Tag: Grandpa

  • ಅಪ್ಪ, ಸಹೋದರ, ತಾತ, ಚಿಕ್ಕಪ್ಪನಿಂದಲೇ 5 ವರ್ಷದ ಹುಡುಗಿ ಮೇಲೆ ನಿರಂತರ ಅತ್ಯಾಚಾರ

    ಅಪ್ಪ, ಸಹೋದರ, ತಾತ, ಚಿಕ್ಕಪ್ಪನಿಂದಲೇ 5 ವರ್ಷದ ಹುಡುಗಿ ಮೇಲೆ ನಿರಂತರ ಅತ್ಯಾಚಾರ

    ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಹದಿಹರೆಯದ ಸಹೋದರ ಮತ್ತು ಆಕೆಯ ತಂದೆಯಿಂದಲೇ ಕೆಲವು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ನಡೆದಿರುವ ಅಮಾನವೀಯ ಘಟನೆ ನಡೆದಿದೆ.

    ಹುಡುಗಿಯ ಅಜ್ಜ ಹಾಗೂ ದೂರದ ಸಂಬಂಧಿ ಸಹ ಲೈಂಗಿಕ ಕಿರುಕುಳ ನೀಡಿದ್ದಾರೆ. ಹುಡುಗಿ ಶಾಲೆಯಲ್ಲಿ ನಡೆದ `ಗುಡ್ ಟಚ್ ಮತ್ತು ಬ್ಯಾಡ್ ಟಚ್’ ಅಧಿವೇಶನದಲ್ಲಿ ಘಟನೆ ಬೆಳಕಿಗೆ ಬಂದಿದೆ. ನಂತರ ಹುಡುಗಿಯಿಂದ ಹೇಳಿಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: 3 ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಆಮದಿಗೆ ರಷ್ಯಾದೊಂದಿಗೆ ಭಾರತ ಒಪ್ಪಂದ

    ಅತ್ಯಾಚಾರ ಮತ್ತು ಕಿರುಕುಳಕ್ಕಾಗಿ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಹುಡುಗಿಯ 11 ವರ್ಷದ ಸಹೋದರ ಮತ್ತು 45 ವರ್ಷದ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 354 ಅಡಿಯಲ್ಲಿ ಆಕೆಯ ಅಜ್ಜ (60) ವಿರುದ್ಧ ಹಾಗೂ ಚಿಕ್ಕಪ್ಪನ (25) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

    2017ರಲ್ಲಿ ಹುಡುಗಿ ಮತ್ತು ಆಕೆಯ ಕುಟುಂಬಸ್ಥರು ಬಿಹಾರದಲ್ಲಿ ನೆಲೆಸಿದ್ದಾಗ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಹುಡುಗಿಯ ಹಿರಿಯ ಸಹೋದರ 2020ರ ನವಂಬರ್ ತಿಂಗಳಿನಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಮುಂದಾಗಿದ್ದಾನೆ. ಅಜ್ಜ ಮತ್ತು ಚಿಕ್ಕಪ್ಪ ಕೂಡ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಜೊತೆಗೆ ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

    ಕೆಲ ವರ್ಷಗಳಿಂದಲೂ ಆಕೆಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವುದು ಇಲ್ಲಿ ಗೊತ್ತಾಗಿದೆ. ಎಲ್ಲಾ ಘಟನೆಗಳು ಪ್ರತ್ಯೇಕವಾಗಿ ನಡೆದಿರುವುದರಿಂದ ಆರೋಪಿಗಳು ಪರಸ್ಪರ ಕೃತ್ಯಗಳ ಬಗ್ಗೆ ತಿಳಿದಿರಬಹುದು ಎಂದು ಪುಣೆ ಪೊಲೀಸ್ ಅಧಿಕಾರಿ ಅಶ್ವಿನಿ ಸತ್ಪುಟೆ ಹೇಳಿದ್ದಾರೆ.

  • ವಿದೇಶಿಗನ ಜೊತೆ ಸಖತ್ ಸ್ಟೆಪ್ ಹಾಕಿದ ಅಜ್ಜ – ವೀಡಿಯೋ ವೈರಲ್

    ವಿದೇಶಿಗನ ಜೊತೆ ಸಖತ್ ಸ್ಟೆಪ್ ಹಾಕಿದ ಅಜ್ಜ – ವೀಡಿಯೋ ವೈರಲ್

    ನವದೆಹಲಿ: ಸೋಶಿಯಲ್ ಮೀಡಿಯಾ ಬಂದಾಗಿನಿಂದ ಜನರು ತಮ್ಮ ಕ್ರೀಯಾಶೀಲತೆ ಮತ್ತು ತಮ್ಮ ಸಾಮರ್ಥ್ಯವನ್ನು ತೋರಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಜ್ಜ ಫಾರಿನರ್ಸ್ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಈಗ ಆ ವೀಡಿಯೋ ವೈರಲ್ ಆಗುತ್ತಿದೆ.

    ವಿದೇಶಿಗನೊಬ್ಬನು ಬಾಲಿವುಡ್ ಹಾಡಿಗೆ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದು, ಇದರಿಂದ ಪ್ರೇರಣೆಗೊಂಡ ಅಜ್ಜ ಅವರ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ನೆರೆದಿದ್ದ ಜನಸಮೂಹವು ಇವರ ಡ್ಯಾನ್ಸ್ ನೋಡಿ ಫುಲ್ ಎಂಜಾಯ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ವಿದೇಶಿಗ ತನ್ನ ಸ್ಟೆಪ್ ನ್ನು ಹೇಳಿಕೊಂಡುತ್ತಿರುವುದನ್ನು ಲೆಕ್ಕಿಸದೆ, ಅಜ್ಜ ತನಗೆ ತೋಚಿದ ಸ್ಟೆಪ್ ಅನ್ನು ಹಾಕಿ ಕುಣಿದಿದ್ದಾರೆ. ಡ್ಯಾನ್ಸ್ ಮಾಡುತ್ತಿರುವಾಗ ಅಜ್ಜನಲ್ಲಿದ್ದ ಮುಗ್ಧತೆ, ಸಂತೋಷವನ್ನು ವೀಡಿಯೋದಲ್ಲಿ ಗಮನಿಸಬಹುದು. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

    ಟ್ವಿಟ್ಟರ್ ನಲ್ಲಿ ಸುಧೀರ್ದಂಡೋಟಿಯ ಎಂಬವರು ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸ್ವದೇಶಿ ಶೈಲಿಯ ಮುಂದೆ ವಿದೇಶಿಯರೂ ಮಂಕಾಗುತ್ತಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ‘ದಾದಾಜಿ’, ‘ಕೀಪ್ ಇಟ್ ಅಪ್ ದಾದು!’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಯೇ ಹಮಾರೆ ದಾದಾಜಿ ಹೇ ಭಾರತೀಯ ದಾದಾಜಿ(ನಮ್ಮ ಅಜ್ಜ ಭಾರತೀಯ ಅಜ್ಜ) ಎಂದು ಕಮೆಂಟ್ ಮಾಡಿದ್ದಾರೆ.

    ವಿದೇಶಿಗ ಮತ್ತು ವೃದ್ಧ ಸಲ್ಮಾನ್ ಖಾನ್ ಮತ್ತು ಕಾಜೋಲ್ ನಟನೆಯ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ‘ಓ ಓ ಜಾನೇ ಜಾನಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕೊನೆಯಲ್ಲಿ ಇಬ್ಬರು ಕೈಯನ್ನು ಕುಲುಕುವ ಮೂಲಕ ಉತ್ಸಾಹದಿಂದ ಹೊರಡುತ್ತಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡಿದವರತ್ತು ಅಜ್ಜನ ಡ್ಯಾನ್ಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: 2ನೇ ಪತ್ನಿಯ ಕತ್ತು ಕೊಯ್ದ ಪತಿ ಮಹಾಶಯ ಪರಾರಿ

  • 105 ವರ್ಷದ ಶತಾಯುಷಿ ಅಜ್ಜ ಕೊರೊನಾಗೆ ಬಲಿ

    105 ವರ್ಷದ ಶತಾಯುಷಿ ಅಜ್ಜ ಕೊರೊನಾಗೆ ಬಲಿ

    ಬೆಂಗಳೂರು: 105 ವರ್ಷದ ಕೊರೊನಾ ಸೋಂಕಿತ ಅಜ್ಜ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

    ಬಸವೇಶ್ವರ ನಗರದ ಅತ್ಯಂತ ಹಿರಿಯ ವ್ಯಕ್ತಿಗೆ ಕೊರೊನಾ ಸೋಂಕು ಬಂದಿತ್ತು. ನಂತರ ಅವರನ್ನು ಬಸವೇಶ್ವರ ನಗರದ ಪ್ರಿಸ್ಟಿನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಶತಾಯುಷಿ ಅಜ್ಜ ಮೃತಪಟ್ಟಿದ್ದಾರೆ.

    105 ವರ್ಷದ ಅಜ್ಜನನ್ನು ಕೇರ್ ಟೇಕರ್ ಒಬ್ಬರು ನೋಡಿಕೊಳ್ಳುತ್ತಿದ್ದರು. ಈ ಕೇರ್ ಟೇಕರ್ ನಿಂದ ಅಜ್ಜನಿಗೂ ಕೊರೊನಾ ಬಂದಿತ್ತು. ನಂತರ ಶತಾಯುಷಿ ಅಜ್ಜನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 105 ವರ್ಷ ವಯಸ್ಸಾದರೂ ಅಜ್ಜ ಫಿಟ್ ಅಂಡ್ ಫೈನ್ ಆಗಿದ್ದರು. ಶತಾಯುಷಿ ಅಜ್ಜನಿಗೆ ಡಯಾಬಿಟಿಸ್ ಇಲ್ಲ. ಜೊತೆಗೆ ಕೊರೊನಾ ಗುಣಲಕ್ಷಣದ ತೀವ್ರತೆಯೂ ಇರಲಿಲ್ಲ.

    ಕೇವಲ ಜ್ವರ ಮಾತ್ರ ಬಂದಿತ್ತು. ಕೋವಿಡ್ ಟೆಸ್ಟ್ ಮಾಡಿಸಿದಾಗ ಮಂಗಳವಾರ ಪಾಸಿಟಿವ್ ಅಂತ ಗೊತ್ತಾಗಿತ್ತು. ಆಕ್ಸಿಜನ್ ಲೆವೆಲ್ ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊರೊನಾದಿಂದ ಮೃತಪಟ್ಟಿದ್ದಾರೆ.

  • ಬೆಂಗಳೂರಿನ ಹಿರಿಯ ವ್ಯಕ್ತಿಗೆ ಸೋಂಕು – ಅಜ್ಜ ಫಿಟ್ ಅಂಡ್ ಫೈನ್

    ಬೆಂಗಳೂರಿನ ಹಿರಿಯ ವ್ಯಕ್ತಿಗೆ ಸೋಂಕು – ಅಜ್ಜ ಫಿಟ್ ಅಂಡ್ ಫೈನ್

    ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಹಿರಿಯ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.

    105 ವರ್ಷದ ಶತಾಯುಷಿ ಅಜ್ಜನಿಗೆ ಕೊರೊನಾ ಸೋಂಕು ತಗುಲಿದೆ. ಅಜ್ಜನನ್ನು ಕೇರ್ ಟೇಕರ್ ಒಬ್ಬರು ನೋಡಿಕೊಳ್ಳುತ್ತಿದ್ದರು. ಈ ಕೇರ್ ಟೇಕರ್ ನಿಂದ ಅಜ್ಜನಿಗೂ ಕೊರೊನಾ ಬಂದಿದೆ. ಇದೀಗ ಶತಾಯುಷಿ ಅಜ್ಜ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    105 ವರ್ಷ ವಯಸ್ಸಾದರೂ ಅಜ್ಜ ಫಿಟ್ ಅಂಡ್ ಫೈನ್ ಆಗಿ ಇದ್ದಾರೆ. ಶತಾಯುಷಿ ಅಜ್ಜನಿಗೆ ಡಯಾಬಿಟಿಸ್ ಇಲ್ಲ. ಜೊತೆಗೆ ಕೊರೊನಾ ಗುಣಲಕ್ಷಣದ ತೀವ್ರತೆಯೂ ಇರಲಿಲ್ಲ. ಕೇವಲ ಜ್ವರ ಮಾತ್ರ ಬಂದಿತ್ತು. ಕೋವಿಡ್ ಟೆಸ್ಟ್ ಮಾಡಿಸಿದಾಗ ಮಂಗಳವಾರ ಪಾಸಿಟಿವ್ ಅಂತ ಗೊತ್ತಾಗಿದೆ.

    ಅಜ್ಜ ದಿನ ಬೆಳಗ್ಗೆ ಖರ್ಜೂರ, ಉಪ್ಪಿಟ್ಟು ಮಿತ ಆಹಾರ ಸೇವನೆ ಮಾಡುತ್ತಿದ್ದರು. ಆದ್ದರಿಂದ ಈ ಅಜ್ಜನ ಆರೋಗ್ಯದಲ್ಲಿ ಏನು ತೊಂದರೆ ಇಲ್ಲ. ಆಕ್ಸಿಜನ್ ಲೆವೆಲ್ ಕಡಿಮೆಯಾಗಬಹುದು ಎನ್ನುವ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  • 70 ವರ್ಷದ ಅಜ್ಜ, 7 ವರ್ಷದ ಮೊಮ್ಮಗಳು – 6 ದಿನ ರೇಪ್

    70 ವರ್ಷದ ಅಜ್ಜ, 7 ವರ್ಷದ ಮೊಮ್ಮಗಳು – 6 ದಿನ ರೇಪ್

    -ಮಗ್ಳು ಸೇಫ್ ಅಂತಾ ಅಜ್ಜನ ಬಳಿ ಬಿಡ್ತಿದ್ದ ಪೋಷಕರು
    -ಆರು ದಿನದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದೇಗೆ?

    ಚೆನ್ನೈ: 70 ವರ್ಷದ ಕಾಮುಕ ಅಜ್ಜನೊಬ್ಬ ಏಳು ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿರುವ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

    ಏನಿದು ಪ್ರಕರಣ?: ಸಂತ್ರಸ್ತ ಬಾಲಕಿ ಅಪ್ಪ-ಅಮ್ಮ ಹಾಗೂ ಅಣ್ಣನ ಜೊತೆಯಲ್ಲಿ ವಾಸವಾಗಿದ್ದಳು. ಬಾಲಕಿಯ ಪೋಷಕರು ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದು, ಪ್ರತಿನಿತ್ಯ ಮಗನನ್ನು ಕರೆದುಕೊಂಡು ಮಾರುಕಟ್ಟೆಗೆ ಹೋಗುತ್ತಿದ್ದರು. ಸೇಫ್ ಆಗಿರಲಿ ಎಂದು ಏಳು ವರ್ಷದ ಮಗಳನ್ನು ಅಜ್ಜನ ಬಳಿ ಬಿಡುತ್ತಿದ್ದರು. ಹೀಗೆ ಬೆಳಗ್ಗೆ ಹೋದ ಪೋಷಕರು ಸಂಜೆ ಮನೆಗೆ ಹಿಂದಿರುಗುತ್ತಿದ್ದರು.

    ಪುಟ್ಟ ಕಂದಮ್ಮನ ಮುದುಕನ ಕಾಮದ ಕಣ್ಣು: ಹೀಗೆ ಪ್ರತಿನಿತ್ಯ ತನ್ನ ಮನೆಯಲ್ಲಿರುತ್ತಿದ್ದ ಪುಟ್ಟ ಬಾಲಕಿಯ ಮೇಲೆ ಮುದುಕನ ಕಣ್ಣು ಬಿದ್ದಿತ್ತು. ಜೂನ್ 26ರಂದು ಮುದುಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜೂನ್ 26ರಿಂದ ಜುಲೈ 2ರವರೆಗೆ ನಿರಂತರವಾಗಿ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ನಾನು ಅಜ್ಜನ ಬಳಿ ಹೋಗಲ್ಲ: ಈ ವಿಷಯ ತಿಳಿಯದ ಪೋಷಕರು ಮಗಳನ್ನು ಅಜ್ಜನ ಬಳಿ ಬಿಡಲು ಹೋಗುತ್ತಿದ್ದಾಗ ಬಾಲಕಿ ನಾನು ಅಜ್ಜನ ಬಳಿ ಹೋಗಲ್ಲ ಎಂದು ಹಠ ಹಿಡಿದಿದ್ದಾಳೆ. ಪೋಷಕರು ಮಗಳನ್ನ ವಿಚಾರಿಸಿದಾಗ ಬಾಲಕಿ ಎಲ್ಲ ವಿಷಯವನ್ನು ತಿಳಿಸಿದ್ದಾಳೆ. ಮಗಳ ಮಾತು ಕೇಳಿ ಗಾಬರಿಗೊಂಡು ಪೊಲೀಸರು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ವೃದ್ಧನ ವಿರುದ್ಧ ದೂರು ದಾಖಲಿಸಿದ್ದಾರೆ.

    ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕ ಮುದುಕನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿರಿಸಿದ್ದು, ತನಿಖೆ ಮುಂದುವರಿದಿದೆ.

  • ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್

    ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ: ಜಗ್ಗೇಶ್

    – ನನ್ನ ತಾತನೇ ನನಗೆ ಮೊಮ್ಮಗನಾಗಿ ಹುಟ್ಟಿದ್ದಾನೆ

    ಬೆಂಗಳೂರು: ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ಅದಕ್ಕೆ ನನ್ನ ತಾತನೇ ನನ್ನ ಮೊಮ್ಮಗನಾಗಿ ಹುಟ್ಟಿದ್ದಾನೆ ಎಂದು ನವರಸ ನಾಯಕ ಜಗ್ಗೇಶ್ ಅವರು ಹೇಳಿಕೊಂಡಿದ್ದಾರೆ.

    ರಾಯರ ಭಕ್ತರಾದ ಜಗ್ಗೇಶ್ ಅವರು ಸದಾ ಆಧ್ಯಾತ್ಮದ ಬಗ್ಗೆ ಮಾತನಾಡುತ್ತಿರುತ್ತಾರೆ. ಜೊತೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದಾ ಸಕ್ರಿಯವಾಗಿ ಇರುವ ಅವರು, ತಮ್ಮ ಅಭಿಮಾನಿಗಳ ಜೊತೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಅವರು ಟ್ವೀಟ್‍ಗಳಿಗೆ ಉತ್ತರ ನೀಡುತ್ತಾರೆ. ಕೆಲವೊಮ್ಮೆ ಟ್ವಿಟ್ಟರ್ ಮೂಲಕವೇ ಸಮಸ್ಯೆಗಳನ್ನು ಬಗೆಹರಿಸಿಕೊಡುತ್ತಾರೆ, ಧೈರ್ಯ ತುಂಬುತ್ತಾರೆ.

    ಈಗ ಜಗ್ಗೇಶ್ ಅವರ ಪತ್ನಿ ಪರಿಮಳಾ ಜಗ್ಗೇಶ್ ಅವರು, ತಮ್ಮ ಮುದ್ದಿನ ಮೊಮ್ಮಗ ಜಗ್ಗೇಶ್ ಅವರ ಬೆನ್ನು ಏರಿ ಮಸಾಜ್ ಮಾಡುತ್ತಿರುವ ಕ್ಯೂಟ್ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಅಭಿಮಾನಿಯೋರ್ವ ಜಗ್ಗೇಶ್ ಅವರಿಗೆ ಟ್ಯಾಗ್ ಮಾಡಿ, ತಾತನಾಗಿ ಒಳ್ಳೆಯ ಅನುಭವ ಅಲ್ವೇ ಸರ್ ಎಂದು ಕಮೆಂಟ್ ಮಾಡಿದ್ದರು.

    ಇದಕ್ಕೆ ಟ್ವಿಟ್ಟರ್ ಮೂಲಕವೇ ಉತ್ತರ ನೀಡಿರುವ ಜಗ್ಗೇಶ್, ನಾವು ಮಾಡಿದ್ದು ನಮಗೆ ಬಳುವಳಿಯಾಗಿ ದೇವರು ವಾಪಸ್ ಕೊಡುತ್ತಾನೆ. ನನ್ನ ತಾತನಿಗೆ ನಾನು ಹೀಗೆ ಬೆನ್ನ ಏರಿ ಮಸಾಜ್ ಮಾಡುತ್ತಿದ್ದೆ. ತಾತನಿಗೆ ಸ್ನಾನಕ್ಕೆ ನೀರು ಕಾಯಿಸುತ್ತಿದ್ದೆ. ಅವರ ಉಗುರು ಕತ್ತರಿಸುತ್ತಿದ್ದೆ. ವಾಕಿಂಗ್‍ಗೆ ಸಹಾಯ ಮಾಡುತ್ತಿದ್ದೆ. ಆಗ ಅವರು ನನಗೆ ಪ್ರೀತಿಯಿಂದ ಮುಂದೆ ನಿನ್ನ ಮೊಮ್ಮಗನಾಗಿ ಹುಟ್ಟಿ ಋಣ ತೀರಿಸುವೆ ಅನ್ನುತ್ತಿದ್ದರು ಎಂದು ತನ್ನ ತಾತನನ್ನು ನೆನೆದಿದ್ದಾರೆ.

    ಇದರ ಜೊತೆ ತನ್ನ ಮುದ್ದಿನ ಮೊಮ್ಮಗನ ಬಗ್ಗೆಯೂ ಟ್ವೀಟ್ ಮಾಡಿರುವ ಜಗ್ಗೇಶ್, ನನ್ನ ಪುಟಾಣಿ ಅರ್ಜುನ ಮಾಸ್ಕ್ ಹಾಕಿ ಅಜ್ಜಿಗೆ ಕೊಟ್ಟ ಪೋಸ್ ಇದು. ನಾನು ಬೇಕಂತ ಮಾಸ್ಕ್ ಇಲ್ಲದಂತೆ ನಟಿಸಿದರೆ, ತಾತ ಮಾಸ್ಕ್ ಇಲ್ಲದಿದ್ದರೆ ನನ್ನ ಹತ್ತರ ಬರಬೇಡಿ. ಕೊರೊನಾ ಇದೆ ಬುದ್ಧಿ ಇಲ್ವಾ ಎಂದು ಕ್ಲಾಸ್ ತೆಗೆದುಕೊಂಡ. ಆಗ ನಾನು ಸ್ವಾರಿ ಮಗನೆ ತಪ್ಪಾಯ್ತು ಅಂದೆ, ಪರವಾಗಿಲ್ಲ ಹುಷಾರಾಗಿ ಇರು ಎಂದು ಬಿದ್ಧಿ ಹೇಳಿದ. ಬಹಳ ಚೂಟಿ ನನ್ನ ಮೊಮ್ಮಗ ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ದಿವಂಗತ ಕಾಶಿನಾಥ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿರುವ ಜಗ್ಗೇಶ್, ಉಪೇಂದ್ರ ಅವರ ಟ್ವೀಟ್‍ಗೆ ರೀಟ್ವೀಟ್ ಮಾಡಿ, ನಿಮ್ಮ ಇವರ ಹಾಗೂ ಮನೋಹರ್ ಅವರ ಒಡನಾಟವನ್ನು ಹತ್ತಿರದಿಂದ ಕಂಡಿರುವೆ. ಅವರಂತೆ ನೀವು ನಟ ನಿರ್ದೇಶಕನಾಗಿ ಅವರ ಹೆಸರು ಉಳಿಸಿದ್ದೀರಿ. ನಮ್ಮ ನಿಮ್ಮ ಆ ದಿನಗಳು ಚಿತ್ರೀಕರಣದ ನಡುವೆ ವಿದ್ಯಾರ್ಥಿ ಭವನದ ದೋಸೆ. ನಾನು ಕಾಶಿನಾಥ್ ನಟಿಸಿದ ಮನ್ಮಥರಾಜ ಸಿನಿಮಾ ಮರೆಯಲಾಗದ ನೆನಪುಗಳು. ಕಾಶಿರವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದಿದ್ದಾರೆ.

  • ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಅಜ್ಜ-ಮೊಮ್ಮಗಳ ರಕ್ಷಣೆ

    ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗ್ತಿದ್ದ ಅಜ್ಜ-ಮೊಮ್ಮಗಳ ರಕ್ಷಣೆ

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅಜ್ಜ ಹಾಗೂ ಮೊಮ್ಮಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.

    ಗಂಗಾವತಿ ತಾಲೂಕಿನ ಸಾಣಾಪೂರ ನಿವಾಸಿಗಳಾದ ಅಜ್ಜ ಹುಲಗಪ್ಪ ಮತ್ತು ಮೊಮ್ಮಗಳಾದ ಲಾವಣ್ಯಳನ್ನು ಸ್ಥಳೀಯರು ಕಾಪಾಡಿದ್ದಾರೆ. ಹುಲಗಪ್ಪ ಅವರು ತಮ್ಮ ಬೈಕಿನಲ್ಲಿ ಮೊಮ್ಮಗಳನ್ನು ಕರೆದುಕೊಂಡು ನದಿ ನೋಡಲು ಹೋಗುತ್ತಿದ್ದರು. ಈ ವೇಳೆ ರಸ್ತೆಯಲ್ಲೇ ಹರಿಯುತ್ತಿದ್ದ ಅಪಾರ ಪ್ರಮಾಣದ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ.

    ಕೆಲ ದೂರದಲ್ಲಿ ಕೊಚ್ಚಿ ಹೋಗುತ್ತಿರುವ ಅಜ್ಜ ಹಾಗೂ ಆತನ ಮೊಮ್ಮಗಳನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತ ಸ್ಥಳೀಯರು ಕೊನೆಗೂ ಅಜ್ಜ, ಮೊಮ್ಮಗಳನ್ನು ರಕ್ಷಿಸುವ ಮೂಲಕ ಅಪಾಯದಿಂದ ಪಾರು ಮಾಡಿದ್ದಾರೆ.

  • ವೈರಲ್ ಆಯ್ತು 81 ವರ್ಷದ ತಾತನ ಜೀವ ಉಳಿಸಿದ ವಿದ್ಯಾರ್ಥಿನಿಯ ವಿಡಿಯೋ

    ವೈರಲ್ ಆಯ್ತು 81 ವರ್ಷದ ತಾತನ ಜೀವ ಉಳಿಸಿದ ವಿದ್ಯಾರ್ಥಿನಿಯ ವಿಡಿಯೋ

    ಬೀಜಿಂಗ್: 81 ವರ್ಷದ ತಾತನ ಜೀವವನ್ನು ವಿದ್ಯಾರ್ಥಿನಿಯೊಬ್ಬಳು ಉಳಿಸಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ಘಟನೆ ಚೀನಾದ ಕ್ಸನ್ಹುಅ ಪ್ರಾಂತ್ಯದಲ್ಲಿ ನಡೆದಿದೆ. 81 ವಯಸ್ಸಿನ ತಾತ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಈ ವೇಳೆ ಅವರು ಇದ್ದಕ್ಕಿದ್ದಂತೆ ಓಡಾಡುವ ರಸ್ತೆಯ ಮೇಲೆಯೇ ಕುಸಿದು ಬಿದ್ದಿದ್ದಾರೆ.

    ಅಲ್ಲೇ ಓಡಾಡುತ್ತಿದ್ದ ಜನರು ನೋಡುತ್ತಾ ನಿಂತಿದ್ದರು. ಆದರೆ ಯಾರು ಅವರ ಸಹಾಯಕ್ಕೆ ಬಾರದೆ ಸುಮ್ಮನೆ ನಿಂತು ನೋಡುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಓಡಿ ಬಂದಿದ್ದಾಳೆ. ಆಗ ತಾತನ ಮೇಲೆ ಕುಳಿತುಕೊಂಡು ಎದೆ ಒತ್ತಿದ್ದಾಳೆ. ಬಳಿಕ ವಿದ್ಯಾರ್ಥಿನಿ ತನ್ನ ಬಾಯಿಯ ಮೂಲಕ ಗಾಳಿ ಕೊಡುವ ಪ್ರಯತ್ನ ಮಾಡುತ್ತಾಳೆ. ಆಗ ಅಲ್ಲಿದ್ದವರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೂ ಆಕೆ ಅವರ ಮಾತಿಗೆ ತಲೆ ಕೆಡಿಸಿಕೊಳ್ಳದೇ ಮತ್ತೆ ಮತ್ತೆ ತಾತನಿಗೆ ಗಾಳಿ ಕೊಡುತ್ತಾಳೆ. ಕೊನೆಗೆ ಆ ತಾತ ಉಸಿರಾಡಿದ್ದು, ಎದ್ದು ಕುಳಿತುಕೊಳ್ಳುತ್ತಾರೆ.

    ಈ ಎಲ್ಲಾ ದೃಶ್ಯವನ್ನು ಅಲ್ಲಿದ್ದವರು ವಿಡಿಯೋ ಮಾಡಿದ್ದಾರೆ ಬಳಿಕ ಅದನ್ನು China Xinhua News ಎಂಬ ಫೇಸ್ ಬುಕ್ ಪೇಜ್ ಗೆ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ 5 ಗಂಟೆಯಲ್ಲಿಯೇ 3 ಲಕ್ಷ 13 ಸಾವಿರ ವ್ಯೂವ್ಸ್ ಕಂಡಿದೆ. ಅಷ್ಟೇ ಅಲ್ಲದೇ 18 ಸಾವಿರ ಜನರು ಲೈಕ್ಸ್ ಮಾಡಿದ್ದಾರೆ. ಜೊತೆಗೆ 4,400 ಜನರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.

    https://www.facebook.com/XinhuaNewsAgency/videos/2595827830444645/

  • ಕೈಯಲ್ಲಿದ್ದ ಸ್ಟಿಕ್ ಎಸೆದು ಡ್ಯಾನ್ಸ್ ಮಾಡಿ ಯುವಕರಿಗೇ ಸೆಡ್ಡು ಹೊಡೆದ್ರು ತಾತ!- ವಿಡಿಯೋ ವೈರಲ್

    ಕೈಯಲ್ಲಿದ್ದ ಸ್ಟಿಕ್ ಎಸೆದು ಡ್ಯಾನ್ಸ್ ಮಾಡಿ ಯುವಕರಿಗೇ ಸೆಡ್ಡು ಹೊಡೆದ್ರು ತಾತ!- ವಿಡಿಯೋ ವೈರಲ್

    ಮುಂಬೈ: ವೃದ್ಧರೊಬ್ಬರು ಯುವಕರಿಗೆ ಸೆಡ್ಡು ಹೊಡೆದು ಕುಣಿದು ಕುಪ್ಪಳಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೊದಲು ತನ್ನ ಎರಡೂ ಕೈಯಲ್ಲಿ ಸ್ಟಿಕ್ ಹಿಡಿದು ಕುಣಿಯುತ್ತಿದ್ದ ಹಿರಿಯ ವ್ಯಕ್ತಿ ನಂತರ ಕೆಲವೇ ಸೆಕೆಂಡ್‍ನಲ್ಲಿ ಕೈಯಲ್ಲಿರುವ ಕೋಲನ್ನು ಎಸೆದು ಡ್ಯಾನ್ಸ್ ಮಾಡಿ ಎಲ್ಲರೂ ನಾಚುವಂತೆ ಡ್ಯಾನ್ಸ್ ಮಾಡಿದ್ದಾರೆ.

    ವೃದ್ಧ ಅಲ್ಲಿದ್ದ ಜನರ ಬಗ್ಗೆ ಯೋಚಿಸದೇ ತನ್ನದೇ ಶೈಲಿಯಲ್ಲಿ ಸಂತೋಷದಿಂದ ಕುಣಿಯುತ್ತಿದ್ದರು. ತನ್ನ ಸುತ್ತಮುತ್ತ ಯುವಜನರೇ ತುಂಬಿಕೊಂಡಿದ್ದರು. ಅವರಂತೆ ಕುಣಿಯಲು ಪ್ರಯತ್ನಿಸದೆ ತಮಗೆ ಇಷ್ಟ ಬಂದಂತೆ ಕುಣಿದಿದ್ದಾರೆ.

    ಈ ವಿಡಿಯೋದ ಕೊನೆಯಲ್ಲಿ ವೃದ್ಧನಿಗೆ ಇಬ್ಬರು ಮಹಿಳೆಯರು ಸಾಥ್ ನೀಡಿದ್ದಾರೆ. ಮಹಿಳೆಯರು ವೃದ್ಧನ ಜೊತೆ ಡ್ಯಾನ್ಸ್ ಮಾಡುತ್ತಿರುವುದು ನೋಡಿ ಅಲ್ಲಿದ್ದ ಜನರು ಚಪ್ಪಾಳೆ ತಟ್ಟುತ್ತಾ ಅವರನ್ನು ಪ್ರೋತ್ಸಾಹಿಸಿದ್ದಾರೆ.

    ಈ ವಿಡಿಯೋವನ್ನು ಎಡ್ಗಾರ್ಡ್ ಎಲ್ಯೂಟರಿಯೋ ಡಾಜಾ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.