Tag: graveyard

  • ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಸ್ಮಶಾನದಲ್ಲಿ ತಿಂಡಿ ತಿಂದು ಗ್ರಹಣ ಆಚರಿಸಿದ ಯುವಕರು

    ಚಿಕ್ಕಮಗಳೂರು: ಈ ಶತಮಾನದ ಕೊನೆಯ ಸೂರ್ಯ ಗ್ರಹಣದಂದು ಯಾವುದೇ ಹೆದರಿಕೆ, ಅಂಜಿಕೆ ಇಲ್ಲದೆ ಗ್ರಹಣದ ಸಮಯದಲ್ಲಿ ಸ್ಮಶಾನದಲ್ಲಿ ಊಟ ಮಾಡಿದ್ದಾರೆ.

    ಜಿಲ್ಲೆಯ ತರೀಕೆರೆ ತಾಲೂಕಿನ ಗಾಳಿಹಳ್ಳಿ ನಿವಾಸಿಗಳಾದ ಮೋಹನ್ ಹಾಗೂ ಪರಶುರಾಮ ಎಂಬವರು ಸ್ಮಶಾನದಲ್ಲಿ ಸಮಾಧಿಯೊಂದರ ಮೇಲೆ ಕೂತು ತಿಂಡಿ ತಿಂದಿದ್ದಾರೆ. ಅಷ್ಟೇ ಅಲ್ಲದೆ ಗ್ರಹಣ ಆರಂಭವಾದಾಗಿನಿಂದ ಸ್ಮಶಾನದಲ್ಲೇ ಇದ್ದು, ಸ್ಮಶಾನವನ್ನು ಶುಚಿ ಮಾಡಿದ್ದಾರೆ.

    ಮೋಹನ್ ಹಾಗೂ ಪರಶುರಾಮ ಸ್ಮಶಾನದಲ್ಲಿ ಅಲ್ಲಲ್ಲೇ ಬಿದ್ದಿದ್ದ ಪೇಪರ್, ಪ್ಲಾಸ್ಟಿಕ್, ಕಸ-ಕಡ್ಡಿಯನ್ನೆಲ್ಲಾ ಒಂದೆಡೆ ಹಾಕಿ ಬೆಂಕಿ ಹಾಕಿದ್ದಾರೆ. ಗ್ರಹಣ ಮುಗಿಯೋವರೆಗೂ ಸ್ಮಶಾನದಲ್ಲೇ ಇದ್ದು 12 ಗಂಟೆ ನಂತರ ಮನೆಗೆ ಹಿಂದಿರುಗಿದ್ದಾರೆ.

    ಸ್ಮಶಾನ, ಅಮವಾಸ್ಯೆ, ಗ್ರಹಣ ಇವ್ಯಾವು ನರಮಾನವನಷ್ಟು ಕ್ರೂರಿ ಅಲ್ಲ ಎನ್ನುವುದು ಈ ಯುವಕರ ನಂಬಿಕೆಯಾಗಿದೆ. ಇವುಗಳಿಗೆ ಮನುಷ್ಯನಲ್ಲಿರುವಷ್ಟು ಕೆಟ್ಟ ಯೋಚನೆ, ಆಲೋಚನೆ ಹಾಗೂ ಚಿಂತನೆಗಳಿಲ್ಲ ಎಂಬುದು ಇವರ ಧೃಡ ನಂಬಿಕೆಯಾಗಿದೆ. ಒಳ್ಳೆಯದ್ದನ್ನ ಯೋಚಿಸುವವರಿಗೆ ಒಳ್ಳೆಯದ್ದೆ ಆಗಲಿದ್ದು, ಕೆಟ್ಟ ಯೋಚನೆ ಇರುವವರಿಗೆ ಆಗುವುದೆಲ್ಲಾ ಕೆಟ್ಟದ್ದೇ ಎಂದು ಹೇಳಿದ್ದಾರೆ.

    ಅಲ್ಲದೆ ಮಾಡುವ ಕೆಲಸ, ಆಡುವ ಮಾತು, ನೋಡುವ ನೋಟ ಚೆನ್ನಾಗಿದ್ದರೆ ಆಗುವುದೆಲ್ಲಾ ಒಳ್ಳೆಯದ್ದೆ. ಗ್ರಹಣ, ಅಮವಾಸ್ಯೆ, ಹುಣ್ಣಿಮೆ ಇದ್ಯಾವುದು ಕೆಟ್ಟದ್ದು ಮಾಡುವುದಿಲ್ಲ ಎಂದು ಮೋಹನ್ ಹಾಗೂ ಪರಶುರಾಮ ನಂಬಿದ್ದಾರೆ.

  • ಹೂತಿದ್ದ ಮಹಿಳೆ ಶವವನ್ನು ಹೊರ ತೆಗೆದು ಅತ್ಯಾಚಾರಗೈದ ದುಷ್ಕರ್ಮಿಗಳು

    ಹೂತಿದ್ದ ಮಹಿಳೆ ಶವವನ್ನು ಹೊರ ತೆಗೆದು ಅತ್ಯಾಚಾರಗೈದ ದುಷ್ಕರ್ಮಿಗಳು

    ಇಸ್ಲಾಮಾಬಾದ್: ಸ್ಮಶಾನದಲ್ಲಿ ಹೂತಿಟ್ಟಿದ್ದ ಮಹಿಳೆಯ ಶವವನ್ನು ಹೊರ ತೆಗೆದು ದುಷ್ಕರ್ಮಿಗಳು ಅತ್ಯಾಚಾರಗೈದ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

    ಮಹಿಳೆಯ ಶವವನ್ನು ಕುಟುಂಬಸ್ಥರು ಶನಿವಾರ ರಾತ್ರಿ ಇಸ್ಮಾಯಿಲ್ ಗೋಥ್ ಸ್ಮಶಾನದಲ್ಲಿ ಸಮಾಧಿ ಮಾಡಿದ್ದರು. ಸಮಾಧಿ ಮಾಡಿದ ಮರುದಿನವೇ ದುಷ್ಕರ್ಮಿಗಳು ಮಹಿಳೆಯ ಶವವನ್ನು ಹೊರತೆಗೆದು ಅತ್ಯಾಚಾರ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಮೃತ ಮಹಿಳೆಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ವೇಳೆ ಮಹಿಳೆ ಮೃತದೇಹ ಸಮಾಧಿಯಿಂದ ಹೊರಗೆ ತೆಗೆಯಲಾಗಿತ್ತು.

    ಕುಟುಂಬಸ್ಥರು ಈ ಬಗ್ಗೆ ಸ್ಮಶಾನದ ಉಸ್ತುವಾರಿಯನ್ನು ಪ್ರಶ್ನಿಸಿದಾಗ, ನಾಯಿಯೊಂದು ಸಮಾಧಿ ಮೇಲಿದ್ದ ಚಪ್ಪಡಿಯನ್ನು ತೆಗೆದಿದೆ ಎಂದು ಹೇಳಿದ್ದಾನೆ. ಆದರೆ ನಾಯಿ ತೆಗೆಯುವಷ್ಟು ಆ ಚಪ್ಪಡಿ ಹಗುರವಾಗಿ ಇರಲಿಲ್ಲ ಎಂದು ಮಹಿಳೆಯ ಕುಟುಂಬಸ್ಥರು ವಾದ ಮಾಡಿದ್ದಾರೆ.

    ಸ್ಮಶಾನ ಉಸ್ತುವಾರಿಯ ಮಾತು ಕೇಳಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಮೃತಪಟ್ಟ ಮಹಿಳೆಯ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಈ ವಿಷಯ ಸಾಬೀತು ಆಗುತ್ತಿದ್ದಂತೆ ಸ್ಮಶಾನದಲ್ಲಿದ್ದ ವ್ಯಕ್ತಿ ಪರಾರಿಯಾಗಿದ್ದಾನೆ.

    ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದರು ಎಂಬುದರ ಬಗ್ಗೆ ಪೊಲೀಸರು ಇನ್ನು ಪತ್ತೆ ಹಚ್ಚಿಲ್ಲ. ಆದರೆ ಈ ಬಗ್ಗೆ ದೂರು ನೀಡಲು ಮೃತ ಮಹಿಳೆಯ ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ.

  • ತಿಥಿ ನಡೆದು 2 ದಿನದ ನಂತ್ರ ವ್ಯಕ್ತಿ ಪ್ರತ್ಯಕ್ಷ – ಕೊನೆ ದರ್ಶನ ಮಾಡಲಾಗದೆ ಪತ್ನಿ, ಪುತ್ರ ಕಣ್ಣೀರು

    ತಿಥಿ ನಡೆದು 2 ದಿನದ ನಂತ್ರ ವ್ಯಕ್ತಿ ಪ್ರತ್ಯಕ್ಷ – ಕೊನೆ ದರ್ಶನ ಮಾಡಲಾಗದೆ ಪತ್ನಿ, ಪುತ್ರ ಕಣ್ಣೀರು

    ಹಾಸನ: ತಿಥಿ ಮಾಡಿದ ಎರಡು ದಿನದ ಬಳಿಕ ವ್ಯಕ್ತಿಯೊಬ್ಬ ಮನೆಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ ಘಟನೆ ಹಾಸನ ತಾಲೂಕು ಶಂಖ ಗ್ರಾಮದಲ್ಲಿ ನಡೆದಿತ್ತು. ತನ್ನದೇ ಪತಿಯ ಮೃತದೇಹ ಎಂದು ತಿಳಿದು ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ಆತನ ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ ಈಗ ಮೃತ ವ್ಯಕ್ತಿಯ ಪತ್ನಿ ಹಾಗೂ ಮಗ ಅಂತಿಮ ದರ್ಶನ ಪಡೆಯುವುದಕ್ಕೆ ಆಗಲಿಲ್ಲ ಎಂದು ಸಮಾಧಿ ಮುಂದೆ ಕಣ್ಣೀರು ಹಾಕಿದ್ದಾರೆ.

    ರಾಜಣ್ಣ (60) ಮೃತ ವ್ಯಕ್ತಿ. ರಾಜಣ್ಣ ಚಿಕ್ಕಮಗಳೂರು ಜಿಲ್ಲೆಯ ಭೈರಾಪುರ ಗ್ರಾಮದವರಾಗಿದ್ದು, ಅವರ ಶರ್ಟ್ ನಿಂದ ಪುತ್ರ ಹಾಗೂ ಪತ್ನಿ ಅವರ ಗುರುತು ಪತ್ತೆ ಹಚ್ಚಿದ್ದಾರೆ. ರಾಜಣ್ಣ ಅವರ ಪುತ್ರ ಮತ್ತು ಪತ್ನಿ ತಮ್ಮ ಸಂಬಂದಿಕರೊಂದಿಗೆ ಶಂಖ ಗ್ರಾಮಕ್ಕೆ ಬಂದಿದ್ದರು. ತನ್ನ ಪತಿಯನ್ನು ಕೊನೆ ಸಮಯದಲ್ಲಿ ದರ್ಶನ ಮಾಡಲು ಸಾಧ್ಯವಾಗದೇ ಅಂತಿಮ ವಿಧಿವಿಧಾನವನ್ನು ಮಾಡಲಾಗದೆ ಅಸಹಾಯಕರಾಗಿ ಸಮಾಧಿ ಮುಂದೆ ಕಣ್ಣೀರು ಹಾಕಿದರು. ಶವವನ್ನು ಹೊರಕ್ಕೆ ತೆಗೆದುಕೊಂಡು ಹೋಗಲು ಕೂಡ ಸಾಧ್ಯವಾಗದೇ ಅದೇ ಸಮಾಧಿಯ ಮಣ್ಣನ್ನು ತೆಗೆದುಕೊಂಡು ವಾಪಸಾಗಿದ್ದಾರೆ.

    ನಡೆದಿದ್ದೇನು?
    ಶಿವಣ್ಣ ಎಂಬವರು ಪತ್ನಿಯೊಂದಿಗೆ ಜಗಳ ಮಾಡಿಕೊಂಡು ನಾಪತ್ತೆಯಾಗಿದ್ದರು. ಶಿವಣ್ಣ ಮನೆಗೆ ಬರದೇ ಇರುವುದರಿಂದ ಕುಟುಂಬಸ್ಥರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು. ಕುಟುಂಬಸ್ಥರು ಶಿವಣ್ಣನ ಮಿಸ್ಸಿಂಗ್ ಕೇಸ್ ದಾಖಲಿಸಿದ 2 ದಿನಗಳ ಬಳಿಕ ಹಾಸನದ ಹೊಸ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹ ಸಿಕ್ಕಿತ್ತು. ಈ ಮೃತದೇಹ ನೋಡಲು ಮೇಲ್ನೋಟಕ್ಕೆ ಶಿವಣ್ಣನ ರೀತಿ ಹೋಲುತ್ತಿತ್ತು. ಹಾಗಾಗಿ ಕುಟುಂಬಸ್ಥರು ಇದು ಶಿವಣ್ಣದೇ ಮೃತದೇಹ ಎಂದು ಭಾವಿಸಿದ್ದರು.

    ಕುಟುಂಬದ ಸದಸ್ಯರು ಶಿವಣ್ಣನ ಮೃತದೇಹ ಎಂದು ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನಡೆಸಿದ್ದರು. ಅಲ್ಲದೆ ಶವ ಸಂಸ್ಕಾರ ಮಾಡಿ ತಿಥಿ ಕೂಡ ಮಾಡಿದ್ದರು. ಆದರೆ ತಿಥಿ ಮಾಡಿದ ಎರಡು ದಿನದ ಬಳಿಕ ಶಿವಣ್ಣ ತನ್ನ ಮನೆಗೆ ಹಿಂದಿರುಗಿದ್ದರು. ಶಿವಣ್ಣ ದಿಢೀರ್ ಎಂದು ಮನೆಯಲ್ಲಿ ಪ್ರತ್ಯಕ್ಷ ಆಗಿರುವುದು ನೋಡಿ ಜನರಲ್ಲಿ ಅಚ್ಚರಿ ಮೂಡಿತ್ತು. ಶಿವಣ್ಣ ಬದುಕಿದ್ದಾರೆ ಎಂಬ ವಿಷಯ ತಿಳಿದು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

  • ಸ್ಮಶಾನದಲ್ಲಿ ದುನಿಯಾ ವಿಜಿ ಹುಟ್ಟುಹಬ್ಬ ಆಚರಿಸಿದ ಗದಗ್ ಅಭಿಮಾನಿಗಳು

    ಸ್ಮಶಾನದಲ್ಲಿ ದುನಿಯಾ ವಿಜಿ ಹುಟ್ಟುಹಬ್ಬ ಆಚರಿಸಿದ ಗದಗ್ ಅಭಿಮಾನಿಗಳು

    ಗದಗ: ಜಿಲ್ಲೆಯ ಅಡವಿ ಸೋಮಾಪುರ ಗ್ರಾಮದಲ್ಲಿರುವ ಅಭಿಮಾನಿಗಳು ದುನಿಯಾ ವಿಜಯ್ ಅವರ 44ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಸ್ಮಶಾನದಲ್ಲಿ ಆಚರಣೆ ಮಾಡಿದ್ದಾರೆ.

    ಗ್ರಾಮದ ಜನರು ಗುರುವಾರ ಮಧ್ಯರಾತ್ರಿ 12 ಗಂಟೆ ನಂತರ ಸ್ಮಶಾನದಲ್ಲಿ ಹುಟ್ಟುಹಬ್ಬ ಆಚರಿಸುವ ಮೂಲಕ ದುನಿಯಾ ವಿಜಿಗೆ ಜೈಕಾರ ಕೂಗಿದ್ದಾರೆ. ಅಷ್ಟೇ ಅಲ್ಲದೇ ಅಭಿಮಾನಿಗಳು ವಿಶೇಷವಾಗಿ ಸ್ಮಶಾನದಲ್ಲಿಯೇ ಹೋಮ, ಹವನದ ಮೂಲಕ ಆಚರಣೆ ಮಾಡಿದರು.

    ಸ್ಮಶಾನದಲ್ಲಿ ದುನಿಯಾ ವಿಜಿ ಫ್ಲೆಕ್ಸ್ ಹಾಕಿ ಅದರ ಮುಂದೆ ಕೇಕ್ ಕಟ್ ಮಾಡಿ ನೆಚ್ಚಿನ ನಟ ಯಶಸ್ಸು ಸಾಧಿಸಲಿ ಎಂದು ಪ್ರಾರ್ಥಿಸಿದರು. ಚಿತ್ರರಂಗದಿಂದ ವಿಜಿಗೆ ಯಾವ ಕಂಠಕಗಳು ಎದುರಾಗದೇ ಇರಲೆಂದು ಅಭಿಮಾನಿಗಳು ವಿಶೇಷ ಪೂಜೆ ಕೂಡ ಸಲ್ಲಿಸಿದರು.

    ಮೂಲಕ ಮೂಢ ನಂಬಿಕೆ ನಿರ್ಮೂಲನೆಯಾಬೇಕು ಎನ್ನುವ ಕಾರಣಕ್ಕೆ ದುನಿಯಾ ವಿಜಯ್ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ್ದೇವೆ ಎಂದು ದುನಿಯಾ ವಿಜಿ ಅಭಿಮಾನಿಗಳು ತಿಳಿಸಿದ್ದಾರೆ.

     

  • ಇಂದು ಡಾ. ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ- ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಇಂದು ಡಾ. ವಿಷ್ಣುವರ್ಧನ್ 8ನೇ ಪುಣ್ಯಸ್ಮರಣೆ- ಅಭಿಮಾನಿಗಳಿಂದ ಅನ್ನದಾನ, ರಕ್ತದಾನ

    ಬೆಂಗಳೂರು: ಚಂದನವನದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಭಿಮಾನಿಗಳನ್ನ ಅಗಲಿ ಇಂದಿಗೆ 8 ವರ್ಷಗಳು ಕಳೆದಿವೆ. ಇಂದು ಅವರ 8ನೇ ಪುಣ್ಯಸ್ಮರಣೆ ದಿನವಾಗಿದೆ.

    ಡಾ.ವಿಷ್ಣುವರ್ಧನ್ ಮರೆಯಲಾಗದ ಮಾಣಿಕ್ಯವಾಗಿದ್ದು, 8ನೇ ಪುಣ್ಯಸ್ಮರಣೆ ಅಂಗವಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಅಭಿಮಾನಿಗಳು ಅನ್ನದಾನ, ರಕ್ತದಾನದ ಜೊತೆಗೆ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.

    ಬೆಳಗ್ಗೆಯೇ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಆಗಮಿಸಿದ್ದು, ವಿವಿಧ ಹೂವುಗಳಿಂದ ಸಮಾಧಿಯನ್ನು ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ. ಭಾರತಿ ವಿಷ್ಟುವರ್ಧನ್ ತಮ್ಮ ನಿವಾಸದಲ್ಲೇ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್ 2009 ಡಿಸೆಂಬರ್ 30 ರಂದು ಅಭಿಮಾನಿಗಳನ್ನ ಅಗಲಿದ್ದರು.

    ವಿಷ್ಣುವಧನ್ ನಾಗರಹಾವು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಅವರು ಸುಮಾರು 200 ಚಿತ್ರಗಳನ್ನ ಮಾಡಿದ್ದು, ಕೊನೆಯ ಚಿತ್ರವಾಗಿ ಆಪ್ತರಕ್ಷಕ ಸಿನಿಮಾವನ್ನು ಮಾಡಿದ್ದರು. ಆದರೆ ಇಂದಿಗೂ ವಿಷ್ಣುವರ್ಧನ್ ಅಭಿಮಾನಿಗಳ ಮನಸ್ಸಿನಲ್ಲಿ ಚಿರಸ್ಮರಣಿಯವಾಗಿ ಉಳಿದಿದ್ದಾರೆ.

  • ತುಂಬಿ ಹರಿವ ಹಳ್ಳದಲ್ಲೇ ಶವ ಹೊತ್ತೊಯ್ದು ಮಾಡ್ಬೇಕು ಅಂತ್ಯಕ್ರಿಯೆ- ಇದು ಬೀದರ್‍ನ ಧನ್ನೂರಿನ ದುಸ್ಥಿತಿ

    ತುಂಬಿ ಹರಿವ ಹಳ್ಳದಲ್ಲೇ ಶವ ಹೊತ್ತೊಯ್ದು ಮಾಡ್ಬೇಕು ಅಂತ್ಯಕ್ರಿಯೆ- ಇದು ಬೀದರ್‍ನ ಧನ್ನೂರಿನ ದುಸ್ಥಿತಿ

    ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಧನ್ನೂರ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಜನ ಪರದಾಡ್ತಿದ್ದಾರೆ.

    ಈ ಗ್ರಾಮದಲ್ಲಿ ಯಾರಾದ್ರೂ ಮೃತಪಟ್ಟರೆ ಅಂತ್ಯಕ್ರಿಯೆ ಮಾಡುವುದೇ ದೊಡ್ಡ ಸವಾಲಾಗಿದೆ. ಗುರುವಾರದಂದು ಗ್ರಾಮದ 56 ವರ್ಷದ ಖಾದರ್‍ಸಾಬ್ ಎಂಬ ವ್ಯಕ್ತಿ ಮೃತಪಟ್ಟಿದ್ರು. ಆದ್ರೆ ಅವರ ಅಂತ್ಯಕ್ರಿಯೆಗೆ ಚುಳಕಾನಾಲಾ ಜಲಾಶಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ಗದ್ದೆಗೆ ಹೋಗಬೇಕಿತ್ತು.

     ಹೀಗಾಗಿ ಸಂಬಂಧಿಕರು ಶವವನ್ನು ಹೊತ್ತು ಸೊಂಟದವರೆಗೆ ನೀರಿನಲ್ಲಿ ಏಳುತ್ತಾ ಬೀಳುತ್ತಲೇ ಸಾಗಿಸಿದ್ದಾರೆ. ಗ್ರಾಮಸ್ಥರು ದಶಕಗಳಿಂದ ಸ್ಮಶಾನ ಭೂಮಿ ಕೊಡಿ ಅಂತ ಕೇಳ್ತಿದ್ರೂ ಯಾವುದೇ ಪ್ರಯೋಜನವಾಗಿಲ್ಲ.

    ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಸರ್ಕಾರದ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ.