Tag: grandmother

  • 70 ಜನರ ತುಂಬು ಕುಟುಂಬದಿಂದ 100ರ ಅಜ್ಜಿಗೆ ಮರುನಾಮಕರಣ!

    70 ಜನರ ತುಂಬು ಕುಟುಂಬದಿಂದ 100ರ ಅಜ್ಜಿಗೆ ಮರುನಾಮಕರಣ!

    ಯಾದಗಿರಿ: ವಯಸ್ಸಾದ ಹೆತ್ತವರನ್ನು ದೂರವಿಡುವ ಇಂತಹ ಅಧುನಿಕ ಯುಗದಲ್ಲಿ ವೃದ್ಧೆಯಾದ ತನ್ನ ತಾಯಿ ಶತ ದಿನ ಪೂರೈಸಿದ ಹಿನ್ನಲೆಯಲ್ಲಿ ಹೆತ್ತಮ್ಮನನ್ನು ಮಕ್ಕಳು, ಮಮ್ಮಕ್ಕಳು ಸೇರಿ ಮರು ನಾಮಕಾರಣ ಮಾಡಿದ ಅಪರೂಪದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಯಾದಗಿರಿ ತಾಲೂಕಿನ ದುಪ್ಪಲ್ಲಿ ಗ್ರಾಮದ ಕಾಳಪ್ಪ ಹಾಗೂ ವೆಂಕಣ್ಣ ಅವರು ತನ್ನ ತಾಯಿ ನಾಗಮ್ಮ ವಿಶ್ವಕರ್ಮ ಶತ ದಿನ ಪೂರೈಸಿದಕ್ಕೆ ದುಪ್ಪಲ್ಲಿ ಗ್ರಾಮದ ತಮ್ಮ ಮನೆಯಲ್ಲಿ ಮರುನಾಮಕರಣ ಮಾಡಿ ಸಂಭ್ರಮಿಸಿದ್ದಾರೆ. ಅಜ್ಜಿ ಹಾಗೂ ಮರಿ ಮಮ್ಮಗನ ತೊಟ್ಟಿಲು ಕಾರ್ಯಕ್ರಮ ಮಾಡಿದ್ದಾರೆ.

    ನಾಗಮ್ಮ ವಿಶ್ವಕರ್ಮ ಅವರು ಶುಕ್ರವಾರ ಅಂದ್ರೆ ನಿನ್ನೆ ನೂರು ವರ್ಷ ವಯಸ್ಸು ಪೂರ್ಣಗೊಳಿಸಿದ್ದಾರೆ. ಜನ್ಮದಾತೆಯ ತೊಟ್ಟಿಲು ಕಾರ್ಯಕ್ರಮ ಮಾಡಿ, ಹೆತ್ತಬ್ಬೆಯ ಪಾದ ಪೂಜೆ ಮಾಡಿ ಬಳಿಕ ಮರು ನಾಮಕರಣ ಮಾಡಿದ್ದಾರೆ. ತನ್ನ ಮರಿಮಮ್ಮಗನ ಜೊತೆ ಮರು ನಾಮಕರಣ ಮಾಡಿದ್ದು ಅಜ್ಜಿ ನಾಗಮ್ಮಗೆ ಖುಷಿ ಕೊಟ್ಟಿದೆ.

    ಮರಿ ಮೊಮ್ಮಗನಿಗೆ ಅನಿರುದ್ಧ ಎಂದು ನಾಮಕರಣ ಮಾಡಿದ್ದು ನಾಗಮ್ಮರಿಗೆ ಭಾಗ್ಯವಂತಿ ಎಂದು ಮರು ನಾಮಕರಣ ಮಾಡಿದ್ದಾರೆ. 20 ಪುತ್ರರು, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮೊಮ್ಮಕ್ಕಳು ಸೇರಿ 70 ಸದಸ್ಯರ ತುಂಬು ಕುಟುಂಬದೊಂದಿಗೆ ಅಜ್ಜಿ ಮರುನಾಮಕರಣ ಮಾಡಿಕೊಂಡಿದ್ದಾರೆ.

     

  • ಆಸ್ಪತ್ರೆಯ ಹಾಸಿಗೆ ಮೇಲೆಯೇ ಕೊಳೆತು ವಾಸನೆ ಬಂದ ಅಜ್ಜಿಯ ಶವ- ಲಿಂಗಸಗೂರು ತಾಲೂಕಾಸ್ಪತ್ರೆಯಲ್ಲಿ ಘನಘೋರ ಘಟನೆ

    ಆಸ್ಪತ್ರೆಯ ಹಾಸಿಗೆ ಮೇಲೆಯೇ ಕೊಳೆತು ವಾಸನೆ ಬಂದ ಅಜ್ಜಿಯ ಶವ- ಲಿಂಗಸಗೂರು ತಾಲೂಕಾಸ್ಪತ್ರೆಯಲ್ಲಿ ಘನಘೋರ ಘಟನೆ

    ರಾಯಚೂರು: ಇಲ್ಲಿನ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಅಪರಿಚಿತ ಅಜ್ಜಿಯೊಬ್ಬರ ಶವ ಗಬ್ಬು ನಾರುತ್ತಿದ್ದರೂ ಶುಕ್ರವಾರದಿಂದ ಹಾಸಿಗೆ ಮೇಲೆಯೇ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

    75 ವರ್ಷದ ವೃದ್ಧೆ 15 ದಿನಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಸಾವನಪ್ಪಿದ್ದಾರೆ. ಅಜ್ಜಿಯ ಸಾವನ್ನು ವೈದ್ಯರು ದೃಢಪಡಿಸಿದ್ದು, ಪೊಲೀಸರು ಪಂಚನಾಮೆಯನ್ನೂ ಮಾಡಿದ್ದಾರೆ.

     

    ಇಷ್ಟಾದರೂ ಶವವನ್ನು ವಾರ್ಡ್‍ನಿಂದ ಸಾಗಿಸದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಕೆಟ್ಟ ವಾಸನೆ ತಡೆಯಲಾಗದೆ ಉಳಿದ ರೋಗಿಗಳು ಕೊಠಡಿ ಹೊರಗೆ ಮಲಗಿದ್ದಾರೆ. ಕೆಲ ರೋಗಿಗಳಿಗೆ ಶವದ ವಾಸನೆಯಿಂದ ವಾಂತಿಯಾಗಿದೆ. ತಾಲೂಕಾಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಶವ ಆಸ್ಪತ್ರೆ ಹಾಸಿಗೆ ಮೇಲೆ ಕೊಳೆಯುತ್ತಿದೆ.

    ಲಿಂಗಸುಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ರೋಗಿಗಳು ಕಿಡಿಕಾರುತ್ತಿದ್ದಾರೆ.

    https://www.youtube.com/watch?v=FNfJ7g11seg

  • ತುಮಕೂರಿನ ತಿಪಟೂರಿನಲ್ಲಿ ಪೈಶಾಚಿಕ ಕೃತ್ಯ- ಅಜ್ಜಿಯ ಮೇಲೆ ಸ್ವಂತ ಮೊಮ್ಮಗನಿಂದಲೇ ಅತ್ಯಾಚಾರ

    ತುಮಕೂರಿನ ತಿಪಟೂರಿನಲ್ಲಿ ಪೈಶಾಚಿಕ ಕೃತ್ಯ- ಅಜ್ಜಿಯ ಮೇಲೆ ಸ್ವಂತ ಮೊಮ್ಮಗನಿಂದಲೇ ಅತ್ಯಾಚಾರ

    ತುಮಕೂರು: ಮೊಮ್ಮಗನೇ ತನ್ನ ಸ್ವಂತ ಅಜ್ಜಿಯ ಮೇಲೆ ಅತ್ಯಾಚಾರವೆಸಗಿರೋ ಪೈಶಾಚಿಕ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

    ತಂದೆಯ ತಾಯಿಯಾದ 58 ವರ್ಷದ ವೃದ್ಧೆಯ ಮೇಲೆ ಪಾಪಿ ಮೊಮ್ಮಗ ಅತ್ಯಾಚಾರ ಮಾಡಿದ್ದಾನೆ. 19 ವರ್ಷದ ಕೀರ್ತಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಅಜ್ಜಿಯ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದಾನೆ.

    ಈ ಬಗ್ಗೆ ವೃದ್ಧೆ ಮೊಮ್ಮೊಗನ ವಿರುದ್ಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕೀರ್ತಿಯನ್ನು ಬಂಧಿಸಿದ್ದಾರೆ.

    ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಬೋರ್ಡ್ ನಲ್ಲಿ ಅಜ್ಜಿಯ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಕಬೋರ್ಡ್ ನಲ್ಲಿ ಅಜ್ಜಿಯ ಶವ ಪತ್ತೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

    ಬೆಂಗಳೂರು: ಯುವಕನೊಬ್ಬ ತನ್ನ ಅಜ್ಜಿಯನ್ನ ಕೊಲೆಗೈದು ಹೆಣವನ್ನ ಕಬೋರ್ಡ್ ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಈಗ ರೋಚಕ ತಿರುವು ಸಿಕ್ಕಿದೆ.

    ತಂದುಕೊಟ್ಟ ಊಟ ತಿಂದಿಲ್ಲ ಅಂತ ಮೊಮ್ಮಗ ಅಜ್ಜಿಯನ್ನ ಕೊಂದಿದ್ದ ಎಂಬ ವಿಷಯ ಬಹಿರಂಗವಾಗಿದೆ. ತಂದು ಕೊಟ್ಟ ಊಟ ಬಿಸಾಡಿದಕ್ಕೆ ಮೊಮ್ಮಗ ರಾಡಿನಿಂದ ಹೊಡೆದು ಅಜ್ಜಿಯನ್ನ ಕೊಲೆಗೈದಿದ್ದ. ಏಳು ತಿಂಗಳ ಕಾಲ ಶವ ಇದ್ದ ರೂಂನಲ್ಲೇ ಮಲಗುತ್ತಿದ್ದ. ನಂತರ ವಾಸನೆ ಬಂದಿದ್ದಕ್ಕೆ ಮನೆ ಖಾಲಿ ಮಾಡಿದ್ದ ಎಂದು ತಿಳಿದುಬಂದಿದೆ.

    ಆಗಸ್ಟ್ ನಲ್ಲಿ ಅಜ್ಜಿಯನ್ನ ಕೊಲೆ ಮಾಡಿ ಕಬೋರ್ಡ್‍ನಲ್ಲಿ ಇಟ್ಟಿದ್ದ. ಫೆಬ್ರವರಿಯಲ್ಲಿ ವಾಸನೆ ಬಂದ ಬಳಿಕ ಮನೆ ಬಿಡೋ ಚಿಂತನೆ ಮಾಡಿದ್ದ. ಕೊಲೆ ಮಾಡಿದ ಸಂಜಯ್ ಸ್ನೇಹಿತನಿಂದ ಈ ಮಾಹಿತಿ ಬಹಿರಂಗವಾಗಿದೆ. ಸದ್ಯ ಸಂಜಯ್ ಮತ್ತು ಆತನ ತಾಯಿ ಶಶಿಕಲಾಗಾಗಿ ಕೆಂಗೇರಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

    ಕೆಂಗೇರಿಯಲ್ಲಿ ನವೀನ್ ಎಂಬವರ ಬಾಡಿಗೆ ಮನೆಯಲ್ಲಿ ಸಂಜಯ್ ವಾಸವಿದ್ದ. ಮನೆಯಲ್ಲಿ ತಾಯಿ, ಮಗ ಹಾಗೂ ಅಜ್ಜಿ ಮೂರು ಜನ ವಾಸವಿದ್ರು. ಆದ್ರೆ ಫೆಬ್ರವರಿಯಲ್ಲಿ ಸಂಜಯ್ ನವೀನ್‍ರಿಂದಲೇ 50 ಸಾವಿರ ರೂ. ಸಾಲ ಪಡೆದು ಊರಿಗೆ ಹೋಗ್ತಿದ್ದೇನೆಂದು ಹೇಳಿ ತನ್ನ ತಾಯಿ ಶಶಿಕಲಾ ಜೊತೆ ತಲೆಮರೆಸಿಕೊಂಡಿದ್ದ. ಪರಾರಿಯಾದ ಬಳಿಕ ಮತ್ತೆ ಮನೆಯ ಕಡೆ ಸಂಜಯ್ ಕುಟುಂಬ ಹಿಂತಿರುಗಿರಲಿಲ್ಲ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಮನೆಯ ಅಗ್ರಿಮೆಂಟ್ ಮುಗಿದ ಬಳಿಕ ಮಾಲೀಕ ನವೀನ್ ಮನೆಯೊಳಗೆ ಹೋಗಿದ್ರು. ನಂತರ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ರು. ನಂತರ ಪೊಲೀಸರು ಪರಿಶೀಲನೆ ನಡೆಸಿದಾಗ ರೂಮಿನಲ್ಲಿದ್ದ ಡ್ರಂನ ಒಳಗಿದ್ದ ಮತ್ತೊಂದು ಡ್ರಂನಲ್ಲಿ ರಕ್ತದ ಕಲೆಯ ಬಟ್ಟೆಗಳು ಪತ್ತೆಯಾಗಿತ್ತು. ಕಬೋರ್ಡ್ ಒಳಗಿನ ಕೆಳಗಿನ ಭಾಗದಲ್ಲಿ ಕೊಳೆತ ದೇಹ ಪತ್ತೆಯಾಗಿತ್ತು. ಕಬೋರ್ಡ್ ತೆಗೆದು ನೋಡಿದಾಗ ಶವ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಶವ ಅಜ್ಜಿಯದೇ ಎಂಬುದು ದೃಢವಾಗಿತ್ತು. ಶಿವಮೊಗ್ಗದಲ್ಲಿ ಇರುವ ಅಜ್ಜಿಯ ಸಂಬಂಧಿಕರಿಗೆ ಪೊಲೀಸರು ಈ ಬಗ್ಗೆ ವಿಷಯ ಮುಟ್ಟಿಸಿದ್ರು. ಆದ್ರೆ ಶವ ಸಂಸ್ಕಾರಕ್ಕೂ ಅಜ್ಜಿಯ ಶವ ಬೇಡ ಎಂದು ಸಂಬಂಧಿಕರು ಹೇಳಿದ್ರು.

    ಕೊಲೆ ಮಾಡಿದ ಬಳಿಕ ಕಾಲೇಜು, ಕೆಲಸ ಯಾವುದೇ ಪ್ರದೇಶದಲ್ಲೂ ಸಂಜಯ್ ಪತ್ತೆಯಾಗಿಲ್ಲವಾದ್ದರಿಂದ ಸಂಜಯ್‍ನೇ ಕೊಲೆ ಮಾಡಿ ನಾಪತ್ತೆಯಾಗಿರೋದು ದೃಢವಾಗಿತ್ತು. ಓದುತ್ತಿದ್ದ ಕಾಲೇಜಿನಲ್ಲೂ ಸಂಜಯ್ ಎರಡೆರಡು ವಿಳಾಸ ಬದಲು ಮಾಡಿದ್ದ. ಕುಟುಂಬದ ಕಷ್ಟ ಹೇಳಿ ಹಣ ಪಡೆದು ಮೋಸ ಮಾಡೋದು ಇವನ ಖಯಾಲಿಯಾಗಿತ್ತು. ಮನೆಯ ಮಾಲೀಕ ನವೀನ್‍ಗೆ ಐವತ್ತು ಸಾವಿರ ರೂ. ಮೋಸ ಮಾಡಿದ್ದು, ಕೆಲಸ ಮಾಡುವ ಜಾಗದಲ್ಲಿಯೂ ಮೋಸ ಮಾಡಿದ್ದ. ಮನೆಯಲ್ಲಿ ಕಷ್ಟ ಅಂತ ಹೇಳಿ ಗಿರಿನಗರದ ಕೃಷ್ಣಮೂರ್ತಿ ಎಂಬವರಿಂದ ಒಂದೂವರೆ ಲಕ್ಷ ರೂ. ಹಣ ಪಡೆದು ಪರಾರಿಯಾಗಿದಾನೆ. ಕೊಲೆ ಪ್ರಕರಣ ಬೆಳಕಿಗೆ ಬಂದ ಮೇಲೆ ಕೃಷ್ಣಮೂರ್ತಿ ಠಾಣೆಗೆ ಬಂದಾಗ ಸಂಜಯ್‍ನ ಮೋಸ ಬಯಲಾಗಿದೆ.

  • ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ಒಂದು ವಿಷದ ಇಂಜೆಕ್ಷನ್ ಕೊಡಿಸಿ: ಬೆಳಗಾವಿಯ ಹಿರಿಯಜ್ಜಿಯ ಮೊರೆ

    ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ಒಂದು ವಿಷದ ಇಂಜೆಕ್ಷನ್ ಕೊಡಿಸಿ: ಬೆಳಗಾವಿಯ ಹಿರಿಯಜ್ಜಿಯ ಮೊರೆ

    ಬೆಳಗಾವಿ: ನನಗೆ ಯಾರೂ ಇಲ್ಲ, ಈ ಭೂಮಿ ಮೇಲಿರಲು ನನಗೆ ಇಷ್ಟವಿಲ್ಲ, ನಿಮ್ಮ ಕಾಲಿಗೆ ಬೀಳ್ತಿನಿ, ಒಂದು ವಿಷದ ಇಂಜೆಕ್ಷನ್ ಕೊಡಿಸಿ. ಹೀಗೆ ಕಣ್ಣೀರಿಡುತ್ತಾ ವಿನಂತಿ ಮಾಡ್ತಿರೋ ಈ ಹಿರಿಯಜ್ಜಿಯ ಹೆಸ್ರು ಚನ್ನವ್ವ. ಬೆಳಗಾವಿಯ ವಕ್ಕುಂದ ಗ್ರಾಮದಾಕೆ.

    ಎಲ್ಲವೂ ಸರಿಯಾಗಿದ್ದರೆ ಚನ್ನವ್ವ, ಮರಿಮಕ್ಕಳ ಜೊತೆ ಆಟವಾಡುತ್ತಾ ಮಕ್ಕಳ ಆರೈಕೆಯಲ್ಲಿ ಸುಖವಾಗಿ ಕಾಲ ಕಳೆಯಬೇಕಾಗಿತ್ತು. ಆದರೆ ವಿಧಿ ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಯ ಮಹಿಳಾ ವಾರ್ಡ್‍ನ ನೆಲದ ಮೇಲಿನ ಬೆಡ್ ಮೇಲೆ ದಿನದೂಡುವಂತೆ ಮಾಡಿದೆ.

    ಆರೋಗ್ಯದಲ್ಲಿ ಏರುಪೇರಾಗಿದ್ದ ಚನ್ನವ್ವರನ್ನು ಎರಡು ತಿಂಗಳ ಹಿಂದೆ ಯಾರೋ ಜಿಲ್ಲಾಸ್ಪತ್ರೆಗೆ ಸೇರಿಸಿದ್ದರು. ಬಳಿಕ ಅತ್ತ ಕಡೆ ಯಾರೂ ತಿರುಗಿ ನೋಡಿಲ್ಲ. ಆಸ್ಪತ್ರೆಯಲ್ಲಿರುವ ಇತರ ರೋಗಿಗಳ ಸಂಬಂಧಿಕರು ಅಜ್ಜಿಗೆ ಊಟ, ತಿಂಡಿ ನೀಡುತ್ತಿದ್ದಾರೆ.

    ಈ ಹಿರಿಯಜ್ಜಿ ಎದ್ದು ನಡಿಯುವ ಸ್ಥಿತಿಯಲ್ಲಿಲ್ಲ. ಕಣ್ಣುಗಳು ಸರಿಯಾಗಿ ಕಾಣಿಸುತ್ತಿಲ್ಲ. ತನ್ನ ಮಕ್ಕಳು, ಕುಟುಂಬದ ಬಗ್ಗೆ ನೆನಪಿಲ್ಲ. ಎಲ್ಲಿಗೆ ಹೋಗ್ಬೇಕು ಅನ್ನೋದ್ರ ಅರಿವಿಲ್ಲ. ಆದ್ರೆ ಈ ಇಳಿ ವಯಸ್ಸಿನಲ್ಲಿ ತನ್ನ ಸ್ಥಿತಿಯ ಬಗ್ಗೆ ಚನ್ನವ್ವಗೆ ಅಸಹನೆಯಿದೆ. ಹೀಗಾಗಿಯೇ ದಯಾಮರಣಕ್ಕಾಗಿ ವಿನಂತಿ ಮಾಡ್ತಿದ್ದಾರೆ.

    ಚನ್ನವ್ವನ ಈ ಸ್ಥಿತಿ ಬೇರಾರಿಗೂ ಬಾರದಿರಲಿ. ಈ ಸುದ್ದಿ ನೋಡಿದ ಬಳಿಕವಾದರೂ ಈ ಹಿರಿಯಜ್ಜಿಯ ಸಂಬಂಧಿಕರು ಜಿಲ್ಲಾಸ್ಪತ್ರೆಯತ್ತ ಮುಖ ಮಾಡ್ಲಿ ಅನ್ನೋದೇ ನಮ್ಮ ಆಶಯ.

  • ಸಂಜ್ಞೆಯ ಮೂಲಕ 9 ತಿಂಗಳ ಮಗುವಿಗೆ ಅಜ್ಜಿಯ ಪಾಠ: ಮನಮುಟ್ಟುವ ವೀಡಿಯೋ ನೋಡಿ

    ಸಂಜ್ಞೆಯ ಮೂಲಕ 9 ತಿಂಗಳ ಮಗುವಿಗೆ ಅಜ್ಜಿಯ ಪಾಠ: ಮನಮುಟ್ಟುವ ವೀಡಿಯೋ ನೋಡಿ

    ಫ್ಲೋರಿಡಾ: ಪುಟ್ಟ ಮಕ್ಕಳ ಜೊತೆ ಪೋಷಕರು ಮಾತನಾಡ್ತಾರೆ. ಆದ್ರೆ ಅದಕ್ಕೆ ಯಾವುದೇ ಅರ್ಥ ಇರಲ್ಲ. ಮಗುವಿನ ಜೊತೆ ಕಾಲ ಕಳೆಯಲು ಏನೇನೋ ಮಾತಾಡ್ತಾರೆ. ಕಿವುಡರೊಂದಿಗೆ ಮಾತನಾಡುವುದು ತುಂಬಾನೇ ಕಷ್ಟ. ಆದ್ರೆ ಇಲ್ಲೊಬ್ಬರು ಅಜ್ಜಿ, 9 ತಿಂಗಳ ಕಿವುಡ ಮಗುವಿನ ಜೊತೆ ಸಂಜ್ಞೆಯ ಮೂಲಕ ಮಾತಾನಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

    ಹೌದು. ಅಜ್ಜಿ ಮಗುವಿನ ಜೊತೆ ಸಂಜ್ಞೆಯಲ್ಲೇ ಏನೋ ಹೇಳುತ್ತಿದ್ದು, ಮಗು ಕೂಡ ಮಾತಿಗೆ ತಕ್ಕಂತೆಯೇ ನಗುತ್ತಿರೋ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮಗುವಿನ ತಾಯಿ ಮತ್ತು ಆಕೆಯ ಫೋಟೋಗ್ರಾಫರ್ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಹಾಕಿ `ಅಜ್ಜಿ-ಆರ್ಯನ ಸಮಯವಿದು’. `ಕಿವುಡ ಅಜ್ಜಿ ಮತ್ತು ಕಿವುಡ ಮಗುವಿನ ಸಂಜ್ಞೆಯ ಮಾತುಗಳು’ ಅಂತಾ ಸ್ಟೇಟಸ್ ಹಾಕಿ ಪೋಸ್ಟ್ ಮಾಡಿದ್ದಾರೆ.

    ವೀಡಿಯೋದಲ್ಲಿ ತೋರಿಸಿದಂತೆ ಫ್ಲೋರಿಡಾ ನಿವಾಸಿ ಪಮೇಲಾ ಮೆಕ್ ಮಹೋನ್, ತನ್ನ ಮೊಮ್ಮಗ ಆರ್ಯನ ಜೊತೆ ಸಂಜ್ಞೆಯಲ್ಲೇ ಸಂಭಾಷಣೆ ಮಾಡಿದ್ದಾರೆ. ಅಜ್ಜಿಯ ಸಂಭಾಷಣೆಗೆ ಮಗು ಕೂಡ ತಲೆದೂಗಿದ್ದು, ನಗುಮುಖದಿಂದಲೇ ಪ್ರತಿಕ್ರಿಯೆ ನೀಡಿರುವುದು ವಿಶೇಷ. ಒಟ್ಟಿನಲ್ಲಿ ಆರ್ಯ ಕೂಡ ಅಜ್ಜಿಯ ಸಂಭಾಷಣೆಗೆ ನಗುಮುಖದಿಂದಲೇ ಉತ್ತರಿಸೋದನ್ನ ವೀಡಿಯೋದಲ್ಲಿ ನೀವು ಕೂಡ ಗಮನಿಸಬಹುದು.

    ಈ ವಿಡಿಯೋವನ್ನು `ಲವ್ ವಾಟ್ ನೇಚರ್ಸ್’ ಅನ್ನೋ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಲೋಡ್ ಮಾಡಲಾಗಿದ್ದು, ಏಪ್ರಿಲ್ 16ರಿಂದ ಇಲ್ಲಿಯವರೆಗೆ ಸುಮಾರು 1 ಕೋಟಿ 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 2.3 ಲಕ್ಷ ಮಂದಿ ಪ್ರತಿಕ್ರಿಯಿಸಿದ್ದು, 20 ಲಕ್ಷ ಮಂದಿ ಶೇರ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋವನ್ನು ನೋಡಿದ್ರೆ ನೀವು ಒಂದು ಬಾರಿ ಮೂಕವಿಸ್ಮಿತರಾಗೋದ್ರಲ್ಲಿ ಎರಡು ಮಾತಿಲ್ಲ.

    `9 ವಾರದ ಈ ಮಗು ಅತ್ಯಂತ ಚುರುಕುತನದಿಂದಿದ್ದು, ಅಜ್ಜಿಯನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತಿರೋ ಈ ವೀಡಿಯೋ ನಿಜಕ್ಕೂ ಅದ್ಭುತವಾಗಿದೆ’ ಅಂತಾ ಫೇಸ್ಬುಕ್ ನಲ್ಲಿ ಕೆಲವರು ಕಮೆಂಟ್ಸ್ ಹಾಕಿದ್ದಾರೆ.

    https://www.facebook.com/lovewhatreallymatters/videos/1485096161512777/

  • ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

    ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

    ವಾಷಿಂಗ್ಟನ್: ಹೆಚ್ಚಾಗಿ ವಯಸ್ಸಾದಂತೆ ಜನರು ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕ್ತಾರೆ. ಆದ್ರೆ ಇದಕ್ಕೆ ಅಪವಾದವೆಂಬಂತೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಜ್ಜಿಯೊಬ್ಬರು 100 ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ.

    ಫೆಬ್ರವರಿ 26ರಂದು ಎಲಿಜಬೆತ್ ಕೊಕ್ರೆಲ್ ಎಂಬ ಅಜ್ಜಿ 100 ರ ಸಂಭ್ರಮದಲ್ಲಿ ತನ್ನ ಗೆಳೆಯರ ಹಾಗೂ ಕುಟುಂಬದವರ ಮುಂದೆ ಸಖತ್ ಸ್ಟೆಪ್ ಹಾಕುವ ಮೂಲಕ ಯುವಜನತೆಯನ್ನೇ ನಾಚುವಂತೆ ಮಾಡಿದ್ದಾರೆ. ಅಜ್ಜಿಯ ಈ ಡ್ಯಾನ್ಸನ್ನು ಮೊರೆನೊ ವಾಲಿ ಎಂಬಾಕೆ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‍ಲೋಡ್ ಮಾಡಿದ್ದು, ಇದೀಗ ವೈರಲ್ ಆಗಿದೆ.

    ಟ್ರೆಸರ್ ಮರ್ನೆ ಎಂಬಾಕೆ ತನ್ನ ಇನ್‍ಸ್ಟಾಗ್ರಾಂ ಈ ವಿಡಿಯೋವನ್ನು ಅಪ್‍ಲೋಡ್ ಮಾಡಿದ್ದು, ಇದನ್ನ 20 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 269 ಮಂದಿ ಕಮೆಂಟ್ಸ್ ಹಾಕಿದ್ದಾರೆ. ಅಜ್ಜಿಯ ಈ ಡ್ಯಾನ್ಸ್ ನೋಡಿದ ಮಂದಿ 100 ರ ಸಂಭ್ರದಲ್ಲಿ ಅಜ್ಜಿ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಐ ಲವ್ ದಿಸ್ ವಿಡಿಯೋ ಅಂತಾ ಕೆಲವರು ಹೇಳಿದ್ರೆ ಇನ್ನು ಕೆಲವರು, ಅಜ್ಜಿಯಾದ್ರೂ ಪರವಾಗಿಲ್ಲ ನನಗಿಂತ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ಅಂತಾ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

    https://www.instagram.com/p/BQ9ZJSGA4xh/