Tag: Grooms

  • ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ- 2 ಲಕ್ಷ ರೂ. ಖರ್ಚು ಮಾಡಿ ಬಾಡಿಗೆ ಬಿಟ್ಟ

    ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ- 2 ಲಕ್ಷ ರೂ. ಖರ್ಚು ಮಾಡಿ ಬಾಡಿಗೆ ಬಿಟ್ಟ

    ಬಿಹಾರ: ವಧು, ವರರು ತಮ್ಮ ಮದುವೆಗಳನ್ನು ಸ್ಮರಣೀಯವಾಗಿಸಲು ಸಾಕಷ್ಟು ಪ್ರಯತ್ನವನ್ನು ಮಾಡುತ್ತಾರೆ. ಹೂವಿನ ಪಲ್ಲಕ್ಕಿ , ಬುಲೆಟ್ ಬೈಕ್, ಜಟಕಾ ಗಾಡಿ ಮೇಲೆ ಬರುವುದಾಗಿ ವಿಶೆಷ ಪ್ರಯತ್ನವನ್ನು ಮಾಡುತ್ತಾರೆ. ಹೆಲಿಕಾಪ್ಟರ್‌ನಲ್ಲಿ ಮಂಟಪಕ್ಕೆ ಬರುವ ಪ್ಲ್ಯಾನ್ ಮಾಡುತ್ತಾರೆ. ಇಂಥಹ ಆಸೆ ಇರುವ ದಂಪತಿಗಾಗಿಯೆ ವ್ಯಕ್ತಿಯೊಬ್ಬ ಹೊಸ ಪ್ಲ್ಯಾನ್ ಮಾಡಿದ್ದಾರೆ.

    ಹೆಲಿಕಾಪ್ಟರ್ ಬಾಡಿಗೆಗೆ ಪಡೆಯುವುದು ಬಹಳ ದುಬಾರಿಯಾಗಿದೆ ಮತ್ತು ಪ್ರತಿಯೊಬ್ಬರೂ ಬಾಡಿಗೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಬಿಹಾರದ ಬಗಾಹಾದಲ್ಲಿ ಮೆಕ್ಯಾನಿಕ್ ಕಮ್ ಆರ್ಟಿಸ್ಟ್ ಜುಗಾದ್ ಈ ಬಗ್ಗೆ ಯೋಚಿಸಿ ಟಾಟೊ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಲು ನಿರ್ಧರಿಸಿದರು. ಮುಂದಿನ ದಿನಗಳಲ್ಲಿ ಮದುವೆಗೆ ಬಾಡಿಗೆಗೆ ಪಡೆಯಬಹುದು ಎಂದು ಒಂದು ಉಪಾಯವನ್ನು ಮಾಡಿದ್ದಾರೆ. ಇದನ್ನೂ ಓದಿ: ಧರ್ಮ ಮುಖ್ಯ ಎಂದು ಪರೀಕ್ಷೆಯನ್ನೇ ಬಹಿಷ್ಕರಿಸಿದ ಶಿವಮೊಗ್ಗ ವಿದ್ಯಾರ್ಥಿನಿಯರು

    ಬಾಗಹದ ನಿವಾಸಿಯಾಗಿರುವ ಗುಡ್ಡು ಶರ್ಮಾ 2 ಲಕ್ಷ ರೂಪಾಯಿ ಖರ್ಚು ಮಾಡಿ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ. ಅವರ ಸೃಜನಶೀಲ ಆವಿಷ್ಕಾರಕ್ಕೆ ಈಗಾಗಲೇ ಮೆಚ್ಚುಗೆ ವ್ಯಕ್ತವಾಗಿದೆ. ಈಗಾಗಲೇ 19 ಜನರು ಅದನ್ನು ಬುಕ್ ಮಾಡಿದ್ದಾರೆ. ಹೆಲಿಕಾಪ್ಟರ್ 15,000 ರೂ. ಬೆಲೆಯಲ್ಲಿ ಭವಿಷ್ಯದ ವರಗಳಿಗೆ ಬಾಡಿಗೆಗೆ ನೀಡಲಾಗುತ್ತದೆ ಎನ್ನುವ ಉದ್ದೇಶದಿಂದ ಈ ಯೋಚನೆ ಮಾಡಿದ್ದಾರೆ.

    ಕಾರಿಗೆ ಹೆಲಿಕಾಪ್ಟರ್ ರೂಪ ನೀಡಿದ ಮೆಕ್ಯಾನಿಕ್ ಗುಡ್ಡು ಶರ್ಮಾ ಮಾತನಾಡಿ, ಡಿಜಿಟಲ್ ಇಂಡಿಯಾದ ಯುಗದಲ್ಲಿ ಈ ಆವಿಷ್ಕಾರ ಸ್ವಾವಲಂಬಿ ಭಾರತಕ್ಕೆ ಜೀವಂತ ಉದಾಹರಣೆಯಾಗಿದೆ. ಇಂತಹ ಹೆಲಿಕಾಪ್ಟರ್ ತಯಾರಿಸಲು ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ಹಣ ಬೇಕಾಗುತ್ತದೆ. ಆದರೆ ಹೈಟೆಕ್ ರೂಪ ನೀಡಲು ಎರಡು ಲಕ್ಷ ರೂಪಾಯಿಗೂ ಹೆಚ್ಚು ವೆಚ್ಚವಾಗುತ್ತದೆ. ಇದರ ಬಾಡಿಗೆ 15,000 ರೂಪಾಯಾಗಿದೆ. ಮದುವೆಯ ಸಮಯದಲ್ಲಿ ಮಾರುಕಟ್ಟೆಯಲ್ಲಿ ಹೆಲಿಕಾಪ್ಟರ್‍ಗಳಿಗೆ ಭಾರಿ ಬೇಡಿಕೆಯಿದೆ. ಏಕೆಂದರೆ ಅನೇಕ ಜನರು ತಮ್ಮ ವಧುವನ್ನು ಮನೆಗೆ ಕರೆತರಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸಿ ನರ್ಸಿಂಗ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು – ಬ್ರೀಮ್ಸ್ ಮೆಡಿಕಲ್ ಕಾಲೇಜು ಅನುಮತಿ

  • ಗುಂಡು ತಗುಲಿದ್ರೂ ಬಂದು ತಾಳಿ ಕಟ್ಟಿದ ಗಂಡೆದೆ ಗುಂಡಿಗೆಯ ವರ!

    ಗುಂಡು ತಗುಲಿದ್ರೂ ಬಂದು ತಾಳಿ ಕಟ್ಟಿದ ಗಂಡೆದೆ ಗುಂಡಿಗೆಯ ವರ!

    ನವದೆಹಲಿ: ಮದುವೆ ಮೆರವಣಿಯ ವೇಳೆ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರೂ ಅದನ್ನು ಲೆಕ್ಕಿಸದೇ ಮಂಟಪಕ್ಕೆ ಆಗಮಿಸಿ ವರ ಮದುವೆಯಾಗಿರುವ ಘಟನೆ ದೆಹಲಿಯ ಮಡಂಗೀರ್ ಪ್ರದೇಶದಲ್ಲಿ ನಡೆದಿದೆ.

    26 ವರ್ಷದ ಬಾದಲ್ ಗುಂಡಿನ ದಾಳಿಗೆ ಒಳಗಾದ ವರನಾಗಿದ್ದು, ಮದುವೆ ಮಂಟಪಕ್ಕೆ ಬಂದು ಮಿತ್ರರೊಂದಿಗೆ ಮೆರವಣಿಗೆಯಲ್ಲಿ ಆಗಮಿಸುವ ವೇಳೆ ಆತನ ಮೇಲೆ ಗುಂಡಿನ ದಾಳಿ ನಡೆದಿತ್ತು.

    ನಡೆದಿದ್ದೇನು: ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಸ್ಥರು ಕಾನ್ಪುರದಿಂದ ಮದುವೆ ಮಂಟಪದತ್ತ ಆಗಮಿಸುತ್ತಿದ್ದರು. ಆದರೆ ಮಂಟಪದ 500 ಮೀಟರ್ ಮೊದಲೇ ಮೆರವಣಿಗೆ ಆಗಮಿಸಿದ ವೇಳೆ ಕೆಲ ದುಷ್ಕರ್ಮಿಗಳು ವರನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದರು. ಇದರಲ್ಲಿ ಒಂದು ಗುಂಡು ಬಾದಲ್ ಬಲ ಭುಜಕ್ಕೆ ತಾಗಿತ್ತು. ಕೂಡಲೇ ಎಚ್ಚೆತ್ತ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಸತತ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಾದಲ್ ಬಳಿಕ ಆಸ್ಪತ್ರೆಯಿಂದ ನೇರ ಮಂಟಪ್ಪಕ್ಕೆ ಆಗಮಿಸಿ ಮದುವೆ ಕಾರ್ಯ ಮುಗಿಸಿದ್ದಾನೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸರು, ಘಟನೆ ವೇಳೆ ಆರೋಪಿಗಳು ಮದುವೆ ಮೆರವಣಿಯೊಂದಿಗೆ ಆಗಮಿಸಿ ವರನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆದರೆ ದಾಳಿ ನಡೆಸಿದ್ದು ಯಾರು ಎನ್ನುವುದನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಸದ್ಯ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv