Tag: Group photo

  • ಮಲೇಷ್ಯಾದಲ್ಲಿ ರಾಕಿಂಗ್ ಸ್ಟಾರ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್ : ವ್ಹಾವ್ ಎಂದ ಯಶ್

    ಮಲೇಷ್ಯಾದಲ್ಲಿ ರಾಕಿಂಗ್ ಸ್ಟಾರ್ ಗೆ ಸಿಕ್ತು ಸ್ಪೆಷಲ್ ಗಿಫ್ಟ್ : ವ್ಹಾವ್ ಎಂದ ಯಶ್

    ರಾಕಿಭಾಯ್ ಯಶ್ (Yash) ಇಂದು ಮಲೇಷ್ಯಾಗೆ ಹಾರಿದ್ದರು. ನಾಲ್ಕೈದು ಗೆಳೆಯರೊಂದಿಗೆ ವಿಶೇಷ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದ ಅವರು, ಇಂದು ಮಲೇಷ್ಯಾದಲ್ಲಿ (Malaysia) ಚಿನ್ನದ ಅಂಗಡಿಯೊಂದರ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಮಲೇಷ್ಯಾದಲ್ಲಿ ವಾಸವಿರುವ ಅವರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶ್ ಅವರಿಗೆ ನೀಡಲಾದ ಗಿಫ್ಟ್ (Gift) ಸಾಕಷ್ಟು ವೈರಲ್ ಕೂಡ ಆಗಿದೆ.

    ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್, ಇಬ್ಬರು ಮಕ್ಕಳು ಹಾಗೂ ಯಶ್ ಅವರ ತಂದೆ-ತಾಯಿ ಇರುವಂತಹ ಗ್ರೂಪ್ ಫೋಟೋವನ್ನು (Group Photo) ಪ್ರಸಿದ್ಧ ಕಲಾವಿದರ ಜೊತೆ ಪೇಟಿಂಗ್ ಮಾಡಿಸಿ, ಉಡುಗೊರೆಯಾಗಿ ನೀಡಿದ್ದಾರೆ. ಆ ಫೋಟೋವನ್ನು ಅವರೇ ಬಿಡುಗಡೆಗೊಳಿಸಿ ಬೆರಗಿನಿಂದ ನೋಡಿದರು ಯಶ್. ಆ ವಿಡಿಯೋ ಕೂಡ ವೈರಲ್ ಆಗಿದೆ. ಇದನ್ನೂ ಓದಿ:ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ರಾನಿ’ ಸಿನಿಮಾದ ಟೀಸರ್ ಔಟ್

    ಬೆಂಗಳೂರಿನಿಂದ ಹೊರಟ ವಿಶೇಷ ವಿಮಾನದಲ್ಲಿ ಪಾನಿಪುರಿ ಕಿಟ್ಟಿ (Panipuri Kitty) ಸೇರಿದಂತೆ ಹಲವರು ಇದ್ದಾರೆ. ಇಂದು ಮಲೇಷ್ಯಾಗೆ ಬಂದಿಳಿದಿರುವ ತಮ್ಮ ನೆಚ್ಚಿನ ನಟನನ್ನು ನೋಡುವುದಕ್ಕಾಗಿ ಅಲ್ಲಿನ ಅಭಿಮಾನಿಗಳು ಕಾಯುತ್ತಿದ್ದರು ಎನ್ನುತ್ತಾರೆ ಯಶ್ ಆಪ್ತರು. ಚಿನ್ನದ ಅಂಗಡಿ ಉದ್ಘಾಟನೆಯ ನಂತರ ಮುಂದಿನ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡದೇ ಇದ್ದರೂ, ಕಾರ್ಯಕ್ರಮದ ನಂತರ ಫ್ಯಾನ್ಸ್ ಭೇಟಿ ಮಾಡುವುದು ಖಚಿತ ಎಂದಿದ್ದರು.

    ಕೆಜಿಎಫ್ 2 ಸಿನಿಮಾದ ನಂತರ ಮುಂದಿನ ಚಿತ್ರದ ಬಗ್ಗೆ ಫ್ಯಾನ್ಸ್ ಕಾಯುತ್ತಿದ್ದಾರೆ. ಹೊಸ ಸಿನಿಮಾ ಯಾವಾಗ ಶುರು ಎಂದು ಕಳೆದ ಒಂದು ವರ್ಷದಿಂದಲೂ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ, ಯಶ್ ಮಾತ್ರ ಯಾವುದೇ ಅಪ್ ಡೇಟ್ ನೀಡದೇ ಮೌನವಹಿಸಿದ್ದಾರೆ. ಹಾಗಂತ ಅವರು ಸುಮ್ಮನೆ ಕುಳಿತಿಲ್ಲ ಎನ್ನುವುದನ್ನೂ ಸ್ಪಷ್ಟ ಪಡಿಸಿದ್ದಾರೆ. ಹೊಸ ಸಿನಿಮಾದ ಕೆಲಸದಲ್ಲೇ ಬ್ಯುಸಿಯಾಗಿದ್ದೇನೆ ಎಂದೂ ಸ್ಪಷ್ಟನೆ ನೀಡಿದ್ದಾರೆ.

     

    ಮೊನ್ನೆಯಷ್ಟೇ ನಂಜನಗೂಡಿಗೆ ಆಗಮಿಸಿದ್ದ ಯಶ್, ‘ನಾನು ದುಡ್ಡಿಗಾಗಿ ಸಿನಿಮಾ ಮಾಡುವುದಿಲ್ಲ. ಸಿನಿಮಾವನ್ನು ಯಾರೂ ಫ್ರೀಯಾಗಿ ನೋಡುವುದಿಲ್ಲ. ಹಾಗಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿದೆ. ಒಂದು ನಿಮಿಷವನ್ನೂ ಹಾಳು ಮಾಡಿಕೊಳ್ಳದೇ ಹೊಸ ಸಿನಿಮಾದ ಕೆಲಸವನ್ನು ಮಾಡುತ್ತಿದ್ದೇನೆ. ಅತೀ ಶೀಘ್ರದಲ್ಲೇ ಅಪ್ ಡೇಟ್ ನೀಡುತ್ತೇನೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಪಂಜಾಬ್ ಪೊಲೀಸರ ಗ್ರೂಪ್ ಫೋಟೋ ವೈರಲ್: ನೆಟ್ಟಿಗರಿಂದ ಭಾರೀ ಕಮೆಂಟ್ಸ್

    ಚಂಡೀಗಢ: ಕಳ್ಳರನ್ನು ಹಿಡಿದ ಮೇಲೆ ಪೊಲೀಸರು ಗ್ರೂಪ್ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಆದರೆ ಪಂಜಾಬ್ ಪೊಲೀಸರು ಈಗ ಇಂತಹದ್ದೇ ಗ್ರೂಪ್ ಫೋಟೋ ಸಾಮಾಜಿಕ ಜಾಲತಾಣಲದಲ್ಲಿ ವೈರಲ್ ಆಗಿದ್ದು, ಪರ ಹಾಗೂ ವಿರೋಧ ಕಮೆಂಟ್ಸ್‍ಗಳು ಹರಿದಾಡುತ್ತಿವೆ.

    ಏನಿದೆ ಫೋಟೋದಲ್ಲಿ?
    ಗ್ರೂಪ್ ಫೋಟೋ ತೆಗೆಸುತ್ತಿರುವ ವೇಳೆ ಆರೋಪಿಗಳನ್ನು ಕುರ್ಚಿ ಮೇಲೆ ಕೂರಿಸಲಾಗಿರುತ್ತದೆ. ಆದರೆ ತಮ್ಮ ತಪ್ಪಿನಿಂದ ಎಚ್ಚೆತ್ತ ಪೊಲೀಸರು ಪುನಃ ಆರೋಪಿಗಳನ್ನು ಕೆಳಗೆ ಕೂರಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಈ ಎರಡು ಫೋಟೋಗಳನ್ನು ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ಸ್ ಕೇಳಿಬರುತ್ತಿವೆ.

    ಪಂಜಾಬ್ ಪೊಲೀಸರು ಇಂತಹದಕ್ಕೆ ಉತ್ತಮರು. ದರೋಢೆಕೊರರ ಜೊತೆ ಪೂರ್ಣ ಗೌರವ ನೀಡುವ ಗ್ರೂಪ್ ಫೋಟೋ ತಗೆಸಿಕೊಂಡಿದ್ದಾರೆ ಎಂದು ಬರೆದು ಅಮನ್ ಸಿಂಗ್ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.

    ಇದರಲ್ಲಿ ಯಾವುದೇ ತಪ್ಪಿಲ್ಲ. ಇದೊಂದು ಸೌಜನ್ಯದ ಸಂಕೇತ. ಆರೋಪ ಸಾಬೀತು ಆಗುವವರೆಗೆ ಅವರು ಮುಗ್ಧರು ಎಂದು ಕಾನೂನಿನಲ್ಲಿದೆ ಎಂದು ಬರೆದು ಗುರ್ಸಾಟಿಂದರ್ ಸಿಂಗ್ ಟ್ವೀಟ್ ಮಾಡಿ, ಪೊಲೀಸರನ್ನು ಬೆಂಬಲಿಸಿದ್ದಾರೆ.

    https://twitter.com/Gursatinder68/status/1019808763258081280