Tag: Ground

  • ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು ದಸರಾ: ಏನಿದು ಸಿಡಿಮದ್ದು ಕಾರ್ಯಕ್ರಮ? ಹೇಗೆ ಮಾಡಲಾಗುತ್ತದೆ?

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು ಸಿಡಿಮದ್ದಿನ ಸದ್ದು ಜೋರಾಗಿತ್ತು. ಜನರು ಮಾತ್ರವಲ್ಲದೆ ಅರಮನೆ ಆವರಣದಲ್ಲಿ ನಿಂತಿದ್ದ ಗಜಪಡೆ, ಅಶ್ವರೋಹಿದಳದ ಕುದುರೆಗಳು ಸಹ ನಿಂತಿದ್ದ ಜಾಗದಿಂದ ಚದುರಿದವು. ದಸರೆಯ ವಿಜಯದ ಸಂಕೇತವಾದ ಸಿಡಿಮದ್ದು ಕಾರ್ಯಕ್ರಮದ ಪೂರ್ವ ತಯಾರಿ ನಡೆಸಲಾಯಿತು.

    ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದ್ದು, ಈಗಾಗಲೇ ಗಜಪಡೆಗೆ ಭಾರ ಹೊರುವ ತಾಲೀಮು ನಡೆಯುತ್ತಿದೆ. ಈ ಮಧ್ಯೆ ಇಂದು ದಸರಾ ಗಜಪಡೆಗೆ ಅರಮನೆ ಕೋಟೆ ಮಾರಮ್ಮ ದೇವಸ್ಥಾನ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ಫಿರಂಗಿಗಳ ಸಿಡಿಮದ್ದು ತಾಲೀಮು ನಡೆಯಿತು. ಈ ತಾಲೀಮಿನಲ್ಲಿ ಕ್ಯಾಪ್ಟನ್ ಅರ್ಜುನ ನೇತೃತ್ವದ 12 ಆನೆಗಳು, 12 ಅಶ್ವಗಳು ಭಾಗಿಯಾಗಿತ್ತು.

    ಮೈಸೂರು ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ್ ರಾವ್ ನೇತೃತ್ವದಲ್ಲಿ 30 ಮಂದಿ ಸಿಎಆರ್ ಸಿಬ್ಬಂದಿಗಳು, ಮೂರು ಫಿರಂಗಿ ಗಾಡಿಗಳಲ್ಲಿ ಸಿಡಿಮದ್ದು ತಾಲೀಮು ನಡೆಸಿದರು. ಅಲ್ಲದೆ ಇನ್ನೂ 2 ಬಾರಿ ಈ ತಾಲೀಮು ನಡೆಯಲಿದ್ದು, ಕಳೆದ ಬಾರಿಗಿಂತ ಈ ಬಾರಿ ತಾಲೀಮು ಚೆನ್ನಾಗಿ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತರು ತಮ್ಮ ಅಭಿಪ್ರಯಾವನ್ನು ಹಂಚಿಕೊಂಡರು.

    ಜಂಬೂ ಸವಾರಿ ದಿನ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆಯಲ್ಲಿ 21 ಕುಶಾಲತೋಪು ಸಿಡಿಸಲಿದ್ದು ಆ ವೇಳೆಯಲ್ಲಿ ಶಬ್ದಕ್ಕೆ ಬೆದರದಂತೆ ಆನೆಗಳು ಹಾಗೂ ಕುದುರೆಗಳಿಗೆ ಈ ತರಬೇತಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ಈ ತರಬೇತಿ ನೀಡಲಾಗಿದ್ದು, ಇಂದು ನಡೆದ ಸಿಡಿಮದ್ದು ತಾಲೀಮಿನಲ್ಲಿ ದ್ರೋಣ, ಚೈತ್ರ, ಧನಂಜಯ ಹಾಗೂ ಹರ್ಷ ಆನೆಗಳು ಸ್ವಲ್ಪ ಬೆದರಿವೆ.

    ಇಂದು ಮೊದಲ ಹಂತದಲ್ಲಿ 6 ಸುತ್ತುಗಳಲ್ಲಿ ಸಿಡಿಮದ್ದು ಸಿಡಿಸಿದ್ದು, ಪ್ರತಿ ಸಿಡಿತದ ಶಬ್ಧದಲ್ಲೂ ನಾಲ್ಕು ಆನೆಗಳು ಬೆದರಿದವು. ಈ ವೇಳೆಯಲ್ಲಿ ಮಾವುತರು ಬೆದರಿದ ನಾಲ್ಕು ಆನೆಗಳನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ತಾಲೀಮಿನ ವೇಳೆ ಆ ಆನೆಗಳು ಹತೋಟಿಗೆ ಬರಲಿದೆ ಎಂದು ಆನೆ ವೈದ್ಯರು ಮಾಹಿತಿ ನೀಡಿದರು.

    ನಾಡ ಹಬ್ಬದ ಯಶಸ್ವಿಗಾಗಿ ಅರಮನೆ ನಗರಿಯಲ್ಲಿ ಸಕಲ ಸಿದ್ದತೆ ನಡೆಯುತ್ತಿದ್ದು, ವಿಜಯದ ಸಂಕೇತವಾಗಿ ಸಿಡಿಸುವ ಸಿಡಿಮದ್ದಿನ ತಾಲೀಮು ಕೂಡ ಇಂದು ಯಶಸ್ವಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಬೆಂಗ್ಳೂರು ಕೇಂದ್ರ ವಿಶ್ವವಿದ್ಯಾಲಯದ ಕ್ರೀಡಾಂಗಣ ಆಯ್ತು ಮದ್ಯ ಬಾಟಲಿಗಳ ತಾಣ

    ಬೆಂಗ್ಳೂರು ಕೇಂದ್ರ ವಿಶ್ವವಿದ್ಯಾಲಯದ ಕ್ರೀಡಾಂಗಣ ಆಯ್ತು ಮದ್ಯ ಬಾಟಲಿಗಳ ತಾಣ

    ಬೆಂಗಳೂರು: ನಗರದ ಕೇಂದ್ರ ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜಿನ ಕ್ರೀಡಾಂಗಣ ಮದ್ಯ ಬಾಟಲಿಗಳ ರಾಶಿಗಳು, ಕಸದ ರಾಶಿಗಳಿಂದ ತುಂಬಿದೆ.

    ಮಂಗಳವಾರ ಸೆಂಟ್ರಲ್ ಕಾಲೇಜ್ ಕ್ರೀಡಾಂಗಣದಲ್ಲಿ ಇಂಡೋ-ನೇಪಾಳಿ ಹಬ್ಬ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕ್ರೀಡಾಂಗಣವನ್ನು ಬಾಡಿಗೆಗೆ ಕೊಟ್ಟು ಈಗ ಅದ್ವಾನ ಮಾಡಿದ್ದರು. ಕಾರ್ಯಕ್ರಮಕ್ಕೆ ಬಂದ ಜನರು ಕುಡಿದು ಕುಣಿದು ಕುಪ್ಪಳಿಸಿ ಬಾಟಲಿಗಳನ್ನ ಕ್ರೀಡಾಂಗಣದಲ್ಲೇ ಎಸೆದು ಹಾಳು ಮಾಡಿದ್ದಾರೆ.

    ಬೇರೆ ಕಾರ್ಯಕ್ರಮಗಳಿಗೆ ಕ್ರೀಡಾಂಗಣವನ್ನ ಬಾಡಿಗೆಗೆ ನೀಡುವ ನಿಯಮವಿಲ್ಲ. ಆದರೆ ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಜಾಫೆಟ್ ಹಣಕ್ಕಾಗಿ ಕ್ರೀಡಾಂಗಣವನ್ನ ಬಾಡಿಗೆ ನೀಡಿದ್ದಾರೆ. ಇದೀಗ ಕ್ರೀಡಾಂಗಣದಲ್ಲಿ ತುಂಬಿದ್ದ ಕಸ, ಬಾಟಲಿಗಳನ್ನು ತೆಗೆದು ಸ್ವಚ್ಛಗೊಳಿಸಲು ಸಿಬ್ಬಂದಿ ಬಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮೈದಾನದಲ್ಲೇ ಕುಸಿದು ಬಿದ್ದ ಪರೇಡ್ ಮುಖ್ಯಸ್ಥ!

    ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಮೈದಾನದಲ್ಲೇ ಕುಸಿದು ಬಿದ್ದ ಪರೇಡ್ ಮುಖ್ಯಸ್ಥ!

    ಹಾವೇರಿ: 69 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ವೇಳೆ ಪರೇಡ್ ಮುಖ್ಯಸ್ಥರೊಬ್ಬರು ಮೈದಾನದಲ್ಲಿಯೇ ಕುಸಿದು ಬಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಅಸ್ವಸ್ಥಗೊಂಡ ಪರೇಡ್ ಮುಖ್ಯಸ್ಥರನ್ನು ಆರ್ ಪಿಐ ಮಾರುತಿ ಹೆಗಡೆ (35) ಎಂದು ಗುರುತಿಸಲಾಗಿದೆ. ಇಂದು ಗಣರಾಜ್ಯೋತ್ಸವದ ಅಂಗವಾಗಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಮಾರುತಿ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲೇ ಇದ್ದ ಅಧಿಕಾರಿಗಳು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ತಹಶೀಲ್ದಾರರ ವಾಹನದಲ್ಲಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಯಿತು. ಸದ್ಯ ಮಾರುತಿ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

    ಕಳೆದ ಎರಡು ವರ್ಷಗಳಿಂದ ಮಾರುತಿ ಜಿಲ್ಲಾ ಮೀಸಲು ಪೊಲೀಸ್ ಪಡೆಯ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಳಗ್ಗೆ ಗಣರಾಜ್ಯೋತ್ಸವ ಪರೇಡ್ ಇರೋ ಹಿನ್ನಲೆಯಲ್ಲಿ ಬೇಗನೇ ಆಗಮಿಸಿದ್ದರು. ಬಿಸಿಲಿನ ತಾಪಕ್ಕೆ ಆರ್‍ಪಿಐ ಕುಸಿದು ಬಿದ್ದಿದ್ದಾರೆ ಎಂಬುದಾಗಿ ತಿಳಿದುಬಂದಿದೆ.