Tag: Gruhajyothi

  • ರಾಜ್ಯದ ಜನರಿಗೆ ಕಾದಿದ್ಯಾ ಫ್ರೀ ಕರೆಂಟ್ ಶಾಕ್? – ಗ್ರಾಹಕರಿಂದಲೇ ಹಣ ವಸೂಲಿಗೆ ಎಸ್ಕಾಂ ಚಿಂತನೆ

    ರಾಜ್ಯದ ಜನರಿಗೆ ಕಾದಿದ್ಯಾ ಫ್ರೀ ಕರೆಂಟ್ ಶಾಕ್? – ಗ್ರಾಹಕರಿಂದಲೇ ಹಣ ವಸೂಲಿಗೆ ಎಸ್ಕಾಂ ಚಿಂತನೆ

    ಬೆಂಗಳೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣವಾಗಿದ್ದ ಪಂಚ ಗ್ಯಾರಂಟಿ ಯೋಜನೆಗಳಿಂದಲೇ (Guarantee Scheme) ಈಗ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತೆ ಕಾಣುತ್ತಿದೆ. ಪ್ರತಿ ವರ್ಷ ಸರ್ಕಾರದಿಂದ ಎಸ್ಕಾಂಗಳಿಗೆ (ESCOM) ಪಾವತಿಸಬೇಕಿದ್ದ ಹಣವನ್ನು ಜನರಿಂದಲೇ ಸಂಗ್ರಹಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

    ಹೌದು. ಪ್ರತಿ ವರ್ಷ ಸರ್ಕಾರ ಎಸ್ಕಾಂಗಳಿಗೆ 1,602 ಕೋಟಿ ರೂ. ಸಬ್ಸಿಡಿ ಸರ್ಕಾರ ಪಾವತಿಸಬೇಕು. ಆದ್ರೆ ಇದು ಪಾವತಿಯಾಗದೇ ಇರುವುದರಿಂದ ಜನರಿಂದಲೇ ವಸೂಲಿಗೆ ಚೆಸ್ಕಾಂ ಪ್ರಸ್ತಾವನೆ ಸಲ್ಲಿಸಿದೆ. ಆದರೆ ನಿರ್ದೇಶನ ಕೊಡದ ಹೊರತು ಹಣ ವಸೂಲಿ ಮಾಡದಂತೆ ಕೆಇಆರ್‌ಸಿ (KERC) ಸೂಚಿಸಿದೆ. ಒಂದು ವೇಳೆ ಕೆಇಆರ್‌ಸಿ ಏನಾದರೂ ಸೂಚನೆ ಕೊಟ್ಟರೆ 1.79 ಕೋಟಿ ಗೃಹಜ್ಯೋತಿ (Gruhajyothi) ಫಲಾನುಭವಿಗಳಿಗೆ ಬಿಗ್ ಶಾಕ್ ಎದುರಾಗಲಿದೆ.

    ಜನರಿಂದಲೇ ಗೃಹಜ್ಯೋತಿ ಬಿಲ್ ವಸೂಲಿಗೆ ಅವಕಾಶ ಕೊಡುವಂತೆ ಕೋರಿ ಚೆಸ್ಕಾಂ ಕೆಇಆರ್‌ಸಿಗೆ ಪತ್ರ ಬರೆದಿದೆ. ಕೆಇಆರ್‌ಸಿ ಆಕ್ಟ್ ಅಡಿ ಅವಕಾಶ ಕೊಡುವಂತೆ ಪತ್ರ ಬರೆಯಲಾಗಿದೆ. 2008ರ ಕೆಇಆರ್‌ಸಿ ಆಕ್ಟ್ ಅನ್ನು ಚೆಸ್ಕಾಂ ಪತ್ರದಲ್ಲಿ ಉಲ್ಲೇಖಿಸಿದೆ. ಸರ್ಕಾರ ಸಬ್ಸಿಡಿ ಕೊಡದೇ ಹೋದಲ್ಲಿ ಜನರಿಂದ ಅದನ್ನ ಪಾವತಿ ಮಾಡಿಸಿಕೊಳ್ಳಬೇಕು. ಇದಕ್ಕೆ ಕೆಇಆರ್‌ಸಿ ಖುದ್ದು ಅನುಮತಿ ಕೊಡಬೇಕು, ವಸೂಲಿಗೆ ನಿರ್ದೇಶನ ಕೊಡಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ ಕೆಇಆರ್‌ಸಿಯಿಂದ ವಿಚಾರಣೆ ಬಾಕಿ ಇದ್ದು, ಇನ್ನೂ ಅನುಮತಿ ಸಿಕ್ಕಿಲ್ಲ. ಕೆಇಆರ್‌ಸಿ ನಿರ್ದೇಶನ ಕೊಡದ ಹೊರತು ಜನರಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವಂತಿಲ್ಲ.

    ಕೆಇಆರ್‌ಸಿ ಚೆಸ್ಕಾಂ ಪ್ರಸ್ತಾಪ ಒಪ್ಪಿದ್ರೆ ಏನಾಗುತ್ತೆ?
    * ಗೃಹಜ್ಯೋತಿ ಬಳಕೆದಾರರೇ ಮೊದಲು ಬಿಲ್ ಪಾವತಿಸಬೇಕಾಗುತ್ತದೆ.
    * ಸದ್ಯ 1.71ಕೋಟಿ ಅರ್ಹರು ಗೃಹಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೆ.
    * ಇದರಲ್ಲಿ 1.65 ಕೋಟಿ ಕುಟುಂಬಗಳಿಗೆ ಶೂನ್ಯ ಬಿಲ್ ಬರುತ್ತಿದೆ.
    * ಬೆಸ್ಕಾಂ ವ್ಯಾಪ್ತಿಯಲ್ಲೇ 70 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ.
    * ಕೆಇಆರ್‌ಸಿ ಚೆಸ್ಕಾಂ ಪ್ರಸ್ತಾಪಕ್ಕೆ ಅವಕಾಶ ಕೊಟ್ಟರೆ ಎಲ್ಲಾ ಎಸ್ಕಾಂಗಳಿಗೂ ಇದು ಅನ್ವಯ ಆಗಲಿದೆ.
    * ಈಗಾಗಲೇ ಸರ್ಕಾರ ಸಬ್ಸಿಡಿ ಹಣವನ್ನು ಮುಂಗಡವಾಗಿ ನೀಡುವ ಬದಲು ಎರಡು ತಿಂಗಳು ಬಾಕಿ ಉಳಿಸಿಕೊಳ್ಳುತ್ತಿದೆ.
    * 2008ರ ಕೆಇಆರ್‌ಸಿ ನಿಯಮಗಳ ಪ್ರಕಾರ ಪರಿಗಣಿಸಿದರೆ ಅವಕಾಶ ಕೊಡಬೇಕಾಗಬಹುದು.
    * ಆದರೆ ಇದೇ ತಿಂಗಳು 27ರಂದು ಕೆಇಆರ್‌ಸಿ ಅಂತಿಮ ಸಭೆ ಇದೆ.
    * ಆ ಸಭೆಯಲ್ಲಿ ಏನು ತೀರ್ಮಾನ ಮಾಡುತ್ತೆ ಎಂಬುದರ ಮೇಲೆ ಗೃಹಜ್ಯೋತಿ ಗ್ರಾಹಕರಿಗೆ ಶಾಕ್ ಸಿಗುತ್ತಾ? ರಿಲೀಫ್ ಸಿಗುತ್ತಾ ಎಂದು ಗೊತ್ತಾಗಲಿದೆ.

  • ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

    ಗೃಹಜ್ಯೋತಿ ನಿಯಮದಲ್ಲಿ ಬದಲಾವಣೆ – ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯವೇನು?

    – 10% ಬದಲು 10 ಯೂನಿಟ್‌ ಹೆಚ್ಚುವರಿ ವಿದ್ಯುತ್‌ ನೀಡಲು ಸಂಪುಟ ನಿರ್ಧಾರ

    ಬೆಂಗಳೂರು: ಗೃಹಜ್ಯೋತಿ (Gruha Jyothi) ನಿಯಮದಲ್ಲಿ ಬದಲಾವಣೆ ಮಾಡಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಗೃಹಜ್ಯೋತಿ ಸರಾಸರಿ ಪ್ರಮಾಣದಲ್ಲಿ ಶೇ.10 ಹೆಚ್ಚುವರಿ ವಿದ್ಯುತ್‌ ನೀಡುವ ಮಾನದಂಡವನ್ನು 10 ಯೂನಿಟ್‌ ಆಗಿ ಬದಲಾಯಿಸಲು ಸಂಪುಟ ಸಮ್ಮತಿ ನೀಡಿದೆ.

    ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್‌ (K.J.George), ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ಅಂತಾ ಹೇಳಿದ್ವಿ. ಇದರನ್ವಯ ವಾರ್ಷಿಕ ಸರಾಸರಿ ಮೇಲೆ 10% ವಿದ್ಯುತ್ ಹೆಚ್ಚು ಬಳಕೆ ಮಾಡಲು ಗ್ರಾಹಕರಿಗೆ ಅವಕಾಶ ನೀಡಲಾಗಿತ್ತು. ಕೇವಲ 20, 30, 40 ಯೂನಿಟ್ ಬಳಕೆ ಮಾಡುವ ಗ್ರಾಹಕರಿಗೆ 10% ಹೆಚ್ಚುವರಿ ಯೂನಿಟ್ ಅಂದರೆ ಕಡಿಮೆ ವಿದ್ಯುತ್ ಸಿಗುತ್ತಿತ್ತು. ಹೀಗಾಗಿ 48 ಯೂನಿಟ್ ಒಳಗೆ ಉಪಯೋಗ ಮಾಡುವ ಗ್ರಾಹಕರಿಗೆ 10% ವಿದ್ಯುತ್ ಬದಲಾಗಿ 10 ಯೂನಿಟ್ ಹೆಚ್ಚುವರಿ ನೀಡಲು ಕ್ಯಾಬಿನೆಟ್ ಒಪ್ಪಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಫೆಬ್ರವರಿ16 ರಂದು ರಾಜ್ಯ ಬಜೆಟ್

    ಮುಂದಿ‌ನ ತಿಂಗಳ ಬಿಲ್‌ನಿಂದಲೇ ಇದನ್ನ ಜಾರಿ ಮಾಡ್ತೀವಿ. ಸರ್ಕಾರಕ್ಕೆ ಇದರಿಂದ 500 ಕೋಟಿ ರೂ. ವಾರ್ಷಿಕ ಹೆಚ್ಚುವರಿ ಹಣ ಖರ್ಚಾಗಲಿದೆ ಎಂದು ತಿಳಿಸಿದ್ದಾರೆ.

    ಉದಾಹರಣೆ: 20 ಯೂನಿಟ್ ವಿದ್ಯುತ್ ಬಳಕೆ ಮಾಡುವ ಗ್ರಾಹಕನಿಗೆ 10% ಅಂದರೆ ಕೇವಲ 2 ಯೂನಿಟ್ ‌ಮಾತ್ರ ಹೆಚ್ಚುವರಿ ಸಿಗುತ್ತಿತ್ತು. ಈಗ 10 ಯೂನಿಟ್ ಕೊಡುವುದರಿಂದ 20+10 ಸೇರಿ 30 ಯೂನಿಟ್ ವಿದ್ಯುತ್ ಆಗಲಿದೆ. ಇದನ್ನೂ ಓದಿ: ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ

  • Gruhajyothi Scheme: ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಿಎಂ

    Gruhajyothi Scheme: ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿದ ಸಿಎಂ

    ಕಲಬುರಗಿ: ನಗರದ ನೂತನ ವಿದ್ಯಾಲಯ (NV) ಮೈದಾನದಲ್ಲಿ ಇಂದು (ಶನಿವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಗೃಹಜ್ಯೋತಿ (Gruhajyothi) ಯೋಜನೆಗೆ ಅಧಿಕೃತ ಚಾಲನೆ ನೀಡಿದರು.

    ಮನೆಯೊಂದರ ವಿದ್ಯುತ್ ದೀಪದ ಬಟನ್ ಒತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಲ್ಲದೇ ಸಾಕೇಂತಿಕವಾಗಿ 10 ಫಲಾನುಭವಿಗಳಿಗೆ ಮುಖ್ಯಮಂತ್ರಿಗಳು ಶೂನ್ಯ ವಿದ್ಯುತ್‌ ಬಿಲ್ (Zero Electricity Bill) ಚಲನ್‌ ನೀಡಿದರು. ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ‌ ಮಲ್ಲಿಕಾರ್ಜುನ ಖರ್ಗೆ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಕೆ.ಜೆ. ಜಾರ್ಜ್‌ ಹಾಗೂ ಕಲ್ಯಾಣ ‌ಕರ್ನಾಟಕದ ಸಚಿವರು, ಶಾಸಕರು ಪಾಲ್ಗೊಂಡಿದ್ದರು. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    ಊಟಕ್ಕೆ ಲಡ್ಡು, ಪಲಾವ್‌ ವ್ಯವಸ್ಥೆ:
    ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಜನರಿಗಾಗಿ ಊಟಕ್ಕೆ ಲಡ್ಡು, ಪಲಾವ್, ಸಾಂಬಾರ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜನಸಂದಣಿ ಆಗದಂತೆ ಹತ್ತಾರು ಕೌಂಟರ್ ಸ್ಥಾಪಿಸಲಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಕಳಪೆ ಊಟ ಕೊಟ್ಟರೆ ವಾರ್ಡನ್‍ಗೆ ತಿನ್ನಿಸಿ, ಹೊಡೆಯಿರಿ – ಶಾಸಕರ ಹೇಳಿಕೆ ವೈರಲ್

    ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಪೌರಕಾರ್ಮಿಕರನ್ನು ನಿಯೋಜಿಸಲಾಗಿದೆ. ಸ್ವಚ್ಛತಾ ವಾಹಿನಿಗಳು ನಿರಂತರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿವೆ. ಒಟ್ಟಾರೆಯಾಗಿ ಊಟದ ಸ್ಥಳದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅದ್ಯತೆ ನೀಡಿರುವುದು ಇಲ್ಲಿ ಕಂಡುಬಂತು. ಇದನ್ನೂ ಓದಿ: ‘ಗೃಹಜ್ಯೋತಿ’ ಗ್ಯಾರಂಟಿಗೆ ಇಂದು ಚಾಲನೆ; ಕಲಬುರಗಿಯಲ್ಲಿ ಸಿಎಂ ಉದ್ಘಾಟನೆ – ಖರ್ಗೆ ತವರಲ್ಲಿ ಸಿದ್ಧತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್ 5 ರಂದು ಗೃಹಜ್ಯೋತಿ ಲಾಂಚ್: ಕೆಜೆ ಜಾರ್ಜ್

    ಆಗಸ್ಟ್ 5 ರಂದು ಗೃಹಜ್ಯೋತಿ ಲಾಂಚ್: ಕೆಜೆ ಜಾರ್ಜ್

    ಬೆಂಗಳೂರು: ಆಗಸ್ಟ್ 5ರಂದು ಬೆಳಗ್ಗೆ 11 ಗಂಟೆಗೆ ಗೃಹಜ್ಯೋತಿ (Gruhajyothi) ಯೋಜನೆ ಲಾಂಚ್ ಕಾರ್ಯಕ್ರಮ ನಿಗದಿಯಾಗಿದ್ದು, ಈ ಕಾರ್ಯಕ್ರಮ ಕಲಬುರಗಿಯಲ್ಲಿ (Kalaburagi) ನಡೆಯಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ (K.J.George) ಹೇಳಿದ್ದಾರೆ.

    ಗೃಹಜ್ಯೋತಿ ಲಾಂಚ್ ಸಂಬಂಧ ಬೆಂಗಳೂರಿನ (Bengaluru) ಖಾಸಗಿ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಯೋಜನೆ ಬಗ್ಗೆ ಮಾಧ್ಯಮ ಹೆಚ್ಚಾಗಿಯೇ ತಿಳಿಸಿದೆ. ನಾವು ವಿರೋಧ ಪಕ್ಷದಲ್ಲಿ ಇದ್ದಾಗಲೇ ಈ ಗ್ಯಾರಂಟಿಗಳನ್ನು ಪ್ಲಾನ್ ಮಾಡಿದ್ದು, ಸಿದ್ದರಾಮಯ್ಯ, ಡಿಕೆಶಿಯವರ ಸಹಿಯಿರುವ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡಿದ್ದೆವು. ಅವಶ್ಯಕ ವಸ್ತುಗಳ ಬೆಲೆ ಜನರನ್ನು ಕಾಡಿದ್ದರಿಂದ ಜನರಿಗೆ ಈ ಗ್ಯಾರಂಟಿಗಳನ್ನು ನೀಡಬೇಕು ಎಂದು ಯೋಚನೆ ಮಾಡಿದ್ದೆವು ಎಂದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – SITಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ

    ಸಿಎಂ ಸಿದ್ದರಾಮಯ್ಯ (Siddaramaiah) 12 ತಿಂಗಳ ಸರಾಸರಿ ತೆಗೆದುಕೊಳ್ಳಲು ಹೇಳಿದ್ದಾರೆ. ಜುಲೈ ತಿಂಗಳ ಗೃಹಜ್ಯೋತಿ ಬಿಲ್ ಕೊಡಲು ಶುರು ಮಾಡಿದ್ದೇವೆ. 1.43 ಕೋಟಿ ಗೃಹಜ್ಯೋತಿ ನೋಂದಣಿಯಾಗಿದೆ. ಆಗಸ್ಟ್ 5ರಂದು ಲಾಂಚ್ ಕಾರ್ಯಕ್ರಮ ನಡೆಯುತ್ತೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಕಲಬುರಗಿ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಗೃಹಜ್ಯೋತಿ ಲಾಂಚ್ ಮಾಡಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಪ್ರವಾಸ

    ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತ ಜ್ಯೋತಿ ಒಳಗೊಂಡಂತೆ ಒಟ್ಟು 1.43 ಕೋಟಿ ಮನೆಗಳಿಗೆ ಮೊದಲ ತಿಂಗಳ ಗೃಹಜ್ಯೋತಿ ನೀಡಲಾಗಿದೆ. 200 ಯೂನಿಟ್ ದಾಟಿದರೆ ಸಂಪೂರ್ಣ ಬಿಲ್ ಕಟ್ಟಬೇಕು. ಸರಾಸರಿ ಬಿಲ್‌ಗಿಂತ 10%ಗೂ ಹೆಚ್ಚು ಬಳಕೆಯಾದರೂ ಪೂರ್ತಿ ಬಿಲ್ ಕಟ್ಟಬೇಕು. ಎಷ್ಟು ಬಿಲ್ ಇದ್ದರೂ ಇಂಧನ ಇಲಾಖೆಗೆ ಸಬ್ಸಿಡಿ ಮೂಲಕ ಸರ್ಕಾರ ಹಣ ಪಾವತಿ ಮಾಡುತ್ತದೆ. 200 ಯೂನಿಟ್ ಒಳಗೆ ಸರಾಸರಿ ವಾರ್ಷಿಕ ಬಳಕೆ ಮತ್ತು 10% ವಿದ್ಯುತ್ ಹೆಚ್ಚುವರಿ ಬಳಕೆ ಉಚಿತ. ಅದಕ್ಕಿಂತ ಹೆಚ್ಚಾದರೆ ಬಿಲ್ ಕಟ್ಟಬೇಕು ಎಂದು ಹೇಳಿದರು. ಇದನ್ನೂ ಓದಿ: ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ವಿರುದ್ಧ ಎಫ್‌ಐಆರ್

    ಗೃಹ ಜ್ಯೋತಿ ಯೋಜನೆಯ ಪ್ರಮುಖ ವಿವರಗಳು:
    * ರಾಜ್ಯದ ಎಲ್ಲಾ ಗೃಹಬಳಕೆದಾರರಿಗೆ 200 ಯೂನಿಟ್‍ಗಳವರೆಗಿನ ವಿದ್ಯುತ್ ಬಳಕೆ ಉಚಿತ.
    * 2023ರ ಆಗಸ್ಟ್‍ನಲ್ಲಿ ಗೃಹ ಜ್ಯೋತಿ ಯೋಜನೆಯಿಂದ 1.42 ಕೋಟಿ ಕುಟುಂಬಗಳಿಗೆ ಲಾಭ.
    * ಈ ಯೋಜನೆಯು ವಾಣಿಜ್ಯ ಗ್ರಾಹಕರಿಗೆ ಅನ್ವಯಿಸುವುದಿಲ್ಲ.
    * 2022- 2023ರ ಹಣಕಾಸು ವರ್ಷದ ಸರಾಸರಿ ವಿದ್ಯುತ್ ಬಳಕೆಯನ್ನು ಗಣನೆಗೆ ತೆಗೆದುಕೊಂಡು ಪ್ರತಿ ಗ್ರಾಹಕರ ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ 10 ಪ್ರತಿಶತವನ್ನು ಮಾಸಿಕ ವಿದ್ಯುತ್ ಬಳಕೆಯ ಅಂದಾಜು ನಿರ್ಧರಿಸಲಾಗುತ್ತದೆ.
    * ಗರಿಷ್ಠ ಉಚಿತ ವಿದ್ಯುತ್ ಬಳಕೆಯ ಮಿತಿಯನ್ನು 200 ಯೂನಿಟ್‍ಗಳಿಗೆ ನಿರ್ಬಂಧಿಸಲಾಗಿದೆ.
    * ಪ್ರತಿ ಬಳಕೆದಾರರಿಗೆ ನಿಗದಿಪಡಿಸಲಾದ ತಿಂಗಳ ಸರಾಸರಿ ಯೂನಿಟ್‍ಗೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡುವ ಗ್ರಾಹಕರ ಬಿಲ್ ಮೊತ್ತ ಶೂನ್ಯವಾಗಿರುತ್ತದೆ.
    * ನಿಗದಿತ ಸರಾಸರಿ ಬಳಕೆಯ ಮಿತಿ ಮೀರಿದರೂ 200 ಯೂನಿಟ್ ಒಳಗಿದ್ದರೆ ಹೆಚ್ಚುವರಿ ಯೂನಿಟ್‍ಗೆ ಮಾತ್ರ ಶುಲ್ಕ ಪಾವತಿಸಬೇಕಾಗುತ್ತದೆ.
    * ಗ್ರಾಹಕರ ಮಾಸಿಕ ಸರಾಸರಿ ಬಳಕೆಯು 200 ಯೂನಿಟ್‍ಗಳನ್ನು ಮೀರಿದರೆ ಬಿಲ್‍ನ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ.
    * ಯೋಜನೆಯ ಲಾಭ ಪಡೆಯಲು ಬಯಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿಕೊಳ್ಳಬಹುದು.
    * ಗ್ರಾಹಕರು ತಮ್ಮ ಆಧಾರ್ ಸಂಖ್ಯೆಗಳನ್ನು ಬಿಲ್‍ನಲ್ಲಿ ನಮೂದಿಸಲಾದ ಗ್ರಾಹಕ ಐಡಿ ಅಥವಾ ಖಾತೆ ಐಡಿಯೊಂದಿಗೆ ಲಿಂಕ್ ಮಾಡಬೇಕು.
    * ಭಾಗ್ಯ ಜ್ಯೋತಿ/ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಫಲಾನುಭವಿಗಳನ್ನು ಹೊಸದಾಗಿ ಪ್ರಾರಂಭಿಸಲಾದ ಗೃಹ ಜ್ಯೋತಿ ಯೋಜನೆಗೆ ಜೋಡಣೆ ಮಾಡಲಾಗುತ್ತದೆ.
    * ಯೋಜನೆಯನ್ನು ಕಾರ್ಯಗತಗೊಳಿಸಲು ಸರ್ಕಾರವು ಗೃಹ ಜ್ಯೋತಿ ಸಬ್ಸಿಡಿ ಮೊತ್ತ ಮತ್ತು FPPAC ಮೊತ್ತವನ್ನು ಎಲ್ಲಾ ESCOM ಗಳಿಗೆ ಮುಂಚಿತವಾಗಿ ಪಾವತಿಸುತ್ತದೆ. ಇಂಧನ ಇಲಾಖೆಗೆ ಇದರಿಂದ ಆರ್ಥಿಕ ಹೊರೆ ಬೀಳದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಗಸ್ಟ್‌ನಲ್ಲಿ ಬರುವ ಜುಲೈ ತಿಂಗಳ ಕರೆಂಟ್ ಬಿಲ್ ಫ್ರೀ: ಕೆಜೆ ಜಾರ್ಜ್

    ಆಗಸ್ಟ್‌ನಲ್ಲಿ ಬರುವ ಜುಲೈ ತಿಂಗಳ ಕರೆಂಟ್ ಬಿಲ್ ಫ್ರೀ: ಕೆಜೆ ಜಾರ್ಜ್

    ಚಿಕ್ಕಮಗಳೂರು: ರಾಜ್ಯದಲ್ಲಿ ಈಗಾಗಲೇ ಗೃಹಜ್ಯೋತಿ (Gruhajyothi) ಆರಂಭವಾಗಿದೆ. ಆಗಸ್ಟ್ ತಿಂಗಳಲ್ಲಿ ಬರುವ ಜುಲೈ ತಿಂಗಳ ಬಿಲ್ ಎಲ್ಲರಿಗೂ ಫ್ರೀ ಸಿಗಲಿದೆ ಎಂದು ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ (K.J.George) ಹೇಳಿದ್ದಾರೆ.

    ಚಿಕ್ಕಮಗಳೂರು (Chikkamagaluru) ನಗರದ ನೌಕರರ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಮನ್ ಚಾಂಡಿಯವರು ನಿಧನ ಹೊಂದಿದ್ದರಿಂದ ಸಭೆ ಮುಂದೆ ಹೋಗಿದೆ ಅಷ್ಟೇ. ರಾಹುಲ್ ಗಾಂಧಿ (Rahul Gandhi) ಬಾರದ ಕಾರಣ ಸಭೆ ತಾತ್ಕಾಲಿಕವಾಗಿ ಪೋಸ್ಟ್‌ಪೋನ್‌ ಆಗಿದೆ. ಯಾರ ಮೇಲೂ ಯಾರಿಗೆ ಅಸಮಾಧಾನ, ಏನೂ ಇಲ್ಲ ಎಂದರು. ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಸನ್ನಿಹಿತ – ವರಿಷ್ಠರ ಭೇಟಿಗೆ ದೆಹಲಿಗೆ ಸಿಟಿ ರವಿ

    ಯಾರೂ ಕೂಡಾ ಶಾಸಕ ಬಿ.ಆರ್.ಪಾಟೀಲ್ (B.R.Patil) ಅವರ ರಾಜೀನಾಮೆ ಕೇಳಿಲ್ಲ. ಪಾಟೀಲ್ ವಿಚಾರದಲ್ಲಿ ಒಳ್ಳೆಯದ್ದನ್ನೇ ಮಾತನಾಡಿದ್ದಾರೆ. ಕೆಲ ಸಚಿವರಿಗೆ ಬೇಜಾರು ಇರಬಹುದು. ಯಾಕೆಂದರೆ ಅಭಿವೃದ್ಧಿ ಕಾರ್ಯವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದೇವೆ. ಆದರೆ ಅದನ್ನು ಪುನಃ ಪ್ರಾರಂಭ ಮಾಡಲು ಆದೇಶ ನೀಡಲು ಮುಂದಾಗಿದ್ದಾರೆ. ಬಜೆಟ್‌ನಲ್ಲಿ ಇರುವ ಎಲ್ಲಾ ಅಭಿವೃದ್ಧಿ ಕಾರ್ಯಗಳು ಆಗುತ್ತದೆ. ಆದರೆ ಹೊಸ ಕಾರ್ಯಕ್ರಮಕ್ಕಷ್ಟೇ ನಿರ್ಬಂಧ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದಿಂದ ವರ್ಗಾವಣೆ ದಂಧೆ, ಸಿಎಂ ಕುರ್ಚಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ: ಬೊಮ್ಮಾಯಿ

    ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಕಸ್ತೂರಿ ರಂಗನ್ ವರದಿಯ ಆತಂಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾರ್ಜ್, ರಾಜ್ಯದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿವೆ. ಆದರೆ, ಯಾವ ಮಂತ್ರಿ ಮಂಡಲದಲ್ಲೂ ಸೆನ್ಸಿಟಿವ್ ಝೋನ್ ಬಗ್ಗೆ ತೀರ್ಮಾನ ಆಗಿರಲಿಲ್ಲ. ಪ್ರತಿ ಸರ್ಕಾರದ ಅವಧಿಯಲ್ಲೂ ಮುಂದೆ ಹೋಗುತ್ತಿತ್ತು. ಆದರೆ ಈಗ ಸೆನ್ಸಿಟಿವ್ ಝೋನ್ ಮಾಡಲು ಕ್ಯಾಬಿನೆಟ್ ಉಪಸಮಿತಿ ರಚನೆಗೆ ಅಧಿಕಾರ ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಕಾರ್ಯಕ್ರಮಕ್ಕೆ ಆಟೋ ಚಲಾಯಿಸಿಕೊಂಡು ಬಂದ ಶಾಸಕ ಪ್ರದೀಪ್ ಈಶ್ವರ್

    ಆ ಸಬ್ ಕಮಿಟಿ ಚರ್ಚೆಯ ಬಳಿಕ ಕ್ಯಾಬಿನೆಟ್‌ನಲ್ಲಿ ತೀರ್ಮಾನವಾಗಲಿದೆ. ಎಕೋ ಸೆನ್ಸಿಟಿವ್ ಝೋನ್ ಅನ್ನು ಎಷ್ಟು ಕಿ.ಮೀ. ಮಾಡಬೇಕು ಎಂದು ತೀರ್ಮಾನವಾಗಿರಲಿಲ್ಲ. ಹಾಗಾಗಿ ಸಬ್ ಕಮಿಟಿಯಲ್ಲಿ ಚರ್ಚೆ ಮಾಡುತ್ತಾರೆ. ಸಬ್ ಕಮಿಟಿಯ ವರದಿ ಬಂದ ಬಳಿಕ ಯಾರಿಗೂ ತೊಂದರೆಯಾಗದಂತೆ ಕ್ಯಾಬಿನೆಟ್‌ನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ನನ್ನ ಆತ್ಮಗೌರವಕ್ಕೆ ಧಕ್ಕೆಯಾದ್ರೆ ರಾಜೀನಾಮೆ ಕೊಡುತ್ತೇನೆ ಅಂತ ಹೇಳಿರೋದು ನಿಜ – ಬಿ.ಆರ್ ಪಾಟೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಈ ತಿಂಗಳ ಉಚಿತ ವಿದ್ಯುತ್‌ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ

    ಈ ತಿಂಗಳ ಉಚಿತ ವಿದ್ಯುತ್‌ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ

    ಬೆಂಗಳೂರು: ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ (Gruhajyothi Scheme) ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್‌ ಪಡೆಯಬಹುದು ಎಂದು ಇಂಧನ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ.

    ಗೃಹಜ್ಯೋತಿ ಯೋಜನೆ ನೋಂದಣಿ ಕುರಿತು ಪ್ರಕಟಣೆ ಹೊರಡಿಸಿರುವ ಇಂಧನ ಇಲಾಖೆ, ‘ಈ ಮಾಹಿತಿಯನ್ನು ಗಮನವಿಟ್ಟು ಓದಿ. ನೀವು ಜುಲೈ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ ಜುಲೈ ತಿಂಗಳಿಗೆ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತದೆ. ಅದೇ ರೀತಿ, ನೀವು ಆಗಸ್ಟ್ 25 ರೊಳಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡರೆ, ನೀವು ಆ ತಿಂಗಳಿಗೆ ನಿಮ್ಮ ಮಾಸಿಕ ಬಳಕೆಯು ಸರಾಸರಿ 200 ಯೂನಿಟ್‌ಗಳಿಗಿಂತ ಕಡಿಮೆಯಿದ್ದಲ್ಲಿ ವಿದ್ಯುತ್ ಉಚಿತವಾಗಿ ಪಡೆಯಬಹುದು. ಇದನ್ನೂ ಓದಿ: ವಿಪಕ್ಷ ನಾಯಕರ ಆಯ್ಕೆ ಬಗ್ಗೆ ಕಾಂಗ್ರೆಸ್ ತಲೆ ಕೆರೆದುಕೊಳ್ಳುವುದನ್ನು ಬಿಡಲಿ: ಬಿಜೆಪಿ ತಿರುಗೇಟು

    ಮೀಟರ್ ರೀಡಿಂಗ್ ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಖಿನವರೆಗೆ ನಡೆಯುತ್ತದೆ. ನೀವು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಕೋರಿಕೆ’ ಎಂದು ಜನತೆಗೆ ಕರೆ ಕೊಟ್ಟಿದೆ.

    ‘ಅದಕ್ಕಾಗಿ ನೀವು ಈ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳಲು ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ. ದಯವಿಟ್ಟು ನೆನಪಿಡಿ, ಈ ದಾಖಲಾತಿ ಪ್ರಕ್ರಿಯೆಯನ್ನು ನಿಮ್ಮ ಸ್ವಂತ ಹಿತಾಸಕ್ತಿಗಾಗಿ ಮಾಡಬೇಕಿದೆ. ವಿಳಂಬ ಮಾಡದೆ ಬೇಗನೆ ನೋಂದಾವಣೆ ಮಾಡಿಕೊಳ್ಳಿ ಎಂದು ಇಲಾಖೆ ಹೇಳಿದೆ. ಇದನ್ನೂ ಓದಿ: BJP ಹೈಕಮಾಂಡ್ ಬುಲಾವ್ – ಇಂದು ಬಿಎಸ್‌ವೈ ದೆಹಲಿಗೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನ್ನಭಾಗ್ಯ, ಗೃಹಜ್ಯೋತಿ ಇಂದಿನಿಂದ ಜಾರಿ

    ಅನ್ನಭಾಗ್ಯ, ಗೃಹಜ್ಯೋತಿ ಇಂದಿನಿಂದ ಜಾರಿ

    ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಶಕ್ತಿ ಯೋಜನೆ ಜಾರಿಯಾಗಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಅಂತೆಯೇ ಇಂದಿನಿಂದ (ಜು.1) ಅನ್ನಭಾಗ್ಯ (Anna Bhagya) ಮತ್ತು ಗೃಹಜ್ಯೋತಿ (Gruhajyothi) ಯೋಜನೆಗೆ ಚಾಲನೆ ದೊರೆಯಲಿದೆ.

    ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಈಗ ಅಗತ್ಯ ಪ್ರಮಾಣದ ಅಕ್ಕಿ ಸಿಕ್ಕಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಸರ್ಕಾರ ತಿಳಿಸಿದೆ. ಇದನ್ನೂ ಓದಿ: ವಿರೋಧ ಪಕ್ಷದ ನಾಯಕರು ಬೇಕಾಗಿದ್ದಾರೆ – ಟ್ವೀಟ್‌ನಲ್ಲೇ ಕಾಲೆಳೆದ ಕಾಂಗ್ರೆಸ್‌

    ಪ್ರತಿ ಕೆಜಿಗೆ 34 ರೂಪಾಯಿ ಲೆಕ್ಕದಲ್ಲಿ ತಲಾ ಒಬ್ಬರಿಗೆ 170 ರೂಪಾಯಿ ಸಿಗಲಿದೆ. ಬಿಪಿಎಲ್ ಕಾರ್ಡ್ದಾರರ ಅಕೌಂಟ್‌ಗೆ ದುಡ್ಡು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಅನ್ನಭಾಗ್ಯದ ದುಡ್ಡು ಬಿಪಿಎಲ್ ಕಾರ್ಡ್ದಾರರ ಖಾತೆಗೆ ಬೀಳಲು ಷರತ್ತುಗಳು ಅನ್ವಯವಾಗಲಿದೆ.

    ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಇಂದಿನಿಂದ ಈ ಯೋಜನೆಯೂ ಆರಂಭವಾಗಲಿದೆ. ಈ ಯೋಜನೆ ಸೌಲಭ್ಯಕ್ಕಾಗಿ ಇಲ್ಲಿವರೆಗೆ ಒಟ್ಟು 86 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 1.15 ಕೋಟಿಗೂ ಅಧಿಕ ಜನರು ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿಲ್ಲ. ಇದನ್ನೂ ಓದಿ: ತಡವಾಗಿ ಬಂದ ಬಸ್ ಅಡ್ಡಗಟ್ಟಿ ಡ್ರೈವರ್‌ಗೆ ಕ್ಲಾಸ್‌ ತೆಗೆದುಕೊಂಡ ಮಹಿಳೆಯರು

    ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಆಗಸ್ಟ್ 1 ರಿಂದ ನೀಡುವ ಬಿಲ್‌ಗೆ ಸೇರ್ಪಡೆಯಾಗುವ ರೀತಿಯಲ್ಲಿ ಯೋಜನೆ ಜಾರಿಯಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೃಹಲಕ್ಷ್ಮೀ ಆ್ಯಪ್ ಹ್ಯಾಕ್ ಬಗ್ಗೆ ಜಾರಕಿಹೊಳಿಯನ್ನೇ ಕೇಳಿ ಎಂದ ಜಾರ್ಜ್

    ಗೃಹಲಕ್ಷ್ಮೀ ಆ್ಯಪ್ ಹ್ಯಾಕ್ ಬಗ್ಗೆ ಜಾರಕಿಹೊಳಿಯನ್ನೇ ಕೇಳಿ ಎಂದ ಜಾರ್ಜ್

    ಬೆಂಗಳೂರು: ಗೃಹಲಕ್ಷ್ಮೀ ಆ್ಯಪ್ (Gruhalakshmi App) ಅನ್ನು ಕೇಂದ್ರ ಸರ್ಕಾರ ಹ್ಯಾಕ್ (Hack) ಮಾಡಿದೆ ಎಂಬ ಸತೀಶ್ ಜಾರಕಿಹೊಳಿ (Satish Jarkiholi) ಆರೋಪಕ್ಕೆ ಈ ಕುರಿತು ಅವರನ್ನೇ ಕೇಳಿ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ (K.J.George) ಪ್ರತಿಕ್ರಿಯೆ ನೀಡಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಆ್ಯಪ್ ವಿಚಾರವಾಗಿ ಸತೀಶ್ ಜಾರಕಿಹೊಳಿಯವರನ್ನು ಕೇಳಿದರೆ ಅದರ ವಿವರ ಕೊಡುತ್ತಾರೆ. ಈ ವಿಚಾರದ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಯಾವುದೇ ಸಂದರ್ಭದಲ್ಲಿ ಸಮೇತ ಹೆಚ್ಚು ಬೇಡಿಕೆಗಳು ಬಂದಾಗ ಈ ರೀತಿಯಾದ ಸಮಸ್ಯೆಗಳು ಎದರಾಗುತ್ತವೆ. ತುಂಬಾ ಜನ ಒಂದೇ ಸಲ ಹೋಗಿ ಅರ್ಜಿ ಸಲ್ಲಿಕೆ ಮಾಡಿದಾಗ ಈ ರೀತಿಯಾಗುತ್ತದೆ ಎಂದರು. ಇದನ್ನೂ ಓದಿ: ಕಾಂಗ್ರೆಸ್‍ನಿಂದಲೇ ಸರ್ವರ್ ಹ್ಯಾಕ್ – ಇವಿಎಂ ಹ್ಯಾಕ್ ಮಾಡಿ ಕಾಂಗ್ರೆಸ್ ಗೆದ್ದಿರಬಹುದು ಎಂದ ಮುನಿಸ್ವಾಮಿ

    ನೋಂದಣಿ ಸಾಮರ್ಥ್ಯ 5 ಲಕ್ಷ ಇತ್ತು. ಅದು ಈಗ ಹೆಚ್ಚಾಗಿದ್ದರಿಂದ ಸಮಸ್ಯೆಗಳು ಎದುರಾಗಿದೆ. ಜನರು ಏಕಾಏಕಿ ನೋಂದಣಿ ಮಾಡಿಸುತ್ತಿರುವುದರಿಂದ ಸರ್ವರ್ (Server) ಸಮಸ್ಯೆ ಆಗುತ್ತಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಸಮಸ್ಯೆ ಸರಿ ಆಗದಿದ್ದರೂ ಜನ ಯಾರೂ ಗಾಬರಿ ಪಡಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಶಾಲಾ ಮಕ್ಕಳ ಮೊಟ್ಟೆಗೆ ಕತ್ತರಿ ಹಾಕಿದ ಸರ್ಕಾರ

    ಒಂದೇ ಸಲ ಹೆಚ್ಚು ಜನ ನೋಂದಣಿ ಮಾಡುತ್ತಿರುವುದರಿಂದ ಸರ್ವರ್ ಪ್ರಾಬ್ಲಮ್ ಆಗುವುದು ಸಹಜ. ಗೃಹಜ್ಯೋತಿ (Gruhajyothi) ನೋಂದಣಿಗೆ ನಾವು ಡೆಡ್‌ಲೈನ್ ಕೊಡಲಿಲ್ಲ. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯುತ್ತದೆ. ಇದಕ್ಕೆ ಟೋಕನ್ ಸಿಸ್ಟಮ್ ಜಾರಿ ಮಾಡುವಂತೆ ಸೂಚನೆ ನೀಡಿದ್ದೇವೆ ಎಂದರು. ಇದನ್ನೂ ಓದಿ: ಆಧುನಿಕ ಆರೋಗ್ಯ ಸಮಸ್ಯೆಗಳಿಗೆ ಯೋಗ ಮದ್ದು: ದಿನೇಶ್ ಗುಂಡೂರಾವ್

    ಗೃಹಜ್ಯೋತಿ ಯೋಜನೆಯಲ್ಲಿ ಜನರು 59 ಯೂನಿಟ್‌ನಿಂದ 200 ಯೂನಿಟ್ ಒಳಗಿನ ವ್ಯತ್ಯಾಸ ಎಷ್ಟು ಬರುತ್ತದೆ ಅಷ್ಟು ಕಟ್ಟಿದರೆ ಸಾಕು. ಉಳಿದಂತೆ 200 ಯೂನಿಟ್ ದಾಟಿದರೆ ಪೂರ್ತಿ ಕಟ್ಟಬೇಕಾಗುತ್ತದೆ. ವಿದ್ಯುತ್ ದರ ಮಾರ್ಚ್‌ನಲ್ಲಿ ಏರಿಕೆಯಾಗುತ್ತಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಅದನ್ನು ಮೇಯಲ್ಲಿ ಏರಿಕೆ ಮಾಡಿರುವುದರಿಂದ ಸಮಸ್ಯೆ ಆಗುತ್ತಿದೆ. ಈ ಕುರಿತು ನಾವು ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಟ್ಯಾಕ್ಸ್ ಇಳಿಕೆ ಕುರಿತು ಸಿಎಂ ಜೊತೆ ಚರ್ಚೆ ಮಾಡಿದ ಬಳಿಕ ನಿರ್ಧಾರ ಮಾಡುತ್ತೇವೆ. ಈ ಕುರಿತು ನಾನು ಯಾವುದೇ ಭರವಸೆ ನೀಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅನ್ನ ಭಾಗ್ಯ ಫೈಟ್‌ ದೆಹಲಿಗೆ ಶಿಫ್ಟ್‌