Tag: grandmother

  • ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಕಣ್ಣೀರಿಟ್ಟ ಅಜ್ಜಿ

    ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಕಣ್ಣೀರಿಟ್ಟ ಅಜ್ಜಿ

    ಬೆಳಗಾವಿ: ಸಂಸದೆ ಶೋಭಾ ಕರಂದ್ಲಾಜೆ ಅವರು ನಗರದ ಗಂಜಿ ಕೇಂದ್ರಕ್ಕೆ ಭೇಟಿ ನೀಡಿ, ಸಂತ್ರಸ್ತರ ನೋವನ್ನು ಆಲಿಸಿದರು. ಹಾಗೆಯೇ ನಿಮ್ಮ ಬದುಕನ್ನು ಕಟ್ಟಿಕೊಡುವುದು ನಮ್ಮ ಜವಾಬ್ದಾರಿ. ಯಾರು ಹೆದರಬೇಡಿ ಧೈರ್ಯದಿಂದ ಇರಿ ಎಂದು ಭರವಸೆ ನೀಡಿದ್ದಾರೆ.

    ಖಾಸಬಾಗದ ಓಂ ನಗರದಲ್ಲಿರುವ ಸಾಯಿ ಹಾಲ್‍ನಲ್ಲಿ ನೂರಾರು ಪ್ರವಾಹಪೀಡಿತರು ಆಶ್ರಯ ಪಡೆದಿದ್ದಾರೆ. ಈ ಕೇಂದ್ರಕ್ಕೆ ಶೋಭಾ ಹಾಗೂ ಸ್ಥಳಿಯ ಶಾಸಕರಾದ ಅನೀಲ ಬೆನಕೆ ಹಾಗೂ ಅಭಯ ಪಾಟೀಲ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯ ಬಗ್ಗೆ ಆಲಿಸಿದರು. ಆಗ ಲಕ್ಣೀನಗರದ ನಾಗವ್ವಾ ಅವರು ಮಳೆಗೆ ತಮ್ಮ ಮನೆ ಬಿದ್ದು ನಾಶವಾಗಿರುವ ಬಗ್ಗೆ ಮಾಹಿತಿ ನೀಡಿ, ಪರಿಹಾರ ಕೊಡಿಸಿ ಎಂದು ಶೋಭಾ ಕರಂದ್ಲಾಜೆ ಕಾಲಿಗೆ ಬಿದ್ದು ಬೇಡಿಕೊಂಡಿದ್ದಾರೆ.

    ನಿರಾಶ್ರಿತರಿಗೆ ಧೈರ್ಯ ತುಂಬಿ, ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಯಾರು ಕೂಡ ಹೆದರಬೇಡಿ, ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಬದುಕನ್ನು ಕಟ್ಟಿಕೊಡುವ ಜವಾಬ್ದಾರಿ ನಮ್ಮದು ಎಂದು ಸಂತ್ರಸ್ತರಿಗೆ ಸಂಸದೆ ಭರವಸೆ ಕೊಟ್ಟಿದ್ದಾರೆ.

    ಇಂದು ಧಾರವಾಡದಲ್ಲಿ ಮನೆ ಕಳೆದುಕೊಂಡವರಿಗೆ ನಾನೇ ಸ್ವತಃ ಸ್ಥಳಕ್ಕೆ ಭೇಟಿ ಕೊಟ್ಟು ಸರ್ಕಾರದ ವತಿಯಿಂದ ಪರಿಹಾರದ ಮೊದಲ ಕಂತಿನ 94 ಸಾವಿರ ಹಣ ವಿತರಿಸಿ ಬಂದಿದ್ದೇನೆ. ಅಲ್ಲದೆ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಬಸವ ವಸತಿ ಯೋಜನೆಯಡಿ ಹೊಸ ಮನೆ ನಿರ್ಮಿಸಿಕೊಡಲಾಗುವುದು. ಮಂಗಳವಾರದಿಂದಲೇ ಪರಿಹಾರ ಚೆಕ್ ವಿತರಣೆ ಮಾಡಲಾಗುತ್ತದೆ ಧೈರ್ಯದಿಂದ ಇರಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿಮ್ಮ ಜೊತೆ ಇದೆ ಎಂದು ಹೇಳಿದ್ದಾರೆ.

  • ಕಾಫಿ ಕುಡಿದರೆ ಧೈರ್ಯ ಬರುತ್ತೆ – 4 ದಿನ ಒಂದೇ ಮನೆಯಲ್ಲಿ ಕುಳಿತ ಅಜ್ಜಿ

    ಕಾಫಿ ಕುಡಿದರೆ ಧೈರ್ಯ ಬರುತ್ತೆ – 4 ದಿನ ಒಂದೇ ಮನೆಯಲ್ಲಿ ಕುಳಿತ ಅಜ್ಜಿ

    ಬೆಳಗಾವಿ: ಮಹಾಮಳೆಗೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಈ ಪ್ರವಾಹಕ್ಕೆ ಸಿಕ್ಕ ಅಜ್ಜಿಯೊಬ್ಬರು ಕೇವಲ ಕಾಫಿ ಕುಡಿಯುತ್ತ ನಾಲ್ಕು ದಿನ ಒಬ್ಬರೇ ಒಂದು ಮನೆಯಲ್ಲಿ ಬದುಕುಳಿದಿದ್ದಾರೆ.

    75 ವರ್ಷದ ಸುಮಿತ್ರಾ ಪಾಟೀಲ್ ತಮ್ಮ ಒಬ್ಬರೇ ಇದ್ದಾಗ ಮಲಪ್ರಭಾ ನದಿಯ ನೀರು ಮನೆಯನ್ನು ಸುತ್ತುವರಿದಿದೆ. ಈ ವೇಳೆ ಹೆದರದ ಅಜ್ಜಿ ದಿನ ಕೇವಲ ಕಾಫಿ ಕುಡಿದುಕೊಂಡು 4 ದಿನ ಜೀವನ ಮಾಡಿದ್ದಾರೆ.

    ತಾನು ನಾಲ್ಕು ದಿನ ಹೇಗೆ ಬದುಕಿದೆ ಎಂಬುದನ್ನು ತುಂಬ ಖುಷಿಯಿಂದ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿರುವ ಅಜ್ಜಿ, ಕಾಫಿ ಕುಡಿದರೆ ನನಗೆ ಧೈರ್ಯ ಬರುತ್ತದೆ. ಒಂದು ಕಪ್ ಕಾಫಿ ಕುಡಿದು ಒಂದು ಮಾಳಿಗೆ ಮೇಲೆ ಹೋಗಿದ್ದೆ. ಇನ್ನೊಂದು ಕಪ್ ಕಾಫಿ ಕುಡಿದು ಮತ್ತೊಂದು ಮಾಳಿಗೆ ಮೇಲೆ ಹೋಗಿ ಬದುಕುಳಿದೆ. ಈ ಸಮಯದಲ್ಲಿ ಮನೆ ಅಕ್ಷರಶಃ ನಡುಗಡ್ಡೆಯಾಗಿತ್ತು ಎಂದು ಹೇಳಿದ್ದಾರೆ.

    ನಾಲ್ಕು ದಿನವಾದರೂ ಯಾರು ರಕ್ಷಣೆಗೂ ಬರಲಿಲ್ಲ. ರಕ್ಷಣೆಗಾಗಿ ನಾನು ಯಾರನ್ನೂ ಕೂಗಲಿಲ್ಲ. ನಾನು ಕಾಫಿ ಕುಡಿಯುತ್ತೇನೆ ನನಗೆ ಧೈರ್ಯ ಜಾಸ್ತಿ. ನೀರು ಬರುತ್ತಿರುವುದನ್ನು ನೋಡಿ ಮತ್ತೆ ಮಂಚದ ಮೇಲೆ ಕುಳಿತೆ ಪ್ರಕೃತಿ ಮುನಿಸಿಕೊಂಡರೆ ಮಾನವರು ಏನು ಮಾಡಲು ಆಗುವುದಿಲ್ಲ ಎಂದು ಅಜ್ಜಿ ನೀತಿ ಪಾಠ ಹೇಳಿದ್ದಾರೆ.

  • ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

    ನಿವೃತ್ತಿ ಹಣಕ್ಕಾಗಿ ಮೊಮ್ಮಗನಿಂದಲೇ ಚಾಕು ಇರಿದು ಅಜ್ಜಿಯ ಬರ್ಬರ ಕೊಲೆ

    ಬೀದರ್: ನಿವೃತ್ತಿ ಹಣಕ್ಕಾಗಿ ಸ್ವತಃ ಮೊಮ್ಮಗನೇ ತನ್ನ ಅಜ್ಜಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಣಜಿ ಗ್ರಾಮದಲ್ಲಿ ನಡೆದಿದೆ.

    ಇಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಕೊಲೆಯಾದ ಅಜ್ಜಿಯನ್ನು ಲೀಲಾವತಿ (62) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮೊಮ್ಮಗ ಆಕಾಶ್ (21) ನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕಣಜಿ ಬಿಸಿಎಂ ಹಾಸ್ಟೆಲಿನಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಸುತ್ತಿದ್ದ ಲೀಲಾವತಿ ಕೆಲ ದಿನಗಳ ಹಿಂದೆ ನಿವೃತ್ತಿ ಹೊಂದಿದ್ದು, ನಿವೃತ್ತಿಯ ನಂತರ 6 ಲಕ್ಷ ರೂ. ಹಣ ಬಂದಿತ್ತು. ಈ ಹಣದ ಮೇಲೆ ಕಣ್ಣಿಟ್ಟಿದ್ದ ಮೊಮ್ಮಗ ಆಕಾಶ್ ನನಗೆ ಅ ಹಣ ಕೊಡು ಎಂದು ಹಲವು ತಿಂಗಳಿನಿಂದ ಅಜ್ಜಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. ಹಣ ಕೊಡಲು ನಿರಾಕರಿಸಿದ ಅಜ್ಜಿಯನ್ನು ಆಕಾಶ್ ಇಂದು ಕೊಲೆ ಮಾಡಿದ್ದಾನೆ.

    ಈ ಸಂಬಂಧ ಧನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

  • ಕನಸಿನಲ್ಲಿ ದೇವಿ ಪ್ರತ್ಯಕ್ಷ – ಅಜ್ಜಿಯನ್ನೇ ಕೊಂದ ಮೊಮ್ಮಗ..!

    ಕನಸಿನಲ್ಲಿ ದೇವಿ ಪ್ರತ್ಯಕ್ಷ – ಅಜ್ಜಿಯನ್ನೇ ಕೊಂದ ಮೊಮ್ಮಗ..!

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಮೊಮ್ಮಗನೋರ್ವ ನಿಧಿಗಾಗಿ ತನ್ನ ಸ್ವಂತ ಅಜ್ಜಿಯನ್ನೇ ಕೊಲೆ ಮಾಡಿ ಜನರ ಬಳಿ ಗೂಸ ತಿಂದು ಈಗ ಪೊಲೀಸರ ಅಥಿತಿಯಾಗಿದ್ದಾನೆ.

    ಯಲ್ಲವ್ವ ಗೊಲ್ಲರ್ (75) ಮೃತ ದುರ್ದೈವಿ. ಆರೋಪಿ ಮೊಮ್ಮಗ ರಮೇಶ್ ಗೊಲ್ಲರ್ ಕೊಲೆ ಮಾಡಿದ್ದಾನೆ. ಈತ ಮೂಲತಃ ಶಿರಸಿ ತಾಲೂಕಿನ ಬನವಾಸಿ ಬಳಿಯ ಬದನಗೋಡು ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದನು. ರಮೇಶ್ ಕನಸಿನಲ್ಲಿ ಈತನು ಪೂಜಿಸುವ ಇದೇ ಊರಿನ ಹುಲಿಯಮ್ಮ ದೇವಿ ಪ್ರತ್ಯಕ್ಷಳಾಗಿದ್ದು, ನಿನಗೆ ನಿಧಿ ತೋರಿಸುತ್ತೇನೆ ಅದಕ್ಕಾಗಿ ಐದು ನರ ಬಲಿ ಕೊಡಬೇಕು ಎಂದಿದ್ದಳಂತೆ.

    ಹೀಗಾಗಿ ಕನಸಲ್ಲಿ ಕಂಡದ್ದನ್ನು ನಿಜ ಮಾಡಲು 2016 ರಲ್ಲಿ ಮುಂಡಗೋಡಿನ ಮಳಗಿ ಅಣೆಕಟ್ಟು ಬಳಿ ಆಟವಾಡುತ್ತಿದ್ದ ಚಿಕ್ಕ ಬಾಲಕನ ಕುತ್ತಿಗೆ ಕಡಿದು ಕೊಲೆ ಮಾಡಿದ್ದನು. ಬಳಿಕ ಮುಂಡಗೋಡು ಪೊಲೀಸರಿಂದ ಬಂಧನವಾಗಿದ್ದನು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡು ಮತ್ತಷ್ಟು ಬಲಿ ಪಡೆಯಲು ಗ್ರಾಮದಲ್ಲಿ ಕತ್ತಿ ಹಿಡಿದುಕೊಂಡು ಓಡಾಡುತ್ತಿದ್ದನು. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಆತನಿಗೆ ಎಚ್ಚರಿಸಲಾಗಿತ್ತು. ಆದರೆ ಇದೀಗ ನಿಧಿಯ ಆಸೆಗೆ ತನ್ನ ಅಜ್ಜಿ ಯಲ್ಲವ್ವರನ್ನು ಬಲಿ ತೆಗೆದುಕೊಂಡಿದ್ದಾನೆ ಎಂದು ಗ್ರಾಮಸ್ಥ ಸರ್ಫರಾಜ್ ತಿಳಿಸಿದ್ದಾರೆ.

    ಕೃತ್ಯ ನಡೆಸಿ ಊರಿನಿಂದ ಪರಾರಿಯಾಗಿದ್ದ ಈತನನ್ನು ಗ್ರಾಮದವರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ಮತ್ತೊಂದು ನರಬಲಿಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದು, ತಾನು ಇನ್ನು ಮೂರು ಬಲಿ ಪಡೆದರೆ ನಿಧಿ ಪಡೆಯುವ ಹಂಬಲವನ್ನು ಪೊಲೀಸರ ಬಳಿ ಹೇಳಿದ್ದಾನೆ. ಇದರಿಂದ ಮತ್ತಷ್ಟು ಬಲಿಯಾಗುವ ಆತಂಕದಲ್ಲಿ ಗ್ರಾಮದವರು ಊರಿನಲ್ಲಿ ಓಡಾಡಲೂ ಭಯ ಪಡುತ್ತಿದ್ದಾರೆ ಎಂದು ಸ್ಥಳೀಯ ಅಕ್ಷಯ್ ಹೇಳಿದ್ದಾರೆ.

    ಈ ಹಿಂದೆಯೇ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದರೆ ಅಜ್ಜಿ ಸಾಯುತ್ತಿರಲಿಲ್ಲ. ಆದರೆ ಈಗ ನಿಧಿ ಹೆಸರಿನಲ್ಲಿ ಎರಡು ಬಲಿಯಾಗಿದ್ದು, ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಬಲಿಯಾಗಲಿದೆ ಎಂದು ಜನರು ಪೊಲೀಸರಿಗೆ ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಿನಲ್ಲಿ ಮನಬಂದಂತೆ ಓಡಾಡಿದ ಕುದುರೆಗೆ ಅಜ್ಜಿ ಬಲಿ!

    ಮೈಸೂರಿನಲ್ಲಿ ಮನಬಂದಂತೆ ಓಡಾಡಿದ ಕುದುರೆಗೆ ಅಜ್ಜಿ ಬಲಿ!

    ಮೈಸೂರು: ಕುದುರೆಯೊಂದು ಮನಬಂದಂತೆ ಓಡಾಡಿ ವೃದ್ಧೆಯನ್ನು ಬಲಿ ಪಡೆದ ಘಟನೆ ನಗರದಲ್ಲಿ ನಡೆದಿದೆ.

    ಪಾರ್ವತಮ್ಮ ಕುದುರೆ ದಾಳಿಗೆ ಬಲಿಯಾದ ಅಜ್ಜಿ. ಮೈಸೂರಿನ ಗಾಯತ್ರಿಪುರಂನ ಮೊದಲನೇ ಹಂತದ ಆಚಾರಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

    ತರಕಾರಿ ಮಾರುವ ಕೆಲಸ ಮಾಡುತ್ತಿದ್ದ ಪಾರ್ವತಮ್ಮ ಮೇಲೆ ಕುದುರೆ ದಾಳಿ ಮಾಡಿದೆ. ದಾಳಿಗೊಳಗಾದ ಪಾರ್ವತಮ್ಮ ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಕುದುರೆ ಸಾರ್ವಜನಿಕರ ನಿಯಂತ್ರಣಕ್ಕೆ ಸಿಗದೇ ಎಲ್ಲೆಂದರಲ್ಲಿ ಓಡಾಡುತ್ತಿದೆ. ಈ ಘಟನೆ ತಿಳಿದ ನಜರ್ ಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 85 ರ ವೃದ್ಧೆ ಮೇಲೆ 18 ಯುವಕನಿಂದ ರೇಪ್

    85 ರ ವೃದ್ಧೆ ಮೇಲೆ 18 ಯುವಕನಿಂದ ರೇಪ್

    ಲಕ್ನೋ: 18 ವರ್ಷದ ಯುವಕನೊಬ್ಬ ಸಂಬಂಧದಲ್ಲಿ ಅಜ್ಜಿಯಾಗಬೇಕಾದ 85 ವರ್ಷದ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮುಜಪ್ಫರ್ ನಗರದಲ್ಲಿ ನಡೆದಿದೆ.

    ಬುಧಾನಾ ಪ್ರದೇಶದ ಗ್ರಾಮವೊಂದರಲ್ಲಿ ಗುರುವಾರ ವೃದ್ಧೆ ಮನೆಯಲ್ಲಿ ಇದ್ದಾಗ ಆರೋಪಿ ಈ ರೀತಿ ಹೀನ ಕೃತ್ಯ ಎಸಗಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಗುರುವಾರ ಸಂಜೆ ಬಂಧಿಸಿದ್ದು, ಕೃತ್ಯವೆಸಗಿದಾಗ ಆತ ಕುಡಿದ ಮತ್ತಿನಲ್ಲಿದ್ದ ಎಂದು ತಿಳಿದುಬಂದಿದೆ.

    ಅರೋಪಿ ಯುವಕ ಅತ್ಯಾಚಾರ ಎಸಗಿದ ಬಳಿಕ ಮನೆಯಿಂದ ಪರಾರಿಯಾಗಿದ್ದಾನೆ. ನಾವು ಹೊರಗೆ ಹೋಗಿದ್ದೆವು. ಮನೆಗೆ ವಾಪಸ್ ಬಂದಾಗ ಅಜ್ಜಿ ನಡೆದ ಘಟನೆಯ ಬಗ್ಗೆ ವಿವರಿಸಿದರು. ನಂತರ ನಾನು ಪೊಲೀಸ್ ಠಾಣೆಗೆ ಬಂದು ದೂರು ಕೊಟ್ಟಿದ್ದೇವೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.

    ವೃದ್ಧೆಯ ಕುಟುಂಬದವರು ದೂರು ನೀಡಿದ ಬಳಿಕ ನಾವು ಆರೋಪಿ ಯುವಕನ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಿದ್ದೇನೆ. ಸದ್ಯಕ್ಕೆ ವೃದ್ಧೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ದಾಖಲಿಸಲಾಗಿದೆ. ಆರೋಪಿಯನ್ನು ವಿಚಾರಣೆ ಮಾಡುತ್ತಿದ್ದೇವೆ. ವೈದ್ಯಕೀಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ವಯಸ್ಸಾದ ತಾಯಿ ಗಲೀಜು ಮಾಡ್ತಾಳೆಂದು ರಾತ್ರಿ ಹೊತ್ತು ಚೈನ್ ಕಟ್ಟಿ ಹೊರದಬ್ಬಿದ್ದ ಮಗ-ಸೊಸೆ

    ವಯಸ್ಸಾದ ತಾಯಿ ಗಲೀಜು ಮಾಡ್ತಾಳೆಂದು ರಾತ್ರಿ ಹೊತ್ತು ಚೈನ್ ಕಟ್ಟಿ ಹೊರದಬ್ಬಿದ್ದ ಮಗ-ಸೊಸೆ

    ಹಾಸನ: ವಯಸ್ಸಾದ ತಾಯಿ ಮನೆಯಲ್ಲಿ ಗಲೀಜು ಮಾಡುತ್ತಾಳೆ, ರಾತ್ರಿ ಹೊತ್ತು ಮನೆ ಮಂದಿಯ ನೆಮ್ಮದಿಗೆ ಭಂಗ ತರುತ್ತಾಳೆ ಅನ್ನೋ ಒಂದೇ ಕಾರಣಕ್ಕೆ ಹೆತ್ತ ಮಗ ಹಾಗೂ ಸೊಸೆ ಸೇರಿ ವಯೋವೃದ್ಧೆಯನ್ನು ಮನೆಯಿಂದ ಹೊರಗೆ ಚೈನ್ ನಲ್ಲಿ ಕಟ್ಟಿ ಹಾಕುತ್ತಿದ್ದ ಅಮಾನವೀಯ ಘಟನೆ ಹಾಸನ ಜಿಲ್ಲೆ ಬೇಲೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    ಶೇಷಮ್ಮ(78) ಜನ್ಮ ಕೊಟ್ಟ ಮಗನಿಂದ ಹೊರಬಿದ್ದಿದ್ದ ನತದೃಷ್ಟ ತಾಯಿ. ಬೇಲೂರಿನ ತಹಸೀಲ್ದಾರ್ ಕಚೇರಿ ಹಿಂಭಾಗದಲ್ಲಿರುವ ಮನೆಯ ಹೊರಗಿನ ಆರ್‍ಸಿಸಿ ಮೆಟ್ಟಿಲಿಗೆ ಸರಪಳಿ ಕಟ್ಟಿ ನಿತ್ಯವೂ ಶೇಷಮ್ಮನನ್ನು ರಾತ್ರಿ ವೇಳೆ ಮನೆಯಿಂದ ಹೊರ ಹಾಕುತ್ತಿದ್ದರು.

    ಮಗ, ಸೊಸೆ ಹಾಗೂ ಮೊಮ್ಮಕ್ಕಳ ನಿರ್ದಯಿ ನಡೆಯಿಂದಾಗಿ ಅಬಲೆ ಶೇಷಮ್ಮ, ಎಷ್ಟೋ ರಾತ್ರಿಗಳನ್ನು ಕೊರೆವ ಚಳಿಯಲ್ಲೇ ನಡುಗುತ್ತಾ ಕಳೆದಿದ್ದಾಳೆ. ಹಸಿವಾಗಲೀ, ನೀರಡಿಕೆಯಾಗಲೀ ಯಾರೂ ಕೇಳೋರು ಇರಲಿಲ್ಲ. ಈ ಕರುಣಾಜನಕ ದೃಶ್ಯವನ್ನು ನೆರೆ ಹೊರೆಯವರು ಕಂಡರೂ, ಮಗ-ಸೊಸೆ ಜಗಳಕ್ಕೆ ಬರುತ್ತಾರೆ ಅನ್ನೋ ಕಾರಣಕ್ಕೆ ಕಂಡೂ ಕಾಣದಂತೆ ಸುಮ್ಮನಿದ್ದರು. ಆದರೂ ಅಸಹಾಯಕ ಶೇಷಮ್ಮಳ ಅಳಲನ್ನು ಸಹಿಸಲಾಗದ ಕೆಲವರು, ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.

    ಕೂಡಲೇ ಸ್ಪಂದಿಸಿದ ಬೇಲೂರು ಪಿಎಸ್‍ಐ ಜಗದೀಶ್ ಹಾಗೂ ಸಿಬ್ಬಂದಿ ಶೇಷಮ್ಮಳ ಮಗ ಕುಮಾರ್ ಹಾಗೂ ಸೊಸೆಯನ್ನು ಕರೆಸಿ ಪ್ರಶ್ನಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಶೇಷಮ್ಮಳನ್ನು ಕಟ್ಟಿಹಾಕಿದ್ದ ಸರಪಳಿ ಅಲ್ಲೇ ಇದ್ದಿದ್ದು ಪತ್ತೆಯಾಗಿದೆ. ಈ ರೀತಿಯ ವರ್ತನೆ ಮರುಕಳಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಪೊಲೀಸರ ಸ್ಪಂದನೆಯಿಂದ ಶೇಷಮ್ಮ ಮರಳಿ ಮನೆ ಸೇರಿದ್ದಾಳೆ. ಆದರೆ ಮುಂದೇನಾಗುವುದೋ ಎಂಬ ಆತಂಕ ಅಬಲ ಅಜ್ಜಿಯನ್ನು ಕಾಡುತ್ತಲೇ ಇದೆ. ಇಳಿ ವಯಸ್ಸಿನಲ್ಲಿ ಮಕ್ಕಳು ನಮ್ಮನ್ನು ಸಾಕುತ್ತಾರೆ ಎಂದು ಎಷ್ಟೋ ತಂದೆ-ತಾಯಿ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಬೇಲೂರಿನ ಶೇಷಮ್ಮಳ ಈ ಸ್ಥಿತಿ ಕಂಡವರು ಇಂಥ ಮಕ್ಕಳು ಬೇಕಾ ಅಂತ ಹಿಡಿಶಾಪ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕೋಣೆಯನ್ನು ಕ್ಲೀನ್ ಮಾಡು ಎಂದಿದ್ದಕ್ಕೆ ಅಜ್ಜಿಯನ್ನೇ ಶೂಟ್ ಮಾಡಿ ಕೊಂದೇ ಬಿಟ್ಟ ಬಾಲಕ!

    ಕೋಣೆಯನ್ನು ಕ್ಲೀನ್ ಮಾಡು ಎಂದಿದ್ದಕ್ಕೆ ಅಜ್ಜಿಯನ್ನೇ ಶೂಟ್ ಮಾಡಿ ಕೊಂದೇ ಬಿಟ್ಟ ಬಾಲಕ!

    ಅಮೆರಿಕ: ಕೋಣೆಯನ್ನು ಸ್ವಚ್ಛ ಮಾಡು ಎಂದು ಹೇಳಿದ್ದಕ್ಕೆ 11 ವರ್ಷದ ಬಾಲಕನೊಬ್ಬ ತನ್ನ ಅಜ್ಜಿಗೆ ಗುಂಡಿಕ್ಕಿ ಬಳಿಕ ತಾನು ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.

    ಈ ಘಟನೆ ಅಮೆರಿಕಾದ ಅರಿಝೋನಾದ ಲೀಚ್‍ಫಿಲ್ಡ್ ಪಾರ್ಕ್ ಎಂಬಲ್ಲಿ ಶನಿವಾರ ನಡೆದಿದೆ. ವೈವೋನ್ನೇ ವೂಡಾರ್ಡ್(65) ಎಂಬವರು ತನ್ನ ಮೊಮ್ಮಗನ ಗುಂಡೇಟಿಗೆ ಬಲಿಯಾಗಿದ್ದಾರೆ.

    ಈ ಘಟನೆಯನ್ನು ಕುರಿತು ಪೊಲೀಸರು ಹತ್ಯೆಗೆ ಒಳಗಾದ ಅಜ್ಜಿಯ ಪತಿಯನ್ನು ವಿಚಾರಿಸಿದಾಗ ಈ ಅವಘಡ ನಡೆಯುತ್ತಿದ್ದ ವೇಳೆ ಪತ್ನಿ ಮತ್ತು ಮೊಮ್ಮಗ ಮನೆಯಲ್ಲೇ ಇದ್ದರು. ನನ್ನ ಪತ್ನಿ ವೂಡಾರ್ಡ್ ಮೊಮ್ಮಗನ ಬಳಿ ತನ್ನ ಕೋಣೆಯನ್ನು ಸ್ವಚ್ಛಗೊಳಿಸಲು ಕೇಳಿಕೊಂಡಿದ್ದಾಳೆ. ಆದರೆ ಮೊಮ್ಮಗನಿಗೆ ಕೋಣೆ ಸ್ವಚ್ಛ ಮಾಡುವ ವಿಚಾರದಲ್ಲಿ ಹಠ ಮಾಡುತ್ತಿದ್ದ ಎಂದು ಹೇಳಿದ್ದಾರೆ.

    ಈ ಗಲಾಟೆ ಆದ ಬಳಿಕ ನಾವಿಬ್ಬರು ಟಿವಿ ನೋಡುತ್ತಿದ್ದೇವು. ಈ ಸಮಯದಲ್ಲಿ ಮನೆಯಲ್ಲಿದ್ದ ಗನ್ ಹಿಡಿದು ಅಜ್ಜಿಯನ್ನು ಹಿಂಬದಿಯಿಂದ ಬಂದು ಶೂಟ್ ಮಾಡಿದ್ದಾನೆ. ಬಳಿಕ ಅದೇ ಗನ್‍ನಿಂದ ತನ್ನನ್ನು ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಜ್ಜ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗಿನಲ್ಲೊಂದು ಕರುಣಾಜನಕ ಕಥೆ – ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಬಿಟ್ಟು ಬಂದ ವೃದ್ಧೆಯ ರಕ್ಷಣೆ

    ಕೊಡಗಿನಲ್ಲೊಂದು ಕರುಣಾಜನಕ ಕಥೆ – ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಬಿಟ್ಟು ಬಂದ ವೃದ್ಧೆಯ ರಕ್ಷಣೆ

    ಮಡಿಕೇರಿ: ಮಹಾಮಳೆಗೆ ಮೃತಪಟ್ಟಿದ್ದಾರೆ ಎಂದು ಭಾವಿಸಿ ಕುಟುಂಬಸ್ಥರು ಬಿಟ್ಟು ಬಂದ ವೃದ್ಧೆಯೊಬ್ಬರನ್ನು ಸಿವಿಲ್ ಡಿಫೆನ್ಸ್ ತಂಡ ರಕ್ಷಣೆ ಮಾಡಿರುವ ಘಟನೆ ಹೆಬ್ಬೆಟ್ಟಗಿರಿಯಲ್ಲಿ ನಡೆದಿದೆ.

    ಕುಂಭದ್ರೋಣ ಮಳೆಗೆ ಗುಡ್ಡ ಕುಸಿತ ಸಂಭವಿಸಿ ನಿರಾಶ್ರಿತರಾದ ಕುಟುಂಬ ಅನಿವಾರ್ಯವಾಗಿ ಮನೆ ತೊರೆಯುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವೇಳೆ ಮನೆಯಲ್ಲಿ 85 ವರ್ಷದ ಅಜ್ಜಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ ಕುಟುಂಬಸ್ಥರು ಅವರನ್ನು ಹೊತ್ತು ತರಲಾಗದೇ ಮನೆಯಲ್ಲೇ ಬಿಟ್ಟು ಬಂದಿದ್ದರು.

    ಹೆಬ್ಬೆಟ್ಟಗಿರಿಯ ಪಕ್ಕದ ಎಲ್ಲಾ ಗ್ರಾಮಗಳಲ್ಲೂ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಈ ವೇಳೆ ಮೊಮ್ಮಗ ಪವನ್ ಅಜ್ಜಿಯನ್ನ ಬಿಟ್ಟು ಬಂದಿರುವ ವಿಚಾರವನ್ನು ಎಸ್ಪಿ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಎಚ್ಚತ್ತ ಎಸ್ಪಿ ರಕ್ಷಣಾ ಕಾರ್ಯ ನಡೆಸುತ್ತಿದ್ದ ಸಿವಿಲ್ ಡಿಫೆನ್ಸ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ತಿಳಿದು ಮನೆಗೆ ತೆರಳಿದಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದಿದ್ದ ಅಜ್ಜಿ ಮಂಚದ ಮೇಲೆ ಮಲಗಿದ್ದರು. ಜೀವಂತವಾಗಿರುವುದನ್ನು ಕಂಡ ರಕ್ಷಣಾ ಪಡೆ ಯೋಧರು ಅಜ್ಜಿಯನ್ನು 10 ಕಿಮೀ ದೂರ ಹೊತ್ತು ತಂದು ರಕ್ಷಿಸಿದ್ದಾರೆ.

    ಇತ್ತ ಅಜ್ಜಿಯ ಜೀವ ಉಳಿಸಲು ಪಣತೊಟ್ಟ 12 ಮಂದಿ ಸ್ವಯಂ ಸೇವರ ರಕ್ಷಣಾ ಕಾರ್ಯಾಚರಣೆ ತಂಡ ಸವಾಲು ಸ್ವೀಕರಿಸಿ ಯಶ್ವಸಿಯಾಗಿದ್ದಾರೆ. ಮಡಿಕೇರಿ ಜನರ ರಕ್ಷಣೆಗಾಗಿ ಬೆಂಗಳೂರಿನಿಂದ ತೆರಳಿದ್ದ ಡಾ. ಪಿಆರ್ ಎಸ್ ಚೇತನ್ ಅವರ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿ ಅಜ್ಜಿ ಜೀವ ರಕ್ಷಣೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅನ್ಯ ಜಾತಿಯ ಯುವಕನ ಜೊತೆ ಬಾಲಕಿ ಓಡಿ ಹೋಗಿದ್ದಕ್ಕೆ ಮರ್ಯಾದಾ ಹತ್ಯೆ!

    ಅನ್ಯ ಜಾತಿಯ ಯುವಕನ ಜೊತೆ ಬಾಲಕಿ ಓಡಿ ಹೋಗಿದ್ದಕ್ಕೆ ಮರ್ಯಾದಾ ಹತ್ಯೆ!

    ದಾವಣಗೆರೆ: ಅನ್ಯ ಜಾತಿಯ ಯುವಕನ ಜೊತೆ ಬಾಲಕಿ ಓಡಿ ಹೋಗಿದ್ದಕ್ಕೆ ಆಕೆಯ ಅಜ್ಜಿ ಹಾಗೂ ತಂದೆ ಮರ್ಯಾದಾ ಹತ್ಯೆ ನಡೆಸಿದ್ದಾರೆ ಎನ್ನುವ ಆರೋಪ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದಿಂದ ಕೇಳಿ ಬಂದಿದೆ.

    ಗ್ರಾಮದ ಪರಮೇಶ್ವರಪ್ಪ, ಪುಪ್ಪಾ ದಂಪತಿಗಳ ಹಿರಿಯ ಮಗಳು (ಅಪ್ರಾಪ್ತ ಬಾಲಕಿ) ಕಳೆದ ಕೆಲ ತಿಂಗಳ ಹಿಂದೆ ಅದೇ ಗ್ರಾಮದ ಅನ್ಯ ಜಾತಿಯ ಯುವಕ ಪ್ರವೀಣ್ ಎಂಬಾತನನ್ನು ಪ್ರೀತಿ ಮಾಡಿ ಆತನೊಂದಿಗೆ ಓಡಿ ಹೋಗಿದ್ದಳು.

    ಏನಿದು ಪ್ರಕರಣ?
    ಬಾಲಕಿ ಕಳೆದ ಕೆಲ ತಿಂಗಳ ಹಿಂದೆ ಅದೇ ಗ್ರಾಮದ ಅನ್ಯ ಜಾತಿಯ ಯುವಕ ಪ್ರವೀಣ್ ಎಂಬಾತನನ್ನು ಪ್ರೀತಿ ಮಾಡಿ ಆತನೊಂದಿಗೆ ಓಡಿ ಹೋಗಿದ್ದಳು. ಇದಾದ ಬಳಿಕ ಬಾಲಕಿಯ ಪೋಷಕರು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಕರೆದುಕೊಂಡು ಬಂದು ಪೋಸ್ಕೋ ಕಾಯ್ದೆಯಡಿ ಪ್ರಿಯಕರ ಪ್ರವೀಣ್ ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಇದಾದ ಬಳಿಕ ಬಾಲಕಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ತಂದೆ ಪರಮೇಶ್ವರಪ್ಪ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದು, ಗುಣ ಮುಖಳಾಗಿದ್ದಳು.

    ಕೊಲೆ ಮಾಡಿದ್ದು ಹೇಗೆ?
    ಕಳೆದ ಜೂನ್ 26 ರಂದು ಬಾಲಕಿಯ ತಂದೆ ಪರಮೇಶ್ವರಪ್ಪ, ತಾಯಿ ಪುಪ್ಪಾ ಉಡುಪಿಗೆ ಹೋದಾಗ ಮತ್ತೆ ಬಾಲಕಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆಗ ಯುವತಿಯ ಅಜ್ಜಿ ದ್ರಾಕ್ಷಾಯಣಮ್ಮ ಮಗ ಪರಮೇಶ್ವರಪ್ಪನಿಗೆ ಫೋನ್ ಮಾಡಿ ಮಗಳು ವಿಷ ಕುಡಿದಿದ್ದಾಳೆ ಎಂದು ಹೇಳಿದ್ದಾಳೆ. ಆಗ ಪರಮೇಶ್ವರಪ್ಪ ಅವಳು ಬದುಕಿದ್ದರೇ ನಮ್ಮ ಮರ್ಯಾದೆ ಕಳೆಯುತ್ತಾಳೆ. ಪದೇ ಪದೇ ಇದೇ ರೀತಿ ಮಾಡುತ್ತಾಳೆ. ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡು ಎಂದು ಹೇಳಿದ್ದಾನೆ. ಮಗ ಹೇಳಿದಂತೆ ಅಜ್ಜಿ ಮೊಮ್ಮಗಳನ್ನು ಮನೆಯಲ್ಲಿದ್ದ ದಾರದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ ಅಜ್ಜಿ ಮೊಮ್ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದರೆ ಇತ್ತ ತಂದೆ ತನಗೆ ಏನೂ ಗೊತ್ತಿಲ್ಲ ಎಂಬಂತೆ ಮಗಳು ಸತ್ತಿದ್ದಕ್ಕೆ ಕಣ್ಣೀರು ಸುರಿಸಿದ್ದ.

    ಸತ್ಯ ಬೆಳಕಿಗೆ ಬಂದಿದ್ದು ಹೇಗೆ?
    ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನಗೊಂಡ ಬಾಲಕಿಯ ತಾಯಿ ಪುಷ್ಪಾ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಳು. ದೂರು ದಾಖಲಿಸಿಕೊಂಡ ಪೊಲೀಸರು ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ಎಫ್‍ಎಸ್‍ಎಲ್‍ಗೆ ಕಳುಹಿಸಿಕೊಟ್ಟಿದ್ದಾರೆ. ವರದಿಯಲ್ಲಿ ಬಾಲಕಿಯನ್ನು ಹೊಡೆದು ಕೊಲೆ ಮಾಡಲಾಗಿದೆ ಎಂದು ವರದಿ ಬಂದಿದೆ. ಆಗ ಪೊಲೀಸರು ಅಜ್ಜಿ ದ್ರಾಕ್ಷಾಯಣಮ್ಮ, ತಂದೆ ಪರಮೇಶ್ವರಪ್ಪನನ್ನು ಕರೆಯಿಸಿದ್ದಾರೆ. ಆಗ ಅಜ್ಜಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಇದಕ್ಕೆ ಪ್ರೇರಣೆ ನೀಡಿದ ಆರೋಪದ ಮೇಲೆ ತಂದೆ ಪರಮೇಶ್ವರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.