Tag: Grandma

  • ರಂಗಿನ ರಾಟೆ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ದುನಿಯಾ ರಶ್ಮಿ

    ರಂಗಿನ ರಾಟೆ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ದುನಿಯಾ ರಶ್ಮಿ

    ದುನಿಯಾ ರಶ್ಮಿ ಸಿನಿಮಾ ರಂಗದಿಂದ ದೂರವಾದರಾ ಅನ್ನುವ ಹೊತ್ತಿನಲ್ಲಿ ಮತ್ತೆ ಧೂತ್ತೆಂದು ಪ್ರತ್ಯಕ್ಷವಾಗಿದ್ದಾರೆ. ಆರ್ಮುಗಂ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ರಂಗಿನ ರಾಟೆ’ ಸಿನಿಮಾದಲ್ಲಿ ಅವರು ನಟಿಸಿದ್ದು, ನಿನ್ನೆಯಷ್ಟೇ ಆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಎಲ್ಲರ ಜೀವನ ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು ” ರಂಗಿನ ರಾಟೆ” ಚಿತ್ರ ಸಿದ್ದವಾಗಿದೆ. ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.

    ಈ ಕುರಿತು ಮಾತನಾಡಿದ ನಿರ್ದೇಶಕ ಆರ್ಮುಗಂ “ನಾನು ಮುರಳಿ ಮೋಹನ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟಿದ್ದೀನಿ.  ಚಿತ್ರೀಕರಣ ಮುಕ್ತಾಯವಾಗಿದೆ. ಆಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಹಾಗೂ ಸಂತೋಷ್ ನಾಲ್ಕು ಜನರ ಸುತ್ತ ಕಥೆ ಸಾಗುತ್ತದೆ. ಸಂತೋಷ್ ಮಳವಳ್ಳಿ ಅವರ ಮೂಲಕ ನಿರ್ಮಾಪಕಿ ಕವಿತಾ ಅರುಣ್ ಕುಮಾರ್ ಅವರ ಪರಿಚಯವಾಯಿತು. ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ’ ಎಂದರು. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    “ಯವರಾಜ” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಗಿದೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ದೇಶಕರು ಕಥೆ ಹೇಳಿದ ಕೂಡಲೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ. ಅನಿರೀಕ್ಷಿತ ಘಟನೆಯಲ್ಲಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದರಿಂದ ಹೇಗೆ ಪಾರಾಗುತ್ತೇನೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು ಎಂದರು ರಾಜೀವ್ ರಾಥೋಡ್.

    ನನಗೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಸಂತೋಷ್ ಅವರು ನಿರ್ದೇಶಕರ ಪರಿಚಯ‌ ಮಾಡಿಸಿದರು.  ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದೆ. ಮೊದಲ ಪ್ರಯತ್ನ.‌ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್.ಇದು ನನ್ನ ಮೊದಲ ಚಿತ್ರ. ಮೊದಲ ಪತ್ರಿಕಾಗೋಷ್ಠಿ. ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಈಡೇರಿದೆ. ಕಥೆಯೇ ಈ ಚಿತ್ರದ ನಾಯಕ, ನಾಯಕಿ. ರಾಜೀವ್ ರಾಥೋಡ್, ದುನಿಯಾ ರಶ್ಮಿ ಹಾಗೂ ನಾನು ಮುಖ್ಯಪಾತ್ರದಲ್ಲಿ ನಟಿಸಿದ್ದೇವೆ. ನಮ್ಮ ಚೊಚ್ಚಲ ಪ್ರಯತ್ನಕ್ಕೆ ನಿಮ್ಮ‌ ಹಾರೈಕೆಯಿರಲಿ ಎಂದರು ನಟಿ ಭವ್ಯ.

    Live Tv

  • ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ

    ಹಣ್ಣು ಮಾರಿ ಮನೆ ನಡೆಸಿದ 60ರ ಅಜ್ಜಿ ಮೂರೇ ವರ್ಷದಲ್ಲಿ ಹೈರಾಣಾದ ಕಥೆ

    ಬಾಗಲಕೋಟೆ: ಮಹಾಮಾರಿ ಕೊರೊನಾದಿಂದ ಎಷ್ಟೋ ಜೀವಗಳು ಬಲಿಯಾದವು. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಎರಡು ಬಾರಿ ಲಾಕ್‍ಡೌನ್ ಮಾಡಬೇಕಾಯಿತು. ಮೂರನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಮತ್ತೆ ವೀಕೆಂಡ್ ಕಫ್ರ್ಯೂ ಜಾರಿಯಾಗಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆ ಇಂದು ಸ್ತಬ್ಧವಾಗಿತ್ತು. ಆದ್ರೆ ಬಾಗಲಕೋಟೆ ಓರ್ವ ಅಜ್ಜಿಯ ಕಥೆಯನ್ನ ಕೇಳಿದ್ರೆ ನೀವೂ ಅಚ್ಚರಿಯಾಗ್ತೀರಿ.

    ಹೌದು, ಬಾಗಲಕೋಟೆ ನಗರದ ವಾಸಿಯಾಗಿರುವ ಅಜ್ಜಿ ರಾಜೀಯಾ ಅವರಿಗೆ 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಈ ಅಜ್ಜಿ ಕಳೆದ 50 ವರ್ಷಗಳಿಂದ ಹಣ್ಣುಗಳನ್ನ ಮಾರಾಟ ಮಾಡಿ ಸ್ವಾಭಿಮಾನದಿಂದ ಜೀವನ ಸಾಗಿಸಿದ್ದಾರೆ. ಆದ್ರೆ ಕಳೆದ ಮೂರು ವರ್ಷಗಳಲ್ಲಿ ಕೊರೊನಾದಿಂದ ಅಜ್ಜಿ ಹೈರಾಣಾಗಿ ಹೋಗಿದ್ದಾರೆ. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ತೆರಳಲು ಬಸ್ ಸಮಸ್ಯೆ – ನಿಲ್ದಾಣದಲ್ಲೇ ಕಣ್ಣೀರಿಟ್ಟ ಮಹಿಳೆ

    ಅಂದಹಾಗೆ ರಾಜೀಯಾ ಅವರಿಗೆ 4 ಜನ ಮಕ್ಕಳಿದ್ದಾರೆ. ಆ ನಾಲ್ಕು ಜನ ಮಕ್ಕಳ ಮದುವೆಯಾಗಿದ್ದು, 8 ಮೊಮ್ಮಕ್ಕಳಿದ್ದಾರೆ. ವಿಶೇಷವೆಂದ್ರೆ ಇವರೆಲ್ಲರನ್ನ ಅಜ್ಜಿ ಹಣ್ಣು ಮಾರಾಟ ಮಾಡಿಯೇ ಸಾಕಿ ಮನೆಯನ್ನು ನಡೆಸಿದ್ದರು. ಅಜ್ಜಿಗೆ ಕೇವಲ ಒಂದು ಸಣ್ಣ ಮನೆ ಬಿಟ್ಟರೆ ಯಾವುದೇ ಆಸ್ತಿ ಇಲ್ಲ. ಹೀಗಾಗಿ ತುತ್ತಿನ ಚೀಲ ತುಂಬಿಸಲು ಅಜ್ಜಿ ಹಣ್ಣು ಮಾರಾಟಕ್ಕೆ ಇಳಿದಿದ್ದಾರೆ.

    ಈ ಕುರಿತು ಮಾತನಾಡಿದ ಅವರು, ನಾನು ಹಣ್ಣುಗಳನ್ನ ಮಾರಾಟ ಮಾಡಿ ನೆಮ್ಮದಿಯ ಜೀವನ ಸಾಗಿಸ್ತಿದೆ. ಕಳೆದ 50 ವರ್ಷಗಳ ಅವಧಿಯಲ್ಲಿ ಅನುಭವಿಸಿದ ನೋವನ್ನ ನಾನು ಈ ಎರಡು ವರ್ಷದಲ್ಲಿ ಅನುಭವಿಸಿದ್ದೇನೆ ಎಂದು ನೋವಿನಿಂದ ಹೇಳಿದ್ದಾರೆ. ಇದಕ್ಕೆ ದೊಡ್ಡ ಕಾರಣವೇ ಮಹಾಮಾರಿ ಕೊರೊನಾ ಎಂದು ಶಪಿಸಿದ್ದಾರೆ.

    ಕೊರೊನಾ ಬಂದಾಗಿನಿಂದ ಇಲ್ಲಿಯವರೆಗೆ ಅಜ್ಜಿಯ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಕಡಿಮೆಯಾಗಿ ಹೋಗಿದೆ. ದಿನವೊಂದಕ್ಕೆ ಅಜ್ಜಿ ಅಬ್ಬಾಬ್ಬಾ ಅಂದ್ರೆ ನಾನ್ನೂರೋ, ಐನೂರೋ ಸಂಪಾದಿಸೋದು ಕಷ್ಟವಾಗಿ ಹೋಗಿದೆ. ಸೇಬು, ಮೂಸಂಬಿ, ದ್ರಾಕ್ಷಿ, ಬಾಳೆಹಣ್ಣು ಇಟ್ಟು ಮಾರಾಟ ಮಾಡುವ ಅಜ್ಜಿ, ಕಳೆದ ಎರಡು ವರ್ಷಗಳಲ್ಲಿ ಭಾರೀ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಇದ್ದ ಮಕ್ಕಳು ಬೇರೆ ಬೇರೆ ಕಡೆ ದುಡಿಯಲು ಹೋಗಿದ್ದಾರೆ. ಇದನ್ನೂ ಓದಿ:  ಪ್ರೋಮೋ ಶೇರ್ ಮಾಡಿ ಸಚಿನ್ ತಂಡವನ್ನು ಕ್ಷಮೆಯಾಚಿಸಿದ ಬಿಗ್ ಬಿ

    ಒಬ್ಬಂಟಿ ಅಜ್ಜಿ, ಹಣ್ಣುಗಳನ್ನ ಮಾರಿಯೇ ಜೀವನ ಸಾಗಿಸಬೇಕಿದೆ. ಇಂದು ವೀಕೆಂಡ್ ಕಫ್ರ್ಯೂ ಇದ್ದ ಕಾರಣ ಅಜ್ಜಿ ಒಂದೇ, ಒಂದು ರೂಪಾಯಿಯನ್ನು ವ್ಯಾಪಾರ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಹಣ್ಣುಗಳನ್ನ ಮಾರಿಯೇ ಜೀವನ ಸಾಗಿಸಿದ ದಿನಗಳನ್ನ ಅವರು ನೆನಪಿಸಿಕೊಂಡರು.

  • 90 ವರ್ಷದ ಅಜ್ಜಿಯ ಕಾರು ಡ್ರೈವಿಂಗ್ ಶ್ಲಾಘಿಸಿದ ಮಧ್ಯಪ್ರದೇಶದ ಸಿಎಂ

    90 ವರ್ಷದ ಅಜ್ಜಿಯ ಕಾರು ಡ್ರೈವಿಂಗ್ ಶ್ಲಾಘಿಸಿದ ಮಧ್ಯಪ್ರದೇಶದ ಸಿಎಂ

    – ವೀಡಿಯೋ ನೋಡಿದ ನೆಟ್ಟಿಗರು ಫಿದಾ

    ಭೋಪಾಲ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ 90 ವರ್ಷದ ವೃದ್ಧೆಯೊಬ್ಬರು ಕಾರು ಚಲಾಯಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ನನ್ನ ಮಗಳು ಮತ್ತು ಸೊಸೆಯರು ಸೇರಿದಂತೆ ಕುಟುಂಬದ ಎಲ್ಲಿರಿಗೂ ಡ್ರೈವಿಂಗ್ ಗೊತ್ತು. ಹೀಗಾಗಿ ನಾನು ಸಹ ಡ್ರೈವಿಂಗ್ ಕಲಿತೆ. ನನಗೆ ಡ್ರೈವಿಂಗ್ ತುಂಬಾ ಇಷ್ಟ. ನಾನು ಕಾರು ಮತ್ತು ಟ್ರಾಕ್ಟರುಗಳನ್ನು ಓಡಿಸಿದ್ದೇನೆ ಎಂದು ಜಿಲ್ಲೆಯ ಬಿಲಾವಲಿ ಪ್ರದೇಶದ ನಿವಾಸಿ ರೇಶಮ್ ಬಾಯಿ ತನ್ವಾರ್ ಅವರು ಹೇಳಿದ್ದಾರೆ.

    ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ವೃದ್ಧಾಪ್ಯದಲ್ಲೂ ಕಾರು ಚಾಲನೆ ಕಲಿತ ಮಹಿಳೆಯ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಇದು ಎಲ್ಲರಿಗೂ ಸ್ಫೂರ್ತಿಯಾಗಿದೆ. ನಮ್ಮ ಆಸಕ್ತಿಯನ್ನು ಪೂರೈಸಿಕೊಳ್ಳಲು ವಯಸ್ಸಿನ ನಿಬರ್ಂಧವಿಲ್ಲ. ಈ ಅಜ್ಜಿ ನಮ್ಮೆಲ್ಲರಿಗೂ ಸ್ಫೂರ್ತಿ ಎಂದು ಟ್ವೀಟ್ ಮಾಡಿದ್ದಾರೆ.

  • 100ನೇ ವರ್ಷದ ಹುಟ್ಟುಹಬ್ಬದಂದು ಕೊರೊನಾ ಲಸಿಕೆ ಪಡೆದ ಅಜ್ಜಿ

    100ನೇ ವರ್ಷದ ಹುಟ್ಟುಹಬ್ಬದಂದು ಕೊರೊನಾ ಲಸಿಕೆ ಪಡೆದ ಅಜ್ಜಿ

    ಮುಂಬೈ: ತಾನು ಹುಟ್ಟಿದ ದಿನವೇ ಕೋವಿಡ್ 19 ಲಸಿಕೆ ಪಡೆದ 100ರ ಅಜ್ಜಿ ಎಲ್ಲಡೆ ಸುದ್ದಿಯಗಿದ್ದಾರೆ. ಮುಂಬೈನ ಬಂದ್ರ ಕುರ್ಲಾ ಕಾಂಪ್ಲೆಕ್ಸ್ ವ್ಯಾಕ್ಸಿನೇಷನ್ ಸೆಂಟರ್‍ನಲ್ಲಿ ಲಸಿಕೆ ಪಡೆದಿದ್ದಾರೆ.

    ದೇಶದ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಲಸಿಕೆ ಹಾಕಲಾಗುತ್ತಿದೆ. ಈ ಹಿನ್ನೆಲೆಯಲ್ಲಿ 100 ವರ್ಷ ಪೂರೈಸಿದ ಪಾರ್ವತಿ ಕೇಡ್ಕರ್ ತನ್ನ ಹುಟ್ಟುಹಬ್ಬದ ದಿನವೇ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಪಾರ್ವತಿ ಅಜ್ಜಿ ನೂರನೇ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕವಾಗಿ ಆಚರಿಸಿ ಸಂಭ್ರಮಿಸಿದ್ದಾರೆ. ನಂತರ ಜನ್ಮದಿನಾಚರಣೆಯ ಅಂಗವಾಗಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

    ಆರಂಭದಲ್ಲಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಿಸಿದ ಬಳಿಕ ಎರಡನೇ ಹಂತದಲ್ಲಿ ಮುಂಚೂಣಿಯಲ್ಲಿರುವ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲಉ ಅನುಮತಿ ನೀಡಲಾಗಿತ್ತು. ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟ ಮತ್ತು 45 ವರ್ಷ ಮೇಲ್ಪಟ್ಟ ಅನಾರೋಗ್ಯದಿಂದ ಬಳಲುತ್ತಿರುವ ಜನರು ಲಸಿಕೆ ಪಡೆದುಕೊಳ್ಳಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿತ್ತು.

  • 90ರ ಇಳಿ ವಯಸ್ಸಿನಲ್ಲೂ ಕಾರು ಚಲಾಯಿಸಿ ಪ್ರಶಂಸೆಗೆ ಪಾತ್ರರಾದ ಅಜ್ಜಿ

    90ರ ಇಳಿ ವಯಸ್ಸಿನಲ್ಲೂ ಕಾರು ಚಲಾಯಿಸಿ ಪ್ರಶಂಸೆಗೆ ಪಾತ್ರರಾದ ಅಜ್ಜಿ

    ಮುಂಬೈ: 90ರ ವಯಸ್ಸಿನ ಅಜ್ಜಿ ತಾನು ಮಾಡಿರುವ ಒಂದು ಕೆಲಸದಿಂದ ಎಲ್ಲರ ಮನೆಮಾತಾಗಿದ್ದಾರೆ. ತನ್ನ ವೃದ್ಧಾಪ್ಯದ ವಯಸ್ಸಿನಲ್ಲಿಯೂ ಕಾರು ಓಡಿಸುವ ಮೂಲಕವಾಗಿ ಸುದ್ದಿಯಲ್ಲಿದ್ದಾರೆ.

    ಗಂಗಾಬಾಯ್ ಮಿರ್ಕುಟೆ (90)ರ ಅಜ್ಜಿ ಕಾರು ಚಾಯಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಅವರ ಧೈರ್ಯ ಮತ್ತು ಈ ವಯಸ್ಸಿನಲ್ಲಿ ಅವರಿಗೆ ಇರುವ ಉತ್ಸಾಹವನ್ನು ಕಂಡು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಇಳಿಯವಸ್ಸಿನಲ್ಲಿ ಅವರಿಗೆ ಚಾಲನೆ ಪರವಾನಿಗೆ ದೊರೆಯುವುದು ಅನುಮಾನವಾಗಿದೆ. ಹಾಗಾಗಿ ಅವರ ಕುಟುಂಬ ಅವರಿಗೆ ಕಲಿಕಾ ಚಾಲನ ಪರವಾನಿಗೆ ಕೊಡಿಸುವ ನಿಟ್ಟಿನಲ್ಲಿನಲ್ಲಿದೆ. ಕುಟುಂಬಸ್ಥರು ಗಂಗಾಬಾಯ್ ಅಲ್ಲಿಯವರಿಗೆ ಪ್ರೋತ್ಸಾಹ ಕೆಲಸವನ್ನು ಮಾಡುತ್ತಿದ್ದಾರೆ.

    ಜೀವನದಲ್ಲಿ ಛಲ, ದೃಢವಿಶ್ವಾಸ ಮುಖ್ಯವಾಗಿದೆ ವಯಸ್ಸು ಅಲ್ಲ. ನನಗೆ ಕಾರು ಚಾಲನೆ ಕಲಿಯಬೇಕೆಂದಿತ್ತು. ಕೆಲ ವರ್ಷಗಳ ಹಿಂದೆ ನನ್ನ ಮೊಮ್ಮಗ ನನಗೆ ಕಾರು ಚಾಲನೆ ಕಲಿಸಿದನು. ಈಗಲೂ ವಿಶ್ವಾಸವಿದೆ ಕಾರು ಚಲಾಯಿಸಬಲ್ಲೆ. ನಾನು 1931 ರಲ್ಲಿ ಜನಿಸಿದ್ದೇನೆ ಮುಂದಿನ ಜೂನ್‍ಗೆ 90 ವರ್ಷ ಪೂರ್ಣಗೊಳ್ಳುತ್ತದೆ ಎಂದು ಗಂಗಾಬಾಯ್ ಹೇಳಿದ್ದಾರೆ.

     

    View this post on Instagram

     

    A post shared by Sakal News (@sakalmedia)

    ಗಂಗಾಬಾಯ್ ಮೊಮ್ಮಗ ವಿಕಾಸ್ ಬೋಯೊರ್ ಇತ್ತೀಚೆಗೆ ಹೊಸ ಕಾರನ್ನು ಖರೀದಿಸಿದ್ದರು. ಆಗ ಆಶೀರ್ವಾದ ಪಡೆಯಲು ಹೋಗಿದ್ದಾಗ ಅಜ್ಜಿ ನನ್ನ ಕಾರನ್ನು ಸ್ಪಲ್ಪ ದೂರದವರೆಗೆ ಚಲಾಯಿಸಿದ್ದರು. ಆ ವೀಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಎಲ್ಲರೂ ನೋಡಿ ಅಜ್ಜಿಯ ಧೈರ್ಯವನ್ನು ಮೆಚ್ಚಿದ್ದಾರೆ ಎಂದು ಹೇಳಿದ್ದಾರೆ.

  • 2 ವರ್ಷದ ಕಂದಮ್ಮನಿಗೆ ಚಿತ್ರಹಿಂಸೆ – ಮುಖ ಸುಟ್ಟು, ಬಾಯಿಗೆ ಪ್ಲಾಸ್ಟರ್ ಹಾಕಿ ಹಲ್ಲೆ

    2 ವರ್ಷದ ಕಂದಮ್ಮನಿಗೆ ಚಿತ್ರಹಿಂಸೆ – ಮುಖ ಸುಟ್ಟು, ಬಾಯಿಗೆ ಪ್ಲಾಸ್ಟರ್ ಹಾಕಿ ಹಲ್ಲೆ

    – ಬಾಲಕನ ಪಾಲಿಗೆ ರಣರಾಕ್ಷಸಿಯಾರದ ಅಜ್ಜಿ, ತಾಯಿ

    ಬೆಂಗಳೂರು: ಅಮ್ಮ ಅಂದರೆ ನಿಸ್ವಾರ್ಥ ಜೀವಿ, ಆಕೆಗೆ ಮಕ್ಕಳ ಬಗ್ಗೆ ಕನಿಕರ ಜಾಸ್ತಿ. ತಾಯಿ ಅಂದರೆ ದೇವರಿದ್ದಂತೆ, ಮಕ್ಕಳಿಗೆ ಎಂದೂ ಕೆಟ್ಟದ್ದನ್ನು ಬಯಸದ ಮಹಾತಾಯಿ ಅಂತೆಲ್ಲಾ ಹೇಳುತ್ತಾರೆ. ಆದರೆ ಈ ಮಗುವಿನ ವಿಚಾರದಲ್ಲಿ ಇದೆಲ್ಲವೂ ಸುಳ್ಳಾಗಿದೆ. ಹೆತ್ತಮ್ಮ, ಅಜ್ಜಿಯೇ 2 ವರ್ಷದ ಮಗುವಿಗೆ ನರಕ ತೋರಿಸಿದ್ದಾರೆ.

    ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ವಾಸವಿರುವ ಇಮ್ರಾನ್ ಪಾಷಾ ಹಾಗೂ ಅಜೀರಾ ದಂಪತಿಗೆ ನಾಲ್ಕು ಮಕ್ಕಳಿವೆ. ಇದರಲ್ಲಿ ನಾಲ್ಕನೇ ಮಗು 2 ವರ್ಷದ ಮಗುವಿಗೆ ಅಜ್ಜಿ ಮತ್ತು ತಾಯಿ ಸೇರಿಕೊಂಡು ಹಲ್ಲೆ ಮಾಡಿದ್ದಾರೆ. ಮತ್ತೊಂದು ಮಗುವಿನ ಹೆರಿಗೆಗಾಗಿ ಮಗುವಿನ ತಾಯಿ ತನ್ನ ತಾಯಿಯ ಮನೆಗೆ ಬಂದಿದ್ದಾಳೆ. ಈ ವೇಳೆ ಅಜ್ಜಿ ಹಾಗೂ ತಾಯಿ ಇಬ್ಬರು ಸೇರಿಕೊಂಡು ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.

    ಕಳೆದ 15 ದಿನಗಳಿಂದಲೂ ಈ ಮಗುವಿಗೆ ರಕ್ತ ಬರುವಂತೆ ಥಳಿಸಿದ್ದಾರೆ. ಅಷ್ಟೇ ಅಲ್ಲದೇ ಮಗು ಬಾಯಿಗೆ ಪ್ಲಾಸ್ಟರ್ ಹಾಕಿ, ಹೊಟ್ಟೆ ಮುಖಕ್ಕೆ ಗುದ್ದಿ ಅಜ್ಜಿ ಮುಬೀನಾ ಕೂಡ ಚಿತ್ರಹಿಂಸೆ ಕೊಟ್ಟಿದ್ದಾಳೆ. ಮಗು ಅಳುವುದನ್ನು ನಿಲ್ಲಿಸಲ್ಲ ಎಂಬ ಕಾರಣಕ್ಕೆ ಮನಸೋಇಚ್ಛೆ ಥಳಿಸಿದ್ದು, ಮಗುವಿನ ಮೈ ಕೈಯನ್ನು ಸುಟ್ಟು ಹಲ್ಲೆ ಮಾಡಿದ್ದಾಳೆ. ಗಂಡ ಇಮ್ರಾನ್ ಪಾಷಾ ಮಗು ಬಗ್ಗೆ ಕೇಳಿದರೆ ಹೆಂಡತಿ, ಅತ್ತೆ ಸೇರಿಕೊಂಡು ಮುಚ್ಚಿದ್ದಾರೆ.

    ಪುಟ್ಟಕಂದಮ್ಮ ಮೇಲೆ ಹಲ್ಲೆ ಮಾಡಲು ಕಾರಣ, ಇಮ್ರಾನ್ ಪಾಷಾ ಹಾಗೂ ಅಜೀರಾ ಪ್ರೀತಿಸಿ ಮದುವೆಯಾಗಿದ್ದರು. ಇದು ಅಜೀರಾ ತಾಯಿ ಮುಬೀನಾಗೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಅತ್ತೆ ಮತ್ತು ಅಳಿಯನ ನಡುವೆ ವೈಮನಸ್ಸಿತ್ತು. ಇದಾದ ನಂತರ ಅಜೀರಾ ಹೆರಿಗೆಗೆ ಮನೆಗೆ ಬಂದಿದ್ದಳು. ಈ ವೇಳೆ ಮಗು ಅಪ್ಪ ಬೇಕು ಎಂದು ಹಠ ಮಾಡಿದೆ. ಈ ಕಾರಣಕ್ಕೆ ಮಗುವನ್ನು ಅಜ್ಜಿ ಮತ್ತು ತಾಯಿ ಸೇರಿಕೊಂಡು ಥಳಿಸಿದ್ದಾರೆ.

    ಸದ್ಯ ಮಗುವಿನ ಮುಖ, ಕಣ್ಣಿಗೆ ಗಾಯವಾಗಿದ್ದು, ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಇಮ್ರಾನ್ ಪಾಷಾ, ಪತ್ನಿ ಮತ್ತು ಅತ್ತೆ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಘಟನೆಯ ನಂತರ ಎಸ್ಕೇಪ್ ಆಗಿದ್ದ ಸೈತಾನ್ ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

  • ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಚಾಚುತಪ್ಪದೇ ಬಿಸಿನೀರು ಸೇವನೆ – ಕೊರೊನಾ ಗೆದ್ದು ಮಾದರಿಯಾದ 100ರ ಅಜ್ಜಿ

    ಬಳ್ಳಾರಿ: ಕೊರೊನಾ ಬಂದಿದೆ ಎಂದು ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಜನರ ಉದಾಹರಣೆಗೆ ನಮಗೆ ಸಿಗುತ್ತೆ. ಆದರೆ ಮಹಾಮಾರಿ ಕೊರೊನಾ ವಿರುದ್ಧ ಹೋರಾಡಿ ರಾಜ್ಯದ ಮೊದಲ ಶತಾಯುಷಿ ಅಜ್ಜಿ ಕೊರೊನಾದಿಂದ ಗುಣಮುಖರಾಗಿದ್ದಾರೆ.

    ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಪಟ್ಟಣದ ಬರೋಬ್ಬರಿ ನೂರು ವರ್ಷದ ಅಜ್ಜಿ ಸೋಂಕಿನಿಂದ ಗುಣಮುಖ ಆಗಿದ್ದಾರೆ. ವಿಶೇಷ ಅಂದರೆ ಅಜ್ಜಿ ಮನೆಯಲ್ಲೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ತಮ್ಮ ಮನೆಯ ಹಿರಿಯ ಮಗನಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಹಿರಿಯ ಮಗನ ಪ್ರಾಥಮಿಕ ಹಂತದ ಸಂಪರ್ಕ ಹೊಂದಿರುವ ಕಾರಣ ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಮನೆಯ ಉಳಿದ ನಾಲ್ವರ ಸ್ವಾಬ್ ಟೆಸ್ಟ್ ಮಾಡಿದಾಗ ಎಲ್ಲರಿಗೂ ಸೋಂಕು ಇರುವುದು ದೃಢಪಟ್ಟಿತ್ತು.

    ಹಿರಿಯ ಮಗನನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಮನೆಯ ಮಂದಿಯ ಜೊತೆಯಲ್ಲಿ ಅಜ್ಜಿಯ ಸಹ ಗುಣಮುಖ ಆಗಿದ್ದಾರೆ. 80 ವರ್ಷದ ಮೇಲ್ಪಟ್ಟ ಜನರಲ್ಲಿ ಸೋಂಕು ಕಾಣಿಸಿಕೊಂಡರೇ ಬಹಳ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಅಜ್ಜಿ ಸೋಂಕಿತರ ಭಯವನ್ನು ದೂರ ಮಾಡಿದ್ದಾರೆ. ವೈದ್ಯರ ನೀಡಿದ ಔಷಧಿ ಹಾಗೂ ಬಿಸಿ ನೀರು ಕುಡಿಯುವುದು ಇದೆಲ್ಲವನ್ನೂ ಅಜ್ಜಿ ಚಾಚು ತಪ್ಪದೆ ಪಾಲನೆ ಮಾಡಿದ್ದಾರೆ. ಹೀಗಾಗಿ ಅಜ್ಜಿ ಬೇಗ ಗುಣಮುಖ ಆಗಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.

  • ಬಡವರ ಪಾಲಿನ ಅನ್ನಪೂರ್ಣೇಶ್ವರಿ ಕೋಲಾರದ ಅಜ್ಜಿ-ಕೊರೊನಾ ಸಮಯದಲ್ಲೂ 1 ರೂ.ಗೆ ಇಡ್ಲಿ ಮಾರಾಟ

    ಬಡವರ ಪಾಲಿನ ಅನ್ನಪೂರ್ಣೇಶ್ವರಿ ಕೋಲಾರದ ಅಜ್ಜಿ-ಕೊರೊನಾ ಸಮಯದಲ್ಲೂ 1 ರೂ.ಗೆ ಇಡ್ಲಿ ಮಾರಾಟ

    ಕೋಲಾರ: ಕಳೆದ ಎರಡೂವರೆ ತಿಂಗಳಿಂದ ಎಲ್ಲೆಡೆ ಕೊರೊನಾ ಲಾಕ್‍ಡೌನ್ ಆಗಿ ಹೋಟೆಲ್ ಉದ್ಯಮ ಸೇರಿದಂತೆ ಜನಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿ ಜನ ಸಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಕೋಲಾರದಲ್ಲೊಬ್ಬ ಅಜ್ಜಿ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಬಡವರ ಪಾಲಿನ ಅನ್ನಪೂರ್ಣೆಶ್ವರಿಯಾಗಿದ್ದಾರೆ.

    ಪ್ರಸ್ತುತ ಕಾಲದಲ್ಲಿ ಒಂದು ಪುಟ್ಟ ಇಡ್ಲಿಗೆ ಐದು ರೂ. ಟೀ-ಕಾಫಿಗೆ 10 ರಿಂದ 20 ರೂಪಾಯಿ ಕೊಡಲೇಬೇಕು. ಇನ್ನೂ ಹೊಟ್ಟೆ ತುಂಬಾ ತಿನ್ನಬೇಕಂದ್ರೆ ಕನಿಷ್ಟ 40 ರಿಂದ 50 ರೂಪಾಯಿ ಕೊಡಲೇಬೇಕು. ಆದರೆ ಇಲ್ಲೊಬ್ಬ 85 ವರ್ಷದ ಅಜ್ಜಿ ಕಳೆದ 50 ವರ್ಷಗಳಿಂದ ಇಡ್ಲಿಯನ್ನು ನಾಲ್ಕಾಣೆ, ಐವತ್ತು ಪೈಸೆ, ಈಗ 1 ರೂಪಾಯಿಗೆ ಮಾರಾಟ ಮಾಡುತ್ತಾ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ರೂಪಾಯಿಗೆ ಇಡ್ಲಿ ಮಾರುತ್ತಿರುವ ಈ ಅಜ್ಜಿಯ ಹೆಸರು ಸೆಲ್ವಮ್ಮ, ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಪಂಪ್‍ಹೌಸ್ ಬಳಿ ಈ ಅಜ್ಜಿ ತನ್ನ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ಅಜ್ಜಿ ತಯಾರು ಮಾಡುವ ಇಡ್ಲಿಗೆ ಎಷ್ಟು ಬೇಡಿಕೆಯಿದೆ ಎಂದರೆ ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಎಲ್ಲಾ ಇಡ್ಲಿ ಖಾಲಿಯಾಗುತ್ತೆ. ಬೆಳಗ್ಗೆ 7 ಗಂಟೆಯಿಂದಲೇ ಅಜ್ಜಿ ಮನೆ ಮುಂದೆ ತಿಂಡಿ ಖರೀದಿ ಮಾಡಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. ಈ ಇಳಿವಯಸ್ಸಿನಲ್ಲೂ ಪ್ರತಿದಿನ 300 ಇಡ್ಲಿ, ಚಟ್ನಿ ಸಾಂಬಾರು ಸಹ ಅಜ್ಜಿ ಒಬ್ಬರೇ ತಯಾರು ಮಾಡುತ್ತಾರೆ.

    ಮೂಲತಃ ತಮಿಳುನಾಡಿನವರಾದ ಇವರು ಕೋಲಾರಕ್ಕೆ ಬಂದು 55 ವರ್ಷಗಳೇ ಆಗಿದೆ. ಇವರ ಬಳಿ ಹೆಚ್ಚಾಗಿ ಬಡವರು, ಗಾರ್ಮೆಂಟ್ಸ್ ಮಹಿಳೆಯರು. ಆಟೋ ಚಾಲಕರು ಪ್ರತಿ ನಿತ್ಯ ಇಡ್ಲಿ ಖರೀದಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕಡಿಮೆ ಬೆಲೆಗೆ ಮಾರಾಟ ಮಾಡ್ತಿರೋದಕ್ಕೆ ಇನ್ನುಳಿದ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

  • 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ‘ಗೇಮರ್ ಅಜ್ಜಿ’

    ಟೋಕಿಯೋ: ಗೇಮರ್ ಅಜ್ಜಿ ಖ್ಯಾತಿಯ ಜಪಾನ್‍ನ ಹಮಕೋ ಮರಿ 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಕ್ರೀಡಾಂಗಣದಲ್ಲಿನ ಆಟಕ್ಕಿಂತ ಹೆಚ್ಚಾಗಿ ಆನ್‍ಲೈನ್ ಗೇಮ್, ಮೊಬೈಲ್ ಗೇಮ್‍ಗಳಲ್ಲೇ ಯುವಕರು ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಪಬ್ ಜಿ, ಸಿಒಡಿ ಆನ್‍ಲೈನ್ ಗೇಮ್‍ಗಳು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ಅನೇಕ ಪೋಷಕರು ಆರೋಪಿಸಿದ್ದಾರೆ. ಆದರೆ 90 ವರ್ಷದ ಅಜ್ಜಿ ಆನ್‍ಲೈನ್ ಗೇಮಿಂಗ್‍ನಲ್ಲಿ ಗಿನ್ನಿಸ್ ದಾಖಲೆ ಬೆರೆದು ಹುಬ್ಬೇರಿಸುವಂತೆ ಮಾಡಿದ್ದಾರೆ.

    1981ರಿಂದ ಗೇಮಿಂಗ್ ಜಗತ್ತಿನಲ್ಲಿ ಸ್ಟೆಲ್ಲರ್ ಆಗಿರುವ ಜಪಾನ್‍ನ 90 ವರ್ಷದ ಅಜ್ಜಿ ಹಮಕೋ ಮಾರಿ ಅವರು 1981 ರಿಂದ ಗೇಮಿಂಗ್ ಕೌಶಲ್ಯವನ್ನು ಮೆರುಗುಗೊಳಿಸಿದ್ದಾರೆ. ಅವರು 1981ರಿಂದ ಗೇಮಿಂಗ್ ಜಗತ್ತಿನಲ್ಲಿ ನಾಕ್ಷತ್ರಿಕರಾಗಿದ್ದಾರೆ. ವಿಡಿಯೋ ಗೇಮ್‍ಗಳ ಬಗ್ಗೆ ಉತ್ಸಾಹ ಮತ್ತು ಪ್ರೀತಿ, “ಗೇಮರ್ ಅಜ್ಜಿ”, ಅವರು ಜನಪ್ರಿಯವಾಗಿ ತಿಳಿದಿರುವಂತೆ, ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    1930ರ ಫೆಬ್ರವರಿ 18ರಂದು ಜನಿಸಿದ ಹಮಕೋ ಮರಿ ತಮ್ಮ 39ನೇ ವಯಸ್ಸಿನಲ್ಲಿ ಗೇಮಿಂಗ್ ಜಗತ್ತಿಗೆ ಕಾಲಿಟ್ಟರು. ಬಳಿಕ 2014ರ ಡಿಸೆಂಬರ್ 19ರಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್‍ನೊಂದಿಗೆ ಆನ್‍ಲೈನ್‍ನಲ್ಲಿ ತೊಡಗಿದರು. ಪ್ರತಿ ತಿಂಗಳು ನಾಲ್ಕು ವಿಡಿಯೋಗಳನ್ನು ಅಪ್‍ಲೋಡ್ ಮಾಡುವ ಅಜ್ಜಿ ಕಾಲ್ ಆಫ್ ಸೇರಿದಂತೆ ಅನೇಕ ಆನ್‍ಲೈನ್ ಆಟಗಳನ್ನು ಚೆನ್ನಾಗಿ ತಿಳಿದಿದ್ದಾರೆ.

    ಡ್ಯೂಟಿ, ಡಾಂಟ್‍ಲೆಸ್, ನೀರ್ ಅಂಡ್ ಆಟೊಮ್ಯಾಟಾ, ಗ್ರ್ಯಾಂಡ್ ಥೆಫ್ಟ್ ಆಟೋ ವಿ ಹಮಕೋ ಮರಿ ಅವರ ನೆಚ್ಚಿನ ಆಟವಾಗಿವೆ. ಅಷ್ಟೇ ಅಲ್ಲದೆ ಅವರು ಹಲವಾರು ಆನ್‍ಲೈನ್ ಆಟಗಳನ್ನು ಆಡಿ ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ನಲ್ಲಿ ವಿಶ್ವದ ಅತ್ಯಂತ ಹಿರಿಯ ಗೇಮಿಂಗ್ ಯೂಟ್ಯೂಬರ್ ಪ್ರಶಸ್ತಿಯನ್ನು ಗಳಿಸಿದ್ದಾರೆ. ಜಪಾನಿನ ಅಜ್ಜಿ ಪ್ರತಿದಿನ ಏಳು ರಿಂದ ಎಂಟು ಗಂಟೆಗಳ ಕಾಲ ಗೇಮಿಂಗ್‍ನಲ್ಲೇ ಕಳೆಯುತ್ತಾರೆ. ಜೊತೆಗೆ ಹಮಕೋ ಮಾರಿ ಅವರ ಯೂಟ್ಯೂಬ್ ಚಾನೆಲ್‍ಗೆ 2.78 ಲಕ್ಷ ಚಂದಾದಾರರಿದ್ದಾರೆ.

  • ಶತಾಯುಷಿ ಅಜ್ಜಿಯನ್ನು ಹೊತ್ತು ತಂದು ಮತದಾನ ಮಾಡಿಸಿದ್ರು!

    ಶತಾಯುಷಿ ಅಜ್ಜಿಯನ್ನು ಹೊತ್ತು ತಂದು ಮತದಾನ ಮಾಡಿಸಿದ್ರು!

    ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಮಾಡಲು ವೀಲ್ ಚೇರ್ ನೀಡದ ಹಿನ್ನೆಲೆಯಲ್ಲಿ ಶತಾಯುಷಿ ಮಹಿಳೆಯನ್ನು ಸ್ಥಳೀಯರೇ ಕರೆತಂದು ಮತದಾನ ಮಾಡಿಸಿದ್ದಾರೆ.

    ರಾಮನಗರ ತಾಲೂಕಿನ ಗಂಗರಾಜನಹಳ್ಳಿಯ ಮತಗಟ್ಟೆ ಸಂಖ್ಯೆ 47 ರಲ್ಲಿ 103 ವರ್ಷದ ಭದ್ರಕಾಳಮ್ಮ ಮತದಾನ ಮಾಡಿದ್ದಾರೆ. ಭದ್ರಕಾಳಮ್ಮ ಅವರು ಮತಗಟ್ಟೆಯಿಂದ 500 ಮೀಟರ್ ದೂರದ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇವರು ಮತದಾನ ಮಾಡಲು ಗಂಗರಾಜನಹಳ್ಳಿ ಮತಗಟ್ಟೆ ಸಂಖ್ಯೆ 47ಕ್ಕೆ ಬರಬೇಕಿತ್ತು. ಇದಕ್ಕೆ ಚುನಾವಣಾಧಿಕಾರಿಗಳು ಮತಗಟ್ಟೆಗೆ ಆಟೋ ವ್ಯವಸ್ಥೆ, ವೀಲ್ ಚೇರ್ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಸ್ಥಳೀಯರೇ ಬಾಡಿಗೆ ಆಟೋದಲ್ಲಿ ಕರೆತಂದು ಮತದಾನ ಮಾಡಿಸಿದ್ದಾರೆ.

    ಇದೇ ಗ್ರಾಮದ ಎರಡೂ ಕಣ್ಣು ಕಾಣದ ಅಂಧ ಮಹಿಳೆ ಧಾಕ್ಷಾಯಿಣಿಯನ್ನು ಸಹ ಆಟೋದಲ್ಲೇ ಕರೆತಂದು ಮತದಾನ ಮಾಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv