Tag: greetings

  • ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ನಟ ವಿನೋದ್ ರಾಜ್

    ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾದ ನಟ ವಿನೋದ್ ರಾಜ್

    ಟ ವಿನೋದ್ ರಾಜ್ (Vinod Raj) ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ (Ramzan) ಹಬಕ್ಕೆ ಮಸೀದೆಗೆ ತೆರಳಿ, ಹಣ್ಣು ಹಂಪಲ ನೀಡಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.

    ನೆಲಮಂಗಲದ ದರ್ಗಾಗಳಿಗೆ ತೆರಳಿ ಹಣ್ಣು ಹಂಪಲು ವಿತರಿಸಿ ಶುಭಾಷಯ ವಿನಿಮಯ ಮಾಡಿಕೊಂಡು ಅಮ್ಮನನ್ನು ನೆನೆದಿದ್ದಾರೆ. ಪ್ರತಿ ವರ್ಷವೂ ರಂಜಾನ್ ತಿಂಗಳಲ್ಲಿ ದರ್ಗಾಗೆ ತೆರಳುವ ನಟ, ಪ್ರತಿ ವರ್ಷ ರಂಜಾನ್ ವೇಳೆ ತಾಯಿಯೊಂದಿಗೆ ರಂಜಾನ್ ಆಚರಣೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.

     

    ತಾಯಿ ಲೀಲಾವತಿ ಇಲ್ಲದೆ ಈ ವರ್ಷ ಮುಸ್ಲಿಂ ಬಾಂಧವರ ಜತೆ ರಂಜಾನ್ ಆಚರಣೆ ಮಾಡಿದ್ದಾರೆ. ಈ ಮೂಲಕ ಅವರು ಮಾನವೀಯತೆಯ ಸಂದೇಶ ಸಾರಿದ್ದಾರೆ.

  • Breaking – ಅಭಿಷೇಕ್-ಅವಿವಾ ಮದುವೆಗೆ ಶುಭ ಕೋರಿದ ಪ್ರಧಾನಿ ಮೋದಿ

    Breaking – ಅಭಿಷೇಕ್-ಅವಿವಾ ಮದುವೆಗೆ ಶುಭ ಕೋರಿದ ಪ್ರಧಾನಿ ಮೋದಿ

    ಟಿ, ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಮದುವೆಗೆ ಶುಭಾಶಯ ಕೋರಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Narendra Modi). ಶುಭಾಶಯ ಕೋರಿ ಕಳುಹಿಸಿದ ಪತ್ರವನ್ನು ಸುಮಲತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಮದುವೆಗೆ (Marriage) ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನ ನೀಡಿದ್ದರು ಸುಮಲತಾ ಮತ್ತು ಪುತ್ರ ಅಭಿಷೇಕ್.

    ಶುಭಾಶಯ (Greetings) ಕೋರಿ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ (Sumalatha), ‘ಅಭಿಷೇಕ ಅಂಬರೀಶ್–ಅವಿವಾ ಬಿಡಪ್ಪ (Aviva) ಅವರ ಮದುವೆಗೆ ಶುಭಾಶಯಗಳನ್ನು ತಿಳಿಸಿ, ನವ ಜೋಡಿಯ ಹೊಸ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಹಾರೈಕೆ, ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುವೆ’ ಎಂದು ಬರೆದುಕೊಂಡಿದ್ದಾರೆ.

    ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿಕೊಂಡಿರುವ ನಟ ಅಭಿಷೇಕ್, ಮಾಡೆಲ್ ಅವಿವಾ ಜೂನ್ 16 ರಂದು ಮಂಡ್ಯದ ಜನತೆಗೆ ಬೀಗರೂಟ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮದುವೆ ಮತ್ತು ಆರತಕ್ಷತೆ ಬೆಂಗಳೂರಿನಲ್ಲಿ ನಡೆದಿರುವ ಕಾರಣದಿಂದಾಗಿ ಬೀಗರೂಟವನ್ನು ಮಂಡ್ಯದಲ್ಲಿ ಏರ್ಪಡಿಸಲಾಗಿದೆ. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್‌ ಮಮ್ಮಿ ಪ್ರಣಿತಾ ಸುಭಾಷ್

    ಈ ಹಿಂದೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ, ಯಾವ ಜಾಗದಲ್ಲಿ ಅವರಿಗೆ ಕಾರ್ಯಕ್ರಮ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತೋ, ಅದೇ ಜಾಗದಲ್ಲೇ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದೆ. ಅಲ್ಲಿಯೇ ಬೀಗರೂಟ ನಡೆಯಲಿದೆ.

    ಬೀಗರೂಟಕ್ಕೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಟೆಂಟ್ ಹಾಕುವಂತಹ ಕಾರ್ಯ ನಡೆದಿದ್ದು, ಸುಮಲತಾ ಅಂಬರೀಶ್  ಇಂದು ಅದರ ಪರಿಶೀಲನೆ ಕೂಡ ಮಾಡಿದ್ದಾರೆ. ಬೀಗರೂಟಕ್ಕೆ ಭರ್ಜರಿ ಬಾಡೂಟವೇ ಇರಲಿದ್ದು, ಪಕ್ಕಾ ಮಂಡ್ಯ ಶೈಲಿಯಲ್ಲಿ ಆಹಾರವನ್ನು ಸಿದ್ಧ ಪಡಿಸಲಾಗುತ್ತದೆಯಂತೆ. ಮುದ್ದೆಯೊಂದಿಗೆ ಭರ್ಜರಿ ಮಾಂಸದೂಟ ಕೂಡ ಜೊತೆಯಾಗಲಿದೆ.

  • ಗೆದ್ದು ಬೀಗಿದ ಕಾಂಗ್ರೆಸ್ ಗೆ ವಿಶ್ ಮಾಡಿದ ಪಿಎಂ ನರೇಂದ್ರ ಮೋದಿ

    ಗೆದ್ದು ಬೀಗಿದ ಕಾಂಗ್ರೆಸ್ ಗೆ ವಿಶ್ ಮಾಡಿದ ಪಿಎಂ ನರೇಂದ್ರ ಮೋದಿ

    ನವದೆಹಲಿ : ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯ ಕಾಂಗ್ರೆಸ್ ಪಕ್ಷಕ್ಕೆ ಶುಭಾಶಯ ತಿಳಿಸಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿರುವ ಕಾಂಗ್ರೆಸ್ (Congress) ನಾಯಕರಿಗೆ ಪ್ರಧಾನಿ ಶುಭ ಹಾರೈಸಿದ್ದು, ಅತ್ಯುತ್ತಮ ಆಡಳಿತ ನೀಡುವಂತೆ ಹಾರೈಸಿದ್ದಾರೆ.

    ಚುನಾವಣೆ ಗೆಲುವಿನ ಕುರಿತಾಗಿ ಟ್ವೀಟ್ ಮಾಡಿರುವ ನರೇಂದ್ರ ಮೋದಿ, ‘ಕರ್ನಾಟಕ ವಿಧಾನಸಭಾ (Assembly Election 2023) ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಜನರ ಆಶೋತ್ತರಗಳನ್ನು ಅವರು ಈಡೇರಿಸಲಿ. ಅವರಿಗೆ ಹಾರೈಸುತ್ತೇನೆ’ ಎಂದು ಬರೆದಿದ್ದಾರೆ. ಆದರೆ, ಬಿಜೆಪಿ ಸೋಲಿನ ಬಗ್ಗೆ ಪ್ರಧಾನಿ ಒಂದಕ್ಷರ ಕೂಡ ಬರೆಯದೇ ಇರುವುದು ಅಚ್ಚರಿ ತಂದಿದೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates

    ಈಗಾಗಲೇ ಬಿಜೆಪಿ ನಾಯಕರು ಮತ್ತು ಸ್ವತಃ ರಾಜ್ಯದ ಬಿಜೆಪಿ ಅಧ್ಯಕ್ಷರು ಸೋಲಿನ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಸೋಲಿನ ಬಗ್ಗೆ ವಿಮರ್ಶೆ ಮಾಡಿಕೊಂಡು, ಮುಂದಿನ ಲೋಕಸಭೆ ಚುನಾವಣೆಗೆ ತಯಾರಿ ಆಗುವುದಾಗಿ ಮಾತನಾಡಿದ್ದಾರೆ. ಅಲ್ಲದೇ, ಜನರ ಆದೇಶವನ್ನು ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.

  • ವ್ಯಾಲೆಂಟೈನ್ ದಿನದಂದು ವಿಶ್ ಮಾಡಿ ನಟಿ ಜಾಕ್ವೆಲಿನ್ ಗೆ ಶಾಕ್ ಕೊಟ್ಟ ಸುಕೇಶ್

    ವ್ಯಾಲೆಂಟೈನ್ ದಿನದಂದು ವಿಶ್ ಮಾಡಿ ನಟಿ ಜಾಕ್ವೆಲಿನ್ ಗೆ ಶಾಕ್ ಕೊಟ್ಟ ಸುಕೇಶ್

    ಹುಕೋಟಿ ವಂಚನೆ ಆರೋಪದಲ್ಲಿ ಜೈಲುವಾಸ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್ ಪ್ರೇಮಿಗಳ ದಿನದಂದು ಗೆಳತಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಶುಭಾಶಯ ಕೋರಿ ಶಾಕ್ ಕೊಟ್ಟಿದ್ದಾರೆ. ಸುಕೇಶ್ ಮತ್ತು ಜಾಕ್ವೆಲಿನ್ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರವೇನೂ ಗುಟ್ಟಾಗಿ ಉಳಿದಿರಲಿಲ್ಲ. ಆದರೆ, ಜಾರಿ ನಿರ್ದೇಶನಾಲಯ ಸುಕೇಶ್ ಮೇಲೆ ಪ್ರಕರಣ ದಾಖಲಿಸುತ್ತಿದ್ದಂತೆ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು.

    ವಂಚನೆ ಮಾಡಿರುವ ಬಹುಕೋಟಿ ಹಣದಲ್ಲಿ ನಟಿ, ಗೆಳತಿ ಜಾಕ್ವೆಲಿನ್ ಗೆ ಆರೋಪಿ ಸುಕೇಶ್ ಹಲವು ವಸ್ತುಗಳನ್ನು ಉಡುಗೊರೆಯಾಗಿ ಕೊಡಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯ ಪತ್ತೆ ಮಾಡಿತ್ತು. ವಿಚಾರಣೆಗೆ ಬರುವಂತೆ ಜಾಕ್ವೆಲಿನ್ ಗೂ ನೋಟಿಸ್ ಜಾರಿ ಮಾಡಿತ್ತು. ಕೋರ್ಟಿಗೂ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಕ್ವೆಲಿನ್ ಜಾಮೀನು ಕೂಡ ಪಡೆದುಕೊಂಡಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸುಕೇಶ್ ನಿಂದ ಜಾಕ್ವೆಲಿನ್ ಅಂತರ ಕಾಪಾಡಿಕೊಂಡಿದ್ದರು. ಇದನ್ನೂ ಓದಿ: ವಿಶೇಷ ಫೋಟೋ ಶೇರ್‌ ಮಾಡಿ ತಮನ್ನಾ ಜೊತೆಗಿನ ಪ್ರೀತಿ ಅಧಿಕೃತಗೊಳಿಸಿದ ವಿಜಯ್ ವರ್ಮಾ

    ಸುಕೇಶ್ ಹಾಗೂ ಆತನ ಮತ್ತೋರ್ವ ಗೆಳತಿಯಿಂದಾಗಿ ತನಗೆ ಮೋಸವಾಗಿದೆ ಎಂದು ಮೊನ್ನೆಯಷ್ಟೇ ಜಾಕ್ವೆಲಿನ್ ಹೇಳಿಕೆ ನೀಡಿದ್ದರು. ಹಲವು ಆರೋಪಗಳನ್ನೂ ಮಾಡಿದ್ದರು. ಸುಕೇಶ್ ಮೇಲೆ ಏನೇ ಆರೋಪ ಮಾಡಿದರೂ, ಇನ್ನೂ ತಾನು ಜಾಕ್ವೆಲಿನ್ ನನ್ನು ಪ್ರೀತಿಸುತ್ತಿರುವ ವಿಚಾರವನ್ನು ವಿಶ್ ಮಾಡುವ ಮೂಲಕ ಸುಕೇಶ್ ಸಾಬೀತು ಪಡಿಸಿದ್ದಾರೆ. ಮಾಧ್ಯಮಗಳ ಮುಂದೆಯೇ ಶುಭಾಶಯ ಕೋರಿದ್ದಾರೆ.

    ಸುಕೇಶ್ ಹೇಳಿರುವ ಶುಭಾಶಯವನ್ನು ಜಾಕ್ವೆಲಿನ್ ಹೇಗೆ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಆದರೆ, ಸುಕೇಶ್ ನಿಂದಾಗಿ ತಮಗೆ ಸಾಕಷ್ಟು ತೊಂದರೆ ಆಗಿದೆ ಎನ್ನುವುದನ್ನು ಪದೇ ಪದೇ ಅವರು ಹೇಳುತ್ತಲೇ ಇರುತ್ತಾರೆ. ಸುಕೇಶ್ ಮಾತಿಗೆ ಜಾಕ್ವೆಲಿನ್ ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಷ್ಟದ ಪರಿಸ್ಥಿತಿಯಲ್ಲೂ ಅಭಿಮಾನಿಗಳಿಗೆ ಸಿಹಿ ಹಂಚಿದ ಕಲಾವಿದರು

    ಕಷ್ಟದ ಪರಿಸ್ಥಿತಿಯಲ್ಲೂ ಅಭಿಮಾನಿಗಳಿಗೆ ಸಿಹಿ ಹಂಚಿದ ಕಲಾವಿದರು

    ಬೆಂಗಳೂರು: ಯುಗಾದಿ ಹಬ್ಬದಂದು ಪ್ರತಿವರ್ಷ ಸ್ಯಾಂಡಲ್‍ವುಡ್‍ನಲ್ಲಿ ಸ್ಟಾರ್ ನಟ, ನಟಿಯರ ಸಿನಿಮಾಗಳು ಥಿಯೇಟರ್‍ನಲ್ಲಿ ರಿಲೀಸ್ ಆಗುತ್ತಿದ್ದವು. ಆದರೆ ಈ ಬಾರಿ ಕೋವಿಡ್-19 ಭೀತಿ ಎದುರಾಗಿರುವುದರಿಂದ ಯಾವುದೇ ಸಿನಿಮಾಗಳು ಬಿಗ್ ಸ್ಕ್ರೀನ್‍ನಲ್ಲಿ ತೆರೆಕಂಡಿಲ್ಲ.

    ಕೊರೊನಾ ಮಹಾಮಾರಿಗೆ ಜನ ಸಾಮಾನ್ಯರಷ್ಟೇ ಅಲ್ಲದೆ ಸ್ಟಾರ್ ನಟರು ಕೂಡ ಬೇಸತ್ತಿದ್ದಾರೆ. ಸದ್ಯ ಈ ಎಲ್ಲದರ ಮಧ್ಯೆ ಯುಗಾದಿ ಹಬ್ಬದ ಈ ದಿನದಂದು ಸಿನಿತಾರೆಯರೂ ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಬೆಲ್ಲದಂತೆ ಸಿಹಿಯಾಗಿ ಶುಭಾಶಯ ಕೋರಿದ್ದಾರೆ.

    ನಟ ನವರಸ ನಾಯಕ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘ತಂದೆತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದ ಮನೋವಾಂಛ ಫಲಗಳನ್ನು ಈಡೇರಿಸಿ, ನಮ್ಮ ಕಾಡುತ್ತಿರುವ ಕೊರೊನಾ ವಿಶ್ವದಿಂದ ತೊಲಗಿ. ಕ್ಷೇಮ ವಿಜಯ ಆಯು ಆರೋಗ್ಯ ಮಳೆ, ಬೆಳೆ, ಧನ, ಕನಕ, ವಸ್ತು, ವಾಹನ ಸಂತಸ ದೈವಭಕ್ತಿ ಸರ್ವರಿಗೂ ಪ್ರಾಪ್ತವಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ. ಹಿಂದುಗಳ ನಿಜ ಹೊಸವರ್ಷ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

    ಅಭಿಮಾನಿಗಳ ಪ್ರೀತಿಯ ದಾಸ ನಟ ದರ್ಶನ್, ‘ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ ಎಂದು ಆಶಿಸುತ್ತೇನೆ ನಿಮ್ಮ ದಾಸ ದರ್ಶನ್ ಎಂದು ಟ್ವೀಟ್ ಮಾಡಿದ್ದಾರೆ.

    ‘ಚೈತ್ರಮಾಸದ ಪ್ರಾರಂಭದ ಸೂರ್ಯೋದಯದ ವೇಳೆ, ಚತುರ್ಮುಖ ಬ್ರಹ್ಮನು ಸಂಪೂರ್ಣ ಜಗತ್ತಿನ ಸೃಷ್ಟಿ ಮಾಡಿದನು ಎಂಬುದಾಗಿ ಯುಗಾದಿ ಬಗ್ಗೆ ಸಂಸ್ಕೃತ ಶ್ಲೋಕ ಹೇಳುತ್ತದೆ. ಹೊಸ ವರ್ಷದ ಬದುಕು ಹಬ್ಬವಾಗಿರಲು ವಾಸ್ತವಕ್ಕೆ ಮಾಸ್ಕೇ ಬೆಲ್ಲ, ಸ್ಯಾನಿಟೈಸರೇ ಬೇವು. ನವ ವಸಂತದ ಅಲೆಯಲಿ, ಜಗತ್ತಿನ ಸಂಕಷ್ಟಗಳು ದೂರಾಗಲಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು’ ಎಂದು ನಟ ಗೋಲ್ಡನ್ ಸ್ಟಾರ್ ಗಣೇಶ್ ಶುಭಾಶಯ ತಿಳಿಸಿದ್ದಾರೆ.

    ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ನನ್ನ ಪ್ರೀತಿಯ ಸಮಸ್ತ ಕನ್ನಡಿಗರ ಕುಟುಂಬಕ್ಕೆ ಈ ನಿಮ್ಮ ಕಿಚ್ಚನಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಯುಗಾದಿ ಹಬ್ಬದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ರೋರಿಂಗ್ ಸ್ಟಾರ್ ಶ್ರೀ ಮುರುಳಿ ತಮ್ಮ ಮುಂದಿನ ಮದಗಜ ಸಿನಿಮಾದ ಮುದ್ದಾದ ಪೋಸ್ಟರ್‍ವೊಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ‘ಯುಗಾದಿ ಹಬ್ಬದ ಶುಭಾಶಯಗಳು’ ಎಂದು ವಿಶ್ ಮಾಡಿದ್ದಾರೆ.

    ಸ್ಯಾಂಡಲ್‍ವುಡ್ ನಟಿ ಹರಿಪ್ರಿಯಾ ರಯಲ್ ಸ್ಟಾರ್ ಉಪೇಂದ್ರ ಜೊತೆ ಅಭಿನಯಿಸುತ್ತಿರುವ ಲಗಾಮ್ ಸಿನಿಮಾದ ಪೋಸ್ಟರ್‍ನನ್ನು ಶೇರ್ ಮಾಡಿಕೊಳ್ಳುವುದರ ಜೊತೆಗೆ ‘ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಯುಗಾದಿ, ಎಲ್ಲರ ಬದುಕಿನಲ್ಲಿ ಹೊಸ ಸಂತೋಷ ಸಂಭ್ರಮ ತರಲಿ, ನಿಮ್ಮ ಜೀವನದ ಸಿಹಿ ಹೆಚ್ಚಿಸಲಿ’ ಎಂದು ಶುಭಾ ಹಾರೈಸಿದ್ದಾರೆ.

    ನಟ ರಕ್ಷಿತ್ ಶೆಟ್ಟಿ, ಸಮಸ್ತ ನಾಡಿನ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಎಲ್ಲರಿಗೂ ಶುಭವ ತರಲಿ ಯುಗಾದಿ ಎಂದು ವಿಶ್ ಮಾಡಿದ್ದಾರೆ.

  • ತಳಮಟ್ಟದಿಂದ ಪಕ್ಷವನ್ನು ಬಲ ಪಡಿಸಿದ ಪ್ರಮುಖ ನಾಯಕ – ಡಿವಿಎಸ್‍ಗೆ ಮೋದಿ ಶುಭಾಶಯ

    ತಳಮಟ್ಟದಿಂದ ಪಕ್ಷವನ್ನು ಬಲ ಪಡಿಸಿದ ಪ್ರಮುಖ ನಾಯಕ – ಡಿವಿಎಸ್‍ಗೆ ಮೋದಿ ಶುಭಾಶಯ

    ನವದೆಹಲಿ: ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡರವರು ಇಂದು 68 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಇತರ ಸಹೋದ್ಯೋಗಿಗಳು ಟ್ವೀಟ್ ಮಾಡುವ ಮೂಲಕ ಸದಾನಂದ ಗೌಡರಿಗೆ ಶುಭಾಶಯ ತಿಳಿಸಿದ್ದಾರೆ.

    ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ಸಚಿವ ಶ್ರೀ ಡಿ.ವಿ ಸದಾನಂದ ಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಕಾರ್ಯನಿರ್ವಹಿಸಿದ ಓರ್ವ ಅನುಭವಿ ಪ್ರಭಾವಿ ನಾಯಕ. ರಾಸಾಯನಿಕ ಮತ್ತು ರಸಗೊಬ್ಬರ ಕ್ಷೇತ್ರಗಳ ಬೆಳವಣಿಗೆ ಪ್ರಮುಖ ಪಾತ್ರವಹಿಸಿದವರು. ಅವರ ದೀರ್ಘಕಾಲ ಬಾಳಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಕೇಂದ್ರದ ಹಿರಿಯ ಸಚಿವರಾದ ರಾಜನಾಥ್ ಸಿಂಗ್‍ರವರು, ರಾಷ್ಟ್ರ ಮತ್ತು ಪಕ್ಷಕ್ಕೆ ಹಲವಾರು ಸೇವೆ ಸಲ್ಲಿಸಿದ್ದಾರೆ ಮತ್ತು ತಮ್ಮ ಕರ್ತವ್ಯವನ್ನು ಸಂಪೂರ್ಣವಾಗಿ ಅಚ್ಚು-ಕಟ್ಟಿನಿಂದ ನಿರ್ವಹಿಸುತ್ತಾರೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗಲಿ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

    ಮತ್ತೊರ್ವ ಕ್ಯಾಬಿನೆಟ್ ಸಹೋದೋಗ್ಯಿ ಪ್ರಕಾಶ್ ಜಾವಡೇಕರ್, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದ ಗೌಡರವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮಗೆ ಉತ್ತಮ ಆರೋಗ್ಯ ಹಾಗೂ ದೀರ್ಘಯುಷ್ಯ ದೊರೆಯಲಿ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

    ಸದಾನಂದ ಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಗೆದ್ದು ಲೋಕಸಭೆಗೆ ಆಯ್ಕೆ ಆಗಿದ್ದಾರೆ. ಈ ಮುನ್ನ ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಅಲ್ಲದೆ 2016ರಲ್ಲಿ ಕಾನೂನು ಹಾಗೂ ರೈಲ್ವೇ ಖಾತೆಯ ರಾಜ್ಯ ಸಚಿವರಾಗಿದ್ದರು.

  • ಶಂಕರ್‌ನಾಗ್ ನೆನಪು ಮಾಡಿಕೊಂಡ ಸ್ಯಾಂಡಲ್‍ವುಡ್ ಸ್ಟಾರ್ಸ್

    ಶಂಕರ್‌ನಾಗ್ ನೆನಪು ಮಾಡಿಕೊಂಡ ಸ್ಯಾಂಡಲ್‍ವುಡ್ ಸ್ಟಾರ್ಸ್

    ಬೆಂಗಳೂರು: ನಟ ದರ್ಶನ್ ಸ್ಯಾಂಡಲ್‍ವುಡ್ ಲೆಜೆಂಡ್‍ಗಳ ಬಗ್ಗೆ ತುಂಬಾ ಗೌರವ ಹೊಂದಿದ್ದಾರೆ. ಇದಕ್ಕೆ ಅಂಬರೀಶ್ ಮೇಲಿಟ್ಟಿರುವ ಅವರ ಅಪಾರ ಪ್ರೀತಿಯೇ ಸಾಕ್ಷಿ. ಅಲ್ಲದೆ ಆಗಾಗ ಹಿರಿಯ ನಟರ ಬಗ್ಗೆ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿ ಇದೀಗ ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

    ಶಂಕರ್ ನಾಗ್ ಚಂದನವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಿನಿಮಾ ಜಗತ್ತಿನಲ್ಲಿ ಅವರ ವಿಭಿನ್ನ ಪ್ರಯತ್ನ, ಸಾಮಾಜಿಕ ಕಳಕಳಿಯಿಂದಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಆಟೋ ರಾಜ ಶಂಕರ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರಿತಿ, ಕೇವಲ ಶಂಕರ್ ನಾಗ್ ಅವರನ್ನು ಮಾತ್ರ ನೆನೆಯದೆ ವಿಭಿನ್ನ ಕೆಲಸಗಳ ಮೂಲಕ ಅವರನ್ನು ಸ್ಮರಿಸುತ್ತಾರೆ.

    ಶಂಕರ್ ನಾಗ್ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ವಿವಿಧ ರೀತಿಯ ಸಾಮಾಜಿಕ ಕೆಲಸಗಳ ಮೂಲಕವೇ ಶುಭಾಶಯ ಕೋರುತ್ತಾರೆ. ಅಷ್ಟರ ಮಟ್ಟಿಗೆ ತಮ್ಮ ನೆಚ್ಚಿನ ನಟನ ಬಗ್ಗೆ ಅಭಿಮಾನ ಹೊಂದಿದ್ದಾರೆ. ಇದೀಗ ದರ್ಶನ್ ಸಹ ಲೆಜೆಂಡ್ ಆ್ಯಕ್ಟರ್ ಗೆ ಶುಭ ಕೋರಿದ್ದು, ಟ್ವೀಟ್ ಮಾಡಿ ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ಸ್ಮರಿಸಿದ್ದಾರೆ.

    ನಿಜವಾದ ಲೆಜೆಂಡ್‍ಗೆ ಯಾವತ್ತೂ ಸಾವಿಲ್ಲ, ಅವರು ಕನ್ನಡಿಗರ ಹೃದಯ ಸಾಮಾಜ್ಯದಲ್ಲಿ ಯಾವಾಗಲೂ ಎವರ್‍ಗ್ರೀನ್ ಆಗಿ ಉಳಿದಿದ್ದಾರೆ. ಹ್ಯಾಪಿ ಬರ್ತ್ ಡೇ ಶಂಕರಣ್ಣ, ನಾವು ಯಾವಗಲೂ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಆಟೋ ರಾಜನನ್ನು ನೆನೆದಿದ್ದಾರೆ. ಇದಕ್ಕೆ ಅವರಭಿಮಾನಿಗಳು ಸಹ ಕಮೆಂಟ್ ಮಾಡುವ ಮೂಲಕ ಶುಭ ಕೋರುತ್ತಿದ್ದಾರೆ.

    ಇಂದು ಶಂಕರ್ ನಾಗ್ ಅವರ 66ನೇ ಹುಟ್ಟುಹಬ್ಬವಾಗಿದ್ದು, ಇಡೀ ಸ್ಯಾಂಡಲ್‍ವುಡ್‍ನ ನಟ, ನಟಿಯರು ನೆನೆಯುತ್ತಿದ್ದಾರೆ. ನವರಸ ನಾಯಕ ಜಗ್ಗೇಶ್, ಕಿಚ್ಚ ಸುದೀಪ್, ರಚಿತಾ ರಾಮ್, ಡಾಲಿ ಧನಂಜಯ್ ಸೇರಿದಂತೆ ಬಹುತೇಕ ನಟರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಶಂಕರ್ ನಾಗ್ ಕಣ್ಮರೆಯಾಗಿ ಮೂರು ದಶಕಗಳೇ ಕಳೆದರೂ ಅಭಿಮಾನಿಗಳು ಮಾತ್ರ ಅವರ ಬರ್ತ್ ಡೇಯನ್ನು ಹಬ್ಬದಂತೇ ಆಚರಿಸುತ್ತಾರೆ. ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾರೆ.

  • ಹುಟ್ಟುಹಬ್ಬದಂದೇ ಸಚಿನ್ ಮಾನವೀಯತೆಯನ್ನು ನೆನೆದ ಸೆಹ್ವಾಗ್

    ಹುಟ್ಟುಹಬ್ಬದಂದೇ ಸಚಿನ್ ಮಾನವೀಯತೆಯನ್ನು ನೆನೆದ ಸೆಹ್ವಾಗ್

    – ತೆಂಡೂಲ್ಕರ್ ಎಂದೂ ಅಭಿಮಾನಿಗಳ ಮೇಲೆ ಕೋಪಗೊಂಡಿಲ್ಲ

    ನವದೆಹಲಿ: ಇಂದು ಕ್ರಿಕೆಟ್ ಜಗತ್ತು ಕಂಡ ಅತ್ಯುತ್ತಮ ಆಟಗಾರ ಲಿಟಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬ. ತಮ್ಮ 16ನೇ ವಯಸ್ಸಿನಲ್ಲಿ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ ಸಚಿನ್ ಇಂದು 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ.

    ಸಚಿನ್ ಅವರು ಮೈದಾನದಲ್ಲಿ ಎಂದೂ ಕೋಪ ಮಾಡಿಕೊಂಡವರಲ್ಲ. ಎದುರಾಳಿ ಬೌಲರ್ ಎಷ್ಟೇ ಕೆರಳಿಸಿದರೂ ಸಚಿನ್ ಮಾತ್ರ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದರು. ಇದರ ಜೊತೆಗೆ ಅವರ ಅಭಿಮಾನಿಗಳ ಮೇಲೂ ಕೂಡ ಅವರು ಎಂದು ಕೂಡ ಕೋಪ ಮಾಡಿಕೊಂಡವರಲ್ಲ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

    ಸಚಿನ್ ಬಗ್ಗೆ ಮಾತನಾಡಿರುವ ಸೆಹ್ವಾಗ್, ಸಚಿನ್ ಅವರು ಎಂದೂ ಅವರ ಅಭಿಮಾನಿಗಳ ಮೇಲೆ ಕೋಪ ಮಾಡಿಕೊಂಡಿಲ್ಲ. ಅವರ ಬಳಿ ಸಾವಿರಾರು ಜನರು ಆಟೋಗ್ರಾಫ್ ತೆಗೆದುಕೊಳ್ಳಲು ಬರುತ್ತಿದ್ದರು. ಎಷ್ಟೇ ಅಭಿಮಾನಿಗಳು ಬಂದರೂ ಸಚಿನ್ ಅಷ್ಟೇ ತಾಳ್ಮೆಯಿಂದ ಆಟೋಗ್ರಾಫ್ ನೀಡುತ್ತಿದ್ದರು. ಫೋಟೋ ತೆಗೆಸಿಕೊಳ್ಳುತ್ತಿದ್ದರು ಎಂದು ಸೆಹ್ವಾಗ್ ಅವರು ಸಚಿನ್ ಅವರ ಸ್ವಭಾವದ ಬಗ್ಗೆ ತಿಳಿಸಿದ್ದಾರೆ.

    ಇದೇ ವೇಳೆ ಸಚಿನ್ ಅವರ ಮಾನವೀಯತೆಯ ಬಗ್ಗೆ ಮಾತನಾಡಿರುವ ಸೆಹ್ವಾಗ್, 2003 ವಿಶ್ವಕಪ್ ಸಮಯದಲ್ಲಿ ನಾವು ಎಲ್ಲರೂ ಸೌತ್ ಆಫ್ರಿಕಾಗೆ ಹೋಗಿದ್ದೆವು. ಈ ವೇಳೆ ಒಂದು ಪಂದ್ಯವನ್ನು ಆಡಲು ನಾವು ಡರ್ಬನ್‍ಗೆ ಹೋಗಲು ರೆಡಿಯಾಗಿದ್ದೆವು. ಆಗ ನಮ್ಮನ್ನು ಟೈಟ್ ಸೆಕ್ಯೂರಿಟಿಯೊಂದಿಗೆ ಬಸ್ಸಿನಲ್ಲಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಅಲ್ಲಿ ವ್ಹೀಲ್ ಚೇರ್ ಮೇಲೆ ಅಂಗವಿಕಲ ಮಗುವೊಂದು ಕುಳಿತಿತ್ತು. ನಾವು ಯಾರೂ ಆ ಮಗುವನ್ನು ಗಮನಿಸದೆ ಒಳಗೆ ಹೋದೆವು. ಆದರೆ ಸಚಿನ್ ಮಾತ್ರ ತಾವೇ ಆ ಮಗು ಬಳಿ ಹೋಗಿ ಆಟೋಗ್ರಾಫ್ ನೀಡಿ ಫೋಟೋ ತೆಗೆಸಿಕೊಂಡು ಬಂದಿದ್ದರು ಎಂದು ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದರು.

    ಸಚಿನ್ ಹುಟ್ಟುಹಬ್ಬಕ್ಕೆ ಟ್ವೀಟ್ ಮಾಡಿ ವಿಶ್ ಮಾಡಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ತಮಗೆ ಕ್ರಿಕೆಟ್ ಮೇಲಿರುವ ಫ್ಯಾಶನ್ ಮೂಲಕ ಹಲವರಿಗೆ ಸ್ಫೂರ್ತಿಯಾಗಿರುವ ಸಚಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಗಳು. ಮುಂದಿನ ನಿಮ್ಮ ದಿನಗಳು ಅದ್ಭುತವಾಗಿ ಇರಲಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ ಕೂಡ ವಿಶ್ ಮಾಡಿದ್ದು, ಕ್ರೀಡೆಯಲ್ಲಿ ನೀವು ಬಿಟ್ಟುಹೋದ ಪರಂಪರೆ ಅಮರವಾದದ್ದು, ಹ್ಯಾಪಿ ಬರ್ತ್ ಡೇ ಚಾಂಪ್ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/YUVSTRONG12/status/1253541747235274752

    ಈ ವಿಚಾರವಾಗಿ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರು ಕೂಡ ಟ್ವೀಟ್ ಮಾಡಿದ್ದು, ಬ್ಯಾಟ್ ಮತ್ತು ಹಾರ್ಟ್‍ನಲ್ಲಿ ವಿಶೇಷ ಸ್ಥಾನವೊಂದಿರುವ ಲೆಜೆಂಡ್‍ಗೆ ಹುಟ್ಟುಹಬ್ಬದ ಶುಭಶಯಗಳು. ನಿಮ್ಮ ದಾಖಲೆಯಂತೆ ನಿಮ್ಮ ಜೀವನ ಕೂಡ ಬೆಳಗಲಿ. ನಿಮ್ಮ ಉದಾತ್ತ ಕಾರ್ಯಗಳಿಂದ ಇನ್ನೂ ಹಲವರು ಸ್ಫೂರ್ತಿಗೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಆಟದ ರೀತಿಯನ್ನೇ ಬದಲಿಸಿ ಕ್ರಿಕೆಟ್ ಅನ್ನು ಅನೇಕರು ಪ್ರೀತಿಸುವಂತೆ ಮಾಡಿದ ವ್ಯಕ್ತಿ. ಒಳ್ಳೆಯ ವ್ಯಕ್ತಿತ್ವವಿರುವ ಲೆಜೆಂಡ್‍ಗೆ ಹ್ಯಾಪಿ ಬರ್ತೆ ಡೇ ಎಂದು ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

    ಸಚಿನ್ ಅವರ ಹುಟ್ಟುಹಬ್ಬಕ್ಕೆ ಐಸಿಸಿ ಸೇರಿದಂತೆ ಬಿಸಿಸಿಐ ಕೂಡ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದು, ಭಾರತದ ಓಟಗಾರ್ತಿ ಹಿಮಾದಾಸ್ ಕೂಡ ಸಚಿನ್ ಅವರಿಗೆ ವಿಶ್ ಮಾಡಿದ್ದಾರೆ. ಉಳಿದಂತೆ ಮಾಜಿ ಆಟಗಾರರಾದ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಲ್ಲರೂ ಟ್ವೀಟ್ ಮಾಡಿದ್ದಾರೆ.

    https://twitter.com/BCCI/status/1253390714924195841

  • ಮಿಕ್ಸರ್ ಗ್ರೈಂಡರ್ ಉದಾಹರಣೆ ನೀಡಿ ವಾಲ್‍ಗೆ ವಿಶ್ ಮಾಡಿದ ಸೆಹ್ವಾಗ್

    ಮಿಕ್ಸರ್ ಗ್ರೈಂಡರ್ ಉದಾಹರಣೆ ನೀಡಿ ವಾಲ್‍ಗೆ ವಿಶ್ ಮಾಡಿದ ಸೆಹ್ವಾಗ್

    ಬೆಂಗಳೂರು: ಭಾರತ ಕ್ರಿಕೆಟ್ ಕಂಡ ಚಾಣಕ್ಷ ಬ್ಯಾಟ್ಸ್ ಮ್ಯಾನ್ ದಿ ವಾಲ್ ರಾಹುಲ್ ದ್ರಾವಿಡ್ ಅವರಿಗೆ ಇಂದು 47 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಹಾಗಾಗಿ ಈ ಹೆಮ್ಮೆಯ ಕನ್ನಡಿಗನಿಗೆ ದೇಶದ್ಯಾಂತ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ.

    ವಿಶಿಷ್ಟ ಉದಾಹರಣೆ ನೀಡಿ ದ್ರಾವಿಡ್ ಅವರಿಗೆ ವಿಶ್ ಮಾಡಿರುವ ಸೆಹ್ವಾಗ್ ಅವರು, ನನಗೆ ಗೊತ್ತಿರುವ ಪ್ರಕಾರ, ಮಿಕ್ಸರ್ ಗ್ರೈಂಡರ್ ಅಡುಗೆಮನೆಯಲ್ಲಿ ಮಾತ್ರ ರುಬ್ಬುತ್ತದೆ. ಆದರೆ ದ್ರಾವಿಡ್ ಅವರು ನಮಗೆ ಕ್ರಿಕೆಟ್ ಪಿಚ್‍ನಲ್ಲಿ ಹೇಗೆ ರುಬ್ಬಬಹುದು ಎಂದು ಕಲಿಸಿದರು. ನಮ್ಮ ತಂಡದಲ್ಲಿ ವಾಲ್ ಇದ್ದಾಗ ನಮ್ಮ ಬಳಿ ಎಲ್ಲವೂ ಇದ್ದಾಗೆ ಎಂದು ಬರೆದು ಗೆಳಯನಿಗೆ ಭಾರತದ ಮಾಜಿ ಆರಂಭಿಕ ಆಟಗಾರ ವಿಶ್ ಮಾಡಿದ್ದಾರೆ.

    ದ್ರಾವಿಡ್ ಅವರಿಗೆ ಶುಭಾಶಯ ತಿಳಿಸಿರುವ ಭಾರತದ ತಂಡದ ಆಟಗಾರ ಅಜಿಂಕ್ಯಾ ರಹಾನೆ ಅವರು, ನನ್ನ ಸ್ಫೂರ್ತಿ, ನನ್ನ ಚೊಚ್ಚಲ ಅಂತಾರಾಷ್ಟೀಯ ಪಂದ್ಯದಲ್ಲಿ ಅವರ ಜೊತೆಗೆ ಆಡಿದ್ದೇನೆ. ಯಾವಾಗಲೂ ನನಗೆ ಮಾರ್ಗದರ್ಶಿ, ನನ್ನ ರೋಲ್ ಮಾಡೆಲ್ ಮತ್ತು ಕ್ರಿಕೆಟಿನ ನಿಧಿ ರಾಹುಲ್ ಭಾಯ್ ಅವರಿಗೆ ಜನ್ಮದಿನದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ತನ್ನ ನೆಚ್ಚಿನ ಗೆಳೆಯನಿಗೆ ಶುಭಾ ಕೋರಿರುವ ಸಚಿನ್ ಅವರು, ಹುಟ್ಟು ಹಬ್ಬದ ಶುಭಾಶಯಗಳು ಜ್ಯಾಮಿ, ನೀನು ಬ್ಯಾಟಿಂಗ್ ಮಾಡುವಾಗ ಬೌಲರ್ ಗಳಿಗೆ ನಿಜವಾಗಿಯೂ ತೊಂದರೆಯಾಗುತ್ತಿತ್ತು. ನಿನಗೆ ಒಳ್ಳೆಯದಾಗಲಿ ನನ್ನ ಗೆಳೆಯ ಎಂದು ಬರೆದುಕೊಂಡಿದ್ದಾರೆ.

    ನನ್ನ ಉತ್ತಮ ಸ್ನೇಹಿತ ರಾಹುಲ್ ದ್ರಾವಿಡ್ ಅವರಿಗೆ ಈ ವಿಶೇಷ ಜನ್ಮದಿನ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿದ ಅದ್ಭುತ ವರ್ಷವನ್ನು ಹಾರೈಸುತ್ತೇನೆ ಎಂದು ವಿವಿಎಸ್ ಲಕ್ಷ್ಮಣ್ ಅವರು ಶುಭಾಶಯ ಹೇಳಿದ್ದಾರೆ. ಸ್ಪಿನರ್ ಹರ್ಭಜನ್ ಸಿಂಗ್ ಅವರು, ಹುಟ್ಟುಹಬ್ಬದ ಶುಭಾಶಯಗಳು ರಾಹುಲ್ ಡ್ರಾವಿಡ್ ನೀವು ಲೆಜೆಂಡ್ ಎಂದು ಬರೆದುಕೊಂಡಿದ್ದಾರೆ.

    ದ್ರಾವಿಡ್ ಅವರಿಗೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿರುವ ಕಿಚ್ಚ ಸುದೀಪ್ ಅವರು, ಸರ್ ನೀವು ಯಾವಾಗಲೂ ನಮಗೆ ಸ್ಫೂರ್ತಿಯಾಗಿದ್ದಿರಾ, ನಿಮ್ಮ ನಂಬಿಕೆ, ನಿಸ್ವಾರ್ಥತೆ ಮತ್ತು ಶ್ರದ್ಧೆ ಎಲ್ಲವನ್ನು ನಾವು ಅನುಸರಿಸಬೇಕು. ಹುಟ್ಟು ಹಬ್ಬದ ಶುಭಾಶಯಗಳು ಸರ್ ಎಂದು ಟ್ವೀಟ್ ಮಾಡಿ ದ್ರಾವಿಡ್ ಜೊತೆಗಿರುವ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ.

    ಇದರ ಜೊತೆಗೆ ದ್ರಾವಿಡ್ ಅವರಿಗೆ ವಿಶ್ ಮಾಡಿರುವ ನಟ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರು, ಕ್ರಿಕೆಟ್ ಪಂದ್ಯಗಳಲ್ಲಿ ಭಾರತವನ್ನು ಎಷ್ಟೋ ಕಠಿಣ ಪರಿಸ್ಥಿತಿಯಿಂದ ಪಾರು ಮಾಡಿದ ವಾಲ್, ನಿಮ್ಮ ರೀತಿ ಯಾರು ಇಲ್ಲ. ಮುಂದೆ ನಿಮ್ಮ ರೀತಿ ಯಾರು ಆಗಲು ಸಾಧ್ಯವಿಲ್ಲ ಎಂದು ಬಣ್ಣಿಸಿ ಬರೆದುಕೊಂಡು, ನೆಚ್ಚಿನ ಕ್ರಿಕೆಟಿಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

  • ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಒಡೆಯನಾಗಿ ಬಂದು ಹಬ್ಬಕ್ಕೆ ಶುಭಕೋರಿದ ದಚ್ಚು

    ಬೆಂಗಳೂರು: ದೇಶದ್ಯಾಂತ ಆಚರಿಸುವ ಗೌರಿ ಗಣೇಶ ಹಬ್ಬಕ್ಕೆ ಒಡೆಯ ಪೋಸ್ಟರ್ ಹಾಕುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಡಿನ ಸಮಸ್ತ ಜನತೆಗೆ ಶುಭಕೋರಿದ್ದಾರೆ.

    ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ದರ್ಶನ್ ಅವರು ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು, ನಿಮ್ಮ ಎಲ್ಲ ಕನಸುಗಳು ಈಡೇರಲಿ, ಆ ದೇವರ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಈ ಟ್ವೀಟ್‍ನಲ್ಲಿ ಸಂದೇಶ್ ಪ್ರೊಡಕ್ಷನ್‍ನಲ್ಲಿ ಎಂ.ಡಿ ಶ್ರೀಧರ್ ಅವರು ನಿರ್ದೇಶನ ಮಾಡುತ್ತಿರುವ ಒಡೆಯ ಸಿನಿಮಾದ ಪೋಸ್ಟರ್ ಹಾಕಿದ್ದಾರೆ. ಈ ಚಿತ್ರಕ್ಕೆ ಅರ್ಜನ್ ಜನ್ಯ ಸಂಗೀತ ನೀಡಿದ್ದಾರೆ.

    ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಹಬ್ಬಕ್ಕೆ ಶುಭಕೋರಿದ್ದು, ಅವರ ಅಭಿನಯದ ಗೀತಾ ಚಿತ್ರದ ಪೋಸ್ಟರ್ ಹಾಕಿ ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿದ್ದಾರೆ.