ಬೆಂಗಳೂರು: ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾತ್ರೇಯ ವಾರ್ಡ್‌ನ (Dattatreya Ward) ಸಹಾಯಕ ಎಂಜಿನಿಯರ್ ಟಿ .ಶ್ರೀನಿವಾಸ ರಾಜು ಅವರನ್ನು ಅಮಾನತುಗೊಳಿಸಲಾಗಿದೆ.
ಪಾಲಿಕೆ ಉಪಯುಕ್ತ ಅಡಳಿತ ವಿಭಾಗ ತಕ್ಷಣವೇ ಜಾರಿಗೆ ಬರುವಂತೆ ಅದೇಶ ಹೊರಡಿಸಿದೆ. ಕರ್ತವ್ಯ ನಿರ್ಲಕ್ಷ್ಯ, ಗೇಟ್ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸಿಲ್ಲ, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ್ದಕ್ಕೆ ಬಿಬಿಎಂಪಿ (BBMP) ಅಡಳಿತ ವಿಭಾಗದ ಉಪ ಅಯುಕ್ತರು ಅಮಾನತು ಮಾಡಿ ಅದೇಶ ಪ್ರಕಟಿಸಿದ್ದಾರೆ.
ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ನಿರಂಜನ್ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ (Gate) ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದ.
ಬೆಂಗಳೂರು: ಬಿಬಿಎಂಪಿ (BBMP) ಜಾಗವನ್ನ ಯಾರು ಬೇಕಾದ್ರೂ ಹೇಗೆ ಬೇಕಾದ್ರೂ ಬಳಸಿಕೊಳ್ಳಬಹುದು. ಯಾಕೆಂದರೆ ವರ್ಷಗಳ ಕಾಲ ಖಾಸಗಿಯವರು ಅಕ್ರಮವಾಗಿ ಬಳಸಿದರೂ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸಿದೆ.
ವಾರ್ಡ್ ನಂಬರ್ 12 ರ ಶೆಟ್ಟಿಹಳ್ಳಿ ಬಳಿಯ ಬಿಬಿಎಂಪಿ ಆಟದ ಮೈದಾನವನ್ನ (Ground) ಕಟ್ಟಡ ಸಾಮಾಗ್ರಿಗಳ ಹಾಗೂ ಕೆಲಸಗಾರರಿಗೆ ಟೆಂಟ್ ಹಾಕಿಕೊಡಲಾಗಿದೆ. ಅದೂ ಕಳೆದ ಎರಡು ವರ್ಷಗಳಿಂದ. ಇದರಿಂದ ರೋಸಿಹೋಗಿದ್ದ ಸ್ಥಳಿಯರು ಬಿಬಿಎಂಪಿ ಅಧಿಕಾರಿಗಳು ಹಾಗೂ ಖಾಸಗಿ ಕಂಟ್ರಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಆಟದ ಮೈದಾನವನ್ನೇ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಖಾಸಗಿ ಗುತ್ತಿಗೆದಾರನನ್ನು ಸಂಪರ್ಕಿಸಿದರೆ ಶಾಸಕರ ಅನುಮತಿ ಪಡೆದಿದ್ದೇನೆ ಎಂದು ಎಂದು ಕಥೆ ಕಟ್ಟಿದ್ದ. ಈ ಬಗ್ಗೆ ದಾಸರಹಳ್ಳಿ ಶಾಸಕರಾದ ಮುನಿರಾಜು (Muniraju) ಅವರನ್ನು ಪಬ್ಲಿಕ್ ಟಿವಿ ಕೇಳಿದಾಗ ಅವನ್ಯಾರೋ ಫ್ರಾಡ್, ನಾನು ಯಾರಿಗೂ ಹೇಳಿಲ್ಲ. ನಾನೇ ಖಾಲಿ ಮಾಡಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದೇನೆ ಆದರೂ ಖಾಲಿ ಮಾಡಿಲ್ಲ. ಇನ್ನೊಂದು ವಾರದಲ್ಲಿ ಖಾಲಿ ಮಾಡಿ ಮೈದಾನವನ್ನ ಸ್ಥಳಿಯರಿಗೆ ಬಿಟ್ಟುಕೊಡದೇ ಹೋದರೆ ಕಟ್ಟಡ ಸಾಮಾಗ್ರಿಗಳನ್ನ ನಾನೇ ಹೊರಗೆ ಹಾಕಿಸುತ್ತೇನೆ ಎಂದರು. ಇದನ್ನೂ ಓದಿ: Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ
ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಸಹಿಸಿಕೊಂಡು ಇದ್ದ ಸಾರ್ವಜನಿಕರು ಕೊನೆಗೆ ರೊಚ್ಚಿಗೆದ್ದು ತಮ್ಮ ಬಿಬಿಎಂಪಿ ಮೈದಾನ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕರೂ ಗಡುವು ಕೊಟ್ಟಿದ್ದಾರೆ.
ನೆಲಮಂಗಲ: ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಚಿರತೆ ಮರಿ ಬೋನಿಗೆ ಬಿದ್ದಿದ್ದು ನೆಲಮಂಗಲ ತಾಲೂಕಿನ ನಾರಾಯಣಪುರ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸುಮಾರು 2 ವರ್ಷದ ಹೆಣ್ಣು ಚಿರತೆ ಮರಿ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ನೆಲಮಂಗಲ ಅರಣ್ಯ ಅಧಿಕಾರಿಗಳ ದೌಡಾಯಿಸಿದ್ದು, ಚಿರತೆ ಮರಿಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಸಾಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಬೆಳ್ಳಂಬೆಳಗ್ಗೆ ಚಿರತೆ ಮರಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾವೆಲ್ಲ ಸೇರಿ ಚಿರತೆ ಮರಿ ಬಿದ್ದಿರುವ ಬೋನನ್ನು ತಂದಿದ್ದೇವೆ. ಎರಡು ಮೂರು ಚಿರತೆ ಬೀಡು ಬಿಟ್ಟಿರುವ ಪಕ್ಕದ ಗೆರುಗುಟ್ಟುಕ್ಕೆ ತೆರಳಲು ನಮಗೆ ಭಯವಾಗುತ್ತದೆ ಎಂದು ಹೇಳಿ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
15 ಮೇಕೆ, 10 ಕೋಳಿ, 3 ಹಸು, ಸಾಕಷ್ಟು ನಾಯಿ ತಿಂದು ಭಕ್ಷಿಸಿರುವ ಚಿರತೆಗಳು ಗ್ರಾಮದಲ್ಲಿದೆ. ಅದಷ್ಟೂ ಬೇಗ ಎಲ್ಲಾ ಚಿರತೆಗಳನ್ನು ಹಿಡಿಯಿರಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಲವಾರು ತಿಂಗಳಿನಿಂದ ಚಿರತೆಗಳು ಬೀಡುಬಿಟ್ಟಿದ್ದು, ಸುಮಾರು 2 ತಿಂಗಳಿನಿಂದ ಬೋನು ಇರಿಸಿದ್ದಾರೆ.
ಚಿರತೆಗಳನ್ನು ಮತ್ತೆ ಹತ್ತಿರದ ಕಾಡಿನಲ್ಲಿ ಬಿಡಬೇಡಿ, ಬನ್ನೇರುಘಟ್ಟ ಕಾಡಿಗೆ ಬಿಟ್ಟಿದ್ದೇವೆ ಎಂಬ ಪತ್ರವನ್ನು ಪಂಚಾಯತಿಗೆ ನೀಡಿಲ್ಲ. ಹೀಗಾಗಿ ಅರಣ್ಯ ಅಧಿಕಾರಿಗಳು ನಮಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಅಗ್ರಹಿಸಿದರು.
ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಆಟಗಾರು ತಂಗಿರುವ ಹೋಟಿಲಿನಿಂದ 30 ಕಿಲೋ ಮೀಟರ್ ದೂರದಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿದೆ.
ಸದ್ಯ ಭಾರತ ಕ್ರಿಕೆಟ್ ತಂಡ ಮೂರು ಮಾದರಿಯ ಕ್ರಿಕೆಟ್ ಪಂದ್ಯಾವಳಿಗಳನ್ನು ಆಡಲು ಆಸ್ಟ್ರೇಲಿಯಾಗೆ ಹೋಗಿದೆ. ಟೀಂ ಇಂಡಿಯಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಸದ್ಯ ಅಭ್ಯಾಸ ಮಾಡುತ್ತಿದ್ದಾರೆ. ಇಂಡಿಯಾ ಆಟಗಾರರು ತಂಗಿರುವ ಸಿಡ್ನಿ ಒಲಿಂಪಿಕ್ ಪಾರ್ಕಿನಿಂದ 30 ಕಿಲೋ ಮೀಟರ್ ದೂರದ ಮೈದಾನವೊಂದರಲ್ಲಿ ವಿಮಾನ ಪತನವಾಗಿದೆ.
ಕ್ರೋಮರ್ ಪಾರ್ಕ್ ಮೈದಾನದಲ್ಲಿ ಲಘು ವಿಮಾನವೊಂದು ನೆಲಕ್ಕಪ್ಪಳಿಸಿದ್ದು, ಆ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಸ್ಥಳೀಯ ಕ್ರಿಕೆಟ್ ಆಟಗಾರರು ಮತ್ತು ಫುಟ್‍ಬಾಲ್ ಪ್ಲೇಯರ್ಸ್ ವಿಮಾನ ಬಿದ್ದ ರಭಸಕ್ಕೆ ಹೆದರಿ ಮೈದಾನದಿಂದ ಓಡಿ ಹೋಗಿದ್ದಾರೆ. ಲಘು ವಿಮಾನವಾದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ. ವಿಮಾನದಲ್ಲಿ ಇದ್ದ ಇಬ್ಬರು ತರಬೇತಿ ಪೈಲೆಟ್‍ಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ವಿಮಾನ ಪತನವಾದಾಗ ಸ್ಥಳದಲ್ಲಿ ಫುಟ್‍ಬಾಲ್ ಮ್ಯಾಚ್ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ವಿಮಾನ ಬೀಳುವುದನ್ನು ಗಮನಿಸಿದ ಆಟಗಾರರು ಒಳಗೆ ಓಡಿ ಹೋಗಿದ್ದಾರೆ. ಈ ಕಾರಣದಿಂದ ಯಾವುದೇ ಸಾವು ಸಂಭವಿಸಿಲ್ಲ. ಅಪಘಾತವಾದ ವಿಮಾನ ಟ್ರೈನಿಂಗ್ ಸ್ಕೂಲ್‍ಗೆ ಸೇರಿದ್ದಾಗಿದ್ದು, ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡುವಾಗ ವಿಮಾನ ಎಂಜಿನ್ ಕೈಕೊಟ್ಟು ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಭಾರತ-ಆಸ್ಟ್ರೇಲಿಯಾ ಸರಣಿಯು ನವೆಂಬರ್ 27ರಂದು ಮೂರು ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಏಕದಿನ ಪಂದ್ಯದ ನಂತರ ಉಭಯ ತಂಡಗಳು ಮೂರು ಪಂದ್ಯಗಳ ಟಿ-20 ಸರಣಿ ಆಡಲಿವೆ. ನಂತರ ಡಿಸೆಂಬರ್ 17ರಿಂದ ಇಂಡಿಯಾ ಆಸ್ಟ್ರೇಲಿಯಾ ನಡುವಿನ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ರಾರಂಭವಾಗಲಿದೆ.
ಹಾವೇರಿ: ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಯಲ್ಲಿ ಬಿದ್ದು ಮೂವರು ಬಾಲಕರ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ಪಟ್ಟಣದ ಎರಡನೇ ನಂಬರ್ ಶಾಲೆಯಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಾಲಾ ಕೊಠಡಿ ನಿರ್ಮಾಣಕ್ಕೆ ತೆಗೆದಿದ್ದ ಗುಂಡಿಗಳು ತುಂಬಿದ್ದವು. ಈ ಗುಂಡಿಗೆ ಬಿದ್ದು ಬಾಲಕರಾದ ಅಜ್ಮಲ್ (8) ಅಕ್ಮಲ್ (9) ಮತ್ತು ಜಾಫರ್ (12) ಮೃತಪಟ್ಟಿದ್ದಾರೆ.
ಈ ಮೂವರ ಮಕ್ಕಳು ಶಾಲೆಯ ಮೈದಾನದಲ್ಲಿ ಆಡಲು ಹೋಗಿದ್ದಾರೆ. ಮಳೆಗೆ ಗುಂಡಿ ತುಂಬಿದ್ದ ಕಾರಣ ಮಕ್ಕಳ ಕಾಣಿಸಿಲ್ಲ. ಆಡುತ್ತಲೇ ಮಕ್ಕಳು 10 ಅಡಿ ಆಳದ ಗುಂಡಿಗೆ ಬಿದ್ದಿದ್ದಾರೆ. ಮಕ್ಕಳ ಬಿದ್ದ ಸಮಯದಲ್ಲಿ ಯಾರೂ ಸ್ಥಳದಲ್ಲಿ ಇಲ್ಲದ ಕಾರಣ ಮಕ್ಕಳನ್ನು ಬದುಕಿಸಲು ಆಗಿಲ್ಲ. ಹೀಗಾಗಿ ಮೂವರು ಬಾಲಕರು ಮೃತಪಟ್ಟಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಮೃತದೇಹಗಳನ್ನು ಹೊರಗೆ ತೆಗೆದಿದ್ದಾರೆ.
ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬರೇಲಿ: ಆಟ ಆಡುವ ವೇಳೆ ನಡೆದ ಜಗಳದಲ್ಲಿ 7 ವರ್ಷದ ಬಾಲಕನೊಬ್ಬ 4 ವರ್ಷದ ಬಾಲಕ ಕತ್ತನ್ನು ಸೀಳಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರು ಸಂಬಂಧಿಕರಾಗಿದ್ದು ಮಕ್ಕಳ ತಂದೆ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರ ಇಬ್ಬರು ಮನೆಯ ಹೊರಗಡೆ ಆಟ ಆಡುತ್ತಿದ್ದಾಗ ಜಗಳ ನಡೆದಿದೆ.
ಸಿಟ್ಟಾದ 7 ವರ್ಷದ ಬಾಲಕ ಮನೆಗೆ ತೆರಳಿ ಚಾಕು ತಂದು ಇರಿದಿದ್ದಾನೆ. ಬಾಲಕನ ಕಿರುಚಾಟ ಕೇಳಿ ಅಲ್ಲಿದ್ದವರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಸ್ಪತ್ರೆಯವರು ಬೇರೆ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
ಸಂತ್ರಸ್ತ ಬಾಲಕನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ನಂತರ ಕುಟುಂಬದ ಸದಸ್ಯರ ಮಾತುಕತೆಯ ಬಳಿಕ ದೂರನ್ನು ಹಿಂಪಡೆಯಲಾಗಿದೆ.
ಹಿರಿಯ ಸಹೋದರ ತಪ್ಪಾಗಿ ಕಿರಿಯ ಸಹೋದರನ ಮೇಲೆ ಚಾಕು ಇರಿದಿದ್ದಾನೆ. ಈ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಎರಡು ಕುಟುಂಬಗಳ ಸದಸ್ಯರು ಪೊಲೀಸರಲ್ಲಿ ತಿಳಿಸಿದ್ದಾರೆ.
ನವದೆಹಲಿ: ಕ್ರಿಕೆಟ್ ಆಟವನ್ನು ಕೆಲ ಅಭಿಮಾನಿಗಳು ಜೀವನದ ಒಂದು ಭಾಗದಂತೆ ನೋಡುತ್ತಾರೆ. ನೆಚ್ಚಿನ ತಂಡ ಸೋತರೇ ಕಣ್ಣೀರು ಹಾಕುತ್ತಾರೆ. ಗೆಲ್ಲಲಿ ಎಂದು ದೇವರ ಮೊರೆ ಹೋಗುತ್ತಾರೆ. ಅಂತೆಯೇ ಸ್ಟಾರ್ ಕ್ರಿಕೆಟಿಗರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿರುವ ಪ್ರಸಂಗಗಳು ನಡೆದಿವೆ.
ಕ್ರಿಕೆಟ್ ಆಟದಲ್ಲಿ ಒಂದು ಪಂದ್ಯ ಎಂದರೆ ಸೋಲು ಗೆಲವು ಕಾಮನ್ ಇದನ್ನೂ ಆಟಗಾರರೂ ಕ್ರೀಡಾಮನೋಭಾವದಿಂದ ನೋಡಿ ಸುಮ್ಮನಗುತ್ತಾರೆ. ಆದರೆ ಕೆಲ ಆಟಗಾರರು ಪಂದ್ಯಗಳನ್ನು ಸೋತಾಗ ಮೈದಾನದಲ್ಲೇ ಕಣ್ಣೀರು ಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್, ಸಚಿನ್, ಯುವರಾಜ್ ಸಿಂಗ್ ಹೀಗೆ ಕ್ರಿಕೆಟ್ ದಿಗ್ಗಜರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದಾರೆ.
ಇದರಲ್ಲಿ ನಮಗೆ ಮೊದಲಿಗೆ ನೆನಪಿಗೆ ಬರುವುದು ಯುವರಾಜ್ ಸಿಂಗ್ ಅವರು, 2011ರಲ್ಲಿ 28 ವರ್ಷದ ಬಳಿಕ ಭಾರತ ವಿಶ್ವಕಪ್ ಗೆದ್ದು ಬೀಗಿತ್ತು. ಈ ಟೂರ್ನಿಯಲ್ಲಿ ಕ್ಯಾನ್ಸರ್ ಇದ್ದರೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಯುವಿ ಭಾರತ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊನೆಗೆ ಫೈನಲ್‍ನಲ್ಲಿ ಭಾರತ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದಾಗ ಮೈದಾನದಲ್ಲಿ ಇದ್ದ ಯುವರಾಜ್ ಕಣ್ಣೀರು ಹಾಕಿದ್ದರು.
ಇದಾದ ನಂತರ 2015ರ ವಿಶ್ವಕಪ್ ವೇಳೆ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿಡಿ ವಿಲಿಯರ್ಸ್ ಕೂಡ ಕಣ್ಣೀರು ಹಾಕಿದ್ದರು. 2015ರ ವಿಶ್ವಕಪ್‍ನಲ್ಲಿ ಎಬಿಡಿ ನೇತೃತ್ವದ ತಂಡ ಬಹಳ ಚೆನ್ನಾಗಿ ಆಡಿತ್ತು. ಕಪ್ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ಸೆಮಿಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಸೋತಿತ್ತು. ಈ ಸಮಯದಲ್ಲಿ ತಂಡದ ನಾಯಕ ಡಿವಿಲಿಯರ್ಸ್ ಮೈದಾನದಲ್ಲೇ ಬೇಸರಗೊಂಡು ಕಣ್ಣೀರು ಹಾಕಿದ್ದರು. ಅಂದು ಸೌತ್ ಆಫ್ರಿಕಾದ ಹಲವು ಆಟಗಾರರು ಮೈದಾನದಲ್ಲೇ ಕುಳಿತುಕೊಂಡು ಅತ್ತಿದ್ದರು.
ಮೈದಾನದಲ್ಲಿ ಅಕ್ರಮಣಕಾರಿಯಾಗಿ ಕಾಣಿಸಿಕೊಳ್ಳುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮೈದಾನದಲ್ಲಿ ಭಾವುಕರಾಗಿದ್ದಾರೆ. 2012ರ ಟಿ-20 ವಿಶ್ವಕಪ್ ವೇಳೆ ಭಾರತ ಬಹಳ ಚೆನ್ನಾಗಿ ಆಡಿತ್ತು. ಅಂದು ಉತ್ತಮ ಲಯದಲ್ಲಿ ಇದ್ದ ಕೊಹ್ಲಿ ಟೂರ್ನಿಯುದ್ದಕ್ಕೂ ಸಖತ್ ಆಗಿ ಬ್ಯಾಟ್ ಬೀಸಿದ್ದರು. ಆದರೆ ಸೆಮಿಫೈನಲ್ ತಲುಪುವಲ್ಲಿ ಭಾರತ ಎಡವಿತ್ತು. ಈ ಸಮಯದಲ್ಲಿ ಕೊಹ್ಲಿ ಅವರು ಕೂಡ ಮೈದಾನದಲ್ಲಿ ಕಣ್ಣೀರು ಹಾಕಿದ್ದರು.
ಕ್ರಿಕೆಟ್‍ನಲ್ಲಿ ಹಲವಾರು ದಾಖಲೆಗಳನ್ನು ಮಾಡಿರುವ ಕ್ರಿಕೆಟ್ ದೇವರು ಸಚಿನ್ ಅವರು ಕೂಡ ಮೈದಾನಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ತನ್ನ ವೃತ್ತಿ ಜೀವನದ 100ನೇ ಶತಕದ ಸನಿಹದಲ್ಲಿ ಇದ್ದ ಸಚಿನ್ 2011ರ ವಿಶ್ವಕಪ್ ವೇಳೆ 100ನೇ ಶತಕವನ್ನು ಗಳಿಸಲು ವಿಫಲರಾಗಿದ್ದರು. ಆದರೆ 2012ರಲ್ಲಿ ನಡೆದ ಏಷ್ಯಾ ಕಪ್‍ನ ಬಾಂಗ್ಲಾದೇಶದ ವಿರುದ್ಧ ಪಂದ್ಯದಲ್ಲಿ ತನ್ನ ನೂರನೇ ಶತಕ ಸಿಡಿಸಿ ಅಂದು ಮೈದಾನದಲ್ಲಿ ಭಾವುಕರಾಗಿದ್ದರು.
ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಕಿಬ್-ಅಲ್-ಹಸನ್ ಕೂಡ ಮೈದಾನದಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ. 2012 ಏಷ್ಯಾ ಕಪ್‍ನಲ್ಲಿ ಉತ್ತಮವಾಗಿ ಆಡಿದ್ದ ಬಾಂಗ್ಲಾ ದೇಶ ಫೈನಲ್ ತಲುಪಿತ್ತು. ಶ್ರೀಲಂಕಾ ಮತ್ತು ಇಂಡಿಯಾದಂತಹ ಪ್ರಬಲ ತಂಡಗಳಿಗೆ ಸೋಲುಣಿಸಿ ಫೈನಲ್‍ಗೇರಿದ್ದ ಬಾಂಗ್ಲಾ, ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯವನ್ನು ಸೋತಿತ್ತು. ಈ ವೇಳೆ ಟೂರ್ನಿಯುದ್ದಕ್ಕೂ ಸೂಪರ್ ಆಗಿ ಆಡಿದ್ದ ಶಕಿಬ್ ಮೈದಾನದಲ್ಲಿ ಅತ್ತಿದ್ದರು. ಜೊತೆಗೆ ಬಾಂಗ್ಲಾದ ಇತರ ಆಟಗಾರರು ಕೂಡ ತಬ್ಬಿಕೊಂಡು ದುಃಖ ಪಟ್ಟಿದ್ದರು.
ಹೈದರಾಬಾದ್: ಅಂಧ್ರ ಪ್ರದೇಶದ ವಿಜಯವಾಡದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮೊದಲ ದಿನದ ಅಂಧ್ರ ಪ್ರದೇಶದ ಮತ್ತು ವಿದರ್ಭ ನಡುವಿನ ಪಂದ್ಯದಲ್ಲಿ ಮೈದಾನಕ್ಕೆ ಹಾವು ಬಂದ ಕಾರಣ ಆಟಕ್ಕೆ ವಿಳಂಬವಾಗಿದೆ.
ಇಂದು ಅಂಧ್ರಪ್ರದೇಶ ಮತ್ತು ವಿದರ್ಭ ತಂಡದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಮೊದಲ ದಿನದ ಪಂದ್ಯದ ವೇಳೆ ಹಾವೊಂದು ಕ್ರಿಕೆಟ್ ಮೈದಾನಕ್ಕೆ ಬಂದಿದೆ. ಹಾವು ಕ್ರಿಕೆಟ್ ಮೈದಾನದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಈ ವಿಡಿಯೋದಲ್ಲಿ ಹಾವು ಹರಿಯುತ್ತಿರುವುದನ್ನು ಆಟಗಾರರು ದಿಗ್ಭ್ರಮೆಯಿಂದ ನೋಡುತ್ತಿರುವುದನ್ನು ನಾವು ಕಾಣಬಹುದು.
SNAKE STOPS PLAY! There was a visitor on the field to delay the start of the match.
ರಣಜಿ ಟ್ರೋಫಿ ವೇಳೆ ಮೈದಾನಕ್ಕೆ ಹಾವು ನುಗ್ಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2015 ರಲ್ಲಿ ಸಾಲ್ಟ್ ಲೇಕ್‍ನ ಜೆಯೂ ಕ್ಯಾಂಪಸ್‍ನಲ್ಲಿ ನಡೆಯುತ್ತಿದ್ದ ಬಂಗಾಳ ಮತ್ತು ವಿದರ್ಭ ನಡುವಿನ ಪಂದ್ಯದಲ್ಲೂ ಹಾವೊಂದು ಮೈದಾನಕ್ಕೆ ಬಂದು ಪಂದ್ಯಕ್ಕೆ ಅಡ್ಡಿ ಮಾಡಿತ್ತು. ಈಗ ಮತ್ತೆ ಇದೇ ರೀತಿ ಹಾವೊಂದು ಬಂದಿದ್ದು ಈ ವಿಡಿಯೋವನ್ನು ಟ್ವೀಟ್ ಮಾಡಿರುವ ಬಿಸಿಸಿಐ ಹಾವು ಪಂದ್ಯವನ್ನು ನಿಲ್ಲಿಸಿದೆ. ಪಂದ್ಯ ಆರಂಭವಾಗುವುದನ್ನು ವಿಳಂಬ ಮಾಡಲು ಮೈದಾನಕ್ಕೆ ಅತಿಥಿಯೊಬ್ಬರು ಬಂದಿದ್ದರು ಎಂದು ಬರೆದುಕೊಂಡಿದೆ.
2015ರ ನಂತರ ಮತ್ತೆ ಇದೇ ವಿದರ್ಭ ತಂಡ ಆಡುವ ಪಂದ್ಯದಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವನ್ನು ಅಲ್ಲಿನ ಸಿಬ್ಬಂದಿ ಹಿಡಿದು ತೆಗೆದುಕೊಂಡು ಹೋಗಿದ್ದಾರೆ. ನಂತರ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ವಿದರ್ಭ ನಾಯಕ ಫೈಜ್ ಫೈಜಾಲ್ ಆಂಧ್ರ ಪ್ರದೇಶದ ವಿರುದ್ಧ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇತ್ತ ಅಂಧ್ರಪ್ರದೇಶ ತಂಡವನ್ನು ಹನುಮಾ ವಿಹಾರಿ ಮುನ್ನಡೆಸುತ್ತಿದ್ದಾರೆ.
ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಅಂಧ್ರ ಆರಂಭಿಕ ಕುಸಿತ ಕಂಡಿದ್ದು, ಊಟದ ಸಮಯಕ್ಕೆ ಆರಂಭಿಕ ಮೂರು ವಿಕೆಟ್‍ಗಳನ್ನು ಕಳೆದುಕೊಂಡು 87 ರನ್ ಸಿಡಿಸಿ ಸಂಕಷ್ಟಕ್ಕೆ ಸಿಲುಕಿದೆ. ಆದರೆ ನಾಯಕ ಹನುಮ ವಿವಾರಿ ತಾಳ್ಮೆಯ ಆಟವಾಡುತ್ತಿದ್ದು, 89 ಎಸೆತದಲ್ಲಿ 6 ಬೌಂಡರಿಯೊಂದಿಗೆ 43 ರನ್ ಸಿಡಿಸಿ ಆಡುತ್ತಿದ್ದಾರೆ.
ಚಂಢೀಗಡ: 78 ವರ್ಷದ ವೃದ್ಧರೊಬ್ಬರು 1500 ಮೀ. ಓಡಿ ಚಿನ್ನದ ಪದಕ ಗೆದ್ದು ಮೈದಾನದಲ್ಲೇ ಮೃತಪಟ್ಟ ಘಟನೆಯೊಂದು ಪಂಜಾಬ್‍ನ ಸಂಗ್ರೂರ್‍ನಲ್ಲಿ ನಡೆದಿದೆ.
ಬಕ್ಷೀಶ್ ಸಿಂಗ್ ಮೃತಪಟ್ಟ ವ್ಯಕ್ತಿ. ಪಂಜಾಬ್ ಮಾಸ್ಟರ್ ಅಥ್ಲೆಟಿಕ್ ಅಸೋಸಿಯೇಷನ್ ವೃದ್ಧರಿಗೆ ಅಥ್ಲೆಟಿಕ್ ಮೀಟ್ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಕ್ಷೀಶ್ ಸಿಂಗ್ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿದ್ದಾರೆ. ಬಳಿಕ ಮೈದಾನದಲ್ಲಿಯೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
1500 ಮೀ. ರೇಸ್ ಪೂರ್ಣಗೊಳಿಸಿದ ನಂತರ ಬಕ್ಷೀಶ್ ವಿಶ್ರಾಂತಿ ಪಡೆಯುತ್ತಿದ್ದರು. ಇದೇ ವೇಳೆ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸಿಂಗ್ರೂರ್ ನ ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ವೈದ್ಯರು ಬಕ್ಷೀಶ್ ಸಿಂಗ್ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಶನಿವಾರ ಈ ಅಥ್ಲೆಟಿಕ್ ಮೀಟ್ ಆಯೋಜಿಸಲಾಗಿತ್ತು. 1500 ಮೀ. ಓಟದಲ್ಲಿ ಬಕ್ಷೀಶ್ ಚಿನ್ನದ ಪದಕ ಗೆದ್ದಿದ್ದರು ಎಂದು ಸಂಬಂಧಿ ಮಹಿಂದರ್ ಸಿಂಗ್ ವರ್ಕ್ ತಿಳಿಸಿದ್ದಾರೆ. ಬಕ್ಷೀಶ್ ತಮ್ಮ ಓಟವನ್ನು ಪೂರ್ಣಗೊಳಿಸಿದ್ದು ಸಂತಸ ತಂದಿದೆ ಎಂದು ಜೊತೆಯಲ್ಲಿದ್ದವರಿಗೆ ಹೇಳಿದ್ದರು.
ವಿಶ್ರಾಂತಿ ಪಡೆಯಲು ಬಕ್ಷೀಶ್ ಮೊದಲು ತಮ್ಮ ಉಡುಪನ್ನು ಧರಿಸಲು ಹೋಗಿದ್ದರು. ಆದರೆ ಅವರಿಗೆ ತಮ್ಮ ಉಡುಪನ್ನು ಧರಿಸಲು ಆಗಲಿಲ್ಲ. ಈ ವೇಳೆ ಬಕ್ಷೀಶ್ ಅಲ್ಲಿಯೇ ಕುಸಿದು ಬಿದ್ದರು. ಬಕ್ಷೀಶ್‍ಗೆ ಓಡುವುದು ಎಂದರೆ ತುಂಬಾ ಇಷ್ಟ. ಅಲ್ಲದೆ ಅವರು ಯಾವಾಗಲೂ ನಾನು ಸತ್ತರೆ ಮೈದಾನದಲ್ಲಿಯೇ ಆಟಗಾರನಾಗಿ ಸಾಯಬೇಕು ಎಂದು ಹೇಳುತ್ತಿದ್ದರು ಎಂದು ಬಕ್ಷೀಶ್ ಸ್ನೇಹಿತರು ತಿಳಿಸಿದ್ದಾರೆ.
ಬಕ್ಷೀಶ್ ಸಿಂಗ್ ಮೊದಲು ಸೈನ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಿವೃತ್ತಿ ಪಡೆದ ಬಳಿಕ ಅವರು ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. 1982ರಲ್ಲಿ ಅವರು ಕ್ರೀಡೆಯಲ್ಲಿ ಭಾಗವಹಿಸಲು ಶುರು ಮಾಡಿದ್ದರು. ಬಕ್ಷೀಸ್ ಅವರು ಇವರೆಗೂ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಬಕ್ಷೀಶ್ 800, 1500 ಹಾಗೂ 5000 ಮೀ. ಓಡುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕ್ರಿಕೆಟ್ ರಾಜತಾಂತ್ರಿಕತೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪ್ರಶಂಶಿಸಿದ್ದಾರೆ.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿಗೆ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಹೋಗಿದ್ದಾಗ ಅಲ್ಲಿನ ಅಧ್ಯಕ್ಷರಿಗೆ ಭಾರತ ತಂಡದ ಆಟಗಾರರು ಸಹಿ ಹಾಕಿದ್ದ ಬ್ಯಾಟ್ ನೀಡಿ ಗೌರವಿಸಿದ್ದರು.
ಮಾಲ್ಡೀವ್ಸ್ ಅಧ್ಯಕ್ಷರಿಗೆ ಬ್ಯಾಟ್ ನೀಡಿದ ಫೋಟೋ ಹಾಕಿದ ಮೋದಿ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಸಚಿನ್ “ಕ್ರಿಕೆಟ್ ಆಟವನ್ನು ಪ್ರಚಾರ ಮಾಡುತ್ತಿರುವುದಕ್ಕೆ ಧನ್ಯವಾದಗಳು ಮೋದಿಜೀ. ನಿಮ್ಮ ನಡೆ ಕ್ರಿಕೆಟ್ ರಾಜತಾಂತ್ರಿಕತೆಗೆ ಒಂದು ಉತ್ತಮ ಉದಾಹರಣೆ. ಶೀಘ್ರದಲ್ಲೇ ಮಾಲ್ಡೀವ್ಸ್‍ನ್ನು ಕ್ರಿಕೆಟ್ ಮ್ಯಾಪ್‍ನಲ್ಲಿ ನೋಡಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಕಳೆದ ಶನಿವಾರ ಮಾಲ್ಡೀವ್ಸ್‍ಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಮೋದಿ ಅವರು ಆ ದೇಶದ ಕ್ರೀಡಾ ಕ್ಷೇತ್ರಕ್ಕೆ ಸಹಾಯವಾಗಲಿ ಎಂದು ಅಲ್ಲಿ ಒಂದು ಕ್ರಿಕೆಟ್ ಮೈದಾನ ನಿರ್ಮಾಣ ಮಾಡಲು ನೆರವು ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮೋದಿ ಅವರು ಆ ದೇಶದ ಅಧ್ಯಕ್ಷ ಇಬ್ರಾಹಿಂ ಮೊಹಮದ್ ಸೊಲಿಹ್ ಭಾರತ ತಂಡದ ಆಟಗಾರರು ಸಹಿ ಹಾಕಿದ್ದ ಬ್ಯಾಟ್ ನೀಡಿ ಅದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಇದನ್ನು ಕಂಡ ಸಚಿನ್ ಅವರು, ಮೋದಿ ಅವರ ಈ ನಡೆ ಈಗ ನಡೆಯುತ್ತಿರುವ ವಿಶ್ವಕಪ್‍ನ ಕ್ರಿಕೆಟ್ ರಾಜತಾಂತ್ರಿಕತೆಗೆ ಉತ್ತಮ ಉದಾಹರಣೆ ಎಂದು ಹೇಳಿದ್ದಾರೆ.
ಭಾರತ ದೇಶವು ಮಾಲ್ಡೀವ್ಸ್‍ನಲ್ಲಿ ಕ್ರಿಕೆಟ್‍ನನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಈ ದೇಶದ ಕ್ರೀಡಾ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು ಎಂಬ ಇಬ್ರಾಹಿಂ ಮೊಹಮದ್ ಸೊಲಿಹ್ ಅವರ ಉದ್ದೇಶವನ್ನು ನಾವು ಪೂರೈಸುತ್ತೇವೆ ಎಂದು ಮೋದಿ ಅವರು ಹೇಳಿದ್ದರು.
ಈ ವಿಚಾರದ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಮಾತನಾಡಿ, ಭಾರತ ಮಾಲ್ಡೀವ್ಸ್‍ನಲ್ಲಿ ಒಂದು ಕ್ರೀಡಾಂಗಣವನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿದೆ ಮತ್ತು ಈ ದೇಶದಲ್ಲಿ ಕ್ರಿಕೆಟ್‍ಗೆ ಉತ್ತೇಜನ ನೀಡುವ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಮಾತನಾಡಿ ಇಲ್ಲಿನ ಕ್ರಿಕೆಟ್ ಆಟಗಾರಿಗೆ ಉನ್ನತ ಮಟ್ಟದ ತರಬೇತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.