Tag: grandmother

  • ಕಾಲ್ತುಳಿತಕ್ಕೆ ಮನೋಜ್ ಬಲಿ – ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೊನೆಯುಸಿರು

    ಕಾಲ್ತುಳಿತಕ್ಕೆ ಮನೋಜ್ ಬಲಿ – ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೊನೆಯುಸಿರು

    ತುಮಕೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ (Chinnaswamy Stampede) ಉಂಟಾಗಿ ತುಮಕೂರಿನ (Tumakuru) ಮನೋಜ್ ಸಾವನ್ನಪ್ಪಿದ್ದು, ಇದೀಗ ಮೊಮ್ಮಗನ ಸಾವಿನ ಶೋಕದಲ್ಲೇ ಅಜ್ಜಿ ಕೊನೆಯುಸಿರೆಳೆದಿರುವ ಘಟನೆ ಕುಣಿಗಲ್‌ನ (Kunigal) ನಾಗಸಂದ್ರದಲ್ಲಿ ನಡೆದಿದೆ.

    ಮನೋಜ್ ಅಜ್ಜಿ ದೇವೀರಮ್ಮ (70) ಮೃತಪಟ್ಟ ವೃದ್ಧೆ. ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ 11 ಮಂದಿ ಆರ್‌ಸಿಬಿ ಅಭಿಮಾನಿಗಳ ಪೈಕಿ ತುಮಕೂರಿನ ಮನೋಜ್ ಕೂಡ ಒಬ್ಬ. ಬೆಂಗಳೂರಿನ ಹೆಬ್ಬಾಳ ಬಳಿಯ ಕೆಂಪಾಪುರದ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದ ಮನೋಜ್ ಯಲಹಂಕದಲ್ಲಿ ತಂದೆ, ತಾಯಿ ಹಾಗೂ ತಂಗಿ ಜೊತೆ ವಾಸವಿದ್ದ. ಆರ್‌ಸಿಬಿ ವಿಜಯೋತ್ಸವ ದಿನ ಸ್ನೇಹಿತರೊಂದಿಗೆ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿದ್ದ ಮನೋಜ್ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದ. ಇದೀಗ ಮೊಮ್ಮಗನ ಅಗಲಿಕೆ ನೋವಲ್ಲೇ ಅಜ್ಜಿ ಕೂಡ ನಿಧನರಾಗಿದ್ದಾರೆ. ಇದನ್ನೂ ಓದಿ: ತುಮಕೂರನ್ನೂ ಗ್ರೇಟರ್ ಬೆಂಗಳೂರಿಗೆ ಸೇರಿಸಿ – ಪರಮೇಶ್ವರ್

    ಇನ್ನು ಮೃತ ಮನೋಜ್ ಕುಟುಂಬಕ್ಕೆ ಡಿಸಿ ಶುಭಕಲ್ಯಾಣ್ ಭಾನುವಾರ 25 ಲಕ್ಷ ಪರಿಹಾರದ ಚೆಕ್ ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮನೋಜ್ ತಂದೆ ದೇವರಾಜ್, ಚೆಕ್ ಕೊಟ್ಟಿದ್ದಾರೆ. ಚೆಕ್ ಕೊಟ್ಟರೆ ಮಗಾ ಬರ್ತಾನಾ? ಇದ್ದೋನು ಒಬ್ಬನೇ ಮಗ. 25 ಲಕ್ಷ ಚೆಕ್ ಕೊಟ್ಟಿದ್ದಾರೆ. ಈ ಹಣ ನನ್ನ ಉಪಯೋಗಕ್ಕೆ ನಾನೇನು ಮಾಡಿಕೊಳ್ಳಲ್ಲ. ನನ್ನ ಮಗಳು, ಅವರ ಅಮ್ಮನ ಅಕೌಂಟ್‌ಗೆ ಹಾಕುತ್ತೇನೆ. ಅವರ ಜೀವನಾಂಶಕ್ಕೆ ಹಣ ಇಡುತ್ತೇನೆ ಎಂದರು. ಇದನ್ನೂ ಓದಿ: ಮುಂಬೈ| ರೈಲಿನಿಂದ ಹಳಿಗೆ ಬಿದ್ದು ಐವರು ಸಾವು ಶಂಕೆ

    ಮುಂದುವರಿದು ಮಾತನಾಡಿ, ಬಂದ ಚೆಕ್ ಹಣದ ಒಂದು ರೂಪಾಯಿ ಸಹ ಖರ್ಚು ಮಾಡಿಕೊಳ್ಳಲ್ಲ. ದುಡ್ಡು ಕೊಟ್ಟರೆ ಯಾರೂ ಬರಲ್ಲ. ಮೊದಲೇ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಾಗಿತ್ತು. ನಮ್ಮಂಥವರು ಎಷ್ಟೋ ಜನ ಇದ್ದಾರೆ. ಒಬ್ಬೊಬ್ಬರ ಮಕ್ಕಳು ಹೋದರೆ ಅವರ ಪರಿಸ್ಥಿತಿ ಏನು? ಇದ್ದವನು ಒಬ್ಬನೇ ಮಗ. ಇನ್ನೊಂದೆರೆಡು ವರ್ಷಕ್ಕೆ ಓದು ಮುಗಿಯುತಿತ್ತು. ಕೆಲಸಕ್ಕೂ ಸಹ ಸೇರುತ್ತಿದ್ದ. ನಮಗೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತಿದ್ದ. ವಿದೇಶಕ್ಕೆ ಹೋಗುವ ಆಸೆ ಹೊಂದಿದ್ದ. ಅವಕಾಶ ಸಿಕ್ಕರೆ ಹೋಗು ಎಂದು ನಾನು ಹೇಳಿದ್ದೆ. ಅವನು ದುಡಿದು ಹಣ ಕೊಡದಿದ್ದರೇ ಬೇಡ, ಜೊತೆಯಲ್ಲಿ ಇದ್ದಿದ್ದರೇ ಸಾಕಾಗುತಿತ್ತು. ಸರ್ಕಾರ ಕೊಟ್ಟ ಹಣ ನಮ್ಮ ನೋವನ್ನು ಮರೆಸಲ್ಲ ಎಂದು ಬೇಸರಿಸಿದರು. ಇದನ್ನೂ ಓದಿ: ಮೋದಿ 3.0 ಸರ್ಕಾರಕ್ಕೆ ಒಂದು ವರ್ಷ

  • ಶಸ್ತ್ರಚಿಕಿತ್ಸೆ ಬಳಿಕ ಧ್ವಜಾರೋಹಣ ನೆರವೇರಿಸಿದ ಶತಾಯುಷಿ ಅಜ್ಜಿ!

    ಶಸ್ತ್ರಚಿಕಿತ್ಸೆ ಬಳಿಕ ಧ್ವಜಾರೋಹಣ ನೆರವೇರಿಸಿದ ಶತಾಯುಷಿ ಅಜ್ಜಿ!

    ಬಾಗಲಕೋಟೆ: ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಅಜ್ಜಿಯೊಬ್ಬರು (Grandmother) ಗುಣಮುಖರಾಗಿ ಆಸತ್ರೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಘಟನೆ ಬಾಗಲಕೋಟೆಯ (Bagalkote) ಖಾಸಗಿ ಆಸತ್ರೆಯೊಂದರಲ್ಲಿ (Hospital) ನಡೆದಿದೆ.

    ಕಾಶಮ್ಮ ಹಿರೇಮಠ (103 ವರ್ಷ) ಎಂಬುವವರು ಧ್ವಜಾರೋಹಣ ನೆರವೇರಿಸಿದ ಶತಾಯುಷಿ. ಅಜ್ಜಿ ಆತ್ಮವಿಶ್ವಾಸದಿಂದ ಶಸ್ತ್ರಚಿಕಿತ್ಸೆಗೆ ಸಹಕರಿಸಿದ್ದು ವೈದ್ಯ ಲೋಕಕ್ಕೆ ಅಚ್ಚರಿಯಾಗಿದೆ. ಹೀಗಾಗಿ ಚೇತರಿಸಿಕೊಂಡ ಅಜ್ಜಿಯ ನೇತೃತ್ವದಲ್ಲೇ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಧ್ವಜಾರೋಹಣ ನಡೆಸಿದ್ದಾರೆ. ಇದನ್ನೂ ಓದಿ: 77th Independence Day: ಸ್ವಾತಂತ್ರ್ಯ ದಿನ ಅರ್ಥಪೂರ್ಣವಾಗಿ ಆಚರಿಸಿದ ಸ್ಟಾರ್‌ ಕ್ರಿಕೆಟಿಗರು

    ತಳಗಿಹಾಳ ಗ್ರಾಮದ ಕಾಶಮ್ಮ ಅವರು ಕೆಲವು ದಿನಗಳ ಹಿಂದೆ ಆಯತಪ್ಪಿ ಬಿದ್ದು ಎಡಗಾಲು ಮುರಿದು ಹೋಗಿತ್ತು. ಹೀಗಾಗಿ ಅಜ್ಜಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು, ಅಜ್ಜಿ ಶಸ್ತ್ರಚಿಕಿತ್ಸೆಗೆ ಸ್ಪಂದಿಸುತ್ತಾರಾ ಎಂಬ ಅನುಮಾನದಿಂದಲೇ ಚಿಕಿತ್ಸೆ ನೀಡಿದ್ದರು. ಈಗ ವಾಕರ್ ಸಹಾಯದಿಂದ ಅಜ್ಜಿ ನಡೆದಾಡುತ್ತಿದ್ದಾರೆ. ಅಜ್ಜಿಯ ಆತ್ಮವಿಶ್ವಾಸಕ್ಕೆ ಆಸ್ಪತ್ರೆಯ ಸಿಬ್ಬಂದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ಮೋದಿ ಭಾಷಣದ ವೇಳೆ ಖಾಲಿ ಕುರ್ಚಿಯಲ್ಲಿ ಸಂದೇಶ – ಏನಿತ್ತು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರ ದಾರುಣ ಸಾವು

    ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಮೂವರ ದಾರುಣ ಸಾವು

    ಬೆಳಗಾವಿ: ವಿದ್ಯುತ್ ಸ್ಪರ್ಶಿಸಿ (Electrocuted) ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಶಾಹುನಗರದಲ್ಲಿ (Shahunagar) ಶನಿವಾರ ಮುಂಜಾನೆ ನಡೆದಿದೆ.

    ಮೃತರು ಮೂತಃ ರಾಮದುರ್ಗ (Ramadurga) ತಾಲೂಕಿನ ಅರಬೆಂಚಿ ತಾಂಡಾದವರಾಗಿದ್ದು, ಅಜ್ಜ ಈರಪ್ಪಾ ಗಂಗಪ್ಪಾ ಲಮಾಣಿ (50), ಅಜ್ಜಿ ಶಾಂತವ್ವ ಈರಪ್ಪಾ ಲಮಾಣಿ (45) ಹಾಗೂ ಮೊಮ್ಮಗಳು ಅನ್ನಪೂರ್ಣ ಹುನ್ನಪ್ಪ ಲಮಾಣಿ (8) ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮನೆಯಲ್ಲಿ ನೀರು ಕಾಯಿಸಲು ಕಾಯಿಲ್ ಹಾಕಿದ ವೇಳೆ ಮೊಮ್ಮಗಳಿಗೆ (Grand Daughter) ವಿದ್ಯುತ್ ತಗುಲಿದ್ದು, ಮೊಮ್ಮಗಳನ್ನು ಕಾಪಾಡುವ ಸಲುವಾಗಿ ಅಜ್ಜ (Grandfather), ಅಜ್ಜಿ (Grandmother) ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶವಾಗಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ವಿದ್ಯಾರ್ಥಿನಿಯರಿಗೆ ಬೆದರಿಕೆ – ಇಬ್ಬರು ವಿದ್ಯಾರ್ಥಿಗಳು ಅರೆಸ್ಟ್

    ಬೆಳಗಾವಿಯ ಶಾಹುನಗರ 7ನೇ ಕ್ರಾಸ್‌ನ ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಮತ್ತು ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮಕ್ಕಳಿಗೆ ಜಾಮೂನಿನಲ್ಲಿ ವಿಷ ಹಾಕಿದ ತಂದೆ – ಬಳಿಕ ತಾನೂ ಆತ್ಮಹತ್ಯೆಗೆ ಯತ್ನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಡಿಗೆ ತಾಯ್ತನ ಮೂಲಕ ಮಗ-ಸೊಸೆಯ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

    ಬಾಡಿಗೆ ತಾಯ್ತನ ಮೂಲಕ ಮಗ-ಸೊಸೆಯ ಮಗುವಿಗೆ ಜನ್ಮ ಕೊಟ್ಟ ಅಜ್ಜಿ

    ವಾಷಿಂಗ್ಟನ್: ದಿನ ಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ಬಾಡಿಗೆ ತಾಯ್ತನದ ಹಲವಾರು ಸುದ್ದಿಗಳನ್ನು ಕೇಳುತ್ತಿರುತ್ತೀರಾ. ಆದರೆ ಇಲ್ಲೊಬ್ಬ ಮಹಿಳೆ ಬಾಡಿಗೆ ತಾಯ್ತನದ (Surrogate) ಮೂಲಕ ತನ್ನ ಮಗ ಮತ್ತು ಸೊಸೆಯ ಮಗುವಿಗೆ ಜನ್ಮ ನೀಡಿದ್ದಾಳೆ.

    ಗರ್ಭಕೋಶ ತೆಗೆದುಹಾಕಿದ್ದರಿಂದ ತನ್ನ ಪತ್ನಿ ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂದು ಪತಿ ಆತಂಕಗೊಂಡಿದ್ದರು. ಕೊನೆಗೆ ಯಾವುದೇ ಆಯ್ಕೆಗಳಿಲ್ಲದೇ ಇರುವಾಗ ಈ ಹೆಜ್ಜೆಯನ್ನು ಇಡಬೇಕಾಯಿತು. ಹೌದು, 56 ವರ್ಷದ ತಾಯಿ ನ್ಯಾನ್ಸಿ ಹಾಕ್ ಅವರಿಗೆ ಮಗ ಜೆಫ್ ಹಾಕ್ ಮತ್ತು ಆತನ ಪತ್ನಿ ಕ್ಯಾಂಬ್ರಿಯಾ ಬಾಡಿಗೆ ತಾಯಿಯಾಗುತ್ತೀರಾ ಎಂದು ಕೇಳಿದಾಗ, ಮೊದಲಿಗೆ ಇದಕ್ಕೆ ಒಪ್ಪಿಕೊಳ್ಳಲಿಲ್ಲ. ಆದರೆ ಇದು ಕುಟುಂಬಕ್ಕಾಗಿ ಮಾಡುತ್ತಿರುವ ಕರ್ತವ್ಯ ಎಂದು ಭಾವಿಸಿ ಇದೀಗ ನ್ಯಾನ್ಸಿ ಹಾಕ್ ಮಗ ಮತ್ತು ಸೊಸೆಯ ಐದನೇ ಮಗುವಿಗೆ ಜನ್ಮ ನೀಡಿದ್ದಾರೆ.

     

    View this post on Instagram

     

    A post shared by Cambria Hauck (@cambriairene)

    ವೆಬ್ ಡೆವಲಪರ್ ಆಗಿರುವ ಜೆಫ್ ಹಾಕ್, ಇಡೀ ಅನುಭವವನ್ನು “ಒಂದು ಸುಂದರ ಕ್ಷಣ” ಎಂದು ಬಣ್ಣಿಸಿದ್ದು, ತಮ್ಮ ತಾಯಿ ಮಗುವಿಗೆ ಜನ್ಮ ನೀಡುವುದನ್ನು ಎಷ್ಟು ಜನ ನೋಡಲು ಸಾಧ್ಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಂದೂ ಭಾವನೆಗೆ ಧಕ್ಕೆ: ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ

     

    View this post on Instagram

     

    A post shared by Cambria Hauck (@cambriairene)

    ಈ ಕುರಿತಂತೆ ಮಾತನಾಡಿದ ನ್ಯಾನ್ಸಿ ಹಾಕ್, ಒಂಬತ್ತು ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಲಿದ್ದು, ಇದು ಕುಟುಂಬದವರಿಗಾಗಿ ಎಂದಿದ್ದಾರೆ. ಜೊತೆಗೆ ಎಂದಿಗೂ ಮರೆಯಲಾಗದ ಮತ್ತು ಸ್ಮರಣೀಯ ಅನುಭವ. ಮಗುವಿಗೆ ಜನ್ಮ ನೀಡುವಾಗ ಹೊಸ ಅನುಭವವಾಯಿತು. ಆದರೆ ಮಗುವನ್ನು ನನ್ನ ಜೊತೆ ಮನೆಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ಕೆಫೆಯಲ್ಲಿ ಬೆಂಕಿ ಅವಘಡ – 13 ಸಾವು, 250 ಮಂದಿ ಸ್ಥಳಾಂತರ

    ತನ್ನ ತಾಯಿಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಇಚ್ಛೆಯಂತೆಯೇ, ಮಗುವಿಗೆ ಹನ್ನಾ ಎಂದು ಜೆಫ್ ಹಾಕ್ ನಾಮಕರಣ ಮಾಡಿದ್ದಾರೆ. ಉತಾಹ್ ಟೆಕ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿರುವ ನ್ಯಾನ್ಸಿ ಹಾಕ್, ಟೆಸ್ಟ್‍ಗೆ ಕೂಡ ಒಳಗಾಗದೇ ತಮಗಾಗುವುದು ಹೆಣ್ಣು ಮಗುವೇ ಎಂದು ಹೇಳಿದ್ದರು ಎನ್ನಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗೋಬಿ ಮಂಚೂರಿಯಿಂದ ನಡೆದಿತ್ತು ವೃದ್ಧೆ ಶಾಂತಕುಮಾರಿ ಕೊಲೆ – 5 ವರ್ಷಗಳ ನಂತ್ರ ಆರೋಪಿಗಳು ಅರೆಸ್ಟ್

    ಗೋಬಿ ಮಂಚೂರಿಯಿಂದ ನಡೆದಿತ್ತು ವೃದ್ಧೆ ಶಾಂತಕುಮಾರಿ ಕೊಲೆ – 5 ವರ್ಷಗಳ ನಂತ್ರ ಆರೋಪಿಗಳು ಅರೆಸ್ಟ್

    ಬೆಂಗಳೂರು: ಕೆಂಗೇರಿ (Kengeri)  ವೃದ್ಧೆ ಶಾಂತಕುಮಾರಿ ಕೊಲೆ ಪ್ರಕರಣದ ಆರೋಪಿಗಳನ್ನು ಐದು ವರ್ಷಗಳ ನಂತರ ಪೊಲೀಸರು ಬಂಧಿಸಿದ್ದಾರೆ.

    ಹೌದು, ವೃದ್ದೆ ಶಾಂತಕುಮಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಗೇರಿ ಪೊಲೀಸರು ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ (Kollapura) ವೃದ್ಧೆಯ ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಬಂಧಿಸಿದ್ಧಾರೆ. ಇದನ್ನೂ ಓದಿ: ರಾಜ್ಯದಲ್ಲಿ ಓಡಾಡ್ತಿದೆಯಂತೆ ಗುಜರಿ ಅಂಬುಲೆನ್ಸ್- ಸ್ಫೋಟಕ ಸತ್ಯ ಬಯಲು ಮಾಡಿದ ಸಚಿವರು!

    2016ರ ಆಗಸ್ಟ್‌ನಲ್ಲಿ ಕೆಂಗೇರಿ ಸ್ಯಾಟಲೈಟ್‍ನಲ್ಲಿ (Satellite) ಈ ಘಟನೆ ನಡೆದಿದ್ದು, ಕೊಲೆ ಮಾಡಿ ಆರು ತಿಂಗಳು ಮನೆಯಲ್ಲೇ ಶವವನ್ನು ಆರೋಪಿಗಳು ಹೂತಿಟ್ಟಿದ್ದರು. ಶಾಂತಕುಮಾರಿ, ಮಗಳು ಶಶಿಕಲಾ, ಮೊಮ್ಮಗ ಸಂಜಯ್ ಒಟ್ಟಿಗೆ ವಾಸವಾಗಿದ್ದರು. ಒಂದು ದಿನ ಮೊಮ್ಮಗ ಸಂಜಯ್ ಅಜ್ಜಿಗೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಗೋಬಿ ಮಂಚೂರಿಯನ್ನು (Gobi Manchuri) ತಂದು ಕೊಟ್ಟಿದ್ದ. ಆದರೆ ವಿಪರೀತ ಮಡಿವಂತಿಕೆ, ಶಿಸ್ತಿನಿಂದಿರುತ್ತಿದ್ದ ಶಾಂತಮ್ಮ, ಸಂಜಯ್ ಮುಖಕ್ಕೆ ಗೋಬಿ ಮಂಚೂರಿಯನ್ನು ಎಸೆದು ಬೈದಿದ್ದರು.

    ಇದರಿಂದ ಕೋಪಗೊಂಡ ಸಂಜಯ್ ಅಜ್ಜಿ ತಲೆಗೆ ಲಟ್ಟಣಿಗೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ಕೆಮಿಕಲ್ ಹಾಕಿ ಕಬೋರ್ಡ್‍ನಲ್ಲಿ ಮುಚ್ಚಿಟ್ಟು, ಊರಿಗೆ ಹೋಗಿ ಬರುತ್ತೇವೆ ಅಂತ ಯಾರಿಗೂ ಅನುಮಾನ ಬಾರದಂತೆ ತಾಯಿ-ಮಗ ಮನೆ ಖಾಲಿ ಮಾಡಿದ್ದರು. ಆರು ತಿಂಗಳ ಬಳಿಕ ಮನೆ ಓನರ್ ರಿಪೇರಿ ಕೆಲಸ ಮಾಡುವ ವೇಳೆ ಶವದ ಅಸ್ಥಿಪಂಜರ ಪತ್ತೆಯಾಗಿತ್ತು. ನಂತರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದರು ಮತ್ತು ಸಂಜಯ್ ಸ್ನೇಹಿತ ನಂದೀಶ್ ಎಂಬಾತನನ್ನು ಬಂಧಿಸಿದ್ದರು. ಅಲ್ಲದೇ ಪೊಲೀಸರು ಎಷ್ಟೇ ಹುಡುಕಾಟ ನಡೆಸಿದರೂ ತಾಯಿ – ಮಗ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ತ್ರಿಭಾಷಾ ಸೂತ್ರಕ್ಕೆ ಸಮಾಧಿ ಕಟ್ಟಲು ಕೇಂದ್ರ ಸರ್ಕಾರ ಹೊರಟಿದೆ – ಹೆಚ್‌ಡಿಕೆ ಆಕ್ರೋಶ

    ಸದ್ಯ ಕೊಲ್ಲಾಪುರದಲ್ಲಿ ತಾಯಿ, ಮಗ ವಾಸವಾಗಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದರು. ಮೊಮ್ಮಗ ಸಂಜಯ್ ಎಂಜಿನಿಯರಿಂಗ್ ಮಾಡಿಕೊಂಡು ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿರುವ ವಿಚಾರ ಪೊಲೀಸರಿಗೆ ತಿಳಿದುಬಂದಿದೆ. ಇದೀಗ ಐದು ವರ್ಷದ ಬಳಿಕ ಕೊಲೆ ಆರೋಪಿಗಳಾದ ಶಶಿಕಲಾ ಮತ್ತು ಸಂಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಮನೆಗೆ ಹೋಗಿ 90ರ ಅಜ್ಜಿ ಭಾವುಕ

    75 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿರುವ ಮನೆಗೆ ಹೋಗಿ 90ರ ಅಜ್ಜಿ ಭಾವುಕ

    ಇಸ್ಲಾಮಾಬಾದ್: ಪುಣೆಯಲ್ಲಿ ವಾಸ ಮಾಡುತ್ತಿರುವ 90 ವರ್ಷದ ರೀನಾ ವರ್ಮಾ ತಾನು ಹುಟ್ಟಿ ಬೆಳೆದ ಪಾಕಿಸ್ತಾನದ ಮನೆಯ ದರ್ಶನ ಮಾಡಿದ್ದಾರೆ. ರಾವಲ್ಪಿಂಡಿಯ ಜನತೆ ರೀನಾ ವರ್ಮಾರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಗುಲಾಬಿ ಪಕಳೆಗಳ ಮಳೆ ಸುರಿಸಿ, ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ರೀನಾ ವರ್ಮಾ ತಾವು ಹುಟ್ಟಿ ಬೆಳೆದ ಮನೆಯನ್ನು ನೋಡಿ, ಆನಂದ ಭಾಷ್ಪ ಸುರಿಸಿದ್ದಾರೆ. ಈ ಮೂಲಕ ತಮ್ಮ 75 ವರ್ಷದ ಕನಸನ್ನು ನನಸು ಮಾಡಿಕೊಂಡಿದ್ದಾರೆ.

    ಭಾರತ-ಪಾಕ್ ವಿಭಜನೆ ಸಂದರ್ಭದಲ್ಲಿ ರೀನಾ ವರ್ಮಾ ಕುಟುಂಬ ರಾವಲ್ಪಿಂಡಿಯಿಂದ ಭಾರತಕ್ಕೆ ಬಂದು ನೆಲೆಸಿತ್ತು. 1960-70ರ ದಶಕದಲ್ಲಿ ರೀನಾ ವರ್ಮಾ ಬೆಂಗಳೂರಿನ ಕಾವೇರಿ ಎಂಪೋರಿಯಂನಲ್ಲಿ ಕೆಲಸ ಮಾಡಿದ್ದರು. 2021ರಲ್ಲಿ ರೀನಾ ಮಾತನಾಡುತ್ತಾ, ತನ್ನ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದರು. ರಾವಲ್ಪಿಂಡಿಯ ಮನೆ ಬಗ್ಗೆ ಪ್ರಸ್ತಾಪಿಸಿ, ತಾನು ಸಾಯೋದ್ರೊಳಗೆ ಒಮ್ಮೆ ಅದನ್ನು ನೋಡಬೇಕು ಎಂಬ ಬಯಕೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: 1,107 ಮಂದಿ ಡಿಸ್ಚಾರ್ಜ್ – 1,562 ಕೊರೊನಾ ಪತ್ತೆ

    ಇದನ್ನು ಗಮನಿಸಿದ ರಾವಲ್ಪಿಂಡಿಯ ಎನ್‌ಜಿಒ ರೀನಾ ಮನೆಯನ್ನು ಹುಡುಕಿ ತೋರಿಸಿತ್ತು. ಪಾಕಿಸ್ತಾನಕ್ಕೆ ಹೋಗೋಣ ಎಂದರೆ, ರೀನಾಗೆ ವೀಸಾ ಸಿಕ್ಕಿರಲಿಲ್ಲ. ಕೊನೆಗೆ ರೀನಾ ಕತೆ ಪಾಕ್ ಸರ್ಕಾರದ ಮಂತ್ರಿಯೊಬ್ಬರ ಕಿವಿಗೂ ಬಿತ್ತು. ಅಂತಿಮವಾಗಿ ಜುಲೈ 16ಕ್ಕೆ ಹೊರಟು, ಬುಧವಾರ ರಾವಲ್ಪಿಂಡಿ ತಲುಪಿ ತಮ್ಮ ಮನೆಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಭಾರತದಲ್ಲೇ ಮೊದಲು – ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ

    ರೀನಾ ವರ್ಮಾರ ಮನೆ ಹಿಂದೆ ಇದ್ದಂತೆಯೇ ಇದೆ. ಸುಣ್ಣ ಬಣ್ಣ ಹೊಡೆಸಲಾಗಿದೆ ಅಷ್ಟೇ ಎಂದು ಅವರು ನುಡಿದಿದ್ದಾರೆ. ಸುತ್ತಮುತ್ತಲ ಜನ ಪ್ರೀತಿಯಿಂದ ಅವರನ್ನು ಆದರಿಸಿಕೊಂಡಿದ್ದಾರೆ. ಸೆಲ್ಫಿ ತೆಗೆದು, ಖುಷಿ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಯಿಗೆ ಮಣ್ಣು ತುರುಕಿ 3 ವರ್ಷದ ಮಗಳನ್ನು ಜೀವಂತ ಸಮಾಧಿ ಮಾಡಿದ ಪಾಪಿ ತಾಯಿ!

    ಬಾಯಿಗೆ ಮಣ್ಣು ತುರುಕಿ 3 ವರ್ಷದ ಮಗಳನ್ನು ಜೀವಂತ ಸಮಾಧಿ ಮಾಡಿದ ಪಾಪಿ ತಾಯಿ!

    ಪಾಟ್ನಾ: ಮೂರು ವರ್ಷದ ಬಾಲಕಿಯನ್ನು ಆಕೆಯ ತಾಯಿ ಹಾಗೂ ಅಜ್ಜಿ ಜೀವಂತ ಸಮಾಧಿ ಮಾಡಿರುವ ಘಟನೆ ಛಾಪ್ರಾದಲ್ಲಿ ನಡೆದಿದೆ.

    ಗ್ರಾಮಸ್ಥರ ನೆರವಿನಿಂದ ಪ್ರಾಣಾಪಾಯದಿಂದ ಪಾರಾದ ಬಾಲಕಿ, ತನ್ನ ತಾಯಿ ಮತ್ತು ಅಜ್ಜಿ ಆಕೆಯನ್ನು ಭೂಮಿಯಲ್ಲಿ ಹೂತು ಹಾಕಿದ್ದಾಗಿ ತಿಳಿಸಿದ್ದಾಳೆ. ಕೋಪ ಮರ್ಹಾ ನದಿಯ ದಡದಲ್ಲಿರುವ ಸ್ಮಶಾನದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ಕಟ್ಟಿಗೆಗೆಂದು ಬಂದಿದ್ದ ಕೆಲ ಮಹಿಳೆಯರಿಗೆ ಮಣ್ಣು ಅಲುಗಾಡುತ್ತಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ನಂತರ ಮಣ್ಣನ್ನು ಅಗೆದು ನೋಡಿದಾಗ ಬಾಲಕಿ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಈ ಬಗ್ಗೆ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ‘ಎಣ್ಣೆ ಹಾಡಿನ’ ಹಿಂದೆ ಬಿದ್ದ ಯೋಗರಾಜ್ ಭಟ್: ಜುಲೈ 14ರಂದು ಗಾಳಿಪಟ 2 ಚಿತ್ರದ ಎಣ್ಣೆ ಹಾಡು ರಿಲೀಸ್

    ಬಾಲಕಿಯನ್ನು ಲಾಲಿ ಎಂದು ಗುರುತಿಸಲಾಗಿದ್ದು, ಕಟ್ಟಿಗೆ ತರಲೆಂದು ಮಹಿಳೆಯರು ಹೋಗಿದ್ದ ಸಮಯದಲ್ಲಿಯೇ ಬಾಲಕಿಯನ್ನು ಸಮಾಧಿ ಮಾಡಿದ್ದರಿಂದ ಆಕೆಯನ್ನು ಉಳಿಸಲು ಸಾಧ್ಯವಾಯಿತು. ನೆಲದೊಳಗಿನಿಂದ ಬಾಲಕಿಯನ್ನು ಹೊರಕ್ಕೆ ತೆಗೆದು ಕುಡಿಯಲು ನೀರು ನೀಡಲಾಯಿತು. ಈ ವೇಳೆ ಬಾಲಕಿ ಗಾಯಗೊಂಡಿದ್ದರಿಂದ ಚಿಕಿತ್ಸೆಗಾಗಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊಪಾ ಎಸ್‍ಎಚ್‍ಒ ಎಎಸ್‍ಐ ರವೀಂದರ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಕುದುರೆ ಏರಿ ಫುಡ್ ಡೆಲಿವರಿ ಮಾಡಿದ ವ್ಯಕ್ತಿ ಪತ್ತೆ- ಆದರೆ ಈತ ಸ್ವಿಗ್ಗಿ ಉದ್ಯೋಗಿಯಲ್ಲ!

    ಲಾಲಿ ತನ್ನ ತಂದೆ ರಾಜು ಶರ್ಮಾ ಮತ್ತು ತಾಯಿ ರೇಖಾ ದೇವಿ ಎಂದು ಹೇಳಿದ್ದಾಳೆ. ನನ್ನ ತಾಯಿ ಮತ್ತು ಅಜ್ಜಿ ನನ್ನನ್ನು ಸುತ್ತಾಡಿಸುವ ನೆಪದಲ್ಲಿ ಹೊರಗೆ ಕರೆದುಕೊಂಡು ಬಂದು ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಈ ವೇಳೆ ಕಿರುಚಾಡಲು ಆರಂಭಿಸಿದಾಗ ನನ್ನ ಬಾಯಿಗೆ ಮಣ್ಣು ತುರುಕಿದರು ಎಂದು ಅಳಲು ತೋಡಿಕೊಂಡಳು. ಇದೀಗ ತನಿಖೆ ಆರಂಭಿಸಿರುವ ಪೊಲೀಸರು ಬಾಲಕಿಯ ಕುಟುಂಬಸ್ಥರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣ ನೀಡಿಲ್ಲ ಅಂತ ಅಜ್ಜಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಮೊಮ್ಮಗ

    ಹಣ ನೀಡಿಲ್ಲ ಅಂತ ಅಜ್ಜಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಮೊಮ್ಮಗ

    ನವದೆಹಲಿ: ಹಣ ನೀಡಲು ನಿರಾಕರಿಸಿದಕ್ಕೆ 84 ವರ್ಷದ ವೃದ್ಧೆಯನ್ನು ಆಕೆಯ ಅಪ್ರಾಪ್ತ ಮೊಮ್ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ದೆಹಲಿಯ ಶಾಲಿಮಾರ್ ಬಾಗ್‍ನಲ್ಲಿ ನಡೆದಿದೆ.

    ಸರ್ಜಿಕಲ್ ಬ್ಲೇಡ್‍ನಿಂದ ಬಾಲಕ ತನ್ನ ಅಜ್ಜಿಯ ಕತ್ತನ್ನು ಸೀಳಿ ಕೊಂದಿದ್ದಾನೆ. ಬಳಿಕ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿ ಕೊಠಡಿಯಲ್ಲಿ ಬಿದ್ದಿದ್ದ ಶವವನ್ನು ತೋರಿಸಿದ್ದಾನೆ. ಇದೀಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    CRIME 2

    ವೃದ್ಧೆ ಶಾಲಿಮಾರ್ ಬಾಗ್‍ನಲ್ಲಿ ಒಂಟಿಯಾಗಿ ವಾಸವಿದ್ದು, ಇತ್ತೀಚೆಗೆ ಮನೆ ಮಾರಾಟ ಮಾಡಿದ್ದರು. ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕೊಲೆಯ ಹಿಂದಿನ ರಾತ್ರಿ 9:30ರ ಸುಮಾರಿಗೆ ಬಾಲಕ ಬಿಳಿ ಟವೆಲ್‍ನಿಂದ ಮುಖವನ್ನು ಮುಚ್ಚಿಕೊಂಡು ಮನೆಗೆ ಪ್ರವೇಶಿಸುವುದನ್ನು ನೋಡಿದ್ದಾರೆ. ನಂತರ ರಾತ್ರಿ 11:20ಕ್ಕೆ ಹೊರಗೆ ಬಂದ ಹುಡುಗ ಮತ್ತೆ ರಾತ್ರಿ 12:20ಕ್ಕೆ ಮನೆ ಒಳಗೆ ಹೋಗಿದ್ದಾನೆ. ಈ ದೃಶ್ಯಾವಳಿಗಳನ್ನು ಮನೆಯವರಿಗೆ ತೋರಿಸಿದಾಗ ಅವರು ಶಂಕಿತನ ಗುರುತು ಬಹಿರಂಗಪಡಿಸಿದ್ದಾರೆ.

    POLICE JEEP

    ಬಳಿಕ ಶಾಲೆಗೆ ಹೋಗಿದ್ದ ಅಪ್ರಾಪ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಕೆಲ ವ್ಯಕ್ತಿಗಳಿಗೆ ಹಣ ನೀಡಬೇಕಾಗಿತ್ತು. ಹೀಗಾಗಿ ಹಣಕ್ಕಾಗಿ ಅಜ್ಜಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದೆ. ಕೊಲೆ ಮಾಡಲು ಸಾಹಿಲ್ ಸೈನಿ (22), ಮಯಾಂಕ್ ಸೈನಿ (21), ಸನ್ನಿ ಬಾಘೆಲ್ (19) ಮತ್ತು ಸಚಿನ್ ಸೈನಿ (28) ನನಗೆ ಸಹಾಯ ಮಾಡಿದರು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಯಾರಾದ್ರೂ ಹತ್ರ ಬಂದ್ರೆ ಶೂಟ್ ಮಾಡ್ತೀನಿ – ಮನೆಯವರನ್ನ ಕೂಡಿ ಹಾಕಿಕೊಂಡು ಕಾನ್‍ಸ್ಟೇಬಲ್ ಹುಚ್ಚಾಟ

    ಕೊಲೆ ನಡೆದ ದಿನ ರಾತ್ರಿ ಮನೆಗೆ ನುಗ್ಗಿ ಅಜ್ಜಿ ಬಳಿ ಹಣ ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದ ಕಾರಣ ಬಾಲಕ ಅಜ್ಜಿಯನ್ನು ತಳ್ಳಿ ಕತ್ತು ಸೀಳಿ ಹತ್ಯೆಗೈದಿದ್ದಾನೆ. ನಂತರ ಹಣವನ್ನು ಕದ್ದು ಸಾಲ ತೀರಿಸಿದ್ದಾನೆ. ಇದೀಗ ಆರೋಪಿಯಿಂದ ಸರ್ಜಿಕಲ್ ಬ್ಲೇಡ್, ರಕ್ತದ ಕಲೆಯಾಗಿರುವ ಬಾಲಕನ ಬಟ್ಟೆ, 50 ಸಾವಿರ ರೂಪಾಯಿ ನಗದು, ಸ್ವಿಫ್ಟ್ ಡಿಸೈರ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗಂಗಾನದಿಗೆ ಸೇತುವೆಯಿಂದ ಜಿಗಿದ 75ರ ವೃದ್ಧೆ – ಸಾಹಸ ಕಂಡು ಬೆರಗಾದ ಜನ

    ಗಂಗಾನದಿಗೆ ಸೇತುವೆಯಿಂದ ಜಿಗಿದ 75ರ ವೃದ್ಧೆ – ಸಾಹಸ ಕಂಡು ಬೆರಗಾದ ಜನ

    ಡೆಹ್ರಾಡೂನ್: ಸಾಧಿಸುವ ಛಲವೊಂದಿದ್ದರೆ ಸಾಕು ಅದಕ್ಕೆ ವಯಸ್ಸಿನ ಅಂತರ ಅಡ್ಡಿ ಬರುವುದಿಲ್ಲ. ಎನ್ನುವುದಕ್ಕೆ ಅನೇಕ ನಿದರ್ಶನಗಳು ಸಾಕ್ಷಿಯಾಗಿವೆ. ಹಾಗೆಯೇ ಉತ್ತರಾಖಂಡದ ಹರಿದ್ವಾರದಲ್ಲಿ 75 ವರ್ಷದ ವೃದ್ಧೆಯೊಬ್ಬರು ಸೇತುವೆಯ ಮೇಲಿನಿಂದ ಗಂಗಾನದಿಗೆ ಧುಮುಕಿ ಈಜುವ ಮೂಲಕ ಜನರನ್ನು ನಿಬ್ಬೆರಗಾಗಿಸಿದ್ದಾರೆ.

    ಹಿಂದೂಗಳ ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರವಾದ ಹರಿದ್ವಾರದ ಹರ್ ಕಿಪುರಿ ಘಾಟ್‌ನ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಮೂಲತಃ ಹರಿಯಾಣದ ಸೋನಿಪತ್ ಬಂದೇಪುರ ಗ್ರಾಮದ 75 ವರ್ಷದ ವೃದ್ಧೆ ಈ ಸಾಹಸ ಮಾಡಿದ್ದಾರೆ. ಇದನ್ನೂ ಓದಿ: 16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ

    ಹರಿದ್ವಾರದಲ್ಲಿ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿನಿಂದ ವೃದ್ಧೆಯೊಬ್ಬರು ತುಂಬಿ ಹರಿಯುತ್ತಿರುವ ಆಳವಾದ ಗಂಗಾನದಿಗೆ ಹಾರಿ ಈಜಿದ್ದಾರೆ. ತಾನು ಸೇತುವೆಗೆ ಧುಮುಕಲು ಹೊರಟಾಗ ಯಾರೂ ತನ್ನನ್ನು ಹಿಂಬಾಲಿಸದಂತೆ ನೋಡಿಕೊಂದ್ದಾರೆ. ಆದರೂ ಸೇತುವೆ ಮೇಲಿದ್ದವರೆ ಯಾರೋ ಈ ಘಟನೆಯನ್ನು ಸೆರೆ ಹಿಡಿದು, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವೀಡಿಯೋ ವೈರಲ್ ಆಗಿದೆ.

    Live Tv

  • ಆಸ್ತಿಗಾಗಿ ಬದುಕಿದ್ದ ಅಜ್ಜಿಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು – ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿ!

    ಆಸ್ತಿಗಾಗಿ ಬದುಕಿದ್ದ ಅಜ್ಜಿಯನ್ನು ದಾಖಲೆಗಳಲ್ಲಿ ಸಾಯಿಸಿದ ಸಂಬಂಧಿಕರು – ಡೆತ್ ಸರ್ಟಿಫಿಕೇಟ್ ಕೊಟ್ಟ ಅಧಿಕಾರಿ!

    ಚಿಕ್ಕಮಗಳೂರು: ಒಂದು ಎಕರೆ ಹದಿನಾರು ಗುಂಟೆ ಜಮೀನಿಗಾಗಿ ಬದುಕಿರುವ ಅಜ್ಜಿಯನ್ನು ಸಂಬಂಧಿಕರೇ ದಾಖಲೆಗಳಲ್ಲಿ ಸಾಯಿಸಿದ್ದು, ಇದಕ್ಕೆ ಅಧಿಕಾರಿಗಳು ಕೈಜೋಡಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಕೊಪ್ಪ ಗ್ರಾಮದಲ್ಲಿ ನಡೆದಿದೆ.

    76 ವರ್ಷದ ಸಾರಮ್ಮ ದೈಹಿಕವಾಗಿ ಜೀವಂತವಾಗಿದ್ದರೂ ಸಂಬಂಧಿಕರು ಹಾಗೂ ಅಧಿಕಾರಿಗಳ ಎಡವಟ್ಟಿನಿಂದ ದಾಖಲೆಗಳಲ್ಲಿ ಸತ್ತ ನತದೃಷ್ಟ ಅಜ್ಜಿ. ಸಾರಮ್ಮರಿಗೆ ಬಾಳೆಕೊಪ್ಪ ಗ್ರಾಮದ ಸರ್ವೇ ನಂಬರ್ 26ರಲ್ಲಿ ಒಂದು ಎಕರೆ 16 ಗುಂಟೆ ಜಮೀನಿದೆ. ಅದರಲ್ಲಿ ರಬ್ಬರ್ ಹಾಗೂ ಬಾಳೆಗಿಡಗಳನ್ನು ಬೆಳೆದಿದ್ದರು. ಕೊರೊನಾ ಪಾಸಿಟಿವ್ ಬಂದಿದ್ದರಿಂದ ಜಮೀನನ್ನು ಸಂಬಂಧಿಕರಿಗೆ ಉಳುಮೆ ಮಾಡಲು ಹೇಳಿ ಮಗಳ ಮನೆಗೆ ಹೋಗಿದ್ದರು. ಅಜ್ಜಿ ಅತ್ತ ಹೋಗುತ್ತಿದ್ದಂತೆ ಸಂಬಂಧಿಕರು ನಕಲಿ ದಾಖಲೆ ಸೃಷ್ಟಿಸಿ ಅಜ್ಜಿಯ ಜಮೀನನ್ನು ಕಬಳಿಸಲು ಯತ್ನಿಸಿದ್ದಾರೆ. ಇದನ್ನೂ ಓದಿ: ಉಡುಪಿ, ಮಂಗಳೂರನ್ನು ತಾಲಿಬಾನ್ ಮಾಡಲು ಬಿಡಲ್ಲ – ಮೋದಿ ವರ್ಚಸ್ಸಿಗೆ ಕಳಂಕ ತರಲು ಕಾಂಗ್ರೆಸ್ ಯತ್ನ

    ಅಧಿಕಾರಿಗಳು ಕೂಡ ಮರಣ ಪ್ರಮಾಣ ಪತ್ರ ನೀಡಿದ್ದಾರೆ. ವಂಶವೃಕ್ಷ ಕೂಡ ಕೊಟ್ಟಿದ್ದಾರೆ. ಮಗಳ ಮನೆಯಿಂದ ಬಂದ ಸಾರಮ್ಮ ನ್ಯಾಯಬೆಲೆ ಅಂಗಡಿಗೆ ಪಡಿತರ ತರಲು ಹೋದಾಗ ನೀವು ಸತ್ತಿದ್ದೀರಾ, ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಂಡಿದೆ ಎಂದು ಹೇಳಿದ್ದಾರೆ. ಸಾರಮ್ಮ ತಾಲೂಕು ಕಚೇರಿಗೆ ಬಂದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ವೃದ್ಧೆ ಸಂಬಂಧಿ ಬಾಬು ಹಾಗೂ ಶ್ರೀಜಾ ನಕಲಿ ದಾಖಲೆ ಸೃಷ್ಟಿಸಿ ಪೌತಿ ಖಾತೆಗೂ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸುವಾಗ ಪ್ರಕರಣ ಗ್ರಾಮ ಲೆಕ್ಕಾಧಿಕಾರಿ ಬಳಿಯೂ ಹೋಗಿತ್ತು. ಗ್ರಾಮ ಲೆಕ್ಕಾಧಿಕಾರಿ, ಅಜ್ಜಿ ಬದುಕಿರುವಾಗಲೇ ಯಾಕೆ ಈ ರೀತಿ ದಾಖಲೆ ತಂದಿದ್ದೀರಾ? ಎಂದು ಎಚ್ಚರಿಕೆ ನೀಡಿ, ಸಹಿ ಮಾಡದೆ ಕಳುಹಿಸಿದ್ದರು. ಸಾರಮ್ಮ ನಾನು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ದಯಮಾಡಿ ಅಧಿಕಾರಿಗಳು ನನಗೆ ನ್ಯಾಯ ಕೊಡಿಸಬೇಕು, ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಹಿಜಬ್ ಪರ ಸಿದ್ದರಾಮಯ್ಯ ಬಣದ ಬ್ಯಾಟಿಂಗ್ – ಹೆಣ್ಮಕ್ಕಳ ವಿದ್ಯಾಭ್ಯಾಸ ತಡೆಗೆ ಹುನ್ನಾರದ ಆರೋಪ

    ಎನ್.ಆರ್.ಪುರ ತಹಶೀಲ್ದಾರ್ ಗೀತಾ, ಈ ಕೇಸ್ ನನ್ನ ಗಮನಕ್ಕೆ ಬಂದಿದೆ. ನೊಂದ ವೃದ್ಧೆಗೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.