Tag: Green Chilli

  • ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!

    ಕೆಜಿ ಟೊಮೆಟೊಗೆ 200 ರೂ., ಮೆಣಸಿನಕಾಯಿಗೆ 170 ರೂ. – ತರಕಾರಿಗಳ ಬೆಲೆ ಭಾರೀ ದುಬಾರಿ!

    – ಮೆಣಸಿನಕಾಯಿ ಬೆಲೆಯೂ ಏರಿಕೆ, ಬಾಯಿ ಮಾತ್ರವಲ್ಲ ಜನರ ಜೇಬಿಗೂ ಖಾರ 

    ನವದೆಹಲಿ: ಬೆಲೆ ಏರಿಕೆಯಲ್ಲಿ ಟೊಮೆಟೊ (Tomato) ಬಳಿಕ ಈಗ ಮೆಣಸಿನಕಾಯಿ (Green Chilli) ಸರದಿ ಶುರುವಾಗಿದೆ. ಬಾಯಿಗೆ ಮಾತ್ರವಲ್ಲ, ಜನಸಾಮಾನ್ಯರ ಜೇಬಿಗೂ ಹಸಿರು ಮೆಣಸಿನಕಾಯಿ ಖಾರವಾಗಿದೆ.

    ಬೇಸಿಗೆಯ ಬಿಸಿಲು ಹಾಗೂ ಮುಂಗಾರು ಮಳೆ ತಡವಾಗಿದ್ದರಿಂದ ಮೆಣಸಿನಕಾಯಿ ಬೆಲೆಯಲ್ಲಿ (Chilli Price Hike) ಏರಿಕೆ ಕಂಡಿದೆ. ಕಳೆದ ತಿಂಗಳು 60 ರೂ.ಗಳ ಆಸುಪಾಸಿನಲ್ಲಿದ್ದ ಹಸಿರು ಮೆಣಸಿನಕಾಯಿ ಈಗ ಪ್ರತಿ ಕೆಜಿಗೆ 170 ರೂ.ಗಳಿಗೆ ಏರಿಕೆಯಾಗಿದೆ. ಇದರ ಜೊತೆಗೆ ಟೊಮೆಟೊ ಬೆಲೆ ಏರಿಕೆಯೂ ಮುಂದುವರಿದಿದೆ. ಇದನ್ನೂ ಓದಿ: ಬೆಲೆ ಏರಿಕೆ: ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

    ಉತ್ತರಾಖಂಡ ರಾಜ್ಯದ ಗಂಗೋತ್ರಿ, ಯಮುನೋತ್ರಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 250 ರೂ. ಏರಿಕೆಯಾಗಿದೆ. ಉತ್ತರಕಾಶಿಯಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 200 ರೂ. ತಲುಪಿದ್ದು, ಕೋಲ್ಕತ್ತಾದಲ್ಲಿ 152 ರೂ., ದೆಹಲಿಯಲ್ಲಿ 120 ರೂ., ಚೆನ್ನೈನಲ್ಲಿ 117 ರೂ., ಮುಂಬೈನಲ್ಲಿ 108 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲೂ 100 ರಿಂದ 130 ರೂ.ವೆರೆಗೆ ಮಾರಾಟವಾಗುತ್ತಿದೆ. ಇದರೊಂದಿಗೆ ಶುಂಠಿ ಹಾಗೂ ಹೂಕೋಸಿನ ಬೆಲೆಯೂ ಹೆಚ್ಚಾಗಿದೆ. ಇದನ್ನೂ ಓದಿ: ರೈಲ್ವೇ ಬ್ರಿಡ್ಜ್ ನಟ್ ಕಳಚಿದ ಕಿಡಿಗೇಡಿಗಳು – ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಟೊಮೆಟೊ ಆಯ್ತು.. ಈಗ ಶುಂಠಿ, ಹಸಿರು ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ

    ಟೊಮೆಟೊ ಆಯ್ತು.. ಈಗ ಶುಂಠಿ, ಹಸಿರು ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ

    ನವದೆಹಲಿ: ಟೊಮೆಟೊ (Tomato) ಜೊತೆಗೆ ಈಗ ಹೂಕೋಸು (Cauliflower), ಶುಂಠಿ (Ginger), ಹಸಿರು ಮೆಣಸಿನಕಾಯಿ (Green Chilli) ಬೆಲೆಯೂ ಹೆಚ್ಚಳವಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ.

    ಭಾರೀ ಮಳೆ, ಪೂರೈಕೆಯಲ್ಲಿ ಉಂಟಾಗಿರುವ ಅಡೆತಡೆ ಕಾರಣಕ್ಕೆ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ. ಒಂದಿಲ್ಲೊಂದು ತರಕಾರಿ ಬೆಲೆ ಹೆಚ್ಚುತ್ತಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕೆಜಿ ಟೊಮೆಟೊಗೆ 60 ರೂ.: ಅರ್ಧ ಬೆಲೆಗೆ ಪಡಿತರ ಕೇಂದ್ರಗಳಲ್ಲೇ ತಮಿಳುನಾಡು ಸರ್ಕಾರದಿಂದ ಮಾರಾಟ

    ಟೊಮೆಟೊ ಬೆಲೆ ನೂರರ ಗಡಿ ದಾಟಿದೆ. ಪ್ರಸ್ತುತ ದೆಹಲಿಯಲ್ಲಿ ಟೊಮೆಟೋ ಕೆಜಿಗೆ 145 ರೂ.ಗೆ ಮಾರಾಟವಾಗುತ್ತಿದೆ. ಒಂದು ಹೂಕೋಸು ಬೆಲೆ 80 ರೂ., ಕೆಜಿ ಶುಂಠಿಗೆ 380 ರೂ. (100 ಗ್ರಾಂಗೆ 38 ರೂ.) ಮತ್ತು ಹಸಿರು ಮೆಣಸಿನಕಾಯಿ ಕೆಜಿಗೆ 170 ರೂ.ಗೆ ಮಾರಾಟವಾಗುತ್ತಿದೆ.

    ದೇಶವು ಹಣದುಬ್ಬರ ಕಡಿಮೆಯಾಗಬಹುದೆಂದು ನಿರೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಬೆಲೆ ಏರಿಕೆ ಬಿಕ್ಕಟ್ಟು ತಲೆದೋರಿದೆ. ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರವು ಏಪ್ರಿಲ್‌ನಲ್ಲಿ 4.7% ರಿಂದ ಮೇ ತಿಂಗಳಲ್ಲಿ 4.25% ಕ್ಕೆ ಇಳಿದಿದೆ. ಇದನ್ನೂ ಓದಿ: ದೆಹಲಿಯಲ್ಲಿ ಕೆ.ಜಿ ಟೊಮೆಟೋಗೆ 129 ರೂ., ಯುಪಿಯಲ್ಲಿ 150 ರೂ.!

    ತರಕಾರಿ ಬೆಲೆ ಸಾಕಷ್ಟು ಏರಿಕೆಯಾಗಿದೆ. ಕೆಲ ದಿನಗಳ ಹಿಂದೆ ಕೆಜಿಗೆ 20 ರೂ. ಇದ್ದ ವಸ್ತುಗಳು ಈಗ ದುಪ್ಪಟ್ಟಾಗಿವೆ. ಟೊಮೆಟೊ ಹೆಚ್ಚು ದುಬಾರಿಯಾಗಿದೆ ಎಂದು ಗ್ರಾಹಕರೊಬ್ಬರು ತಿಳಿಸಿದ್ದಾರೆ.

    ಬೆಲೆ ಏರಿಕೆ ತಾತ್ಕಾಲಿಕ ವಿದ್ಯಮಾನ ಎಂದು ಸರ್ಕಾರ ಹೇಳುತ್ತಿದ್ದರೆ, ಪ್ರತಿಪಕ್ಷಗಳು ಈ ವಿಚಾರವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿವೆ. ಮಂಗಳವಾರ, ಕಾಂಗ್ರೆಸ್ ವಕ್ತಾರ ಸುಪ್ರಿಯಾ ಶ್ರಿನಾಟೆ ಅವರು ಟೊಮೆಟೊ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳ ಬುಟ್ಟಿಯಿಟ್ಟುಕೊಂಡು ಪತ್ರಿಕಾಗೋಷ್ಠಿ ನಡೆಸಿದರು. ಇದನ್ನೂ ಓದಿ: ಸೇಬಿಗಿಂತ ಟೊಮೆಟೊ ರೇಟೇ ಜಾಸ್ತಿ!

    ಬೆಲೆ ಏರಿಕೆಯ ನಡುವೆ ಮಂಗಳವಾರ ರಾತ್ರಿ ಕರ್ನಾಟಕದ ಹಾಸನದಲ್ಲಿ ಮಹಿಳೆಯೊಬ್ಬರ ಜಮೀನಿನಲ್ಲಿ 2.5 ಲಕ್ಷ ರೂ. ಮೌಲ್ಯದ ಟೊಮೆಟೊ ಕಳ್ಳತನವಾಗಿದೆ. ಹಾಸನ ಜಿಲ್ಲೆಯ ಹಳ್ಳಿಯೊಂದರ ಜಮೀನಿನಲ್ಲಿದ್ದ ಸುಮಾರು 60 ಚೀಲ ಟೊಮೆಟೊಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆ ಕಾಲದಲ್ಲಿ ಮೆಣಸಿನಕಾಯಿಯಿಂದ ಆಗುವ ಲಾಭಗಳು

    ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಸೇವನೆಯಿಂದ ನಮ್ಮ ದೇಹ ತಣ್ಣಗೆ ಇರುತ್ತದೆ ಎನ್ನುವ ಭಾವನೆ ಹಲವರಲ್ಲಿದೆ. ಆದರೆ ಇದು ಸುಳ್ಳು. ಏಕೆಂದರೆ ಈ ಪದಾರ್ಥಗಳು ಸೇವಿಸುವುದರಿಂದ ಇನ್ನಷ್ಟು ದೇಹದ ಉಷ್ಣಾಂಶ ಹೆಚ್ಚಾಗುತ್ತದೆ.

    ಬೇಸಿಗೆ ಕಾಲದಲ್ಲಿ ಜನರು ಮಸಾಲ ಪದಾರ್ಥ ಸೇವಿಸಲು ಹಿಂಜರಿಯುತ್ತಾರೆ. ಆದರೆ ಮಸಾಲ ಪದಾರ್ಥ ತಿನ್ನುವುದರಿಂದ ಸೆಕೆ (ಬೇಗೆ) ಕಡಿಮೆಯಾಗುತ್ತದೆ. ಅದರಲ್ಲೂ ಆಹಾರದಲ್ಲಿ ಹಸಿಮೆಣಸಿನಕಾಯಿ ಇದ್ದರೆ, ಅದು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.

    ಮೆಣಸಿನಕಾಯಿಯಿಂದ ಆಗುವ ಲಾಭಗಳು:
    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್(Antioxidant) ಜೊತೆಗೆ ಡೈಯಟ್ರಿ ಫೈಬರ್(Dietary fiber) ಅಂಶಗಳು ಇರುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಿತ ಪ್ರಮಾಣದ ಹಸಿಮೆಣಸಿನಕಾಯಿ ಸೇವನೆಯಿಂದ ಗ್ಯಾಸ್ ಟ್ರಬಲ್, ಮಲಬದ್ಧತೆ ರೋಗದಿಂದ ದೂರ ಇರಬಹುದಾಗಿದೆ.

    ಹಸಿಮೆಣಸಿನಕಾಯಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ(Antibacterial) ಅಂಶ ಕೂಡ ಇರುತ್ತದೆ. ಹಸಿಮೆಣಸಿನಕಾಯಿ ಸೇವಿಸುವುದರಿಂದ ದೇಹದಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯಾ ಹೋಗುತ್ತದೆ. ಇದರಿಂದ ಇಮ್ಯೂನ್ಯೂ ಸಿಸ್ಟಮ್(Immune System) ಶಕ್ತಿಯುತವಾಗುತ್ತದೆ ಹಾಗೂ ಅಲರ್ಜಿ, ಸೋಂಕಿನಿಂದ ರಕ್ಷಿಸುತ್ತದೆ.

    ಸಂಶೋಧನೆ ಪ್ರಕಾರ ಹಸಿಮೆಣಸಿನಕಾಯಿ ಸೇವನೆಯಿಂದ ರಕ್ತದಲ್ಲಿ ಇರುವ ಶುಗರ್ ನಾರ್ಮಲ್ ಆಗುತ್ತದೆ. ಡಯಾಬಿಟಿಸ್(Diabetes) ರೋಗ ಇರುವವರು ಹಸಿ ಮೆಣಸಿನಕಾಯಿಯನ್ನು ಮಿತಿಯಲ್ಲಿ ಸೇವಿಸಬೇಕು. ಮೆಣಸಿನಕಾಯಿ ಸೇವನೆಯಿಂದ ವಿಟಮಿನ್-ಎ ಲೆವೆಲ್ ಹೆಚ್ಚಾಗುತ್ತದೆ. ಇದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುತ್ತದೆ.