Tag: green gram masala

  • ಇಂದು ಮಾಡಿ ರುಚಿಯಾದ ಹೆಸರುಕಾಳು ಮಸಾಲಾ

    ಇಂದು ಮಾಡಿ ರುಚಿಯಾದ ಹೆಸರುಕಾಳು ಮಸಾಲಾ

    ಹೆಸರು ಕಾಳು ಮಸಾಲೆ ರೆಸಿಪಿ ನಾಲಿಗೆಗೆ ರುಚಿ ನೀಡುವುದರ ಜೊತೆಗೆ ಆರೋಗ್ಯಕರವಾಗಿರುತ್ತದೆ. ಬೇಳೆ ಸಾರುಗಳನ್ನು ಮಾಡಿಕೊಂಡು ಕಾಲ ಕಳೆಯುತ್ತಿದ್ದಲ್ಲಿ, ನಾವು ಹೇಳುತ್ತಿರುವ ಈ ಹೆಸರು ಕಾಳು ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಇದರಲ್ಲಿ ಹಾಕಿರುವ ಮಸಾಲೆಗಳಿಂದಾಗಿ ಇದು ರೋಟಿ, ದೋಸೆ, ಅನ್ನ ಮತ್ತು ಮುದ್ದೆ ಹೀಗೆ ಎಲ್ಲದರ ಜೊತೆಯಲ್ಲಿ ಇದನ್ನು ಸೇವಿಸಬಹುದಾದ ಗ್ರೇವಿಯನ್ನಾಗಿಸಿದೆ. ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ಮಾಡುವ ವಿಧಾನವನ್ನು ಈ ಕೆಳಗೆ ಸರಳ ವಿಧಾನದಲ್ಲಿ ವಿವರಿಸಲಾಗಿದೆ.


    ಬೇಕಾಗುವ ಸಾಮಗ್ರಿಗಳು:
    * ಹೆಸರು ಕಾಳು – 1 ಕಪ್
    * ಟೊಮೇಟೊ – 1
    * ಈರುಳ್ಳಿ -2
    * ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
    * ಬೆಳ್ಳುಳ್ಳಿ -1
    * ಹಸಿಮೆಣಸಿನ ಕಾಯಿ 3
    * ಲವಂಗ – 3
    * ಖಾರದ ಪುಡಿ – 1 ಚಮಚ
    * ಅರಿಶಿಣ ಪುಡಿ – 1 ಚಮಚ
    * ಅಡುಎಣ್ಣೆ – ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಹೆಸರು ಕಾಳುಗಳನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಿರಿ ಮತ್ತು 2-3 ವಿಷಲ್ ಕುಕ್ಕರಿನಲ್ಲಿ ಬೇಯಿಸಿಕೊಳ್ಳಬೇಕು.
    * ತವಾ ತೆಗೆದುಕೊಳ್ಳಿ, ಮತ್ತು ಅದರಲ್ಲಿ ಎಣ್ಣೆ, ಲವಂಗವನ್ನು ಹಾಕಿ ಹುರಿಯುವಾಗ ಸುವಾಸನೆಯ ಪರಿಮಳ ಬರಬೇಕು.

    * ಈಗ ಇದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ಈರುಳ್ಳಿ ಹಾಕಿ ಹೊಂಬಣ್ಣಕ್ಕೆ ಬರುವವರೆಗು ಬೇಯಿಸಿಕೊಳ್ಳಬೇಕು.

    * ನಂತರ, ಇದಕ್ಕೆ ಬೇಯಿಸಿದ ಹೆಸರು ಕಾಳುಗಳನ್ನು ಹಾಕಿ. ಖಾರದ ಪುಡಿ, ಅರಿಶಿಣ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

    * 3 ಕಪ್ ನೀರನ್ನು ಈ ಮಿಶ್ರಣಕ್ಕೆ ಹಾಕಿ. ಅತ್ತ ನೀರು ಅಲ್ಲದ-ಇತ್ತ ಗಟ್ಟಿಯು ಅಲ್ಲದ ಗ್ರೇವಿಯಾಗುವವರೆಗೆ ಇದನ್ನು ಬೇಯಿಸಿ. ಈಗ ನಿಮ್ಮ ಮುಂದೆ ಖಾರವಾಗಿರುವ ಹೆಸರು ಕಾಳು ಮಸಾಲೆಯು ತಯಾರಾಗಿದೆ. ಇದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಸವಿಯಲು ಸಿದ್ಧವಾಗುತ್ತದೆ.