Tag: groom

  • ಹಳೆಯ ಪೀಠೋಪಕರಣ ನೀಡಿದ್ದಕ್ಕೆ ಮದುವೆಯನ್ನು ರದ್ದುಪಡಿಸಿದ ವರ

    ಹಳೆಯ ಪೀಠೋಪಕರಣ ನೀಡಿದ್ದಕ್ಕೆ ಮದುವೆಯನ್ನು ರದ್ದುಪಡಿಸಿದ ವರ

    ಹೈದರಾಬಾದ್: ವಧುವಿನ ಮನೆಯವರು ವರದಕ್ಷಿಣೆಯಾಗಿ ಹಳೆಯ ಪೀಠೋಪಕರಣಗಳನ್ನು ನೀಡಿದ್ದಾರೆಂದು ವರನೊಬ್ಬ (Groom) ತನ್ನ ಮದುವೆಯನ್ನು (Marriage) ರದ್ದುಗೊಳಿಸಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ವರ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮದುವೆಗೆ ವಧುವಿನ ಕಡೆಯವರ ಬಳಿ ಪೀಠೋಪಕರಣ ಸೇರಿದಂತೆ ಅನೇಕ ವರದಕ್ಷಿಣೆಯನ್ನು ಕೇಳಿದ್ದ. ಆದರೆ ವಧುವಿನ ಕಡೆಯವರು ಹಳೆಯ ಪೀಠೋಪಕರಣಗಳನ್ನು ನೀಡಿದ್ದಾರೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ.

    ಅಷ್ಟೇ ಅಲ್ಲದೇ ಮದುವೇ ಔತಣಕ್ಕೆ ಅತಿಥಿಗಳು, ಸ್ನೇಹಿತರೆಲ್ಲರೂ ಬಂದರೂ ಸಹ ವರನೇ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ವಧುವಿನ ತಂದೆ ವರನ ಮನೆಗೆ ಕೇಳಲು ಹೋದಾಗ ವರನ ತಂದೆ (Father) ಅನುಚಿತವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆಯನ್ನು ರದ್ದು ಪಡಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಬಸ್ ಸ್ಟ್ಯಾಂಡ್‌ನಲ್ಲಿ ನಿಲ್ಲಿಸಿದ್ದ ಬಸ್ಸನ್ನೇ ಎಗರಿಸಿದ ಕಳ್ಳರು

    ಈ ಹಿನ್ನೆಲೆಯಲ್ಲಿ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಡಬದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಗೆ ಚೆಂಡೆ ಬಡಿಯುತ್ತ ಬಂದ ವಧು – ತಂದೆ, ಭಾವಿ ಪತಿಯಿಂದ ಸಾಥ್‌

    ಮದುವೆಗೆ ಚೆಂಡೆ ಬಡಿಯುತ್ತ ಬಂದ ವಧು – ತಂದೆ, ಭಾವಿ ಪತಿಯಿಂದ ಸಾಥ್‌

    ತಿರುವನಂತಪುರಂ: ವಧುವೊಬ್ಬಳು (Bride) ಸಕತ್‌ ಉತ್ಸಾಹದಿಂದ ಚೆಂಡೆ ಬಡಿಯುತ್ತಾ ಕಲ್ಯಾಣ ಮಂಟಪಕ್ಕೆ ಆಗಮಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ.

    ಕೇರಳದ (Kerala) ಗುರುವಾಯೂರು ದೇವಸ್ಥಾನದಲ್ಲಿ ನಡೆದ ಮದುವೆಯ (Marriage) ಸಂಭ್ರಮಕ್ಕೆ ಹತ್ತಾರು ಜನ ಸಾಕ್ಷಿಯಾಗಿದ್ದಾರೆ. ವಧುವಿನ ಅಪ್ಪ – ಅಮ್ಮ ಕುಟುಂಬಸ್ಥರು ಮಗಳ ಮದುವೆ ಎನ್ನುವ ಸಂತಸದಲ್ಲಿದ್ದಾರೆ. ಮದುವೆ ಮಂಟಪದಲ್ಲಿ ವರನ ಪಕ್ಕದಲ್ಲಿ ಕುಳಿತು ಶಾಸ್ತ್ರೋಕ್ತಗಳಲ್ಲಿ ಭಾಗಿಯಾಗಬೇಕಾದ ವಧು ಶಿಲ್ಪಾ, ಮಂಟಪಕ್ಕೆ ಬರುವ ವೇಳೆ ಚೆಂಡೆ ತಂಡದೊಂದಿಗೆ ಚೆಂಡೆಯನ್ನು ಬಡಿಯುತ್ತಾ, ಖುಷಿ ಖುಷಿಯಲ್ಲಿ ಚೆಂಡೆ ತಂಡದ ಸದಸ್ಯರೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ.

     ಈ ವೇಳೆ ಇದರೊಂದಿಗೆ ವರ (Groom) ಹಾಗೂ ಚೆಂಡೆ ಮಾಸ್ಟರ್ ಆದ ವಧುವಿನ ತಂದೆಯೂ (Father) ಸಾಥ್‌ ನೀಡಿದ್ದಾರೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ವೀಡಿಯೋದಲ್ಲಿ ಏನಿದೆ?: ವಧು ಚೆಂಡೆಯನ್ನು ಉತ್ಸಾಹದಿಂದ ಬಾರಿಸುತ್ತಿರುವುದನ್ನು ಕಾಣಬಹುದು. ಚೆಂಡೆ ವಾದಕರ ಗುಂಪು ಸಂತೋಷದಿಂದ ವಧುವಿಗೆ ಸಾಥ್‌ ನೀಡಿದ್ದಾರೆ. ಕೊನೆಯಲ್ಲಿ ವಧುವಿನ ತಂದೆಯೂ ಚೆಂಡೆ ವಾದಕರೊಂದಿಗೆ ಸೇರಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ವರ ಕೂಡ ಭಾಗವಹಿಸುತ್ತಾನೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಮಾಜಿ ಕೇಂದ್ರ ಸಚಿವ

    ವಧು ಶಿಲ್ಪಾ ಅವರು ಚೆಂಡೆ ವಾದನದ ಅನುಭವಿ ಕಲಾವಿದೆ. ಹಲವಾರು ಚೆಂಡೆ ವಾದನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಖ್ಯಾತಿಯನ್ನು ಗಳಿಸಿದವರು ಎಂದು ಮೂಲಗಳು ತಿಳಿಸಿದೆ. ಈ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

    Live Tv
    [brid partner=56869869 player=32851 video=960834 autoplay=true]

  • ಸ್ನೇಹಿತರಿಗೆ ಚಿಕನ್ ನೀಡದ್ದಕ್ಕೆ ವರ ಮದುವೆಯನ್ನೇ ರದ್ದುಗೊಳಿಸಿದ

    ಸ್ನೇಹಿತರಿಗೆ ಚಿಕನ್ ನೀಡದ್ದಕ್ಕೆ ವರ ಮದುವೆಯನ್ನೇ ರದ್ದುಗೊಳಿಸಿದ

    ಹೈದರಾಬಾದ್: ವಧುವಿನ (Bride) ಮನೆಯವರು ಸ್ನೇಹಿತರಿಗೆ ಊಟಕ್ಕೆ ಚಿಕನ್ (Chicken) ನೀಡದ್ದಕ್ಕೆ ವರನೊಬ್ಬ (Groom) ಮದುವೆಯನ್ನೇ (Marriage) ರದ್ದುಗೊಳಿಸಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಹೈದರಾಬಾದ್‍ನ ಜೀಡಿಮೆಟ್ಲಾ ಉಪ ಪ್ರದೇಶವಾದ ಶಹಪುರ್‌ ನಗರದಲ್ಲಿ ಈ ಘಟನೆ ನಡೆದಿದೆ. ತೆಲಂಗಾಣಕ್ಕೆ ಸೇರಿದ ವರನಿಗೆ ಬಿಹಾರ ಮೂಲದ ವಧುವಿನ ಜೊತೆ ಮದುವೆ ನಿಶ್ಚಯವಾಗಿತ್ತು. ವರನ ಕಡೆಯವರು ಮದುವೆಯ ಅಡುಗೆ ಜವಾಬ್ದಾರಿಯನ್ನು ವಧುವಿನ ಕಡೆಯವರಿಗೆ ವಹಿಸಿದ್ದರು. ಆದರೆ ವಧುವಿನ ಮನೆಯವರು ಮನೆ ಕಟ್ಟುನಿಟ್ಟಾದ ಸಸ್ಯಹಾರಿಗಳಾಗಿದ್ದರು.

    ವಿವಾಹಕ್ಕೂ ಮೊದಲು ರಿಸೆಪ್ಶನ್ ಪಾರ್ಟಿ ಏರ್ಪಡಿಸಿದ್ದರು. ಈ ವೇಳೆ ವಧುವಿನ ಕಡೆಯವರು ಸಸ್ಯಹಾರಿಗಳಾಗಿದ್ದರಿಂದ ಅವರು ಊಟಕ್ಕೆ ವಿಶೇಷವಾಗಿ ಸಸ್ಯಹಾರಿಯ ತಿಂಡಿಗಳನ್ನೆ ಮಾಡಿದ್ದರು. ಯಾವುದೇ ಬಗೆಯ ನಾನ್‍ವೆಜ್ ತಿಂಡಿಗಳನ್ನು ಮಾಡಿರಲಿಲ್ಲ.

    ರಿಸೆಪ್ಶನ್ ಮುಗಿಯುತ್ತಿದ್ದಂತೆ ವರನ ಸ್ನೇಹಿತರು ಊಟಕ್ಕೆಂದು ಬಂದರು. ಈ ವೇಳೆ ನಾನ್ ವೆಜ್ ವ್ಯವಸ್ಥೆ ಮಾಡದಿರುವುದನ್ನು ಗಮನಿಸಿ ಆಯೋಜಕರೊಂದಿಗೆ ಜಗಳ ಮಾಡಿದ್ದಾರೆ. ಈ ವಿಷಯ ವಧುವಿನ ಕಡೆಯವರಿಗೂ ತಲುಪಿದೆ. ಈ ವೇಳೆ ವಧುವಿನ ಕಡೆಯವರಿಗೂ ವರನ ಸ್ನೇಹಿತರಿಗೂ ಜಗಳವಾಗಿದೆ. ಇದರಿಂದಾಗಿ ವರನ ಸ್ನೇಹಿತರೂ ಕೋಪಗೊಂಡು ಊಟವನ್ನು ಮಾಡದೇ ಅಲ್ಲಿಂದ ಹಾಗೇ ಹೊರಟಿದ್ದಾರೆ. ಇದನ್ನೂ ಓದಿ: ಗಡಿಪಾರು ಆದೇಶದ ನೋಟಿಸ್ ನೋಡಿದ ಆರೋಪಿ- ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಈ ವಿಷಯ ತಿಳಿದ ವರ ಹಾಗೂ ಅವನ ಕುಟುಂಬದವರು ವಧುವಿನ ಕುಟುಂಬದವರ ಮೇಲೆ ಕೋಪಗೊಂಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಯನ್ನು ರದ್ದುಗೊಳಿಸಿದ್ದಾರೆ. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸುವವರೆಗೂ ಸಮಸ್ಯೆ ಬಗೆಹರಿಯಲಿಲ್ಲ. ಇದನ್ನೂ ಓದಿ: ಡಿಸೆಂಬರ್ 1 ರಿಂದ ಮಾರುಕಟ್ಟೆಗೆ ಟಿಜಿಟಲ್ ರುಪಿ – ಬೆಂಗ್ಳೂರಿನಲ್ಲೇ ಮೊದಲ ಪ್ರಯೋಗ

    Live Tv
    [brid partner=56869869 player=32851 video=960834 autoplay=true]

  • ಮದುವೆ ದಿನವೂ ಲ್ಯಾಪ್‍ಟಾಪ್ ಹಿಡಿದುಕೊಂಡು ಕುಳಿತ ವರ!

    ಮದುವೆ ದಿನವೂ ಲ್ಯಾಪ್‍ಟಾಪ್ ಹಿಡಿದುಕೊಂಡು ಕುಳಿತ ವರ!

    ಕೋಲ್ಕತ್ತಾ: ಕೊರೊನಾ (Corona) ಲಾಕ್‍ಡೌನ್ ನಂತರ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ವರ್ಕ್ ಫ್ರಮ್ ಹೋಮ್ (Work From Home) ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವರ (Groom) ತನ್ನ ಮದುವೆಯ ದಿನವೂ ಮಂಟಪದಲ್ಲಿ ಲ್ಯಾಪ್‍ಟಾಪ್ ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾನೆ.

    ಕೋಲ್ಕತ್ತಾದ (Kolkata) ವರನೊಬ್ಬ ಪುರೋಹಿತರೊಂದಿಗೆ ಕುಳಿತು ತನ್ನ ಮದುವೆ ಕಾರ್ಯದ ಜೊತೆಗೆ ಲ್ಯಾಪ್‍ಟಾಪ್‍ನಲ್ಲಿ (Laptop) ಕೆಲಸವನ್ನು ಮಾಡುತ್ತಿದ್ದಾನೆ. ಇತ್ತ ಪುರೋಹಿತರು ವಿಧಿವಿಧಾನಗಳನ್ನು ನೆರವೇರಿಸಿ ವರನನ್ನು ಆಶೀರ್ವದಿಸುತ್ತಿದ್ದಾರೆ. ಆದರೆ ವರ ಪುರೋಹಿತರ ಕಡೆಗೆ ನೋಡದೇ ಆತ ತನ್ನ ಲ್ಯಾಪ್‍ಟಾಪ್‌ನಲ್ಲಿ ಕೆಲಸ ಮಾಡುತ್ತ ಮಗ್ನನಾಗಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

    View this post on Instagram

     

    A post shared by Calcutta Instagrammers (@ig_calcutta)

    ಈ ಫೋಟೋವನ್ನು ಹಂಚಿಕೊಂಡಿರುವ ಇನ್‍ಸ್ಟಾಗ್ರಾಮ್ ಪೇಜ್‌ ಮದುವೆ ಸಮಯದಲ್ಲೂ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುವ ಸ್ನೇಹಿತನನ್ನು ಟ್ಯಾಗ್ ಮಾಡಿ ಎಂದು ತಿಳಿಸಿದೆ. ವರ ಲ್ಯಾಪ್‍ಟಾಪ್‍ನಲ್ಲಿ ನಿಖರವಾಗಿ ಏನು ಕೆಲಸ ಮಾಡುತ್ತಿದ್ದಾನೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕೆಲವರು ಆಫೀಸ್ ಕೆಲಸ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಯಚೂರು ನಗರ ಕ್ಷೇತ್ರ ಮತದಾರರ ಪಟ್ಟಿಯಲ್ಲಿ 40 ಸಾವಿರ ಹೆಸರು ಮಾಯ

    ಕೆಲವರು ಈ ಫೋಟೋ ನೋಡಿ ಹಾಸ್ಯ ಮಾಡಿದ್ದರೇ, ಇನ್ನೂ ಕೆಲವರು ಟೀಕಿಸಿದ್ದಾರೆ. ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಈ ವ್ಯಕ್ತಿಗೆ ತನ್ನ ಸ್ವಂತ ವಿವಾಹವನ್ನು ಆನಂದಿಸಲು ಸಹ ಆಗುತ್ತಿಲ್ಲ ಎಂದು ಹೇಳಿದ್ದಾನೆ. ಮತ್ತೊಬ್ಬ ಕಾಮೆಂಟ್ ಮಾಡಿ, ನನಗೆ ಇದು ತಮಾಷೆಯಾಗಿ ಕಾಣುತ್ತಿಲ್ಲ. ಯಾವುದೇ ಸಂಸ್ಥೆಯು ಉದ್ಯೋಗಿಯನ್ನು ಅವರ ಮದುವೆಯ ದಿನಗಳಲ್ಲಿ ಕೆಲಸ ಮಾಡಲು ಕೇಳುವುದಿಲ್ಲ ಎಂದಾತ ಅವನು ಮದುವೆಯಾಗುವ ಮಹಿಳೆಯನ್ನು ದೇವರು ಆಶೀರ್ವದಿಸುತ್ತಾನೆ ಎಂದು ವ್ಯಂಗ್ಯವಾಡಿದ್ದಾನೆ. ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಪೊಲೀಸ್ ಪೇದೆ ಪತ್ನಿ ಅನುಮಾನಾಸ್ಪದ ಸಾವು

    Live Tv
    [brid partner=56869869 player=32851 video=960834 autoplay=true]

  • ವರನ ಕಡೆಯವರು ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ – ಮದುವೆ ಬೇಡವೆಂದ ವಧು

    ವರನ ಕಡೆಯವರು ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ – ಮದುವೆ ಬೇಡವೆಂದ ವಧು

    ಡೆಹ್ರಾಡೂನ್: ವರನ (Groom) ಮನೆಯವರು ಉಡುಗೊರೆಯಾಗಿ ನೀಡಿದ್ದ ಲೆಹೆಂಗಾ (Lehenga) ಇಷ್ಟವಾಗದ್ದಕ್ಕೆ ವಧುವೊಬ್ಬಳು (Bride) ಮದುವೆಯನ್ನು (Wedding) ರದ್ದುಗೊಳಿಸಿದ ವಿಲಕ್ಷಣ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ.

    ಉತ್ತರಾಖಂಡದ ಹಲ್ದ್ವಾನಿಯ ಹೆಲ್ತ್‌ ಕೇರ್ ವೃತ್ತಿಯಲ್ಲಿ ಕೆಲಸ ಮಾಡುವ ರಾಣಿಖೇತ್ ಮೂಲದ ಹುಡುಗನೊಂದಿಗೆ ಹುಡುಗಿಯ ಮದುವೆಯನ್ನು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಗೂ ಮೊದಲು ವರನ ತಂದೆ ಲಕ್ನೋದಿಂದ 10,000 ರೂ. ಮೌಲ್ಯದ ಲೆಹಂಗಾವನ್ನು ಸೊಸೆಯಾಗಿ ಬರುವವಳಿಗೆ ಎಂದು ಆರ್ಡರ್‌ ಮಾಡಿದ್ದರು. ಈ ಆರ್ಡರ್‌ ಅನ್ನು ನೇರವಾಗಿ ವಧು ಮನೆಗೆ ಕಳುಸಿದ್ದರು.

    ಆ ಲೇಹಂಗಾವನ್ನು ನೋಡಿದ ವಧುಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ವಧು ಕಡಿಮೆ ಕ್ವಾಲಿಟಿಯ ಲೆಹಂಗಾ ಎಂದು ಜಗಳ ತೆಗೆದಿದ್ದಾಳೆ. ಈ ಜಗಳವೇ ಉಲ್ಬಣಗೊಂಡಿದ್ದು, ವಧು ತನ್ನ ನಿಶ್ಚಿತ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಹಲ್ದ್ವಾನಿ ಪೊಲೀಸರ ಗಮನಕ್ಕೂ ತರಲಾಯಿತು. ಹಲ್ದ್ವಾನಿ ಪೊಲೀಸರು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರೂ ಎಲ್ಲ ಪ್ರಯತ್ನಗಳು ವಿಫಲವಾದವು. ಅದಾದ ಬಳಿಕ 2 ಕುಟುಂಬಗಳ ಸಮ್ಮತಿ ಮೇರೆಗೆ ಮದುವೆಯನ್ನು ರದ್ದುಗೊಳಿಸಲಾಯಿತು. ಇದನ್ನೂ ಓದಿ: ವೇದಿಕೆಯಲ್ಲಿಯೇ ಅನಾರೋಗ್ಯಕ್ಕೀಡಾದ ಸಚಿವ ನಿತಿನ್ ಗಡ್ಕರಿ

    ಈ ವರ್ಷ ಜೂನ್‌ನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ತಿಂಗಳು ಮದುವೆಯನ್ನು ನಿಗದಿಪಡಿಸಲಾಗಿತ್ತು, ಇದಕ್ಕಾಗಿ ವರನ ಕುಟುಂಬವು ಈಗಾಗಲೇ ಕಾರ್ಡ್‌ಗಳನ್ನು ಮುದ್ರಿಸಿದ್ದರು. ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ CM ಸೇರಿ ಬಿಜೆಪಿಯ ಹಿರಿಯ ಸಚಿವರೆಲ್ಲರೂ ಭಾಗಿಯಾಗಿದ್ದಾರೆ: ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ಭಾರತೀಯ ವರನ ಮದುವೆಗೆ ಸೀರೆಯುಟ್ಟು ಮಿಂಚಿದ ಇಬ್ಬರು ಪುರುಷ ಸ್ನೇಹಿತರು

    ಭಾರತೀಯ ವರನ ಮದುವೆಗೆ ಸೀರೆಯುಟ್ಟು ಮಿಂಚಿದ ಇಬ್ಬರು ಪುರುಷ ಸ್ನೇಹಿತರು

    ಚಿಕಾಗೋ: ಭಾರತೀಯ (India) ಸ್ನೇಹಿತನ ಮದುವೆಗೆ ವಿದೇಶಿ ಸ್ನೇಹಿತರು (Friends) ಸೀರೆಯುಟ್ಟು (Saree) ಮದುವೆಗೆ (Wedding) ಬಂದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸಾಮಾನ್ಯವಾಗಿ ಪುರುಷರ ಉಡುಪುಗಳನ್ನು ಮಹಿಳೆಯರು ಹಾಕಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ. ಆದರೆ ಮಹಿಳೆಯರ ಉಡುಗೆಯಾದ ಅದರಲ್ಲೂ ಸೀರೆ, ಲೆಹಂಗಾದಂತಹ ಉಡುಗೆಗಳನ್ನು ಪುರುಷರು ಧರಿಸುವುದಿಲ್ಲ. ಆದರೆ ಅಮೆರಿಕದ ಚಿಕಾಗೊದಲ್ಲಿ ನಡೆದ ಭಾರತೀಯ ಜೋಡಿಗಳ ಮದುವೆಯಲ್ಲಿ ವರನ (Groom) ಇಬ್ಬರು ವಿದೇಶಿ ಪುರುಷ ಸ್ನೇಹಿತರು ಸೀರೆ ಧರಿಸಿ ಬಂದಿದ್ದಾರೆ.

    ಇದೀಗ ಈ ವೀಡಿಯೋವನ್ನು ಚಿಕಾಗೋ ಮೂಲದ ವೆಡ್ಡಿಂಗ್ ವೀಡಿಯೋಗ್ರಾಫರ್‌ಗಳಾದ ಪ್ಯಾರಾಗಾನ್‍ಫಿಲ್ಮ್ಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಇಬ್ಬರು ಸ್ನೇಹಿತರು ತಮ್ಮ ಸ್ನೇಹಿತನ ಮದುವೆಗೆ ಸೀರೆಯುಟ್ಟು ಸಿದ್ಧರಾಗುತ್ತಿರುತ್ತಾರೆ. ಇದಕ್ಕೆ ಮಹಿಳೆಯೊಬ್ಬರು ಸಹಾಯ ಮಾಡುತ್ತಾರೆ. ಸೀರೆಯನ್ನುಟ್ಟು ಸಿದ್ಧರಾದ ನಂತರ ಅವರು ಹಣೆಗೂ ಬಿಂದಿಯನ್ನು ಇಡುತ್ತಾರೆ. ಅದಾದ ನಂತರ ಅವರು ಸೀರೆಯಲ್ಲೇ ವರನಿರುವ ಬಳಿಗೆ ಬರುತ್ತಾರೆ. ಜುಬ್ಬಾ ಧರಿಸಿಕೊಂಡಿರುವ ವರನು ಆ ಇಬ್ಬರು ಸ್ನೇಹಿತರನ್ನು ನೋಡಿ ನಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಮುಲ್ ಬಟರ್‌ಗೆ ಕೊರತೆ

    ಈ ವೀಡಿಯೋಕ್ಕೆ ಅನೇಕರು ಕಾಮೆಂಟ್ ಮಾಡಿದ್ದು, ಅನೇಕ ನೆಟ್ಟಿಗರು ಸಕಾರಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು, ವರನ ಸಂಸ್ಕೃತಿಯನ್ನು ಗೌರವಿಸಿದ್ದಕ್ಕಾಗಿ ಇಬ್ಬರು ಸ್ನೇಹಿತರನ್ನು ಶ್ಲಾಘಿಸಿದ್ದಾರೆ. ಮತ್ತೊಬ್ಬರು ಇದಕ್ಕೆ ಪರಮಾಶ್ಚರ್ಯ ಎಂದು ಬರೆದಿದ್ದಾರೆ. ಇದನ್ನೂ ಓದಿ: ಬಾವಿಗೆ ಬಿದ್ದ ಒಂಟಿ ಸಲಗ – ಮೇಲಕ್ಕೆತ್ತಲು ಅರಣ್ಯಾಧಿಕಾರಿಗಳಿಂದ ಬಿಗ್ ಸರ್ಕಸ್

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗಲು ಹುಡುಗಿಗಾಗಿ ಕ್ಯೂ ನಿಂತ ಮಂಡ್ಯ ಯುವ ರೈತರು

    ಮದುವೆಯಾಗಲು ಹುಡುಗಿಗಾಗಿ ಕ್ಯೂ ನಿಂತ ಮಂಡ್ಯ ಯುವ ರೈತರು

    ಮಂಡ್ಯ: ರೈತಾಪಿ ವರ್ಗದ ಯುವಕರು ಮದುವೆಯಾಗಲು ಹೆಣ್ಣು ಕೇಳಲು ಹೋದ್ರೆ ಹೆಣ್ಣೆತ್ತವರು ಹುಡುಗ ಏನು ಮಾಡ್ಕೊಂಡು ಇದ್ದಾನೆ ಅಂದಾಗ ರೈತನಾಗಿದ್ದಾನೆ ಅಂದ್ರೆ ಸಾಕು ಮೂಗು ಮುರಿಯುತ್ತಾರೆ. ಹೀಗಾಗಿ ಯುವಕರು ಮದುವೆಯಾಗಲು ಹೆಣ್ಣು ಸಿಗದೇ ಇದೀಗ ವಧು-ವರರ ಸಮಾವೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಳ ಸಂಗಾತಿಗಾಗಿ ಕ್ಯೂ ನಿಂತಿದ್ದಾರೆ.

    ರೈತ (Farmer) ದೇಶದ ಬೆನ್ನೆಲುಬು, ರೈತನಿದ್ದರೆ ಮಾತ್ರ ದೇಶ ಸುಭೀಕ್ಷವಾಗಿ ಇರುತ್ತೆ ಅಂತಾ ಹೇಳ್ತಾರೆ. ಆದರೆ ಇದೀಗ ಅಂತಹ ರೈತ ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ. ಮದುವೆಯಾಗಲು ರೈತ ಹೆಣ್ಣು ಕೇಳಲು ಹೋದ್ರೆ, ಹೆಣ್ಣೆತ್ತವರು ನಾವು ರೈತರಿಗೆ ನಮ್ಮ ಮಗಳನ್ನು ಕೊಡುವುದಿಲ್ಲ. ನಾವು ಪಟ್ಟಣದಲ್ಲಿ ಕೆಲಸದಲ್ಲಿ ಇರುವವರಿಗೆ ನಮ್ಮ ಮಗಳನ್ನು ಕೊಡ್ತೀವಿ ಎನ್ನುವವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿ ರೈತ ಯುವಕರು (Farmer Marriage) ದಾಂಪತ್ಯ ಜೀವನ ತುಳಿಯಲು ಹುಡುಗಿ ಸಿಗದೇ ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪರದಾಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆಗೆ ಎಂದ್ರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ಒಕ್ಕಲಿಗ ವಧು-ವರ ಸಮಾವೇಶ. ಇದನ್ನೂ ಓದಿ:  ಮಂಡ್ಯದಲ್ಲಿ ರಸ್ತೆ ಗುಂಡಿಗೆ ನಿವೃತ್ತ ಯೋಧ ಬಲಿ

    ಭಾನುವಾರ ಆದಿಚುಂಚನಗಿರಿ (Adichunchanagiri) ಯಲ್ಲಿ ನಡೆದ ವಧು-ವರರ ಸಮಾವೇಶದಲ್ಲಿ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ನಾನ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಧು-ವರರ ಆಯ್ಕೆಗೆ ಬಂದಿದ್ದಾರೆ. ಸುಮಾರು 12 ಸಾವಿರ ಮಂದಿ ಸಮಾವೇಶದಲ್ಲಿ ರಿಜಿಸ್ಟರ್ ಆಗಿದ್ದು, ಈ ಪೈಕಿ 250 ಮಂದಿ ಹುಡುಗಿಯರು ವರನಿಗಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಉಳಿದ 11,750 ಮಂದಿ ಯುವಕರು ದಾಂಪತ್ಯ ಜೀವನಕ್ಕೆ ಕಾಲಿಡಲು ವಧುವಿಗಾಗಿ ಹುಡುಕಾಟ ನಡೆಸಲು ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಈ ಪೈಕಿ ಅತೀ ಹೆಚ್ಚು ರೈತ ಸಮುದಾಯದ ಯುವಕರೇ ಇರುವುದು ಆಶ್ಚರ್ಯದ ಸಂಗತಿಯಾಗಿದೆ.

    ಒಟ್ಟಾರೆ ರೈತನೇ ದೇಶದ ಬೆನ್ನೆಲುಬು ಎಂದು ಹೇಳುವಾಗ ರೈತನ ಆರ್ಥಿಕತೆ ಸುಧಾರಿಸಲು ಸರ್ಕಾರ ಸರಿಯಾದ ಕಾರ್ಯಕ್ರಮಗಳನ್ನು ಜಾರಿಗೆ ತಾರದ ಕಾರಣ ರೈತರ ಪರಿಸ್ಥಿತಿ ಈ ಮಟ್ಟಕ್ಕೆ ತಲುಪಿದೆ. ಮದುವೆಯಾಗಲು ರೈತರಿಗೆ ಹೆಣ್ಣು ಸಿಗುತ್ತಿಲ್ಲ ಎಂದ್ರೆ ರೈತರ ಸ್ಥಿತಿ ಎಷ್ಟರ ಮಟ್ಟಿಗೆ ಇದೆ ಎಂದು ಗೊತ್ತಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ವರನ ಎದುರೇ ಲವ್ವರ್‌ಗೆ ಕರೆ ಮಾಡಿದ ಹುಡುಗಿ – ತಾಳಿ ಕಿತ್ತುಕೊಂಡು ಶಾಕ್ ಕೊಟ್ಟ ಪ್ರಿಯತಮ

    ವರನ ಎದುರೇ ಲವ್ವರ್‌ಗೆ ಕರೆ ಮಾಡಿದ ಹುಡುಗಿ – ತಾಳಿ ಕಿತ್ತುಕೊಂಡು ಶಾಕ್ ಕೊಟ್ಟ ಪ್ರಿಯತಮ

    ಚೆನ್ನೈ: ತಾನು ಪ್ರೀತಿಸಿದ ಹುಡುಗಿ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗುತ್ತಿರುವುದನ್ನು ತಡೆಯಲು 24 ವರ್ಷದ ಯುವಕ ವರನ(Groom) ಕೈ ತಾಳಿಯನ್ನು (Mangalsutra) ಕಿತ್ತುಕೊಂಡು ಪ್ರಿಯತಮೆ ಕೊರಳಿಗೆ ಕಟ್ಟಲು ಯತ್ನಿಸಿದ್ದಾನೆ.

    ಚೆನ್ನೈನ ಐಷಾರಾಮಿ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮತ್ತು ಯುವತಿ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಈ ಮದುವೆ ನಿಲ್ಲಿಸಿ ತನ್ನನ್ನು ಹೇಗಾದರೂ ಕರೆದುಕೊಂಡು ಹೋಗುವಂತೆ ಯುವತಿ ತನ್ನ ಪ್ರಿಯಕರನಿಗೆ ಮೊಬೈಲ್(Mobile) ಮೂಲಕ ಸಂದೇಶ ಕಳುಹಿಸಿದ್ದಳು. ಹೀಗಾಗಿ ಬೆಳಗ್ಗೆಯೇ ಮದುವೆ(Marriage) ಮನೆಗೆ ಎಂಟ್ರಿ ಕೊಟ್ಟ ಯುವಕ ವರ ತನ್ನ ಪ್ರಿಯತಮೆಗೆ ಕಟ್ಟಲು ಮುಂದಾಗುತ್ತಿದ್ದಂತೆ ವೇದಿಕೆ ಏರಿ ತಾಳಿಯನ್ನು (Thali) ಕಿತ್ತುಕೊಂಡಿದ್ದಾನೆ. ನಂತರ ಆಕೆಯ ಕುತ್ತಿಗೆಗೆ ಕಟ್ಟಲು ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ಅಲ್ಲಿದ್ದ ಜನರು ಆತನನ್ನು ತಡೆದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು

    ಶುಕ್ರವಾರ ಬೆಳಗ್ಗೆ ಚೆನ್ನೈನ(Chennai) ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದ್ದು, ಘಟನೆ ಬಳಿಕ ಪೊಲೀಸರಿಗೆ (Police) ಕರೆ ಮಾಡಿ ಮಾಹಿತಿ ನೀಡಲಾಗಿದೆ. ನಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಯುವಕ ಮತ್ತು ಯುವತಿ ಪ್ರೀತಿ ಮಾಡುತ್ತಿದ್ದು, ಹುಡುಗಿ ಕುಟುಂಬಸ್ಥರ ಒತ್ತಾಯದ ಮೇರೆಗೆ ಮದುವೆಯಾಗಲು ಮುಂದಾಗಿದ್ದಾಳೆ. ಹೀಗಾಗಿ ಪ್ರಿಯಕರ (Lover) ಮದುವೆ ಮಂಟಪಕ್ಕೆ ಬಂದಿದ್ದಾನೆ ಎಂಬ ವಿಚಾರ ತಿಳಿದು ಬಂದಿದೆ. ಇದನ್ನೂ ಓದಿ: ಹಿರಿಯ ಅಧಿಕಾರಿಯಿಂದ ಅವಮಾನವಾಗಿದೆ – ಠಾಣೆಯೊಳಗೆ ಗುಂಡು ಹಾರಿಸಿಕೊಂಡು ಪೊಲೀಸ್‌ ಆತ್ಮಹತ್ಯೆ

    ಇದರಿಂದಾಗಿ ವರನ ಕುಟುಂಬಸ್ಥರು ಮತ್ತು ಹುಡುಗಿ ಮನೆಯವರ ನಡುವೆ ಜಗಳವಾಗಿ ಮದುವೆ ರದ್ದುಗೊಳಿಸಲಾಯಿತು. ಇದೀಗ ಕಲ್ಯಾಣ ಮಂಟಪಕ್ಕೆ ಒಳನುಗ್ಗಿದ ಯುವಕನ ಮನೆಯವರು ಮತ್ತು ಹುಡುಗಿಯ ಮನೆಯವರ ನಡುವೆ ಮದುವೆ ಮಾಡಲು ಮಾತುಕತೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಾಗುವಂತೆ ಕೋರಿ ಮಾರುಕಟ್ಟೆಯಲ್ಲಿ ಯುವಕನ ಹಿಂದೆ ಓಡಿದ ವಧು!

    ಮದುವೆಯಾಗುವಂತೆ ಕೋರಿ ಮಾರುಕಟ್ಟೆಯಲ್ಲಿ ಯುವಕನ ಹಿಂದೆ ಓಡಿದ ವಧು!

    ಪಾಟ್ನಾ: ವಧುವೊಬ್ಬಳು ನನ್ನನ್ನು ಮದುವೆಯಾಗು ಎಂದು ಮಾರುಕಟ್ಟೆಯಲ್ಲಿ ಯುವಕನ ಹಿಂದೆ ಓಡಿದ ಘಟನೆ ಬಿಹಾರದಲ್ಲಿ ನಡೆದಿದೆ.

    ಬಿಹಾರದ ನವಾಡದಲ್ಲಿ ಈ ಘಟನೆ ನಡೆದಿರುವ ವೀಡಿಯೋವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ವಧುವಿನ ಕುಟುಂಬಸ್ಥರ ಪ್ರಕಾರ, ವಧುವಿಗೂ ಯುವಕನಿಗೂ 3 ತಿಂಗಳ ಹಿಂದೆ ಮದುವೆ ನಿಶ್ಚಯಿಸಲಾಗಿತ್ತು. ಅಷ್ಟೇ ಅಲ್ಲದೇ ಯುವಕನಿಗೆ ಬೈಕ್ ಹಾಗೂ 50 ಸಾವಿರ ನಗದನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೆ ಯುವಕ ಸಬೂಬನ್ನು ಹೇಳಿ ಮದುವೆಯನ್ನು ವಿಳಂಬ ಮಾಡುತ್ತಲೇ ಇದ್ದ. ಈ ಹಿನ್ನೆಲೆಯಲ್ಲಿ ವಧು ಮಾರುಕಟ್ಟೆಯಲ್ಲಿ ನನ್ನನ್ನು ಮದುವೆಯಾಗಿ ಎಂದು ಯುವಕನ ಹಿಂದೆ ಓಡಿದ್ದಾಳೆ.

    ವೀಡಿಯೋದಲ್ಲಿ ಏನಿದೆ?: ನವಡಾದ ಭಗತ್ ಸಿಂಗ್ ಚೌಕ್‍ನಲ್ಲಿ ಯುವಕನೊಬ್ಬ ಹೋಗುತ್ತಿದ್ದ. ಈ ವೇಳೆ ಆತನನ್ನು ನೋಡಿದ ವಧು ನನ್ನನ್ನು ಮದುವೆಯಾಗು ಎಂದು ಅವನ ಕೈಯನ್ನು ಹಿಡಿದು ಅಳುತ್ತಾ ಒತ್ತಾಯಿಸಿದ್ದಾಳೆ. ಇದರಿಂದಾಗಿ ಆತ ವಧುವಿನಿಂದ ತಪ್ಪಿಸಿಕೊಂಡು ಅಲ್ಲಿಂದ ಓಡಲು ಪ್ರಯತ್ನಿಸಿದ್ದಾರೆ. ಆದರೆ ವಧು ಆತನನ್ನು ಹಿಡಿಯಲು ಅವನ ಹಿಂದೆ ಓಡುತ್ತಾಳೆ. ಕೊನೆಗೂ ಆ ಯುವಕನ ಶತಪ್ರಯತ್ನಗಳೆಲ್ಲಾ ವಿಫಲವಾಗಿ ವಧುವಿನ ಕೈಯಲ್ಲಿ ಸಿಕ್ಕಿಬಿಳುತ್ತಾನೆ. ಇದನ್ನೂ ಓದಿ: ಪಂದ್ಯ ಸೋತ್ರೂ ರೋಮ್ಯಾಂಟಿಕ್ ಮೂಡ್- ಗೆಳತಿಗೆ ಪ್ರಪೋಸ್ ಮಾಡಿದ ಕ್ರಿಕೆಟಿಗ

    ಆ ವೇಳೆಗಾಗಲೇ ಅಲ್ಲಿ ಜನರೆಲ್ಲರೂ ಸೇರಿರುತ್ತಾರೆ. ಅವರೆಲ್ಲರ ಎದುರೇ ವಧು, ಅಳುತ್ತಾ, ನನ್ನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಾಳೆ. ಅಷ್ಟೇ ಅಲ್ಲದೇ ಆತನನ್ನು ಬಿಟ್ಟರೇ ಮತ್ತೆ ಎಲ್ಲಿ ತಪ್ಪಿಸಿಕೊಳ್ಳುತ್ತಾನೋ ಎನ್ನುವ ಭಯದಿಂದ ಆತನ ಕೈಯನ್ನು ಹಿಡಿಕೊಂಡು ಗಲಾಟೆ ಪ್ರಾರಂಭಿಸುತ್ತಾಳೆ. ಆಗ ಪೊಲೀಸರು ಮಧ್ಯಪ್ರವೇಶಿಸಿ, ಘಟನೆಗೆ ಸಂಬಂಧಿಸಿ ಎರಡು ಕಡೆಯವರನ್ನು ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆನಂತರದಲ್ಲಿ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ದೇವಸ್ಥಾನದಲ್ಲಿ ಇಬ್ಬರು ವಿವಾಹವಾದರು. ಇದನ್ನೂ ಓದಿ: ಮುರುಘಾ ಶ್ರೀಗೆ ಸದ್ಯಕ್ಕಿಲ್ಲ ರಿಲೀಫ್‌ – ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

    Live Tv
    [brid partner=56869869 player=32851 video=960834 autoplay=true]

  • ನಿಶ್ಚಿತಾರ್ಥ ವರನಿಗೆ ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ನೆರೆಮನೆಯವ – ವಧು ಆತ್ಮಹತ್ಯೆ

    ನಿಶ್ಚಿತಾರ್ಥ ವರನಿಗೆ ಯುವತಿಯ ಅಶ್ಲೀಲ ಫೋಟೋ ಕಳುಹಿಸಿದ ನೆರೆಮನೆಯವ – ವಧು ಆತ್ಮಹತ್ಯೆ

    ಲಕ್ನೋ: ನೆರೆಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಮದುವೆ ನಿಶ್ಚಿಯವಾಗಿದ್ದ ಯುವತಿಯ ಅಶ್ಲೀಲ ಫೋಟೋಗಳನ್ನು ವರನಿಗೆ ಕಳುಹಿಸಿದ್ದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದಿದೆ.

    ಆರೋಪಿಯನ್ನು ರವಿ ಪ್ರಕಾಶ್ ಎಂದು ಗುರುತಿಸಲಾಗಿದ್ದು, ಈತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ತೀವ್ರವಾಗಿ ಮನನೊಂದ ಯುವತಿ ತನ್ನ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗುರುವಾರ ಬೆಳಗ್ಗೆ ಸೀಲಿಂಗ್ ಫ್ಯಾನ್‍ನಲ್ಲಿ ಯುವತಿ ನೇತಾಡುತ್ತಿರುವುದನ್ನು ಕಂಡು ಕುಟುಂಬಸ್ಥರು ಗಾಬರಿಗೊಂಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ – ಗುಂಡು ಹಾರಿಸ್ತೀರಾ ಹಾರಿಸಿ: ಮುತಾಲಿಕ್

    ಈ ಕುರಿತಂತೆ ಪ್ರತಿಕ್ರಿಯಿಸಿದ ಮೃತ ಯುವತಿಯ ಸಹೋದರ, ಕೆಲವು ದಿನಗಳ ಹಿಂದೆ ಆರೋಪಿ ಆಕೆಯ ಐಡಿಯನ್ನು ಕದ್ದಿದ್ದು, ನಂತರ ಅಶ್ಲೀಲ ಫೋಟೋಗಳನ್ನು ಮಾಡಲು ಬಳಸಿಕೊಂಡಿದ್ದಾನೆ. ಅಲ್ಲದೇ ಆ ಫೋಟೋಗಳನ್ನು ವರ ಮತ್ತು ಆತನ ಕುಟುಂಬಸ್ಥರಿಗೆ ಕಳುಹಿಸಿದ್ದಾನೆ. ಇದರಿಂದಾಗಿ ಮದುವೆ ರದ್ದುಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.

    ಇದೀಗ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜೊತೆಗೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಖಿಂಪುರ ಖೇರಿಯ ಹೆಚ್ಚುವರಿ ಎಸ್‍ಪಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಚೈಲ್ಡೀಶ್‌, ಅಪ್ರಬುದ್ಧ ನಾಯಕ – ರಾಹುಲ್‌ ಗಾಂಧಿಯಿಂದಲೇ ಕಾಂಗ್ರೆಸ್‌ ಅವನತಿ