Tag: Groom. Public Tv

  • ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    – ವಾಮಂಜೂರಿನಲ್ಲಿ ಕೆಲಕಾಲ ಕೈ ಕೊಟ್ಟ ಇವಿಎಂ
    – ವೃದ್ಧನಿಗೆ ಕಾಂಗ್ರೆಸ್ ಅಭ್ಯರ್ಥಿ ಸಹಾಯ

    ಮಂಗಳೂರು: ಸದೃಢ ಭಾರತಕ್ಕಾಗಿ ನವವಧುಗಳು ಸರತಿ ಸಾಲಿನಲ್ಲಿಯೇ ನಿಂತು ತನ್ನ ಹಕ್ಕು ಚಲಾಯಿಸಿರುವ ಘಟನೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ನಡೆದಿದೆ.

    ಹೌದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಆನೆಯಾಲಗುತ್ತು ಶ್ರುತಿ ಶೆಟ್ಟಿ ಎಂಬವರೇ ಈ ರೀತಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.

    ಕೈಕೊಟ್ಟ ಇವಿಎಂ:
    ಮಂಗಳೂರಿನಲ್ಲಿ ಇವಿಎಂ ಮೆಷಿನ್ ಕೆಲಕಾಲ ಕೈಕೊಟ್ಟಿತ್ತು. ವಾಮಂಜೂರು ತಿರುವೈಲ್ ವಾರ್ಡ್‍ನ ಮತಗಟ್ಟೆ 150ರಲ್ಲಿ ಈ ಘಟನೆ ನಡೆದಿದೆ. ಕೈಕೊಟ್ಟ ಇವಿಎಂನಿಂದಾಗಿ ಮತದಾರರು ಅಸಮಾಧಾನಗೊಂಡು ವಾಪಾಸ್ ಆಗಿದ್ದರು. ಹೀಗಾಗಿ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿದ್ದು, ವಾಪಸ್ಸಾದವರು ಸೇರಿದಂತೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

    ವೃದ್ಧನಿಗೆ ಮಿಥುನ್ ರೈ ಸಹಾಯ:
    ಮಂಗಳೂರು ಬಲ್ಮಠ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಯಲ್ಲಿ ಅಶಕ್ತರಾಗಿದ್ದ 83 ವರ್ಷದ ರಮೇಶ್ ರಾವ್‍ಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸಹಾಯ ಮಾಡಿದ್ದಾರೆ. ಕಾರಿನಿಂದ ಎತ್ತಿ ಇಳಿಸಿ ನಂತರವ್ಹೀಲ್ ಚೇರ್ ನಲ್ಲಿ ರೈ ಕೂರಿಸಿದ್ದಾರೆ. ಮಿಥುನ್ ರೈ ನಂತರ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಿಥುನ್, ಹೆಗಲಿಗೆ ಕೇಸರಿ ಮತ್ತು ಹಳದಿ ಶಾಲು ಹಾಕ್ಕೊಂಡು ಬಂದಿದ್ದರು.

    ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಕೂಡ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತದಾನ ಮಾಡಿದ್ರು. ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟು ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ ಇವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು.

  • ಮದುವೆ ಗಂಡು ಯಾರು ಎಂಬುದು ನಾಳೆ ಗೊತ್ತಾಗಲಿದೆ: ಶಾಸಕ ರಾಮದಾಸ್

    ಮದುವೆ ಗಂಡು ಯಾರು ಎಂಬುದು ನಾಳೆ ಗೊತ್ತಾಗಲಿದೆ: ಶಾಸಕ ರಾಮದಾಸ್

    ಮೈಸೂರು: ಮೈಸೂರು- ಕೊಡಗು ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಾಳೆ ಗೊತ್ತಾಗಲಿದೆ. ಮದುವೆ ಗಂಡು ಯಾರು ಎಂಬುದು ನಾಳೆ ಗೊತ್ತಾಗಲಿದ್ದು ಮದುವೆ ಗಂಡಿಗೆ ನಾಳೆ ಕಂಕಣ ಕಟ್ತೀವಿ ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಮದಾಸ್ ಅವರು, “ಬಹುತೇಕ ನಾಳೆ ಮದುವೆ ಮನೆ ಗಂಡುಗಳಿಗೆ ಕಂಕಣ ಕಟ್ಟಿ ಬಳಿಕ ಆಯಾ ಕ್ಷೇತ್ರಗಳಿಗೆ ಕರೆದುಕೊಂಡು ಬರುತ್ತೇವೆ. ಯಾರೇ ಬಂದರೂ ಈ ಕ್ಷೇತ್ರವನ್ನು ಗೆಲ್ಲುತ್ತೇವೆ. ಹೊಸ ಗಂಡಾದ್ರು ಸರಿ, ಹಳೆ ಗಂಡಾದ್ರು ಸರಿ” ಎಂದು ಹೇಳಿದರು.

    ನಾವು ಕರ್ನಾಟಕದಲ್ಲಿ 28 ಕ್ಷೇತ್ರದಲ್ಲಿ ಗೆಲ್ಲಬೇಕು ಎಂದುಕೊಂಡಿದ್ದೇವೆ. ಮೋದಿ ಮುಖ ನೋಡಿ ಚುನಾವಣೆ ಕೆಲಸ ಮಾಡ್ತೀವಿ. ಲೋಕಸಭಾ ಚುನಾವಣೆಗೆ ಸ್ಥಳೀಯ ನಾಯಕತ್ವದ ಪ್ರಶ್ನೆ ಬರಲ್ಲ. ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ, ನಮಗೆ ಮೋದಿ ಅಷ್ಟೇ ಎಂದರು.

    ಹಾಸನ ಹಾಗೂ ಮಂಡ್ಯ ಕ್ಷೇತ್ರದಲ್ಲಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv