ಕೋಲಾರ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮದುವೆ ದಿನವೇ ಆಕೆಯನ್ನು ಬಿಟ್ಟು ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಮದುವೆ ದಿನವೇ ಪ್ರಿಯಕರ ಯುವತಿಯನ್ನು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಕಳೆದ 6 ವರ್ಷಗಳಿಂದ ರಾಜಶೇಖರ್ ಹಾಗೂ ದೀಪ್ತಿ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆ ಹೆಬ್ಬಣಿ ಗ್ರಾಮದಲ್ಲಿರುವ ಚನ್ನಕೇಶವ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ ಮದುವೆಗೆ ಜಾತಿ ಅಡ್ಡಿಯಾದ ಹಿನ್ನೆಲೆ ವರ ನಾಪತ್ತೆಯಾಗಿದ್ದಾನೆ. ಮದುವೆ ಮನೆಯಲ್ಲಿರಬೇಕಾದ ವಧು ಇದೀಗ ಲಗ್ನ ಪತ್ರಿಕೆ, ಹೊಸ ಸೀರೆಯೊಂದಿಗೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇದನ್ನೂ ಓದಿ: ಹೋಟೆಲ್, ರೆಸ್ಟೋರೆಂಟ್‍ಗಳು ಸೇವಾ ಶುಲ್ಕ ವಿಧಿಸಬಹುದು: ದೆಹಲಿ ಹೈಕೋರ್ಟ್
ಅಮರಾವತಿ: ಲವ್ ಇಸ್ ಬ್ಲೈಂಡ್ ಎಂಬ ವಾಕ್ಯ ಎಲ್ಲರಿಗೂ ಗೊತ್ತೆ ಇದೆ. ನಾವು ಹಲವು ಉದಾಹರಣೆಗಳನ್ನು ನೋಡಿದ್ದೇವೆ, ಓದಿದ್ದೇವೆ. ಈಗ ಮತ್ತೊಂದು ಉದಾಹರಣೆಯೊಂದು ನಮ್ಮ ಕಣ್ಣ ಮುಂದೆ ಇದ್ದು ಅಮೆರಿಕದ ಯುವಕನನ್ನು ಆಂಧ್ರ ಪ್ರದೇಶದ ಯುವತಿ ಮದುವೆಯಾಗಿ ನಮ್ಮ ಪ್ರೀತಿಗೆ ಹೊಸ ಅರ್ಥ ಕೊಟ್ಟಿದ್ದಾರೆ.
ಈ ಮುದ್ದು ಜೋಡಿಯನ್ನು ನೋಡಲು ಹಲವು ಜನರು ಮದುವೆಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿಯ ಫೋಟೋ ವೈರಲ್ ಆಗುತ್ತಿದೆ. ಈ ಜೋಡಿಯನ್ನು ನೋಡಿದ ಜನರು ನಿಜವಾದ ಪ್ರೀತಿಗೆ ಯಾವುದೇ ಬಣ್ಣ, ಗಡಿ ಬೇಕಾಗಿಲ್ಲ ಎಂದು ಶುಭಕೋರುತ್ತಿದ್ದಾರೆ. ಇದನ್ನೂ ಓದಿ: RTPSನಲ್ಲಿ ಕಳಚಿಬಿದ್ದ ಬಂಕರ್‌ಗಳು – ವಿದ್ಯುತ್ ಉತ್ಪಾದನೆ ಸ್ಥಗಿತ
ನಿರ್ಮಲವಾದ ಪ್ರೀತಿ ಎರಡು ಹೃದಯಗಳನ್ನು ಒಂದು ಮಾಡುತ್ತೆ ಎಂಬುದಕ್ಕೆ ಆಂಧ್ರ ಯುವತಿ, ಅಮೆರಿಕ ಯುವಕ ನಿರ್ದಶನರಾಗಿದ್ದಾರೆ. ಆಂಧ್ರದ ಟಿ.ಹರ್ಷವಿ ಹಾಗೂ ಅಮೆರಿಕದ ದಮಿಯನ್ ಫ್ರ್ಯಾಂಕ್ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ವಧು ಹರ್ಷವಿ, ತಿರುಪತಿಯ ಜಯಚಂದ್ರ ರೆಡ್ಡಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ ಬಿ.ಟೆಕ್ ಪೂರ್ಣಗೊಳಿಸಿರುವ ಹರ್ಷವಿ, ಅಮೆರಿಕದ ಬೋಸ್ಟನ್‍ನಲ್ಲಿರುವ ಫ್ರ್ಯಾಂಕ್ ಪರಿಚಯವಾಗಿದೆ. ನಂತರ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿ ಹಿರಿಯರ ಒಪ್ಪಿಗೆ ಪಡೆದುಕೊಂಡಿದ್ದಾರೆ. ಎಲ್ಲರ ಒಪ್ಪಿಗೆ ನಂತರ ಇಬ್ಬರು ಸಂಪ್ರದಾಯದ ಪ್ರಕಾರ ಸಪ್ತಪದಿಯನ್ನು ತುಳಿಯುವ ಮೂಲಕ ಸಂಬಂಧಕ್ಕೆ ಹೊಸ ರೂಪವನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ನಿನ್ನ ತರ ನಕಲಿ ಸರ್ಟಿಫಿಕೇಟ್ ಕ್ರಿಯೇಟ್ ಮಾಡಿ ದಂಧೆ ನಡೆಸಿಕೊಂಡು ಬಂದಿಲ್ಲ ನಾನು: ಹೆಚ್‍ಡಿಕೆ ಕಿಡಿ
ಅಮೆರಿಕದಲ್ಲಿ ಇಬ್ಬರು ಮದುವೆಯಾಗಿದ್ದಾರೆ. ಆದರೆ ಹರ್ಷವಿ ಕುಟುಂಬದ ಒತ್ತಾಯದ ಮೇರೆಗೆ ತಿರುಪತಿಯಲ್ಲಿ ಮತ್ತೊಮ್ಮೆ ಇವರಿಬ್ಬರ ವಿವಾಹ ಕಾರ್ಯ ನೆರವೇರಿದೆ. ತಿರುಪತಿಯ ಹೋಟೆಲ್ ಒಂದರಲ್ಲಿ ಕಳೆದ ಗುರುವಾರ ರಾತ್ರಿ ಅದ್ಧೂರಿ ಮದುವೆ ನಡೆದಿದೆ.
Live Tv
[brid partner=56869869 player=32851 video=960834 autoplay=true]
ಪಾಟ್ನಾ: ಮಾರುಕಟ್ಟೆಯಲ್ಲಿ ದಿನಸಿ ಸಾಮಾಗ್ರಿ, ಹಣ್ಣು, ತರಕಾರಿಯನ್ನು ಮಾರಾಟ ಮಾಡುವುದು ಸಾಮಾನ್ಯ. ಆದರೆ ಈಗ ನಾವು ಹೇಳುತ್ತಿರುವ ವಿಶೇಷ ಮಾರುಕಟ್ಟೆಯಲ್ಲಿ ಹುಡುಗಿಯರು ತಮ್ಮ ವರನನ್ನು ಖರೀದಿಸಬಹುದು. ಏನು ವರನನ್ನು ಖರೀದಿಸಲು ಮಾರುಕಟ್ಟೆ ಇದ್ಯಾ ಎಂದು ಎಲ್ಲರೂ ಅಚ್ಚರಿ ಪಡಬಹುದು. ಆದರೆ ಇದು ನಿಜ. ಬಿಹಾರದಲ್ಲಿ ಈ ರೀತಿಯ ಮಾರುಕಟ್ಟೆ ಇದೆ.
ಬಿಹಾರದ ಮಧುಬನಿ ಜಿಲ್ಲೆಯ ಒಂದು ಮಾರುಕಟ್ಟೆಯು ವಧುಗಳಿಗೆ ವರನನ್ನು ಮಾರಾಟ ಮಾಡಲು ಮೀಸಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಮರಗಳ ಅಡಿಯಲ್ಲಿ 9 ದಿನಗಳ ಅವಧಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತೆ. ಈ ಸಂಪ್ರದಾಯವು ಸುಮಾರು 700 ವರ್ಷಗಳಿಂದಲೂ ಇದ್ದೂ ಈಗಲೂ ಆಚರಣೆಯಲ್ಲಿದೆ. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ
ಸ್ಥಳೀಯವಾಗಿ ‘ಸೌರತ್ ಸಭಾ’ ಎಂದು ಕರೆಯಲ್ಪಡುವ ಮೈಥಿಲ್ ಬ್ರಾಹ್ಮಣ ಸಮುದಾಯದ ಜನರು ಜಿಲ್ಲೆಯಾದ್ಯಂತ ತಮ್ಮ ಹೆಣ್ಣುಮಕ್ಕಳೊಂದಿಗೆ ವರನನ್ನು ಆಯ್ಕೆ ಮಾಡಲು ಈ ಮಾರುಕಟ್ಟೆಗೆ ಬರುತ್ತಾರೆ.
ಸಾಂಪ್ರದಾಯಿಕ ಕಡುಗೆಂಪು ಬಣ್ಣದ ಧೋತಿ ಮತ್ತು ಕುರ್ತಾ ಅಥವಾ ಜೀನ್ಸ್ ಮತ್ತು ಶರ್ಟ್‍ಗಳನ್ನು ಧರಿಸಿ ಮಾರುಕಟ್ಟೆಯಲ್ಲಿ ಸಾವಿರಾರು ವರರು ತಮ್ಮ ಪೋಷಕರೊಂದಿಗೆ ಹಾಜರಿರುತ್ತಾರೆ. ಪ್ರತಿಯೊಬ್ಬರು ಅವರ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ವರನ ಬೆಲೆ ನಿಗದಿಪಡಿಸಲಾಗುತ್ತದೆ.
ವರನನ್ನು ಆಯ್ಕೆ ಮಾಡುವ ಮೊದಲು, ವಧುವಿನ ಕುಟುಂಬ ವರನ ಅರ್ಹತೆ ಮತ್ತು ಅವರ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ. ಅವರು ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಇತ್ಯಾದಿ ಪುರಾವೆಗಳನ್ನು ಸಹ ಕೇಳುತ್ತಾರೆ. ವಧು, ವರನನ್ನು ಆಯ್ಕೆ ಮಾಡಿದ ನಂತರ, ಮುಂದಿನ ಪ್ರಕ್ರಿಯೆಗಳಿಗಾಗಿ ಕುಟುಂಬಗಳ ನಡುವೆ ಸಂಭಾಷಣೆಯನ್ನು ಪ್ರಾರಂಭಿಸಲಾಗುತ್ತದೆ. ವರನ ಆಯ್ಕೆಯಾದ ತಕ್ಷಣ ಹುಡುಗಿಯ ಮನೆಯವರು ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಾರೆ. ಇದನ್ನೂ ಓದಿ: ನಿರಂತರ ಜಿಟಿ ಜಿಟಿ ಮಳೆ – ಮನೆ ಗೋಡೆ ಕುಸಿದು ಬಿದ್ದು ಯುವಕ ಸಾವು
ಹಿನ್ನೆಲೆ
ಸ್ಥಳೀಯ ನಂಬಿಕೆಗಳ ಪ್ರಕಾರ, ಈ ಆಚರಣೆಯು ಕರ್ನಾಟ್ ರಾಜವಂಶದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವಿಭಿನ್ನ ‘ಗೋತ್ರಗಳ’ ಜನರ ನಡುವೆ ವಿವಾಹಗಳನ್ನು ಸುಲಭಗೊಳಿಸಲು ರಾಜಾ ಹರಿ ಸಿಂಗ್ ಇದನ್ನು ಪ್ರಾರಂಭಿಸಿದರು. ಮದುವೆಗಳನ್ನು ವರದಕ್ಷಿಣೆ ರಹಿತವಾಗಿ ಮಾಡುವುದು ಇನ್ನೊಂದು ಉದ್ದೇಶವಾಗಿತ್ತು. ಆದರೆ, ಈ ಪ್ರದೇಶದಲ್ಲಿ ಮಾತ್ರ ಕಳೆದ 700 ವರ್ಷಗಳಿಂದಲೂ ಈ ಪದ್ದತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.
Live Tv
[brid partner=56869869 player=32851 video=960834 autoplay=true]
-ಸ್ಮಶಾನದ ಪಕ್ಕ ಮನೆ ಇರೋದಕ್ಕೆ ಹೆಣ್ಣು ನೋಡೋಕೆ ಬಾರದ ವರ -ಸುಟ್ಟ ಶವಗಳ ವಾಸನೆಗೆ ಮನೆಗಳನ್ನೆ ತೊರೆಯುತ್ತಿರುವ ಜನ
ಬೆಂಗಳೂರು: ವಧುವಾಗಲಿ, ವರನಾಗಲಿ ಬೆಂಗಳೂರಿಗೆ ಮದುವೆ ಮಾಡಿಕೊಟ್ಟರೆ ಆರಾಮಾಗಿ ಬದುಕುತ್ತಾರೆ ಅಂತ ಪೋಷಕರು ಅಂದುಕೊಳ್ಳುತ್ತಾರೆ. ಆದರೆ ಬೆಂಗಳೂರಿನ ಈ ಏರಿಯಾದಲ್ಲಿ ತಮ್ಮ ಮಕ್ಕಳಿಗೆ ಮದುವೆ ಮಾಡಲು ಪೋಷಕರು ಪರದಾಡುತ್ತಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆ ಬಳಿಯ ನಂಜಾಂಬ ಅಗ್ರಹಾರಕ್ಕೆ ವಧು-ವರರನ್ನ ಕೊಡುತ್ತಲೇ ಇಲ್ಲವಂತೆ. ಅದಕ್ಕೆ ಕಾರಣ ಚಾಮರಾಜಪೇಟೆಯ ಹಿಂದೂ ರುದ್ರಭೂಮಿ. ಹೌದು, ಇಲ್ಲಿ ಮೃತದೇಹಗಳನ್ನು ಕಟ್ಟಿಗೆಯಿಂದ ಸುಡಲಾಗುತ್ತದೆ. ಇದಕ್ಕೆ ಸೂಕ್ತ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿಲ್ಲ. ರುದ್ರಭೂಮಿಯ ಹಿಂದೆಯೇ ನಂಜಾಂಬ ಅಗ್ರಹಾರವಿದೆ. ಅಲ್ಲಿನ ಮನೆಗಳಿಗೆ ಬೂದಿ ಮಿಶ್ರಿತ ಹೊಗೆ ಬರುತ್ತಿದೆ. ಜೊತೆಗೆ ಮಕ್ಕಳಿಗೆ 8-10 ವರ್ಷಗಳಿಂದ ವಧು-ವರರನ್ನು ಪತ್ತೆ ಮಾಡಲಾಗದೇ ಪೋಷಕರು ಪರದಾಡುತ್ತಿದ್ದಾರೆ. ಇದನ್ನೂ ಓದಿ: 747 ವೆಬ್‌ಸೈಟ್, 94 ಯುಟ್ಯೂಬ್ ಚಾನೆಲ್‌ಗಳು ಬಂದ್
ಈ ಏರಿಯಾದಲ್ಲಿ ಮದುವೆ ಆಗುವವರಿಗೂ ಸಮಸ್ಯೆಯಾಗುತ್ತಿದೆ. ಯಾರೂ ಹೆಣ್ಣು ನೋಡುವುದಕ್ಕೆ ಬರುತ್ತಿಲ್ಲ. ಗಂಡಿನ ಮನೆಗೆ ಬಂದವರಿಗೂ ಸಂಬಂಧಗಳು ಕ್ಯಾನ್ಸಲ್ ಆಗುತ್ತಿವೆ. ಮೊದಲು ಮನೆ ಬೇರೆ ಮಾಡಿ ಆಮೇಲೆ ಹೆಣ್ಣು ನೋಡುವುದಕ್ಕೆ ಬರುತ್ತೇವೆ ಅಂತ ಗಂಡಿನ ಕಡೆಯವರು ಹೇಳುತ್ತಿದ್ದಾರೆ. ಹೀಗೇ ಆದರೆ ನಮ್ಮ ಹೆಣ್ಣು ಮಕ್ಕಳ ಗೋಳು ಕೇಳುವವರು ಯಾರು ಅಂತ ಸ್ಥಳೀಯರು ಬಿಬಿಎಂಪಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನ 8 ವಿದ್ಯಾರ್ಥಿಗಳ ವಿರುದ್ಧ ಫೋಕ್ಸೋ ಕೇಸ್
ಸುಟ್ಟ ಶವಗಳ ದಟ್ಟವಾಗ ಹೊಗೆ, ಹೊಗೆಯಿಂದ ಕಪ್ಪಾದ ಗೋಡೆ. ಎಲ್ಲಿ ನೋಡಿದರೂ ಖಾಲಿ ಇರುವ, ಟು ಲೇಟ್ ಬೋರ್ಡ್ ಮನೆಗಳು. ಹೌದು, ಚಾಮರಾಜಪೇಟೆಯ ವಾರ್ಡ್ ನಂಬರ್ 140, ನಜಾಂಬಾ ಅಗ್ರಹಾರದ ಹಲವು ಮನೆಗಳು ಖಾಲಿ, ಖಾಲಿಯಾಗಿವೆ. ಸ್ವಂತ ಮನೆ ಹೊಂದಿದವರು ಕೂಡ, ಬೇರೆ ಏರಿಯಾಗಳಿಗೆ ಹೋಗುತ್ತಿದ್ದಾರೆ. ಕಿಟಕಿಗಳಿಂದ ನೇರವಾಗಿ ಮನೆಗಳಿಗೆ ಈ ಕಪ್ಪಾದ ಹೊಗೆ ಬರುತ್ತಿದೆ. ವಾಸವಿರುವವರು ಬಾಡಿಗೆ ಮನೆಗಳನ್ನು ತೊರೆಯುತ್ತಿರುವುದರಿಂದ ಮನೆಗಳ ಮುಂದೆ ಟು ಲೆಟ್ ಬೋರ್ಡ್‍ಗಳು ನೇತಾಡುತ್ತಿವೆ. ಸುಮಾರು ತಿಂಗಳುಗಳಿಂದ ಮನೆ ಖಾಲಿ ಇದ್ದರೂ ಬಾಡಿಗೆಗೆ ಯಾರೂ ಬರುತ್ತಿಲ್ಲ. ಇನ್ನು ಮನೆಗಳಲ್ಲಿ ಕೂರಲಾಗದೇ, ಊಟ ಮಾಡಲಾಗದೇ, ಇಲ್ಲಿನ ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಒಟ್ಟಾರೆ ಹಲವು ವರ್ಷಗಳಿಂದ ಹೊಗೆ, ಬೂದಿ ಸಮಸ್ಯೆಯಿಂದ ಜನ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ಜೊತೆಗೆ ತಮ್ಮ ಮಕ್ಕಳಿಗೆ ಗಂಡು, ಹೆಣ್ಣು ಹುಡುಕಲಾಗದೇ ಪರದಾಡುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬಳ್ಳಾರಿ: ನವದಂಪತಿಗಳು ತಮ್ಮ ಮುಂದಿನ ಭವಿಷ್ಯದ ಬಗ್ಗೆ ತಮ್ಮದೇ ಆದ ಕನಸ್ಸು ಕಟ್ಟಿಕೊಂಡಿದ್ದರು. ಆದರೆ ಇವರ ಕನಸು ಏಕೋ ಜವರಾಯನಿಗೆ ಇಷ್ಟವಾಗಲಿಲ್ಲ ಅನಿಸುತ್ತದೆ. ಮದುವೆ ಆರತಕ್ಷತೆ ವೇಳೆ ದಿಢೀರನೇ ಎದೆನೋವು ಕಾಣಿಸಿಕೊಂಡು ವರ ಸಾವನ್ನಪ್ಪಿದ್ದಾನೆ. ಮದುವೆ ದಿನವೇ ವರ ಮರಣ ಹೊಂದಿದ್ದು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಲಿನ ಪಾಪಿನಾಯಕನ ಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ದುರ್ದೈವಿಯನ್ನು ಹೊನ್ನೂರ ಸ್ವಾಮಿ ಎಂದು ಗುರುತಿಸಲಾಗಿದೆ. ಬುಧವಾರ ಗ್ರಾಮದ ಸುಡುಗಾಡಪ್ಪನ ದೇವಸ್ಥಾನದಲ್ಲಿ ಹೊನ್ನೂರಸ್ವಾಮಿ ವಿವಾಹವಾಗಿದ್ದರು. ನಂತರ ನಡೆದ ಆರತಕ್ಷತೆ ವೇಳೆ ಹೊನ್ನೂರ ಸ್ವಾಮಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಈ ವೇಳೆ ಎದೆ ನೋವು ತಾಳಲಾರದೇ ವೇದಿಕೆ ತುಂಬೆಲ್ಲಾ ಹೊನ್ನೂರಸ್ವಾಮಿ ಒದ್ದಾಡುತ್ತಿರುತ್ತಾರೆ. ಇದನ್ನು ಕಂಡು ಸಂಬಂಧಿಕರು ಹಾಗೂ ಸ್ನೇಹಿತರು ಹೀಗ್ಯಾಕೆ ಆಡುತ್ತಿದ್ದೀಯಾ ಸುಮ್ನೆ ಒಂದು ಕಡೆ ಇರಲು ಆಗುವುದಿಲ್ವಾ ಎಂದು ಬೈದಿದ್ದಾರೆ. ಆಗ ಹೊನ್ನೂರಸ್ವಾಮಿ ತನ್ನ ತಮ್ಮನ ಬಳಿ, ನನಗ್ಯಾಕೋ ಪುನೀತ್ ರಾಜಕುಮಾರ್ ಅವರಿಗೆ ಆದ ಹಾಗೇ ಆಗುತ್ತಿದೆ ಎಂದಿದ್ದಾನೆ. ಇದನ್ನೂ ಓದಿ: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ: ಜಿಟಿಡಿ
ಕೂಡಲೇ ಅಲ್ಲಿದ್ದವರು ಕುಡಿಯುವುದಕ್ಕೆಂದು ಸೋಡಾ ತಂದು ಕೊಟ್ಟಿದ್ದಾರೆ. ಕುಡಿದ ಸೋಡಾ ಕೂಡ ವಾಂತಿಯಾಗಿದೆ. ಅಲ್ಲಿದ್ದವರು ಸಮೀಪದಲ್ಲಿಯೇ ಇರುವ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅದಾಗಲೇ ಹೊನ್ನೂರ ಸ್ವಾಮಿಗೆ ಲೋ ಬಿಪಿಯಾಗಿದ್ದು, ಎಚ್ಚರ ತಪ್ಪಿದ್ದಾರೆ. ಅವರನ್ನು ಪರೀಕ್ಷೆ ಮಾಡಿದ ವೈದ್ಯರು ಹೊಸಪೇಟೆಯಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದಾರೆ. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಹೊನ್ನೂರ ಸ್ವಾಮಿ ಅವರ ಪ್ರಾಣಪಕ್ಷಿ ಹಾರಿಹೋಗಿದೆ. ಇದನ್ನೂ ಓದಿ: ಇಡಿ ವಿರುದ್ಧ ಆಕ್ರೋಶ – ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಕೈ ಕಾರ್ಯಕರ್ತರು
Live Tv
[brid partner=56869869 player=32851 video=960834 autoplay=true]
ಜಕಾರ್ತ: ಸಾಮಾನ್ಯವಾಗಿ ಮದುವೆ ಸಮಯದಲ್ಲಿ ಹಾಗೂ ಮದುವೆಯ ನಂತರ ವಧು, ವರನಿಗೆ ಹಿರಿಯರು ಹಲವಾರು ಶಾಸ್ತ್ರಗಳನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಒಂದೊಂದು ಧರ್ಮದಲ್ಲೂ ಹಲವಾರು ವಿಭಿನ್ನ ಸಂಪ್ರದಾಯ, ಆಚಾರ-ವಿಚಾರಗಳಿರುತ್ತದೆ. ಆದರೆ ಇಲ್ಲೊಂದು ದೇಶದಲ್ಲಿ ಹೊಸದಾಗಿ ಮದುವೆಯಾದ ನವ ದಂಪತಿಗಳು 3 ದಿನ ಕಳೆಯುವವರೆಗೂ ಶೌಚಾಲಯಕ್ಕೆ ಹೋಗಬಾರದೆಂದು ತಡೆಯಲಾಗುತ್ತದೆ. ಅಷ್ಟಕ್ಕೂ ಇದರ ಹಿಂದಿನ ಅಸಲಿ ಸತ್ಯ ಕೇಳಿದರೆ ನೀವು ಕೂಡ ಅಚ್ಚರಿ ಪಡುತ್ತೀರಾ.
ಹೌದು, ಇಂಡೋನೇಷ್ಯಾದ ಡಿಡಾಂಗ್ ಎಂಬ ಸಮುದಾಯದಲ್ಲಿ ಮದುವೆಯಾದ 3 ದಿನದವರೆಗೂ ವಧು, ವರ ಶೌಚಾಲಯಕ್ಕೆ ತೆರಳುವಂತಿಲ್ಲ. ವಿವಾಹ ನಂತರ ಒಂದು ವೇಳೆ ವಧು-ವರರು ಶೌಚಾಲಯಕ್ಕೆ ಹೋದರೆ, ಅವರ ಶುದ್ಧತೆಗೆ ಭಂಗವುಂಟಾಗುತ್ತದೆ ಮತ್ತು ಅವರು ಅಶುದ್ಧರಾಗುತ್ತಾರೆ ಎಂಬ ಭಾವನೆ ಇದೆ. ಹೀಗಾಗಿ ಮದುವೆಯ ಸಮಯದಲ್ಲಿ ಅಥವಾ ನಂತರ ವಧು-ವರರು ಶೌಚಾಲಯಕ್ಕೆ ಹೋಗುವಂತಿಲ್ಲ. ಇದನ್ನೂ ಓದಿ: ಚುನಾವಣೆಯಲ್ಲಿ ಸೋತ – ಎಲೆಕ್ಷನ್‌ನಲ್ಲಿ ಹಂಚಿದ್ದ ಹಣ ಹಿಂದಿರುಗಿಸುವಂತೆ ಜನರನ್ನು ಪೀಡಿಸುತ್ತಿದ್ದವನ ವಿರುದ್ಧ FIR
ಮತ್ತೊಂದೆಡೆ ಮಲವಿಸರ್ಜನೆ ಮಾಡುವ ಸ್ಥಳದಲ್ಲಿ ಕೊಳಕು ಇರುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವಿರುತ್ತದೆ. ಈ ವೇಳೆ ಶೌಚಾಲಯಕ್ಕೆ ಹೋದರೆ ವಧುವರರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟಾಗುತ್ತದೆ ಎಂದು 3 ದಿನಗಳವರೆಗೆ ಶೌಚಾಲಯಕ್ಕೆ ಹೋಗಲು ಅವಕಾಶ ನೀಡುವುದಿಲ್ಲ. ಅಲ್ಲದೇ ಮದುವೆ ಸಮಯದಲ್ಲಿ ವಧು-ವರರಿಗೆ ಊಟ-ನೀರನ್ನು ಕೂಡ ನೀಡುವುದು ಬಹಳ ಕಡಿಮೆ, ಕಾರಣ ಇದರಿಂದ ಅವರು ಶೌಚಾಲಯಕ್ಕೆ ಹೋಗುವ ಅವಶ್ಯಕತೆ ಬರದಂತೆ ನೋಡಿಕೊಳ್ಳಲಾಗುತ್ತದೆ.
ಲಕ್ನೋ: ಮೆರವಣಿಗೆ ವೇಳೆ ಜನರೇಟರ್ ಆಫ್ ಆಗಿದಕ್ಕೆ ಮದುವೆ ಮನೆ ರಣರಂಗವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಧು-ವರ ಕಡೆಯವರು ಪರಸ್ಪರ ಕಿತ್ತಾಟ ನಡೆಸಿದ್ದು, ಈ ವೇಳೆ ವರ ಮತ್ತು ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ವಧು ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವರ ಅಳಲು ತೊಡಿಕೊಂಡಿದ್ದಾನೆ.
पीलीभीत के मुड़िया बिलहरा में शादी के दौरान अचानक जनरेटर बंद होने जैसी बात पर घराती और बारातियों के बीच जमकर मारपीट हो गई. इस दौरान दूल्हा और उसके दोस्त गंभीर रूप से घायल हो गए. जिसके बाद लड़की ने शादी से इनकार करते हुए बारात को उल्टे पैर बापस लौटा दिया.#UttarPradesh#Pilibhitpic.twitter.com/yOGiDGanes
ಶಹಜಾಪುರ ಠಾಣಾ ಪ್ರದೇಶದಿಂದ ಪಿಲಿಭಿತ್‍ನ ಠಾಣಾ ಬಿಲ್ಸಂದಾ ಪ್ರದೇಶದ ಮುದಿಯ ಬಿಲ್ಹಾರ ಗ್ರಾಮಕ್ಕೆ ಮದುವೆ ಮೆರವಣೆ ಉತ್ತಮವಾಗಿ ಸಾಗಿತು. ನಂತರ ಎಲ್ಲರೂ ಕೂಡ ಊಟ ಮಾಡಿದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲಿ ಜನರೇಟರ್ ಇದ್ದಕ್ಕಿದ್ದಂತೆ ಆಫ್ ಆಗಿದೆ. ಆಗ ಎರಡು ಮನೆಯವರ ನಡುವೆ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ವಧುವಿನ ಮನೆಯವರು ವರ ಹಾಗೂ ಆತನ ಸ್ನೇಹಿತರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಎರಡು ಕಡೆಯವರ ಜಗಳ ಬಿಡಿಸಿ ಸಮಾಧಾನ ಪಡಿಸಿದರು. ಮತ್ತೊಂದೆಡೆ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವರ ಪೊಲೀಸರಿಗೆ ದೂರು ನೀಡಿದ್ದಾನೆ. ಇದನ್ನೂ ಓದಿ: ಆಫರ್ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ
ನಂತರ ಪೊಲೀಸ್ ಠಾಣೆಗೆ ಕುಟುಂಬಸ್ಥರೊಂದಿಗೆ ಬಂದ ವಧು, ಮದುವೆ ಮೆರವಣಿಗೆ ನಂತರ ವರನ ಕಡೆಯವರು ತನ್ನ ಸಹೋದರನನ್ನು ಕೊಲ್ಲುವುದಾಗಿ ಮಾತನಾಡುತ್ತಿದ್ದರು. ಹೀಗಾಗಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾಳೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲಿಯೇ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಕೊನೆಗೆ ವರ ಮತ್ತು ಆತನ ಕಡೆಯವರು ತಮ್ಮ ಗ್ರಾಮಕ್ಕೆ ಹಿಂದಿರುಗಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಜೊತೆ ಡಿಕೆಶಿ ತಾಯಿ ಮಾತಾಡಿದ್ದ ವೀಡಿಯೋ ಶೇರ್ ಮಾಡ್ಕೊಂಡು ಸಿದ್ದುಗೆ ಬಿಜೆಪಿ ಟಾಂಗ್
Live Tv
[brid partner=56869869 player=32851 video=960834 autoplay=true]
ವಿಜಯಪುರ: ವಿಜಯಪುರದಲ್ಲಿ ಅಪರೂಪದ ಮದುವೆ ನಡೆದಿದೆ. ವಿಜಯಪುರುದ ಯುವಕ, ಕೆನಡಾ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇದೀಗ ಈ ಮುದ್ದಾದ ಜೋಡಿಯ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹೌದು ಉತ್ತರ ಅಮೇರಿಕಾದ ಕೆನಡಾ ದೇಶದ ಸಾರಾ, ವಿಜಯಪುರ ನಿವಾಸಿ ರವಿಕುಮಾರ್ ಚಿಮ್ಮಲಗಿ ಕೈ ಹಿಡಿದಿದ್ದಾರೆ. ನಗರದ ಟೌನ್ ಪ್ಯಾಲೇಸ್ ಹಾಲ್‍ನಲ್ಲಿ ಈ ಅದ್ದೂರಿ ವಿವಾಹ ಜರುಗಿದೆ. ಹಲವಾರು ವರ್ಷಗಳಿಂದ ಕೆನಡಾದ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರವಿಕುಮಾರ್ ಅದೇ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾರಾ ಪರಸ್ಪರ ಪ್ರೀತಿಸುತ್ತಿದ್ದರು.
ನಂತರ ಇವರಿಬ್ಬರ ಪ್ರೀತಿಗೆ ಎರಡು ಕುಟುಂಬಗಳು ಪರಸ್ಪರ ಒಪ್ಪಿಗೆ ಸೂಚಿಸಿದ್ದಾರೆ. ಇದೀಗ ವಿಜಯಪುರದ ವಿಶ್ವನಾಥ್ ಚಿಮ್ಮಲಗಿ, ಶೋಭಾ ದಂಪತಿ ಪುತ್ರ ರವಿಕುಮಾರ್ ಅವರು ಕೆನಡಾದ ರೋಜ್‍ಮೇರಿ ಪ್ಲಾಟ್, ಹ್ಯಾರಿ ಫೋಲಾರ್ಡ್ ದಂಪತಿ ಪುತ್ರಿ ಸಾರಾ ಅವರನ್ನು ಗುರು-ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಇದನ್ನೂ ಓದಿ: ಚಿಕಾಗೋ ಪರೇಡ್ ವೇಳೆ ಶೂಟೌಟ್, ದಿಕ್ಕಾಪಾಲಾಗಿ ಓಡಿದ ಜನ – 6 ಬಲಿ, 24 ಮಂದಿಗೆ ಗಾಯ
ವಿಶೇಷ ಅಂದರೆ ಹಿಂದೂ ಸಂಪ್ರದಾಯದಂತೆ ಮದುವೆ ಮಾಡಲಾಗಿದೆ. ಹಿಂದೂ ಸಂಪ್ರದಾಯಕ್ಕೆ ಸಾರಾ ಕೂಡ ಮನಸ್ಸೋತ್ತಿದ್ದು, ಮದುವೆ ದಿನ ಸೀರೆಯುಟ್ಟು ಭಾರತೀಯ ನಾರಿಯರಂತೆ ಕಂಗಳೊಸಿದ್ದಾರೆ. ಈ ಅದ್ದೂರಿ ವಿವಾಹಕ್ಕೆ ಸಂಬಂಧಿಕರು, ಸ್ನೇಹಿತರು ಬಂದು ಹರಿಸಿ ಆಶೀರ್ವಾದಿಸಿದರೆ, ಮತ್ತೆ ಕೆಲವರು ಅಪರೂಪದ ಈ ಜೋಡಿ ಜೊತೆ ಸೆಲ್ಫಿ ಪಡೆದು ಸಂತಸ ಪಟ್ಟಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ – ನೀರಲ್ಲಿ ಕೊಚ್ಚಿ ಹೋದ 1ನೇ ತರಗತಿ ಬಾಲಕಿ
Live Tv
[brid partner=56869869 player=32851 video=960834 autoplay=true]
ಸಾಮಾನ್ಯವಾಗಿ ವಿವಾಹ ಸಮಾರಂಭಗಳಲ್ಲಿ ವಧು, ವರ ಒಟ್ಟಿಗೆ ನೃತ್ಯ ಮಾಡುವುದು, ಹಾಡು ಹಾಡಿರುವ ಹಲವಾರು ವೀಡಿಯೋಗಳನ್ನು ನಾವು ನೋಡಿರುತ್ತೇವೆ. ಆದರೆ ವಿವಾಹ ಕಾರ್ಯಕ್ರಮವೊಂದರಲ್ಲಿ ವರ, ವಧುವಿನ ಕಾಲಿಗೆ ಬಿದ್ದಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
ವರನ ಕಾಲಿಗೆ ವಧು ಬಿದ್ದು, ಆಶೀರ್ವಾದ ಪಡೆದುಕೊಳ್ಳುವ ವಾಡಿಕೆಯೂ ಇದೆ. ಆದರೆ ಅರ್ನವ್ ರಾಯ್ ಎಂಬ ವರ, ದಿತಿ ಗೊರಾಡಿಯಾ ಅವರ ಕಾಲಿಗೆ ಬೀಳುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ದಿತಿ ಗೊರಾಡಿಯಾ ಮತ್ತು ಅರ್ನವ್ ರಾಯ್ ವಿವಾಹವಾದರು. ಮದುವೆ ವೇಳೆ ವರ, ವಧುವಿನ ಕಾಲಿಗೆ ಬೀಳುತ್ತಾರೆ. ಈ ವೇಳೆ ವಧು ಬಹಳ ಆಶ್ಚರ್ಯದಿಂದ ವರನತ್ತ ನೋಡುತ್ತಿರುವಾಗ ಅರ್ನವ್ ಪ್ರೀತಿಯಿಂದ ದಿತಿ ಅವರನ್ನು ಬಿಗಿದಪ್ಪಿಕೊಂಡಾಗ ದಿತಿ ನಾಚಿ ನೀರಾಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮಲಯಾಳಂ ನಟಿ ಅಂಬಿಕಾ ರಾವ್ ನಿಧನ
ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ದಿತಿ ಗೊರಾಡಿಯಾ ಹಂಚಿಕೊಂಡಿದ್ದು, ಮೊದಲಿಗೆ ನಮ್ಮ ಪಂಡಿತರಿಗೆ ಇದು ಇಷ್ಟವಾಗಲಿಲ್ಲ. ಆದರೆ ಮದುವೆ ಸಮಾರಂಭದ ಅಂತ್ಯದ ವೇಳೆಗೆ ನೀನು ಬಹಳ ಅದೃಷ್ಟವಂತ ಹುಡುಗಿ ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು 6 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ: ಕೂಸು ಹುಟ್ಟುವ ಮುಂಚೆ ವಿದೇಶದಲ್ಲಿ ಮಗುವಿಗೆ ಬಟ್ಟೆ ಶಾಪಿಂಗ್ ಮಾಡಿದ ರಣ್‌ಬೀರ್ ಕಪೂರ್
ಭೋಪಾಲ್: ಮದುವೆ ವೇಳೆ ವರನನ್ನು ಬುಲ್ಡೋಜರ್ ಮೇಲೆ ಹೊತ್ತೊಯ್ದ ಚಾಲಕನಿಗೆ ಮಧ್ಯಪ್ರದೇಶ ಪೊಲೀಸರು 5,000 ರೂಪಾಯಿ ದಂಡ ವಿಧಿಸಿದ್ದಾರೆ.
ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಚಾಲಕನನ್ನು ರವಿ ಭಾಸ್ಕರ್ ಎಂದು ಗುರುತಿಸಲಾಗಿದ್ದು, ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬುಲ್ಡೋಜರ್‌ಗಳನ್ನು ವಾಣಿಜ್ಯಿಕವಾಗಿ ಬಳಸಲಾಗುತ್ತದೆಯೇ ಹೊರತು ಸಾರ್ವಜನಿಕ ಸಾರಿಗೆಗಾಗಿ ಅಲ್ಲ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ದ್ರೌಪದಿ ಮುರ್ಮು
ವರ ಅಂಕುಶ್ ಜೈಸ್ವಾಲ್ ಟಾಟಾ ಕನ್ಸಲ್ಟೆನ್ಸಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ವೇಳೆ ಕೆಲವು ಕುಟುಂಬಸ್ಥರು ಕೂಡ ಬುಲ್ಡೋಜರ್ ಮುಂದಿದ್ದ ಬ್ಲೇಡ್‍ಗಳ ಮೇಲೆ ಕುಳಿತು ಮದುವೆಗೆ ಆಗಮಿಸಿದ್ದರು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.