Tag: groom

  • ತಾಳಿ ಕಟ್ಟುವಾಗ ವರನ ಈ ರಹಸ್ಯ ತಿಳಿದು ಮದುವೆಯಿಂದ ಹಿಂದೆ ಸರಿದ ವಧು!

    ತಾಳಿ ಕಟ್ಟುವಾಗ ವರನ ಈ ರಹಸ್ಯ ತಿಳಿದು ಮದುವೆಯಿಂದ ಹಿಂದೆ ಸರಿದ ವಧು!

    ನವದೆಹಲಿ: ಇನ್ನೇನು ಮದುವೆ ಆಗಬೇಕೆನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಬೇಡ ಎಂದು ಹಿಂದೆ ಸರಿದಿದ್ದಾಳೆ. ಕಾರಣ ತಾಳಿ ಕಟ್ಟುವ ವೇಳೆ ವಧುವಿಗೆ ವರನ ಒಂದು ಹಲ್ಲು ಮುರಿದಿದ್ದು ಕಾಣಿಸಿದ್ದು, ಇದ್ರಿಂದಾಗಿ ನನಗೆ ಈ ಯುವಕನ ಮದುವೆ ಆಗಲು ಇಷ್ಟವಿಲ್ಲ ಎಂದು ಮದುವೆ ನಿರಾಕರಿಸಿದ್ದಾಳೆ.

    ಇದನ್ನೂ ಓದಿ: ಆರತಕ್ಷತೆ ವೇಳೆ ಹೀಲ್ಡ್ ಚಪ್ಪಲಿ ಧರಿಸಿ, ಸುಸ್ತಾಗಿ ಬಿದ್ದ ವಧು- ಮದುವೆ ಕ್ಯಾನ್ಸಲ್ !  

    ರಾಬರ್ಟ್ ಸರ್‍ಗಂಜ್‍ನ ಕೊತವಾಲಿಯ ನಿವಾಸಿಗಳಾದ ವಧು-ವರರಿಗೆ ದೆಹಲಿಯ ಸೋನಭದ್ರ ಎಂಬಲ್ಲಿ ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿತ್ತು. ವರ ಇನ್ನೇನು ವಧುವಿಗೆ ತಾಳಿ ಕಟ್ಟಿಯೇ ಬಿಡುತ್ತಾನೆ ಅಂದಾಗ ವಧುವಿಗೆ ತನ್ನ ಭಾವಿ ಪತಿಗೆ ಒಂದು ಹಲ್ಲು ಇಲ್ಲದಿರುವುದು ಕಾಣಿಸಿದೆ.

    ಇದನ್ನೂ ಓದಿ: ವಧು ನಾಪತ್ತೆ: ಮದುವೆ ಮುಂದೂಡಲಾಗಿದೆ ಎಂದು ಮಂಟಪದ ಮುಂದೆ ಬೋರ್ಡ್ 

    ಇದ್ರಿಂದ ಆಕ್ರೋಶಗೊಂಡ ವಧು ಈ ಮದುವೆ ಬೇಡ ಎಂದು ಮಂಟಪದಿಂದ ಹೊರಬಂದಿದ್ದಾಳೆ. ಈ ವೇಳೆ ಮದುವೆಗೆ ಬಂದಿದ್ದ ಸಂಬಂಧಿಗಳು ಮತ್ತು ಪೋಷಕರು ಯುವತಿಯನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನಿಸಿದ್ರೂ, ವಧು ಮಾತ್ರ ಒಪ್ಪಿಗೆ ನೀಡಿಲ್ಲ.

    ಇದನ್ನೂ ಓದಿ: ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು!  

    ಸುಳ್ಳು ಹೇಳಿದ್ರು: ಇನ್ನು ಮದುವೆಗೆ ಮುಂಚೆ ಯುವಕ 10ನೇ ತರಗತಿವರೆಗೆ ಓದಿಕೊಂಡಿದ್ದಾನೆ ಎಂದು ಯುವತಿಗೆ ಹೇಳಲಾಗಿತ್ತು. ಆದ್ರೆ ಈ ಗಲಾಟೆಯಲ್ಲಿ ವರ ಕೇವಲ 5ನೇ ತರಗತಿ ಮಾತ್ರ ಓದಿದ್ದು ಎಂಬ ಸತ್ಯ ಬೆಳಕಿಗೆ ಬಂದಿದೆ.

    ಒಟ್ಟಿನಲ್ಲಿ ವರನ ಕಡೆಯವರ ಸುಳ್ಳುಗಳಿಂದಾಗಿ ಮದುವೆ ಮುರಿದು ಬಿದ್ದಿದ್ದು, ವಧುವಿನ ತಂದೆ ವರನಿಗೆ ತಿಲಕ ಹಚ್ಚುವ ವೇಳೆ ನೀಡಿದ್ದ 30 ಸಾವಿರ ರೂ. ಹಣ ಹಿಂದುರುಗಿಸುವಂತೆ ಕೇಳಿದ್ದಾರೆ. ಆದ್ರೆ ವರನ ತಂದೆ ಮಾತ್ರ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.

     

  • ಮದುವೆಯ ದಿನ ವರ ನಾಗಿಣಿ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆಯೇ ಕ್ಯಾನ್ಸಲ್

    ಮದುವೆಯ ದಿನ ವರ ನಾಗಿಣಿ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆಯೇ ಕ್ಯಾನ್ಸಲ್

    ಶಹಜಹಾನ್‍ಪುರ: ಮದುವೆಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವರ ತನ್ನ ಮದುವೆಯಲ್ಲಿ ನಾಗಿಣಿ ಡ್ಯಾನ್ಸ್ ಮಾಡಿದ್ದರಿಂದ ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ಉತ್ತರಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

    ಹೌದು. ಪ್ರಿಯಾಂಕಾ ತ್ರಿಪಾಠಿ ಮತ್ತು ಅನುಭವ್ ಮಿಶ್ರಾ ಅವರ ಮದುವೆಯನ್ನು ಕುಟುಂಬಸ್ಥರು ನಿಗದಿ ಮಾಡಿದ್ದರು. ಎಲ್ಲಾ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರನು ಕುಡಿದ ಸ್ಥಿತಿಯಲ್ಲಿ ನಾಗಿಣಿ ಡ್ಯಾನ್ಸ್ ಮಾಡಿ ದೊಡ್ಡ ಯಡವಟ್ಟು ಮಾಡಿದ್ದಾನೆ.

    ವರ ಅನುಭವ್ ಮಿಶ್ರಾ ಮಾಡಿದ ನಾಗಿಣಿ ಡ್ಯಾನ್ಸ್‍ನಿಂದ ಮುಜುಗರವಾದ ಕಾರಣ ಇನ್ನೇನು ಮದುವೆಯ ಶಾಸ್ತ್ರಗಳು ಆರಂಭವಾಗಬೇಕಿದ್ದ ಕೆಲವೇ ಸಮಯದ ಮುಂಚೆ ವಧು ಮದುವೆ ನಿರಾಕರಿಸಿದ್ದಾಳೆ.

    ವರನ ಸಂಬಂಧಿಕರು ಹಾಗೂ ಸ್ನೇಹಿತರು ವಧು ಪ್ರಿಯಾಂಕಾಳ ಮನವೊಲಿಸಲು ಪ್ರಯತ್ನಿಸಿದರಾದ್ರೂ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ವಧುವಿನ ತಂದೆಯೂ ಕೂಡ ಮಗಳ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರ ಮಾಡಿದ ಕೆಲಸದಿಂದ ನಿಜಕ್ಕೂ ಮುಜುಗರ ಅನುಭವಿಸಬೇಕಾಯ್ತು. ಆದ್ದರಿಂದ ನಾನು ನನ್ನ ಮಗಳ ಪರ ನಿಲ್ಲಬೇಕಾಯ್ತು ಎಂದು ಅವರು ಹೇಳಿದ್ದಾರೆ.

    ಕೊನೆಗೆ ಪ್ರಿಯಾಂಕಾ ಮರುದಿನವೇ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

  • ಕೊನೆ ಕ್ಷಣದಲ್ಲಿ ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ!

    ಕೊನೆ ಕ್ಷಣದಲ್ಲಿ ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ!

    ವೆಲ್ಲೂರು:ನಿಶ್ಚಯವಾದ ಬಳಿಕ, ಮಂಟಪದಲ್ಲಿಯೇ ಮುರಿದ ಮದುವೆ, ವಧು- ವರರು ಮಂಟಪಕ್ಕೆ ಬರಲಾರದೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ. ಆದ್ರೆ ಮಂಟಪದಲ್ಲಿಯೇ ಅಣ್ಣನ ವಧುವಿಗೆ ತಮ್ಮ ತಾಳಿ ಕಟ್ಟಿದ ಅಚ್ಚರಿಯ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ.

    ಹೌದು. ವೆಲ್ಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯ ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ನಡೆಯುವ ಶುಭಕಾರ್ಯಕ್ಕೆ ಬಂಧು-ಬಾಂಧವರೆಲ್ಲಾ ಸೇರಿದ್ದರು. ವರ ಇನ್ನೇನು ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಲು ತಯಾರಾಗಿದ್ದನು. ಅಂತೆಯೇ ವಧುವರರನ್ನು ಹಸೆಮಣೆ ಮೇಲೆ ಕೂರಿಸಿ ಪುರೋಹಿತರು ವೇದ ಮಂತ್ರ ಉಚ್ಚರಿಸುತ್ತಿದ್ದರು. ಬಳಿಕ ವರನ ಕೈಯಲ್ಲಿ ತಾಳಿ ಕೊಟ್ಟು ವಧುವಿನ ಕೊರಳಿಗೆ ಕಟ್ಟುವಂತೆ ಸೂಚಿಸಿದ್ರು. ಹೀಗಾಗಿ ಮದುಮಗ ತಾಳಿ ಕಟ್ಟಲು ವಧುವಿನ ಬಳಿ ಹೋಗುತ್ತಿದ್ದಂತೆಯೇ ಅಲ್ಲೇ ಇದ್ದ ಮದುಮಗನ ತಮ್ಮ ಅಣ್ಣನ ಸೈಡಿಗೆಳೆದು ತಾಳಿ ಕಸಿದುಕೊಂಡು ತಾನೇ ವಧುವಿಗೆ ತಾಳಿ ಕಟ್ಟಿದ್ದಾನೆ.

    ಅಣ್ಣ ಮದುವೆಯಾಗಬೇಕಿದ್ದ ಯುವತಿಗೆ ಹೀಗೆ ತಮ್ಮ ತಾಳಿ ಕಟ್ಟಿದ್ದರಿಂದ ಅಲ್ಲಿದ್ದವರೆಲ್ಲಾ ಒಂದು ಬಾರಿ ಅವಕ್ಕಾದ್ರು. ಆದ್ರೆ ಈ ಘಟನೆಯ ಅಸಲಿ ವಿಷಯವೇನೆಂದರೆ ವರನ ತಮ್ಮ ಹಾಗೂ ವಧು ಮೊದಲೇ ಪ್ರೀತಿಸಿದ್ದರು. ಆದ್ರೆ ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇತ್ತ ಅಣ್ಣ ಅದೇ ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ತಾನು ಪ್ರೀತಿಸಿದ ಯುವತಿ ಅಣ್ಣನ ಮಡದಿಯಾಗುವುದನ್ನು ಸಹಿಸಲಾರದ ತಮ್ಮ ಅಣ್ಣನನ್ನು ತಳ್ಳಿ ತಾನೇ ತಾಳಿ ಕಟ್ಟಿದ್ದಾನೆ.

    ಈ ಮದುವೆಗೆ ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮದುವೆಯಾಗಲು ಬಂದಿದ್ದ ವರ ಮಾತ್ರ ಕಣ್ಣೀರುಡುತ್ತಾ ಮಂಟಪದಿಂದ ಹೊರನಡೆದಿದ್ದಾನೆ.

  • ಒಂದೂವರೆ ವರ್ಷದ ಪ್ರೀತಿ ಬಳಿಕ ಮದುವೆ – ಮೊದಲ ರಾತ್ರಿಯ ಮರುದಿನವೇ ಪತಿ ಪರಾರಿ

    ಒಂದೂವರೆ ವರ್ಷದ ಪ್ರೀತಿ ಬಳಿಕ ಮದುವೆ – ಮೊದಲ ರಾತ್ರಿಯ ಮರುದಿನವೇ ಪತಿ ಪರಾರಿ

    ತುಮಕೂರು: ಒಂದು ವರ್ಷ ಪ್ರೀತಿಸಿ ಮದುವೆಯಾದ ಮೊದಲ ರಾತ್ರಿ ಮರುದಿನವೇ ವರ ಪರಾರಿಯಾದ ಘಟನೆಯೊಂದು ತುಮಕೂರಿನ ಶಾಂತಿನಗರದಲ್ಲಿ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಮಂಚೇಗೌಡನಹಳ್ಳಿಯ ಶ್ರೀನಿವಾಸ್ ಎಂಬಾತನೇ ಪರಾರಿಯಾಗಿದ್ದು, ಪೊಲೀಸರು ಈಗ ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

    ಏನಿದು ಪ್ರಕರಣ?: ಶಾಂತಿನಗರದ ಯುವತಿ ಹಾಗೂ ಮಂಚೇಗೌಡನಹಳ್ಳಿಯ ಶ್ರೀನಿವಾಸ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.

    ಆದ್ರೆ ಇವರಿಬ್ಬರ ಮದುವೆಗೆ ಯುವಕನ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇವರಿಬ್ಬರು ಸ್ಥಳೀಯ ದೇವಸ್ಥಾನವೊಂದರಲ್ಲಿ ಏಪ್ರಿಲ್ 20 ರಂದು ಮದುವೆಯಾಗಿದ್ದಾರೆ. ಅದೇ ದಿನ ರಾತ್ರಿ ಯುವತಿಯ ಮನೆಯಲ್ಲಿ ಪ್ರಸ್ತದ ಶಾಸ್ತ್ರವೂ ಮುಗಿದಿದೆ. ಆದ್ರೆ ಬೆಳಗ್ಗೆ ಎದ್ದ ವರ ಶ್ರೀನಿವಾಸ್ ವಿವಾಹ ನೋಂದಣಿ ಮಾಡಲು ದಾಖಲೆಪತ್ರ ತರ್ತಿನಿ ಎಂದು ಹೊರಟವನು ವಾಪಸ್ ಬರಲೇ ಇಲ್ಲ.

    ಇತ್ತ ಪತಿಯ ಬರುವಿಕೆಗಾಗಿ ಕಾಯುತ್ತಿದ್ದ ಯುವತಿ ಸಾಕಷ್ಟು ಹುಡುಕಾಟ ನಡೆಸಿದ್ದು, ಸಿಗದೇ ಇದ್ದಾಗ ಕೊನೆಗೆ ಮೇ 25ರಂದು ಮಹಿಳಾ ಠಾಣೆಯಲ್ಲಿ ಪತ ನಾಪತ್ತೆಯಾಗಿರೋ ಗಂಡ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ಶ್ರೀನಿವಾಸ್ ಗಾಗಿ ಹುಡುಕಾಟ ಆರಂಭಿಸಿದ್ದಾರೆ.

  • ವಧುವಿನ ಬಗ್ಗೆ ಈ ವಿಷಯ ಕೇಳಿ ಮಂಟಪದಿಂದ ಕಾಲ್ಕಿತ್ತಿದ್ದ- ಕೊನೆಗೆ ಆಕೆಯನ್ನೇ ಮದ್ವೆಯಾದ!

    ವಧುವಿನ ಬಗ್ಗೆ ಈ ವಿಷಯ ಕೇಳಿ ಮಂಟಪದಿಂದ ಕಾಲ್ಕಿತ್ತಿದ್ದ- ಕೊನೆಗೆ ಆಕೆಯನ್ನೇ ಮದ್ವೆಯಾದ!

    ಮಹೋಬಾ: ವಧುವಿನ ಮನೆಯಲ್ಲಿ ಮದುವೆಗೆ ಎಲ್ಲ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು. ಕಲ್ಯಾಣ ಮಂಟಪಕ್ಕೆ ವರನು ಕುದುರೆ ಮೇಲೆ ಬಂದು ಎಲ್ಲವೂ ಕೊನೆಯ ಹಂತ ತಲುಪಿತ್ತು. ಆದರೆ ಕೊನೆ ಗಳಿಗೆಯಲ್ಲಿ ವರ ಮಾತ್ರ ವಧುವಿನ ಬಗ್ಗೆ ಒಂದು ವಿಷಯ ಕೇಳಿ ನನಗೆ ಮದುವೆ ಬೇಡ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದ. ಆದರೆ ಕೊನೆಗೆ ತನ್ನ ತಪ್ಪಿನ ಅರಿವಾಗಿ ಆಕೆಯನ್ನೇ ಮದುವೆಯಾಗಿದ್ದಾನೆ.

    ಇದನ್ನೂ ಓದಿ :ಆರತಕ್ಷತೆ ವೇಳೆ ಹೀಲ್ಡ್ ಚಪ್ಪಲಿ ಧರಿಸಿ, ಸುಸ್ತಾಗಿ ಬಿದ್ದ ವಧು- ಮದುವೆ ಕ್ಯಾನ್ಸಲ್!

    ರಾಜಸ್ಥಾನ ರಾಜ್ಯದ ಮಹೋಬಾ ಜಿಲ್ಲೆಯ ಟಿಕರಿಯಾ ಎಂಬ ಗ್ರಾಮದಲ್ಲಿ ಮೇ 11ರಂದು ಮದುವೆ ಮುರಿದು ಬೀಳುವ ಹಂತಕ್ಕೆ ತಲುಪಿತ್ತು. ಗ್ರಾಮದ ಕಾಲಿಚರಣ್ ರಜಪೂತ್ ಅವರ ಮಗಳು ತೀಜಾರ ಮದುವೆಯನ್ನು ಅಕೌನಿ ಪಟ್ಟಣದ ಜಯ್‍ಹಿಂದ್‍ರೊಂದಿಗೆ ನಿಶ್ಚಯವಾಗಿತ್ತು. ಈ ವೇಳೆ ವರನಿಗೆ ಯಾರೋ ಬಂದು ವಧುವಿಗೆ ಬಿಳಿ ಮಚ್ಚೆಯಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ : ಇಂದು ನಡೆಯಬೇಕಿದ್ದ ಯುವತಿಯ ಮದುವೆ 1 ವರ್ಷ ಪೋಸ್ಟ್ ಪೋನ್ ಆಯ್ತು! 

    ಈ ವಿಚಾರ ಕಿವಿಗೆ ಬಿದ್ದಿದೆ ತಡ ವರ ನನಗೆ ಈ ಮದುವೆ ಬೇಡ ಎಂದು ಮನೆಯತ್ತ ನಡೆದಿದ್ದಾನೆ. ಇದ್ರಿಂದ ಕೋಪಗೊಂದು ವಧುವಿನ ತಂದೆ ಕಾಲಿಚರಣ್ ಅಜನರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

    ಇದನ್ನೂ ಓದಿ : ಆರತಕ್ಷತೆಯಲ್ಲಿ ಊಟ ಶಾರ್ಟೇಜ್ ಆಗಿದ್ದಕ್ಕೆ ಮದ್ವೆ ಕ್ಯಾನ್ಸಲ್?

    ಪೊಲೀಸರು ವರ ಮತ್ತು ವಧು ಇಬ್ಬರನ್ನೂ ಠಾಣೆಗೆ ಕರೆಸಿದ್ದಾರೆ. ಕೊನೆಗೆ ವರನ ಸಂಬಂಧಿಯ ಮಹಿಳೆಯೊಬ್ಬರು ಖಾಸಗಿ ರೂಂನಲ್ಲಿ ವಧುವನ್ನು ಪರೀಕ್ಷಿಸಿದಾಗ ಯಾವುದೇ ತರಹದ ಬಿಳಿ ಮಚ್ಚೆ ಕಂಡುಬಂದಿಲ್ಲ. ತನ್ನ ತಪ್ಪಿನ ಅರಿವಾದ ವರ ಜಯ್ ಎಲ್ಲರನ್ನೂ ಕ್ಷಮೆ ಕೇಳಿ ಪೊಲೀಸ್ ಠಾಣೆಯ ಮೈದಾನದಲ್ಲಿದ್ದ ದೇವಸ್ಥಾನದಲ್ಲಿ ವಧು ತೀಜಾರಿಗೆ ತಾಳಿ ಕಟ್ಟಿದ್ದಾನೆ.

    ಇದನ್ನೂ ಓದಿ: ವಧು ನಾಪತ್ತೆ: ಮದುವೆ ಮುಂದೂಡಲಾಗಿದೆ ಎಂದು ಮಂಟಪದ ಮುಂದೆ ಬೋರ್ಡ್ 

  • ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

    ಬರೋಬ್ಬರಿ 60 ಲಕ್ಷ ವ್ಯೂ ಕಂಡಿರೋ ವಧುವಿನ ವೈರಲ್ ಡ್ಯಾನ್ಸ್ ವೀಡಿಯೋ ನೋಡಿ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆ ಮಂಟಪದಲ್ಲಿ ವರ ತನ್ನ ಸ್ನೇಹಿತರೊಂದಿಗೆ ಹೆಜ್ಜೆ ಹಾಕೋದನ್ನ ನೋಡಿರ್ತಿವಿ. ಆದ್ರೆ ಇಲ್ಲೊಬ್ಬಳು ವಧು ತನ್ನ ಭಾವಿ ಪತಿಯನ್ನು ಎದುರು ಕುಳ್ಳಿರಿಸಿಕೊಂಡು ತನ್ನ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಹೆಜ್ಜೆ ಹಾಕಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    17 ನಿಮಿಷ ಇರೋ ಈ ವಿಡಿಯೋದಲ್ಲಿ ವಧುವು ತನ್ನ ಗೆಳೆಯ-ಗೆಳತಿ, ಅಪ್ಪ-ಅಮ್ಮ ಅಜ್ಜಿ-ತಾತ ಹೀಗೆ ಎಲ್ಲರೊಂದಿಗೆ ಒಂದೊಂದು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಳೆದ ಜನವರಿಯಲ್ಲಿ ಈ ವಿಡಿಯೋ ಯೂಟ್ಯೂಬ್‍ಗೆ ಅಪ್‍ಲೋಡ್ ಆಗಿದ್ದು, ಇಲ್ಲಿಯವರೆಗೆ ಸುಮಾರು 60 ಲಕ್ಷ ಜನ ವೀಕ್ಷಿಸಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಅನ್ನೋದರ ಬಗ್ಗೆ ಮಾಹಿತಿಯಿಲ್ಲ.

    ವಧು ಹೆಜ್ಜೆ ಹಾಕಲು ಆರಂಭಿಸಿದಾಗ ಇತ್ತ ವರ ನಾಚಿಕೆಯಿಂದ ಆಕೆಯನ್ನು ನೋಡುತ್ತಿದ್ದ. ಕೂಡಲೇ ವಧುವಿನ ಸ್ನೇಹಿತರು, ಸಹೋದರರು ಆಕೆಯೊಂದಿಗೆ ಹೆಜ್ಜೆ ಹಾಕಿದ್ದಾರೆ. ಹಿಂದಿ ಹಾಡುಗಳಿಗೆ ಈಕೆ ಸಖತ್ ಆಗಿ ಸ್ಟೆಪ್ ಹಾಕಿದ್ದಾಳೆ.

    ಈಕೆ ನೃತ್ಯ ಮಾಡುತ್ತಿದ್ದ ವೇಳೆ ಪುಟ್ಟು ಬಾಲಕನೋರ್ವ ಗುಲಾಬಿ ಹಿಡಿದುಕೊಂಡು ವಧುವಿಗೆ ನೀಡಿದ್ದಾನೆ. ವಿಡಿಯೋದಲ್ಲಿ ಬಂಧು-ಬಳಗದವರೆಲ್ಲರೂ ಒಟ್ಟಿಗೆ ಜೊತೆಯಾಗಿ ಕೊನೆಗೆ ವಧುವಿನೊಂದಿಗೆ ಹೆಜ್ಜೆ ಹಾಕಿರುವುದನ್ನು ನಾವು ನೋಡಬಹುದು.

    https://www.youtube.com/watch?v=rB8HNDY2W_U

  • ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ಇಸ್ಲಾಮಾಬಾದ್: ಕುದುರೆ ಮೇಲೆ, ಬೈಕ್‍ನಲ್ಲಿ, ದುಬಾರಿ ಕಾರಿನಲ್ಲಿ ಅಥವಾ ಪಲ್ಲಕ್ಕಿಯಲ್ಲಿ ಕುಳಿತು ವಧು/ವರ ಮದುವೆ ಮಂಟಪಕ್ಕೆ ಬರೋದನ್ನ ನೋಡಿದ್ದೀವಿ. ಆದ್ರೆ ಪಾಕಿಸ್ತಾನದಲ್ಲಿ ಕೋಟ್ಯಾಧಿಪತಿ ವ್ಯಕ್ತಿಯೊಬ್ಬರ ಮಗ ಸಿಂಹದ ಮೇಲೆ ಕುಳಿತು ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಬಂದಿದ್ದಾರೆ.

    ಏನು ಸಿಂಹನಾ ಅಂತ ಅಚ್ಚರಿ ಪಡಬೇಡಿ. ವರ ಕುಳಿತಿದ್ದು ಸಿಂಹ ಇದ್ದ ಬೋನಿನ ಮೇಲಷ್ಟೆ. ಚಿನ್ನಾಭರಣಗಳನ್ನ ಮೈಮೇಲೆ ಧರಿಸಿ ವರ ಸಿಂಹವಿದ್ದ ಬೋನಿನ ಮೇಲೆ ಕುಳಿತು, ಸ್ನೇಹಿತರು ಹಾಗೂ ಸಂಬಂಧಿಕರು ಕುಣಿಯುತ್ತಾ, ನೋಟುಗಳ ಸುರಿಮಳೆಗೈಯ್ಯುತ್ತಾ ಅದ್ಧೂರಿ ಮೆರವಣಿಗೆ ಮೂಲಕ ಮಂಟಪ ತಲುಪಿದ್ದಾರೆ. ಈ ಮದುವೆಯ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲೂ ವರದಿಯಾಗಿದೆ.

    ವರ ತಾನು ಸಿಂಹದ ಮೇಲೆ ಕುಳಿತು ಮದುವೆ ಮಂಟಪಕ್ಕೆ ಬರಬೇಕು ಅಂತ ಆಸೆ ಪಟ್ಟಿದ್ದರಂತೆ. ಮಗನ ಆಸೆ ಈಡೇರಿಸಬೇಕು ಎಂದು ವರನ ತಂದೆ ಅಂದುಕೊಂಡಿದ್ದರು. ಆದ್ರೆ ಸಿಂಹದ ಮೇಲೆ ಕುಳಿತು ಬರುವುದು ಸಾಧ್ಯವಿಲ್ಲದ ಮಾತು ಎಂದು ಅರಿತು ಬೋನಿನೊಳಗೆ ಹಾಕಲಾದ ಸಿಂಹವನ್ನ ತರಿಸಿದ್ದಾರೆ. ನಂತರ ಬೋನಿನ ಮೇಲೆ ಚೇರ್ ಹಾಕಿಸಿ ವರನನ್ನು ಅದರ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿದ್ದಾರೆ. ಮದುವೆಗೆ 15 ಸಾವಿರಕ್ಕೂ ಹೆಚ್ಚು ಅತಿಥಿಗಳನ್ನ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.