Tag: group admin

  • ವಾಟ್ಸಪ್ ಗ್ರೂಪ್ ಅಡ್ಮಿನ್‍ಗಳಿಗೆ ಶೀಘ್ರವೇ ಸಿಗಲಿದೆ ಫುಲ್ ಪವರ್

    ವಾಟ್ಸಪ್ ಗ್ರೂಪ್ ಅಡ್ಮಿನ್‍ಗಳಿಗೆ ಶೀಘ್ರವೇ ಸಿಗಲಿದೆ ಫುಲ್ ಪವರ್

    ವಾಷಿಂಗ್ಟನ್: ಮೆಟಾ ಮಾಲಿಕತ್ವದ ಮೆಸೇಜಿಂಗ್ ಆ್ಯಪ್ ಶೀಘ್ರವೇ ಹೊಸ ಫೀಚರ್ ತರಲಿದೆ. ಇದರ ಮೂಲಕ ವಾಟ್ಸಪ್ ಗ್ರೂಪ್‍ನ ಅಡ್ಮಿನ್ ಇತರ ಸದಸ್ಯರ ಚ್ಯಾಟ್‍ಅನ್ನು ಅಳಿಸಲು ಸಹಾಯವಾಗಲಿದೆ. ಈಗಾಗಲೇ ವಾಟ್ಸಪ್ ಈ ಫೀಚರ್‍ಅನ್ನು ಬಳಕೆದಾರರಿಗೆ ಲಭ್ಯವಾಗಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.

    ಈ ವೈಶಿಷ್ಯ ಬಳಕೆಗೆ ಬಂದ ಬಳಿಕ ಗ್ರೂಪ್ ಅಡ್ಮಿನ್ ಇತರರು ಕಳುಹಿಸುವ ಅಶ್ಲೀಲ ಅಥವಾ ಆಕ್ಷೇಪಾರ್ಹ ಸಂದೇಶಗಳನ್ನು ಸುಲಭವಾಗಿ ಅಳಿಸಲು ಸಾಧ್ಯವಾಗಲಿದೆ. ಗ್ರೂಪ್ ನಿರ್ವಾಹಕ ಸಂದೇಶ ಅಳಿಸಿದ ಬಳಿಕ ಇತರ ಸದಸ್ಯರಿಗೆ ದಿಸ್ ವಾಸ್ ಡಿಲಿಟೆಡ್ ಬೈ ಆನ್ ಅಡ್ಮಿನ್ (ಈ ಸಂದೇಶ ನಿರ್ವಾಹಕರಿಂದ ಅಳಿಸಲಾಗಿದೆ) ಎಂದು ಗೋಚರಿಸಲಿದೆ. ಇದನ್ನೂ ಓದಿ: ಎಲಾನ್ ಮಸ್ಕ್ ಅವರ ಬಿಗ್ ಆಫರ್ ತಿರಸ್ಕರಿಸಿದ ಯುವಕ

    ನೀವು ಗ್ರೂಪ್ ಅಡ್ಮಿನ್ ಆಗಿದ್ದರೆ ಮುಂದಿನ ವಾಟ್ಸಪ್ ಆಂಡ್ರಾಯ್ಡ್ ಬೀಟಾ ಅಪ್ಡೇಟ್‍ಗಳಲ್ಲಿ ನೀವು ಗ್ರೂಪ್‍ನ ಯಾವುದೇ ಸಂದೇಶಗಳನ್ನು ಅಳಿಸಲು ಸಾಧ್ಯವಾಗಲಿದೆ ಎಂದು ವೆಬಿಟೈನ್ಫೋ ತಿಳಿಸಿದೆ.

    ವಾಟ್ಸಪ್ ವೆಬ್‍ನಲ್ಲಿ ಎರಡು ಹಂತಗಳ ಪರಿಶೀಲನೆಯ(ಟು ಸ್ಟೆಪ್ ವೆರಿಫಿಕೇಷನ್) ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸುತ್ತಿದೆ. ಮುಂದಿನ ಅಪ್ಡೇಟ್‍ಗಳಲ್ಲಿ ಅದನ್ನು ಜನರು ಬಳಸಲು ಸಾಧ್ಯವಾಗಲಿದೆ ಎಂದು ತಿಳಿಸಿದೆ. ಟು ಸ್ಟೆಪ್ ವೆರಿಫಿಕೇಷನ್ ಸೌಲಭ್ಯ ಈಗಾಗಲೇ ಮೊಬೈಲ್ ಅಪ್ಲಿಕೇಶನ್‍ನಲ್ಲಿ ಲಭ್ಯವಿದೆ. ಇದನ್ನೂ ಓದಿ: ಪೆಗಾಸಸ್‌ಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ಗೆ ಮನವಿ

    ಇತ್ತೀಚೆಗೆ ವಾಟ್ಸಪ್‍ನಲ್ಲಿ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ವಿಧಾನವನ್ನೂ ಬದಲಾಯಿಸುವುದಾಗಿ ವಾಟ್ಸಪ್ ತಿಳಿಸಿತ್ತು. ಇದರ ಬಗ್ಗೆ ಬೀಟಾ ಅಪ್ಡೇಟ್‍ನಲ್ಲಿ ಸುಳಿವು ನೀಡಿತ್ತು.

  • ತ್ರಿಬಲ್ ಎಕ್ಸ್ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನ ಸೇರಿಸಿದ್ದ ಯುವಕ ಅರೆಸ್ಟ್!

    ತ್ರಿಬಲ್ ಎಕ್ಸ್ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನ ಸೇರಿಸಿದ್ದ ಯುವಕ ಅರೆಸ್ಟ್!

    ಮುಂಬೈ: ಒಪ್ಪಿಗೆ ಪಡೆಯದೆ ತ್ರಿಬಲ್ ಎಕ್ಸ್ ಹೆಸರಿನ ವಾಟ್ಸಪ್ ಗ್ರೂಪ್‍ಗೆ ಮಹಿಳೆಯನ್ನು ಸೇರಿಸಿದ್ದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳ ಮೂಲದ ಕಾರ್ಪೇಂಟರ್ ಮುಸ್ತಾಕ್ ಅಲಿ ಶೈಖ್ (24) ಬಂಧಿತ ಆರೋಪಿ. ಮುಸ್ತಾಕ್‍ನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮುಂಬೈನ ಮಾತುಂಗಾ ಠಾಣೆಯ ಪೊಲೀಸರು ಗುರುವಾರ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ತ್ರಿಬಲ್ ಎಕ್ಸ್ ಹೆಸರಿನ ಗ್ರೂಪ್‍ಗೆ ಅಡ್ಮಿನ್ ಆಗಿದ್ದ ಮುಸ್ತಾಕ್ ಮುಂಬೈ ಮೂಲದ ಮಹಿಳೆಯನ್ನು ಸೇರಿಸಿದ್ದಾನೆ. ಗ್ರೂಪ್ ಸೇರಿದ ಮಹಿಳೆ ಮೊದಲ ಕೆಲವು ಅಶ್ಲೀಲ ಮೆಸೇಜ್ ನೋಡಿ ಯಾರೋ ಗ್ರೂಪ್‍ನಲ್ಲಿ ಚೇಷ್ಟೆ ಮಾಡುತ್ತಿದ್ದಾರೆ ಅಂತಾ ತಿಳಿದಿದ್ದರು. ಆದರೆ ಸೆಕ್ಸ್ ಸಂದೇಶಗಳು, ನೀಲಿ ಚಿತ್ರಗಳು ಗ್ರೂಪ್‍ನಲ್ಲಿ ಹರಿದಾಡಿದ್ದರಿಂದ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ. ಬಳಿಕ ಸಮೀಪದ ಪೊಲೀಸ್ ಠಾಣೆಗೆ ಹೋಗಿ, ದೂರು ನೀಡಿದ್ದಾರೆ.

    ನಾನು ಗ್ರೂಪ್ ಸದಸ್ಯರ ಲಿಸ್ಟ್ ನೋಡಿದಾಗ ಯಾರೊಬ್ಬರೂ ನನಗೆ ಪರಿಚಯ ಇಲ್ಲದವೇ ಆಗಿದ್ದರು. ಆದರೂ ನನ್ನ ನಂಬರ್ ಅನ್ನು ತ್ರಿಬಲ್ ಎಕ್ಸ್ ಗ್ರೂಪ್‍ಗೆ ಸೇರಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

    ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಗ್ರೂಪ್ ಅಡ್ಮಿನ್ ಇರುವ ಸ್ಥಳವನ್ನು ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಒಂದು ತಂಡವನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿ ಆರೋಪಿಯನ್ನು ಬಂಧಿಸಿ ಮುಂಬೈಗೆ ತಂದಿದ್ದಾರೆ.

    ನಾನು ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿಲ್ಲ. ನನ್ನ ಮಾವನ ನಂಬರ್ ಎಂದು ಭಾವಿಸಿ ಮಹಿಳೆಯ ನಂಬರ್ ಅನ್ನು ಗ್ರೂಪ್‍ಗೆ ಸೇರಿಸಿದ್ದೇನೆ. ಯಾರಿಗೂ ನೋವು ಕೊಡುವ ಉದ್ದೇಶವಿಲ್ಲ. ಗ್ರೂಪ್‍ನಲ್ಲಿ ಇರುವ ಎಲ್ಲ ಸದಸ್ಯರು ಪುರುಷರು ಅಂತಾ ಮುಸ್ತಾಕ್ ವಿಚಾರಣೆ ವೇಳೆ ಕ್ಷಮೆ ಯಾಚಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿ ವಿರುದ್ಧ ಐಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡ, ಮುಸ್ತಾಕ್ ಫೋನ್ ವಶಕ್ಕೆ ಪಡೆದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿಯ ಬಳಿಕ ಆರೋಪಿ ಮುಸ್ತಾಕ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ರೀತಿಯ ಪ್ರಕರಣದಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ವೇಳೆ ಮತ್ತೆ ಇದೇ ತಪ್ಪು ಮರಳಿ ನಡೆದರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಅಂತಾ 2000ರ ಐಟಿ ಕಾಯ್ದೆಯಲ್ಲಿ ತಿಳಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸದಸ್ಯ ಕಳುಹಿಸಿದ್ದ ಸಂದೇಶಕ್ಕೆ ವಾಟ್ಸಪ್ ಗ್ರೂಪ್ ಅಡ್ಮಿನ್ ಅರೆಸ್ಟ್!

    ಸದಸ್ಯ ಕಳುಹಿಸಿದ್ದ ಸಂದೇಶಕ್ಕೆ ವಾಟ್ಸಪ್ ಗ್ರೂಪ್ ಅಡ್ಮಿನ್ ಅರೆಸ್ಟ್!

    ಲಕ್ನೋ: ದೇಶ ವಿರೋಧಿ ಹೇಳಿಕೆಯ ಸಂದೇಶವು ವಾಟ್ಸಪ್ ಗ್ರೂಪ್‍ನಲ್ಲಿ ಹರಿದಾಡಿದ್ದಕ್ಕೆ ಅಡ್ಮಿನ್‍ನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಬರೌಟಿನ ಬಾಮ್‍ನೌಲಿ ಗ್ರಾಮದ ನಯಿಮ್ ಬಂಧಿತ ಆರೋಪಿ. ಅದೇ ಗ್ರಾಮದ ದೀಪಕ್ ಕುಮಾರ್ ಈ ಕುರಿತು ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ್ದ ಪೊಲೀಸರು ವಾಟ್ಸಪ್ ಗ್ರೂಪ್ ಅಡ್ಮಿನ್ ನಯಿಮ್‍ನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಇದನ್ನು ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

    ನಯಿಮ್ ಕ್ರಿಯೇಟ್ ಮಾಡಿದ್ದ ವಾಟ್ಸಪ್ ಗ್ರೂಪ್‍ನಲ್ಲಿ, ಸದಸ್ಯ ಜೋಷ್ ಎಂಬವನು ದೇಶ ವಿರೋಧಿ ಹೇಳಿಕೆಯ ಸಂದೇಶ ನೀಡಿದ್ದಾನೆ. ಸೂಕ್ತ ಆಧಾರದ ಮೇಲೆ ದೀಪಕ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಗ್ರೂಪ್ ಅಡ್ಮಿನ್ ಯಾರು ಅಂತಾ ಪತ್ತೆ ಹಚ್ಚಿ ನನಿಮ್‍ನನ್ನು ಬಂಧಿಸಿದ್ದಾರೆ.

    ಆರೋಪಿ ನಯಿಮ್ ಸ್ವಗ್ರಾಮದಲ್ಲಿ ಜನ ಸೇವಾ ಕೇಂದ್ರ ನಡೆಸುತ್ತಿದ್ದ. ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಇನ್ನೋರ್ವ ಆರೋಪಿ ಜೋಷ್‍ನ ಬಂಧನಕ್ಕಾಗಿ ಬಲೆ ಬೀಸಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ವಾಟ್ಸಪ್ ಗ್ರೂಪ್ ಅಡ್ಮಿನ್ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ!

    ವಾಟ್ಸಪ್ ಗ್ರೂಪ್ ಅಡ್ಮಿನ್ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ!

    ಚಂಡೀಗಢ: ವಾಟ್ಸಪ್‍ನಲ್ಲಿ ಪೋಸ್ಟ್ ಹಾಕಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಗ್ರೂಪ್ ಅಡ್ಮಿನ್ ಒಬ್ಬ ಸದಸ್ಯನನ್ನು ಕೊಲೆ ಮಾಡಿದ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ನಡೆದಿದೆ.

    ಹತ್ಯೆಯಾದ ವ್ಯಕ್ತಿ ಲವಕುಮಾರ್ ಎಂದು ತಿಳಿದು ಬಂದಿದ್ದು, ಆರೋಪಿ ದಿನೇಶ್ ಕುಮಾರ್ ಅಲಿಯಾಸ್ ಬಂಟಿ ವಿರುದ್ಧ ಲವ ಕುಮಾರನ ಸಂಬಂಧಿಕರು ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿ ನರೇಂದ್ರ ಕುಮಾರ್ ಮಾತನಾಡಿ ಆರೋಪಿಯ ವಿರುದ್ಧ ಕೊಲೆ, ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

    ಲವ ಕುಮಾರ್ ವಾಹನಗಳ ಎಸಿ ರಿಪೇರಿ ವ್ಯಾಪಾರ ಮಾಡುತ್ತಿದ್ದು, ಮೂಲತಃ ಚಿನ್ನದ ವರ್ತಕ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ದಿನೇಶ್ ಕುಮಾರ್ ಸೋಪು ವ್ಯಾಪಾರ ಕೆಲಸ ಮಾಡಿಕೊಂಡಿದ್ದನು. ಇಬ್ಬರು ಸ್ಥಳೀಯ ನಿವಾಸಿಗಳಾಗಿದ್ದು, ಪರಸ್ಪರ ಪರಿಚಯಸ್ಥರಾಗಿದ್ದಾರೆ. ದಿನೇಶ್ `ಜೋಹ್ರಿ’ ಎಂಬ ವಾಟ್ಸಪ್ ಗ್ರೂಪ್ ರಚಿಸಿ ಗ್ರೂಪ್ ಅಡ್ಮಿನ್ ಆಗಿದ್ದನು.

    ಘಟನಾ ವಿವರ:
    ವಾಟ್ಸಪ್‍ನಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ವಸ್ತುಗಳ ಕುರಿತು ದಿನೇಶ್ ಸಂದೇಶ ಹಾಕಿದ್ದ. ಇದನ್ನು ಪ್ರಶ್ನಿಸಿದ ಲವಕುಮಾರ್ ಮತ್ತು ಇತರೆ ಸದಸ್ಯರು ವಾಟ್ಸಪ್‍ನಲ್ಲಿಯೇ ಕಿತ್ತಾಡಿಕೊಂಡಿದ್ದರು. ಈ ಸಂಬಂಧ ಮಾತನಾಡಲು ಆರೋಪಿಗೆ ಕರೆ ಮಾಡಿದಾಗ ಅಂಗಡಿ ಹತ್ತಿರ ಬರುವಂತೆ ಹೇಳಿದ್ದಾನೆ. ಲವ ತನ್ನ ತಮ್ಮ ಮೋನಿ ಹಾಗೂ ಸಂಬಂಧಿಕರೊಂದಿಗೆ ಅವನ ಅಂಗಡಿಗೆ ತೆರಳಿದ್ದಾರೆ. ಅಂಗಡಿಯಲ್ಲಿ ದಿನೇಶ್ ಸಿಕ್ಕಿಲ್ಲ, ಬಳಿಕ ಕರೆ ಮಾಡಿ ಮನೆಗೆ ಬರುವಂತೆ ಸೂಚಿಸಿದ್ದಾನೆ.

    ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ದಿನೇಶ್ ಮತ್ತು ಸಂಗಡಿಗರು, ಮನೆಗೆ ಬಂದ ಲವ ಕುಮಾರ್ ಮತ್ತು ಸಂಬಂಧಿಕರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡು ಲವಕುಮಾರ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿ, ಶವವನ್ನು ಪರೀಕ್ಷೆಗೆ ರವಾನಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ವಾಟ್ಸಪ್‍ನಲ್ಲಾದ ಜಗಳವೇ ಕಾರಣವೆಂದು ತಿಳಿದು ಬಂದಿದ್ದು. ಗ್ರೂಪ್ ಅಡ್ಮಿನ್ ಆದ ದಿನೇಶ್ ಪ್ರಮುಖ ಆರೋಪಿಯಾಗಿದ್ದಾನೆ. ಕೃತ್ಯಕ್ಕೆ ಸಹಾಯ ಮಾಡಿದ ಆರೋಪಿಗಳ ಗುರುತು ಪತ್ತೆಯಾಗಿದ್ದು, ಶೀಘ್ರವೇ ಬಂಧಿಸಲಾಗುವುದು. ಕೃತ್ಯಕ್ಕೆ ಬಳಸಿದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದು, ಹೆಚ್ಚಿನ ಮಾಹಿತಿಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.