Tag: green flag

  • ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

    ಬೆಂಗಳೂರು: ಹನುಮಧ್ವಜ (Hanuma Flag) ಬಳಿಕ ಇದೀಗ ಹಸಿರು ಬಾವುಟ ತೆರವು ವಿವಾದವಾಗಿದೆ. ಮಂಡ್ಯದ ಕೆರಗೋಡು (Keragodu Mandya) ಬಳಿಕ ಬೆಂಗಳೂರಿನ ಶಿವಾಜಿನಗರಕ್ಕೂ ಧ್ವಜ ಗಲಾಟೆ ಕಾಲಿಟ್ಟಿದೆ.

    ಶಿವಾಜಿನಗರದ (Shivajinagar) ಚಾಂದಿನಿ ಚೌಕ್‍ನ ಬಳಿಯಲ್ಲಿ ಬಿಬಿಎಂಪಿ ಅಳವಡಿಕೆ ಮಾಡಿರುವ ವಿದ್ಯುತ್ ಕಂಬದಲ್ಲಿ ಹಸಿರು ಧ್ವಜವನ್ನು ಹಾರಿಸಲಾಗಿತ್ತು. ಇದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡುವ ಕೆಲಸ ಶುರು ಮಾಡಿದ್ರು. ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದ ಜನರು ಪ್ರಶ್ನೆ ಮಾಡ್ತಾ ಇದ್ರು. ಈ ಬಗ್ಗೆ ಯತ್ನಾಳ್ ಟ್ವೀಟ್ ಮಾಡಿದ್ರು.

    ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತಕ್ಷಣವೇ ದೌಡಾಯಿಸಿದ್ರು. ಬಳಿಕ ಸ್ಥಳೀಯರನ್ನು ಬಳಸಿಕೊಂಡು ಹಸಿರು ಧ್ವಜ ತೆರವು ಮಾಡೋ ಕೆಲಸ ಮಾಡಿದರು. ನಂತರ ಅದೇ ಜಾಗದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಅಷ್ಟೇ ಅಲ್ಲದೇ ಚಾಂದಿನಿ ಚೌಕ್ ನ ಸರ್ಕಲ್ ಗೆ ಪೂರ ತ್ರಿವರ್ಣ ಧ್ವಜ ಹಾರಿಸಿದ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿವಹಿಸಿದ್ದಾರೆ.

    ಈ ಬಗ್ಗೆ ಸ್ಥಳೀಯ ಅಕ್ಮಲ್ ಎಂಬವರು ಪ್ರತಿಕ್ರಿಯೆ ನೀಡಿದ್ದು, ಕಳೆದ 30 ವರ್ಷಗಳಿಂದ ದರ್ಗಾದ ಬಾವುಟ ಹಾಕಲಾಗಿತ್ತು. ಪೊಲೀಸರು ಬಾವುಟ ಹಾಕಿರುವ ಬಗ್ಗೆ ಮಾಹಿತಿ ಕೇಳಿದ್ರು. ಬಳಿಕ ನೀವೇ ಬಾವುಟವನ್ನ ತೆರವುಗೊಳಿಸುವಂತೆ ಸೂಚಿಸಿದ್ರು. ಪೊಲೀಸರ ಸೂಚನೆಯಂತೆ ಹಸಿರು ಬಾವುಟ ತೆರವುಗೊಳಿಸಿ ರಾಷ್ಟ್ರೀಯ ಬಾವುಟವನ್ನ ಹಾಕಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

    ಘಟನೆ ಬಗ್ಗೆ ಸರ್ಕಾರದ ವಿರುದ್ಧ ಎಂಎಲ್‍ಸಿ ರವಿಕುಮಾರ್ ಕಿಡಿಕಾರಿದ್ದು, ಹನುಮ ಧ್ವಜ ತೆಗೆಸಿದ್ರಿ. ಇದಕ್ಕೆ ಹೇಗೆ ಅನುಮತಿ ಕೊಟ್ಟಿರಿ. ಇದು ಮುಲ್ಲಾ, ಮೌಲ್ವಿ ಸರ್ಕಾರ ಎಂದು ಟೀಕಿಸಿದ್ರು. ನಮ್ಮ ರಾಜ್ಯದ ಮಂಡ್ಯ ಜಿಲ್ಲೆ ಕೆರೆಗೋಡಿನಲ್ಲಿ ಹನುಮಧ್ವಜ ಇಳಿಸಿರೋದನ್ನ ಬಿಜೆಪಿ ಖಂಡಿಸಲಿದೆ. ಹಿಂದೂ ದೇವಸ್ಥಾನಗಳ ಹಣ ಬೇಕು, ಹಿಂದೂ ಎಂಎಲ್‍ಎ ಬೇಕು, ಹಿಂದೂ ಎಂಪಿ ಬೇಕು. ಆದರೆ ಹಿಂದೂ ದೇವರ ಧ್ವಜ ಹಾರಿಸೋದು ಬೇಡ ಅಂತಾರೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ 12 ಪ್ರಶ್ನೆ ಕೇಳ್ತಿದ್ದೀವಿ ಎಂದರು.

  • ಕಾರ್ಕಳದಲ್ಲಿ ಹಸಿರು ಬಾವುಟ ಕಿತ್ತು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ- ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

    ಕಾರ್ಕಳದಲ್ಲಿ ಹಸಿರು ಬಾವುಟ ಕಿತ್ತು ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ- ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

    ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಮುಸ್ಲಿಮರ ಮೇಲೆ ಹಲ್ಲೆ ನಡೆಸಲಾಗಿದೆ. ಹಸಿರು ಬಾವುಟವನ್ನು ಕಿತ್ತು ವ್ಯಕ್ತಿಗೆ ಹಲ್ಲೆ ಹಾಗೂ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

    ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹಲ್ಲೆಗೊಳಗಾದವರನ್ನು ಶೇಖ್ ಮೊಹಸಿನ್ ಹಾಗೂ ಮಹಮ್ಮದ್ ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಸಾವಿರಾರು ಮುಸ್ಲಿಮರು ಜಮಾಯಿಸಿ ಘಟನೆಯನ್ನು ಖಂಡಿಸಿದ್ದಾರೆ.

    ಏನಿದು ಘಟನೆ?: ಗುರುವಾರ ರಾತ್ರಿ ಕಾರ್ಕಳ ಹೊರವಲಯದ ಬಂಗ್ಲೆಗುಡ್ಡೆಯಲ್ಲಿ ದುಷ್ಕರ್ಮಿಗಳು ಹಸಿರು ಬಾವುಟ ಕೆಡವಿ ಶೇಖ್ ಮೊಹಸಿನ್ ಎಂಬವರ ಮೇಲೆ ಮನಬಂದಂತೆ ಸೋಡಾ ಬಾಟಲಿ ಎಸೆದು, ತಲ್ವಾರ್ ಮತ್ತು ಇತರೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದ್ದರು. ಭಜರಂಗದಳದ ಕಾರ್ಯಕರ್ತರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಹಲ್ಲೆಗೊಳಗಾದ ಶೇಖ್ ಮೊಹಸಿನ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬೈಕ್‍ನಲ್ಲಿ ಹೋಗುತ್ತಿದ್ದ ಮಹಮ್ಮದ್ ಎಂಬವರ ಮೇಲೆಯೂ ಹಲ್ಲೆ ಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.

    ಈ ಕುರಿತು ಹಲ್ಲೆಗೊಳಗಾದ ವ್ಯಕ್ತಿಯ ಕಡೆಯಿಂದ ಕಾರ್ ನಂಬರ್ ಸಹಿತ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ಕಾರ್ ನಂಬರ್ ಪರಿಶೀಲಿಸಿದಾಗ ಅದು ಭಜರಂಗದಳದ ಮಹೇಶ್ ಶೆಣೈ ಕಾರ್ ಎಂಬುದಾಗಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸದ್ಯ ಮಹೇಶ್ ಶೆಣೈ, ಗಣೇಶ್ ಪೂಜಾರಿ ಮತ್ತು ಇತರೆ ಮೂವರ ವಿರುದ್ಧ ಕೇಸ್ ದಾಖಲಾಗಿದೆ.

    ಆದ್ರೆ ಬರೀ ಕೇಸ್ ಹಾಕಿದ್ರೆ ಸಾಲದು ಬಂಧಿಸಬೇಕು. ಶಿಕ್ಷೆಗೆ ಒಳಪಡಿಸಬೇಕು ಎಂದು ಮುಸ್ಲಿಮರು ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತಿದ್ದಾರೆ. ಆದ್ರೆ ಇತ್ತ ಮಹೇಶ್ ಶೆಣೈ, ತನ್ನ ಕಾರ್ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ ಎಂದು ಪ್ರತಿ ದೂರು ನೀಡಿದ್ದಾರೆ.

    https://www.youtube.com/watch?v=0oezUYrEqQI