Tag: growth

  • ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಶಿಕ್ಷಣ ನೀತಿಯನ್ನು ಅನುಷ್ಟಾನಕ್ಕೆ ತರಬೇಕು : ಕೆ.ಎಸ್.ಈಶ್ವರಪ್ಪ

    ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಶಿಕ್ಷಣ ನೀತಿಯನ್ನು ಅನುಷ್ಟಾನಕ್ಕೆ ತರಬೇಕು : ಕೆ.ಎಸ್.ಈಶ್ವರಪ್ಪ

    ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ವೃತ್ತಿಪರತೆ, ಕೌಶಲ್ಯತೆ, ಸಂಸ್ಕೃತಿ ಮತ್ತು ಆರ್ಥಿಕ ಸಬಲತೆ ನೀಡುವ ಶಿಕ್ಷಣ ನಮ್ಮದಾಗಬೇಕೆಂಬ ಉದ್ದೇಶದಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗಿದ್ದು, ಶಿಕ್ಷಕರಾದಿಯಾಗಿ ಎಲ್ಲರೂ ಈ ಬಗ್ಗೆ ಅಧ್ಯಯನ ಮಾಡಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ವಿಚಾರಗಳು, ನಮ್ಮ ನಾಡಿನ ಸಂಸ್ಕೃತಿ ಜೊತೆಗೆ ತಾಂತ್ರಿಕತೆಗೆ ಒತ್ತು ನೀಡುವ ಶಿಕ್ಷಣ ನೀತಿ ಇದಾಗಿದೆ. ಪರ ವಿರೋಧ ಎಲ್ಲೆಡೆ ಇರುತ್ತದೆ. ಆದರೆ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಶಿಕ್ಷಣ ನೀತಿಯನ್ನು ಎಲ್ಲರೂ ತಿಳಿದು ಅನುಷ್ಠಾನಗೊಳಿಸಬೇಕು ಎಂದರು. ಇದನ್ನೂ ಓದಿ: ರಾಯನ್ ರಾಜ್ ಸರ್ಜಾಗೆ ದೇವರು ಪ್ರಪಂಚದ ಪ್ರತಿಯೊಂದು ಸಂತೋಷವನ್ನು ನೀಡಲಿ: ಸುಮಲತಾ

    ಲೋಕೋಪಯೋಗಿ ಸಚಿವ ಸಿ.ಸಿ.ಪಾಟಿಲ್ ಮಾತನಾಡಿ, ಮನುಷ್ಯನನ್ನು ಒಂದು ವ್ಯಕ್ತಿ ಮತ್ತು ಶಕ್ತಿಯನ್ನಾಗಿ ರೂಪಿಸುವ ಸಾಮಥ್ರ್ಯ ಕೇವಲ ಶಿಕ್ಷಕರಿಗಿದ್ದು, ನಮ್ಮ ಸಂಸ್ಕೃತಿಯಲ್ಲಿ ತಾಯಿ-ತಂದೆ ನಂತರದ ಸ್ಥಾನ ಶಿಕ್ಷಕರು ತುಂಬುತ್ತಾರೆ. ಎಲ್ಲಾ ಮಕ್ಕಳಿಗೆ ಮೌಲ್ಯಾಧಾರಿತ ಮತ್ತು ಸರ್ವತೋಮುಖ ಬೆಳವಣಿಗೆ ಆಗುವಂತಹ ಶಿಕ್ಷಣ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್ ಸಂಕಷ್ಟದಲ್ಲಿ ಅನೇಕ ಶಿಕ್ಷಕರು ತಮ್ಮ ಜೀವದ ಹಂಗು ತೊರೆದು ಯೋಧರಂತೆ ಸೇವೆ ಸಲ್ಲಿಸಿರುವುದು ಶ್ಲಾಘನೀಯವಾಗಿದ್ದು, ಕೋವಿಡ್‍ನಿಂದ ಮೃತ ಹೊಂದಿದ ಶಿಕ್ಷಕರ ಪರವಾಗಿ ಸರ್ಕಾರ ಇದೆ. ತುಂಬ ಕಾಲ ಶಾಲೆಯಿಂದ ಮಕ್ಕಳು ಹೊರಗುಳಿಯುವುದು ರಾಷ್ಟ್ರೀಯ ಹಿತದೃಷ್ಟಿಯಿಂದ ಒಳ್ಳೆಯದಲ್ಲವೆಂದು ಸರ್ಕಾರ ಶಾಲೆ ಆರಂಭಿಸುವ ನಿರ್ಧಾರ ಮಾಡಿ ಶಾಲೆ ಆರಂಭಿಸಿದ್ದು, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು. ಇದನ್ನೂ ಓದಿ:  ಕುರಿಗಾರರ ಜೊತೆಗೆ ಕುಳಿತು ಊಟ ಮಾಡಿದ ನಟ ಪುನೀತ್

    ಇದೇ ವೇಳೆ 2021 ನೇ ಸಾಲಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ವಿಶೇಷ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

  • ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ನವದೆಹಲಿ: ಕೇಂದ್ರ ಎನ್‍ಡಿಎ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಜೂನ್ ಅಂತ್ಯಕ್ಕೆ ಮುಕ್ತಾಯವಾದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಶೇ. 8.2 ಪ್ರಗತಿ ದಾಖಲಿಸಿದೆ.

    ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ 5.59 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ ಅಂತಿಮ ತ್ರೈಮಾಸಿಕದ ವೇಳೆಗೆ ಶೇ.7.7 ಕ್ಕೆ ಏರಿಕೆ ಆಗಿತ್ತು. ಎನ್‍ಡಿಎ ಸರ್ಕಾರ ಕೈಗೊಂಡ ಆರ್ಥಿಕ ಕ್ರಮಗಳ ಬಳಿಕ ಕುಸಿತಗೊಂಡಿದ್ದ ದೇಶದ ಜಿಡಿಪಿ ದರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಭಾರೀ ಏರಿಕೆ ಆಗಿದ್ದು, ಕೇಂದ್ರ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.

    ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉಂಟಾಗಿರುವ ಪ್ರಗತಿಯ ಕಾರಣ ಜಿಡಿಪಿ ದರ ಏರಿಕೆ ಆಗಿದ್ದು, ಪ್ರಮುಖವಾಗಿ ಉತ್ಪಾದನಾ ಕ್ಷೇತ್ರದಲ್ಲಿ 13.5% ಬೆಳವಣಿಗೆ ದಾಖಲಾಗಿದೆ. ಈ ಹಿಂದಿನ ವರ್ಷದ ಈ ತ್ರೈಮಾಸಿಕದ ಅವಧಿ ವೇಳೆ ಈ ಕ್ಷೇತ್ರದಲ್ಲಿ ಶೇ.1.8 ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಾಗಿತ್ತು.

    ಯಾವ ಅವಧಿಯಲ್ಲಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.6%
    ಸೆಪ್ಟೆಂಬರ್ 2017 – 6.3%
    ಡಿಸೆಂಬರ್ 2017 – 7.0%
    ಮಾರ್ಚ್ 2018 – 7.7%
    ಜೂನ್ 2018 – 8.2%

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

    ಜಾಗತಿಕ ಆರ್ಥಿಕತೆಯಲ್ಲಿ ಚೀನಾವನ್ನು ಹಿಂದಿಕ್ಕಲಿದೆ ಭಾರತ

    ನವದೆಹಲಿ: ಜಾಗತಿಕ ಆರ್ಥಿಕತೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಲಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ.

    ಅಮೆರಿಕದ ಹಾರ್ವರ್ಡ್ ವಿವಿಯ ಸೆಂಟರ್ ಫಾರ್ ಇಂಟರ್‍ನ್ಯಾಷನಲ್ ಡೆವಲಪ್‍ಮೆಂಟ್ (ಸಿಐಡಿ) ಅಧ್ಯಯನದ ಪ್ರಕಾರ 2025ರವರೆಗೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಹೊರಹೊಮ್ಮುವ ಆರ್ಥಿಕ ಶಕ್ತಿಯಾಗಿ ಭಾರತ ಉದಯಿಸಲಿದೆ. ಈ ಸಂದರ್ಭದಲ್ಲಿ ವಾರ್ಷಿಕ ಜಿಡಿಪಿ ಬೆಳವಣಿಗೆ ದರ ಶೇ.7.7 ಇರಲಿದೆ ಎಂದು ಅದು ಅಂದಾಜಿಸಿದೆ.

    ರಾಸಾಯನಿಕ, ವಾಹನ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳ ಬೆಳವಣಿಗೆಯಿಂದ ಭಾರತದ ಆರ್ಥಿಕತೆ ಪ್ರಗತಿ ಕಾಣಲಿದೆ ಎಂದು ಅದು ಅಂದಾಜಿಸಿದೆ.

    ರಾಜಕೀಯ, ಭೌಗೋಳಿಕ, ಸಾಂಸ್ಥಿಕ ಕ್ಷೇತ್ರಗಳಿಂದಾಗಿ, ಭಾರತದ ಜೊತೆ ಇಂಡೋನೇಷ್ಯಾ, ವಿಯೆಟ್ನಾಂ, ಟರ್ಕಿ, ಉಗಾಂಡ, ಬಲ್ಗೇರಿಯಾ ದೇಶಗಳ ಆರ್ಥಿಕತೆಗಳು ವೇಗವಾಗಿ ಬೆಳವಣಿಗೆಯಾಗಲಿದೆ ಎಂದು ಸಿಐಡಿ ತಿಳಿಸಿದೆ.