Tag: GrenFell Tower

  • ಲಂಡನ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿಯ ಮಹಾ ನರ್ತನ

    ಲಂಡನ್ ಬಹುಮಹಡಿ ಕಟ್ಟಡದಲ್ಲಿ ಅಗ್ನಿಯ ಮಹಾ ನರ್ತನ

    ಲಂಡನ್: ಲಂಡನ್ ಅಪಾರ್ಟ್ ಮೆಂಟ್ ಒಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಸುಮಾರು 27 ಅಂತಸ್ತಿನ ಕಟ್ಟಡದಲ್ಲಿರುವ ನೂರಾರು ಅಪಾರ್ಟ್ ಮೆಂಟ್ ಗಳಿಗೆ ಬೆಂಕಿ ವ್ಯಾಪಿಸಿದೆ.

    ನಾರ್ಥ್ ಕೆನ್ಸಿಂಗ್ಟನ್ ನಲ್ಲಿರುವ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್ ನ ಗ್ರೆನ್‍ಫೆಲ್ ಟವರ್‍ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, 27 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಟ್ಟಡದ ಒಳಗೆ ನೂರಾರು ಮಂದಿ ಸಿಲುಕಿರುವ ಶಂಕೆಯಿದ್ದು ಅವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಸುಮಾರು 40 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳ ಸುಮಾರು 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಅಪಾರ್ಟ್ ಮೆಂಟಿನಲ್ಲಿ 120 ಮನೆಗಳಿದ್ದು, ಇದುವರೆಗೂ ಯಾವುದೇ ಸಾವು ನೋವಿನ ಕುರಿತು ವರದಿಯಾಗಿಲ್ಲ. ಈಗಾಗಲೇ ಸ್ಥಳದಲ್ಲಿ 20 ಅಂಬ್ಯುಲೆನ್ಸ್ ಗಳು ಸನ್ನದ್ಧ ಸ್ಥಿತಿಯಲ್ಲಿವೆ.

    ಲಂಡನ್ ಫೈರ್ ಬ್ರಿಗೇಡ್ ಹಾಗೂ ಮೆಟ್ರೋಪಾಲಿಟನ್ ಪೊಲೀಸರ ಜೊತೆ ನಾವು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ ಎಂದು ಲಂಡನ್ ಅಂಬ್ಯುಲೆನ್ಸ್ ಸರ್ವೀಸ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಬೆಂಕಿಯಿಂದಾಗಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರಿಗೆ ಚಿಕಿತ್ಸೆ ಮುಂದುವರೆದಿದೆ.

    ಈ ಅಪಾರ್ಟ್ ಮೆಂಟ್ 1974ರಲ್ಲಿ ನಿರ್ಮಾಣ ಮಾಡಲಾಗಿತ್ತು.

     

    https://www.youtube.com/watch?v=pStB7aCT43E

    https://www.youtube.com/watch?v=j90862Cf-gE

    https://twitter.com/michaelbeatty3/status/874833734456844289

    https://twitter.com/614swat/status/874827085172178944