Tag: grocery shop

  • Davanagere| ಗ್ಯಾಸ್ ಸೋರಿಕೆಯಾಗಿ ಕಾಣಿಸಿಕೊಂಡ ಬೆಂಕಿ – ಕಿರಾಣಿ ಅಂಗಡಿ ಸುಟ್ಟು ಕರಕಲು

    Davanagere| ಗ್ಯಾಸ್ ಸೋರಿಕೆಯಾಗಿ ಕಾಣಿಸಿಕೊಂಡ ಬೆಂಕಿ – ಕಿರಾಣಿ ಅಂಗಡಿ ಸುಟ್ಟು ಕರಕಲು

    – ಲಕ್ಷಾಂತರ ರೂ. ನಷ್ಟ

    ದಾವಣಗೆರೆ: ಸಿಲಿಂಡರ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ (Gas Leakage) ಬೆಂಕಿ ಕಾಣಿಸಿಕೊಂಡ ಪರಿಣಾಮ ಕಿರಾಣಿ ಅಂಗಡಿ (Grocery Shop) ಸುಟ್ಟು ಕರಕಲಾದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ಗ್ರಾಮದ ಕುಮಾರ್ ಎನ್ನುವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿ ಇರಿಸಿದ್ದ ಸಿಲಿಂಡರ್ ಸೋರಿಕೆಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಹೊರ ಓಡಿಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇದನ್ನೂ ಓದಿ: ಕೋಲಾರ| ಒಂಟಿ ಸಲಗ ದಾಳಿಗೆ ರೈತ ಮಹಿಳೆ ಬಲಿ

    ಘಟನೆಯಿಂದ ಅಂಗಡಿಯಲ್ಲಿದ್ದ ಎಲ್ಲಾ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಂಗಡಿ ಮಾಲೀಕ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಭಿವೃದ್ಧಿಯಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸದಿದ್ದರೆ ನನ್ನ ಹೆಸರು ಶೆಹಬಾಜ್‌ ಷರೀಫ್‌ ಅಲ್ಲ: ಪಾಕ್‌ ಪ್ರಧಾನಿ ಸವಾಲು

  • ಶಾರ್ಟ್ ಸರ್ಕ್ಯೂಟ್‌ನಿಂದ ಕಿರಾಣಿ ಅಂಗಡಿಗೆ ಬೆಂಕಿ – 11 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಶಾರ್ಟ್ ಸರ್ಕ್ಯೂಟ್‌ನಿಂದ ಕಿರಾಣಿ ಅಂಗಡಿಗೆ ಬೆಂಕಿ – 11 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಬೀದರ್: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಿರಾಣಿ ಅಂಗಡಿಗೆ ಬೆಂಕಿ ತಗುಲಿ ಬರೋಬ್ಬರಿ 11 ಲಕ್ಷ ರೂ. ಮೌಲ್ಯದ ವಸ್ತುಗಳ ಬೆಂಕಿಗಾಹುತಿಯಾಗಿರುವ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ (Basava Kalyana) ತಾಲೂಕಿನ ಸಸ್ತಾಪೂರ್ ಬಂಗ್ಲಾ ಬಳಿ ನಡೆದಿದೆ.

    ಮಹೇಶ್ ರೆಡ್ಡಿ ಎಂಬುವವರಿಗೆ ಸೇರಿದ ಕಿರಾಣಿ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಅಂಗಡಿಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.ಇದನ್ನೂ ಓದಿ: ಸುರ್ಜೇವಾಲ ಮಹತ್ವದ ಸಭೆಗೆ ಪರಂ, ರಾಜಣ್ಣ ಗೈರು!

    ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಗ್ನಿ ಅವಘಡ ಸಂಭವಿಸಿದ್ದು, ಕಿರಾಣಿ ವಸ್ತುಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಷ್ಟರಲ್ಲಿ ಅಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ.

    ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಕುರಿತು ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಾಬ್ರುಗೂ ಎರಡು ಮಕ್ಕಳು ಮಾಡಿಕೊಳ್ಳಿ ಅಂತ ಸಿಎಂ ಹೇಳಲಿ – ಅಶೋಕ್ ಕಿಡಿ

     

  • ಅಮೆರಿಕದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನ ಚಾಕುವಿನಿಂದ ಇರಿದು ಕೊಂದ್ರು!

    ಅಮೆರಿಕದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನ ಚಾಕುವಿನಿಂದ ಇರಿದು ಕೊಂದ್ರು!

    – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
    – ಸಹಾಯಕ್ಕಾಗಿ ಸರ್ಕಾರದ ಮೊರೆ ಹೋದ ಪತ್ನಿ

    ಹೈದರಾಬಾದ್: ಕೆಲಸಕ್ಕೆಂದು ಅಮೆರಕಕ್ಕೆ ತೆರಳಿ ಅಲ್ಲಿ ಪಾಲುದಾರಿಕೆಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡಿದ್ದ ಭಾರತೀಯನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.

    ಈ ಘಟನೆ ಅಮೆರಿಕದ ಜಾರ್ಜಿಯಾ ಎಂಬಲ್ಲಿ ಭಾನುವಾರ ನಡೆದಿದೆ. ಮೃತ ದುರ್ದೈವಿಯನ್ನು ಮೊಹಮ್ಮದ್ ಆರಿಫ್ ಮೊಹಿಯುದ್ದೀನ್(37) ಎಂದು ಗುರುತಿಸಲಾಗಿದೆ. ಈತ ಮೂಲತಃ ಹೈದರಾಬಾದ್ ನವನಾಗಿದ್ದು, ಕಳೆದ 10 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದನು.

    ಜಾರ್ಜಿಯಾದಲ್ಲಿ ಪಾಲುದಾರಿಕೆಯಲ್ಲಿ ಆರಿಫ್ ಕಿರಾಣಿ ಅಂಗಡಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದನು. ಇದೀಗ ಮನೆಯ ಆವರಣದಲ್ಲಿಯೇ ದುಷ್ಕರ್ಮಿಗಳು ಚಾಕುವಿನಿಂದ ಹಲವು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಅಂಗಡಿಯ ಉದ್ಯೋಗಿ ಕೂಡ ಕೃತ್ಯದಲ್ಲಿ ಪಾಲುದಾರರಾಗಿರುವುದಾಗಿ ಆರಿಫ್ ಕುಟುಂಬ ಆರೋಪಿಸಿದೆ.

    ನನಗೆ ಮತ್ತು ನನ್ನ ತಂದೆಗೆ ತುರ್ತು ವೀಸಾದ ಮೂಲಕ ಅಮೆರಿಕ್ಕೆ ಪ್ರಯಾಣಿಸಲು ವ್ಯವಸ್ಥೆ ಕಲ್ಪಿಸಿಕೊಡಿ. ಈ ಅವಕಾಶ ಕೊಟ್ಟರೆ ಪತಿಯ ಅಂತ್ಯಸಂಸ್ಕಾರವನ್ನು ಅಲ್ಲಿಯೇ ನಡೆಸುತ್ತೇವೆ ಎಂದು ಆರಿಫ್ ಪತ್ನಿ ಮೆಹ್ನಾಜ್ ಫಾತಿಮಾ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಭಾನುವಾರ 9 ಗಂಟೆಯ ಸುಮಾರಿಗೆ ನಾನು ಪತಿ ಜೊತೆ ಮಾತನಾಡಿದ್ದೇನೆ. ಆಗ ಆತ ಅರ್ಧ ಗಂಟೆ ಬಿಟ್ಟು ಮನೆಗೆ ಹೋಗಿ ನಂತರ ಕರೆ ಮಾಡುವುದಾಗಿ ತಿಳಿಸಿದ್ದ. ಆದರೆ ಅರ್ಧ ಗಂಟೆಯ ಬಳಿಕ ಆತನಿಂದ ನನಗೆ ಯಾವುದೇ ಕರೆ ಬಂದಿರಲಿಲ್ಲ. ಕೆಲ ಹೊತ್ತಿನ ಬಳಿಕ ನಾದಿನಿಯಿಂದಾಗಿ ನನಗೆ ವಿಚಾರ ತಿಳಿಯಿತು. ಆಕೆ ನನ್ನ ಪತಿಯನ್ನು ದುಷ್ಕರ್ಮಿಗಳು ಕೊಲೆಗೈದಿರುವುದಾಗಿ ತಿಳಿಸಿದಳು. ಸದ್ಯ ಪತಿ ಶವ ಜಾರ್ಜಿಯಾ ಆಸ್ಪತ್ರೆಯಲ್ಲಿದ್ದು, ಅಲ್ಲಿ ನಮ್ಮ ಕುಟುಂಬಸ್ಥರು ಯಾರೂ ಇಲ್ಲ ಎಂದು ಫಾತಿಮಾ ಬೇಸರ ವ್ಯಕ್ತಪಡಿಸಿದರು.

    ತೆಲಂಗಾಣದ ಎಂಬಿಟಿ ಪಕ್ಷದ ವಕ್ತಾರ ಉಲ್ಲಾ ಖಾನ್ ಅವರಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಕಚೇರಿಗೆ ಆರಿಫ್ ಕುಟುಂಬದ ಪರವಾಗಿ ಪತ್ರ ಬರೆದಿದ್ದಾರೆ.