Tag: grows

  • ಟೆರೇಸ್ ಮೇಲೆ ಪುಟ್ಟ ಕಾಡು – ಬೆಳೆದು ನಿಂತ 2500ಕ್ಕೂ ಹೆಚ್ಚು ಮರಗಳು

    ಟೆರೇಸ್ ಮೇಲೆ ಪುಟ್ಟ ಕಾಡು – ಬೆಳೆದು ನಿಂತ 2500ಕ್ಕೂ ಹೆಚ್ಚು ಮರಗಳು

    ಭೋಪಾಲ್: ಮನೆಯ ಟೆರೇಸ್ ಮೇಲೆ 40 ಪ್ರಭೇದದ, 2500ಕ್ಕೂ ಹೆಚ್ಚು ಬೋನ್ಸಾಯ್ ಮರಗಳನ್ನು ಬೆಳೆಸಿ ಅರಣ್ಯವನ್ನಾಗಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದಾರೆ. ಈ ಪುಟ್ಟ ಕಾಡಿನ ಫೋಟೋಗಳು ಇಂದಿನ ವಿಶ್ವ ಪರಿಸರ ದಿನಾಚರಣೆ ದಿನ ಸಿಕ್ಕಾಪಟೆ ವೈರಲ್ ಆಗಿವೆ. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

    ಸೋಹನ್ ಲಾಲ್ ದ್ವಿವೇದಿ ಅವರು ಮನೆಯ ಟೆರೇಸ್ ಮೇಲೆ 40 ಪ್ರಭೇದದ, 2500ಕ್ಕೂ ಹೆಚ್ಚು ಬೋನ್ಸಾಯ್ ಮರಗಳನ್ನು ಬೆಳೆಸಿ ಅರಣ್ಯ ನಿರ್ಮಿಸಿದ್ದಾರೆ. ಸೋಹನ್ ಲಾಲ್ ಅವರು ವಿದ್ಯುತ್ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದರು. ಉದ್ಯೋಗದಿಂದ ನಿವೃತ್ತಿಹೊಂದಿದ ನಂತರ ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೀಗೆ ಬೋನ್ಸಾಯ್ ಅರಣ್ಯ ನಿರ್ಮಾಣ ಮಾಡಲು ಮುಂಬೈ ಮೂಲದ ಮಹಿಳೆಯೊಬ್ಬರೇ ಸ್ಫೂರ್ತಿ ಎನ್ನುತ್ತಾರೆ ಸೋಹನ್ ಲಾಲ್.

    ಆಕೆ ಟೆರೇಸ್ ಮೇಲೆ 250 ಬೋನ್ಸಾಯ್ ಮರಗಳನ್ನು ನೆಟ್ಟಿ-ಬೆಳೆಸಿದ್ದರು. ಆಕೆಯ ಬಗ್ಗೆ ಪತ್ರಿಕೆಯಲ್ಲಿ ಓದಿದ್ದ ಸೋಹನ್ ಲಾಲ್ ತಾನೂ ಯಾಕೆ ಅದನ್ನು ಮಾಡಬಾರದು ಎಂದು ಯೋಚಿಸಿ, ಕಾರ್ಯಪ್ರವೃತ್ತರಾದರು. ಇದೀಗ ಇವರ ಮನೆ ಟೆರೇಸ್‍ಗೆ ಹೋದರೆ ಅಲ್ಲೊಂದು ಬೋನ್ಸಾಯ್ ಕಾಡು ನಿರ್ಮಾಣವಾಗಿದ್ದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

    ಬೋನ್ಸಾಯ್ ಮರಗಳೆಂದರೆ ಪುಟ್ಟಪುಟ್ಟ ಮರಗಳು. ಅವು ನೋಡಲೂ ಅಷ್ಟೇ ಸುಂದರವಾಗಿರುತ್ತದೆ. ಸೋಹನ್‍ಲಾಲ್ ಅವರ ಮನೆ ಟೆರೇಸ್ ಮೇಲೆ ಸೇಬು, ಹುಣಸೆ ಸೇರಿ ಒಟ್ಟು 40 ವಿವಿಧ ತಳಿಗಳು ಇವೆ. ನಾನು ನನ್ನ ಸಂಬಳದ ಬಹುತೇಕ ಭಾಗವನ್ನು ಈ ಹಸಿರು ಮರಗಳಿಗಾಗಿ ಬಳಕೆ ಮಾಡಿದ್ದೇನೆ. ಇವತ್ತಿಗೂ ದಿನದ ಬಹುತೇಕ ಸಮಯ ಇಲ್ಲಿಯೇ ಕಳೆಯುತ್ತೇನೆ ಎನ್ನುತ್ತಾರೆ ಸೋಹನ್‍ಲಾಲ್. ಅದರಲ್ಲೂ ಈಗಂತೂ ಲಾಕ್‍ಡೌನ್. ನನಗೆ ಮನೆಯಿಂದ ಹೊರಹೋಗಿ ಯಾವುದೇ ಕೆಲಸ ಮಾಡಲೂ ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯ ಟೆರೇಸ್‍ನಿಂದ ನನಗೆ ತುಂಬ ಆರಾಮ ಎನ್ನಿಸಿದೆ ಎಂದಿದ್ದಾರೆ.