Tag: group collision

  • ಎಮ್ಮೆ ಓಡಿಸೋ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ: ಓರ್ವ ಗಂಭೀರ ಗಾಯ

    ಎಮ್ಮೆ ಓಡಿಸೋ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ, ಕಲ್ಲು ತೂರಾಟ: ಓರ್ವ ಗಂಭೀರ ಗಾಯ

    ಬೆಳಗಾವಿ: ಎಮ್ಮೆ ಓಡಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾಗ್ದಾಳಿ ನಡೆದು, ಬಳಿಕ ಕಲ್ಲು ತೂರಾಟ ನಡೆದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಸರ್ದಾರ್ ಮೈದಾನದಲ್ಲಿ ನಡೆದಿದೆ.

    ದೀಪಾವಳಿ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಪ್ರತಿ ವರ್ಷವೂ ಎಮ್ಮೆಗಳನ್ನು ಅಲಂಕಾರ ಮಾಡಿ, ಅವುಗಳನ್ನು ಓಡಿಸಲಾಗುತ್ತದೆ. ಹೀಗಾಗಿ ಸರ್ದಾರ್ ಮೈದಾನದಲ್ಲಿ ಇಂದು ಎಮ್ಮೆ ಓಡಿಸಲಾಗುತ್ತಿತ್ತು. ಇದನ್ನು ನೋಡಲು ಬೆಳಗಾವಿ ನಗರ ಹಾಗೂ ತಾಲೂಕಿನ ವಿವಿಧ ಹಳ್ಳಿಗಳಿಂದ ಸಾವಿರಾರು ಜನರು ಬಂದಿದ್ದರು.

    ಎಮ್ಮೆಗಳಿಗೆ ಮದ್ಯ ಕುಡಿಸಿ, ತಾವೂ ಕುಡಿದು ಯುವಕರು ಎಮ್ಮೆಗಳನ್ನು ಓಡಿಸುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಕಲ್ಲು ತೂರಾಡಿಕೊಂಡಿದ್ದಾರೆ.

    ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಲಘು ಲಾಠಿ ಚಾರ್ಚ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಹೋಗಿ 8ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

    ಕಲ್ಲು ತಾಗಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 22 ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಸವ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ – ಗುಂಡ್ಲುಪೇಟೆಯಲ್ಲಿ ಪರಿಸ್ಥಿತಿ ಉದ್ವಿಗ್ನ

    ಬಸವ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ – ಗುಂಡ್ಲುಪೇಟೆಯಲ್ಲಿ ಪರಿಸ್ಥಿತಿ ಉದ್ವಿಗ್ನ

    ಚಾಮರಾಜನಗರ: ಬಸವ ಜಯಂತಿ ಮೆರವಣಿಗೆ ವೇಳೆ ಎರಡು ಕೋಮುಗಳ ನಡುವೆ ಕಲ್ಲು ತೂರಾಟವಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.

    ಗುಂಡ್ಲುಪೇಟೆ ಪಟ್ಟಣದ ಚಾಮರಾಜನಗರ ರಸ್ತೆಯಲ್ಲಿ ಮೆರವಣಿಗೆ ಹೋಗುವ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡವರು ಧಾರ್ಮಿಕ ಸ್ಥಳದ ಮುಂದೆ ಪಟಾಕಿ ಸಿಡಿಸಿದ್ದಾರೆ. ಈ ವೇಳೆ ಇನ್ನೊಂದು ಗುಂಪು ಮೆರವಣಿಗೆಯಲ್ಲಿ ಪಾಲ್ಗೊಂಡವರ ಮೇಲೆ ಖಾರದ ಪುಡಿ ಎರಚಿದೆ. ಇದರಿಂದ ಉದ್ವಿಗ್ನಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಇನ್ನೊಂದು ಕೋಮಿನ ಹೋಟೆಲ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

    ಗುಂಪು ಘರ್ಷಣೆಯಿಂದಾಗಿ ಗುಂಡ್ಲುಪೇಟೆ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದನ್ನು ಹತೋಟಿ ತರಲು ಪೊಲೀಸರು ಎರಡು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಪಡಿಸಿ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.

  • ಸ್ಮಶಾನ ಜಾಗಕ್ಕಾಗಿ ಹೊಡೆದಾಟ: 50ಕ್ಕೂ ಹೆಚ್ಚು ಜನರಿಗೆ ಗಾಯ

    ಸ್ಮಶಾನ ಜಾಗಕ್ಕಾಗಿ ಹೊಡೆದಾಟ: 50ಕ್ಕೂ ಹೆಚ್ಚು ಜನರಿಗೆ ಗಾಯ

    ಕೋಲಾರ: ಸ್ಮಶಾನ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳು ಹೊಡೆದಾಡಿಕೊಂಡು, 50ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಜಿಲ್ಲೆಯ ವೇಮಗಲ್ ಹೋಬಳಿಯ ಹೊಲೇರಹಳ್ಳಿಯಲ್ಲಿ ನಡೆದಿದೆ.

    ಇಂದು ಕಂದಾಯ ಇಲಾಖೆ ಅಧಿಕಾರಿಗಳು ಸ್ಮಶಾನದ ಸರ್ವೇ ನಡೆಸುತ್ತಿದ್ದರು. ಸ್ಥಳದಲ್ಲಿ ಸುಮಾರು 80ಕ್ಕೂ ಹೆಚ್ಚು ಜನರು ಸೇರಿದ್ದರು. ಸಶ್ಮಾನ ಜಾಗ ಒತ್ತುವರಿ ಆಗಿಲ್ಲ ಎಂದು ಒಂದು ಗುಂಪು ವಾದಕ್ಕೀಳಿದಾಗ ಮಾತಿನ ಚಕಮಕಿ ಪ್ರಾರಂಭವಾಗಿದ್ದು, ಪರಿಸ್ಥಿತಿ ಕೈ ಮೀರಿದ ಪರಿಣಾಮ ಹೊಡೆದಾಡಿಕೊಂಡಿದ್ದು, ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಗುಂಪು ಘರ್ಷಣೆ ಏಕೆ?
    ಸ್ಮಶಾನದ ಒತ್ತುವರಿ ಮಾಡಲಾಗಿದೆ ಎಂದು ಹೊಲೇರಹಳ್ಳಿಯ ಗ್ರಾಮದ ಒಂದು ಗುಂಪು ಕಂದಾಯ ಇಲಾಖೆಗೆ ದೂರು ನೀಡಿತ್ತು. ಆದರೆ ಯಾವುದೇ ಒತ್ತುವರಿ ಆಗಿಲ್ಲವೆಂದು ಮತ್ತೊಂದು ಗುಂಪಿನ ಸದಸ್ಯರು ಪಟ್ಟು ಹಿಡಿದಿದ್ದರು. ದೂರು ದಾಖಲಿಸಿಕೊಂಡಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಇಂದು ಸ್ಮಶಾನ ಸರ್ವೇಗೆ ಗ್ರಾಮಕ್ಕೆ ಬಂದಿದ್ದಾಗ ಗುಂಪುಗಳು ಹೊಡೆದಾಡಿಕೊಂಡಿವೆ.

    ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೇಮಗಲ್ ಠಾಣೆ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ವೇಮಗಲ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೀರಿಗಾಗಿ ಹೊತ್ತಿ ಉರಿದವು ನೂರಕ್ಕೂ ಹೆಚ್ಚು ಅಂಗಡಿಗಳು

    ನೀರಿಗಾಗಿ ಹೊತ್ತಿ ಉರಿದವು ನೂರಕ್ಕೂ ಹೆಚ್ಚು ಅಂಗಡಿಗಳು

    ಮುಂಬೈ: ನೀರಿಗಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ್ದು, ಈಡೀ ನಗರವೇ ಹೊತ್ತಿ ಉರಿದ ಘಟನೆ ಶುಕ್ರವಾರ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

    ಧಾರ್ಮಿಕ ಸ್ಥಳವೊಂದಕ್ಕೆ ಅಕ್ರಮವಾಗಿ ನೀರಿ ಸಂಪರ್ಕ ಕಲ್ಪಿಸಲಾಗಿತ್ತು. ಸಂಪರ್ಕವನ್ನು ಕಡಿತಗೊಳಿದ್ದರಿಂದ ಮಾತಿನ ಚಕಮಕಿ ಸಂಭವಿಸಿದೆ. ನಂತರ ಇದು ತಿರುವು ಪಡೆದುಕೊಂಡ ಪರಿಣಾಮ ಎರಡು ಗುಂಪುಗಳು ಘರ್ಷಣೆಗೆ ಮುಂದಾಗಿದೆ ಎಂದು ವರದಿಯಾಗಿದೆ.

    ನಂತರ, ನಗರದ ಈ ಎರಡೂ ಗುಂಪಿನ ಯುವಕರು ಬೀದಿಗಿಳಿದು ಪರಸ್ಪರ ಕಲ್ಲು ತುರಾಟ ನಡೆಸಿದ್ದಾರೆ. ಕೆಲವು ಕಿಡಿಗೇಡಿಗಳು ವಾಹನಗಳಿಗೂ ಬೆಂಕಿ ಹಚ್ಚಿದ್ದು, ಈ ವೇಳೆ ಸುಮಾರು 100 ಅಂಗಡಿಗಳಿಗೂ ಬೆಂಕಿ ಹತ್ತಿಕೊಂಡಿದೆ. ತಡರಾತ್ರಿಯವರೆಗೆ ಪರಿಸ್ಥಿತಿ ಗಂಭೀ ಸ್ವರೂಪ ಪಡೆದುಕೊಂಡಿತ್ತು. ಅಲ್ಲದೇ, ಘಟನಾ ಸ್ಥಳದಲ್ಲಿದ್ದ ಅಂಗಡಿಗಳು ಹಾಗೂ ಕೆಲವು ವಾಹನಗಳು ಸುಟ್ಟು ಭಷ್ಮವಾಗಿವೆ.

    ಎರಡು ಗುಂಪುಗಳ ನಡುವಿನ ಘರ್ಷಣೆ ಹಾಗೂ ಗುಂಪು ಚದುರಿಸಲು ಪೊಲೀಸರು ಕೈಗೊಂಡ ಕಾರ್ಯಾಚರಣೆ ದೃಶ್ಯವು ಘಟನಾ ಸ್ಥಳದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ 10 ಜನ ಪೊಲೀಸರು ಗಾಯಗೊಂಡಿದ್ದಾರೆ. ಸದ್ಯ ನಗರದಲ್ಲಿ ನಿಷೇಧಾಜ್ಞೆ ಜಾರಿಯಾಗಿದೆ.

  • ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪೆಂಡಾಲ್ ನಿರ್ಮಾಣ ವಿಚಾರವಾಗಿ ಗುಂಪು ಘರ್ಷಣೆ

    ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪೆಂಡಾಲ್ ನಿರ್ಮಾಣ ವಿಚಾರವಾಗಿ ಗುಂಪು ಘರ್ಷಣೆ

    -ಹೊತ್ತಿ ಉರಿತು ಬೆಳಗಾವಿ

    ಬೆಳಗಾವಿ: ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪೆಂಡಾಲ್ ನಿರ್ಮಾಣ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿ ಒಬ್ಬರಿಗೊಬ್ಬರು ಕಲ್ಲು ತೂರಿ, ಬಡಿದಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಗುಂಪು ಘರ್ಷಣೆಯಿಂದ ಖಡಕಗಲ್ಲಿ, ಬಡಕಲಗಲ್ಲಿ, ಜಾಲಗಾರಗಲ್ಲಿಗಳಲ್ಲಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚಿಲಾಗಿದೆ. ಇನ್ನು ಘಟನೆಯಲ್ಲಿ ಒಂದು ಮನೆ, ನಾಲ್ಕು ಬೈಕ್, ಒಂದು ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ರಾಮಚಂದ್ರರಾವ್, ಡಿಸಿಪಿ ಸೀಮಾ ಲಾಟ್ಕರ್, ಅಮರನಾಥ ರೆಡ್ಡಿ ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.  ಕಲ್ಲು ತೂರಾಟ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮಾರ್ಕೆಟ್ ಇನ್ಸ್ ಪೆಕ್ಟರ್, ಎಸಿಪಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪೆಂಡಾಲ್ ನಿರ್ಮಾಣ ವಿಚಾರವಾಗಿ ದೇವಸ್ಥಾನಕ್ಕೆ ದುಷ್ಕರ್ಮಿಗಳು ಹಾನಿ ಮಾಡೋ ಯತ್ನ ನಡೆಸಿದ್ದಾರೆ. ಇನ್ನು ಈ ಗಲಭೆ ಕುರಿತಂತೆ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

    ಕಲ್ಲುತೂರಾಟ ನಡೆದ ಪ್ರದೇಶದಲ್ಲಿ ಡಿಸಿಪಿಗಳು ಮೊಕ್ಕಾಂ ಹೂಡಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುತ್ತೇವೆ. ಸದ್ಯಕ್ಕೆ ಸ್ಥಿತಿ ಶಾಂತವಾಗಿದ್ದು, ಹತೋಟಿಯಲ್ಲಿದೆ ಎಂದು ರಾಮಚಂದ್ರರಾವ್ ಹೇಳಿದ್ದಾರೆ.

  • ಗುಂಪು ಘರ್ಷಣೆ- ಜಗಳ ಬಿಡಿಸಲು ಬಂದ ಗುಂಪಿನಿಂದಲೇ ಹಲ್ಲೆ, 15 ಮಂದಿಗೆ ಗಾಯ

    ಗುಂಪು ಘರ್ಷಣೆ- ಜಗಳ ಬಿಡಿಸಲು ಬಂದ ಗುಂಪಿನಿಂದಲೇ ಹಲ್ಲೆ, 15 ಮಂದಿಗೆ ಗಾಯ

    ರಾಯಚೂರು: ಗುಂಪುಗಳ ಮಧ್ಯೆ ಘರ್ಷಣೆಯಾಗುತ್ತಿದ್ದ ವೇಳೆ ಜಗಳ ಬಿಡಿಸಲು ಬಂದ ಗುಂಪಿನವರೇ ಹಲ್ಲೆ ಮಾಡಿರುವ ಘಟನೆ ರಾಯಚೂರು ತಾಲೂಕಿನ ಗಣಮೂರು ಗ್ರಾಮದಲ್ಲಿ ನಡೆದಿದೆ.

    ಘಟನೆಯಿಂದ ಹೊನ್ನಪ್ಪ, ಜಮಲಮ್ಮ ಮತ್ತು ಬಸ್ಸಮ್ಮ ಎಂಬವರು ಸೇರಿದಂತೆ ಸುಮಾರು 15 ಜನರಿಗೆ ದೊಣ್ಣೆ ಮತ್ತು ಬೆತ್ತದಿಂದ ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಮಲ್ಲೇಶ, ತಿಪ್ಪಯ್ಯ ಹಾಗೂ ಮಾರೆಪ್ಪ ಸೇರಿ ಇತರರು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಮದು ತಿಳಿದುಬಂದಿದೆ.

    ಗಣಮೂರು ಗ್ರಾಮದ ಬಸ್ಸಮ್ಮರನ್ನು ಕುರುಬನದೊಡ್ಡಿ ಗೋಪಾಲ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದೀಪಾವಳಿ ಹಬ್ಬಕ್ಕೆಂದು ಬಸ್ಸಮ್ಮರನ್ನು ಗೋಪಾಲ ಆಕೆಯ ತವರಿಗೆ ಕಳುಹಿಸಿದ್ದನು. ಆದರೆ ಗೋಪಾಲ ರಾತ್ರೋರಾತ್ರಿ ಪಾನಮತ್ತನಾಗಿ ಹೆಂಡತಿಯನ್ನ ಕರೆದುಕೊಂಡು ಹೋಗಲು ಬಂದಿದ್ದಾನೆ. ಪತ್ನಿಯ ತವರು ಮನೆಯವರು ಬೆಳಿಗ್ಗೆ ಕಳುಹಿಸುತ್ತೇವೆ ಎಂದಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಪತ್ನಿ ತವರು ಮನೆಯಲ್ಲಿ ರಾದ್ದಾಂತ ಮಾಡಿದ್ದಾನೆ. ಈ ವೇಳೆ ಗುಂಪೊಂದು ಇವರ ಜಗಳವನ್ನು ಬಿಡಿಸಲು ಬಂದಿದೆ. ಹೀಗೆ ಬಂದತಂತಹ ಗುಂಪು ಹಾಗೂ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದು, ಗುಂಪು ಹಲ್ಲೆ ನಡೆಸಿ ಪರಾರಿಯಾಗಿದೆ.

    ಸದ್ಯ ಗಾಯಾಳುಗಳನ್ನು ಸಮೀಪದ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಈ ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.