Tag: Great Britain

  • ಹಾಕಿಯಲ್ಲಿ  ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ

    ಹಾಕಿಯಲ್ಲಿ ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ

    ಟೋಕಿಯೋ: 41 ವರ್ಷಗಳ ಬಳಿಕ ಭಾರತದ ಪುರುಷರ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.


    ಇಂದು ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ 3-1 ಗೋಲುಗಳ ಅಂತರದಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.

    ಭಾರತದ ಪರ ದಿಲ್‍ಪ್ರೀತ್ ಸಿಂಗ್ 7ನೇ ನಿಮಿಷ, ಗುರ್ಜಂತ್ ಸಿಂಗ್ 16ನೇ ನಿಮಿಷ ಮತ್ತು ಹಾರ್ದಿಕ್ ಸಿಂಗ್ 57ನೇ ನಿಮಿಷದಲ್ಲಿ ಗೋಲು ಸಿಡಿಸಿ ಭಾರತಕ್ಕೆ ಜಯವನ್ನು ತಂದಿದ್ದಾರೆ.

    1980ರ ಮಾಸ್ಕೋ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ಬಳಿಕ ಇಲ್ಲಿಯವರೆಗೆ ಸೆಮಿಗೆ ಭಾರತ ಪ್ರವೇಶ ಪಡೆದಿರಲಿಲ್ಲ. ಆಗಸ್ಟ್ 3 ರಂದು ನಡೆಯಲಿರುವ ಸೆಮಿಫೈನನಲ್ಲಿ ಭಾರತ ಪ್ರಬಲ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.