Tag: groufie

  • ಎಲ್ಲಾ ಅಡೆತಡೆಗಳಿಗೂ ‘ಗ್ರೂಫಿ’ ಸಕ್ಸಸ್ ಉತ್ತರ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

    ಎಲ್ಲಾ ಅಡೆತಡೆಗಳಿಗೂ ‘ಗ್ರೂಫಿ’ ಸಕ್ಸಸ್ ಉತ್ತರ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

    ಕೊರೊನಾ ಎರಡನೇ ಅಲೆ ಲಾಕ್ ಡೌನ್ ಮುಗಿಯುತ್ತಿದ್ದಂತೆ ಚಿತ್ರರಂಗದಲ್ಲೂ ಸಿನಿಮಾ ಕೆಲಸಗಳು ಗರಿಗೆದರಿದ್ದವು. ಒಂದಾದ ಮೇಲೆ ಒಂದು ಸಿನಿಮಾ ತಂಡಗಳು ತಮ್ಮ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸೋಕೆ ಶುರುವಿಟ್ವು. ಆದರೆ ಚಿತ್ರಮಂದಿರದಲ್ಲಿ ಮಾತ್ರ ಶೇ.50ರಷ್ಟು ಪ್ರೇಕ್ಷಕರಿಗೆ ಅವಕಾಶವಿತ್ತು. ಇದರಿಂದಾಗಿ ಕೆಲ ಸಿನಿಮಾ ತಂಡಗಳು ಬಿಡುಗಡೆಯ ದಿನಾಂಕವನ್ನು ಮುಂದಕ್ಕೆ ಹಾಕಿದವು. ಆದರೆ ಆಗಿದ್ದಾಗಲಿ ನಮ್ಮ ಸಿನಿಮಾ ಕಂಟೆಂಟ್ ಚೆನ್ನಾಗಿದೆ, ಸಿನಿಮಾ ಬಿಡುಗಡೆ ಮಾಡೋದೇ ಎಂದು ಮುಂದೆ ಬಂದಿದ್ದು ಗ್ರೂಫಿ ಚಿತ್ರತಂಡ. ಇದನ್ನೂ ಓದಿ: ಪ್ರಕೃತಿ ಮಡಿಲಲ್ಲಿ ಸ್ನೇಹಿತರ ಪಯಣಕ್ಕೆ ಸೆಲ್ಫೀ ನೀಡಿತು ರೋಚಕ ಟ್ವಿಸ್ಟ್

    ‘ಗ್ರೂಫಿ’ ಹೊಸತಂಡ, ಹೊಸ ಪ್ರತಿಭೆಗಳನ್ನೊಳಗೊಂಡ ಚಿತ್ರ. ಒಂದ್ಕಡೆ ಚಿತ್ರಮಂದಿರದಲ್ಲಿ 50ರಷ್ಟು ಪ್ರೇಕ್ಷಕರಿಗೆ ಅನುಮತಿ, ಇನ್ನೊಂದು ಕಡೆ ಮೂರನೇ ಅಲೆಯ ಆತಂಕ. ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಎಂಟು ಜಿಲ್ಲೆಗಳಲ್ಲಿ ಕೋವಿಡ್ ನಿರ್ಬಂಧ. ಈ ಎಲ್ಲಾ ಆತಂಕವನ್ನು ಜೋಳಿಗೆಯಲ್ಲಿಟ್ಟುಕೊಂಡು ಸಿನಿಮಾ ಮೇಲಿನ ಕಾನ್ಫಿಡೆನ್ಸ್ ನಿಂದ ಆಗಸ್ಟ್ 20 ರಂದು ಸಿನಿಮಾ ಬಿಡುಗಡೆ ಮಾಡಿತ್ತು ಚಿತ್ರತಂಡ. ನಿರೀಕ್ಷೆಯಂತೆ ಮೊದಲ ದಿನ ಚಿತ್ರಕ್ಕೆ ಉತ್ತಮ ಓಪನಿಂಗ್ ಕೂಡ ಸಿಕ್ಕಿತ್ತು. ದಿನದಿಂದ ದಿನಕ್ಕೆ ಸಿನಿಮಾ ಮೇಲೆ ಪ್ರೇಕ್ಷಕರ ಆರ್ಶೀವಾದವೂ ಹೆಚ್ಚಾಯಿತು. ಇದೀಗ ‘ಗ್ರೂಫಿ’ ಇದ್ದ ಎಲ್ಲಾ ಅಡೆತಡೆಗಳನ್ನು ದಾಟಿ 25 ದಿನದ ಸಂಭ್ರಮಕ್ಕೆ ಕಾಲಿಟ್ಟಿದೆ. ಹೊಸಬರ ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹ, ಪ್ರೀತಿ ಕಂಡು ಚಿತ್ರತಂಡ ಕೂಡ ಥ್ರಿಲ್ ಆಗಿದೆ. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

    ನಿರ್ಮಾಪಕ ಕೆ.ಜಿ ಸ್ವಾಮಿ ಅವರಿಗೆ ಇದು ಮೊದಲ ಸಿನಿಮಾ. ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿದ್ದ ಅಡೆತಡೆಗಳು ಅವರಲ್ಲೂ ಆತಂಕ ಉಂಟು ಮಾಡಿತ್ತು. ಎಲ್ಲಾ ಇತಿಮಿತಿಗಳ ನಡುವ ಒಂದಿಷ್ಟು ಸೆಂಟರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದ್ರೀಗ ಎಲ್ಲಾ ಅಡೆತಡೆ ದಾಟಿ ಚಿತ್ರ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿರೋದು ನಿರ್ಮಾಪಕರ ಮೊಗದಲ್ಲೂ ಸಂತಸ ತಂದಿದೆ. ಡಿ.ರವಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬಂದ ಚೊಚ್ಚಲ ಚಿತ್ರ ‘ಗ್ರೂಫಿ’. ಸಸ್ಪೆನ್ಸ್, ಥ್ರಿಲ್ಲರ್, ಹಾರಾರ್ ಸಬ್ಜೆಕ್ಟ್ ಒಳಗೊಂಡ ಚಿತ್ರದಲ್ಲಿ ಆರ್ಯನ್, ಪದ್ಮಶ್ರೀ ಜೈನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ಹಾಗೂ ಲಕ್ಷೀಕಾಂತ್ ಛಾಯಾಗ್ರಹಣವಿದೆ. ಇದನ್ನೂ ಓದಿ: ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ

  • ಪ್ರಕೃತಿ ಮಡಿಲಲ್ಲಿ ಸ್ನೇಹಿತರ ಪಯಣಕ್ಕೆ ಸೆಲ್ಫೀ ನೀಡಿತು ರೋಚಕ ಟ್ವಿಸ್ಟ್

    ಪ್ರಕೃತಿ ಮಡಿಲಲ್ಲಿ ಸ್ನೇಹಿತರ ಪಯಣಕ್ಕೆ ಸೆಲ್ಫೀ ನೀಡಿತು ರೋಚಕ ಟ್ವಿಸ್ಟ್

    ಚಿತ್ರ: ಗ್ರೂಫಿ
    ನಿರ್ದೇಶನ : ಡಿ. ರವಿ ಅರ್ಜುನ್
    ನಿರ್ಮಾಪಕ: ಕೆ.ಜಿ.ಸ್ವಾಮಿ
    ಛಾಯಾಗ್ರಹಕ: ಲಕ್ಷೀಕಾಂತ್
    ಸಂಗೀತ: ವಿಜೇತ್ ಕೃಷ್ಣ
    ತಾರಾಬಳಗ: ಆರ್ಯನ್, ಪದ್ಮಶ್ರೀ ಜೈನ್, ಗಗನ್, ಉಮಾ ಮಯೂರಿ, ಪ್ರಜ್ವಲ್, ಸಂಧ್ಯಾ, ಇತರರು

    ಯುವ ಜನತೆಯ ಜೀವಕ್ಕೆ ಮಾರಕವಾಗುತ್ತಿರುವ ಸೆಲ್ಫೀ ಗೀಳಿನ ಬಗ್ಗೆ ಸಿನಿಮಾ ಬೆಳಕು ಚೆಲ್ಲುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಿನಿಮ್ಯಾಟಿಕ್ ಆಗಿ ತೆರೆ ಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

    ಚಿತ್ರದ ನಾಯಕ ಕಾರ್ತಿಕ್ ಒಬ್ಬ ಫೋಟೋ ಜರ್ನಲಿಸ್ಟ್. ಪ್ರಕೃತಿ ಸೌಂದರ್ಯವನ್ನು ಪ್ರೀತಿಸುವ ಕಾರ್ತಿಕ್ ಸದಾ ತನ್ನ ಕ್ಯಾಮೆರಾ ಕಣ್ಣಲ್ಲಿ ಅದರ ಸೌಂದರ್ಯವನ್ನು ಸೆರೆ ಹಿಡಿಯುವಲ್ಲಿ ನಿರತನಾಗಿರುತ್ತಾನೆ. ಕ್ಯಾಮೆರಾ ಹಿಡಿದು ರಮಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತಾನೆ. ಹೀಗಿರುವಾಗ ಒಮ್ಮೆ ಒಂದಷ್ಟು ಸ್ನೇಹಿತರು ಆತನಿಗೆ ಪರಿಚಯವಾಗುತ್ತಾರೆ. ಅವರೆಲ್ಲರದ್ದು ಒಂದೊಂದು ರೀತಿಯ ಸ್ವಭಾವ. ನಾಯಕಿ ಭುವಿಗೆ ಸದಾ ಸೆಲ್ಫೀ ತೆಗೆದುಕೊಳ್ಳುವ ಹುಚ್ಚು, ಭಯದಲ್ಲೇ ಬದುಕುವ ಪುನೀತ್, ಹೊಸತನಕ್ಕೆ ಹಾತೊರೆಯುವ ಪೂರ್ವಿ ಹೀಗೆ ಒಬ್ಬೊಬ್ಬರದ್ದು ಒಂದು ನೇಚರ್. ಇವರೆಲ್ಲರೂ ಒಂದು ಸುಂದರ ತಾಣದಲ್ಲಿ ಭೇಟಿಯಾಗಿ ಸ್ನೇಹಿತರಾಗುತ್ತಾರೆ. ಆನಂತರ ಏನೆಲ್ಲ ಘಟನೆ ನಡೆಯುತ್ತೆ ಎನ್ನುವುದೇ ಗ್ರೂಫಿ ಸಿನಿಮಾದ ಇಂಟ್ರಸ್ಟಿಂಗ್ ಸಂಗತಿ. ಇದನ್ನೂ ಓದಿ: ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ

    ಛಾಯಾಗ್ರಾಹಕ ಲಕ್ಷೀಕಾಂತ್ ಕ್ಯಾಮೆರಾ ವರ್ಕ್ ಕಣ್ಣಿಗೆ ಹಬ್ಬ ನೀಡುತ್ತದೆ. ನಿಸರ್ಗದ ಮಡಿಲಲ್ಲೇ ಚಿತ್ರೀಕರಣ ನಡೆದಿರುವುದರಿಂದ ಅದನೆಲ್ಲ ಸೊಗಸಾಗಿ ಸೆರೆಹಿಡಿದು ತೆರೆ ಮೇಲೆ ತಂದಿದ್ದಾರೆ. ನಿಸರ್ಗ ಸೌಂದರ್ಯದ ಜೊತೆ ಪ್ರಾಕೃತಿಕ ವಿಕೋಪಕ್ಕೆ ಕಾರಣವಾದ ಅಂಶಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. ವಿಜೇತ ಕೃಷ್ಣ ಸಂಗೀತದಲ್ಲಿ ಒಂದೆರಡು ಹಾಡುಗಳು ಮನಸಿಗೆ ಮುದ ನೀಡುತ್ತವೆ. ನಿರ್ದೇಶಕ ಡಿ. ರವಿ ಅರ್ಜುನ್ ಸಿನಿಮಾ ಪ್ರೀತಿ ಬಗ್ಗೆ ಮೆಚ್ಚುಗೆ ಸೂಚಿಸಲೇಬೇಕು. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

    ಫೋಟೋ ಜರ್ನಲಿಸ್ಟ್ ಆಗಿ ನಾಯಕ ಆರ್ಯನ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾಯಕಿ ಪದ್ಮಶ್ರೀ ಜೈನ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸ್ನೇಹಿತರ ಪಾತ್ರಗಳಲ್ಲಿ ನಟಿಸಿರುವ ಗಗನ್, ಉಮಾ ಮಯೂರಿ, ಸಂಧ್ಯಾ, ಪ್ರಜ್ವಲ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸ್ನೇಹ, ಪ್ರೀತಿ, ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಎಲ್ಲಾ ಎಳೆಗಳನ್ನು ಒಳಗೊಂಡಿರುವ ಈ ಚಿತ್ರ ನೋಡುಗರಿಗೆ ಥ್ರಿಲ್ ನೀಡೋದ್ರ ಜೊತೆ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ. ಒಟ್ನಲ್ಲಿ ಒಂದೊಳ್ಳೆ ಅನುಭವ ಗ್ರೂಫಿ ಚಿತ್ರ ನೀಡೋದ್ರಲ್ಲಿ ಡೌಟೇ ಇಲ್ಲ.

    ರೇಟಿಂಗ್: 3.5/5

  • ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ

    ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ನಿರ್ಮಾಪಕರಾಗಿ ಕೆ.ಜಿ.ಸ್ವಾಮಿ

    ಚಂದನವನದಲ್ಲಿ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶವಿದ್ರೂ ಕೂಡ ಸಿನಿಮಾ ತಂಡಗಳು ಪ್ರೇಕ್ಷಕರಿಗೆ ಮನರಂಜನೆ ನೀಡೋಕೆ ಚಿತ್ರಮಂದಿರಕ್ಕೆ ಬರಲುರೆಡಿಯಾಗಿವೆ. ಒಂದೊಂದೇ ಚಿತ್ರತಂಡಗಳು ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿವೆ. ಅಂತೆಯೇ ಈ ವಾರ ಚಿತ್ರಮಂದಿರಕ್ಕೆ ಹೊಸಬರ ಹೊಸತನವಿರುವ `ಗ್ರೂಫಿ’ ಸಿನಿಮಾ ತೆರೆಗೆ ಬರುತ್ತಿದೆ.

    ಸೋಶಿಯಲ್ ಮೀಡಿಯಾಗಳಲ್ಲಿ ‘ಗ್ರೂಫಿ’ ಚಿತ್ರದ ಹಾಡುಗಳು ಸಾಕಷ್ಟು ಗಮನ ಸೆಳೆಯುತ್ತಿವೆ. ಟ್ರೇಲರ್ ಕೂಡ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡು ನಿರೀಕ್ಷೆ ಹೆಚ್ಚಿಸಿದೆ. ಸೆಲ್ಫಿಯಿಂದಾಗಬಹುದಾದ ಮಾರಕತೆಯನ್ನು ಎಳೆಯಾಗಿಟ್ಟುಕೊಂಡು ಸಾಮಾಜಿಕ ಸಂದೇಶವನ್ನು ಹೇಳ ಹೊರಟಿದೆ ಚಿತ್ರತಂಡ. ‘ಗ್ರೂಫಿ’ ಮೂಲಕ ಗಾಂಧಿನಗರಕ್ಕೆ ಹೊಸ ಪ್ರತಿಭೆಗಳ ಆಗಮನವಾಗಿದೆ.

    ಕೆ.ಜಿ.ಸ್ವಾಮಿ ಈ ಚಿತ್ರದ ನಿರ್ಮಾಪಕರು. ಜಾಹೀರಾತು ಏಜೆನ್ಸಿ ಹಾಗೂ ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ಹೊಂದಿರುವ ಇವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಕ್ಷೇತ್ರದ ಮೇಲಿನ ಅಭಿಮಾನದಿಂದ ಫಿಲ್ಮಂ ಮೇಕಿಂಗ್ ಕೋರ್ಸ್ ಕೂಡ ಮಾಡಿಕೊಂಡಿದ್ದಾರೆ. ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಬೇಕು ಎಂದು ಕಾಯುತ್ತಿದ್ದ ಇವರಿಗೆ ‘ಗ್ರೂಫಿ’ ಸಿನಿಮಾ ಕಥೆ ಸಖತ್ ಇಂಪ್ರೆಸ್ ಮಾಡಿದೆ. ಆದ್ರಿಂದ ತಮ್ಮ ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಮೊದಲ ಸಿನಿಮಾವಾಗಿ ‘ಗ್ರೂಫಿ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ‘ಗ್ರೂಫಿ’ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮೈಸೂರು ಮಹಾರಾಜ ಯದುವೀರ್

    ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಚಿತ್ರದಲ್ಲಿ ಹೊಸ ಪ್ರತಿಭೆಗಳಾದ ಆರ್ಯನ್, ಪದ್ಮಶ್ರೀ ಜೈನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಡಿ.ರವಿ ಅರ್ಜುನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಉಳಿದಂತೆ ಉಮಾ ಮಯೂರಿ, ಗಗನ್, ಪ್ರಜ್ವಲ್, ಸಂಧ್ಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸಂಗೀತ, ಶ್ರೀಧರ್, ಹನುಮಂತೇ ಗೌಡ್ರು, ರಘು ಪಾಂಡೇಶ್ವರ್ ಚಿತ್ರದ ತಾರಾಬಳಗದಲ್ಲಿದ್ದಾರೆ. ವಿಜೇತ್ ಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಲಕ್ಷೀಕಾಂತ್ ಕ್ಯಾಮೆರಾ ಕಣ್ಣಲ್ಲಿ ಸಿನಿಮಾ ಸೆರೆ ಹಿಡಿಯಲಾಗಿದೆ. ಆಗಸ್ಟ್ 20ರಂದು ‘ಗ್ರೂಫಿ’ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತಿದೆ. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

  • ‘ಗ್ರೂಫಿ’ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮೈಸೂರು ಮಹಾರಾಜ ಯದುವೀರ್

    ‘ಗ್ರೂಫಿ’ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮೈಸೂರು ಮಹಾರಾಜ ಯದುವೀರ್

    ವ ನಿರ್ದೇಶಕ ಡಿ.ರವಿ ಅರ್ಜುನ್ ನಿರ್ದೇಶನದ ‘ಗ್ರೂಫಿ’ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಬಿಡುಗಡೆಯ ಸನಿಹದಲ್ಲಿರುವ ಈ ಚಿತ್ರ ಒಂದೊಂದೇ ಸ್ಯಾಂಪಲ್ ಗಳ ಮೂಲಕ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸುತ್ತಿದೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ‘ಗ್ರೂಫಿ’ ಚಿತ್ರತಂಡ ಆ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಮೈಸೂರು ಮಹಾರಾಜರಾದ ಯದುವೀರ್ ಕೈಯಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿಸಿದ್ದು, ಟ್ರೇಲರ್ ನೋಡಿ ಮೆಚ್ಚಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಮಹಾರಾಜ ಯದುವೀರ್.

    ಹೆಜ್ಜೆ ಹೆಜ್ಜೆಗೂ ಕುತೂಹಲವನ್ನುಂಟು ಮಾಡುವ ‘ಗ್ರೂಫಿ’ ಸಿನಿಮಾದ ಇಂಟ್ರಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿ ಸಿನಿರಸಿಕರು ಮೆಚ್ಚುಗೆ ನೀಡುತ್ತಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಗ್ರೂಫಿ ಸಿನಿಮಾ ಡಿ. ರವಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾ. ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಕೆ.ಜಿ.ಸ್ವಾಮಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ, ನಿರ್ಮಾಪಕರೊಳಗೊಂಡು ಚಿತ್ರದ ನಟ ನಟಿಯರಿಗೂ ಇದು ಮೊದಲ ಸಿನಿಮಾ. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

    ಹೊಸಬರ ತಂಡ ಕಟ್ಟಿಕೊಂಡು ಹೊಸತನದೊಂದಿಗೆ ಬಂದಿರುವ ಗ್ರೂಫಿ ಚಿತ್ರತಂಡ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ಸಿನಿಪ್ರಿಯರಿಗೆ ನೀಡಲಿದೆ. ಚಿತ್ರದ ಪ್ರಮುಖ ಹೈಲೈಟ್ ಅಂದ್ರೆ ಸಿನಿಮಾಟೋಗ್ರಫಿ. ಲಕ್ಷೀಕಾಂತ್ ಕ್ಯಾಮೆರಾ ಕಣ್ಣಲ್ಲಿ ಮಡಿಕೇರಿಯ ಗಾಳಿಬೀಡು, ಮಲ್ಲಳ್ಳಿ ವಾಟರ್ ಫಾಲ್ಸ್, ಹರಿಹರ ಸೇರಿದಂತೆ ಅನೇಕ ಸುಂದರ ಸ್ಥಳಗಳು ಅಧ್ಬುತವಾಗಿ ಸೆರೆಯಾಗಿದ್ದು, ಟ್ರೇಲರ್ ನಲ್ಲಿ ಅದರ ಚಿಕ್ಕ ಝಲಕ್ ಕಾಣಬಹುದು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಆರ್ಯನ್ ಹಾಗೂ ಪದ್ಮಶ್ರೀ ಜೈನ್ ನಟಿಸಿದ್ದಾರೆ. ಉಳಿದಂತೆ ಉಮಾ ಮಯೂರಿ, ಗಗನ್, ಪ್ರಜ್ವಲ್, ಸಂಧ್ಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸಂಗೀತ, ಶ್ರೀಧರ್, ಹನುಮಂತೇ ಗೌಡ್ರು, ರಘು ಪಾಂಡೇಶ್ವರ್ ಚಿತ್ರದ ತಾರಾಬಳಗದಲ್ಲಿದ್ದಾರೆ.

    ವಿಜೇತ್ ಕೃಷ್ಣ ಸಂಗೀತ ನಿರ್ದೇಶನದಲ್ಲಿ ಚಿತ್ರದ ಕಲರ್ ಫುಲ್ ಹಾಡುಗಳು ಮೂಡಿಬಂದಿದ್ದು, ಇತ್ತೀಚೆಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದರು. ಈಗಾಗಲೇ ಚಿತ್ರದ ಹಾಡುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಹೃದಯ ಶಿವ ಅವರ ಸಾಹಿತ್ಯ ಚಿತ್ರದ ಹಾಡುಗಳಿಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಹೊಸತಂಡದ ‘ಗ್ರೂಫಿ’ ಚಿತ್ರ ಆಗಸ್ಟ್ 20ರಂದು ಬಿಡುಗಡೆಯಾಗುತ್ತಿದೆ.