Tag: grant

  • ಅನುದಾನದಲ್ಲಿ ತಾರತಮ್ಯ – ಹೈಕೋರ್ಟ್ ಮೊರೆ ಹೋದ ಜೆಡಿಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

    ಅನುದಾನದಲ್ಲಿ ತಾರತಮ್ಯ – ಹೈಕೋರ್ಟ್ ಮೊರೆ ಹೋದ ಜೆಡಿಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

    – ಬಿಜೆಪಿ, ಜೆಡಿಎಸ್ ಕ್ಷೇತ್ರಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುತ್ತಿಲ್ಲ

    ಕೋಲಾರ: ಕೋಲಾರದ (Kolar) ಶ್ರೀನಿವಾಸಪುರ ಜೆಡಿಎಸ್ ಶಾಸಕ ತನ್ನ ಕ್ಷೇತ್ರದ ಅಭಿವೃದ್ಧಿಗೆ ಅನುದಾನ (Grant) ನೀಡದ ಸರ್ಕಾರದ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

    ಸರ್ಕಾರದ ತಾರತಮ್ಯ ನೀತಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಜೆಡಿಎಸ್ ಶಾಸಕ ರಿಟ್ ಅರ್ಜಿ ಸಲ್ಲಿಸಿದ್ದು, ಇದು ಅನುದಾನ ಗೊಂದಲ ಹಾಗೂ ಗಲಾಟೆಗೆ ಕಾರಣವಾಗಿದೆ. ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ (Venkatashiva Reddy) ಹೈಕೋರ್ಟ್‌ನಲ್ಲಿ (High Court) ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ನಮಗೂ ಸರ್ಕಾರ ಅನುದಾನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಜಾತಿಗಣತಿಗೆ ನಡೆಸದ ಶಿಕ್ಷಕರ ವೇತನಕ್ಕೆ ಕತ್ತರಿ – ಬಗ್ಗದೇ ಇದ್ರೆ ಅಮಾನತು ಶಿಕ್ಷೆ

    ಕಾಂಗ್ರೆಸ್ ಶಾಸಕರಿಗೆ ಮಾತ್ರ ತಲಾ 50 ಕೋಟಿ ಅನುದಾನ ಬಿಡುಗಡೆ ಮಾಡಿರುವ ಸರ್ಕಾರ, ಜೆಡಿಎಸ್ ಹಾಗೂ ಬಿಜೆಪಿ ಶಾಸಕರಿರುವ ಕಡೆಗಳಲ್ಲಿ ಅನುದಾನ ನೀಡುತ್ತಿಲ್ಲ ಎಂದು ಈ ಮೊದಲೇ ಕಿಡಿಕಾರಿದ್ದರು. ಅದರಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಪದೇ ಪದೇ ಮನವಿ ಮಾಡಿದರೂ ಸಹ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಸಂವಿಧಾನದ ಆರ್ಟಿಕಲ್ 14ರ ಸಮಾನತೆಯ ನೀತಿ ಉಲ್ಲಂಘಿಸಿದೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಅನುದಾನ ಬಿಡುಗಡೆ ಮಾಡದಿದ್ರೆ ರಾಜಕೀಯ ನಿವೃತ್ತಿ, ಯಾವ ಪಕ್ಷಕ್ಕೂ ಹೋಗಲ್ಲ: ಶಾಸಕ ಸತೀಶ್ ಸೈಲ್

    ಜೆಡಿಎಸ್, ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಮೊದಲು ವಿಧಾನಸಭೆ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿದರೂ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಈ ಹಿಂದೆಯೂ ಹಲವು ಬಾರಿ ಅನುದಾನ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಪದೆಪದೇ ಕೆಂಡ ಕಾರಿದ್ದರು. ಇದನ್ನೂ ಓದಿ: ಫೋನ್‌ ಟ್ಯಾಪಿಂಗ್‌ ಕೇಸ್;‌ ಅಲೋಕ್‌ ಕುಮಾರ್‌ ವಿರುದ್ಧದ ತನಿಖಾ ಆದೇಶ ರದ್ದು – ಸರ್ಕಾರಕ್ಕೆ ಭಾರೀ ಹಿನ್ನಡೆ

  • ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ

    ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ

    ಬೆಂಗಳೂರು: ವಿಪಕ್ಷಗಳಿಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡದೇ ಆಕ್ರೋಶಕ್ಕೆ ಕಾರಣವಾಗಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಕೊನೆಗೂ ವಿಪಕ್ಷಗಳಿಗೆ ಅನುದಾನ (Grant) ರಿಲೀಸ್ ಮಾಡಿದ್ದಾರೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ತಲಾ 25 ಕೋಟಿಯಂತೆ ಅನುದಾನ ರಿಲೀಸ್ ಮಾಡಲು ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಸಿಎಂ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಹಿಂದೆ ಕಾಂಗ್ರೆಸ್ (Congress) ಶಾಸಕರಿಗೆ ಮಾತ್ರ 50 ಕೋಟಿ ರೂ. ಅನುದಾನ ಸಿಎಂ ರಿಲೀಸ್ ಮಾಡಿದ್ದರು. ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಧಿವೇಶನದಲ್ಲಿ ಈ ಬಗ್ಗೆ ವಿಪಕ್ಷಗಳು ವಿರೋಧ ಮಾಡಿದ್ದವು. ಇದೀಗ ವಿಪಕ್ಷಗಳ ಶಾಸಕರಿಗೂ ಸಿಎಂ ಅನುದಾನ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್

    ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅಡಿ ಬರುವ ರಸ್ತೆ, ಸೇತುವೆ ಹಾಗೂ ನಗರಾಭಿವೃದ್ಧಿ ಇಲಾಖೆ ಅಡಿ ಬರೋ ನಗರ ಪ್ರದೇಶ ಕಾಮಗಾರಿಗಳಿಗೆ 18.75 ಕೋಟಿ ರೂ. ಬಿಡುಗಡೆ ಹಾಗೂ ವಿವೇಚನಾಧಿಕಾರದಡಿ ವಿಧಾನಸಭೆ ಸದಸ್ಯರು ಆಯ್ಕೆ ಮಾಡಬಹುದಾದ ಇತರ ಇಲಾಖೆ ಕಾಮಗಾರಿಗಳಿಗೆ 6.25 ಕೋಟಿ ರೂ. ಬಿಡುಗಡೆ ಸೇರಿ ಒಟ್ಟು 25 ಕೋಟಿ ರೂ. ಅನುದಾನ ಬಿಡುಗಡೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು – ಮರು ಮತ ಎಣಿಕೆಗೆ ಹೈಕೋರ್ಟ್ ಆದೇಶ

  • ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು, ರಾಜೀನಾಮೆ ಕೊಟ್ಟು ರಾಜ್ಯ ಉಳಿಸಿ: ಅಶೋಕ್

    ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು, ರಾಜೀನಾಮೆ ಕೊಟ್ಟು ರಾಜ್ಯ ಉಳಿಸಿ: ಅಶೋಕ್

    – ಅನುದಾನ ವಿಚಾರವಾಗಿ ಟೀಕೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯನವರೇ (Siddaramaiah) ಇನ್ನೆಷ್ಟು ಸಿನ ಈ ಭಂಡ ಬಾಳು, ರಾಜೀನಾಮೆ (Resign) ಕೊಟ್ಟು ರಾಜ್ಯವನ್ನು ಉಳಿಸಿ ಎಂದು ವಿಪಕ್ಷ ನಾಯಕ ಆರ್ ಅಶೋಕ್ (R Ashok) ಟೀಕಿಸಿದ್ದಾರೆ.

    ಅನುದಾನಕ್ಕಾಗಿ (Grant) ಸಚಿವ ಚಲುವರಾಯಸ್ವಾಮಿ (Chaluvarayaswamy) ಸಿಎಂಗೆ ಮನವಿ ವಿಚಾರದ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರದ ಕೃಷಿ ಸಚಿವರು, ನಾಲ್ಕನೇ ಬಾರಿಗೆ ಶಾಸಕರಾಗಿ ಆರಿಸಿ ಬಂದಿರುವವರು ತಮ್ಮ ಕ್ಷೇತ್ರದ ಪರಿಶಿಷ್ಟ ಪಂಗಡಗಳ ಕಾಲೋನಿ ಅಭಿವೃದ್ಧಿಗೆ ಕೇವಲ 2 ಕೋಟಿ ರೂಪಾಯಿ ಅನುದಾನ ಪಡೆಯಲು ಮುಖ್ಯಮಂತ್ರಿಗಳ ಬಳಿ ಅಂಗಲಾಚಬೇಕು ಅಂದರೆ ಕರ್ನಾಟಕ ಸರ್ಕಾರ ಎಷ್ಟು ದಿವಾಳಿ ಆಗಿದೆ ಅನ್ನುವುದನ್ನ ನೀವೇ ಊಹಿಸಿಕೊಳ್ಳಿ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಿರುಕುಳ ಆರೋಪ – ಮಾಜಿ ಕಾರ್ಪೊರೇಟರ್ ದಂಪತಿ, ಪುತ್ರನ ವಿರುದ್ಧ FIR

    ಎಕ್ಸ್‌ನಲ್ಲಿ ಏನಿದೆ?
    ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು ‘ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಕಾಲಿಗೆ ಬೀಳಬೇಕು’ ಎನ್ನುತ್ತಾರೆ. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರಾದ ಬಸವರಾಜ ರಾಯರೆಡ್ಡಿ ಅವರು ‘ನಿಮಗೆ ರಸ್ತೆ ಬೇಕಾದ್ರೆ ಗ್ಯಾರೆಂಟಿ ಯೋಜನೆ ಬಂದ್ ಮಾಡ್ತೀವಿ’ ಎನ್ನುತ್ತಾರೆ. ಶಾಸಕ ಗವಿಯಪ್ಪನವರಂತೂ ಪಾಪ ಒಂದು ಹೆಜ್ಜೆ ಮುಂದೆ ಹೋಗಿ ‘ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವಿಧಾನಸೌಧದ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ’ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಸಹೋದರಿ ಮೇಲೆ ಮೊಟ್ಟೆ ಎಸೆತ

    ಇನ್ನು ಶಾಸಕರಾದ ಬಿ.ಆರ್. ಪಾಟೀಲರು, ರಾಜು ಕಾಗೆ ಅವರು ಸೇರಿದಂತೆ ಅನೇಕ ಶಾಸಕರು ಅನುದಾನವಿಲ್ಲದೆ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲೂ ಆಗುತ್ತಿಲ್ಲ ಅಂತಾರೆ. ಈ ಬಗ್ಗೆ ಸೂಪರ್ ಸಿಎಂ ಸುರ್ಜೆವಾಲಾ ಅವರಿಗೆ ದೂರು ಕೊಟ್ಟಿರುವುದನ್ನ ಮಾಧ್ಯಮಗಳು ಬಿತ್ತರಿಸಿವೆ. ಇನ್ನೆಷ್ಟು ದಿನ ಸಿಎಂ ಸಿದ್ದರಾಮಯ್ಯನವರೇ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ – ನೋಯ್ಡಾದಲ್ಲಿ ಆರೋಪಿ ಅರೆಸ್ಟ್

  • ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ರಾಜ್ಯ ಸರ್ಕಾರ ಅನ್ಯಾಯ: ಸುರೇಶ್ ಬಾಬು

    ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ರಾಜ್ಯ ಸರ್ಕಾರ ಅನ್ಯಾಯ: ಸುರೇಶ್ ಬಾಬು

    – ಆ.11ರ ಒಳಗೆ ಸಮಾನ ಅನುದಾನ ಹಂಚಿಕೆಯಾಗದಿದ್ರೆ ಅಧಿವೇಶನದಲ್ಲಿ ಹೋರಾಟ ಎಚ್ಚರಿಕೆ

    ಬೆಂಗಳೂರು: ರಾಜ್ಯ ಸರ್ಕಾರ ಜೆಡಿಎಸ್ (JDS) ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಅನ್ಯಾಯ ಮಾಡುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು (Suresh Babu) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಣಿಸುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಕ್ಕೆ ಹಣ ಕೊಡುತ್ತಿಲ್ಲ. ಈ ಸರ್ಕಾರ ಅಭಿವೃದ್ಧಿ ಪರ ಇಲ್ಲ. ಈ ಸರ್ಕಾರದಲ್ಲಿ ಸುರ್ಜೇವಾಲ ಸೂಪರ್ ಸಿಎಂ ಆಗಿದ್ದಾರೆ. ಜನರು ಸುರ್ಜೇವಾಲಗೆ ಓಟ್ ಹಾಕಿದ್ರಾ? ಸುರ್ಜೇವಾಲ ಶಾಸಕರ ಜೊತೆ ಮಾತನಾಡುತ್ತಿದ್ದಾರೆ. ಸುರ್ಜೇವಾಲ ಹೇಳಿದ ಮೇಲೆ ಸಿಎಂ 50 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಸಿಎಂ ವಿಶೇಷ ಅಧಿಕಾರಿಗಳಿಗೆ ಪಟ್ಟಿ ಕೊಡಿ ಅಂತ ಶಾಸಕರಿಗೆ ಸಿಎಂ ಪತ್ರ ಬರೆದಿದ್ದಾರೆ. ದುಡ್ಡು ಇದ್ದರೆ ಇವರು ಯಾಕೆ ಹಣ ಕೊಡುತ್ತಿಲ್ಲ? ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡೋಕೆ ಈ ಸರ್ಕಾರ ಮುಂದಾಗಿದೆ. ವಿಶೇಷ ಅನುದಾನ ಅಂತ ಬಿಡುಗಡೆ ಮಾಡಿ ಅದನ್ನು ಹೈಕಮಾಂಡ್‌ಗೆ ಕಪ್ಪ-ಕಾಣಿಕೆ ಕೊಡುತ್ತಿದ್ದಾರೆ ಅನ್ನಿಸುತ್ತಿದೆ. ಸಿಎಂ ಈ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅನ್ಯ ಧರ್ಮಗಳ ಪಾಲನೆ – ತಿರುಪತಿಯ ನಾಲ್ವರು ನೌಕರರ ಅಮಾನತು

    ಕ್ಯಾಬಿನೆಟ್‌ನಲ್ಲಿ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ., ಬಿಜೆಪಿ ಅವರಿಗೆ 25 ಕೋಟಿ ರೂ. ಕೊಡೋಣ ಅಂತ ಚರ್ಚೆ ಆಗಿದೆ. ಜೆಡಿಎಸ್ ಶಾಸಕರಿಗೆ ಈಗಲೇ ಅನುದಾನ ಕೊಡೋದು ಬೇಡ ಅಂತ ಇವರು ಚರ್ಚೆ ಮಾಡಿದ್ದಾರೆ. ರಾಜ್ಯದಲ್ಲಿ 224 ಶಾಸಕರು ಒಂದೇ. ಇವರೇನು ಕೆಪಿಸಿಸಿಯಿಂದ ನಮಗೆ ಹಣ ಕೊಡುತ್ತಿಲ್ಲ. ಶಾಸಕರ ನಿಧಿಯಲ್ಲಿ ಹಣ ಕೊಡಬೇಕು. ಯಾವುದೇ ತಾರತಮ್ಯ ಮಾಡದೇ ಎಲ್ಲಾ ಶಾಸಕರಿಗೆ ಅನುದಾನ ಕೊಡಬೇಕು. ಇಲ್ಲದೇ ಹೋದರೆ ರಾಜ್ಯಾದ್ಯಂತ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸಂಸದರು ಮೋದಿ ಮುಂದೆ ನಿಂತು ಮಾತಾಡೋಕೆ ನಡುಗುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

    ಜೆಡಿಎಸ್ ಶಾಸಕರಿಗೆ ಅನುದಾನ ಕೊಟ್ಟಿಲ್ಲ. ಈಗ ಮಾಡಿರೋ ಕಾಮಗಾರಿಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಅವರ ಪಕ್ಷದವರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಾರೆ. ಜೆಡಿಎಸ್ ಅವರಿಗೆ ಯಾಕೆ ಹಣ ಬಿಡುಗಡೆ ಮಾಡಿಲ್ಲ. ಎಲ್ಲಾ ಶಾಸಕರನ್ನು ಒಂದಾಗಿ ನೋಡಿ. ತಾರತಮ್ಯ ಮಾಡೋದು ಸರಿಯಲ್ಲ. ವಿಧಾನಸಭೆ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ ಶಾಸಕರಿಗೂ ಅನುದಾನ ಕೊಟ್ಟಿಲ್ಲ. ಸೂಪರ್ ಸಿಎಂ ಹೇಳಿದ ಮೇಲೆ ಕಾಂಗ್ರೆಸ್ ಶಾಸಕರಿಗೆ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 11ರ ಒಳಗೆ ಸಮಾನವಾಗಿ ಅನುದಾನ ಹಂಚಿಕೆ ಆಗಬೇಕು. ಇಲ್ಲದೆ ಹೋದ್ರೆ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ಖಡಕ್ ವಾರ್ನಿಮಗ್ ನೀಡಿದ್ದಾರೆ. ಇದನ್ನೂ ಓದಿ: Kolar | ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಪೊಲೀಸರ ದಾಳಿ – ಹಾಲಿನಲ್ಲಿ ಕೆಮಿಕಲ್ ಅಂಶ ಪತ್ತೆ

  • ತುಮಕೂರು ನಗರ ಕ್ಷೇತ್ರದ ಮೇಲೆ ಕಣ್ಣಿಟ್ರಾ ಪರಂ? – ನೂರಾರು ಕೋಟಿ ಅನುದಾನ ಕೊಡಿಸಿ ಅಭಿವೃದ್ಧಿಯತ್ತ ಗಮನ

    ತುಮಕೂರು ನಗರ ಕ್ಷೇತ್ರದ ಮೇಲೆ ಕಣ್ಣಿಟ್ರಾ ಪರಂ? – ನೂರಾರು ಕೋಟಿ ಅನುದಾನ ಕೊಡಿಸಿ ಅಭಿವೃದ್ಧಿಯತ್ತ ಗಮನ

    ತುಮಕೂರು: ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಕೊರಟಗೆರೆ (Koratgere) ಕ್ಷೇತ್ರಕ್ಕಿಂತ ತುಮಕೂರು ನಗರ ಕ್ಷೇತ್ರದ ಮೇಲೆ ಹೆಚ್ಚಿನ ಕಾಳಜಿ ತೋರಿಸುತ್ತಿದ್ದಾರೆ. ಬರಪೂರ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡುವಲ್ಲಿ ಗಮನ ಕೇಂದ್ರೀಕೃತಗೊಳಿಸಿದ್ದಾರೆ. ಜಿ.ಪರಮೇಶ್ವರ್ ಅವರ ಈ ಅಭಿವೃದ್ಧಿ ಹಿಂದೆ ಹೊಸ ರಾಜಕೀಯ ಲೆಕ್ಕಾಚಾರ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

    ತುಮಕೂರು (Tumakuru) ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಗೈರಿನಲ್ಲಿ ಸಚಿವ ಜಿ.ಪರಮೇಶ್ವರ್ ಅಭಿವೃದ್ಧಿ ಕಾರ್ಯದ ಬಗ್ಗೆ ಹೇಳುತ್ತಿದ್ದಾರೆ. ತಮ್ಮ ಸ್ವಕ್ಷೇತ್ರ ಕೊರಟಗೆರೆಗಿಂತ ತುಮಕೂರು ನಗರ ಕ್ಷೇತ್ರದ ಬಗ್ಗೆ ಸಚಿವರು ಹೆಚ್ಚು ಮುತುವರ್ಜಿ ವಹಿಸುತಿದ್ದಂತೆ ಕಾಣುತ್ತಿದೆ. ಈ ಕಾಳಜಿ ಹಿಂದೆ ಹೊಸ ರಾಜಕೀಯ ಲೆಕ್ಕಾಚಾರ ಇದೆ ಎಂಬ ವಿಶ್ಲೇಷಣೆ ಶುರುವಾಗಿದೆ. ಇದನ್ನೂ ಓದಿ: ಬೆಳಗಾವಿ ನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು

    ಜಿ.ಪರಮೇಶ್ವರ್‌ರ ಹೊಸ ರಾಜಕೀಯ ಲೆಕ್ಕಾಚಾರ ಏನು ಅಂತ ನೋಡುವುದಾದರೆ, 2028ರ ವಿಧಾನಸಭಾ ಚುನಾವಣಾ ವೇಳೆಗೆ ಕ್ಷೇತ್ರಗಳ ಮೀಸಲು ಬದಲಾವಣೆ ಆಗುವ ಸಾಧ್ಯತೆ ಹೆಚ್ಚಿದೆ. ಕೊರಟಗೆರೆ ಮೀಸಲು ಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರ ಆಗುವ ಸಾಧ್ಯತೆ ಇದೆ. ತುಮಕೂರು ನಗರ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಉಳಿದರೂ ಇಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತಾವು ನಗರದಿಂದಲೇ ಸ್ಪರ್ಧಿಸಬೇಕು ಅನ್ನೋದು ರಾಜಕೀಯ ಲೆಕ್ಕಾಚಾರ ಇದೆ ಎನ್ನಲಾಗ್ತಿದೆ. ತುಮಕೂರು ನಗರ ಕ್ಷೇತ್ರದಲ್ಲಿ 50 ಸಾವಿರ ಮುಸ್ಲಿಂ ಮತ, 20 ಸಾವಿರ ಇತರ ಅಲ್ಪಸಂಖ್ಯಾತ ಮತ ಕಾಂಗ್ರೆಸ್ ಫಿಕ್ಸ್ ಆಗಿದೆ. ಜಿ.ಪರಮೇಶ್ವರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ದಲಿತ ಹಾಗೂ ಹಿಂದುಳಿದ ಮತಗಳು ಕ್ರೋಢೀಕರಣ ಆಗಲಿದೆ ಎಂಬ ಹೊಸ ಗಣಿತ ಗುರುವಾಗಿದೆ. ಇದೇ ದೂರದೃಷ್ಟಿಯಿಂದ ಜಿ.ಪರಮೇಶ್ವರ್ ತುಮಕೂರು ನಗರ ಕ್ಷೇತ್ರ ಅಭಿವೃದ್ಧಿಗೆ ಗಮನ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾಧ್ಯಮಗಳಲ್ಲಿ‌ಬರುವ ವಿಚಾರ‌ ಸತ್ಯವೋ? ಸುಳ್ಳೋ ‌ಅಂತ‌ ತೀರ್ಮಾನಿಸಬೇಕಾಗಿರೋದು ಸಮಾಜ : ಹೆಚ್. ಆರ್.ರಂಗನಾಥ್

    ಒಂದು ಕಡೆ ಇದೇ ಅವಧಿಯಲ್ಲಿ ಸಿಎಂ ಆಗಲೇಬೇಕು ಎಂದು ಪರಂ ಬಣ ಹೈಕಮಾಂಡ್ ಮಟ್ಟದಲ್ಲಿ ಎಡತಾಕುತ್ತಿದೆ. ಈ ಬಾರಿ ಚಾನ್ಸ್ ತಪ್ಪಿದ್ರೂ ಮುಂದಿನ ಬಾರಿ ಗೆದ್ದು ಸಿಎಂ ಕುರ್ಚಿ ಹಿಡಿಯೋಣ ಎಂಬ ಹಂಬಲದಿಂದ ತುಮಕೂರು ನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಚಾಕೊಲೇಟ್ ಆಸೆ ತೋರಿಸಿ 11ರ ಬಾಲಕಿ ಮೇಲೆ ಅತ್ಯಾಚಾರ

  • ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲು: ಪರಮೇಶ್ವರ್

    ಸಿದ್ದಗಂಗಾ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲು: ಪರಮೇಶ್ವರ್

    ತುಮಕೂರು: ಶಿವೈಕ್ಯ ಶಿವಕುಮಾರ ಶ್ರೀಗಳ (Shivakumar Swamiji) ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಸಿದ್ದಗಂಗಾ ಮಠಕ್ಕೆ (Siddaganga Mutt) ಭೇಟಿ ಕೊಟ್ಟು ಶ್ರೀಗಳ ಗದ್ದಿಗೆಗೆ ಪೂಜೆ ಸಲ್ಲಿಸಿದರು. ಶಿವಕುಮಾರ ಶ್ರೀಗಳ ಸಮಾಜ ಸೇವೆಯನ್ನು ಸ್ಮರಿಸಿದರು.

    ಇದೇ ವೇಳೆ ಮಾತನಾಡಿದ ಪರಮೇಶ್ವರ್, ಶಿವಕುಮಾರ ಶ್ರೀಗಳ ಹೆಸರಿನಲ್ಲಿ ಆಚರಿಸಲು ಉದ್ದೇಶಿಸಿರುವ ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದರು. ಅಲ್ಲದೇ ವೀರಾಪುರದಲ್ಲಿ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕಾಡು ರಕ್ಷಕನಿಂದಲೇ ಆನೆ ದಂತ ಸಾಗಾಟ – ಫಾರೆಸ್ಟ್ ವಾಚರ್, ಸಂಬಂಧಿ ಬಂಧನ

    ಇದೇ ವೇಳೆ ಕೆಲ ರಾಜಕೀಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಂಗಳವಾರ ಬೆಳಗಾವಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ತ್ಯಾಗದ ಬಗ್ಗೆ ಮಾತನಾಡಿರೋದು ಯಾವ ಅರ್ಥದಲ್ಲಿ ಅನ್ನೋದು ಗೊತ್ತಿಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ‍್ಯ ಹೋರಾಟದಿಂದಲೂ ತ್ಯಾಗ ಮಾಡುತ್ತಾ ಬಂದಿದೆ. ಆದರೆ ಈಗಿನ ಆಧುನಿಕ ಸಮಾಜಕ್ಕೆ ತ್ಯಾಗದ ಮನೋಭಾವ ಕಡಿಮೆಯಾಗಿದೆ ಎಂಬ ಅರ್ಥದಲ್ಲಿ ಹೇಳಿರಬಹುದು. ಅದರಂತೆ ಸ್ವಾಭಾವಿಕವಾಗಿ ಕಾಂಗ್ರೆಸ್‌ನಲ್ಲೂ ತ್ಯಾಗದ ಮನೋಭಾವ ಕಡಿಮೆ ಆಗಿದೆ ಎಂದು ಹೇಳಿರಬಹುದು ಎಂದರು. ಇದನ್ನೂ ಓದಿ: ವ್ಹೀಲ್ ಚೇರ್‌ನಲ್ಲಿ ರಶ್ಮಿಕಾ ಮಂದಣ್ಣ- ವಿಡಿಯೋ ವೈರಲ್‌

    ಮೈಕ್ರೋಫೈನಾನ್ಸ್ನವರು ಗೈಡ್‌ಲೈನ್ಸ್ ಉಲ್ಲಂಘಿಸಿ ಸಾಲಗಾರರಿಗೆ ತೊಂದರೆ ಕೊಡುತ್ತಿದ್ದಾರೆ. ಸಂತ್ರಸ್ತರು ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಹಲವು ಜನರ ಮೇಲೆ ಕ್ರಮ ಕೈಗೊಂಡಿದ್ದೇವೆ. ಹಾಗೆಯೇ ಲೈಸೆನ್ಸ್ ಇಲ್ಲದ ಫೈನಾನ್ಸ್ನವರ ಸರ್ವೆಯನ್ನು ಹಣಕಾಸು ಇಲಾಖೆ ಮಾಡಬೇಕು ಎಂದು ನುಣುಚಿಕೊಂಡರು. ಇದನ್ನೂ ಓದಿ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರಲು ನಾಲಾಯಕ್: ಜೆಡಿಎಸ್ ಕಿಡಿ

  • 189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ

    189 ಕ್ಷೇತ್ರಗಳ ಶಾಸಕರಿಗೆ ತಲಾ 10 ಕೋಟಿ ಅನುದಾನ ಬಿಡುಗಡೆ ಮಾಡಿದ ಸಿಎಂ

    ಬೆಂಗಳೂರು: ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡುತ್ತಿದ್ದ ಶಾಸಕರನ್ನ ಸಮಾಧಾನ ಪಡಿಸಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗ್ರಾಮೀಣ ಭಾಗದ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ.

    2024-25ನೇ ಸಾಲಿನಲ್ಲಿ ರಾಜ್ಯದಲ್ಲಿ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ಹಾನಿಗೊಳಗಾದ ಗ್ರಾಮೀಣ ರಸ್ತೆ, ಸೇತುವೆ ಮತ್ತು ಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯದ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ (Assembly Constituencies) ಸರ್ಕಾರದಿಂದ ತಲಾ 10 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: Delhi Poll | ಗರ್ಭಿಣಿಯರಿಗೆ 21,000 ರೂ., ಪ್ರತಿ ಮಹಿಳೆಗೆ 2,500 ರೂ., 500 ರೂ.ಗೆ ಗ್ಯಾಸ್‌ ಸಿಲಿಂಡರ್‌ – ಬಿಜೆಪಿ ʻಸಂಕಲ್ಪ ಪತ್ರʼ ಬಿಡುಗಡೆ

    ಗ್ರಾಮೀಣ ಭಾಗದ 189 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗಳು ತೀವ್ರ ಹಾನಿಯಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ರಾಜ್ಯದ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿಗಳಂತೆ ಒಟ್ಟು 1,890 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ – ರಷ್ಯಾ ಪರ ಹೋರಾಡ್ತಿದ್ದ 12 ಭಾರತೀಯರು ಬಲಿ, 16 ಮಂದಿ ನಾಪತ್ತೆ

    ಮಳೆ ಹಾನಿಗೆ ಒಳಗಾದ ರಸ್ತೆ ಸೇತುವೆ ಮತ್ತು ಚರಂಡಿ ಕಾಮಗಾರಿ ಕೈಗೊಳ್ಳಲು ಹಣ ಬಿಡುಗಡೆ ಮಾಡಲಾಗಿದ್ದು, ನಿಗದಿತ ಕಾಮಗಾರಿಗಳಿಗಷ್ಟೇ ಬಳಸುವಂತೆ ಸೂಚನೆ ಸಹ ನೀಡಲಾಗಿದೆ. ಇದನ್ನೂ ಓದಿ: Chhattisgarh| ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಸ್ಫೋಟ – ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ 

  • ಕಲಬುರಗಿ | ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬೈರತಿ ಸುರೇಶ್‌ಗೆ ಮನವಿ

    ಕಲಬುರಗಿ | ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಬೈರತಿ ಸುರೇಶ್‌ಗೆ ಮನವಿ

    ಕಲಬುರಗಿ: ನಗರಕ್ಕೆ ಆಗಮಿಸಿದ ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಬೈರತಿ ಸುರೇಶ್‌ (Byrathi suresh) ಅವರನ್ನು ಕಲಬುರಗಿ ಮಹಾನಗರ ಪಾಲಿಕೆಯ (Kalaburagi Municipal Corporation) ಮೇಯರ್‌, ಉಪಮೇಯರ್‌ ಸೇರಿದಂತೆ ಹಾಗೂ ಸ್ಥಾಯಿ ಸಮಿತಿ ಸದಸ್ಯರು ಪುಷ್ಫಗುಚ್ಛ ನೀಡಿ ಸ್ವಾಗತಿಸಿದರು.

    ಮೇಯರ್‌ ಯಲ್ಲಪ್ಪ ಎಸ್.ನಾಯಕೋಡಿ, ಮಾಜಿ ಮೇಯರ್‌ ಸಯ್ಯದ್ ಅಹ್ಮದ್‌, ಸ್ಥಾಯಿ ಸಮಿತಿ ಅಧ್ಯಕ್ಷರಾದ ಪರವೀನ್ ಬೇಗಂ, ಶ. ಸಚಿನ ಶಿರವಾಳ, ಮುಹಮ್ಮದ್ ಅಜೀಮೊದ್ದಿನ್, ಇರ್ಫಾನಾ ಪರವೀನ್, ಲತಾ ರವೀಂದ್ರ ಕುಮಾರ, ಪಾಲಿಕೆಯ‌ ಸದಸ್ಯರು ಸಚಿವರನ್ನು ಸ್ವಾಗತಿಸಿ, ಮನವಿ ಸಲ್ಲಿಸಿದರು. ಇದನ್ನೂ ಓದಿ: ದೂರು ಕೊಡಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಮಧುಗಿರಿ ಡಿವೈಎಸ್ಪಿ ಅಮಾನತು, ಬಂಧನ

    ಕಲಬುರಗಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನದ ಬೇಡಿಕೆ ಇದ್ದು, ರಸ್ತೆಗಳು ಮತ್ತು ಒಳಚರಂಡಿಗಳಿಗೆ 70 ಕೋಟಿ ರೂ. ಅನುದಾನದ ಅಗತ್ಯವಿದೆ. ಅಲ್ಲದೇ ಕಲಬುರಗಿ ನಗರದ ಹೊರವಲಯದಲ್ಲಿ 4 ದಿಕ್ಕಿನಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಸಲುವಾಗಿ ಭೂಮಿ ಖರೀದಿಸುವುದಕ್ಕಾಗಿ 100 ಕೋಟಿ ರೂ., ಮಹಾನಗರ ಪಾಲಿಕೆಯ ಸಭಾಭವನ ಕಟ್ಟಡಕ್ಕಾಗಿ 20 ಕೋಟಿ ರೂ., ರಸ್ತೆ ಅಗಲೀಕರಣಕ್ಕಾಗಿ 20 ಕೋಟಿ ರೂ., ಸರಡಗಿ ನಾಲಾ ಡೈವರ್ಶನ ಕಾಮಗಾರಿಗಾಗಿ 10 ಕೋಟಿ ರೂ., ನೀರು ಸರಬರಾಜು ಯೋಜನೆಗಾಗಿ 190.4 ಕೋಟಿ ರೂ., ಒಳಚರಂಡಿ ವ್ಯವಸ್ಥೆಗಾಗಿ 350 ಕೋಟಿ ರೂ. ಅನುದಾನ, ಉದ್ಯಾನವನ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನವನ್ನು ಕಲಬುರಗಿ ಮಹಾನಗರ ಪಾಲಿಕೆಗೆ ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಯಿತು.

    ಅಲ್ಲದೇ ಕಲಬುರಗಿ ಸ್ಥಳೀಯ ಪ್ರದೇಶದಲ್ಲಿ ಮಂಡಲ/ಗ್ರಾಮ ಪಂಚಾಯಿತಿಯಿಂದ ಹಸ್ತಾಂತರಗೊಂಡ ಮತ್ತು ಅನುಮೋದನೆಗೊಂಡ ವಿನ್ಯಾಸಗಳಲ್ಲಿಯ ನಿವೇಶನಗಳ ಕರವಸೂಲಿ, ಕಟ್ಟಡ ಪರವಾನಿಗೆ ಹಾಗೂ ಇನ್ನಿತರ ಎಲ್ಲಾ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಸೂಕ್ತ ಮಾರ್ಗದರ್ಶನ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನುಮತಿ ನೀಡುವಂತೆ ಕೋರಲಾಯಿತು.

    ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ನೀಡಲು ಪ್ರಸ್ತುತ ಇರುವ ವಲಯ ನಿಯಮಾವಳಿಗಳನ್ನು ಪರಿಷ್ಕರಿಸಿ ಕಲಬುರಗಿ ನಗರದ ಬೆಳವಣಿಗೆಗಾಗಿ ಕಟ್ಟಡದ ಎತ್ತರ 15 ಮೀಟರ್ ವರೆಗೆ ಹಾಗೂ ಎಫ್‌ಎಆರ್ 4 (ಗರಿಷ್ಠ) ವರೆಗೆ ಹೆಚ್ಚಿಸುವಂತೆ ಕೋರಿ ಮನವಿ ಪತ್ರ ಸಲ್ಲಿಸಲಾಯಿತು. ಇದನ್ನೂ ಓದಿ: ಮಂಗಳೂರಿನಲ್ಲಿ NIA ಘಟಕ ಸ್ಥಾಪಿಸಿ – ದ.ಕ. ಸಮಗ್ರ ಅಭಿವೃದ್ಧಿಗೆ ಶಾಗೆ ಚೌಟ ಮನವಿ

  • ಪ್ರತಿ  ಕ್ಷೇತ್ರಕ್ಕೆ 26 ಕೋಟಿ ಅನುದಾನ – ಕೈ ಶಾಸಕರಿಗೆ ಸಿಎಂ ಭರವಸೆ

    ಪ್ರತಿ ಕ್ಷೇತ್ರಕ್ಕೆ 26 ಕೋಟಿ ಅನುದಾನ – ಕೈ ಶಾಸಕರಿಗೆ ಸಿಎಂ ಭರವಸೆ

    ಬೆಳಗಾವಿ: ನಮ್ಮದೇ ಸರ್ಕಾರ ಇದ್ದರೂ ನಮಗೆ ಅನುದಾನ (Grant) ಸಿಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದ ಕಾಂಗ್ರೆಸ್‌ ಶಾಸಕರಿಗೆ (Congress MLA’s) ಸಿಎಂ ಸಿದ್ದರಾಮಯ್ಯ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಕಾಂಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು ಬೇಸರ ವ್ಯಕ್ತಪಡಿಸಿದ ಬೆನ್ನಲ್ಲೇ ಸದನದಲ್ಲೇ ಈ ಬಗ್ಗೆ ಘೋಷಣೆ ಮಾಡಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ತಿಳಿಸಿದ್ದಾರೆ.

    ಅನುದಾನ ಕೊರತೆ ನೀಗಿಸಲು ಒಟ್ಟು 6 ಸಾವಿರ ಕೋಟಿ ರೂ. ಬಿಡುಗಡೆ ಸಂಬಂಧ ಘೋಷಣೆ ಮಾಡುತ್ತೇನೆ. ಲೋಕೋಪಯೋಗಿ ಇಲಾಖೆಯಿಂದ 4 ಸಾವಿರ ಕೋಟಿ ರೂ., ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ 2 ಸಾವಿರ ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೊರಗುತ್ತಿಗೆ ಚಾಲಕನ ಲಂಚಾವತಾರದ ವಿಡಿಯೋ ವೈರಲ್ ಕೇಸ್‌ – ಪನ್ನಗ ಏಜೆನ್ಸಿ ವಿರುದ್ಧ KSRTC ನೋಟಿಸ್!

    ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ದೃಷ್ಟಿಯಿಂದ ಎರಡು ಇಲಾಖೆಯಿಂದ ಒಟ್ಟು 6 ಸಾವಿರ ರೂ. ಹಣವನ್ನು ಬಿಡುಗಡೆ ಮಾಡಲಾಗುವುದು. ಕನಿಷ್ಟ 26 ಕೋಟಿ ರೂ.ಗೂ ಹೆಚ್ಚು ಹಣ ಒಂದೊಂದು ಕ್ಷೇತ್ರಕ್ಕೆ ಸಿಗಲಿದೆ. ಯಾರು ಬೇಸರ ಮಾಡಿಕೊಳ್ಳಬೇಡಿ ಎಂದು ಸಿಎಂ ಭರವಸೆ ನೀಡಿದ್ದಾರೆ.

     

  • ಸರಿಯಾದ ಮಾದರಿಯಲ್ಲಿ ಮನವಿ ಸಲ್ಲಿಸಿ, ಕೇಂದ್ರದ ಅನುದಾನ ಬರುತ್ತದೆ: ಕಾಂಗ್ರೆಸ್‌ಗೆ ಬೊಮ್ಮಾಯಿ ಠಕ್ಕರ್

    ಸರಿಯಾದ ಮಾದರಿಯಲ್ಲಿ ಮನವಿ ಸಲ್ಲಿಸಿ, ಕೇಂದ್ರದ ಅನುದಾನ ಬರುತ್ತದೆ: ಕಾಂಗ್ರೆಸ್‌ಗೆ ಬೊಮ್ಮಾಯಿ ಠಕ್ಕರ್

    ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ (Bhadra Upper Bank Project) ಕೇಂದ್ರದಿಂದ ಬರುವ ಅನುದಾನ (Grant) ಪಡೆಯಲು ರಾಜ್ಯ ಸರ್ಕಾರ ಸರಿಯಾದ ಮಾದರಿಯಲ್ಲಿ ಮನವಿ ಸಲ್ಲಿಸದೇ, ರಾಜಕೀಯಕ್ಕಾಗಿ ಕೇಂದ್ರದ ವಿರುದ್ಧ ಆರೋಪ ಮಾಡಿ ರಾಜ್ಯದ ಜನತೆಗೆ ಪಂಗನಾಮ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ರಾಜ್ಯ ಸರ್ಕಾರಕ್ಕೆ ಠಕ್ಕರ್ ನೀಡಿದ್ದಾರೆ.

    ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಉತ್ತರ ನೀಡುತ್ತಿರುವಾಗ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ ಅವರು, ಬಜೆಟ್ (Budget) ಬಗ್ಗೆ ಪತ್ರಿಕೆಗಳ ಸಂಪಾದಕೀಯಗಳಲ್ಲಿ ಬಂದಿರುವ ಹೊಗಳಿಕೆಗಳನ್ನು ಪ್ರಸ್ತಾಪ ಮಾಡಿ ಸಮರ್ಥನೆ ಮಾಡಿಕೊಂಡಿರುವುದಕ್ಕೆ ವ್ಯಂಗ್ಯವಾಡಿದರು. ನೀವು ಮುಖ್ಯಮಂತ್ರಿ ಆಗಿದ್ದೀರ, ಹಿಂದೆ ವಿಪಕ್ಷ ನಾಯಕರೂ ಆಗಿದ್ದೀರ. ಆದರೆ, ನಿಮ್ಮ ಸಾಮರ್ಥ್ಯ ಬಗ್ಗೆ ಪತ್ರಿಕೆಗಳ ಸಂಪಾದಕೀಯಗಳ ಸಹಾಯ ತೆಗೆದುಕೊಂಡು ಮಾತಾಡುವಷ್ಟರ ಮಟ್ಟಿಗೆ ಅಸಹಾಯಕರಾಗಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪರಿಷತ್ ಉಪಚುನಾವಣೆಯಲ್ಲಿ ‘ಕೈ’ ಅಭ್ಯರ್ಥಿ ಪುಟ್ಟಣ್ಣಗೆ ಗೆಲುವು; ಬಿಜೆಪಿ-ಜೆಡಿಎಸ್ ಮೈತ್ರಿಗೆ ಮುಖಭಂಗ

    15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ 5,495 ಕೋಟಿ, ಪೆರಿಫೆರಲ್ ರಸ್ತೆಗಳ 6,300 ಕೋಟಿ ರೂ. ಹಣ ಕೊಟ್ಟಿಲ್ಲ. ನಮ್ಮ ರಾಜ್ಯದಿಂದ ಗೆದ್ದು ಹೋದ ನಿರ್ಮಲಾ ಸೀತಾರಾಮನ್ (Nirmala Sitharaman) ಈ ಅನುದಾನಗಳನ್ನು ನಿರಾಕರಿಸಿದರು ಎಂದು ಸಿಎಂ ಸತ್ಯ ಮರೆಮಾಚಿ ಕಾನೂನು ತಿರುಚಿ ಹೇಳುತ್ತಿದಾರೆ ಎಂದು ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. 15ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ 5,495 ಕೋಟಿ ಶಿಫಾರಸು ಮಾಡಿದ್ದು ನಿಜ. ಆದರೆ ಅಂತಿಮ ವರದಿಯಲ್ಲಿ ಅದು ಇರಲಿಲ್ಲ. ಇರದ ಮೇಲೆ ಕೇಳುವುದು ಹೇಗೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಅವಿರೋಧ ಆಯ್ಕೆ

    ಇನ್ನು ಪೆರಿಫರಲ್ ರಸ್ತೆಗೆ 6,000 ಕೋಟಿ ಈಗಲೂ ಇದೆ. ಆದರೆ ಇಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯೇ ಶುರು ಮಾಡಿಲ್ಲ. ಭೂಸ್ವಾಧೀನವೇ ಆಗಿಲ್ಲ. ಯೋಜನೆ ಆರಂಭ ಮಾಡಿದರೆ ಕೇಂದ್ರದ ಅನುದಾನ ಬರುತ್ತದೆ. ಕೇಂದ್ರದಿಂದ ಅನುದಾನ ಕೇಳಬೇಕು ಅಂದರೆ ನಿರ್ದಿಷ್ಟ ರೀತಿಯಲ್ಲಿ ಪ್ರಸ್ತಾವನೆ ಕಳುಹಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆಯೂ ಸಿಗುತ್ತದೆ ಎಂದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆಯಲ್ಲಿ ಕುದುರೆ ವ್ಯಾಪಾರ? – ಕಾಂಗ್ರೆಸ್ ನಿಯೋಗದಿಂದ ಕಮಿಷನರ್‌ಗೆ ದೂರು

    ಈ ವಿಚಾರದಲ್ಲಿ ನಮ್ಮ ಸರ್ಕಾರ ಯೋಜನೆಗೆ ಅಗತ್ಯ ಅನುಮತಿಗಳನ್ನು ಕೊಟ್ಟಿತ್ತು. ಈಗಲೂ ಕೇಂದ್ರದಿಂದ ಹಣ ಬರುತ್ತದೆ. ಅದಕ್ಕೆ ಹೋಗಿ ಕೇಳಬೇಕು. ಸರಿಯಾದ ಪ್ರಯತ್ನ ಮಾಡದೇ ಅನುದಾನ ಬಂದಿಲ್ಲ ಎನ್ನುವುದು ಸರಿಯಲ್ಲ. ಭದ್ರಾ ಮೇಲ್ದಂಡೆ ಯೋಜನೆ ಹೊಸ ಯೋಜನೆ ಆಗಿರುವುದರಿಂದ ಎನ್ ಫಾರ್ಮ್‌ನಡಿ ಪ್ರಸ್ತಾವನೆ ಸಲ್ಲಿಸಬೇಕು. ಅನುದಾನ ಕೇಳುವುದು ಹೇಗೆ ಎಂದು ಕಾಂಗ್ರೆಸ್‌ಗೆ ಗೊತ್ತಿಲ್ಲ ಆರೋಪಿಸಿದರು. ಇದನ್ನೂ ಓದಿ: ವಕೀಲರು Vs ಪೊಲೀಸರು – ಫೇಸ್‌ಬುಕ್‌ ಪೋಸ್ಟ್‌ನಿಂದ ಅಹೋರಾತ್ರಿ ಧರಣಿಯವರೆಗೆ: ರಾಮನಗರದಲ್ಲಿ ಪ್ರತಿಭಟನೆ ಯಾಕೆ?

    ಈ ಸಂದರ್ಭದಲ್ಲಿ ಯಾವ ಮಾದರಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತರಬೇತಿ ಕೊಡಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು. ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿದರೆ ರಾಜ್ಯದ ಹಿತದೃಷ್ಟಿಯಿಂದ ನಾವು ನಿಮ್ಮ ಜೊತೆಗೆ ಬರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ, ಜಮ್ಮು- ಕಾಶ್ಮೀರ ಸೇರಿ ದೇಶದ ವಿವಿಗಳ ಅಭಿವೃದ್ಧಿಗೆ 3600 ಕೋಟಿ ರೂ. ಬಿಡುಗಡೆ