Tag: Gruhajyothi Scheme

  • ಬೆಸ್ಕಾಂ ಎಡವಟ್ಟು; 1 ತಿಂಗಳಿಗೆ ಬರೋಬ್ಬರಿ 5.86 ಲಕ್ಷ ರೂ. ವಿದ್ಯುತ್‌ ಬಿಲ್‌ – ಹೌಹಾರಿದ ಮನೆ ಮಾಲೀಕ

    ಬೆಸ್ಕಾಂ ಎಡವಟ್ಟು; 1 ತಿಂಗಳಿಗೆ ಬರೋಬ್ಬರಿ 5.86 ಲಕ್ಷ ರೂ. ವಿದ್ಯುತ್‌ ಬಿಲ್‌ – ಹೌಹಾರಿದ ಮನೆ ಮಾಲೀಕ

    ಬೆಂಗಳೂರು: ಸಾಮಾನ್ಯವಾಗಿ 1 ಮನೆಗೆ ತಿಂಗಳಿಗೆ ಹೆಚ್ಚೆಂದರೆ 1,000 ರೂ. ವಿದ್ಯುತ್ ಬಿಲ್ (Electricity Bill) ಬರೋದನ್ನ ನೋಡಿರ್ತೀವಿ. ಅದ್ರಲ್ಲೂ ಗೃಹಜ್ಯೋತಿ ಯೋಜನೆ (Gruhajyothi Scheme) ಜಾರಿಯಾದಾಗಿನಿಂದ ಬಹುತೇಕ ಮನೆಗಳಿಗೆ ಉಚಿತ ವಿದ್ಯುತ್‌ ಪೂರೈಕೆಯಾಗುತ್ತಿದೆ. ಆದ್ರೆ, ಬೆಂಗಳೂರಿನ ನಿವಾಸಿಯೊಬ್ಬರ ಮನೆಗೆ 1 ತಿಂಗಳಿಗೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಮೌಲ್ಯದ ಬಿಲ್ ಬಂದಿದೆ. ಬಿಲ್‌ ರಶೀದಿ ನೋಡಿ ಮನೆ ಮಾಲೀಕ ಹೌಹಾರಿದ್ದಾರೆ.

    ಬೆಂಗಳೂರಿನ (Bengaluru) ಬ್ಯಾಟರಾಯನಪುರದ ಎಸ್.ಎಂ ವಿಶ್ವೇಶ್ವರಯ್ಯ ಬಡಾವಣೆಯ ಮನೆಯ ಜುಲೈ ತಿಂಗಳ ವಿದ್ಯುತ್‌ ಬಿಲ್‌ ಬರೋಬ್ಬರಿ 5,86,736 ರೂ. ಬಂದಿದೆ. ಈ ಬಿಲ್ ಕಂಡು ಮನೆ ಮಾಲೀಕ ಪ್ರಸನ್ನ ಕುಮಾರ್‌ ಅಯ್ಯಂಗಾರ್ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ನಾಗಸಂದ್ರ-ಮಾದವರ ನಡುವೆ ಸಿಗ್ನಲಿಂಗ್ ಕಾರ್ಯ; ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ

    ಜುಲೈ ತಿಂಗಳ ವಿದ್ಯುತ್‌ ಬಿಲ್‌ ಆಗಸ್ಟ್‌ನಲ್ಲಿ ಬಂದಿದ್ದು, ಗೂಗಲ್ ಪೇನಲ್ಲಿ ಬಿಲ್ ಮೊತ್ತ ನೋಡಿ ದಂಗಾಗಿದ್ದಾರೆ. ಪ್ರಸನ್ನಕುಮಾರ್‌ ಅವರಿಗೆ 2ನೇ ಬಾರಿಗೆ ಹೀಗೆ ಎಡವಟ್ಟಾಗಿದೆ. ಈ ಹಿಂದೆ ಮೇ ತಿಂಗಳ ಬಿಲ್ ಜೂನ್ ತಿಂಗಳಲ್ಲಿ 5,91,087 ರೂ. ಬಿಲ್ ಬಂದಿತ್ತು. ಆಗ 1 ತಿಂಗಳು ಸರಿಪಡಿಸಿ, ಜುಲೈ ತಿಂಗಳಲ್ಲಿ ಕೇವಲ 214 ರೂ. ಮಾತ್ರ ಬಿಲ್ ಪಾವತಿಸಿದ್ದರು. ಆದ್ರೇ ಆಗಸ್ಟ್​ನಲ್ಲಿ 5,86,736 ರೂ. ಬಿಲ್ ಬಂದಿದೆ. ಇದರಿಂದಾಗಿ 100, 200 ರೂ. ರೂ. ಬರುತ್ತಿದ್ದ ಬಿಲ್ ಏಕಾಏಕಿ ಲಕ್ಷಾಂತರ ರೂ.ಗೆ ಬಂದಿರೋದು ಮನೆ ಮಾಲೀಕರು ಹೌಹಾರಿದ್ದಾರೆ.

    ಈ ಕುರಿತು ಮಾತನಾಡಿರುವ ಪ್ರಸನ್ನಕುಮಾರ್ ಅಯ್ಯಂಗಾರ್, 5 ಲಕ್ಷದಷ್ಟು ಬಿಲ್ ಬರಬೇಕಾದ್ರೇ ಸುಮಾರು 80,000 ವಿದ್ಯುತ್ ಬಳಸಿರಬೇಕು. ಆದ್ರೆ ನಾನು 2020ರ ಸೆಪ್ಟೆಂಬರ್‌ನಿಂದ ಮನೆಯ ಟೆರಸ್ ಮೇಲೆ 3 ಕೆ.ಬಿ ಸೋಲಾರ್ ಪ್ಯಾನಲ್​ಗಳನ್ನು ಅಳವಡಿಸಿಕೊಂಡಿದ್ದೇನೆ. ಜೊತೆಗೆ 5 ಕೆಬಿ ಬ್ಯಾಟರಿ ಬ್ಯಾಕ್ ಅಪ್ ಇದೆ. ಹೀಗಾಗಿ ಬೆಸ್ಕಾಂ ಪವರ್‌ ಅನ್ನು ಹೆಚ್ಚಾಗಿ ಬಳಸುತ್ತಿಲ್ಲ. ನಾವೇನು ಫ್ಯಾಕ್ಟರಿ ಇಟ್ಟಿಲ್ಲ, ಆದ್ರೂ ಇಷ್ಟು ಬಿಲ್ ಬಂದಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರದ ವಿರೋಧ ಪಕ್ಷವನ್ನು ಮಣಿಸಲು ರಾಜ್ಯಪಾಲರನ್ನು ಏಜೆಂಟರಾಗಿ ಬಳಸುತ್ತಿದ್ದಾರೆ: ಆರ್.ವಿ ದೇಶಪಾಂಡೆ

    ಅಲ್ಲದೇ ಬೆಸ್ಕಾಂ ಮುಖ್ಯ ಕಚೇರಿಗೆ ದೂರು ನೀಡಲು ಮುಂದಾಗಿದ್ದೇನೆ. ಇಂತಹ ಟೆಕ್ನಿಕಲ್ ಸಮಸ್ಯೆಯಾದ್ರೂ ಬೆಸ್ಕಾಂ ಬಿಲ್ ಕೊಡುವಾಗ ಚೆಕ್ ಮಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ನಾನು ಯಾವುದೇ ತಪ್ಪು ಮಾಡಿಲ್ಲ.. ನ್ಯಾಯಾಲಯದಲ್ಲಿ ಪರಿಹಾರ ಸಿಗುವ ವಿಶ್ವಾಸ ಇದೆ: ಸಿದ್ದರಾಮಯ್ಯ

  • Gruhajyothi Scheme: 5 ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ – ಸಿದ್ದರಾಮಯ್ಯ

    Gruhajyothi Scheme: 5 ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ – ಸಿದ್ದರಾಮಯ್ಯ

    ಕಲಬುರಗಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ `ಗೃಹಜ್ಯೋತಿ’ ಯೋಜನೆಗೆ (Gruhajyothi Scheme) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ತವರು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದರು.

    ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ಇವತ್ತಿನ ದಿನ ಐತಿಹಾಸಿಕ ದಿನ. ಜ್ಯೋತಿ ಬೆಳಗಿಸುವ ಮೂಲಕ ಖರ್ಗೆ ಅವರ ತವರು ಕ್ಷೇತ್ರದಲ್ಲಿ ಚಾಲನೆ ನೀಡಿದ್ದೇವೆ. ಚುನಾವಣಾ ಪೂರ್ವದಲ್ಲಿ 5 ಗ್ಯಾರಂಟಿಗಳನ್ನ ಘೋಷಿಸಿ ರಾಜ್ಯದ ಜನರಿಗೆ ವಾಗ್ದಾನ ಮಾಡಿದ್ದೆವು. ನಾನು, ಡಿಕೆಶಿ ಗ್ಯಾರಂಟಿ ಕಾರ್ಡ್‌ಗೆ (Guarantee Card) ಸಹಿ ಮಾಡಿ ಹಂಚಿದ್ದೆವು. ಜನ ಗ್ಯಾರಂಟಿ ನಂಬಿ ಆಶೀರ್ವಾದ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿ ತಂದು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: Gruhajyothi Scheme: ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಿಎಂ

    ಈ ಹಿಂದೆ ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರದಲ್ಲಿದ್ದಾಗ 160 ಭರವಸೆಗಳಲ್ಲಿ 145 ಭರವಸೆಗಳನ್ನ ಈಡೇರಿಸಿದ್ದೇವೆ. ಈ ಬಾರಿಯೂ ಮುಂದಿನ 5 ವರ್ಷದಲ್ಲಿ ನಮ್ಮ ಪ್ರಣಾಳಿಕೆಯ ಎಲ್ಲಾ ಅಂಶ ಜಾರಿಗೆ ತರುತ್ತೆವೆ ಎಂದು ಭರವಸೆ ನೀಡಿದರು.

    ಈ ಐದು ಗ್ಯಾರಂಟಿ ಕೊಟ್ಟರೆ, ದೇಶ ಆರ್ಥಿಕವಾಗಿ ದಿವಾಳಿಯಾಗುತ್ತೆ ಎಂದು ಪ್ರಧಾನಿ ಮೋದಿ (Narendra Modi) ಹೇಳಿದ್ದಾರೆ. ನಾವು ಐದು ಗ್ಯಾರಂಟಿ ಕೊಟ್ಟು ಆರ್ಥಿಕ ಶಿಸ್ತನ್ನೂ ಕೊಡುತ್ತೆವೆ. ಪ್ರಧಾನಿಮೋದಿ ಅವರು ರಾಜ್ಯದ ಎಲ್ಲಾ ಯೋಜನೆಗಳನ್ನ ಸಹ ನಿಲ್ಲಿಸುತ್ತಾರೆ. ಈ ರಾಜ್ಯದಲ್ಲಿ ದುರಾಡಳಿತ ಮಾಡಿ ಲೂಟಿ ಮಾಡಿ ಈ ರಾಜ್ಯದ ಜನರಿಗೆ ಅನ್ಯಾಯ ಮಾಡಿದವರು ಬಿಜೆಪಿ. ನಾವು ಅಧಿಕಾರದಲ್ಲಿದ್ದಾಗ 16 ಲಕ್ಷ ಮನೆ ಕಟ್ಟಿಸಿದ್ದಿವಿ. ಆದ್ರೆ ಬಿಜೆಪಿ ಅವರು ಕೇವಲ 8 ಲಕ್ಷ ಮನೆ ಕಟ್ಟಿಸಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಅನ್ಯಕೋಮಿನ ಸದಸ್ಯನಿಗೆ ದಕ್ಕಿದ ಅಧ್ಯಕ್ಷ ಸ್ಥಾನ – 19 ಗ್ರಾಪಂ ಸದಸ್ಯರಿಂದ ಸಾಮೂಹಿಕ ರಾಜೀನಾಮೆ

    ಕೇಂದ್ರದ ಮೋದಿ ಸರ್ಕಾರ, ರಾಜ್ಯದಲ್ಲಿದ್ದ ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದಿಂದ ನಾವು ಆರ್ಥಿಕವಾಗಿ ಹಿಂದೆ ಹೋಗಿದ್ದೆವೆ. ಆದ್ರೆ ಕಾಂಗ್ರೆಸ್ ಜಾರಿಗೆ ತಂದ ಶಕ್ತಿ ಯೋಜನೆಯಿಂದ ಪ್ರತಿದಿನ 50 ಲಕ್ಷ ಹೆಣ್ಣುಮಕ್ಕಳು ಬಸ್ ನಲ್ಲಿ ಉಚಿತ ಸಂಚಾರ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿ ಅವರಿಗೆ ಹೊಟ್ಟೆ ಉರಿ ಬಂದಿದೆ. ಬಿಜೆಪಿಯವರಿಗೆ ತಾಕತ್ತಿದ್ದರೆ ಇಡೀ ದೇಶದಲ್ಲಿ ಈ ಯೋಜನೆ ಜಾರಿ ಮಾಡಲಿ ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಸವಾಲ್ ಹಾಕಿದರು.

    ನಾವು ನುಡಿದಂತೆ ನಡೆದಿದ್ದೇವೆ. 200 ಯೂನಿಟ್ ಉಚಿತ ವಿದ್ಯುತ್ ಅಂತಾ ಹೇಳಿದ್ದೇವೆ. 2.14 ಕೋಟಿ ನೋಂದಣಿ ಮಾಡಿಕೊಳ್ಳಬೇಕಾದವರಿದ್ದಾರೆ. ಈಗಾಗಲೇ 1.40 ಕೋಟಿ ಮಂದಿ ನೋಂದಣಿ ಮಾಡಿಸಿದ್ದಾರೆ. ಇದೇ ತಿಂಗಳಿAದ ಶೂನ್ಯ ಬಿಲ್ ಜಾರಿಗೆ ತಂದಿದ್ದೇವೆ. ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 24 ರಂದು ಚಾಲನೆ ಕೊಡ್ತೀವಿ. ನಿಜವಾಗಿಯೂ ಬಡವರ ವಿರೋಧಿ ಕೆಲಸ ಮಾಡ್ತಿರೋದು ಬಿಜೆಪಿಯವರು. ಎಫ್‌ಸಿಐ ಅಕ್ಕಿ ಕೊಡ್ತೀವಿ ಅಂದ್ರೂ ಕೇಂದ್ರ ಬಿಜೆಪಿ ಸರ್ಕಾರ ಬಿಡಲಿಲ್ಲ. ಒಂದು ಕೆಜಿ ಅಕ್ಕಿ ಕಡಿಮೆ ಮಾಡಿದ್ರೂ ಹೋರಾಟ ಮಾಡ್ತೀವಿ ಅನ್ನೋ ಈಶ್ವರಪ್ಪ, ಯಡಿಯೂರಪ್ಪ ಅವರು ಅಕ್ಕಿ ಕಡಿಮೆ ಮಾಡಿದಾಗ ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಗೃಹಜ್ಯೋತಿ’ ಗ್ಯಾರಂಟಿಗೆ ಇಂದು ಚಾಲನೆ; ಕಲಬುರಗಿಯಲ್ಲಿ ಸಿಎಂ ಉದ್ಘಾಟನೆ – ಖರ್ಗೆ ತವರಲ್ಲಿ ಸಿದ್ಧತೆ

    ‘ಗೃಹಜ್ಯೋತಿ’ ಗ್ಯಾರಂಟಿಗೆ ಇಂದು ಚಾಲನೆ; ಕಲಬುರಗಿಯಲ್ಲಿ ಸಿಎಂ ಉದ್ಘಾಟನೆ – ಖರ್ಗೆ ತವರಲ್ಲಿ ಸಿದ್ಧತೆ

    ಕಲಬುರಗಿ: ಐದು ಗ್ಯಾರಂಟಿ (Congress Guarantee) ಯೋಜನೆಗಳ ಪೈಕಿ ಒಂದಾಗಿರುವ ಗೃಹಜ್ಯೋತಿ ಯೋಜನೆಗೆ (Gruhajyothi Scheme) ಇಂದು (ಶನಿವಾರ) ಕಲಬುರಗಿ (Kalaburagi) ನಗರದಲ್ಲಿ ವಿದ್ಯುಕ್ತವಾಗಿ ಚಾಲನೆ ಸಿಗಲಿದೆ. ಇದಕ್ಕಾಗಿ ನಗರದ ಎನ್‌ವಿ ಕಾಲೇಜು ಮೈದಾನದಲ್ಲಿ ಕಲಬುರಗಿ ಜಿಲ್ಲಾಡಳಿತ ಮತ್ತು ಜೆಸ್ಕಾಂ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

    ಇಂದು ಬೆಳಗ್ಗೆ 11:30 ಕ್ಕೆ 10 ಜನ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ವಿದ್ಯುತ್ ಬಿಲ್ ನೀಡುವುದರ ಮೂಲಕ ಸಿಎಂ ಸಿದ್ದರಾಮಯ್ಯ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್, ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ರಹೀಂಖಾನ್ ಸೇರಿದಂತೆ ಅನೇಕ ಸಚಿವರು, ಶಾಸಕರು ಹಾಗೂ ಸಂಸದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಫಾರಿನ್‍ನಿಂದ ಬಂದ ಹೆಚ್‍ಡಿಕೆಯಿಂದ ಮಿಡ್‍ನೈಟ್ ಬಾಂಬ್?: ಮೆಸ್‍ನಲ್ಲಿ ನಡೆದ ಸಭೆಯಲ್ಲಿ YST!

    ಕಾರ್ಯಕ್ರಮಕ್ಕೆ ಕರ್ನಾಟಕ ಭಾಗದ ಏಳು ಜಿಲ್ಲೆಗಳ 20 ಸಾವಿರಕ್ಕೂ ಅಧಿಕ ಜನ ಬರಲಿದ್ದಾರೆ. 2024 ರ ಲೋಕಸಭಾ ಚುನಾವಣೆ ದೃಷ್ಟಿಕೋನದಿಂದ ಕಾಂಗ್ರೆಸ್ ಸರ್ಕಾರ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಚಾಲನೆ ಮಾಡುವುದರ ಮೂಲಕ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಾಕ್ಷಿಯಾಗಲಿದೆ.

    ಸಮಾರಂಭಕ್ಕೆ ಜನರನ್ನು ಕರೆತರಲು 282 ಸಾರಿಗೆ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಕಾರ್ಯಕ್ರಮದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಿ ಎನ್‌ವಿ ಕಾಲೇಜು ಮೈದಾನದ ಸುತ್ತ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಉಡುಪಿಯಿಂದ ಅದೆಷ್ಟು ವೀಡಿಯೋಗಳು ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿದ್ಯೋ ಗೊತ್ತಿಲ್ಲ – ಮುತಾಲಿಕ್ ಆತಂಕ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರ ಹೆಸರು ಹಾಕದೇ ಪ್ರೋಟೋಕಾಲ್‌ ಉಲ್ಲಂಘನೆ – ಶಾಸಕ ಕೆ.ಸಿ ರಾಮಮೂರ್ತಿ ದೂರು

    ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರ ಹೆಸರು ಹಾಕದೇ ಪ್ರೋಟೋಕಾಲ್‌ ಉಲ್ಲಂಘನೆ – ಶಾಸಕ ಕೆ.ಸಿ ರಾಮಮೂರ್ತಿ ದೂರು

    ಬೆಂಗಳೂರು: ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕರಿಗೆ ಆಹ್ವಾನ ನೀಡದೇ ಶಿಷ್ಟಾಚಾರ (Protocol) ಉಲ್ಲಂಘನೆ ಮಾಡಲಾಗಿದೆ ಅಂತ ಜಯನಗರ ಶಾಸಕ ಕೆ.ಸಿ ರಾಮಮೂರ್ತಿ (KC Ramamurthy) ಸ್ಪೀಕರ್‌ಗೆ ದೂರು ನೀಡಿದ್ದಾರೆ.

    ವಿಧಾನಸೌಧದಲ್ಲಿ ಸ್ಪೀಕರ್‌ಗೆ ದೂರು ಕೊಟ್ಟ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಆಗಸ್ಟ್‌ 5 ರಂದು ಗೃಹಜ್ಯೋತಿ (Gruhajyothi Scheme) ಉದ್ಘಾಟನೆ ಕಾರ್ಯಕ್ರಮ ಇದೆ. ಸಿಎಂ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಶಿಷ್ಟಾಚಾರದ ಪ್ರಕಾರ ಎಲ್ಲಾ ಶಾಸಕರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇರಬೇಕು. ಆದ್ರೆ ನನ್ನ ಹೆಸರು ಆಹ್ವಾನ ಪತ್ರಿಕೆಯಲ್ಲಿ ಇಲ್ಲ. ಶಾಸಕರ ಹೆಸರು ಹಾಕದೇ ಶಿಷ್ಟಾಚಾರ ಉಲ್ಲಂಘನೆ ಆಗಿದೆ ಅಂತ ಆರೋಪ ಮಾಡಿದ್ರು. ಇದನ್ನೂ ಓದಿ: ಬಿಜೆಪಿ ಶಾಸಕರ ಅಮಾನತು ಕ್ರಮ ಅಕ್ಷಮ್ಯ; ಮುಳ್ಳು ಚುಚ್ಚಿದ್ದಕ್ಕೆ ಕಾಲು ಕತ್ತರಿಸಿಕೊಂಡಂತೆ: ಕಾಗೇರಿ

    ಅನ್ನಭಾಗ್ಯ ಯೋಜನೆ (Anna Bhagya Scheme) ಉದ್ಘಾಟನೆ ವೇಳೆಯೂ ನನ್ನ ಹೆಸರು ಹಾಕಿರಲಿಲ್ಲ. ಗೋಪಾಲಯ್ಯ ಅವರಿಗೂ ಹೀಗೆ ಮಾಡಿದ್ರು. ಈಗ ನನ್ನ ಹೆಸರು ಹಾಕಿಲ್ಲ. ಹೀಗಾಗಿ ಸ್ಪೀಕರ್‌ಗೆ ದೂರು ನೀಡಿದ್ದೇನೆ. ಇಂತಹ ಕೆಲಸ ಮಾಡಿರೋ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸ್ಪೀಕರ್ ಗೆ ದೂರು ನೀಡಿದ್ದೇನೆ. ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವಂತೆ ಸ್ಪೀಕರ್ ಗೆ ಮನವಿ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಅಪಘಾತಗಳ‌ ನಿಯಂತ್ರಣಕ್ಕೆ ಗಡ್ಕರಿಗೆ ಸಿದ್ದರಾಮಯ್ಯ ಮನವಿ

    ಬಿಜೆಪಿಯಿಂದ ಗೆದ್ದ ಶಾಸಕರಿಗೆ ಹೀಗೆ ಮಾಡ್ತಿದ್ದಾರೆ. ಉದ್ದೇಶ ಪೂರ್ವಕವಾಗಿ ಹೀಗೆ ಸರ್ಕಾರ ಮಾಡುತ್ತಿದೆ ಅನ್ನಿಸುತ್ತೆ. ಲೋಪ ಸರಿ ಮಾಡಿ ಹೊಸ ಆಹ್ವಾನ ಪತ್ರಿಕೆ ಮುದ್ರಿಸಬೇಕು. ಇಲ್ಲದೆ ಹೋದ್ರೆ ಆಗಸ್ಟ್ 5 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಭಟನೆ ಮಾಡ್ತೀನಿ ಅಂತ ಜಯನಗರ ಬಿಜೆಪಿ ಶಾಸಕ ರಾಮಮೂರ್ತಿ ಎಚ್ಚರಿಕೆ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯುತ್ ಬಿಲ್ ಹಿಂಬಾಕಿ ಇದ್ದರೂ ಸಿಗಲಿದೆ ಗೃಹಜ್ಯೋತಿ ಪ್ರಯೋಜನ

    ವಿದ್ಯುತ್ ಬಿಲ್ ಹಿಂಬಾಕಿ ಇದ್ದರೂ ಸಿಗಲಿದೆ ಗೃಹಜ್ಯೋತಿ ಪ್ರಯೋಜನ

    ಬೆಂಗಳೂರು: ವಿದ್ಯುತ್ ಬಿಲ್ (Electricity Bill) ಹಿಂಬಾಕಿ ಇದ್ದರೂ ಗೃಹಜ್ಯೋತಿ ಯೋಜನೆಯ (GruhaJyothi Scheme) ಪ್ರಯೋಜನ ಸಿಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (KJ George) ಕಚೇರಿ ವಿಶೇಷ ಪ್ರಕಟಣೆ ಹೊರಡಿಸಿದೆ.

    ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ. ಹಿಂಬಾಕಿಯನ್ನು ಸೆ.30 ರೊಳಗೆ ಪಾವತಿಸಬೇಕು. ಮೂರು ತಿಂಗಳು ಕಾಲಾವಕಾಶ ಇದೆ ಎಂದು ಪ್ರಕಟಣೆ ತಿಳಿಸಿದೆ.

    ನೀವು ಜುಲೈ 25 ರೊಳಗೆ ಯೋಜನೆಗೆ ನೋಂದಾಯಿಸಿಕೊಂಡಲ್ಲಿ ಆಗಸ್ಟ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರಕಲಿದೆ. ಹಾಗೆಯೇ ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ. ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸ್ವೀಕರಿಸುತ್ತೇವೆ, ಎಷ್ಟೇ ಕಷ್ಟ ಬಂದರೂ ಐದು ಗ್ಯಾರಂಟಿಗಳನ್ನು ಜಾರಿ ಮಾಡುತ್ತೇನೆ: ಸಿಎಂ

     

    ಬಿಲ್ಲಿಂಗ್ ಅವಧಿ ಪ್ರತಿ ತಿಂಗಳ 25ನೇ ದಿನಾಂಕದಿಂದ ಮುಂದಿನ ತಿಂಗಳ 25 ನೇ ದಿನಾಂಕದವರೆಗೆ ಇರುತ್ತದೆ. ಈ ಪ್ರಯೋಜನ ಪಡೆಯಲು ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು. ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಜುಲೈ 25 ರ ನಂತರ ಅರ್ಜಿ ಸಲ್ಲಿಸಿದರೆ ಅವರಿಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್‌ನಲ್ಲಿ ಪ್ರಯೋಜನ ಸಿಗುವುದಿಲ್ಲ. ಆದರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಪಡೆಯಲಿದ್ದಾರೆ. ಹಾಗಾಗಿ ಯೋಜನೆಯ ನೋಂದಣಿಗೆ ವಿಳಂಬ ಬೇಡ. ಪ್ರಯೋಜನ ಪಡೆಯಲು ಇಂದೇ ನೋಂದಾಯಿಸಿಕೊಳ್ಳಿ ಎಂದು ಇಂಧನ ಸಚಿವರ ಕಚೇರಿ ಪ್ರಕಟಣೆ ತಿಳಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಬೆಂಗಳೂರು: ಸದ್ಯ ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆ (Gruhajyothi Scheme) ಅಡಿಯಲ್ಲಿ ಷರತ್ತುಗಳೊಂದಿಗೆ ಉಚಿತ ವಿದ್ಯುತ್ (Free Electricity) ನೀಡಲು ಅರ್ಜಿ ಆಹ್ವಾನಿಸುತ್ತಿದೆ. ಉಚಿತ ವಿದ್ಯುತ್ ಪ್ರಯೋಜನ ಪಡೆಯಲು 50 ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ವಿದ್ಯುತ್ ಶುಲ್ಕ ಹೆಚ್ಚಾಗಿದ್ದು ಏಪ್ರಿಲ್‌ನಿಂದಲೇ ಏರಿಕೆಯಾದ ದರವನ್ನು ಈ ಬಾರಿ ಹಾಕಿದ ಪರಿಣಾಮ ಬಿಲ್ ಜಾಸ್ತಿ ಎಂಬ ಉತ್ತರವನ್ನ ಬೆಸ್ಕಾಂ (Bescom) ಹೇಳಿಯೂ ಆಗಿದೆ. ಆದ್ರೆ ಬೆಸ್ಕಾಂನವರು ಮಾತ್ರ ಬಿಲ್ (Electricity Bill) ಹಾಕುವಾಗ ಮಾಡಿರುವ ಎಡವಟ್ಟುಗಳು ಈಗ ಬೆಳಕಿಗೆ ಬರ್ತಿದೆ.

    ಹೌದು. ಕಾಂಗ್ರೆಸ್ ಸರ್ಕಾರ (Congress Government) ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆ ಅಡಿಯಲ್ಲಿ ಷರತ್ತುಗಳೊಂದಿಗೆ 200 ಯುನಿಟ್ ವಿದ್ಯುತ್ ಉಚಿತ ಯೋಜನೆಯನ್ನ ಜಾರಿಗೊಳಿಸಲು ಅರ್ಜಿ ಸಲ್ಲಿಕೆಯೂ ಆರಂಭವಾಗಿದೆ. ಈ ನಡುವೆ ಜೂನ್ ತಿಂಗಳಲ್ಲಿ ಸರಿಯಾದ ಸಮಯಕ್ಕೆ ವಿದ್ಯುತ್ ಬಿಲ್ ಕೂಡದೇ ಮೇ ನಲ್ಲೇ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿ ಜನರಿಗೆ ಶಾಕ್ ಕೊಟ್ಟಿತು. ಆದ್ರೆ ಕಾಂಗ್ರೆಸ್ ಸರ್ಕಾರ ಇದು ಕೆಇಆರ್‌ಸಿ ಹೆಚ್ಚಳ ಮಾಡಿರೋದು, ಸರ್ಕಾರದ ನಿರ್ಧಾರವಲ್ಲ. ಅದೊಂದು ಸ್ವಾಯತ್ತ ಸಂಸ್ಥೆ. ಜೊತೆಗೆ ಇದು ಬಿಜೆಪಿ ಸರ್ಕಾರದ ಅವಧಿಯಲ್ಲೇ ದರ ಏರಿಕೆಯಾಗಿದೆ ಎಂದು ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದೆ.

    ಈ ನಡುವೆ ಬೆಸ್ಕಾಂ ಹಗಲು ದರೋಡೆಗೆ ಇಳಿದಿರುವುದು ಕಂಡುಬಂದಿದೆ. ಮೇ ನಲ್ಲಿ ದರ ಜಾಸ್ತಿಯಾಗಿದೆ. ಮೊದಲ 100 ಸ್ಲಾಬ್ ಬಳಕೆಯಾಗುವ ಯೂನಿಟ್‌ಗೆ 4.65 ರೂ. ನಿಗದಿ ಮಾಡಿದ್ದು, 100ರ ಮೇಲೆ ಬಳಿಕೆಯಾಗುವ ವಿದ್ಯುತ್‌ಗೆ 7 ರೂ. ಮಾಡಿದೆ. ಇದರಿಂದ 100ಕ್ಕಿಂತ ಅಧಿಕ ಯೂನಿಟ್ ಬಳಕೆ ಮಾಡಿದರೆ ಪ್ರತಿ ಯೂನಿಟ್‌ಗೆ 7 ರೂ. ನೀಡಬೇಕಾಗುತ್ತೆ. ಇದನ್ನೂ ಓದಿ: ನಾನು ಸಾವರ್ಕರ್‌ ವಂಶಸ್ಥ, ನನ್ನನ್ನ ಜೈಲಿಗೆ ಹಾಕ್ತೀರಾ – ಎಂಬಿಪಿಗೆ ಸೂಲಿಬೆಲೆ ಪ್ರಶ್ನೆ

    ಅದೇ ರೀತಿ ನಂದಿನಿ ಲೇಔಟ್ ಬೆಸ್ಕಾಂ ಕಚೇರಿಗೆ ವ್ಯಾಪ್ತಿಗೆ ಸೇರಿದ ವ್ಯಕ್ತಿಯೊಬ್ಬರ ಮನೆಗೆ ಬಂದಿರೋ ಬಿಲ್‌ನಲ್ಲಿ ಒಟ್ಟು ಬಳಕೆಯಾಗಿರುವ ಯೂನಿಟ್ 104 ಎಂದು ನಮೂದಿಸಿದೆ. ಅದರೆ ಮೇ ತಿಂಗಳಿನಿಂದ ಮೀಟರ್ ರಿಡೀಂಗ್ ಮಾಡಿದ ದಿನದವರೆಗೆ 104 ಯೂನಿಟ್ ಬಳಕೆ ಮಾಡಿದ್ದು ಬೇರೆ ಎಲ್ಲ ರೀತಿಯ ಟ್ಯಾಕ್ಸ್ ಸೇರಿ ಒಟ್ಟು ಬಿಲ್ 1,300 ರೂ. ಬಂದಿದೆ. ಕಳೆದ ತಿಂಗಳು ಕೂಡ 101 ಯೂನಿಟ್ ವಿದ್ಯುತ್ ಬಳಸಿದ್ದಾರೆ. 900ರೂ.ಗಿಂತ ಹೆಚ್ಚು ಹಣವನ್ನ ಶುಲ್ಕವಾಗಿ ವಿಧಿಸಿದ್ದಾರೆ. ಆದ್ರೆ ಈ ಬಿಲ್‌ನಲ್ಲಿ ಮಿಟರ್ ರೀಡಿಂಗ್‌ಗಿಂತ ಹೆಚ್ಚು ಯೂನಿಟ್ ಬಳಕೆ ಮಾಡಿದ್ದೀರಾ ಅಂತಾ ಮನೆಯವರಿಗೆ ಬಿಲ್ ಕೊಟ್ಟಿರೋದು ನಂತರ ಬೆಳಕಿಗೆ ಬಂದಿದೆ.

    ಮನೆ ಮಾಲೀಕರು ಮೀಟರ್ ಚೆಕ್ ಮಾಡಿದಾಗ 50 ರಿಂದ 70 ಯೂನಿಟ್ ಅಷ್ಟೇ ಬಳೆಕೆಯಾಗಿರುವುದನ್ನ ಕಂಡು ಶಾಕ್ ಆಗಿದ್ದಾರೆ. ಆದ್ರೆ ಬಿಲ್‌ನಲ್ಲಿ 1,535ಕ್ಕೆ ರೀಡಿಂಗ್ ಎಂಡ್ ಮಾಡಿದ್ದಾರೆ. ನಿಜವಾಗಿಯೂ ಮೀಟರ್ ರೀಡಿಂಗ್ ಇದ್ದದ್ದು 1,504ಕ್ಕೆ, ಅದರೆ ಅಗತ್ಯಕ್ಕಿಂತ 30 ಹೆಚ್ಚುವರಿ ಯೂನಿಟ್‌ಗೆ ಶುಲ್ಕ ವಿಧಿಸಿದ್ದಾರೆ. ಇದರಿಂದ ಗ್ರಾಹಕರಿಗೆ 250 ರಿಂದ 300 ರೂ. ಬಿಲ್ ಹೆಚ್ಚಾಗ್ತಿದೆ. ಈ ಬಗ್ಗೆ ಬೆಸ್ಕಾಂಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸುಮ್ಮನಾಗಿದ್ದಾರೆ. ಇದನ್ನೂ ಓದಿ: ಸೋಲಿಗೆ ಗ್ಯಾರಂಟಿ ಅಲ್ಲ, ನೀವೇ ಕಾರಣ – ಬಿಜೆಪಿ ನಾಯಕರ ವಿರುದ್ಧ ಸಿಡಿದ ಕಾರ್ಯಕರ್ತರು

  • ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ

    ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ

    ಬೆಂಗಳೂರು: ಮುಖ್ಯಮಂತ್ರಿಗಳ ಜೊತೆ ಮಾತನಾಡಿ ನಾನೇ ಗೃಹಲಕ್ಷ್ಮಿಯನ್ನ (Gruhalakshmi Scheme) ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ. ಗಲಾಟೆ ಕಡಿಮೆ ಮಾಡಲು ಹೀಗೆ ಮಾಡಿದ್ದೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಗೃಹಲಕ್ಷ್ಮಿ ಯೋಜನೆ ವಿಳಂಬ ವಿಚಾರಕ್ಕೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳೊಂದಿಗೆ (Chief Minister) ಮಾತನಾಡಿ ಗೃಹಲಕ್ಷ್ಮಿಯನ್ನ ನಾನೇ ಸ್ವಲ್ಪ ಹೋಲ್ಡ್ ಮಾಡಿಸಿದ್ದೇನೆ. ಗಲಾಟೆ ಕಡಿಮೆ ಮಾಡಲು ಹೀಗೆ ಮಾಡಿದ್ದೇನೆ. ಮಹಿಳಾ ಸಚಿವರೊಂದಿಗೆ ಒಂದು ಸಭೆ ಮಾಡಿ, ಸರಳವಾಗಿ ಯೋಜನೆ ಅನುಷ್ಠಾನ ಮಾಡ್ತೀವಿ. ಭ್ರಷ್ಟಾಚಾರ ರಹಿತ ಯೋಜನೆ ಅನುಷ್ಠಾನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.

    ಅರ್ಜಿಯನ್ನ ಪ್ರತಿಯೊಬ್ಬರೂ ಉಚಿತವಾಗಿ ಸಲ್ಲಿಸುವಂತೆ ಮಾಡಿಕೊಡಬೇಕು. ಯಾರಾದ್ರೂ ಸಂಘ ಸಂಸ್ಥೆಗಳು ಹಣ ವಸೂಲಿ ಮಾಡಿದ್ರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅವರ ಏಜೆನ್ಸಿಯನ್ನೇ ರದ್ದು ಮಾಡ್ತೀವಿ. ಈ ಸ್ಕೀಮ್‌ಗಳಲ್ಲಿ ಯಾರೊಬ್ಬರಿಗೂ ಲಂಚ ಕೊಡಬಾರದು. ಒಂದು ವೇಳೆ ಲಂಚ ಕೇಳಿದ್ರೆ ನಾವು ಒಂದು ಸಹಾಯವಾಣಿ ಸಂಖ್ಯೆ ಕೊಡ್ತೀವಿ, ಅದಕ್ಕೆ ಕಾಲ್ ಮಾಡಿ ದೂರು ಕೊಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಾವಿನಲ್ಲೂ ಶತಕ ಬಾರಿಸಿದ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇ : ಅಪಘಾತಕ್ಕೆ ಕಾರಣ ಏನು?

    ನಮ್ಮ ಮೇಲೆ ಕೇಸ್ ಹಾಕಿರೋದನ್ನ ನೆನಪಿಸಿಕೊಳ್ಳಲಿ: 
    ಗ್ಯಾರಂಟಿಗಳ ಗೊಂದಲಗಳ ಬಗ್ಗೆ ಬಿಜೆಪಿ (BJP) ಸದನದಲ್ಲಿ ಹೋರಾಟ ಮಾಡುವ ಬಗ್ಗೆ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ (BS Yediyurappa) ಅವರಿಗೆ ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಆದ್ರೆ ನಾವು ಪ್ರತಿಭಟನೆ ಮಾಡಿದಾಗ ನಮ್ಮ ಮೇಲೆ ಕೇಸ್ ಹಾಕಿರೋದನ್ನ ನೆನೆಸಿಕೊಳ್ಳಲಿ. ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ಅವರ ಪ್ರಣಾಳಿಕೆ ತೆಗೆದು ನೋಡಲಿ, ನಮ್ಮ ಸರ್ಕಾರ ಬಂದು ಇನ್ನೂ ಒಂದು ತಿಂಗಳು ಆಗಿದೆ. ರೈತರ ಆದಾಯ ಡಬಲ್ ಮಾಡ್ತೀವಿ, 2 ಕೋಟಿ ಉದ್ಯೋಗ ಕೊಡ್ತೀವಿ, ಬ್ಲಾಕ್ ಮನಿ ತಂದು 15 ಲಕ್ಷ ಅಕೌಂಟ್‌ಗೆ ಹಾಕ್ತೀವಿ ಅಂದಿದ್ದರು. ಕೇಂದ್ರದ ಘೋಷಣೆಗಳನ್ನ ಅನುಷ್ಠಾನ ಮಾಡಿದ್ರಾ ಅಂತಾ ಪ್ರಶ್ನಿಸಿದ್ದಾರೆ.

    ಯಡಿಯೂರಪ್ಪನವರೇ ನೀವು ಬಸವಣ್ಣನ ನಾಡಿನವರು, ನಿಮ್ಮ ಧರಣಿಗೆ ನಾನೂ ಬರುತ್ತೇನೆ, ನಿಮಗೆ ಹಾರೈಸುತ್ತೇವೆ. ನೀವು ನಮಗೆ ಮಾರ್ಗದರ್ಶನ ಮಾಡಿ. ಪಾರ್ಲಿಮೆಂಟ್ ಚುನಾವಣೆ ಬರುತ್ತಿರುವುದರಿಂದ ಇನ್ನೂ ನಮಗೆ ಶಕ್ತಿ ಇದೆ ಅಂತಾ ತೋರಿಸಿಕೊಳ್ಳಲು ಮಾತನಾಡ್ತಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರ ಮನೆಯಲ್ಲಿ ಮಗು ಹುಟ್ಟಿದ್ರೂ ಬಿಜೆಪಿಯವರೇ ಕಾರಣ ಅಂತಾರೆ- ಈಶ್ವರಪ್ಪ ಲೇವಡಿ

    ಕುಮಾರಣ್ಣ ಸಲಹೆ ಕೊಡಲಿ:
    ಗೃಹಜ್ಯೋತಿ ಅಲ್ಲ ಸುಡುವ ಜ್ಯೋತಿ ಎಂಬ ಹೆಚ್‌ಡಿಕೆ (HD Kumaraswamy) ಹೇಳಿಕೆಗೆ ತಿರುಗೇಟು ನೀಡಿದ ಡಿಸಿಎಂ, ನಾವು ಎಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದೀವಿ..? ರಿಸಲ್ಟ್ ಬರೋಕೆ ಮುಂಚೆಯೇ ಅವ್ರು ಜಾಸ್ತಿ ಮಾಡಿದ್ದಾರೆ. ಕುಮಾರಸ್ವಾಮಿ ಅವರಿಗೆ ಗೊತ್ತಿಲ್ಲದೇ ಇರಬಹುದು. ಆದರೆ ನಾನೊಬ್ಬ ಪವರ್ ಮಿನಿಸ್ಟರ್ ಆಗಿದ್ದವನು, ನನಗೆ ಎಲ್ಲವೂ ಗೊತ್ತಿದೆ. ಕುಮಾರಣ್ಣ ಪಾಪ, ಅವರು ಅವರದ್ದೇ ಲೋಕದಲ್ಲಿ ಇದ್ದಾರೆ. ಕುಮಾರಣ್ಣ ಬೇಕಿದ್ರೆ ಸಲಹೆ ಕೊಡಲಿ ಎಂದು ವ್ಯಂಗ್ಯವಾಡಿದ್ದಾರೆ.

    ನಮ್ಮ ಅಕ್ಕ ತಂಗಿಯರು ಬಸ್‌ನಲ್ಲಿ ಓಡಾಡ್ತಿದ್ದಾರೆ:
    ರಾಜ್ಯದ ಜನರು ನಮ್ಮ ಸರ್ಕಾರದ ಪರವಾಗಿ ಮಾತಾಡ್ತಿದ್ದಾರೆ. ನಮ್ಮ ಅಕ್ಕ-ತಂಗಿಯರು ಬಸ್ಸಿನಲ್ಲಿ ದೇವಸ್ಥಾನ ಎಲ್ಲ ಕಡೆ ಹೋಗಿಬರುತ್ತಿದ್ದಾರೆ. ನೋಡಿ ನಮ್ಮ ಸರ್ಕಾರ ಇರುವಾಗ ಎಲ್ಲ ಮಹಿಳೆಯರು ಎಲ್ಲ ದೇವಸ್ಥಾನಗಳಿಗೆ ಹೋಗ್ತಿದ್ದಾರೆ. ಪಾಪ ಬಸ್ಸಿನ ಡೋರ್ ಬಾಗಿಲು ಎಲ್ಲ ಕಿತ್ತು ಹಾಕ್ತಿದ್ದಾರೆ. ಆದ್ರೆ ಧರ್ಮಸ್ಥಳ, ಕುಕ್ಕೆ ಎಲ್ಲ ಕಡೆಯೂ ಓಡಾಡ್ತಿದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

  • ಕಾಂಗ್ರೆಸ್ ಸರ್ಕಾರದ್ದು ಗೃಹಜ್ಯೋತಿಯೋ, ಸುಡುಜ್ಯೋತಿಯೋ? – ಹೆಚ್‌ಡಿಕೆ ಟೀಕೆ

    ಕಾಂಗ್ರೆಸ್ ಸರ್ಕಾರದ್ದು ಗೃಹಜ್ಯೋತಿಯೋ, ಸುಡುಜ್ಯೋತಿಯೋ? – ಹೆಚ್‌ಡಿಕೆ ಟೀಕೆ

    ಬೆಂಗಳೂರು: ವಿದ್ಯುತ್ ಮೇಲೆ ವಿಧಿಸಿರುವ 9% ರಷ್ಟು ತೆರಿಗೆಯಲ್ಲಿ 3% ರಿಂದ 4% ರಷ್ಟು ಕಡಿತ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

    ಅಪರಿಮಿತವಾಗಿ ಹೆಚ್ಚಳವಾಗಿರುವ ವಿದ್ಯುತ್ ದರದ ಬಗ್ಗೆ ಬಿಕ್ಕಟ್ಟಿಗೆ ಸಿಲುಕಿರುವ IT & ESDM ವಲಯಗಳ ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳ ಮುಖ್ಯಸ್ಥರ ಜತೆ ಮಾತುಕತೆ ನಡೆಸಿ ಅವರ ಅಹವಾಲು ಸ್ವೀಕರಿಸಿದ ನಂತರ ಮಾಜಿ ಸಿಎಂ ಮಾಧ್ಯಮಗಳ ಜೊತೆ ಮಾತನಾಡಿದರು. ಇದನ್ನೂ ಓದಿ: 13 ಬಾರಿ ಬಜೆಟ್ ಕೊಟ್ಟ ಕೂಡಲೇ ಗದ್ದೆಯಲ್ಲಿ ಭತ್ತ ಬೆಳೆದು ಅಕ್ಕಿ ಕೊಡೋಕೆ ಆಗಲ್ಲ: ಸಿದ್ದುಗೆ ಡಿವಿಎಸ್ ಟಾಂಗ್

    ದುಬಾರಿ ವಿದ್ಯುತ್ ದರದಿಂದ ಸಾರ್ವಜನಿಕರ ಜತೆಗೆ ಕೈಗಾರಿಕಾ ವಲಯವೂ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಗ್ಯಾರಂಟಿಗಳ ಹೆಸರಿನಲ್ಲಿ ಜನರ ತುಟಿಗೆ ತುಪ್ಪ ಸವರುತ್ತಿರುವ ರಾಜ್ಯ ಸರ್ಕಾರ ವಿದ್ಯುತ್ ಮೇಲಿನ ತೆರಿಗೆಯಲ್ಲಿ ಕೊಂಚ ಕಡಿತ ಮಾಡಲಿ ಎಂದರು.

    ಗೃಹಜ್ಯೋತಿ ಎಂದು ಹೇಳುತ್ತಾ ಎಲ್ಲರ ಮನೆಗಳಲ್ಲಿ ಜ್ಯೋತಿ ಬೆಳಗಿಸುವ ನಾಟಕ ಆಡುತ್ತಿರುವ ಕಾಂಗ್ರೆಸ್ ಸರ್ಕಾರ, ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಎರಡು ಪಟ್ಟು, ಮೂರು ಪಟ್ಟು ಹೆಚ್ಚು ದರ ವಿಧಿಸಿರುವ ವಿದ್ಯುತ್ ಬಿಲ್ಲುಗಳನ್ನು ನೀಡುತ್ತಿರುವುದು ಗೃಹಜ್ಯೋತಿಯೇ? ಅದು ಗೃಹಜ್ಯೋತಿಯಲ್ಲ, ಸುಡುಜ್ಯೋತಿ ಎಂದು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಇದನ್ನೂ ಓದಿ: ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳ್ತಿಲ್ಲ; ಬೇರೆ ಆಪ್ಷನ್‌ ನೋಡ್ತಿದ್ದೇವೆ: ಡಿಕೆಶಿ

    ವಿದ್ಯುತ್ ದರ ವಿಚಾರದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಆಟ ಆಡುತ್ತಿವೆ. ಕಾಂಗ್ರೆಸ್ ಸರ್ಕಾರ ನೋಡಿದರೆ, ನಾವು ದರ ಜಾಸ್ತಿ ಮಾಡಿಲ್ಲ. ಹಿಂದೆ ಇದ್ದ ಬಿಜೆಪಿ ಹೆಚ್ಚಳ ಮಾಡಿದ್ದು ಎಂದು ನೆಪ ಹೇಳಿ ಜವಾಬ್ದಾರಿಯಿಂದ ಜಾಣತನದಿಂದ ಪಲಾಯನ ಮಾಡುತ್ತಿದೆ. ಇವರ ನಾಟಕ ಜನರಿಗೆ ಅರ್ಥ ಆಗುತ್ತಿದೆ ಎಂದು ಸಿಡಿಮಿಡಿಯಾದರು.

    ಸಿಎಂ ಮುಂದೆ ಕಷ್ಟ ಹೇಳೋಕೆ ಹೋಗಿದ್ದಾರೆ. ಇವರಿಗೆ ಸಮಯ ಕೊಡಲು ಮುಖ್ಯಮಂತ್ರಿಗಳಿಗೆ ವ್ಯವಧಾನ ಇಲ್ಲ. ಇವರು ರಾಜ್ಯದಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಸಾಕಷ್ಟು ಜನರಿಗೆ ಕೆಲಸ ಕೊಟ್ಟಿದ್ದಾರೆ. ಇಂಥವರು ಹೋದಾಗ ದೊಡ್ಡ ಸ್ಥಾನದಲ್ಲಿ ಕೂತವರು ಸಜ್ಜನಿಕೆಯಿಂದ ವರ್ತಿಸಬೇಕು ಎಂದ ಅವರು, ನಾವು ಅಧಿಕಾರದಲ್ಲಿ ಇದ್ದಾಗ ಕೆಇಆರ್‌ಸಿ ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿತ್ತು. ಆದರೆ ದರ ಏರಿಕೆ ಮಾಡಿರಲಿಲ್ಲ ಅಂತಾರೆ ಬಿಜೆಪಿ ನಾಯಕರು. ಆದರೆ ದರ ಏರಿಕೆ ಬಗ್ಗೆ ಕೆಇಆರ್‌ಸಿ ನಿರ್ಧಾರ ಮಾಡಲು ಸಾಧ್ಯವಿಲ್ಲ. ಬೆಲೆ ಏರಿಕೆ ಬಗ್ಗೆ ಅರ್ಜಿ ಕೊಟ್ಟಾಗ ಕೆಇಆರ್‌ಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಈಗ ನೋಡಿದರೆ ಇವರು ನೆಪ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

    ರಾಜ್ಯದ ಆರ್ಥಿಕತೆಗೆ ಸಣ್ಣ ಪ್ರಮಾಣದ ಕೈಗಾರಿಕೆಗಳು ದೊಡ್ಡ ಕೊಡುಗೆ ನೀಡುತ್ತಿವೆ. ಸ್ವಯಂ ಆರ್ಥಿಕ ತಜ್ಞರು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳಿಗೆ ಇದು ಅರ್ಥ ಆಗುವುದಿಲ್ಲವೇ? ಆರಂಭದಲ್ಲಿಯೇ ಜನ ವಿರೋಧಿ, ಕೈಗಾರಿಕಾ ವಿರೋಧಿ ಕ್ರಮಗಳನ್ನು ಸರ್ಕಾರ ಕೈಗೊಂಡರೆ ಉದ್ಯೋಗ ಸೃಷ್ಟಿ, ಹೂಡಿಕೆ ಕಥೆ ಏನು? ಇವರ ಕಷ್ಟಗಳನ್ನ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಕಾಂಗ್ರೆಸ್‌ನವರು ನಿನಗೂ ಫ್ರೀ ನನಗೂ ಫ್ರೀ ಅಂತ ಹೇಳಿದಾಗ ಮುಂದಿನ ಪರಿಣಾಮಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರು ನಂಬಿ ಮತ ಹಾಕಿದರು. ಈಗ ಕಾಂಗ್ರೆಸ್ ಸರ್ಕಾರ ವಿಶ್ವಾಸ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

    ಗೃಹಜ್ಯೋತಿ – ಅರ್ಜಿ ಸಲ್ಲಿಕೆಗೆ 5ನೇ ದಿನವೂ ಸರ್ವರ್‌ ಸಮಸ್ಯೆ

    – ಕಾದು ಕಾದು ಹೈರಾಣಾದ ಜನ

    ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಷರತ್ತುಗಳೊಂದಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆ (Gruhajyothi Scheme)ನೋಂದಣಿ ಕಾರ್ಯ 5ನೇ ದಿನಕ್ಕೆ ಕಾಲಿಟ್ಟಿದ್ದು, 5ನೇ ದಿನವೂ ಸರ್ವರ್‌ ಸಮಸ್ಯೆ (Server Down Problem) ಎದುರಿಸುವಂತಾಗಿದೆ.

    5ನೇ ದಿನವಾದ ಗುರುವಾರವೂ ರಾಜಾಜೀನಗರದ 4ನೇ ಬ್ಲಾಕ್‌, ಮಲ್ಲೇಶ್ವರಂ ಕಾಡುಮಲ್ಲೇಶ್ವರ ವಾರ್ಡ್, ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ವೃಷಭಾವತಿ ನಗರ ಹಾಗೂ ವಿಲ್ಸನ್ ಗಾರ್ಡನ್ ಸೇರಿದಂತೆ ವಿವಿಧೆಡೆ ಬೆಂಗಳೂರು ಒನ್‌ (Bengaluru One) ಕೇಂದ್ರಗಳಲ್ಲಿ ಬೆಳ್ಳಂ ಬೆಳಗ್ಗೆ ಸರ್ವರ್‌ ಸಮಸ್ಯೆ ಕಂಡುಬಂದಿದೆ. ಇದರಿಂದ ಅರ್ಜಿ ಸಲ್ಲಿಸಲು ಕಾದು ನಿಂತ ಜನರು ಹಾಗೂ ಬೆಂಗಳೂರು ಒನ್‌ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಇದನ್ನೂ ಓದಿ: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ – ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಿದ ಶಿಕ್ಷಣ ಇಲಾಖೆ

    ಬೆಳಗ್ಗಿನ ಜಾವ 5 ಗಂಟೆಯಿಂದಲೇ ಬೆಂಗಳೂರು ಒನ್‌ ಕೇಂದ್ರಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಒಂದು ಅರ್ಜಿ ಸಲ್ಲಿಕೆಗೆ 30 ನಿಮಿಷಗಳ ಸಮಯ ಬೇಕಾಗುತ್ತಿದೆ. ಆದ್ರೆ ಸರ್ವರ್‌ ಸಮಸ್ಯೆಯಿಂದಾಗಿ ಸಾಲುಗಟ್ಟಿ ನಿಲ್ಲುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಿಂದ ಪರಿಷತ್ ಮೂರು ಸ್ಥಾನಗಳಿಗೆ ಉಪಚುನಾಚಣೆ: ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ

    ಅರ್ಜಿ ಸಲ್ಲಿಕೆ ಆರಂಭವಾದ ಮೊದಲ ದಿನವೇ ವಿವಿಧೆಡೆ ಸರ್ವರ್‌ ಸಮಸ್ಯೆಯ ಹೊರತಾಗಿಯೂ 1,61,958 ಗ್ರಾಹಕರು (ಸಂಜೆ 5 ಗಂಟೆವರೆಗೆ) ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ನಿಗದಿಪಡಿಸಲಾಗಿಲ್ಲ, ಆದ್ದರಿಂದ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.