Tag: Greater Bengaluru Bill

  • ಬಿಬಿಎಂಪಿ ವಿಭಜಿಸುವ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ – ಕಾಯ್ದೆಯಲ್ಲಿ ಏನಿದೆ?

    ಬಿಬಿಎಂಪಿ ವಿಭಜಿಸುವ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ – ಕಾಯ್ದೆಯಲ್ಲಿ ಏನಿದೆ?

    ಬೆಂಗಳೂರು: ಬಿಬಿಎಂಪಿ (BBMP) 7 ನಗರ ಪಾಲಿಕೆಗಳಾಗಿ ವಿಭಜನೆ ಮಾಡುವ ಗ್ರೇಟರ್ ಬೆಂಗಳೂರು (Greater Bengaluru) ವಿಧೇಯಕಕ್ಕೆ ರಾಜ್ಯಪಾಲರ (Governer) ಅನುಮೋದನೆ ಸಿಕ್ಕಿದೆ. ಈ ಕುರಿತು ರಾಜ್ಯ ಗೆಜೆಟ್ ಪ್ರಕಟಗೊಂಡಿದೆ.ಇದನ್ನೂ ಓದಿ: ಅಚಾನಕ್ ಗಡಿದಾಟಿದ BSF ಯೋಧನನ್ನು ಬಂಧಿಸಿದ ಪಾಕ್‌

    ಬಜೆಟ್ ಅಧಿವೇಶನದ (Budget Session) ಉಭಯ ಸದನಗಳಲ್ಲಿ ಸುದೀರ್ಘ ಚರ್ಚೆ ಬಳಿಕ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಅಂಗೀಕಾರ ಆಗಿತ್ತು. ಮಾ.17ರಂದು ರಾಜ್ಯಪಾಲರ ಅಂಕಿತಕ್ಕಾಗಿ ರಾಜಭವನಕ್ಕೆ ಕಳುಹಿಸಲಾಗಿತ್ತು. ಆದರೆ ಹೆಚ್ಚಿನ ವಿವರಣೆ ಕೋರಿ ವಿಧೇಯಕವನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ವಾಪಸ್ ಕಳಿಹಿಸಿದ್ದರು. ಬಳಿಕ ಸರ್ಕಾರ ಸ್ಪಷ್ಟನೆಯೊಂದಿಗೆ ಮತ್ತೆ ವಿಧೇಯಕವನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಇದೀಗ ಮತ್ತೆ ಕಳುಹಿಸಿದ್ದ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಪಾಲರ ಅಂಕಿತ ಬೆನ್ನಲ್ಲೇ ರಾಜ್ಯ ಗೆಜೆಟ್ ಪ್ರಕಟಗೊಂಡಿದೆ.

    ಗ್ರೇಟರ್ ಬೆಂಗಳೂರು ಕಾಯ್ದೆಯಲ್ಲಿ ಏನಿದೆ?
    * ಇನ್ಮುಂದೆ ಬಿಬಿಎಂಪಿ ಹೆಸರು ಇರಲ್ಲ. ಅದರ ಬದಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬರಲಿದೆ.
    * ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರು. ಜನ ಪ್ರತಿನಿಧಿಗಳನ್ನು, ವಿವಿಧ ಏಜೆನ್ಸಿಯವರನ್ನು ಈ ಪ್ರಾಧಿಕಾರ ಒಳಗೊಳ್ಳಲಾಗಿದೆ.
    * ಪೊಲೀಸರು, ನೀರು ಸರಬರಾಜು, ಸಾರಿಗೆ, ಅಗ್ನಿಶಾಮಕ, ನಗರ ಯೋಜನೆ ಸೇರಿ ಎಲ್ಲರು ಸಮಿತಿ ಸದಸ್ಯರಾಗಿರುತ್ತಾರೆ.
    * ಇದರಡಿ ಬಿಬಿಎಂಪಿಯನ್ನು 7 ನಗರ ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ. ಎಷ್ಟು ವಾರ್ಡ್ ಅಂತ ಅಂತಿಮವಾಗಿ ಇನ್ನಷ್ಟೇ ತೀರ್ಮಾನ ಆಗಬೇಕಿದೆ.
    * ಪ್ರತೀ ಪಾಲಿಕೆಗೆ 100 ಮೀರದಂತೆ 200ರ ಒಳಗೆ ವಾರ್ಡ್ಗಳ ಹಂಚಿಕೆ.
    * ಮೇಯರ್/ಉಪಮೇಯರ್ ಅವಧಿ ಈಗಿರುವ 1 ವರ್ಷದ ಬದಲು 2.5 ವರ್ಷಕ್ಕೆ ನಿಗದಿ.
    * ಸದಸ್ಯರ ಅಧಿಕಾರವಧಿ 5 ವರ್ಷಕ್ಕೆ ನಿಗದಿ.
    * ಜನಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ ಇರಬಾರದು, 300 ಕೋಟಿ ಕನಿಷ್ಠ ಆದಾಯ ಇರಬೇಕು.
    * ಪ್ರತಿ ನಗರಪಾಲಿಕೆಗೆ ಬೆಂಗಳೂರಿನ ಹೆಸರಿನಿಂದಲೇ ಶೀರ್ಷಿಕೆ ಇರಬೇಕು. ಉದಾ-ಬೆಂ.ಉತ್ತರ, ಬೆಂ.ದಕ್ಷಿಣ.
    * ಆರು ತಿಂಗಳ ಮೊದಲು ಮೇಯರ್ ವಿರುದ್ಧ ಅವಿಶ್ವಾಸ ತರಲು ಅವಕಾಶ ಇಲ್ಲ.
    * ಶಾಸಕರು ಮತ ಹಾಕಲು ಅದೇ ಪ್ರದೇಶದಲ್ಲಿಯೇ ವಾಸ ಇರಬೇಕು
    * ಚುನಾವಣೆ ವೇಳೆ ಪಾಲಿಕೆಯ ವಾರ್ಡ್‌ಗಳಲ್ಲಿ ಎಲ್ಲಾ ಜಾತಿಗಳಿಗೆ ಮೀಸಲಾತಿ
    * ಸ್ಥಳೀಯ ಸಮಿತಿಗಳು ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗಲಿದೆ.ಇದನ್ನೂ ಓದಿ: ಚಾಮರಾಜನಗರ | ಸಂಪುಟ ಸಭೆಯಲ್ಲಿ 3,647 ಕೋಟಿ ವೆಚ್ಚದ ಯೋಜನೆಗಳಿಗೆ ಅಸ್ತು

  • ಗ್ರೇಟರ್ ಬೆಂಗಳೂರು ಬಿಲ್‌ಗೆ ಸಹಿ ಹಾಕಬೇಡಿ – ರಾಜ್ಯಪಾಲರ ಭೇಟಿ ಮಾಡಿ, ಮನವಿ ಸಲ್ಲಿಸಿದ ಬಿಜೆಪಿ

    ಗ್ರೇಟರ್ ಬೆಂಗಳೂರು ಬಿಲ್‌ಗೆ ಸಹಿ ಹಾಕಬೇಡಿ – ರಾಜ್ಯಪಾಲರ ಭೇಟಿ ಮಾಡಿ, ಮನವಿ ಸಲ್ಲಿಸಿದ ಬಿಜೆಪಿ

    ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಪಾಲರನ್ನು ಭೇಟಿ ಮಾಡಿ ಬಿಲ್‌ಗೆ ಸಹಿ ಹಾಕದಂತೆ ಬಿಜೆಪಿ (BJP) ನಿಯೋಗ ಮನವಿ ಸಲ್ಲಿಸಿದೆ.ಇದನ್ನೂ ಓದಿ: ಬೆಂಗಳೂರು-ಮೈಸೂರು ಹೈವೇಯಲ್ಲಿ ಟ್ರಾಮಾ ಸೆಂಟರ್ ಪ್ರಾರಂಭಕ್ಕೆ ಕ್ರಮ: ಸತೀಶ್ ಜಾರಕಿಹೊಳಿ

    ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನೇತೃತ್ವದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗೆ ಸಹಿ ಹಾಕದಂತೆ ಮನವಿ ಮಾಡಿದರು.

    ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಆರ್.ಅಶೋಕ್, ನಿಯಮಾನುಸಾರವಿಲ್ಲದೆ ಅಂಗೀಕರಿಸಿರುವ ಗ್ರೇಟರ್ ಬೆಂಗಳೂರು ಬಿಲ್ ಪರಿಷ್ಕರಿಸುವಂತೆ ಮನವಿ ಮಾಡಿದ್ದೇವೆ. ಬೆಂಗಳೂರನ್ನು ಒಡೆಯಬಾರದು. ಈ ವಿಚಾರವನ್ನ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಜ್ಯಪಾಲರು ಸಹ ನಮ್ಮ ಮನವಿಗೆ ಸ್ಪಂದಿಸಿದ್ದಾರೆ. ಕೀಳು ಬುದ್ಧಿಯ ಕಾಂಗ್ರೆಸ್‌ಗೆ ಪಾಠ ಕಲಿಸುತ್ತೇವೆ ಎಂದು ಕಿಡಿಕಾರಿದರು.ಇದನ್ನೂ ಓದಿ: ಪ್ರಾಯೋಜಕರು ಮಕ್ಕಳಿಗೆ ಬಾತ್, ಹೋಳಿಗೆ ಕೊಟ್ಟಿದ್ದರು, ಇದಕ್ಕೆ ಕ್ರಮ ಆಗಬೇಕು – ನರೇಂದ್ರಸ್ವಾಮಿ

  • ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ

    ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ

    – ಹೋಳು ಮಾಡುವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ
    – ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ: ಡಿಕೆಶಿಗೆ ಹೆಚ್‌ಡಿಕೆ ಟಾಂಗ್‌

    ಬೆಂಗಳೂರು: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ (Greater Bengaluru Governance Bill) ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಎಕ್ಸ್‌ ಪೋಸ್ಟ್‌ನಲ್ಲಿ ಏನಿದೆ?
    ಹೋಳು ಮಾಡವುದು, ಒಡೆದಾಳುವುದರಲ್ಲಿ ಕಾಂಗ್ರೆಸ್ಸಿಗೆ ಕಾಂಗ್ರೆಸ್ಸೇ ಸಾಟಿ!! 75 ವರ್ಷದಿಂದ ಇದನ್ನೇ ಮಾಡಿದೆ, ಮುಂದುವರಿಸಿದೆ. ಕಾಂಗ್ರೆಸ್ ನೀತಿಯೇ Divide and Rule.

    ಅಂದು: ಅಖಂಡ ಭಾರತವನ್ನು ಹೋಳು ಮಾಡಿತು!
    ಇಂದು: ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ!!

    ದುರುದ್ದೇಶವಿಷ್ಟೇ; ನಾಡಪ್ರಭು ಕೆಂಪೇಗೌಡರ ಪರಂಪರೆಯನ್ನು ಬೇರುಸಹಿತ ಹಾಳು ಮಾಡುವುದು. ಗ್ರೇಟರ್‌ ಬೆಂಗಳೂರು ಹೆಸರಿಗಷ್ಟೇ. ಲೂಟರ್‌ ಉದ್ದೇಶ ಕೊಳ್ಳೆ ಹೊಡೆಯುವುದಷ್ಟೇ. ಅಧಿಕಾರ, ಅಭಿವೃದ್ಧಿ ವಿಕೇಂದ್ರೀಕರಣವಲ್ಲ, ಇದು ಲೂಟಿಯ ವಿಕೇಂದ್ರೀಕರಣ!!

    ಲೂಟಿಕೋರರಾದ ಮಹಮ್ಮದ್ ಘಜ್ನಿ, ಮೊಹಮದ್‌ ಘೋರಿ ಸಂಪದ್ಭರಿತ ಭಾರತವನ್ನು ಲೂಟಿಗೈದರು. ಬೆಂಗಳೂರಿಗೆ ಈಗೊಬ್ಬ ಘಜ್ನಿ, ಘೋರಿ ವಕ್ಕರಿಸಿದ್ದಾನೆ. ಲೂಟಿಗೆ 7 ದಾರಿ ಹುಡುಕುತ್ತಿದ್ದಾನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಪರೋಕ್ಷವಾಗಿ ಹೆಚ್‌ಡಿಕೆ ಟಾಂಗ್‌ ಕೊಟ್ಟಿದ್ದಾರೆ.

  • ಗ್ರೇಟರ್ ಬೆಂಗಳೂರು ಮಸೂದೆ ಚರ್ಚೆಗೆ ಸದನ ಸಮಿತಿ ರಚನೆ: ಡಿಕೆಶಿ ಘೋಷಣೆ

    ಗ್ರೇಟರ್ ಬೆಂಗಳೂರು ಮಸೂದೆ ಚರ್ಚೆಗೆ ಸದನ ಸಮಿತಿ ರಚನೆ: ಡಿಕೆಶಿ ಘೋಷಣೆ

    ಬೆಂಗಳೂರು: ನಗರವನ್ನು 5 ಭಾಗಗಳನ್ನಾಗಿ ಮಾಡುವ ಗ್ರೇಟರ್ ಬೆಂಗಳೂರು ವಿಧೇಯಕ (Greater Bengaluru Bill) ಪೆಂಡಿಂಗ್ ಇಟ್ಟು, ಬಿಲ್ ಸಾಧಕ-ಬಾಧಕಗಳ ಚರ್ಚೆಗೆ ಸದನ ಸಮಿತಿ ರಚನೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದೆ.

    ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕ ಅಂಗೀಕಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್‌ (D.K Shivakumar) ಮನವಿ ಮಾಡಿದರು. ಇದಕ್ಕೆ ವಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಬಿಲ್ ಚರ್ಚೆ ಆಗಬೇಕು, ಸದನ ಸಮಿತಿ ಮಾಡಬೇಕು, ಇದನ್ನ ಪೆಂಡಿಂಗ್ ಇಡಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.

    ಇದೇ ವೇಳೆ ವಿಪಕ್ಷ ಸದಸ್ಯರು ಸಹ ಅಶೋಕ್ ಅವರಿಗೆ ಸಾಥ್ ಕೊಟ್ಟರು. ಈ ವೇಳೆ ಮಧ್ಯಪ್ರವೇಶ ಮಾಡಿದ ಡಿಕೆಶಿ, ಕಿರುಚಾಡೋದಕ್ಕೆ ಸಮಯ ಇದೆ. ಗ್ರೇಟರ್ ಬೆಂಗಳೂರು ಬಿಲ್ ವ್ಯಾಪಕವಾಗಿ ಚರ್ಚೆ ಆಗಲಿ. ವಿಪಕ್ಷಗಳ ಶಾಸಕರು ಹೇಳಿದ್ದಾರೆ, ನಮ್ಮ ಸಚಿವರು, ಶಾಸಕರು ಕೂಡ ಚರ್ಚೆ ಮಾಡಲು ಸಲಹೆ ನೀಡಿದ್ದಾರೆ. ಸದನ ಸಮಿತಿ ರಚನೆ ಮಾಡ್ತೀವಿ, ಬಿಲ್ ಪೆಂಡಿಂಗ್ ಇಡುತ್ತೇವೆ ಎಂದು ಸ್ಪಷ್ಟಪಡಿಸಿದರು.