್ತೆಯರು – ದುಡ್ಡು ಜಮೆಯಾಗದ `ಗೃಹಲಕ್ಷ್ಮಿ’ಯರ ದಾಖಲೆ ಸಂಗ್ರಹ

    ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ಸನಿಹ ಬರುತ್ತಿದ್ದಂತೆ ಕಾಂಗ್ರೆಸ್ (Congress) ನೇತೃತ್ವದ ರಾಜ್ಯ ಸರ್ಕಾರ ಪಂಚ ಗ್ಯಾರಂಟಿಗಳನ್ನ ಜನರಿಗೆ ತಲುಪಿಸಲು ಸರ್ಕಸ್ ಮಾಡುತ್ತಿದೆ. ಅದರಲ್ಲೂ ಮಹಿಳೆಯರಿಗೆ ಅನುಕೂಲವಾಗುವ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ (Gruhalakshmi) ಸವಾಲುಗಳು ದಿನಕ್ಕೊಂದು ಬರುತ್ತಿದೆ. ಹೀಗಾಗಿ ಗೃಹಲಕ್ಷ್ಮಿ ತಾಂತ್ರಿಕ ದೋಷ ನಿವಾರಣೆಗಾಗಿ ಮನೆಬಾಗಿಲಲ್ಲಿ ದಾಖಲೆ ಸಂಗ್ರಹಕ್ಕೆ ಇಲಾಖೆ ರೆಡಿಯಾಗಿದೆ.

    ಗೃಹಲಕ್ಷ್ಮಿ ಗ್ಯಾರಂಟಿ ಜಾರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದಿನಕ್ಕೊಂದು ಕಸರತ್ತು ನಡೆಸುತ್ತಿದೆ. ಆದರೆ ಈಗ ತಾಂತ್ರಿಕ ದೋಷದ ಪರಿಣಾಮ ಬರೋಬ್ಬರಿ 5-6 ಲಕ್ಷದಷ್ಟು ಗೃಹಲಕ್ಷ್ಮಿಯರಿಗೆ ದುಡ್ಡು ಜಮೆಯಾಗಿಲ್ಲ. ಹೀಗಾಗಿ ಗ್ರಾಮ-ಗ್ರಾಮಗಳಲ್ಲಿ ಅದಾಲತ್‌ಗೆ ತಯಾರಾಗಿದೆ. ಆದರೆ ಅದಾಲತ್‌ಗೂ ಮುನ್ನಾ ಅಂಗನವಾಡಿ ಕಾರ್ಯಕರ್ತೆಯರು (Anganwadi Worker) ಖುದ್ದು ಮನೆಗಳಿಗೆ ತೆರಳಿ, ತಾಂತ್ರಿಕ ದೋಷಗಳ ಕಾರಣ ಹುಡುಕಿ ಪೂರಕ ದಾಖಲೆ ಕಲೆಹಾಕಲಿದ್ದಾರೆ. ಸುಮಾರು 5-6 ಲಕ್ಷದಷ್ಟು ಗೃಹಲಕ್ಷ್ಮಿ ದುಡ್ಡು ಜಮೆಯಾಗದ ಯಜಮಾನಿಯರ ಮನೆ ಬಾಗಿಲಿಗೆ ತೆರಳಿ ದಾಖಲೆ ಸಂಗ್ರಹಿಸಿ, ಅವರಿಗೆ ಹಣ ತಲುಪಲು ಕ್ರಮ ವಹಿಸಲಾಗುತ್ತಿದೆ. ಇದನ್ನೂ ಓದಿ: ನನ್ನ ಅನುವಾದಕರಾಗಿರುವುದು ಕಷ್ಟದ ಕೆಲಸ: ರಾಹುಲ್ ಗಾಂಧಿ ಹೀಗಂದಿದ್ಯಾಕೆ..?

    ಡಿಸೆಂಬರ್ ಅಂತ್ಯದೊಳಗೆ ರಾಜ್ಯದ ಎಲ್ಲಾ ಮಹಿಳೆಯರ ಖಾತೆಗೆ ದುಡ್ಡು ಜಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಈಗಾಗಲೇ ಸಿಎಂ ಟಾರ್ಗೆಟ್ ಕೊಟ್ಟಿದ್ದಾರೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರಿಂದ ಮಾಹಿತಿ ತರಿಸಿಕೊಂಡು, ಬಳಿಕ ಅದಾಲತ್ ಮೂಲಕ ದುಡ್ಡು ಜಮೆಯಾಗುವಂತೆ ಇಲಾಖೆ ನೋಡಿಕೊಳ್ಳಲಿದೆ. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ

    ಇದುವರೆಗೆ ದುಡ್ಡು ಜಮೆಯಾಗದೇ ಇದ್ದವರ ಮನೆ ಬಾಗಿಲಿಗೆ ಬಂದು ಇಲಾಖೆ ಪರಿಹಾರ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ಒಂದು ಕಂತಿನ ದುಡ್ಡು ಬಂದು ಇನ್ನೊಂದು ಕಂತಿನ ದುಡ್ಡು ಬಾರದೇ ಇದ್ದ ಗೃಹಲಕ್ಷ್ಮಿಯರ ಸಮಸ್ಯೆಯನ್ನು ಕೂಡ ಸರ್ಕಾರ ಬಗೆಹರಿಸಬೇಕಾಗಿದೆ. ಇದನ್ನೂ ಓದಿ: Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ

  • ಗೃಹಲಕ್ಷ್ಮಿ ಯೋಜನೆ; ಪ್ರತಿ ತಿಂಗಳು 2,000 ರೂ. ಹಣ ಮೊದಲು ಚಾಮುಂಡೇಶ್ವರಿಗೆ ಅರ್ಪಣೆ

    ಗೃಹಲಕ್ಷ್ಮಿ ಯೋಜನೆ; ಪ್ರತಿ ತಿಂಗಳು 2,000 ರೂ. ಹಣ ಮೊದಲು ಚಾಮುಂಡೇಶ್ವರಿಗೆ ಅರ್ಪಣೆ

    – ದೇವಿಗೆ 59 ತಿಂಗಳ 1,18,000 ರೂ. ಹಣ ಅರ್ಪಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

    ಮೈಸೂರು: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮಾಸಿಕ 2 ಸಾವಿರ ರೂ. ಕೊಡುಗೆಯ ಹಣವನ್ನು ಪ್ರತಿ ತಿಂಗಳು ಮೊದಲು ನಾಡದೇವಿ ತಾಯಿ ಚಾಮುಂಡೇಶ್ವರಿಗೆ (Chamundeshwari) ಅರ್ಪಿಸಿ ನಂತರ ಫಲಾನುಭವಿಗಳಿಗೆ ನೀಡುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

    ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ ಹಿನ್ನೆಲೆಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಪ್ರತಿ ತಿಂಗಳ 2 ಸಾವಿರ ರೂ.ನಂತೆ ಒಟ್ಟು 59 ತಿಂಗಳಿಗೆ 1,18,000 ರೂ. ಹಣವನ್ನು ಅರ್ಪಿಸಲಾಗಿದೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ಈ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದರು. ಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಡಿ.ಕೆ.ಶಿವಕುಮಾರ್ ಸೂಚಿಸಿದ್ದರು. ಇದೀಗ ಪ್ರತಿ ತಿಂಗಳು ಯೋಜನೆಯ ಹಣ ನಾಡದೇವತೆಗೆ ತಲುಪಿಸಲು ವ್ಯವಸ್ಥೆ ಆಗಿದೆ. 59 ತಿಂಗಳ ಹಣವನ್ನು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಂದಾಯ ಮಾಡಿದ್ದಾರೆ.

    ಒಟ್ಟು 1,18,000 ರೂಪಾಯಿ ಹಣ ದೇಗುಲಕ್ಕೆ ನೀಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ ಹಣ ಸಂದಾಯ ಮಾಡಲಾಗಿದೆ. ತಮ್ಮ ವೈಯಕ್ತಿಕ ಹಣವನ್ನು ತಾಯಿ ಚಾಮುಂಡೇಶ್ವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅರ್ಪಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್‌ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ

  • ಯಜಮಾನತಿ ಇಲ್ದಿದ್ರೆ ಹಿರಿಯ ಮಹಿಳೆಗೆ ಗೃಹಲಕ್ಷ್ಮಿ ಹಣ: ಹೆಚ್.ಕೆ ಪಾಟೀಲ್

    ಯಜಮಾನತಿ ಇಲ್ದಿದ್ರೆ ಹಿರಿಯ ಮಹಿಳೆಗೆ ಗೃಹಲಕ್ಷ್ಮಿ ಹಣ: ಹೆಚ್.ಕೆ ಪಾಟೀಲ್

    ಬೆಂಗಳೂರು: ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಹಣವನ್ನು ಹಾಕಲು ಯಜಮಾನತಿ ಇಲ್ಲದಿದ್ದರೆ ಕುಟುಂಬದ ಎರಡನೇ ಹಿರಿಯ ಮಹಿಳೆಗೆ ಹಣ ಹಾಕಲು ಸಂಪುಟದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಫಲಾಭವಿಗಳಿಗೆ ಹಣ ಹಾಕುವ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫಲಾನುಭವಿಗಳಿಗೆ ಹಣ ಹಾಕಲು ಕುಟುಂಬದಲ್ಲಿ ಯಜಮಾನತಿ ಇಲ್ಲದಿದ್ದರೆ ಕುಟುಂಬದಲ್ಲಿ ನಂತರದ ಹಿರಿಯ ಮಹಿಳೆಯ ಖಾತೆಗೆ ಹಣ ಹಾಕಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ- CBIಗೆ ವಹಿಸಿದ್ದ ಕೇಸ್ ಹಿಂಪಡೆಯಲು ಸಂಪುಟ ಸಮ್ಮತಿ

    ಡಿ.ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಯ ಹಿಂದಿನ ಸರ್ಕಾರದ ಆದೇಶ ಹಿಂಪಡೆಯುವ ನಿರ್ಧಾರದ ವಿಚಾರವಾಗಿ, ನಾವು ಅವರನ್ನು ರಕ್ಷಿಸುವ ಕೆಲಸ ಮಾಡಿಲ್ಲ. ಹಿಂದಿನ ಸರ್ಕಾರ ಕಾನೂನು ವಿರುದ್ಧ ನಡೆದುಕೊಂಡಿದೆ. ಮೌಖಿಕ ಆದೇಶಕ್ಕೆ ಸಿಬಿಐ ಶಿಫಾರಸು ಮಾಡಿದ್ದು ಸರಿಯಲ್ಲ. ಕಾನೂನು ಪಾಲನೆ ಅಂದಿನ ಸರ್ಕಾರ ಮಾಡಿಲ್ಲ. ಅಡ್ವೋಕೇಟ್ ಜನರಲ್ ಅಭಿಪ್ರಾಯ ಪಡೆದು ಮುಂದುವರಿದಿದ್ದೇವೆ ಎಂದಿದ್ದಾರೆ.

    ಆರು ತಿಂಗಳವರೆಗೂ ಕಾದು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದ್ದೇವೆ. ನಾವು ಡಿಕೆಶಿ ಅವರನ್ನು ರಕ್ಷಣೆ ಮಾಡಲು ತೀರ್ಮಾನ ಮಾಡಿಲ್ಲ. ಯಾರ ರಕ್ಷಣೆ ಮಾಡುವ ಕೆಲಸವನ್ನೂ ಮಾಡಿಲ್ಲ. ಅಂದು ಮಾಡಿದ ತಪ್ಪು ಸರಿ ಮಾಡುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಡಿ.6ರವರೆಗೂ ಮಾತನಾಡದಂತೆ ಸೂಚಿಸಿದೆ: ಸೋಮಣ್ಣ

  • ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

    ಗೃಹಲಕ್ಷ್ಮಿಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

    ಬೆಂಗಳೂರು: ಗೃಹಲಕ್ಷ್ಮಿ 2,000 ರೂ. ಜಮೆಗೆ ನೂರೆಂಟು ವಿಘ್ನಗಳು. ಗೃಹಲಕ್ಷ್ಮಿಯರಿಗೆ (Gruhalakshmi Scheme) ದುಡ್ಡು ತಲುಪದೇ ಸಾಕಷ್ಟು ಗೊಂದಲ ಉದ್ಭವವಾಗಿತ್ತು. ಆದರೆ ಇದೀಗ ಕೊನೆಗೂ ಇದಕ್ಕೆ ಇತಿಶ್ರೀ ಹಾಕೋಕೆ ಸರ್ಕಾರ ರೆಡಿಯಾಗಿದೆ.

    ರಾಜ್ಯದಲ್ಲಿ ಒಟ್ಟು 1.10 ಕೋಟಿ ಗೃಹಲಕ್ಷ್ಮಿಯರಿಗೆ ಹಣ ಜಮೆಯಾಗಿದ್ರೂ 5-6 ಲಕ್ಷದಷ್ಟು ಮಹಿಳೆಯರಿಗೆ ತಾಂತ್ರಿಕ ದೋಷದಿಂದ ಹಣ ಜಮೆಯಾಗಿರಲಿಲ್ಲ. ಇದೀಗ ಗೃಹಲಕ್ಷ್ಮಿಯರಿದ್ದಡೆಗೆ ಅಧಿಕಾರಿಗಳು ತೆರಳಿ ಅದಾಲತ್ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಪಂಚಾಯತಿ, ನಗರಸಭೆ, ಪುರಸಭೆ ಸೇರಿದಂತೆ ರಾಜ್ಯಾದ್ಯಂತ ಅದಾಲತ್ ನಡೆಯಲಿದ್ದು ಅಕೌಂಟ್‍ಗೆ ದುಡ್ಡು ಬಾರದ ಮಹಿಳೆಯರು ಇಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.

    ಡಿಸೆಂಬರ್ 31 ರೊಳಗೆ ಎಲ್ಲಾ ಫಲಾನುಭವಿಗಳ ಅಕೌಂಟ್‍ಗೆ ಹಣ ಜಮೆ ಮಾಡಲು ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ. ಇದರ ಮಧ್ಯೆ ಸುಮಾರು 50 ಸಾವಿರ ಟ್ಯಾಕ್ಸ್ ಪೇಯರ್ ಮಹಿಳೆಯರು ಕೂಡ ಗೃಹಲಕ್ಷ್ಮಿ ದುಡ್ಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇವರ ಅರ್ಜಿ ತಿರಸ್ಕಾರ ಮಾಡಿರೋದಾಗಿ ಸಚಿವೆ ತಿಳಿಸಿದ್ದಾರೆ.

    ಏಕಕಾಲಕ್ಕೆ ಬಾಕಿ ಕಂತಿನ ದುಡ್ಡನ್ನು ಪಾವತಿ ಮಾಡೋದಾಗಿ ಕೂಡ ಇಲಾಖೆ ಹೇಳಿದೆ. ಒಟ್ಟಿನಲ್ಲಿ ಡಿಸೆಂಬರ್ (December) ನೊಳಗಾದ್ರೂ ಗೃಹಲಕ್ಷ್ಮಿಯರ ಗೊಂದಲ ಬಗೆಹರಿಯುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ರೆಬೆಲ್ ರಮೇಶ್ ಜಾರಕಿಹೊಳಿ ಭೇಟಿಯಾದ ವಿಜಯೇಂದ್ರ: ಗೋಕಾಕ್ ಸಾಹುಕಾರನ ಮನವೊಲಿಕೆ ಸಕ್ಸಸ್