Tag: groom

  • ಡಿಜೆ, ರೋಡ್‍ಲೈಟ್ ಇಲ್ಲದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವರ

    ಡಿಜೆ, ರೋಡ್‍ಲೈಟ್ ಇಲ್ಲದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವರ

    ಲಕ್ನೋ: ಡಿಜೆ ಹಾಗೂ ರಸ್ತೆ ಲೈಟ್ ವಿಚಾರದಲ್ಲಿ ವಧುವಿನ ಕುಟುಂಬದವರೊಂದಿಗೆ ವಾದ, ವಿವಾದ ನಡೆದ ಹಿನ್ನೆಲೆಯಲ್ಲಿ ವರನೊಬ್ಬ (Groom) ಮದುವೆಯನ್ನು (Wedding) ರದ್ದುಪಡಿಸಿದ ಘಟನೆ ಉತ್ತರ ಪ್ರದೇಶದ ಅಲಹಾಬಾದ್‍ನ ಬರಹುಲಾ ಗ್ರಾಮದಲ್ಲಿ ವರದಿಯಾಗಿದೆ.

    ಮಿಜಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹಲಿಯಾ ಮೂಲದ ವರನಿಗೆ ಬರಹುಲಾದ ವಧುವನ್ನು ಮದುವೆಯಾಗಲು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವರನ ಕಡೆಯವರು ಬರಹುಲಾದ ವಧುವಿನ ಮನೆಗೆ ಮೆರವಣಿಗೆಯ ಮೂಲಕ ಬರುತ್ತಿದ್ದರು. ಆದರೆ ಈ ವೇಳೆ ಆರ್ಕೆಸ್ಟ್ರಾ ಕಲಾವಿದರು ತಡವಾಗಿ ಬಂದಿದ್ದಾರೆ. ಜೊತೆಗೆ ರಸ್ತೆ ದೀಪವು (Road Light) ಇರಲಿಲ್ಲ. ಇದರಿಂದಾಗಿ ವರ ಹಾಗೂ ವಧುವಿನ ಕಡೆಯವರ ನಡುವೆ ವಾಗ್ವಾದ ನಡೆದಿದೆ.

    ಈ ವೇಳೆ ವರ ಮದುವೆಯನ್ನು ರದ್ದು ಪಡಿಸಿದ್ದಾನೆ. ಆದರೆ ಅಲ್ಲಿದ್ದ ಗ್ರಾಮಸ್ಥರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಅಷ್ಟರಾಗಲೇ ವರ ಹೊರಟು ಹೋಗಿದ್ದ. ಇದರಿಂದಾಗಿ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ರು: ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಸ್ವ ಪಕ್ಷದ ವಿರುದ್ಧ ಕಿಡಿ

    ಅಷ್ಟೇ ಅಲ್ಲದೇ ವರನಿಗೆ ವರದಕ್ಷಿಣೆ ಹಾಗೂ ಬೈಕ್ ನೀಡಲು ಜಮೀನನ್ನು ಅಡವಿಟ್ಟಿರುವುದಾಗಿ ವಧುವಿನ ಸಹೋದರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವರನ ತಂದೆಯನ್ನು ಕರೆಸಿದ್ದಾರೆ. ಈ ವೇಳೆ ವರನ ತಂದೆ ಕೂಡ ಪೊಲೀಸ್ ಠಾಣೆಗೆ ಬಂದು ತನ್ನ ಮಗ ವಧುವನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

  • ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಹಾಸನ: ವಿಧಾನಸಭಾ ಚುನಾವಣೆ (Assembly Election) ದಿನವೇ ತನ್ನ ಮದುವೆಯಿದ್ದರೂ ವರನೊಬ್ಬ (Groom) ಮದುವೆ ಮುಗಿಸಿಕೊಂಡು ಬಂದು ಮತ ಚಲಾಯಿಸಿ (Vote) ಮತಾಭಿಮಾನ ಮೆರೆದಿರುವ ಘಟನೆ ಹಾಸನ (Hassana) ಜಿಲ್ಲೆಯಲ್ಲಿ ನಡೆದಿದೆ.

    ನವ ವಿವಾಹಿತ ರೋಹಿತ್ ಧರ್ಮಸ್ಥಳದಲ್ಲಿ ವಿವಾಹವಾಗಿ, ಬಳಿಕ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಮಳೆ – ತುಂತುರು ಮಳೆಯಲ್ಲೇ ಮತಗಟ್ಟೆಗೆ ಬಂದ ಮತದಾರ

    ರೋಹಿತ್ ಸಕಲೇಶಪುರದ ಮಹೇಶ್ವರಿ ನಗರದ ನಿವಾಸಿ. ಬುಧವಾರ ನಂದಿನಿ ಜೊತೆ ವಿವಾಹವಾದ ರೋಹಿತ್ ತಕ್ಷಣವೇ ಸಕಲೇಶಪುರಕ್ಕೆ ವಾಪಸಾಗಿ ಮತ ಚಲಾಯಿಸಿದ್ದಾರೆ. ನವವಿವಾಹಿತನ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತದಾನ ಕೇಂದ್ರದ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

  • ವರನಿಗೆ ಅಶ್ಲೀಲ ಫೋಟೋ ಕಳಿಸಿ ಮದುವೆ ನಿಲ್ಲಿಸಿದ ವಧುವಿನ ಮಾಜಿ ಪ್ರಿಯತಮ!

    ವರನಿಗೆ ಅಶ್ಲೀಲ ಫೋಟೋ ಕಳಿಸಿ ಮದುವೆ ನಿಲ್ಲಿಸಿದ ವಧುವಿನ ಮಾಜಿ ಪ್ರಿಯತಮ!

    ತಿರುವನಂತಪುರಂ: ವರ (Groom) ನಿಗೆ ವಧು (Bride) ವಿನ ಅಶ್ಲೀಲ ಫೋಟೋ ಕಳಿಸಿ ಮದುವೆ ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ವಿಜಿನ್ (22) ಎಂದು ಗುರುತಿಸಲಾಗಿದೆ. ಕಡುಕ್ಕಮೂಡುವಿನ ವೆಲ್ಲನಾಡು ನಿವಾಸಿಯಾಗಿರುವ ಈತ ಇದೀಗ ಕೇರಳ ಪೊಲೀಸ (Kerala Police) ರ ಬಂಧನದಲ್ಲಿದ್ದಾನೆ.

    ವಿಜಿನ್ ಹಾಗೂ ವಧು ಸುಮಾರು 4 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತ ಹುಡುಗಿಯ ಕುಟುಂಬಸ್ಥರು ಆಕೆಗೆ ಬೇರೊಬ್ಬನ ಜೊತೆ ಮದುವೆ ಫಿಕ್ಸ್ ಮಾಡಿದ್ದಾರೆ. ಇದರಿಂದ ಬೇಸರಗೊಂಡ ಪ್ರಿಯತಮ ವಿಜಿನ್, ಆಕೆಯ ಜೊತೆಗಿದ್ದ ಅಶ್ಲೀಲ ಫೋಟೋಗಳನ್ನು ವಾಟ್ಸಾಪ್ ಮೂಲಕ ವರನಿಗೆ ಕಳುಹಿಸಿದ್ದಾನೆ.

    ಇಷ್ಟು ಮಾತ್ರವಲ್ಲದೆ ವರನ ಮನೆಗೆ ತೆರಳಿ ಆತನ ಪೋಷಕರಿಗೆ ಕೂಡ ತೋರಿಸಿದ್ದಾನೆ. ವಧುವಿನ ಫೋಟೋ (Bride Photos) ಗಳನ್ನು ನೋಡಿದ ವರನ ಕಡೆಯವರು ಅಂದೇ ಮದುವೆ ಕ್ಯಾನ್ಸಲ್ ಮಾಡಿದ್ದಾರೆ. ಇದನ್ನೂ ಓದಿ: ಉಮೇಶ್ ಪಾಲ್ ಹತ್ಯೆ ಕೇಸ್‌ – ಗ್ಯಾಂಗ್‌ ಸ್ಟಾರ್‌ ಅತಿಕ್‌ ಪುತ್ರ ಎನ್‌ಕೌಂಟರ್‌ಗೆ ಬಲಿ

    ಇತ್ತ ಪ್ರಕರಣ ಸಂಬಂಧ ವಿಜಿನ್ ನನ್ನು ಬಂಧಿಸಿ, ಆತನ ಮೇಲೆ ಕೆಸ್ ದಾಖಲಿಸಲಾಗಿದೆ. ಮದುವೆ ತಪ್ಪಿಸಲೆಂದೇ ಈ ಕೃತ್ಯ ಎಸಗಿರುವುದಾಗಿ ವಿಜಿನ್ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

  • ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

    ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

    ಲಕ್ನೋ: ಮದುವೆಯ ಸಂಭ್ರಮದಲ್ಲಿದ್ದ ವಧುವೊಬ್ಬಳು (Bride) ವೇದಿಕೆಯ ಮೇಲೆ ರಿವಾಲ್ವರ್‌ನಿಂದ 4 ಬಾರಿ ಗುಂಡು ಹಾರಿಸಿದ್ದಾಳೆ. ಇದೀಗ ಈ ಸಂಭ್ರಮವೇ ಆಕೆಯ ಪಾಲಿಗೆ ಕುತ್ತು ತಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಹುಡುಕಾಟ ನಡೆಸುತ್ತಿರುವ ಘಟನೆ ನಡೆದಿದೆ.

    ಉತ್ತರ ಪ್ರದೇಶದ (Uttar Pradesh) ಹತ್ರಾಸ್ (Hathras) ಜಂಕ್ಷನ್ ಪ್ರದೇಶದ ಸೇಲಂಪುರ ಗ್ರಾಮದಲ್ಲಿ ವಿವಾಹ ಸಮಾರಂಭ ನಡೆಯುತ್ತಿತ್ತು. ಈ ವೇಳೆ ವಧು, ವರ (Groom) ಪರಸ್ಪರ ಹಾರ ಹಾಕಿಕೊಂಡು ಸಂಬಂಧಿಕರಿಂದ ಆಶೀರ್ವಾದ ಪಡೆದಿದ್ದಾರೆ. ಅದಾದ ಬಳಿಕ ಅವರಿಬ್ಬರು ಫೋಟೋಗೆ ಪೋಸ್ ನೀಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ವಧುವಿಗೆ ರಿವಾಲ್ವರ್ ಅನ್ನು ನೀಡಿದ್ದಾನೆ. ಆ ರಿವಾಲ್ವರನ್ನು ತೆಗೆದುಕೊಂಡ ವಧು 5 ಸೆಕೆಂಡುಗಳಲ್ಲಿ ನಾಲ್ಕು ಗುಂಡು ಹಾರಿಸಿ ಸಂಭ್ರಮಿಸಿದ್ದಾಳೆ. ಈ ವೀಡಿಯೋವನ್ನು ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?: ಕಪ್ಪು ಶರ್ಟ್ ಧರಿಸಿದ್ದ ವ್ಯಕ್ತಿಯೊಬ್ಬ ವೇದಿಕೆಯ ಮೇಲೆ ಹತ್ತಿ ವಧುವಿನ ಬಳಿ ನಿಂತಿದ್ದಾನೆ. ಸ್ವಲ್ಪ ಸಮಯದ ನಂತರ ಆತ ತನ್ನ ಬಳಿಯಿದ್ದ ಲೋಡ್ ಮಾಡಿದ ರಿವಾಲ್ವರ್ (Revolver) ಹೊರತೆಗೆದು ವಧುವಿನ ಕೈಗೆ ಕೊಟ್ಟಿದ್ದಾನೆ. ನಂತರ ವರನ ಜೊತೆಗೆ ವೇದಿಕೆಯ ಮೇಲೆ ಕುಳಿತಿದ್ದ ವಧು ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆಸುತ್ತಾಳೆ. ಈ ವೇಳೆ ಗನ್‍ನಿಂದ ನಿರಂತರವಾಗಿ 4 ಬಾರಿ ಗುಂಡನ್ನು ಹಾರಿಸುತ್ತಾಳೆ. ಇದಾದ ಬಳಿಕ ವಧು ಆ ವ್ಯಕ್ತಿಗೆ ಗನ್‍ನನ್ನು ವಾಪಸ್ ನೀಡುತ್ತಾಳೆ. ಇದನ್ನೂ ಓದಿ: ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೂ ಮೊದಲೇ ಬಿಜೆಪಿ ಕಚೇರಿಗೆ ಬಿಗಿ ಭದ್ರತೆ

    ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪ್ರಕರಣ ದಾಖಲಾಗುತ್ತಿದ್ದಂತೆ ವಧು ನಾಪತ್ತೆ ಆಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಎಎಸ್‍ಪಿ ಮಾತನಾಡಿ, ವೀಡಿಯೋ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲೇ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು. ರಿವಾಲ್ವರ್ ಹಿಡಿದಿದ್ದ ವ್ಯಕ್ತಿಯನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಭಾರೀ ಟೀಕೆಯ ಬಳಿಕ ಬಾಲಕನ ಬಳಿ ಕ್ಷಮೆ ಕೇಳಿದ ದಲೈ ಲಾಮಾ

  • 10 ರೂ.ನ 30 ನೋಟು ಎಣಿಸಲು ಸಾಧ್ಯವಾಗದ ವರ- ಮದುವೆ ಕ್ಯಾನ್ಸಲ್ ಮಾಡಿದ ವಧು

    10 ರೂ.ನ 30 ನೋಟು ಎಣಿಸಲು ಸಾಧ್ಯವಾಗದ ವರ- ಮದುವೆ ಕ್ಯಾನ್ಸಲ್ ಮಾಡಿದ ವಧು

    ಲಕ್ನೋ: ಹಣ ಎಣಿಸಲು ವರನಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ವಧು ಮದುವೆಯನ್ನೇ ಕ್ಯಾನ್ಸಲ್ (Marriage Cancel) ಮಾಡಿದ ಘಟನೆ ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ತಾಳಿ ಕಟ್ಟುವ ಶಾಸ್ತ್ರದ ವೇಳೆ ವರನ ವರ್ತನೆಯಿಂದ ಅರ್ಚಕರಿಗೆ ಸಂಶಯ ಬಂದಿದೆ. ಅಲ್ಲದೆ ಅರ್ಚಕ ಈ ವಿಚಾರವನ್ನು ವಧುವಿನ ಮನೆಯವರಿಗೆ ತಿಳಿಸಿದ್ದಾರೆ. ಇದನ್ನು ಅರಿತ ವಧು ಧೈರ್ಯದಿಂದ ಹೆಜ್ಜೆ ಇಟ್ಟಿದ್ದಾಳೆ.

    ವಧುವಿನ ಮನೆಯವರು ವರನಿಗೆ ಪರೀಕ್ಷೆಯೊಂದನ್ನು ನೀಡುವುದಾಗಿ ಹೇಳಿತ್ತು. ಇದಕ್ಕೆ ವರನ ಕಡೆಯವರು ಒಪ್ಪಿಕೊಂಡರು. ಅಂತೆಯೇ ವಧುವಿನ ಮನೆಯವರು ವರನಿಗೆ 10 ರೂ.ವಿನ 30 ನೋಟುಗಳನ್ನು ಎಣಿಸುವಂತೆ ಕೊಟ್ಟಿದ್ದಾರೆ. ಈ ವೇಳೆ ವರಣಿಗೆ ಹಣ ಎಣಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ವರ ಮಾನಸಿಕ ಅಸ್ವಸ್ಥ ಎಂಬುದು ಬಯಲಾಯಿತು.

    ವರ ಮಾನಸಿಕ ಅಸ್ವಸ್ಥ ಎಂಬುದನ್ನು ವಧುವಿನ ಕಡೆಯವರಿಗೆ ಹೇಳದೆ ಮುಚ್ಚಿಟ್ಟಿದ್ದರು. ಹೀಗಾಗಿ ಕೋಪಗೊಂಡ ವಧು ತಕ್ಷಣವೇ ವೇದಿಕೆಯಿಂದ ಹೊರನಡೆದಿದ್ದಾಳೆ. ಇದು ಎರಡು ಕುಟುಂಬಗಳ ನಡುವೆ ಗೊಂದಲಕ್ಕೆ ಕಾರಣವಾಯಿತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳೀಯ ಪೊಲೀಸರನ್ನು ಕರೆಸಲಾಯಿತು. ಇದನ್ನೂ ಓದಿ: ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್

    ವರನ ಕುಟುಂಬವು ಅವನ ಮಾನಸಿಕ ಅಸ್ವಸ್ಥತೆಯನ್ನು ಮರೆಮಾಚಿದೆ ಎಂದು ವಧುವಿನ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೆ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಹೀಗಾಗಿ ಮದುವೆಯನ್ನೇ ಕ್ಯಾನ್ಸಲ್ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ವರ ಮತ್ತು ಅವರ ಕುಟುಂಬ ಬರಿಗೈಯಲ್ಲಿ ಮರಳಬೇಕಾಯಿತು.

    ಈ ಸಂಬಂಧ ವಧುವಿನ ಸಹೋದರ ಮಾಧ್ಯಮದವರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಮದುವೆಗಳು ಉತ್ತಮ ನಂಬಿಕೆಯಲ್ಲಿ ನಡೆಯುತ್ತವೆ. ಅಲ್ಲದೆ ಈ ಯುವಕ ಬ್ರೋಕರ್ ನ ಹತ್ತಿರದ ಸಂಬಂಧಿಯಾಗಿದ್ದರು. ಹಾಗಾಗಿ ಆತನನ್ನು ನಂಬಿ ನಾವು ಭೇಟಿಯಾಗಿರಲಿಲ್ಲ. ಆದರೆ ಮದುವೆ ದಿನ ಅರ್ಚಕರು, ವರನ ವಿಚಿತ್ರ ವರ್ತನೆಯ ಬಗ್ಗೆ ನಮಗೆ ತಿಳಿಸಿದಾಗ ವಿಚಾರ ಬೆಳಕಿಗೆ ಬಂತು. ಹೀಗಾಗಿ ನನ್ನ ಸಹೋದರಿ ಕೂಡ ಅವನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ತಿಳಿಸಿದರು.

  • ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ

    ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ

    ಭುವನೇಶ್ವರ: ಚಾಲಕರ ಮುಷ್ಕರದ (Driver Strike) ಹಿನ್ನೆಲೆ ವಾಹನದ ವ್ಯವಸ್ಥೆ ಮಾಡಲಾಗದೇ ಮದುವೆ ದಿಬ್ಬಣವೊಂದು ರಾತ್ರಿಯಿಡೀ ಬರೋಬ್ಬರಿ 28 ಕಿ.ಮೀ ನಡೆದುಕೊಂಡೇ ಹೋಗಿ ವಧು (Bride) ಮನೆ ಸೇರಿರುವ ಘಟನೆ ಒಡಿಶಾದ (Odisha) ರಾಯಗಢ ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ, ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ವರ ಸೇರಿದಂತೆ ಇಡೀ ಮದುವೆ ದಿಬ್ಬಣ ಗುರುವಾರ ರಾತ್ರಿಯಿಡೀ ನಡೆದುಕೊಂಡೇ ಹೋಗಿ ದಿನಳಪಾಡು ಗ್ರಾಮಕ್ಕೆ ತಲುಪಿದೆ. ಇದಾದ ಬಳಿಕ ಶುಕ್ರವಾರ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

     

    ವರ (Groom), ಕೆಲ ಮಹಿಳೆಯರು ಹಾಗೂ ಅವರ ಕುಟುಂಬದ ಸದಸ್ಯರು ರಾತ್ರಿಯಿಡೀ ನಡೆದುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಚಾಲಕರ ಮುಷ್ಕರದಿಂದಾಗಿ ಬೇರೆ ಯಾವುದೇ ಸಾರಿಗೆ ಲಭ್ಯವಿಲ್ಲದ ಕಾರಣ ರಾತ್ರಿಯಿಡೀ ನಡೆದುಕೊಂಡು ಹೋಗಿ ವಧು ಮನೆಯನ್ನು ಸೇರಿದ್ದೇವೆ. ನಮಗೆ 28 ಕಿ.ಮೀ ನಡೆದುಕೊಂಡು ಹೋಗುವುದರ ಹೊರತು ಬೇರೆ ಯಾವುದೇ ದಾರಿಯಿರಲಿಲ್ಲ ಎಂದು ವರನ ಕುಟುಂಬದವರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Bengaluru-Mysuru Expressway ನಲ್ಲಿ ಬೇಸಿಗೆ ಮಳೆಗೇ ಅವಾಂತರ- ವಾಹನ ಸವಾರರ ಪರದಾಟ

    ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಹಾಗೂ ಇತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕ ಏಕತಾ ಮಹಾಸಂಘ ಬುಧವಾರದಿಂದ ಒಡಿಶಾ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ. ವಾಣಿಜ್ಯ ವಾಹನ ಚಾಲಕರು ನಡೆಸುತ್ತಿದ್ದ ಮುಷ್ಕರಕ್ಕೆ ರಾಜ್ಯ ಸರ್ಕಾರ ಅವರ ಎಲ್ಲಾ ಬೇಡಿಕೆಗಳನ್ನು 90 ದಿನಗಳ ಒಳಗಾಗಿ ಈಡೇರಿಸುವುದಾಗಿ ಭರವಸೆ ನೀಡಿದೆ. ಈ ಬಳಿಕ ಮುಷ್ಕರವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

  • ಕಂಠಪೂರ್ತಿ ಕುಡಿದು ತನ್ನ ಮದುವೆಗೆ ಹೋಗುವುದನ್ನೇ ಮರೆತ ವರ – ನೀನು ಬೇಡ ಎಂದ ವಧು

    ಕಂಠಪೂರ್ತಿ ಕುಡಿದು ತನ್ನ ಮದುವೆಗೆ ಹೋಗುವುದನ್ನೇ ಮರೆತ ವರ – ನೀನು ಬೇಡ ಎಂದ ವಧು

    ಪಾಟ್ನಾ: ಬಿಹಾರದ (Bihar) ವರನೊಬ್ಬ (Groom) ಕಂಠಪೂರ್ತಿ ಕುಡಿದು ಮರುದಿನ ಮದುವೆಗೆ (Wedding) ಹಾಜರಾಗಲು ಮರೆತಿರುವ ವಿಲಕ್ಷಣ ಘಟನೆ ನಡೆದಿದೆ.

    ಭಾಗಲ್ಪುರದ ಸುಲ್ತಂಗಂಜ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆಯ ಹಿಂದಿನ ರಾತ್ರಿ ಖುಷಿಯಲ್ಲಿ ವರ ಮದ್ಯ ಸೇವಿಸಿದ್ದ. ಆದರೆ ಮರುದಿನ ಮದ್ಯದ ಅಮಲಿನಲ್ಲಿ ತನ್ನ ಮದುವೆಯಿದೆ ಎಂಬುದನ್ನ ಮರೆತು ಮದುವೆಗೆ ಗೈರಾಗಿದ್ದಾನೆ.

    ಮದುವೆ ಸ್ಥಳದಲ್ಲಿ ವಧು ಮತ್ತು ಆಕೆಯ ಕುಟುಂಬದವರು ವರನಿಗಾಗಿ ಕಾಯುತ್ತಿದ್ದರೂ ಆತ ಬಂದಿರಲಿಲ್ಲ. ಅದಾದ ಒಂದು ದಿನದ ನಂತರ ವರನಿಗೆ ಪ್ರಜ್ಞೆ ಬಂದು ವಧುವಿನ ಮನೆಗೆ ಬಂದಿದ್ದಾನೆ. ಈ ವೇಳೆ ವಧು ನನಗೆ ನೀನು ಬೇಡ ಎಂದು ಮದುವೆಯಾಗಲು ನಿರಾಕರಿಸಿದ್ದಾಳೆ. ಇದನ್ನೂ ಓದಿ: ಅಜ್ಜನಿಂದ ಮೊಮ್ಮಗಳ ಮೇಲೆ ರೇಪ್ – ಯಾರಿಗೂ ಹೇಳ್ಬೇಡ ಎಂದು 10 ರೂ. ಕೊಟ್ಟ

    ಅಷ್ಟೇ ಅಲ್ಲದೇ ತನ್ನ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾಳೆ. ವಧುವಿನ ಮನೆಯವರು ಕೂಡ ವರನ ಕುಟುಂಬಕ್ಕೆ ಮದುವೆಯ ವ್ಯವಸ್ಥೆಗೆ ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದ್ದಾರೆ.

    ಈ ವೇಳೆ ವಧುವಿನ ಸಂಬಂಧಿಕರು ವರನ ಕಡೆಯವರನ್ನು ಒತ್ತೆಯಾಳಾಗಿ ಇರಿಸಿದ್ದರು. ಪೊಲೀಸರು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಇತ್ಯರ್ಥಗೊಳಿಸಿದರು. ಇದನ್ನೂ ಓದಿ: ಟ್ರ್ಯಾಕ್ಟರ್, ಬರೋಬ್ಬರಿ 3 ಕೋಟಿ ಹಣವನ್ನೇ ಗಿಫ್ಟ್ ಪಡೆದ ವಧು!

  • 12ನೇ ತರಗತಿಯಲ್ಲಿ ವಧುವಿಗೆ ಕಡಿಮೆ ಮಾರ್ಕ್ಸ್‌ – ಮದುವೆ ರದ್ದು ಮಾಡಿದ ವರ

    12ನೇ ತರಗತಿಯಲ್ಲಿ ವಧುವಿಗೆ ಕಡಿಮೆ ಮಾರ್ಕ್ಸ್‌ – ಮದುವೆ ರದ್ದು ಮಾಡಿದ ವರ

    ಲಕ್ನೋ: ವಧುವೊಬ್ಬಳು (Bride) 12ನೇ ತರಗತಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ಕಾರಣಕ್ಕೆ ವರನೊಬ್ಬ (Groom) ಮದುವೆಯಾಗಲು ನಿರಾಕರಿಸಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಉತ್ತರಪ್ರದೇಶದ ಕನೌಜ್ ಜಿಲ್ಲೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ವಧುವಿನ ಕುಟುಂಬಸ್ಥರು ವರದಕ್ಷಿಣೆ (Dowry) ಬೇಡಿಕೆ ಈಡೇರಿಸದ ಕಾರಣ ವರನ ಕುಟುಂಬವು ಮದುವೆಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದೆ.

    ಆದರೆ 12ನೇ ತರಗತಿ ಅಂಕಪಟ್ಟಿಯಲ್ಲಿ ಬಾಲಕಿಗೆ ಕಡಿಮೆ ಅಂಕ ಬಂದಿದೆ. ಇದರಿಂದಾಗಿ ಮದುವೆಯನ್ನು ರದ್ದು ಮಾಡಲಾಗಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ.

    ಬಾಗನವಾ ಗ್ರಾಮದ ರಾಮಶಂಕರ್ ಎಂಬುವವರ ಪುತ್ರ ಸೋನು ಎಂಬಾತನೊಂದಿಗೆ ಸೋನಿ ಎಂಬಾಕೆಯ ಮದುವೆಯನ್ನು ನಿಶ್ಚಯಿಸಲಾಗಿತ್ತು. ವಧುವಿನ ಕುಟುಂಬಸ್ಥರು 60 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿ ವರನಿಗೆ 15 ಸಾವಿರ ಮೌಲ್ಯದ ಬಂಗಾರದ ಉಂಗುರ ಕೂಡ ನೀಡಿ ಮದುವೆ ಸಮಾರಂಭ ಏರ್ಪಡಿಸಿದ್ದರು.

    ಮರುದಿನವೇ ವರನ ಮನೆಯವರು ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ಆಗದಿದ್ದರಿಂದ ವರನ ಕುಟುಂಬವು ಹುಡುಗಿಗೆ 12ನೇ ತರಗತಿಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮದುವೆಯನ್ನು ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬಾಡಿಗೆ ಮನೆಗಳಿಗೆ ಫುಲ್ ಡಿಮ್ಯಾಂಡ್: ಹಿಂದೆ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ?

    ವಧುವಿನ ಕುಟುಂಬವು ತಮ್ಮ ಸಂಬಂಧಿಕರ ಮೂಲಕ ವರನ ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ ವರನ ಕುಟುಂಬವು ವರದಕ್ಷಿಣೆ ನೀಡುವಂತೆ ಪಟ್ಟು ಹಿಡಿದರು. ಇದರಿಂದಾಗಿ ವಧುವಿನ ತಂದೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಮೀಸೆಗೆ ಹೆದರಿದ್ರಾ ಜಿ.ಪರಮೇಶ್ವರ್?

  • ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ದಿಸ್ಪುರ್: ವಧು-ವರರು ಕೊನೇ ಕ್ಷಣದಲ್ಲಿ ಮದುವೆಯನ್ನು (Marriage) ರದ್ದು ಮಾಡುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲಿಯೇ ಭಿನ್ನಾಭಿಪ್ರಾಯಗಳು ಉಂಟಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಸಂಬಂಧಗಳು ಮುರಿದೂ ಬೀಳುತ್ತವೆ. ಇಲ್ಲೊಬ್ಬ ವರ (Groom) ಕಂಠಪೂರ್ತಿ ಕುಡಿದು (Drunk) ಬಂದು ಮಂಟಪದಲ್ಲೇ ಮಲಗಿಬಿಟ್ಟ ಅಂತ ವಧು (Bride) ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ನಡೆದಿದೆ.

    ಅಸ್ಸಾಂನ (Assam) ನಲ್ಬರಿ ಜಿಲ್ಲೆಯಲ್ಲಿ ವರನೊಬ್ಬ ಮದ್ಯ ಸೇವಿಸಿ, ತನ್ನ ಮದುವೆಯ ವೇಳೆಯೇ ಮಂಟಪದಲ್ಲಿ ಮಲಗಿಬಿಟ್ಟಿದ್ದಾನೆ. ಪಂಡಿತರು ಹೇಳಿಕೊಡುತ್ತಿರುವ ಮಂತ್ರವನ್ನು ತನ್ನ ಬಾಯಿಂದ ಹೇಳಲೂ ಸಾಧ್ಯವಾಗದೇ ಆತ ಅಲ್ಲೇ ಮಲಗಿಬಿಟ್ಟಿದ್ದಾನೆ. ಇದರಿಂದ ವಧು ತನ್ನ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.

     

    ವರನನ್ನು ನಲ್ಬರಿ ನಗರದ ನಿವಾಸಿ ಪ್ರಸೇನಜಿತ್ ಹಲೋಯ್ ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮಗಳು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ನಮ್ಮ ಕಡೆಯಿಂದ ಎಲ್ಲಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ನಾವು ಮದುವೆ ಕಾರ್ಯಕ್ರಮಗಳನ್ನು ಚೆನ್ನಾಗಿಯೇ ನೆರವೇರಿಸಲು ಪ್ರಯತ್ನಿಸಿದ್ದೇವೆ. ಆದರೆ ವರ ಕಂಠಪೂರ್ತಿ ಕುಡಿದು ಮಂಟಪದಲ್ಲಿಯೇ ಮಲಗಿಬಿಟ್ಟಿದ್ದರಿಂದ ಮದುವೆ ರದ್ದುಗೊಳಿಸಲು ನಿರ್ಧರಿಸಬೇಕಾಯಿತು ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾದ ಮಹಿಳೆ – 24 ಗಂಟೆಯಲ್ಲಿ ವಿಚ್ಛೇದನ ಘೋಷಣೆ

     

    ವರ ಕುಡಿದ ನಶೆಯಲ್ಲಿ ತೂರಾಡುವುದನ್ನು ಕಂಡು ವಧು ಮಂಟಪದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಾಳೆ. ಬಳಿಕ ವರ ಮಂತ್ರಗಳನ್ನು ಉಚ್ಛರಿಸಲಾಗದೇ ಮಲಗಿದ್ದಾನೆ. ವರನ ಕಡೆಯವರು ಹೆಚ್ಚಿನ ಮಂದಿ ಕುಡಿದುಕೊಂಡೇ ಮದುವೆಗೆ ಬಂದಿದ್ದರು. ಬಳಿಕ ಮದುವೆಯನ್ನು ಕ್ಯಾನ್ಸಲ್ ಮಾಡಿ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದ್ದಾರೆ.

     

    ಲಕ್ಷಾಂತರ ರೂ. ಖರ್ಚು ಮಾಡಿ ವಧುವಿನ ಕಡೆಯವರು ಮದುವೆಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದರೆ, ವರನ ಕಡೆಯವರು ಈ ರೀತಿ ಮದ್ಯ ಸೇವಿಸಿ ಅವಮಾನ ಮಾಡಿದ್ದಾರೆ. ನಲ್ಬರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮದುವೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

  • ವರದಕ್ಷಿಣೆಯಾಗಿ ಹಳೆಯ ಬೆಡ್ ನೀಡಿದ್ದಕ್ಕೆ ಮದುವೆ ಕ್ಯಾನ್ಸಲ್ ಮಾಡ್ಕೊಂಡ ವರ!

    ವರದಕ್ಷಿಣೆಯಾಗಿ ಹಳೆಯ ಬೆಡ್ ನೀಡಿದ್ದಕ್ಕೆ ಮದುವೆ ಕ್ಯಾನ್ಸಲ್ ಮಾಡ್ಕೊಂಡ ವರ!

    ಹೈದರಾಬಾದ್: ಇತ್ತೀಚೆಗೆ ಸಣ್ಣ-ಪುಟ್ಟ ವಿಚಾರಕ್ಕೆಲ್ಲ ಮದುವೆಗಳು ಮುರಿದಿರುವುದನ್ನು ನಾವು ಕಾಣುತ್ತೇವೆ. ಅಂತೆಯೇ ಹೈದರಾಬಾದ್‍ನಲ್ಲಿ ವರನೊಬ್ಬ ತನಗೆ ವಧು ಕಡೆಯವರು ವರದಕ್ಷಿಣೆ ಎಂದು ಹಳೆಯ ಬೆಡ್ (Old Bed) ನೀಡಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ (Marriage Cancel) ಮಾಡಿಕೊಂಡ ಪ್ರಸಂಗ ನಡೆದಿದೆ.

    ಇತ್ತ ಮದುವೆ ಮುರಿದ ವರನ ವಿರುದ್ಧ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವರ ಮೋಸ (Groom Cheating) ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಮಹಿಳೆಗೆ ಆ್ಯಸಿಡ್ ಕುಡಿಸಿದ ಅತ್ತೆ

    ಏನಿದು ಘಟನೆ..?: ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುವಕನ ಜೊತೆ ಬಂದ್ಲಗುಡ ನಿವಾಸಿ ಯುವತಿಯ ಮದುವೆ ನಿಶ್ಚಯವಾಗಿತ್ತು. ಅಲ್ಲದೆ ಫೆಬ್ರವರಿ 19 ಕ್ಕೆ ಮದುವೆ ದಿನಾಂಕವೂ ನಿಗದಿಯಾಗಿತ್ತು. ವಿಶೇಷ ಅಂದರೆ ಇಬ್ಬರಿಗೂ ಇದು ಎರಡನೇ ಮದುವೆಯಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಪೀಠೋಪಕರಣಗಳನ್ನು ವರದಕ್ಷಿಣೆಯಾಗಿ ನೀಡುವುದಾಗಿ ವಧುವಿನ ತಂದೆ ಮೊದಲೇ ಹೇಳಿದ್ದಾರೆ. ಈ ಎಲ್ಲಾ ಷರತ್ತುಗಳನ್ನು ವರನೂ ಕೂಡ ಒಪ್ಪಿದ್ದು, ಬೆಡ್ ಮಾತ್ರ ಹೊಸದಾಗಿರಬೇಕು ಎಂದು ಹೇಳಿದ್ದನು.

    ಇತ್ತ ಮದುವೆ ದಿನ ವಧುವಿನ ಮನೆಯವರು ಪೀಠೋಪಕರಣಗಳನ್ನು ವರನ ಮನೆಗೆ ಕಳುಹಿಸಿದ್ದಾರೆ. ಈ ವೇಳೆ ಬೆಡ್ ಕೂಡ ಕಳುಹಿಸಿದ್ದು, ಆದರೆ ಬೆಡ್ ಸರಿಪಡಿಲು ಹೋದಾಗ ಅದು ಸ್ವಲ್ಪ ಹರಿದು ಹೋಯಿತು. ಮದುವೆಯ ದಿನದಂದು ವರ ಮತ್ತು ಅವರ ಮನೆಯವರು ಬರಲಿಲ್ಲ. ಇನ್ನು ವಧುವಿನ ಮನೆಯವರು ಅವರ ಮನೆಗೆ ಹೋದಾಗ, ಅವರು ಹಳೆಯ ಹಾಸಿಗೆಯ ಬಗ್ಗೆ ಆಕೆಯ ತಂದೆಗೆ ತಿಳಿಸಿ ಜಗಳವಾಡಿದರು. ಅಲ್ಲದೆ ಅನುಚಿತವಾಗಿ ವರ್ತಿಸಿದರು.

    ಮದುವೆಯ ಔತಣಕ್ಕೆ ಸಕಲ ವ್ಯವಸ್ಥೆ ಮಾಡಿ ಬಂಧುಗಳು, ಅತಿಥಿಗಳು ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ವರನ ಬಳಿ ಮನವಿ ಮಾಡಿದರೂ ಆತ ಮದುವೆಗೆ ಬರಲು ನಿರಾಕರಿಸಿದ್ದಾನೆ. ಹಳೆಯ ಹಾಸಿಗೆಯನ್ನು ನೀಡಿದ್ದಕ್ಕಾಗಿ ವರ ಸಿಟ್ಟುಮಾಡಿಕೊಂಡಿದ್ದಾನೆ. ಅಲ್ಲದೆ ಹೊಸ ಹಾಸಿಗೆ ತರುವಂತೆ ತಾಕೀತು ಮಾಡಿದ್ದು, ಮದುವೆಯನ್ನೇ ಕ್ಯಾನ್ಸಲ್ ಮಾಡಿಕೊಂಡಿದ್ದಾನೆ.

    ಇತ್ತ ವರ ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಕ್ಕಾಗಿ ವಧುವಿನ ತಂದೆ ಪೊಲೀಸರಿಗೆ ವರ ಮೋಸ ಮಾಡಿರುವುದಾಗಿ ಕಂಪ್ಲೆಂಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಕೊಂದು ಬ್ಯಾರಲ್‍ಗೆ ತುಂಬಿದ್ದವ ಅರೆಸ್ಟ್