Tag: grandmother

  • ಇಳಿ ವಯಸ್ಸಿನಲ್ಲಿಯೂ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಆಟೋ ಚಾಲಕಿ

    ಇಳಿ ವಯಸ್ಸಿನಲ್ಲಿಯೂ ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಆಟೋ ಚಾಲಕಿ

    ಬೆಂಗಳೂರು: ಮಕ್ಕಳ ಆಸರೆಯಲ್ಲಿ ಇರಬೇಕಾದ 58 ವರ್ಷದ ಶಾಂತಿ ಆಟೋ ಓಡಿಸಿಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.

    ಶಾಂತಿ ಅವರಿಗೆ ಇಬ್ಬರು ಮಕ್ಕಳು. ಮಗ ಬೇರೆ ಕಡೆ ವಾಸವಾಗಿದ್ದಾನೆ. ಮಗಳು ಸಾವನ್ನಪ್ಪಿದ್ದಾರೆ. ಆದರೆ ಮಗಳ ಮಗನನ್ನು ಓದಿಸುವ ಜವಾಬ್ದಾರಿ ಶಾಂತಿಯವರ ಮೇಲಿದೆ. ಕಳೆದ 25 ವರ್ಷಗಳಿಂದಲೂ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಶಾಂತಿ ಇತರ ಮಹಿಳೆಯರಿಗೂ ಮಾದರಿಯಾಗಿದ್ದಾರೆ.

    ಪತಿ ಟೈಲರಿಂಗ್ ಮಾಡುತ್ತಿದ್ದು, ಶಾಂತಿಯವರು ಮೊದಲಿಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಆದ್ರೆ ಬೇರೆಯವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟಪಡದೇ 1993ರಿಂದ ಆಟೋ ಓಡಿಸೋ ಕಾಯಕ ಮಾಡಿಕೊಂಡು ಬಂದಿದ್ದಾರೆ. ಇಷ್ಟು ಹಿರಿಯ ವಯಸ್ಸಿನಲ್ಲೂ ಆಟೋ ಓಡಿಸುತ್ತಿರುವ ಶಾಂತಿಯವರ ಸ್ವಾಭಿಮಾನಕ್ಕೆ ಅಕ್ಕ-ಪಕ್ಕದ ಮನೆಯವರೂ ಸಹ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕೆಲಸ ಸಿಗಲಿಲ್ಲ ಅಂತ ವಯಸ್ಸಿಗೆ ಬಂದ ಮಕ್ಕಳೇ ಪೋಷಕರನ್ನು ನೆಚ್ಚಿಕೊಂಡಿರ್ತಾರೆ. ಆದ್ರೆ ಈ ಹಿರಿಯ ವಯಸ್ಸಿನಲ್ಲೂ ಸ್ವಾಭಿಮಾನದ ಬದುಕು ನಡೆಸ್ತಿರುವ ಶಾಂತಿ ಯುವಪೀಳಿಗೆಗೆ ಮಾದರಿಯಾಗಿದ್ದಾರೆ.

  • ಅಜ್ಜಿ ಜೊತೆ ಸೊಂಟ ಬಳುಕಿಸಿ ಒಂದೇ ದಿನದಲ್ಲಿ 13.14 ಲಕ್ಷ ವ್ಯೂ ಗಳಿಸಿದ ರಣವಿಕ್ರಮ ನಟಿ: ವಿಡಿಯೋ ವೈರಲ್!

    ಅಜ್ಜಿ ಜೊತೆ ಸೊಂಟ ಬಳುಕಿಸಿ ಒಂದೇ ದಿನದಲ್ಲಿ 13.14 ಲಕ್ಷ ವ್ಯೂ ಗಳಿಸಿದ ರಣವಿಕ್ರಮ ನಟಿ: ವಿಡಿಯೋ ವೈರಲ್!

    ಮುಂಬೈ: ಬಾಲಿವುಡ್ ಬೆಡಗಿ ಅದಾ ಶರ್ಮಾ ಇನ್‍ಸ್ಟಾಗ್ರಾಂನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದು, ಇತ್ತೀಚಿಗೆ ತನ್ನ ಅಜ್ಜಿ ಜೊತೆ ಸೊಂಟ ಬಳುಕಿಸುತ್ತಿರುವ ವಿಡಿಯೋವೊಂದನ್ನು ಹಾಕಿದ್ದಾರೆ.

    ವಿಡಿಯೋದಲ್ಲಿ ಅದಾ ಜೊತೆಗೆ ಅವರ ಸ್ಪೆಷಲ್ ಪಾರ್ಟ್ ನರ್ ಅಜ್ಜಿ ಕೂಡ ಸೆಪ್ಸ್ ಹಾಕಿದ್ದಾರೆ. ‘ಸೋನು ಕೇ ಟೀಟು ಕಿ ಸ್ವೀಟು’ ಹಾಡಿಗೆ ಅಜ್ಜಿ ಮೊಮ್ಮಗಳು ಈ ಪಾರ್ಟಿ ಹಾಡಿಗೆ ಕುಣಿದಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್, ಸನ್ನಿ ಸಿಂಗ್ ಹಾಗೂ ಸುಸ್ರತ್ ಬರುಚಾ ಅಭಿನಯಿಸಿದ್ದಾರೆ.

    ಅದಾ ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ನಿಮ್ಮ ಡ್ಯಾನ್ಸ್ ಪಾರ್ಟ್ ನರ್ ಗೆ ಟ್ಯಾಗ್ ಮಾಡಿ. ನನ್ನ ಡ್ಯಾನ್ಸ್ ಪಾರ್ಟ್ ನರ್ ನನ್ನ ಅಜ್ಜಿ ಎಂದು ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಅದಾ ಅವರ ತಾಯಿ ಚಿತ್ರೀಕರಿಸಿದ್ದು, ಒಂದೇ ದಿನದಲ್ಲಿ ಈ ವಿಡಿಯೋ ಇನ್‍ಸ್ಟಾಗ್ರಾಂನಲ್ಲಿ 13.14 ಲಕ್ಷ ವ್ಯೂ ಗಳಿಸಿದೆ.

    ಅದಾ 1920 ಚಿತ್ರಕ್ಕೆ ಬೆಸ್ಟ್ ಫೀಮೇಲ್ ಫಿಲ್ಮಂ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಷ್ಟೇ ಅಲ್ಲದೇ ದಕ್ಷಿಣ ಭಾರತದ ತೆಲುಗು ಹಾಗೂ ಕನ್ನಡದ ಚಿತ್ರದಲ್ಲಿ ನಟಿಸಿದ್ದರು. ನಂತರ ಮತ್ತೆ 2017ರಲ್ಲಿ ‘ಕಮಾಂಡೋ 2’ ಚಿತ್ರದಲ್ಲಿ ವಿದ್ಯತ್ ಜಮ್ಮಾವಲ್ ಜೊತೆ ನಟಿಸಿದ್ದರು. ಇದನ್ನೂ ಓದಿ: ಟವಲ್ ಸುತ್ತಿಕೊಂಡು ಸೆಕ್ಸಿ ಡ್ಯಾನ್ಸ್ ಮಾಡಲು ಹೋಗಿ ಎಡವಟ್ಟು ಮಾಡ್ಕೊಂಡ ನಟಿ!

  • ತನ್ನ ಒಂದು ಪೇಂಟಿಂಗ್ ನಿಂದಾಗಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ 87ರ ಅಜ್ಜಿ

    ತನ್ನ ಒಂದು ಪೇಂಟಿಂಗ್ ನಿಂದಾಗಿ 1 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ 87ರ ಅಜ್ಜಿ

    ಲಂಡನ್: ಅಜ್ಜ-ಅಜ್ಜಿಯರು ಹೆಚ್ಚಾಗಿ ಉದ್ಯಾನವನದಲ್ಲಿ, ತಮ್ಮ ಮೊಮ್ಮಕ್ಕಳ ಜೊತೆ ಆಟವಾಡುತ್ತ ಅಥವಾ ಟಿವಿ ನೋಡುತ್ತ ಕಾಲ ಕಳೆಯುತ್ತಾರೆ. ಆದರೆ ಲಂಡನ್ ಅಜ್ಜಿಯೊಬ್ಬರು ಮೈಕ್ರೋಸಾಫ್ಟ್ ಪೇಂಟ್ ಬಳಸಿ ಅದ್ಭುತವಾದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

    ಕ್ವಾಚಾ ಗಾರ್ಸಿಯಾ ಝೈರಾ (87) ಅದ್ಭುತ ಚಿತ್ರ ಬಿಡಿಸಿದ ಮಹಿಳೆ. ಸಾಮಾನ್ಯವಾಗಿ ಕಂಪ್ಯೂಟರ್ ನ ಮೈಕ್ರೋಸಾಫ್ಟ್ ಪೇಂಟ್ ಬಳಸಿ ಚಿತ್ರಗಳನ್ನು ಬಿಡಿಸಿದ್ದು, ಈ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ.

    https://www.instagram.com/p/BgPT42RAUnt/?hl=en&taken-by=conchagzaera

    ಕ್ವಾಚಾ ಅವರು ತಾವು ಬಿಡಿಸಿರುವ ಈ ಚಿತ್ರಗಳನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ತಮ್ಮ ಮೊಮ್ಮಕ್ಕಳ ಸಲಹೆ ಮೇರೆಗೆ ಇನ್ ಸ್ಟಾಗ್ರಾಮ್ ನಲ್ಲಿಯೂ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಳ್ಳುವ ಮುನ್ನ ಅಂದರೆ ಮಾರ್ಚ್ 9 ಇವರ ಖಾತೆಗೆ ಕೇವಲ 300 ಮಂದಿ ಫಾಲೋವರ್ಸ್ ಗಳನ್ನು ಹೊಂದಿದ್ದರು. ಆದರೆ ಈ ಚಿತ್ರಗಳನ್ನು ಹಂಚಿಕೊಂಡ ಅಲ್ಪ ಸಮಯದಲ್ಲಿ 1.36 ಲಕ್ಷ ಜನರು ಅಜ್ಜಿಯನ್ನು ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡ್ತಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕ್ವಾಚಾ, `ನನ್ನ ಪತಿ ಅನಾರೋಗ್ಯಕ್ಕೆ ಒಳಗಾದ ಮೇಲೆ ನಾನು ಅವರನ್ನು ನೋಡಿಕೊಳ್ಳಬೇಕಿತ್ತು. ನನಗೆ ಮನೆಯಿಂದ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಈ ವೇಳೆ ತಮ್ಮ ಪತಿ ನನಗೆ ಪೋಸ್ಟ್ ಮಾಡಿದ್ದ ಕಾರ್ಡ್ ಗಳಿಂದ ಸ್ಫೂರ್ತಿ ಪಡೆದು ಈ ಚಿತ್ರಗಳನ್ನು ಬಿಡಿಸಲು ಪ್ರಯತ್ನಿಸಿದ್ದೆನೆಂದು ಹೇಳಿದ್ದಾರೆ.

    https://www.instagram.com/p/BfipO3YHI_Y/?hl=en&taken-by=conchagzaera

    ಈ ಮುನ್ನ ಕ್ವಾಚಾ ಅವರ ಮಕ್ಕಳು ಇವರಿಗೆ ಸಮಯ ಕಳೆಯಲು ಕಂಪ್ಯೂಟರ್ ಒಂದನ್ನು ತಂದುಕೊಟ್ಟಿದ್ದರು. ಆಗ ಅವರು ಎಂಎಸ್ ಪೇಂಟ್ ನಲ್ಲಿ ಸಣ್ಣ ಮನೆ, ಮರಗಳನ್ನು ಬಿಡಿಸಲು ಪ್ರಾರಂಭಿಸಿದರು. ಬಳಿಕ ಇದು ಹವ್ಯಾಸವಾಗಿ ಸುಂದರ ಚಿತ್ರಗಳನ್ನು ಬಿಡಿಸಿದ್ದಾರೆ.

    ಕ್ವಾಚಾ ಅವರ ಈ ಚಿತ್ರಗಳನ್ನು ಗಮನಿಸಿದ್ರೆ ಎಂಎಸ್ ಪೈಂಟ್ ಮೂಲಕ ಇಂತಹ ಚಿತ್ರ ಬಿಡಿಸಲು ಕಷ್ಟ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ.

    https://www.instagram.com/p/BbWu9xGn7SB/?hl=en&taken-by=conchagzaera

  • 90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    90 ವರ್ಷದ ವೃದ್ಧೆಯ ಮೇಲೆ ಸಾರ್ವಜನಿಕರ ಎದುರೇ ಹಲ್ಲೆ ನಡೆಸಿದ ನಿರ್ದಯಿ ಮೊಮ್ಮಗಳು!

    ತಿರುವನಂತಪುರಂ: ನಿರ್ದಯಿ ಮೊಮ್ಮಗಳೊಬ್ಬಳು 90 ವರ್ಷದ ಅಜ್ಜಿಗೆ ಸಾರ್ವಜನಿಕರ ಎದುರೇ ಹಿಗ್ಗಾಮುಗ್ಗಾಗಿ ಥಳಿಸಿ ಹಲ್ಲೆಗೈದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಅಯಿಕ್ಕೆರ ಎಂಬಲ್ಲಿ ನಡೆದಿದೆ.

    30 ವರ್ಷದ ದೀಪಾ ತನ್ನ ತಾಯಿಯ ತಾಯಿ ಕಲ್ಯಾಣಿ ಅವರಿಗೆ ಹಲ್ಲೆ ನಡೆಸಿದ್ದಾಳೆ. ಅಜ್ಜಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೀಗಾಗಿ ಪ್ರಕರಣ ಸಂಬಂಧಿಸಿದಂತೆ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದಾರೆ.

    ವಿಡಿಯೊದಲ್ಲೇನಿದೆ?: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ ವಿಡಿಯೋದಲ್ಲಿ ಅಜ್ಜಿ ಕಲ್ಯಾಣಿ ಅಮ್ಮ ಮನೆಯ ಮುಂದೆ ಮಲಗಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ದೀಪಾ ಹಿಗ್ಗಾಮುಗ್ಗಾವಾಗಿ ಥಳಿಸಿದ್ದಾಳೆ. ಅಲ್ಲದೇ ಅಜ್ಜಿ ಮೈಮೇಲಿದ್ದ ಬಟ್ಟೆಯನ್ನು ಎಳೆದಾಡಿ, ಅದರಲ್ಲೇ ಥಳಿಸಿದ್ದಾಳೆ. ಬಳಿಕ  ಅಜ್ಜಿಯನ್ನು ಮಲಗಿದ್ದಲ್ಲಿಂದ ಎಬ್ಬಿಸಿ, ಕುಳಿತುಕೊಳ್ಳಿಸಿ ಮತ್ತೆ ಹಲವಾರು ಬಾರಿ ಥಳಿಸುವ ಮೂಲಕ ಕ್ರೂರ ವರ್ತನೆ ತೋರಿದ್ದಾಳೆ. ಹೀಗೆ 5 ನಿಮಿಷಗಳ ಕಾಲ ಚೆನ್ನಾಗಿ ಥಳಿಸಿದ್ದಾಳೆ. ಈ ಎಲ್ಲಾ ಘಟನೆಗಳನ್ನು ನೋಡುತ್ತಿದ್ದ ಸಾರ್ವಜನಿಕರು ಹಲ್ಲೆ ನಡೆಸದಂತೆ ಪರಿಪರಿಯಾಗಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕಂದ್ರೆ ವೃದ್ಧೆಯ ಸಹಾಯಕ್ಕೆ ನಿಂತ ಸಾರ್ವಜನಿಕರ ಮೇಲೆಯೇ ದೀಪಾ ರೇಗಾಡಿರುವುದು ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.

    ಹಲ್ಲೆ ಮಾಡಲು ಕಾರಣವೇನು?: ಹಲ್ಲೆ ನಡೆಸಿದ ದೀಪಾ ತನ್ನ ಇಬ್ಬರು ಮಕ್ಕಳೊಂದಿಗೆ ಅಮ್ಮ ಹಾಗೂ ಅಜ್ಜಿಯೊಂದಿಗೆ ವಾಸವಿದ್ದರು. ಕೆಲ ತಿಂಗಳ ಹಿಂದೆ ದೀಪಾ ಕೆಲಸ ಕಳೆದುಕೊಂಡಿದ್ದಳು. ಹೀಗಾಗಿ ಹಣದ ಸಮಸ್ಯೆ ಎದುರಿಸುತ್ತಿದ್ದಳು. ಈ ಮಧ್ಯೆ ಅಜ್ಜಿಯ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುತ್ತಿತ್ತು. ಇದರಿಂದ ದೀಪಾ ಕಿರಿಕಿರಿ ಅನುಭವಿಸುತ್ತಿದ್ದು, ಅಜ್ಜಿ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆರೋಪಿ ದೀಪಾಳನ್ನು ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 323ರ (ಸ್ವಯಂಪ್ರೇರಿತ ಹಾನಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೂ ಆರೋಪಿ ಅಮ್ಮ ಹಾಗೂ ಅಜ್ಜಿಯನ್ನು ರಕ್ಷಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

    https://www.facebook.com/kayalfriends/videos/2021498344530524/

  • ಬಿಎಂಟಿಸಿ ಬಸ್‍ನಲ್ಲಿ ಜಿಪ್ ತೆಗೆದ ಕಾಮುಕ ಅಜ್ಜ – ಪಕ್ಕದಲ್ಲೇ ಕೂತಿದ್ದ ಯುವತಿಗೆ ಕಿರುಕುಳ

    ಬಿಎಂಟಿಸಿ ಬಸ್‍ನಲ್ಲಿ ಜಿಪ್ ತೆಗೆದ ಕಾಮುಕ ಅಜ್ಜ – ಪಕ್ಕದಲ್ಲೇ ಕೂತಿದ್ದ ಯುವತಿಗೆ ಕಿರುಕುಳ

    ಬೆಂಗಳೂರು: ನಗರದ ಬಿಎಂಟಿಸಿ ಬಸ್ಸಿನಲ್ಲಿ ಕಾಮುಕ ಮುದುಕನೊಬ್ಬ ಯುವತಿಯ ಮುಂದೆ ತನ್ನ ವಿಕೃತಿ ಮರೆದ ಘಟನೆ ನಡೆದಿದೆ.

    ಈ ಘಟನೆ ಕೋರಮಂಗಲದ 100 ಫೀಟ್ ರಸ್ತೆಯ ಈಝೋನ್ ಬಳಿ ಮಾರ್ಚ್ 13ರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಏನಿದು ಘಟನೆ?: ಮಂಗಳವಾರ ಸಂತ್ರಸ್ತ ಯುವತಿ ಕೆಎ57 ಎಫ್ 2654 ನಂಬರಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಕೆ ಕುಳಿತುಕೊಂಡಿದ್ದ ಸೀಟ್ ಪಕ್ಕದಲ್ಲೇ ಸುಮಾರು 65 ವರ್ಷದ ಮುದುಕ ನಿಂತಿದ್ದನು. ಮುದುಕನ ನೋಡಿದ ಯುವತಿ ನೀವು ಕುಳಿತುಕೊಳ್ಳುತ್ತೀರಾ ಅಂತ ಕೇಳಿದ್ದಾರೆ. ಆಗ ಆರೋಪಿ ಮುದುಕ ಇಲ್ಲ. ನೀವೇ ಕುಳಿತುಕೊಳ್ಳಿ ಅಂತ ಹೇಳಿದ್ದಾನೆ. ಅಂತೆಯೇ ಯುವತಿ ತನ್ನ ಪಾಡಿಗೆ ಕುಳಿತಿದ್ದರು. ಇದೇ ಸಂದರ್ಭದವನ್ನು ಉಪಯೋಗಿಸಿಕೊಂಡ ಕಾಮುಕ ಮುದುಕಪ್ಪ, ತನ್ನ ಪ್ಯಾಂಟ್ ಜಿಪ್ ತೆರೆದು ಯುವತಿಯ ಕೈಗೆ ಉಜ್ಜುತ್ತಿದ್ದನು. ಇದು ಸಂತ್ರಸ್ತೆಯ ಗಮನಕ್ಕೆ ಬಂದಿದ್ದು, ಗಾಬರಿಗೊಂಡ ಆಕೆ ಕೂಡಲೇ ಏನ್ ಮಾಡ್ತಾ ಇದ್ದೀಯಾ ಎಂದು ಪ್ರಶ್ನಿಸಿದ್ದಾರೆ.

    ಯುವತಿ ಕೋಪಗೊಂಡಿದ್ದನ್ನು ನೋಡಿದ ಮುದುಕ ಆಕೆಯ ಮೇಲೆಯೇ ಎಗರಾಡಿದ್ದಾನೆ. ನಂತರ ಸಹ ಪ್ರಯಾಣಿಕರು ನಿಮ್ಮ ತಂದೆಯ ವಯಸ್ಸಾಗಿದೆ ಹೋಗ್ಲಿ ಬಿಡಮ್ಮ ಅಂತ ಹೇಳಿದ್ದಕ್ಕೆ ಯುವತಿ ಸುಮ್ಮನಾಗಿದ್ದಾರೆ. ಬಳಿಕ ಕಾಮುಕ ಮುದುಕನ್ನು ಬಸ್ ಚಾಲಕ ಮತ್ತು ನಿರ್ವಾಹಕ ಬಸ್‍ನಿಂದ ಇಳಿಸಿದ್ದಾರೆ.

    ಘಟನೆಯಿಂದ ಬೇಸತ್ತ ಸಂತ್ರಸ್ತೆ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದು, ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಯಾದಗಿರಿಯಲ್ಲಿ ಭಿಕ್ಷೆ ಬೇಡಿ ಬದುಕ್ತಿರೋ ಅನಾಥ ಅಜ್ಜಿಗೆ ಬೇಕಿದೆ ಸೂರಿನ ಬೆಳಕು

    ಯಾದಗಿರಿಯಲ್ಲಿ ಭಿಕ್ಷೆ ಬೇಡಿ ಬದುಕ್ತಿರೋ ಅನಾಥ ಅಜ್ಜಿಗೆ ಬೇಕಿದೆ ಸೂರಿನ ಬೆಳಕು

    ಯಾದಗಿರಿ: ಮಕ್ಕಳು, ಮೊಮ್ಮಕ್ಕಳ ಜೊತೆ ಜೀವನ ನಡೆಸಬೇಕಾದ ಅಜ್ಜಿ ಇದೀಗ ಅನಾಥರಾಗಿದ್ದಾರೆ. ಒಂದು ಕಡೆ ಅನಾಥ ಅನ್ನೋ ಕೊರಗು ಆದ್ರೆ, ಇನ್ನೊಂದು ಕಡೆ ಸೂರಿಲ್ಲದೇ ಪರಿತಪಿಸುವಂತಾಗಿದೆ. ಹೀಗಾಗಿ ನಿತ್ಯವೂ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಅನಾಥ ಹಾಗೂ ಸೂರಿಲ್ಲದೇ ನಿತ್ಯವೂ ನರಕಯಾತನೆ ಅನುಭವಿಸುತ್ತಿರೋ ಈ ವೃದ್ಧೆ ಇದೀಗ ಜೀವನ ಸಾಗಿಸಲು ಅಜ್ಜಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.

    ಹೌದು. ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ಮನಗನಾಳ ಗ್ರಾಮದ 80 ವರ್ಷದ ಹಣಮವ್ವ ಅವರು, ಈ ಮೊದಲು ಕೂಲಿ-ನಾಲಿ ಮಾಡಿಕೊಂಡು ಗಂಡನ ಜೊತೆ ಸುಖವಾಗಿ ಸಂಸಾರ ಸಾಗಿಸುತ್ತಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ವಿಧಿಯಾಟಕ್ಕೆ ಮೊದಲು ಗಂಡನನ್ನು ಕಳೆದುಕೊಂಡ ಕೊರಗಿನಲ್ಲಿದ್ದ ವೃದ್ಧೆ, ತನ್ನ ಎರಡೂ ಮಕ್ಕಳನ್ನು ಕೂಡ ಕಳೆದುಕೊಂಡು ಅನಾಥವಾಗಿ ಬದುಕುತ್ತಿದ್ದಾರೆ.

    ಸದ್ಯ ಇವರು ಮನಗನಾಳ ಗ್ರಾಮದ ಪತ್ರಾಸ್ ಎಂಬವರ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಒಂದಿಷ್ಟು ಜಮೀನು ಹೊಂದಿದ್ದರೂ, ಇವರಿಗೆ ದುಡಿಯಲು ಸಾಧ್ಯವಾಗದೇ ಪಾಳು ಬಿದ್ದಿದೆ. ಈ ಅಜ್ಜಿಯ ಕಾಲು ಮುರಿದು ನಡೆಯಲು ಕಷ್ಟವಾದ್ರೂ, ದಿನ ನಿತ್ಯ ಭಿಕ್ಷೆಯನ್ನು ಬೇಡಿ ಜೀವನ ನಡೆಸುವಂತಹ ಪರಿಸ್ಥಿತಿ ಉದ್ಭವಾಗಿದೆ.

    ಸರ್ಕಾರ ಬಡತನದಲ್ಲಿದ್ದ ಕುಟುಂಬಗಳಿಗೆ ಸಾಕಷ್ಟು ಯೋಜನೆಗಳು ಜಾರಿ ಮಾಡಿದೆ. ಆದ್ರೆ ನಿಜವಾದ ಬಡವರ ಬಗ್ಗೆ ಸರ್ಕಾರ ಗಮನ ತೋರುತ್ತಿಲ್ಲ. ಹಣಮವ್ವ ಅಜ್ಜಿ ದಶಕಗಳಿಂದ ಭಿಕ್ಷೆಯನ್ನು ಬೇಡಿ ಜೀವನ ನಡೆಸುತ್ತಿದ್ದಾರೆ. ಸರ್ಕಾರವೂ ಇವರ ನೆರವಿಗೆ ಬಂದಿಲ್ಲ. ಹೀಗಾಗಿ ಹಣಮವ್ವ ಅಜ್ಜಿ ತನ್ನ ಜೀವನದ ಬಂಡಿ ಸಾಗಿಸಲು ಕೈಗೆ ಮಕ್ಕಳು ಸಹ ಸಿಕ್ಕಿಲ್ಲ. ಸರ್ಕಾರವು ಬಡವರಿಗೆ ಆಶ್ರಯ ಯೋಜನೆ ಮನೆಗಳು, ವೃದ್ಧಾಪ್ಯ ವೇತನವು ಜಾರಿಗೆ ಮಾಡಿದೆ ನಿಜವಾದ ಫಲಾನುಭವಿ ಈ ಅಜ್ಜಿ ಎಂದು ಗುರುತಿಸಿಲ್ಲ. ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ನೋಡಿ, ತನ್ನ ನೆರವಿಗೆ ಸರ್ಕಾರ ಬರುತ್ತಿಲ್ಲ. ಹೀಗಾಗಿ ಪಬ್ಲಿಕ್ ಟಿವಿಯು ತನ್ನ ನೆರವಿಗೆ ನಿಲ್ಲುತ್ತೆ ಅಂತ ಆತ್ಮವಿಶ್ವಾಸದಿಂದ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಒಟ್ಟಾರೆ ನನ್ನವರು ಎನ್ನುವರು ಯಾರು ಇಲ್ಲದಕ್ಕೆ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿರುವ ಹಣಮವ್ವ ಅಜ್ಜಿಗೆ ಯಾರಾದರೂ ದಾನಿಗಳು ಸೂರಿನ ಸಹಾಯವನ್ನು ಮಾಡುವ ಮೂಲಕ ಬಾಳಿಗೆ ಬೆಳಕಾಗಬೇಕು ಎಂಬುದೇ ಅವರ ಆಶಯವಾಗಿದೆ. ಇನ್ನಾದ್ರೂ ವೃದ್ಧೆಯ ಕೂಗಿಗೆ ಸರ್ಕಾರ ಕಣ್ಣು ತೆರೆದು, ನೆರವಿಗೆ ನಿಲ್ಲುತ್ತಯೇ ಎಂಬುದನ್ನು ಕಾದು ನೋಡಬೇಕಾಗಿದೆ.

    https://youtu.be/_0H7E57_iTc

  • ಬೆಳಕು ಇಂಪ್ಯಾಕ್ಟ್: ಮುರುಕು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದ ವೃದ್ಧರ ಬಾಳಿಗೆ ಸಿಕ್ಕಿದೆ ಸೂರಿನ ಬೆಳಕು

    ಬೆಳಕು ಇಂಪ್ಯಾಕ್ಟ್: ಮುರುಕು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದ ವೃದ್ಧರ ಬಾಳಿಗೆ ಸಿಕ್ಕಿದೆ ಸೂರಿನ ಬೆಳಕು

    ರಾಯಚೂರು: ಹೆತ್ತ ಮಕ್ಕಳು ಹತ್ತಿರವಿಲ್ಲ, ಅನಾರೋಗ್ಯ ಬಿದ್ದರೆ ಕೇಳೋರಿಲ್ಲಾ. ಸೂರು ಅಂತ ಇರುವ ಪುಟ್ಟ ಗುಡಿಸಲು ಹೆಸರಿಗೆ ಮಾತ್ರ ಆಸರೆಯಂತಿತ್ತು. ಮಳೆ, ಬೇಸಿಗೆ, ಚಳಿ ಎಲ್ಲಾ ಕಾಲದಲ್ಲೂ ತೊಂದರೆಯನ್ನೇ ಈ ವೃದ್ಧರು ಅನುಭವಿಸುತ್ತಿದ್ದರು. ಮುರುಕು ಮನೆಯಲ್ಲಿ ಕಷ್ಟಪಡುತ್ತಲೇ ಜೀವನ ಮುಗಿದು ಹೋಗುತ್ತೇ ಅಂತ ಕಷ್ಟದಲ್ಲಿ ಕಾಲಕಳೆಯುತ್ತಿದ್ದ ವೃದ್ಧರ ಬಾಳಿಗೆ ಇದೀಗ ಬೆಳಕು ಸಿಕ್ಕಿದೆ.

    ಹೌದು. ಯಾರಿಗೂ ಕಮ್ಮಿಯಿಲ್ಲದಂತೆ ಬದುಕಬಲ್ಲೆವು ಅಂತಿದ್ದಾರೆ ರಾಯಚೂರಿನ ಅಲ್ಲಮಪ್ರಭು ಕಾಲೋನಿಯ ಸಂಗಮ್ಮ(85) ಹಾಗೂ ಬೂದೆಮ್ಮ(63) ವರ್ಷದ ಅಜ್ಜಿಯರು. ಎಲ್ಲರೂ ಇದ್ದೂ ಏನೂ ಇಲ್ಲದಂತೆ ಬದುಕುತ್ತಿದ್ದರು. ವಯೋಸಹಜ ಕಾಯಿಲೆ ಜೊತೆಗೆ ಇರಲು ಭದ್ರವಾದ ಸೂರಿಲ್ಲದೆ, ತುತ್ತು ಅನ್ನಕ್ಕೂ ಮತ್ತೊಬ್ಬರ ಮನೆಯಲ್ಲಿ ನಿತ್ಯ ಕೆಲಸ ಮಾಡಿ ಜೀವನ ಮಾಡುತ್ತಿದ್ದರು.

    ಅಜ್ಜಿ ಸಂಗಮ್ಮಳಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳು. ಆದ್ರೆ ಮಗಳು ಬೂದೆಮ್ಮ ಮಾತ್ರ ತಾಯಿಯ ಬಗ್ಗೆ ಕಾಳಜಿ ತೋರಿಸಿ ಪುಟ್ಟ ಮುರುಕಲು ಮನೆಯಲ್ಲಿಟ್ಟುಕೊಂಡಿದ್ದರು. 63 ವರ್ಷದ ಬೂದೆಮ್ಮಳಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಇದ್ದಾನೆ. ಆದ್ರೆ ಮಗ ಇದ್ದರೂ ಇಲ್ಲದಂತಿದ್ದು, ಹೆಣ್ಣು ಮಕ್ಕಳು ತಮ್ಮ ಗಂಡನ ಮನೆ ಸೇರಿಕೊಂಡಿದ್ದಾರೆ. ಹೀಗಾಗಿ ಈ ಇಬ್ಬರು ಅಜ್ಜಿಯರನ್ನು ಕೇಳುವವರೇ ಇಲ್ಲವಾಗಿತ್ತು. ಮುರಕಲು ಮನೆಯಲ್ಲಿ ವಾಸವಾಗಿದ್ದ ಈ ಅಜ್ಜಿಯರು ಸೂರಿಗಾಗಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು. ಈಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದಿಂದ ಸುಂದರ ಮನೆಯ ಒಡೆಯರಾಗಿದ್ದಾರೆ. ಈ ಮನೆಗೆ `ಬೆಳಕು’ ಎಂದು ಹೆಸರಿಟ್ಟು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ.

    ವಸತಿಯೋಜನೆಯಡಿ ಸಿಕ್ಕ 13*18 ಚದರಡಿಯ ಜಾಗದಲ್ಲಿ ಈಗ ಸುಂದರವಾದ ಮನೆ ನಿರ್ಮಾಣವಾಗಿದೆ. ಹಾಲ್, ಪುಟ್ಟ ಬೆಡ್ ರೂಂ, ಅಡುಗೆ ಮನೆ, ಸ್ನಾನಗೃಹ ಶೌಚಾಲಯ, ದೇವರ ಪೂಜೆಗೂ ಮನೆಯಲ್ಲಿ ಜಾಗ ಮೀಸಲಿಡಲಾಗಿದೆ. ಫ್ಯಾನ್, ವಿದ್ಯುತ್ ಬೆಳಕಿನ ವ್ಯಸ್ಥೆಯನ್ನೂ ಮಾಡಿ ಭದ್ರವಾಗಿ ಮನೆಯನ್ನು ನಿರ್ಮಿಸಿ ಕೊಡಲಾಗಿದೆ.

    ಬೆಳಕು ಕಾರ್ಯಕ್ರಮದಲ್ಲಿ ಮಾತು ಕೊಟ್ಟಂತೆ ಕ್ಯಾಷೊಟೆಕ್ ಸಂಸ್ಥೆಯ ಎಂಜಿನೀಯರ್‍ಗಳು ತಮ್ಮ ಸ್ವಂತ ದುಡ್ಡನ್ನ ಖರ್ಚುಮಾಡಿದ್ದಾರೆ. ಫಾರ್ಮಾ ಕಂಪನಿಯೊಂದರ ಕೆಲ ನೌಕರ ಸ್ನೇಹಿತರು ಮನೆ ನಿರ್ಮಾಣದ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ವಿಶೇಷ ಅಂದ್ರೆ ಸ್ವಾಭಿಮಾನಿ ಅಜ್ಜಿಯರಿಬ್ಬರು ಅಕ್ಕಪಕ್ಕದ ಮನೆಗಳಲ್ಲಿ ಜೋಳದ ರೊಟ್ಟಿ ಮಾಡಿ ಅದರಿಂದ ಬರುವ ಹಣದಲ್ಲಿ ಜೀವನ ಮಾಡುತ್ತಿದ್ದಾರೆ.

    ಭದ್ರವಾದ ಸೂರಿನೊಂದಿಗೆ ನೆಮ್ಮದಿಯ ಜೀವನ ಮಾಡುತ್ತಾ ಸಂತಸ ಗೊಂಡಿದ್ದಾರೆ. ಅಜ್ಜಿಯರ ಸಂತೋಷ ಸದಾ ಹೀಗೆ ಇರಲಿ ಎಂಬುದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಆಶಯ.

    https://www.youtube.com/watch?v=4NGmO5MjerQ

  • ಬೆಂಗ್ಳೂರು ಅಜ್ಜಿಯ 35 ಕೋಳಿ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಬೆಂಗ್ಳೂರು ಅಜ್ಜಿಯ 35 ಕೋಳಿ ಕಳವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

    ಬೆಂಗಳೂರು: ತನ್ನ 35 ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಕಚೇರಿಗೆ ಬಂದು ದೂರು ದಾಖಲಿಸಿದ್ದ ಅಜ್ಜಿಯ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ದೊರೆತಿದೆ.

    ಹೌದು. ತನ್ನ ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಅಜ್ಜಿ ಈ ಉಪಾಯ ಹೂಡಿದ್ದಾರೆ ಅಂತ ತಿಳಿದುಬಂದಿದೆ.

    ಈ ಅಜ್ಜಿಯ ಮಗ 2011 ರಲ್ಲಿ ಪಕ್ಕದ ಮನೆಯವರ ಸರವನ್ನು ಕಳ್ಳತನ ಮಾಡಿದ್ದನು. ಆ ಸಂದರ್ಭದಲ್ಲಿ ಪಕ್ಕದ ಮನೆಯವರು ಅಜ್ಜಿ ಗಿರಿಜಮ್ಮ ಮಗನ ಮೇಲೆ ದೂರು ನೀಡಿದ್ರು. ಅಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕೂಡ ಕಳುಹಿಸಿದ್ರು. ಹೀಗಾಗಿ ಇದೀಗ ಅಜ್ಜಿ ಪಕ್ಕದ ಮನೆಯವರಿಂದ ಮಗ ಕಷ್ಟಪಟ್ಟ ಅಂತ ಸೇಡು ತೀರಿಸಿಕೊಳ್ಳೋಕೆ ಈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಕೋಳಿ ಕಳ್ಳತನವಾಗಿದೆ ಹುಡುಕಿಕೊಡಿ- ಕಮೀಷನರ್ ಕಚೇರಿಗೆ ಬಂದು ಅಜ್ಜಿಯಿಂದ ಕಂಪ್ಲೆಂಟ್

    ಈ ರೀತಿ ದೂರು ನೀಡಿ ಪಕ್ಕದ ಮನೆಯವರಿಗೆ ಹಿಂಸೆ ಕೊಡ್ತಿದ್ದ ಅಜ್ಜಿ ಕಳೆದ ಒಂದು ವಾರದ ಹಿಂದೆ ಮೂರು ಕೋಳಿ ಕದ್ದಿದ್ದಾರೆ ಅಂತ ದೂರು ನೀಡಿದ್ದರು. ಆದ್ರೆ ಬೈಯಪ್ಪನಹಳ್ಳಿ  ಪೊಲೀಸರು ಈ ದೂರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು, ಇಬ್ಬರನ್ನೂ ಕರೆಸಿ ರಾಜಿ ಮಾಡಿದ್ರು.

    ಇದೀಗ ಪೊಲೀಸರಿಂದ ನ್ಯಾಯ ಸಿಕ್ತಿಲ್ಲ ಅಂತ ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಈ ದೂರು ನೀಡಿದ್ದಾರೆ. ಒಟ್ಟಿನಲ್ಲಿ ಪಕ್ಕದ ಮನೆಯವರ ಮೇಲೆ ಸೇಡು ತೀರಿಸಿಕೊಳ್ಳೋದಕ್ಕಾಗಿ ಈ ಉಪಾಯ ಮಾಡಿದ್ರಾ ಅನ್ನೋದು ಪ್ರಶ್ನೆಯಾಗಿದೆ.

     

  • ದೂರದ ಹಳ್ಳಿಯಿಂದ ಬಂದು ದಾರಿ ತಪ್ಪಿದ ಅಜ್ಜಿ – ಮಲ್ಲೇಶ್ವರಂನಲ್ಲಿ ರಾತ್ರಿಯೆಲ್ಲಾ ಪರದಾಟ

    ದೂರದ ಹಳ್ಳಿಯಿಂದ ಬಂದು ದಾರಿ ತಪ್ಪಿದ ಅಜ್ಜಿ – ಮಲ್ಲೇಶ್ವರಂನಲ್ಲಿ ರಾತ್ರಿಯೆಲ್ಲಾ ಪರದಾಟ

    – ಹೆತ್ತ ಮಕ್ಕಳು ಬೇಕಂತಲೇ ಬಿಟ್ಟು ಹೋಗಿರುವ ಶಂಕೆ

    ಬೆಂಗಳೂರು: ದೂರದ ಹಳ್ಳಿಯಿಂದ ಬೆಂಗಳೂರಿಗೆ ಬಂದ 90 ವರ್ಷದ ಅಜ್ಜಿಯೊಬ್ಬರು ದಾರಿ ತಿಳಿಯದೇ ಕಂಗಾಲಾಗಿದ್ದಾರೆ. ಬಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಎಟಿಎಂವೊಂದರ ಬಳಿ ಈ ಅಜ್ಜಿ ಭಾನುವಾರ ಮಧ್ಯಾಹ್ನದಿಂದ ಕುಳಿತುಕೊಂಡಿದ್ದಾರೆ.

    ಅಜ್ಜಿಯನ್ನು ನೋಡಿದ ಸ್ಥಳೀಯರು ಎಲ್ಲಿಂದ ಬಂದ್ದಿದೀರಿ, ಎಲ್ಲಿ ಹೋಗಬೇಕು ಅಂತಾ ಪ್ರಶ್ನೆ ಮಾಡಿದ್ದಾರೆ. ಮಕ್ಕಳ ಜೊತೆ ಇಲ್ಲಿಗೆ ಬಂದಿದ್ದೆ ಎಲ್ಲಾ ಬಿಟ್ಟು ಹೋದ್ರು ಅಂತಾ ಅಜ್ಜಿ ಹೇಳುತ್ತಿದ್ದಾರೆ. ಹೆತ್ತ ಮಕ್ಕಳೇ ಸಾಕೋಕೆ ಕಷ್ಟ ಅಂತಾ ಈ ರೀತಿ ಬಿಟ್ಟು ಹೋದ್ರಾ ಅನ್ನೋ ಅನುಮಾನ ಎಲ್ಲರಲ್ಲಿ ಮೂಡಿದೆ.

    ತಡರಾತ್ರಿ 11 ಗಂಟೆಯಾದರೂ ಅಜ್ಜಿ ರಸ್ತೆಯ ಬದಿಯೇ ಕುಳಿತಿದನ್ನು ನೋಡಿದ ಸ್ಥಳೀಯರು, ಮಲ್ಲೇಶ್ವರಂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಜ್ಜಿಯ ರಕ್ಷಣೆ ಮಾಡಿದ್ದಾರೆ.

  • 4 ವರ್ಷದ ಮೊಮ್ಮಗಳ ಗುಪ್ತಾಂಗವನ್ನ ಇಕ್ಕಳದಿಂದ ಸುಟ್ಟ ಕ್ರೂರಿ ಅಜ್ಜಿ

    4 ವರ್ಷದ ಮೊಮ್ಮಗಳ ಗುಪ್ತಾಂಗವನ್ನ ಇಕ್ಕಳದಿಂದ ಸುಟ್ಟ ಕ್ರೂರಿ ಅಜ್ಜಿ

    ಚಂಡೀಗಢ: ಕುಟುಂಬದಲ್ಲಿ ಗಂಡು ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಅಜ್ಜಿಯೊಬ್ಬಳು ತನ್ನ ಮುಂದೆ ಆಡುತ್ತಿದ್ದ ನಾಲ್ಕು ವರ್ಷದ ಮೊಮ್ಮಗಳ ಗುಪ್ತಾಂಗವನ್ನು ಸುಟ್ಟಿರುವ ಮನಕಲಕುವ ಘಟನೆ ಹರಿಯಾಣ ರಾಜ್ಯದ ಸಿರ್ಸಾ ಜಿಲ್ಲೆಯ ಮೊಜುಖೇರಾ ಗ್ರಾಮದ ಡಿಂಗ್ ಟೌನ್ ಎಂಬಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಅಜ್ಜಿಯಿಂದ ಹಲ್ಲೆಗೊಳಗಾದ ಬಾಲಕಿ ಮನೆಯ ಮೂರನೇ ಹೆಣ್ಣು ಮಗುವಾಗಿದ್ದಾಳೆ. 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಶುಕ್ರವಾರ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಸಂಸ್ಥೆಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಬಾಲಕಿಯನ್ನು ಸಿರ್ಸಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಆರೋಪಿ ಅಜ್ಜಿಗೆ ಮೊಮ್ಮಗ ಬೇಕಾಗಿದ್ದ, ಆದ್ರೆ ಮಗನಿಗೆ ಒಂದರ ಮೇಲೊಂದಂತೆ ಮೂರು ಹೆಣ್ಣು ಮಕ್ಕಳಾಗಿದ್ದವು. ಅಜ್ಜಿ ಸಿಟ್ಟಿನಲ್ಲಿರುವಾಗ ಆಕೆಯ ಮುಂದುಗಡೆ ಆಟ ಆಡುತ್ತಿದ್ದ ನಾಲ್ಕು ವರ್ಷದ ಮೊಮ್ಮಗಳ ಗುಪ್ತಾಂಗಕ್ಕೆ ಬಿಸಿ ಇಕ್ಕುಳದಿಂದ ಸುಟ್ಟಿದ್ದಾಳೆ. ನಾವು ಈಗಾಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಪೊಲೀಸ್ರು ಸಹ ಸೂಕ್ತ ಕ್ರಮ ತೆಗೆದುಕೊಳ್ಳತ್ತೀವಿ ಅಂತಾ ಭರವಸೆ ನೀಡಿದ್ದಾರೆ ಎಂದು ಮಕ್ಕಳ ರಕ್ಷಣೆ ಸಮಿತಿ ಅಧಿಕಾರಿ ಗೀತಾ ಕಥುರಿಯಾ ತಿಳಿಸಿದ್ದಾರೆ.

    ಬಾಲಕಿಯ ತಂದೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಬಾಲಕಿಯ ತಂದೆಗೆ ಸಮನ್ಸ್ ಜಾರಿ ಮಾಡಿದ್ದು, ಅವ್ರಿಂದ ಇನ್ನೂ ಸೂಕ್ತವಾದ ಉತ್ತರ ಸಿಕ್ಕಿಲ್ಲ. ಘಟನಾ ಸ್ಥಳಕ್ಕೆ ನಾವು ಭೇಟಿ ನೀಡಿ ಬಾಲಕಿಯನ್ನು ರಕ್ಷಿಸಿ, ಸಿರ್ಸಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೀತಾ ಹೇಳಿದ್ದಾರೆ.

    ಮಕ್ಕಳ ರಕ್ಷಣಾ ಸಮಿತಿಯಿಂದ ಈಗಾಗಲೇ ದೂರು ದಾಖಲಿಸಿಕೊಳ್ಳಲಾಗಿದೆ. ನಾವು ಕೂಡಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಡಿಎಸ್‍ಪಿ ವಿಜಯ್ ಕಕ್ಕರ್ ತಿಳಿಸಿದ್ದಾರೆ.