Tag: grandson

  • ಮೊಮ್ಮಗನ ಮೃತದೇಹ ಕಂಡು ತಾತ ಹೃದಯಾಘಾತದಿಂದ ಸಾವು

    ಮೊಮ್ಮಗನ ಮೃತದೇಹ ಕಂಡು ತಾತ ಹೃದಯಾಘಾತದಿಂದ ಸಾವು

    ವಿಜಯಪುರ: ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಮೊಮ್ಮಗನ (Grandson) ಮೃತದೇಹ ಕಂಡು ತಾತ (Grandfather) ಹೃದಯಾಘಾತಕ್ಕೆ (Heart Attack) ಒಳಗಾಗಿ ಇಹಲೋಕ ತ್ಯಜಿಸಿದ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ.

    ಜಿಲ್ಲೆಯ ನಿಡಗುಂದಿ ಪಟ್ಟಣದ ವಂದಾಲ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಯುವಕ ಅಭಿಷೇಕ್ ಪ್ಯಾಟಿಗೌಡ್ರ (18) ಅಪಘಾತದಲ್ಲಿ ಮೃತಪಟ್ಟಿದ್ದ. ಈತ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದ. ಇದನ್ನೂ ಓದಿ: ಮುಷ್ಕರದಲ್ಲಿ ಭಾಗವಹಿಸಿದ್ದ ಸರ್ಕಾರಿ ನೌಕರ ಹೃದಯಾಘಾತದಿಂದ ಸಾವು

    ಬಳಿಕ ಯುವಕನ ಮೃತದೇಹವನ್ನು ಕಂಡ ತಾತ ಬಸಪ್ಪ ಗುಡ್ಡದ (74) ಅವರಿಗೆ ಹೃದಯಾಘಾತವಾಗಿದ್ದು, ಅವರೂ ಸಾವನ್ನಪ್ಪಿದ್ದಾರೆ. ಬಳಿಕ ಮೊಮ್ಮಗ ಹಾಗೂ ತಾತನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ವಂದಾಲ ಗ್ರಾಮದಲ್ಲಿ ನೆರವೇರಿಸಿದ್ದಾರೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರೂಪಾ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಿದ ರೋಹಿಣಿ

  • ಗೋಬಿ ಮಂಚೂರಿಯಿಂದ ನಡೆದಿತ್ತು ವೃದ್ಧೆ ಶಾಂತಕುಮಾರಿ ಕೊಲೆ – 5 ವರ್ಷಗಳ ನಂತ್ರ ಆರೋಪಿಗಳು ಅರೆಸ್ಟ್

    ಗೋಬಿ ಮಂಚೂರಿಯಿಂದ ನಡೆದಿತ್ತು ವೃದ್ಧೆ ಶಾಂತಕುಮಾರಿ ಕೊಲೆ – 5 ವರ್ಷಗಳ ನಂತ್ರ ಆರೋಪಿಗಳು ಅರೆಸ್ಟ್

    ಬೆಂಗಳೂರು: ಕೆಂಗೇರಿ (Kengeri)  ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣದ ಆರೋಪಿಗಳನ್ನು ಐದು ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ.

    ಹೌದು, ವೃದ್ದೆ ಶಾಂತಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ (Kollapura) ವೃದ್ಧೆಯ ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಬಂಧಿಸಿದ್ಧಾರೆ. ಇದನ್ನೂ ಓದಿ: ರಾಜ್ಯದಲ್ಲಿ ಓಡಾಡ್ತಿದೆಯಂತೆ ಗುಜರಿ ಅಂಬುಲೆನ್ಸ್- ಸ್ಫೋಟಕ ಸತ್ಯ ಬಯಲು ಮಾಡಿದ ಸಚಿವರು!

    2016ರ ಆಗಸ್ಟ್‌ನಲ್ಲಿ ಕೆಂಗೇರಿ ಸ್ಯಾಟಲೈಟ್‍ನಲ್ಲಿ (Satellite) ಈ ಘಟನೆ ನಡೆದಿದ್ದು, ಕೊಲೆ ಮಾಡಿ ಆರು ತಿಂಗಳು ಮನೆಯಲ್ಲೇ ಶವವನ್ನು ಆರೋಪಿಗಳು ಹೂತಿಟ್ಟಿದ್ದರು. ಶಾಂತಕುಮಾರಿ, ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಒಟ್ಟಿಗೆ ವಾಸವಾಗಿದ್ದರು. ಒಂದು ದಿನ ಮೊಮ್ಮಗ ಸಂಜಯ್ ಅಜ್ಜಿಗೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಗೋಬಿ ಮಂಚೂರಿಯನ್ನು (Gobi Manchuri) ತಂದು ಕೊಟ್ಟಿದ್ದ. ಆದರೆ ವಿಪರೀತ ಮಡಿವಂತಿಕೆ, ಶಿಸ್ತಿನಿಂದಿರುತ್ತಿದ್ದ ಶಾಂತಮ್ಮ, ಸಂಜಯ್ ಮುಖಕ್ಕೆ ಗೋಬಿ ಮಂಚೂರಿಯನ್ನು ಎಸೆದು ಬೈದಿದ್ದರು.

    ಇದರಿಂದ ಕೋಪಗೊಂಡ ಸಂಜಯ್ ಅಜ್ಜಿ ತಲೆಗೆ ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ಕೆಮಿಕಲ್ ಹಾಕಿ ಕಬೋರ್ಡ್‍ನಲ್ಲಿ ಮುಚ್ಚಿಟ್ಟು, ಊರಿಗೆ ಹೋಗಿ ಬರುತ್ತೇವೆ ಅಂತ ಯಾರಿಗೂ ಅನುಮಾನ ಬಾರದಂತೆ ತಾಯಿ-ಮಗ ಮನೆ ಖಾಲಿ ಮಾಡಿದ್ದರು. ಆರು ತಿಂಗಳ ಬಳಿಕ ಮನೆ ಓನರ್ ರಿಪೇರಿ ಕೆಲಸ ಮಾಡುವ ವೇಳೆ ಶವದ ಅಸ್ಥಿಪಂಜರ ಪತ್ತೆಯಾಗಿತ್ತು. ನಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಸಂಜಯ್ ಸ್ನೇಹಿತ ನಂದೀಶ್ ಎಂಬಾತನನ್ನು ಬಂಧಿಸಿದ್ದರು. ಅಲ್ಲದೇ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ತಾಯಿ – ಮಗ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ

    ಸದ್ಯ ಕೊಲ್ಲಾಪುರದಲ್ಲಿ ತಾಯಿ, ಮಗ ವಾಸವಾಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದರು. ಮೊಮ್ಮಗ ಸಂಜಯ್ ಎಂಜಿನಿಯರಿಂಗ್ ಮಾಡಿಕೊಂಡು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ವಿಚಾರ ಪೊಲೀಸರಿಗೆ ತಿಳಿದುಬಂದಿದೆ. ಇದೀಗ ಐದು ವರ್ಷದ ಬಳಿಕ ಕೊಲೆ ಆರೋಪಿಗಳಾದ ಶಶಿಕಲಾ ಮತ್ತು ಸಂಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೃದ್ಧೆಯನ್ನು ಹತ್ಯೆ ಮಾಡಿ, ಆಕೆಯ ದೇಹವನ್ನ ತುಂಡರಿಸಿ ಗೋಣಿ ಚೀಲದಲ್ಲಿ ಎಸೆದ ಮಗ, ಮೊಮ್ಮಗ

    ವೃದ್ಧೆಯನ್ನು ಹತ್ಯೆ ಮಾಡಿ, ಆಕೆಯ ದೇಹವನ್ನ ತುಂಡರಿಸಿ ಗೋಣಿ ಚೀಲದಲ್ಲಿ ಎಸೆದ ಮಗ, ಮೊಮ್ಮಗ

    ಮುಂಬೈ: ವೃದ್ಧೆಯನ್ನು ಆಕೆಯ ಮಗ ಹಾಗೂ ಮೊಮ್ಮಗ ಕೊಲೆ ಮಾಡಿ ಆಕೆಯ ದೇಹದ ಭಾಗಗಳನ್ನು ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿ ನದಿಗೆ(River) ಎಸೆದ ಭೀಕರ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ( Pune) ನಡೆದಿದೆ.

    ಉಷಾ ಗಾಯಕ್‍ವಾಡ್(62)ನ್ನು ಆಕೆಯ ಪುತ್ರ ಹಾಗೂ ಮೊಮ್ಮಗನಿಗೆ ತನ್ನ ಮನೆಯಿಂದ ಹೊರಹೋಗುವಂತೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಆಕೆಯ ಪುತ್ರ ಸಂದೀಪ್ ಹಾಗೂ ಮೊಮ್ಮಗ ಸಾಹಿಲ್ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಇದಾದ ಬಳಿಕ ಮಧ್ವಾ ಪೊಲೀಸ್ ಠಾಣೆಗೆ ಸಾಹಿಲ್ ಹಾಗೂ ಸಂದೀಪ್ ಹೋಗಿ ಉಷಾ ಗಾಯಕ್ವಾಡ್ ಕಾಣೆ ಆಗಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

    crime

    ಘಟನೆಗೆ ಸಂಬಂಧಿಸಿ ಉಷಾಳ ಮಗಳು ಶೀತಲ್ ಕಾಂಬ್ಳೆ ದೂರು ದಾಖಲಿಸಿದ್ದು, ಉಷಾ ಗಾಯಕ್‍ವಾಡ್ ನಾಪತ್ತೆ ಆಗಿರುವುದರ ಹಿಂದೆ ಸಂದೀಪ್ ಹಾಗೂ ಸಾಹಿಲ್ ಪಾತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪೊಲೀಸರು ಸಂದೀಪ್ ಹಾಗೂ ಸಾಹಿಲ್‍ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಉಷಾ ಮನೆ, ಚಿನ್ನಾಭರಣ ಸೇರಿ ಅಪಾರ ಆಸ್ತಿ ಹೊಂದಿದ್ದರು. ಆದರೆ ಆಕೆ ತಮ್ಮ ಮನೆಯಿಂದ ಹೊರಹೊಗುವಂತೆ ಸಂದೀಪ್, ಸಾಹಿಲ್‍ಗೆ ಹೇಳಿದ್ದರಿಂದ ಕೋಪಗೊಂಡಿದ್ದಾರೆ. ಇದಾದ ಬಳಿಕ ಸಾಹಿಲ್ ಉಷಾಳ ಕತ್ತನ್ನು ಹಿಸುಕಿ ಕೊಂದಿದ್ದಾನೆ. ಇದನ್ನೂ ಓದಿ: ಸದನದಲ್ಲೇ ಹೃದಯಾಘಾತದಿಂದ ನಿಧನರಾಗಿದ್ದ ಉಮೇಶ್ ಕತ್ತಿ ತಂದೆ

    ಇದಾದ ಬಳಿಕ ಸಂದೀಪ್ ಹಾಗೂ ಸಾಹಿಲ್ ಸೇರಿ ಸಾಕ್ಷ್ಯ ನಾಶ ಮಾಡಲು ಎಲೆಕ್ಟ್ರಿಕ್ ಕಟರ್ ಮಷಿನ್‍ನಲ್ಲಿ ಆಕೆಯ ದೇಹವನ್ನು ತುಂಡಾಗಿ ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿದ್ದಾರೆ. ನಂತರ ಅದನ್ನು ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ವೃದ್ಧೆಯ ಮಗ ಸಂದೀಪ್ ಹಾಗೂ ಸಾಹಿಲ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯ ಶಾಲಾ- ಕಾಲೇಜು, ಸರ್ಕಾರಿ ಕಚೇರಿಗೆ ರಜೆ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ದೇವರಿಗೆ ಮೊಮ್ಮಗನ ಮುಡಿ ನೀಡಿದ ಹೆಚ್.ಡಿ ಕುಮಾರಸ್ವಾಮಿ

    ದೇವರಿಗೆ ಮೊಮ್ಮಗನ ಮುಡಿ ನೀಡಿದ ಹೆಚ್.ಡಿ ಕುಮಾರಸ್ವಾಮಿ

    ಹಾಸನ: ದೇವರಿಗೆ ಮೊಮ್ಮಗನ ಮುಡಿ ಕೊಡಲು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಸನ ಜಿಲ್ಲೆಗೆ ಭಾನುವಾರ ಆಗಮಿಸಿದ್ದರು. ಚನ್ನರಾಯಪಟ್ಟಣ ತಾಲೂಕಿನ, ಯಲಿಯೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಾಲಯದಲ್ಲಿ ಮಗ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಜೊತೆ ಮೊಮ್ಮಗ ಅವ್ಯಾನ್ ದೇವ್ ಮುಡಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.

    ಪೂಜೆಯ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹುಟ್ಟೂರು ಹೊಳೆನರಸೀಪುರ ತಾಲೂಕಿನ, ಹರದನಹಳ್ಳಿಗೆ ಆಗಮಿಸಿದ ಹೆಚ್‌ಡಿಕೆ, ಅಲ್ಲಿನ ದೇವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಳೆ ಬಂದಿದ್ದು, ದೇವೇಶ್ವರನ ಆಶೀರ್ವಾದ ನಮಗೆ ಒಲಿದಿದೆ ಎಂದು ಕುಮಾರಸ್ವಾಮಿ ಪುತ್ರ ನಿಖಿಲ್ ಬಳಿ ದೇವಾಲಯದಲ್ಲಿ ಹೇಳಿದರು. ಇದನ್ನೂ ಓದಿ: ಸೆಪ್ಟೆಂಬರ್ 8ಕ್ಕೆ ಬಿಜೆಪಿ ಜನೋತ್ಸವ ಕಾರ್ಯಕ್ರಮ: ಸುಧಾಕರ್

    ಪೂಜೆ ಮುಗಿದ ಬಳಿಕ ದೇವಾಲಯದಲ್ಲಿ ಮೊಮ್ಮಗನಿಗೆ ಬೆಣ್ಣೆ ತಿನ್ನಿಸಿ, ಪ್ರಸಾದ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಇಂದು ನಮ್ಮ ದೇವರಾದ ಯಲಿಯೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀದೇವಿಗೆ ನನ್ನ ಮೊಮ್ಮಗನ ಮುಡಿ ಕೊಡಲು ಬಂದಿದ್ದೇನೆ. ನಮ್ಮ ತಂದೆಯವರ ಏಳಿಗೆಗೆ, ಬದುಕಿಗೆ ಸಂಪೂರ್ಣ ರಕ್ಷಣೆ ಕೊಟ್ಟು ಅವರ ಬದುಕನ್ನು ಹಳ್ಳಿಯಿಂದ ದೆಹಲಿ ಮಟ್ಟಕ್ಕೆ ತೆಗೆದುಕೊಂಡು ಹೋದಂತಹ ನಮ್ಮ ಕುಲ ದೇವರು ಹರದನಹಳ್ಳಿಯ ಶಿವನ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ ಎಂದರು. ಇದನ್ನೂ ಓದಿ: ಹೈಕಮಾಂಡ್ ಗಮನ ಸೆಳೆಯಲು ಕೆಜಿಎಫ್ ಬಾಬು ಹೊಸ ಪ್ಲ್ಯಾನ್!

    ಹೆಚ್‌ಡಿಕೆ ಕುಟುಂಬ ದೇವಾಲಯಕ್ಕೆ ಆಗಮಿಸುವ ಮುನ್ನ ಮಾಜಿ ಸಚಿವ ಹೆಚ್.ಡಿ ರೇವಣ್ಣ ದೇವಾಲಯದ ಬಳಿ ಬಂದು ಚೆನ್ನಾಗಿ ಪೂಜೆ ಮಾಡಿ ಎಂದು ಅರ್ಚಕರಿಗೆ ಹೇಳಿ ಹೋದರು.

    Live Tv
    [brid partner=56869869 player=32851 video=960834 autoplay=true]

  • ಹಣ ನೀಡಿಲ್ಲ ಅಂತ ಅಜ್ಜಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಮೊಮ್ಮಗ

    ಹಣ ನೀಡಿಲ್ಲ ಅಂತ ಅಜ್ಜಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಮೊಮ್ಮಗ

    ನವದೆಹಲಿ: ಹಣ ನೀಡಲು ನಿರಾಕರಿಸಿದಕ್ಕೆ 84 ವರ್ಷದ ವೃದ್ಧೆಯನ್ನು ಆಕೆಯ ಅಪ್ರಾಪ್ತ ಮೊಮ್ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಶಾಲಿಮಾರ್ ಬಾಗ್‍ನಲ್ಲಿ ನಡೆದಿದೆ.

    ಸರ್ಜಿಕಲ್ ಬ್ಲೇಡ್‍ನಿಂದ ಬಾಲಕ ತನ್ನ ಅಜ್ಜಿಯ ಕತ್ತನ್ನು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ. ಇದೀಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    CRIME 2

    ವೃದ್ಧೆ ಶಾಲಿಮಾರ್ ಬಾಗ್‍ನಲ್ಲಿ ಒಂಟಿಯಾಗಿ ವಾಸವಿದ್ದು, ಇತ್ತೀಚೆಗೆ ಮನೆ ಮಾರಾಟ ಮಾಡಿದ್ದರು. ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕೊಲೆಯ ಹಿಂದಿನ ರಾತ್ರಿ 9:30ರ ಸುಮಾರಿಗೆ ಬಾಲಕ ಬಿಳಿ ಟವೆಲ್‍ನಿಂದ ಮುಖವನ್ನು ಮುಚ್ಚಿಕೊಂಡು ಮನೆಗೆ ಪ್ರವೇಶಿಸುವುದನ್ನು ನೋಡಿದ್ದಾರೆ. ನಂತರ ರಾತ್ರಿ 11:20ಕ್ಕೆ ಹೊರಗೆ ಬಂದ ಹುಡುಗ ಮತ್ತೆ ರಾತ್ರಿ 12:20ಕ್ಕೆ ಮನೆ ಒಳಗೆ ಹೋಗಿದ್ದಾನೆ. ಈ ದೃಶ್ಯಾವಳಿಗಳನ್ನು ಮನೆಯವರಿಗೆ ತೋರಿಸಿದಾಗ ಅವರು ಶಂಕಿತನ ಗುರುತು ಬಹಿರಂಗಪಡಿಸಿದ್ದಾರೆ.

    POLICE JEEP

    ಬಳಿಕ ಶಾಲೆಗೆ ಹೋಗಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಕೆಲ ವ್ಯಕ್ತಿಗಳಿಗೆ ಹಣ ನೀಡಬೇಕಾಗಿತ್ತು. ಹೀಗಾಗಿ ಹಣಕ್ಕಾಗಿ ಅಜ್ಜಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದೆ. ಕೊಲೆ ಮಾಡಲು ಸಾಹಿಲ್ ಸೈನಿ (22), ಮಯಾಂಕ್ ಸೈನಿ (21), ಸನ್ನಿ ಬಾಘೆಲ್ (19) ಮತ್ತು ಸಚಿನ್ ಸೈನಿ (28) ನನಗೆ ಸಹಾಯ ಮಾಡಿದರು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಯಾರಾದ್ರೂ ಹತ್ರ ಬಂದ್ರೆ ಶೂಟ್ ಮಾಡ್ತೀನಿ – ಮನೆಯವರನ್ನ ಕೂಡಿ ಹಾಕಿಕೊಂಡು ಕಾನ್‍ಸ್ಟೇಬಲ್ ಹುಚ್ಚಾಟ

    ಕೊಲೆ ನಡೆದ ದಿನ ರಾತ್ರಿ ಮನೆಗೆ ನುಗ್ಗಿ ಅಜ್ಜಿ ಬಳಿ ಹಣ ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದ ಕಾರಣ ಬಾಲಕ ಅಜ್ಜಿಯನ್ನು ತಳ್ಳಿ ಕತ್ತು ಸೀಳಿ ಹತ್ಯೆಗೈದಿದ್ದಾನೆ. ನಂತರ ಹಣವನ್ನು ಕದ್ದು ಸಾಲ ತೀರಿಸಿದ್ದಾನೆ. ಇದೀಗ ಆರೋಪಿಯಿಂದ ಸರ್ಜಿಕಲ್ ಬ್ಲೇಡ್, ರಕ್ತದ ಕಲೆಯಾಗಿರುವ ಬಾಲಕನ ಬಟ್ಟೆ, 50 ಸಾವಿರ ರೂಪಾಯಿ ನಗದು, ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಆದಿಕೇಶವುಲು ಮೊಮ್ಮಗ

    ಬೀದಿ ನಾಯಿ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ಆದಿಕೇಶವುಲು ಮೊಮ್ಮಗ

    ಬೆಂಗಳೂರು: ಬೀದಿ ನಾಯಿ ಮೇಲೆ ಕಾರು ಹತ್ತಿಸಿ ಯುವಕನೊಬ್ಬ ವಿಕೃತಿ ಮೆರೆದ ಘಟನೆ ಜಯನಗರದಲ್ಲಿ ನಡೆದಿದೆ.

    ಉದ್ಯಮಿ, ಮಾಜಿ ಸಂಸದ ದಿ. ಆದಿಕೇಶವುಲು ನಾಯ್ಡು ಮೊಮ್ಮಗ ಆದಿ ಈ ಕೃತ್ಯ ಎಸಗಿದ್ದಾನೆ. ಬೀದಿ ಮೇಲೆ ಮಲಗಿದ್ದ ನಾಯಿಯ ಮೇಲೆ ಉದ್ದೇಶಪೂರ್ವಕವಾಗಿಯೇ ಆಡಿ ಕಾರು ಹತ್ತಿಸಿ ಆದಿ ವಿಕೃತಿ ಮೆರೆದಿದ್ದಾನೆ.

    ಆದಿ ಕಾರನ್ನು ಬೇಕೆಂದೇ ರಿವರ್ಸ್ ತೆಗೆದುಕೊಂಡು ನಾಯಿ ಮೇಲೆ ಹತ್ತಿಸಿದ್ದಾನೆ. ಕಾರು ಹತ್ತಿದ ರಭಸಕ್ಕೆ ನಾಯಿ ವಿಲ-ವಿಲ ಒದ್ದಾಡಿದೆ. ಜಯನಗರ 1ನೇೀ ಬ್ಲಾಕ್ 10ನೇ ಬಿ ಮೈನ್ ನಲ್ಲಿ ಈ ಘಟನೆ ನಡೆದಿದ್ದು ಘಟನೆಯ ವೀಡಿಯೋ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: 60ಕ್ಕೂ ಹೆಚ್ಚು ಅಡಿಕೆ ಗಿಡ ಕಡಿದ ದುಷ್ಕರ್ಮಿಗಳು – ಕಣ್ಣೀರಿಟ್ಟ ರೈತ ಮಹಿಳೆ

    ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಎಫ್‍ಐಆರ್ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕಿಕೊಂಡು ಹೋದಾಗ ಆತ ಕಾರಿನೊಂದಿಗೆ ಪರಾರಿಯಾಗಿರುವ ವಿಚಾರ ತಿಳಿದು ಬಂದಿದೆ. ಪೊಲೀಸರು ವಿಚಾರಣೆಗೆ ಬರುವಂತೆ ಸಿದ್ದಾಪುರ ಪೊಲೀಸರು ಆದಿಗೆ ನೋಟಿಸ್ ಕೊಟ್ಟಿದ್ದಾರೆ.

    ಈ ಘಟನೆಯ ಬಳಿಕ ಆರೋಪಿಗೆ ಕೊರೊನಾ ಬಂದಿದೆ. ಕುಟುಂಬಸ್ಥರು ಆದಿಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಕಾಪಿಯನ್ನು ಠಾಣೆಗೆ ಕಳುಹಿಸಿದ್ದಾರೆ. ಕೋವಿಡ್‍ನಿಂದ ಗುಣಮುಖವಾದ ನಂತ್ರ ವಿಚಾರಣೆಗೆ ಹಾಜರಾಗುವಂತೆ ಮತ್ತೆ ನೋಟಿಸ್ ಕಳುಹಿಸಲಾಗಿದೆ. ಇದನ್ನೂ ಓದಿ: 43.2 ಕೋಟಿ ಮೌಲ್ಯದ ಡ್ರಗ್ಸ್ ಕಳ್ಳಸಾಗಣೆ – ಮಹಿಳೆ ಅರೆಸ್ಟ್

  • 17 ನಿಮಿಷ ಹೆಚ್ಚುವರಿ ಪಾರ್ಕಿಂಗ್ – 2 ಲಕ್ಷ ರೂ. ದಂಡ ಕಟ್ಟಿದ ತಾತ

    17 ನಿಮಿಷ ಹೆಚ್ಚುವರಿ ಪಾರ್ಕಿಂಗ್ – 2 ಲಕ್ಷ ರೂ. ದಂಡ ಕಟ್ಟಿದ ತಾತ

    ಲಂಡನ್: ಮೊಮ್ಮಗಳಿಗೆ ಉತ್ತಮ ಊಟ ಕೊಡಿಸಲು ಹೋಗಿ ತಾತ ಕಾರ್ ಪಾರ್ಕಿಂಗ್‍ನಲ್ಲಿ 17 ನಿಮಿಷ ಹೆಚ್ಚು ಸಮಯ ಕಾರ್ ಪಾರ್ಕ್ ಮಾಡಿ 2 ಲಕ್ಷರೂಪಾಯಿಯನ್ನು ಖರ್ಚು ಮಾಡಿರುವ ಘಟನೆ ಇಂಗ್ಲೆಂಡನ್‍ನಲ್ಲಿ ನಡೆದಿದೆ.

    ಜಾನ್ ಬಾಬೇಜ್(75) ತನ್ನ ಮೊಮ್ಮಗನಿಗೆ ಊಟಕೊಡಿಸಲು ನಿರ್ಧರಿಸಿದ್ದಾರೆ. ಮೊಮ್ಮಗನಿಗೆ 200 ರೂಪಾಯಿ ಊಟ ಕೊಡಿಸಿ 2 ಲಕ್ಷರೂಪಾಯಿ ಪಾರ್ಕಿಂಗ್‍ಗೆ ದಂಡದ ಹಣವನ್ನು ಕಟ್ಟಿರುವುದು ಎಲ್ಲೆಡೆ ಸುದ್ದಿಯಾಗುತ್ತಿದೆ.

    ಊಟ ತೆಗೆದುಕೊಂಡು ಹೋಗಲು ತಾತ ಮತ್ತು ಮೊಮ್ಮಗ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ 200 ರೂಪಾಯಿ ಕೊಟ್ಟು ಊಟವನ್ನು ಖರೀದಿ ಮಾಡಿದ್ದಾರೆ. ಇನ್ನೇನು ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಮೊಮ್ಮಗನಿಗೆ ಸ್ನೇಹಿತರು ಸಿಕ್ಕಿದ್ದಾರೆ. ಮೊಮ್ಮಗ ಆಟವಾಡಲು ಅವರೊಂದಿಗೆ ಹೋಗಿದ್ದಾನೆ. ಮೊಮ್ಮಗ ಬರುವವರೆಗೂ ಪಾರ್ಕಿಂಗ್‍ನಲ್ಲಿರುವ ಕಾರ್‍ನಲ್ಲಿ ಇರೋಣ ಎಂದು ಬಂದಿದ್ದಾರೆ. ಆದರೆ ಅಲ್ಲಯೇ ಜಾನ್ ನಿದ್ದೆಗೆ ಜಾರಿದ್ದಾರೆ.

    ಮೊಮ್ಮಗ ಬರುವುದು ತಡವಾಗಿದೆ. ಆದರೆ ಪಾರ್ಕಿಂಗ್ ಸಮಯ ಕೇವಲ 2 ಗಂಟೆ ಮಾತ್ರ ಉಚಿತವಾಗಿತ್ತು. ಆ ಸಮಯವನ್ನು ಮೀರಿದರೆ ದಂಡ ಕಟ್ಟಬೇಕಿತ್ತು. ಈ ವಿಚಾರ ಜಾನ್‍ಗೆ ತಿಳಿದಿರಲಿಲ್ಲ. ಹೀಗೆ 17 ನಿಮಿಷ ಹೆಚ್ಚುವರಿಯಾಗಿ ಅಲ್ಲಿ ತನ್ನ ಕಾರ್ ಪಾರ್ಕ್ ಮಾಡಿದ್ದಾರೆ. ಇದಾದ ಮೇಲೆ ತನ್ನ ಮೊಮ್ಮಗನನ್ನು ಕರೆದುಕೊಂಡು ಮನೆಗೆ ಹೋಗಿದ್ದಾರೆ.

    ಕಾರ್ ಪಾಕಿರ್ಂಗ್ ಸಂಸ್ಥೆ ಈ ಕುರಿತು ಜಾನ್ ಮನೆಗೆ ಒಂದು ನೋಟಿಸ್ ಕಳುಹಿಸಿದ್ದಾರೆ. ಆದರೆ ಅದು ಯಾವುದೋ ಒಂದು ಬೇರೆ ವಿಳಾಸಕ್ಕೆ ಹೋಗಿ ತಲುಪಿದೆ. ಹೀಗಾಗಿ ದಂಡ ಮತ್ತಷ್ಟು ಹೆಚ್ಚಾಗಿದೆ. ಕೊನೆಗೆ ಇಂಗ್ಲೆಂಡ್‍ನಲ್ಲಿನ ಸಾಲ ಸಂಗ್ರಹ ಮಾಡುವ ಸಂಸ್ಥೆ ಅಧಿಕಾರಿಗಳು ಮನೆಗೆ ಬಂದು 2 ಲಕ್ಷ ದಂಡ ಪಾವತಿಸಬೇಕು ಎಂದು ಹೇಳಿದ್ದಾರೆ. ತಾತ ಮೊಮ್ಮಗನಿಗೆ ಊಟ ಕೊಡಿಸಲು ಹೋಗಿ 2 ಲಕ್ಷ ದಂಡ ಕಟ್ಟಿ ಸುದ್ದಿಯಾಗಿದ್ದಾರೆ.

  • ಲವ್ ಜಿಹಾದ್ ವಿರುದ್ಧ ಕಾನೂನು ಖಚಿತ: ಸದಾನಂದಗೌಡ

    ಲವ್ ಜಿಹಾದ್ ವಿರುದ್ಧ ಕಾನೂನು ಖಚಿತ: ಸದಾನಂದಗೌಡ

    ಮಡಿಕೇರಿ: ಮತಾಂತರ ಮಾಡುವುದಕ್ಕಾಗಿಯೇ ಮದುವೆ ಆಗುವುದನ್ನು ತಡೆಗಟ್ಟುವುದಕ್ಕಾಗಿ ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

    ಕೊಡಗಿನ ಕುಶಾಲನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರುವ ವಿಷಯ ಹಿಂದಿನಿಂದಲೂ ಚರ್ಚೆಯಲ್ಲಿತ್ತು. ಇದೀಗ ಕಾನೂನು ತರುವುದಕ್ಕೆ ಕಾಲ ಕೂಡಿ ಬಂದಿದೆ. ಅಲಹಬಾದ್ ಕೋರ್ಟ್ ಕೂಡ ಲವ್ ಜಿಹಾದ್ ವಿರುದ್ಧ ತೀರ್ಪು ನೀಡಿದೆ. ಉತ್ತರ ಪ್ರದೇಶ ಸಿಎಂ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತಂದಿದ್ದಾರೆ ಎಂದರು.

    ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲಾಗುವುದು. ಈಗಾಗಲೇ ಪಕ್ಷದ ಕೋರ್ ಕಮಿಟಿಯಲ್ಲೂ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾನೂನು ತರಲಾಗುವುದು. ಮದುವೆಯಾಗಿ ಬಳಿಕ ಒತ್ತಾಯ ಪೂರ್ವಕವಾಗಿ ಮತಾಂತರ ಮಾಡುವುದು ಸರಿಯಲ್ಲ. ಇದರಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತದೆ. ಹೀಗಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

    ಕೊಡಗಿನಲ್ಲೇ ಮೊಮ್ಮಗನ ನಾಮಕರಣ ಮಾಡಿದ ಡಿವಿಎಸ್ ಸದಾ ರಾಜಕಾರಣದ ಗುಂಗಿನಲ್ಲೇ ಬ್ಯುಸಿಯಾಗಿರುತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಇಂದು ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಮೊಮ್ಮಗನ ನಾಮಕರಣ ಕಾರ್ಯಕ್ರಮಮದಲ್ಲಿ ಭಾಗವಹಿಸಿ ಸಂತೋಷದಿಂದ ಕಾಲ ಕಳೆದರು.

    ಕೊಡಗು ಜಿಲ್ಲೆಯ ಕುಶಾಲನಗರದಲ್ಲಿರುವ ತಮ್ಮ ಸೋದರ ಸಂಬಂಧಿ ನಾಣಯ್ಯ ಅವರ ಮನೆಯಲ್ಲಿ ತಮ್ಮ ಮೊಮ್ಮಗನ ನಾಮಕರಣದಲ್ಲಿ ಭಾಗಿಯಾಗಿ ಇಡೀ ದಿನ ಕಾಲ ಕಳೆದರು. ಕೋವಿಡ್ ಇರುವ ಹಿನ್ನೆಲೆಯಲ್ಲಿ ಬೇರೆ ಯಾರಿಗೂ ಕೂಡ ಆಹ್ವಾನ ನೀಡಿರಲಿಲ್ಲ. ಸದಾನಂದಗೌಡರ ಮಗ ಕಾರ್ತಿಕ್, ಅವರ ಪತ್ನಿ ಮತ್ತು ಬೀಗರಾದ ನಾಣಯ್ಯ ಅವರ ಕುಟುಂಬದವರು ಮಾತ್ರವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಾಣಯ್ಯ ಅವರ ಪತ್ನಿ ಸುಧಾನಾಣಯ್ಯ ತಮ್ಮ ಮೊಮ್ಮಗನನ್ನು ಕಾಲ ಮೇಲೆ ಮಲಗಿಸಿಕೊಂಡು ವಿವಿಧ ಆಚರಣೆಗಳನ್ನು ನೆರವೇರಿಸಿದರು.

    ಈ ವೇಳೆ ಸದಾನಂದಗೌಡ ಮತ್ತು ಪತ್ನಿ ಡಾಟಿ ಸದಾನಂದಗೌಡ ಅವರು ಮೊಮ್ಮಗನ ಕೊರಳಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ಹಾಕಿದರು. ಅಲ್ಲದೆ ಬೆಳ್ಳಿಯ ಹೊಳಲೆಯಲ್ಲಿ ಬೆಣ್ಣೆ ತಿನ್ನಿಸಿ ಹಾರೈಸಿದರು. ಅರೆಗೌಡ ಸಂಪ್ರದಾಯದಂತೆ ನಾಮಕರಣ ಮಾಡಿ ಬಳಿಕ ತೊಟ್ಟಿಲಿಗೆ ಹಾಕಿ ತೂಗಿ ಸಂಭ್ರಮಿಸಿದರು. ಮೊಮ್ಮಗನಿಗೆ ದಕ್ಷ್ ಎಂದು ಹೆಸರಿಟ್ಟು ಹಾರೈಸಿದ್ದೇವೆ. ದೊಡ್ಡವರಾದ ಮೇಲೆ ಯಾವ ಹೆಸರಿಟ್ಟುಕೊಳ್ಳುತ್ತಾರೋ ಯಾರಿಗೆ ಗೊತ್ತು ಎಂದು ಸದಾನಂದಗೌಡ ಹಾಸ್ಯವಾಡಿದರು.

  • ಅಜ್ಜಿಯ ಅಸ್ಥಿ ಬಿಡಲು ಹೋಗಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಮೊಮ್ಮಗ

    ಅಜ್ಜಿಯ ಅಸ್ಥಿ ಬಿಡಲು ಹೋಗಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಮೊಮ್ಮಗ

    ಮಂಡ್ಯ: ಅಜ್ಜಿಯ ಅಸ್ಥಿ ವಿಸರ್ಜನೆ ವೇಳೆ ಯುವಕನೊಬ್ಬ ಕಾವೇರಿ ನದಿಯಲ್ಲಿ ಕೊಚ್ಚಿಹೋಗಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿ ಘಾಟ್ ಬಳಿ ನಡೆದಿದೆ.

    ಬೆಂಗಳೂರಿನ ಗವಿಪುರಂ ನಿವಾಸಿ 31 ವರ್ಷದ ಎನ್.ಶ್ರೀಪ್ರಸಾದ್ ನೀರಿನಲ್ಲಿ ಕೊಚ್ಚಿಹೋದ ಯುವಕನಾಗಿದ್ದಾನೆ. ಶ್ರೀಪ್ರಸಾದ್‍ನ ಅಜ್ಜಿ ಚಂದ್ರಮತಿ ಮೂರು ದಿನದ ಹಿಂದೆ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದರು. ಹೀಗಾಗಿ ಅಸ್ಥಿ ವಿಸರ್ಜನೆಗಾಗಿ ಕುಟುಂಬದ ಸದಸ್ಯರೆಲ್ಲ ಶ್ರೀರಂಗಪಟ್ಟಣ ಗೋಸಾಯಿ ಘಾಟ್‍ಗೆ ಬಂದಿದ್ದರು.

    ಈ ವೇಳೆ ವೈದಿಕರ ಮಾರ್ಗದರ್ಶನದಂತೆ ವಿಧಿ ವಿಧಾನ ಮುಗಿಸಿ, ಅಂತಿಮವಾಗಿ ಅಸ್ಥಿ ವಿಸರ್ಜನೆಗಾಗಿ ಶ್ರೀಪ್ರಸಾದ್ ಹಾಗೂ ಆತನ ಭಾವ ಮಯೂರ್ ಕಾವೇರಿ ನದಿಗೆ ಇಳಿದಿದ್ದರು. ಅಸ್ಥಿ ಬಿಟ್ಟ ಬಳಿಕ ನೀರಿನಲ್ಲಿ ಮುಳುಗಲು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮೊದಲೇ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಇಬ್ಬರು ಕೊಚ್ಚಿಹೋಗಿದ್ದಾರೆ. ಈ ವೇಳೆ ಮಯೂರ್ ಅವರನ್ನು ಸ್ಥಳೀಯರು ದಡ ಸೇರಿಸಿದ್ದಾರೆ. ಆದರೆ ಶ್ರೀಪ್ರಸಾದ್ ಕುಟುಂಬಸ್ಥರ ಕಣ್ಣೆದುರೇ ನೀರಿನಲ್ಲಿ ಮುಳುಗಿದ್ದಾರೆ.

    ನದಿ ಅಂಚಿನ ಕೃಷಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‍ಗಳಲ್ಲಿ ವೈದಿಕರು ಅಂತಿಮ ವಿಧಿ ವಿಧಾನ ನಡೆಸುತ್ತಿದ್ದರು. ನದಿ ಆಳವಿದ್ದರೂ ಹಣದ ಆಸೆಗಾಗಿ ಹೊರ ಜಿಲ್ಲೆಗಳಿಂದ ಬರುವ ಜನರನ್ನು ಪುಸಲಾಯಿಸಿ ಅಪಾಯವನ್ನೂ ಲೆಕ್ಕಿಸದೇ ಅವರಿಂದ ಅಸ್ಥಿ ವಿಸರ್ಜನೆ ಮಾಡಿಸುತ್ತಿದ್ದರು. ಅದರಿಂದಲೇ ಈ ದುರ್ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮೂರೇ ದಿನದಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಅಜ್ಜಿ ಮೊಬೈಲ್ ಗಿಫ್ಟ್ ಕೊಡದ್ದಕ್ಕೆ ಕತ್ತು ಸೀಳಿ ಡೈನಿಂಗ್ ಟೇಬಲ್ ಮೇಲಿಟ್ಟ

    ಅಜ್ಜಿ ಮೊಬೈಲ್ ಗಿಫ್ಟ್ ಕೊಡದ್ದಕ್ಕೆ ಕತ್ತು ಸೀಳಿ ಡೈನಿಂಗ್ ಟೇಬಲ್ ಮೇಲಿಟ್ಟ

    ಮುಂಬೈ: ಅಜ್ಜಿ ಮೊಬೈಲ್ ಗಿಫ್ಟ್ ಕೊಡುವುದನ್ನು ನಿರಾಕರಿಸಿದ್ದಕ್ಕೆ 24 ವರ್ಷದ ಯುವಕ ಆಕೆಯ ಕತ್ತು ಸೀಳಿ ಕೊಲೆ ಮಾಡಿ, ಬಳಿಕ ತಲೆಯನ್ನು ಡೈನಿಂಗ್ ಟೇಬಲ್ ಮೇಲಿಟ್ಟು ವಿಕೃತಿ ಮೆರೆದಿದ್ದಾನೆ.

    ಪಶ್ಚಿಮ ಬಾಂದ್ರಾದಲ್ಲಿ ಘಟನೆ ನಡೆದಿದ್ದು, ಆರೋಪಿ ಡ್ರಗ್ಸ್ ಅಡಿಕ್ಟ್ ಆಗಿದ್ದ, ಅಲ್ಲದೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಆರೋಪಿಯನ್ನು ಕ್ರಿಸ್ಟೋಫರ್ ಡಯಾಸ್ ಎಂದು ಗುರುತಿಸಲಾಗಿದೆ. ಈತ ಥಾಣೆಯಲ್ಲಿರುವ ರೆಹಾಬ್ ಸೆಂಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆಗೆ ಹಣದ ಕೊರತೆ ಉಂಟಾಗಿ ಕೆಲ ದಿನಗಳ ಹಿಂದೆ ಪೋಷಕರು ಆತನನ್ನು ಮನೆಗೆ ಕರೆ ತಂದಿದ್ದರು. ಡಯಾಸ್‍ನ ಪೋಷಕರು ಮನೆಯ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಕುಟುಂಬದ ಇತರ ಸದಸ್ಯರು ನೆಲ ಮಹಡಿಯಲ್ಲಿದ್ದರು. ಆರೋಪಿಯ ಅಜ್ಜಿಯನ್ನು ರೋಸಿ ಎಂದು ಗುರುತಿಸಲಾಗಿದೆ.

    ರಾತ್ರಿ ಊಟದ ಬಳಿಕ ಆರೋಪಿ ಅಜ್ಜಿಯ ಬಳಿ ತೆರಳಿದ್ದು, ಈ ವೇಳೆ ಮೊಬೈಲ್ ಗಿಫ್ಟ್ ನೀಡುವಂತೆ ಅಜ್ಜಿಯನ್ನು ಕೇಳಿದ್ದಾನೆ. ಆದರೆ ಅಜ್ಜಿ ರೋಸಿ ಮೊಮ್ಮಗನ ಬೇಡಿಕೆಯನ್ನು ನಿರಾಕರಿಸಿದ್ದಾಳೆ. ಇದರಿಂದ ಕೋಪಿತನಾದ ಆರೋಪಿ ಅಜ್ಜಿಯನ್ನೇ ಕೊಲೆ ಮಾಡಿದ್ದಾನೆ. ಅಜ್ಜಿ ಮಲಗಿದ ಬಳಿಕ ಹೊಂಚು ಹಾಕಿ ಆಕೆಯ ತಲೆಯನ್ನೇ ಕತ್ತರಿಸಿ ಕೊಲೆ ಮಾಡಿದ್ದಾನೆ. ಅಲ್ಲದೆ ಕತ್ತರಿಸಿದ ತಲೆಯನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ವಿಕೃತಿ ಮೆರೆದಿದ್ದಾನೆ.

    ಆರೋಪಿ ಡಯಾಸ್ ಸೋದರ ಸಂಬಂಧಿ ನೆಲ ಮಹಡಿಗೆ ಬಂದು ನೋಡಿದ್ದಾರೆ. ಈ ವೇಳೆ ಮನೆಯ ತುಂಬಾ ರಕ್ತ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಡಯಾಸ್ ತಂದೆಯನ್ನು ಕರೆದಿದ್ದು, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಅಕ್ಟೋಬರ್ 17ರ ವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.