Tag: granddaughter

  • ಅಜ್ಜನಿಂದ ಮೊಮ್ಮಗಳ ಮೇಲೆ ರೇಪ್ – ಯಾರಿಗೂ ಹೇಳ್ಬೇಡ ಎಂದು 10 ರೂ. ಕೊಟ್ಟ

    ಅಜ್ಜನಿಂದ ಮೊಮ್ಮಗಳ ಮೇಲೆ ರೇಪ್ – ಯಾರಿಗೂ ಹೇಳ್ಬೇಡ ಎಂದು 10 ರೂ. ಕೊಟ್ಟ

    ಲಕ್ನೋ: ವೃದ್ಧನೊಬ್ಬ ತನ್ನ 15 ವರ್ಷದ ಮೊಮ್ಮಗಳ (Grand Daughter) ಮೇಲೆ ಅತ್ಯಾಚಾರವೆಸಗಿ (Rape), ಪ್ರಕರಣದ ಬಗ್ಗೆ ಯಾರಿಗೂ ತಿಳಿಸದಂತೆ 10 ರೂ. ನೀಡಿದ ಘಟನೆ ಉತ್ತರಪ್ರದೇಶದ (Uttar Pradesh) ಗೋರಖ್‍ಪುರದಲ್ಲಿ ನಡೆದಿದೆ.

    ಘಟನೆಗೆ ಸಂಬಂಧಿಸಿ 60 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ತಾಯಿ ಆಡು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಬಾಲಕಿಯ ತಾಯಿ (Mother) ಜೊತೆಗೆ ಆಕೆಯ ಅಜ್ಜ, ಬಾಲಕಿ ಇಬ್ಬರು ಹೊಲಕ್ಕೆ ಬಂದಿದ್ದರು. ಈ ವೇಳೆ ಬಾಲಕಿಯ (Girl) ಅಜ್ಜ, ಸೊಸೆಯನ್ನು ಮನೆಗೆ ಕಳುಹಿಸಿದ್ದಾನೆ. ಅದಾದ ಬಳಿಕ ಕೊಡಲಿಯನ್ನು ಕೊಡುವಂತೆ ಬಾಲಕಿ ಬಳಿ ಹೇಳಿದ್ದಾನೆ. ಈ ವೇಳೆ ಯಾರೂ ಇಲ್ಲದ್ದನ್ನು ಗಮನಿಸಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲದೇ ಕೃತ್ಯದ ಬಗ್ಗೆ ಯಾರಿಗೂ ತಿಳಿಸದಂತೆ ಆಕೆಗೆ 10 ರೂ. ನೀಡಿದ್ದಾನೆ. ಇದನ್ನೂ ಓದಿ: ಆಲಿಕಲ್ಲು ಸಹಿತ ಮಳೆಗೆ ನೆಲಕಚ್ಚಿದ ಬೆಳೆಗಳು ಅನ್ನದಾತನಿಗೆ ನಷ್ಟವೋ ನಷ್ಟ

    ಈ ವೇಳೆ ನೀರು ತರಲು ಗದ್ದೆಯ ಮೂಲಕ ಹಾದು ಹೋಗುತ್ತಿದ್ದ ವ್ಯಕ್ತಿಯೊಬ್ಬ ಘಟನೆಯನ್ನು ನೋಡಿದ್ದಾನೆ. ಅಷ್ಟೇ ಅಲ್ಲದೇ ಸ್ಥಳಕ್ಕೆ ಸ್ಥಳೀಯರನ್ನು ಕರೆದಿದ್ದು, ವೃದ್ಧನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 4 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಯುವತಿ ಆತ್ಮಹತ್ಯೆ!

    ಘಟನೆಗೆ ಸಂಬಂಧಿಸಿದಂತೆ ಗುಲ್ರಿಹಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃದ್ಧನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 4 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಯುವತಿ ಆತ್ಮಹತ್ಯೆ!

  • ಶ್ವೇತಭವನದಲ್ಲಿ ಮದುವೆಯಾಗಲಿದ್ದಾರೆ ಜೋ ಬೈಡನ್ ಮೊಮ್ಮಗಳು

    ಶ್ವೇತಭವನದಲ್ಲಿ ಮದುವೆಯಾಗಲಿದ್ದಾರೆ ಜೋ ಬೈಡನ್ ಮೊಮ್ಮಗಳು

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) ಅವರ ಮೊಮ್ಮಗಳು (Grand Daughter) ನವೋಮೆ ಬೈಡನ್ ಹಾಗೂ ಪೀಟರ್ ನೀಲ್ ಅವರು ವೈಟ್ ಹೌಸ್‍ನ (White House) ಸೌತ್ ಲಾನ್‍ನಲ್ಲಿ ಶನಿವಾರ ವಿವಾಹವಾಗಲಿದ್ದಾರೆ. ಈ ಮೂಲಕ ಹೊಸದೊಂದು ದಾಖಲೆಯನ್ನು ಬರೆಯಲಿದ್ದಾರೆ.

    ಜೋ ಬೈಡನ್ ಅವರ ಮೊಮ್ಮಗಳು ನೋಮಿ(28) ಮತ್ತು ನೀಲ್ (25) ಅವರು 4 ವರ್ಷಗಳ ಹಿಂದೆ ನ್ಯೂಯಾರ್ಕ್‍ನಲ್ಲಿ ಸ್ನೇಹಿತರ ಮೂಲಕ ಭೇಟಿಯಾಗಿದ್ದರು. ಅಂದಿನಿಂದ ಅವರಿಬ್ಬರು ಒಟ್ಟಿಗೆ ನೆಲೆಸಿದ್ದರು. ನೋಮಿ ವಕೀಲರಾಗಿದ್ದರೆ, ನೀಲ್ ಇತ್ತೀಚೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಪದವಿ ಪಡೆದಿದ್ದಾರೆ. ಪ್ರಸ್ತುತ ಇಬ್ಬರೂ ವಾಷಿಂಗ್ಟನ್‍ನಲ್ಲಿ ವಾಸಿಸುತ್ತಿದ್ದಾರೆ.

    ಇದು ವೈಟ್ ಹೌಸ್‍ನ ಇತಿಹಾಸದಲ್ಲಿ 19ನೇ ವಿವಾಹವಾಗಿದೆ (Wedding). ಈವರೆಗೆ ಶ್ವೇತಭವನದಲ್ಲಿ ನಡೆದ 18 ಮದುವೆಯಲ್ಲಿ 9 ಹಿಂದಿನ ಅಮೆರಿಕದ ಅಧ್ಯಕ್ಷರ ಮಕ್ಕಳ ಮದುವೆ ಆಗಿದೆ. ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರೊಬ್ಬರ ಮೊಮ್ಮಗಳು ವೈಟ್‍ಹೌಸ್‍ನಲ್ಲಿ ಮದುವೆ ಆಗಲಿದ್ದಾರೆ ಎಂದು ವೈಟ್‍ಹೌಸ್ ಹಿಸ್ಟಾರಿಕಲ್ ಅಸೋಸಿಯೇಷನ್ ತಿಳಿಸಿದೆ. ಇದನ್ನೂ ಓದಿ: ಬೈಕ್ ಹಿಂದೆ ಎಮ್ಮೆ ಓಡುವ ಸ್ಪರ್ಧೆ – ಗೆದ್ದವರಿಗೆ ನಗದು, ಬಕೆಟ್ ಬಹುಮಾನ

    ಬೈಡನ್ ಪತ್ನಿ ಜಿಲ್ ಬೈಡನ್ ಮಾತನಾಡಿ, ತಮ್ಮ ಮೊಮ್ಮಗಳ ಮದುವೆಯನ್ನು ನೋಡಲು ಉತ್ಸುಕರಾಗಿದ್ದೇನೆ. ಇದು ಅವಳ ಆಯ್ಕೆ ಆಗಿದೆ ಎಂದರು. ಇದನ್ನೂ ಓದಿ: ನಮ್ಮ ಇಸ್ಲಾಂ ಧರ್ಮದಲ್ಲಿ ಪ್ರತಿಮೆಗೆ ಅವಕಾಶ ಇಲ್ಲ – ಟಿಪ್ಪು ಪ್ರತಿಮೆ ಸ್ಥಾಪನೆಗೆ ಇಬ್ರಾಹಿಂ ವಿರೋಧ

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರಕ್ಕೆ ವಿರೋಧಿಸಿದ ವೃದ್ಧೆಯ ಖಾಸಗಿ ಅಂಗಗಳ ಮೇಲೆ ಹಲ್ಲೆ ನಡೆಸಿ ಕೊಲೆಗೈದ!

    ಅತ್ಯಾಚಾರಕ್ಕೆ ವಿರೋಧಿಸಿದ ವೃದ್ಧೆಯ ಖಾಸಗಿ ಅಂಗಗಳ ಮೇಲೆ ಹಲ್ಲೆ ನಡೆಸಿ ಕೊಲೆಗೈದ!

    ಜೈಪುರ: ವೃದ್ಧೆಯೊಬ್ಬರ ಮೇಲೆ ಅತ್ಯಚಾರವೆಸಗಲು ಯತ್ನಿಸಿದ ವ್ಯಕ್ತಿಯೊಬ್ಬನ ಪ್ರಯತ್ನ ವಿಫಲವಾದ ಹಿನ್ನೆಲೆ ಆಕೆಯ ಖಾಸಗಿ ಅಂಗಗಳ ಮೇಲೆ ಹಲ್ಲೆಗೈದು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ರಾಜಸ್ಥಾನದ ಡುಂಗರಪುರನಲ್ಲಿ ನಡೆದಿದೆ.

    ಘಟನೆ ಕುರಿತು ವೃದ್ಧೆಯ ಮೊಮ್ಮಗಳು ಮಾತನಾಡಿ, ಆರೋಪಿಯು ಕುಡಿದ ಅಮಲಿನಲ್ಲಿ ನನ್ನ ಅಜ್ಜಿ ಮನೆಗೆ ನುಗ್ಗಿ ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಅವರು ಅದನ್ನು ವಿರೋಧಿಸಿದಾಗ ಚಾಕು ತೆಗೆದುಕೊಂಡು ಅವರಿಗೆ ಇರಿದಿದ್ದಲ್ಲದೇ ಅವರ ಖಾಸಗಿ ಅಂಗಗಳ ಮೇಲೆ ಹಲ್ಲೆಗೈದಿದ್ದಾನೆ. ಈ ವೇಳೆ ಅಜ್ಜಿಯ ಅಳಲು ಕೇಳಿಸಿ ನಾನು ಸ್ಥಳಕ್ಕೆ ಧಾವಿಸಿದಾಗ ಅವರು ರಕ್ತದ ಮಡವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ನಂತರದಲ್ಲಿ ಆರೋಪಿಯು ಅಲ್ಲಿಂದ ಪರಾರಿಯಾಗಿದ್ದಾನೆ.

    ಘಟನೆಯ ನಂತರ, ಸಂತ್ರಸ್ತೆಯ ಮೊಮ್ಮಗಳು ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು. ಗಾಯಗೊಂಡ ವೃದ್ಧೆಯನ್ನು ತಕ್ಷಣವೇ ಚಿಖಾಲಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವಳನ್ನು ಸಗ್ವಾರಾ ಆಸ್ಪತ್ರೆಗೆ ಕಳುಹಿಸಿದರು. ತೀವ್ರ ಗಾಯಗೊಂಡಿದ್ದ ಆಕೆಯನ್ನು ಸಗ್ವಾರದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

    ಕುವಾನ್ ಸ್ಟೇಷನ್ ಹೌಸ್ ಆಫೀಸರ್ ಮೊಹಮ್ಮದ್ ರಿಜ್ವಾನ್ ಖಾನ್ ಮಾತನಾಡಿ, ಆರೋಪಿ ಮತ್ತು ಸಂತ್ರಸ್ತೆಯ ನೆರೆಹೊರೆಯವರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

    ನಂತರ ಸಂತ್ರಸ್ತೆಯ ಸಂಬಂಧಿಕರು ಮೃತದೇಹವನ್ನು ಚಿಖಾಲಿಗೆ ತಂದರು. ಘಟನೆಯ ಬಗ್ಗೆ ಕುವಾನ್ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದರು. ಆರೋಪಿಗಳ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

  • ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ – ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಆತ್ಮಹತ್ಯೆ

    ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ – ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಆತ್ಮಹತ್ಯೆ

    ಜಾರ್ಖಂಡ್: ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸೊಸೆ ಪ್ರಕರಣ ದಾಖಲಿಸಿದ್ದರಿಂದ ಮನನೊಂದು ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಆತ್ಮಹತ್ಯೆಗೂ ಮುನ್ನ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದ ರಾಜೇಂದ್ರ ಬಹುಗುಣ ಅವರು ಪೊಲೀಸರು ಬರುವಷ್ಟರಲ್ಲಿ ಆತ್ಮಹತ್ಯೆ ಮಾಡಿಕೊಡಿದ್ದಾರೆ. ಅಲ್ಲದೇ ಆತ್ಮಹತ್ಯೆಗೆ ಬಳಸಿದ್ದ ಪಿಸ್ತೂಲ್ ಮೃತ ದೇಹದ ಬಳಿ ಪತ್ತೆಯಾಗಿದೆ. ಇದನ್ನೂ ಓದಿ:  ತಾಂಬೂಲ ಪ್ರಶ್ನೆ ಅಂತಾ ಬರೋರನ್ನು ಒದ್ದು ಒಳಗೆ ಹಾಕ್ಬೇಕು: ಅಬ್ದುಲ್ ವಾಜೀದ್ ವಿವಾದಾತ್ಮಕ ಹೇಳಿಕೆ

    CRIME 2

    ಪೊಲೀಸರು ಬಂದಾಗ ರಾಜೇಂದ್ರ ಬಹುಗುಣ ಅವರು ಟ್ಯಾಂಕ್ ಮೇಲೆ ಏರಿ ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ. ನಂತರ ಪೊಲೀಸರು ಧ್ವನಿವರ್ಧಕದ ಮೂಲಕ ಅವರೊಂದಿಗೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆದರೆ ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಬಳಿಕ ಆತ್ಮಹತ್ಯೆ ನಿರ್ದಾರ ಬಿಟ್ಟು ಕೆಳಗಿಳಿಯುವಂತೆ ಪೊಲೀಸರು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಇದ್ದಕ್ಕಿದಂತೆ ಪಿಸ್ತೂಲ್‍ನಿಂದ ಎದೆಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ಭಟ್ ಎನ್‍ಡಿಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ಚುನಾವಣೆಗೆ ಟಿಕೆಟ್ ನನಗೆ ಕೊಡಬೇಡಿ- ನಡ್ಡಾಗೆ ಸುರಾನಾ ಪತ್ರ

    ರಾಜೇಂದ್ರ ಬಹುಗುಣ ಅವರ ಸೊಸೆ ನೀಡಿದ ದೂರಿನ ಆಧಾರದ ಮೇರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ಕಟ್ಟುನಿಟ್ಟಿನ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ರಾಜೇಂದ್ರ ಬಹುಗುಣ ಅವರ ಪುತ್ರ ಅಜಯ್ ಬಹುಗುಣ ಅವರ ದೂರಿನ ಮೇರೆಗೆ ಅವರ ಸೊಸೆ, ಆಕೆಯ ತಂದೆ ಮತ್ತು ನೆರೆಹೊರೆಯವರು ಆತನ ಮೇಲೆ ಹಲ್ಲೆ ಆರೋಪ ಹೊರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

    ಕಾಂಗ್ರೆಸ್ ಪಕ್ಷದಲ್ಲಿ ರಾಜೇಂದ್ರ ಬಹುಗುಣ ಅವರಿಗೆ 2004-5ರಲ್ಲಿ ಎನ್‍ಡಿ ತಿವಾರಿ ಸರ್ಕಾರದಲ್ಲಿ ರಾಜ್ಯ ಸಚಿವ ಸ್ಥಾನಮಾನ ನೀಡಲಾಗಿತ್ತು. ರೋಡ್‍ವೇಸ್ ಒಕ್ಕೂಟದ ನಾಯಕರಾಗಿದ್ದ ಅವರು ಹಲ್ದ್ವಾನಿ ಡಿಪೋ ಕಾರ್ಯಾಗಾರದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಕ್ಟೋಬರ್ 31 ರಂದು ನಿವೃತ್ತರಾದರು.

  • ಅಪ್ರಾಪ್ತೆಯನ್ನು ಹತ್ಯೆಗೈದು, ವೃದ್ಧೆಯ ತಲೆಯನ್ನು ಕತ್ತರಿಸಿ ನೇತು ಹಾಕಿದ ದುಷ್ಕರ್ಮಿಗಳು

    ಅಪ್ರಾಪ್ತೆಯನ್ನು ಹತ್ಯೆಗೈದು, ವೃದ್ಧೆಯ ತಲೆಯನ್ನು ಕತ್ತರಿಸಿ ನೇತು ಹಾಕಿದ ದುಷ್ಕರ್ಮಿಗಳು

    ಭೋಪಾಲ್: ವೃದ್ಧ ದಂಪತಿ ಮತ್ತು ಅವರ ಓರ್ವ ಅಪ್ರಾಪ್ತ ಮೊಮ್ಮಗಳನ್ನು ದುಷ್ಕರ್ಮಿಗಳು ಕೊಲೆ ಮಾಡಿ ವೃದ್ಧೆಯ ತಲೆಯನ್ನು ಕತ್ತರಿಸಿ ಮರಕ್ಕೆ ನೇತು ಹಾಕಿರುವ ಘಟನೆಯೊಂದು ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ನಡೆದಿದೆ.

    ಮಂಗಳವಾರ ಬೆಳಗ್ಗೆ ಕೆಲವು ಸ್ಥಳೀಯರು, ವೃದ್ಧ ದಂಪತಿ ಮತ್ತು ಅವರ ಮೊಮ್ಮಗಳು ಶವವಾಗಿ ಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿರುವ ಮೊಹಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಟದೇಯ್ ಗ್ರಾಮದಲ್ಲಿ ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳು ದಂಪತಿ ಮತ್ತು ಅವರ ಮೊಮ್ಮಗಳು ಮನೆಯ ಟೆರೇಸ್‍ನಲ್ಲಿ ಮಲಗಿದ್ದಾಗ ಅವರ ಕತ್ತು ಸೀಳಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಸಿಂಗ್ ಕವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಾರ್ತಿ ಚಿದಂಬರಂಗೆ ಬೆಳ್ಳಂಬೆಳಗ್ಗೆ ಶಾಕ್ – ಮನೆ ಸೇರಿ 7 ಕಡೆ ಸಿಬಿಐ ದಾಳಿ

    ಹಂತಕರು ವೃದ್ಧೆಯ ತಲೆಯನ್ನು ಕತ್ತರಿಸಿ ಅವರ ಮನೆಯಿಂದ ಒಂದು ಕಿಮೀ ದೂರದಲ್ಲಿರುವ ಜಮೀನಿನಲ್ಲಿ ಮರಕ್ಕೆ ನೇತು ಹಾಕಿದ್ದಾರೆ ಎಂದು ಮೊಹಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಎಸ್‍ಎಲ್ ಮಾರ್ಕಮ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಮೃತರ ಇತರ ಕುಟುಂಬ ಸದಸ್ಯರು, ಘಟನೆ ಕುರಿತು ಹಂತಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನೂ ಓದಿ: ಫ್ಯಾಟ್ ಸರ್ಜರಿಗೆ 1 ಲಕ್ಷ 60 ಸಾವಿರ ಕೊಟ್ಟಿದ್ದರಂತೆ ಚೇತನಾ ರಾಜ್ : ಕುಟುಂಬ ಆರೋಪ

  • ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ

    ಮೊಮ್ಮಗಳು ಜನಿಸಿದ ಖುಷಿಯಲ್ಲಿ ಕರೆತರಲು ಹೆಲಿಕಾಪ್ಟರ್ ಬುಕ್ ಮಾಡಿದ ರೈತ

    ಮುಂಬೈ: ಮೊಮ್ಮಗಳು ಜನಿಸಿದ ಖುಷಿಯಲ್ಲಿ ರೈತರೊಬ್ಬರು ಪ್ರೀತಿಯ ಪುಟ್ಟ ಕಂದಮ್ಮನನ್ನು ಮನೆಗೆ ಬರಮಾಡಿಕೊಳ್ಳಲು ಹೆಲಿಕಾಪ್ಟರನ್ನೇ ಬುಕ್ ಮಾಡಿದ್ದಾರೆ.

    ಪುಣೆಯ ಹೊರವಲಯದಲ್ಲಿರುವ ಬಾಲೆವಾಡಿ ಪ್ರದೇಶದ ನಿವಾಸಿ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಟುಂಬಕ್ಕೆ ಹೊಸ ಸದಸ್ಯೆ ಕ್ರುಶಿಕಾಗೆ ಸ್ವಾಗತ ಕೋರಲು ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮಾದಲ್ಲಿ ಅವಕಾಶ ಕೊಡಿಸೋ ನೆಪದಲ್ಲಿ ಅತ್ಯಾಚಾರ – ನಟ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು

    ಶೆವಾಲ್ ವಾಡಿಯಲ್ಲಿರುವ ತವರು ಮನೆಯಿಂದ ತಾಯಿ ಹಾಗೂ ಮಗುವನ್ನು ಮನೆಗೆ ಕರೆದುಕೊಂಡು ಬರುವ ಸಮಯ ಬಂದಾಗ ಹೆಲಿಕಾಪ್ಟರ್ ಬುಕ್ ಮಾಡಿರುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಆಫ್‌ಸ್ಕ್ರೀನ್‌ನಲ್ಲಿ ಹೆಂಡತಿಗೆ ಮುತ್ತಿಟ್ಟ ಯಶ್‌

  • ದಂಪತಿ ನಡುವೆ ಯಾವತ್ತೂ ಜಗಳವಾಗಿಲ್ಲ- ಬಿಲ್ಡಿಂಗ್ ಕನ್‌ಸ್ಟ್ರಕ್ಟರ್‌ ಖ್ವಾಜಾ ಹುಸೇನ್

    ದಂಪತಿ ನಡುವೆ ಯಾವತ್ತೂ ಜಗಳವಾಗಿಲ್ಲ- ಬಿಲ್ಡಿಂಗ್ ಕನ್‌ಸ್ಟ್ರಕ್ಟರ್‌ ಖ್ವಾಜಾ ಹುಸೇನ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ನೆರೆಯೊರೆಯವರು ಮಾಧ್ಯಮದವರ ಜೊತೆಗೆ ಮಾತನಾಡಿದ್ದಾರೆ.


    ಬಿಲ್ಡಿಂಗ್ ಕನ್‌ಸ್ಟ್ರಕ್ಷನ್ ಮಾಡುವ ಖ್ವಾಜಾ ಹುಸೇನ್ ಮಾಧ್ಯಮದವರ ಜೊತೆಗೆ ಮಾತನಾಡಿ, ದಂಪತಿ ನಡುವೆ ಯಾವತ್ತು ಜಗಳವಾಗಿಲ್ಲ. 9 ತಿಂಗಳ ಗಂಡು ಮಗು ಇದೆ. 2 ವರ್ಷದಿಂದ ಇದೇ ಅಪಾರ್ಟ್ ಮೆಂಟ್‍ನಲ್ಲಿ ವಾಸವಾಗಿದ್ದರು. ಮನೆಯಲ್ಲಿ ಓರ್ವ ಅಜ್ಜಿ ಮತ್ತು ಒಬ್ಬಾಕೆ ಕೆಲಸದಾಕೆ ಇದ್ದರು. ಬೆಳಗ್ಗೆ ನೀರಜ್ ಕೆಲಸಕ್ಕೆ ಹೋಗಿದ್ದರು. ಈ ಕೆಲಸದವರು ಬಾಗಿಲು ಬಡಿದರೂ ಸೌಂದರ್ಯ ಬಾಗಿಲು ತೆಗೆದಿಲ್ಲ. ಆಗ ನಾವೆಲ್ಲ ಪಕ್ಕದಲ್ಲೇ ಪೈಂಟಿಂಗ್ ಮಾಡುತ್ತಿದ್ದೆವು. 10.30 ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಗುವಾದ ಬಳಿಕ ಡಿಪ್ರೆಷನ್‌ಗೆ ಒಳಗಾಗಿದ್ರಾ ಬಿಎಸ್‌ವೈ ಮೊಮ್ಮಗಳು?

    ಸೌಂದರ್ಯ ಪತಿ ಕೆಲಸಕ್ಕೆ ಹೋದಾಗ ಘಟನೆ ನಡೆದಿದೆ. ಘಟನೆ ನಡೆದ ನಂತರ ಸೌಂದರ್ಯ ತಾಯಿ, ಅಣ್ಣ ಕುಟುಂಬಸ್ಥರು ಮೃತ ದೇಹ ತೆಗೆದುಕೊಂಡು ಹೋಗಿದ್ದಾರೆ. ಯಾವ ಪೊಲೀಸರೂ ಇಲ್ಲಿಗೆ ಬಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ

    ಪೇಟಿಂಗ್ ಕೆಲಸ ಮಾಡುತ್ತಿದ್ದ ಸೇಲ್ವ ಕುಮಾರ್ ಮಾತನಾಡಿ, ತಿಂಡಿ ರೆಡಿ ಮಾಡಿ ನಾವು ಕರೆಯುತ್ತಿದ್ದೇವೆ, ಆದರೆ ಬಾಗಿಲಿ ಓಪನ್ ಆಗುತ್ತಿಲ್ಲ ಎಂದು ಸೌಂದರ್ಯ ಅವರ ಮನೆಯ ಕೆಲಸದವರು ಬಂದು ನಮ್ಮನ್ನು ಕರೆದರು. ನಾವು ಹೋಗಿ ಬಾಗಿಲು ತೆರೆದಾಗ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಇಬ್ಬರು ಕೆಲಸಗಾರರು ಅವರ ಮನೆಯಲ್ಲಿ ಇದ್ದರು. ನಂತರ ಅವರ ಮನೆಯ ಕೆಲಸಗಾರರು ಪೊಲೀಸ್ ಅವರಿಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.

  • ಕಾಲು ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಅಜ್ಜಿ, ಮೊಮ್ಮಗಳು ಸಾವು

    ಕಾಲು ತೊಳೆಯಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು ಅಜ್ಜಿ, ಮೊಮ್ಮಗಳು ಸಾವು

    ಚಿಕ್ಕಬಳ್ಳಾಪುರ: ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಅಜ್ಜಿ ಹಾಗೂ ಮೊಮ್ಮಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಪಿಂಜಾರಹಳ್ಳಿಯಲ್ಲಿ ನಡೆದಿದೆ.

    ಗ್ರಾಮದ 45 ವರ್ಷದ ಮಂಜುಳಾ ಹಾಗೂ ಮೊಮ್ಮಗಳು 6 ವರ್ಷದ ಲಕ್ಷ್ಮೀ ಮೃತ ದುರ್ದೈವಿಗಳು. ಗ್ರಾಮದ ಹೊರವಲಯದ ನರಸಾರೆಡ್ಡಿ ಅವರ ತೋಟದಲ್ಲಿನ ಕೃಷಿ ಹೊಂಡದಲ್ಲಿ ಕಾಲು ತೊಳೆಯಲು ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಜ್ಜಿ, ಮೊಮ್ಮಗಳು ಮೃತಪಟ್ಟಿದ್ದಾರೆ.

    ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  • ಮೊಮ್ಮಗಳ ಜೊತೆ ಮಗಳ ಮನೆಗೆ ಹೊರಟ ತಾಯಿ ಸ್ಮಶಾನಕ್ಕೆ

    ಮೊಮ್ಮಗಳ ಜೊತೆ ಮಗಳ ಮನೆಗೆ ಹೊರಟ ತಾಯಿ ಸ್ಮಶಾನಕ್ಕೆ

    – ಪ್ರಾಣ ಹೋಗುವುದನ್ನು ನೋಡುತ್ತ ನಿಂತ ಜನ

    ಯಾದಗಿರಿ: ಮೊಮ್ಮಗಳ ಜೊತೆ ಮಗಳ ಮನೆಗೆ ತಾಯಿ ಹೊರಟಾಗ ಆಟೋ ಪಲ್ಟಿಯಾಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಕ್ಯಾತಪ್ಪನಳ್ಳಿ ಗ್ರಾಮದ ಬಳಿ ನಡೆದಿದೆ.

    ಘಟನೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೊನ್ನೂರಿನ 55 ವರ್ಷದ ಶರಣಮ್ಮ ಸ್ಥಳದಲ್ಲೇ ಪ್ರಾಣಬಿಟ್ಟಿದ್ದು, ಮೊಮ್ಮಗಳು ಭಾಗ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಶರಣಮ್ಮನ್ನ ಪ್ರಾಣ ತಮ್ಮ ಕಣ್ಣೆದರು ಹೋಗುತ್ತಿದ್ದರು ಜನ ಕಟುಕರಂತೆ ನೋಡುತ್ತಾ ನಿಂತಿದ್ದಾರೆ. ಭಾಗ್ಯ ಮತ್ತು ಶರಣಮ್ಮ ಬಿದ್ದು ಒದ್ದಾಡುತ್ತಿದ್ದರು ಜನ ಮಾತ್ರ ಸಹಾಯಕ್ಕೆ ತೆರಳಿಲ್ಲ.

    ಕೊನೆ ಉಸಿರು ಹೋಗುವ ತನಕ ಅವರಿಬ್ಬರನ್ನು ನೋಡುತ್ತಾ ಮೊಬೈಲ್ ನಲ್ಲಿ ವಿಡಿಯೋ ತೆಗೆಯುತ್ತಿದ್ದರು. ಜನರಲ್ಲಿ ಮಾನವೀಯತೆ ಸತ್ತುಹೋಗಿದೆ ಎನ್ನುವಂತಾಗಿದೆ. ಮೃತ ಶರಣಮ್ಮ ತನ್ನ ಮಗಳ ಮನೆ ಅಚ್ಚೋಲಗೆ ಮೊಮ್ಮಗಳು ಭಾಗ್ಯ ಜೊತೆ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಅವಘಡದಲ್ಲಿ ಶರಣಮ್ಮ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಬಾಲಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.ಪಿಎಸ್‍ಐ ಸುರೇಶ ಸ್ಥಳಕ್ಕೆ ತೆರಳಿ ಮಾಹಿತಿ ಪಡೆಯುತ್ತಿದ್ದಾರೆ.

  • ಅಜ್ಜನ 11 ಲಕ್ಷ ಲಪಟಾಯಿಸಿದ್ದ ಖತರ್ನಾಕ್ ಮೊಮ್ಮಗಳು ಅರೆಸ್ಟ್

    ಅಜ್ಜನ 11 ಲಕ್ಷ ಲಪಟಾಯಿಸಿದ್ದ ಖತರ್ನಾಕ್ ಮೊಮ್ಮಗಳು ಅರೆಸ್ಟ್

    – ಇನಿಯನ ಜೊತೆ ಸೇರಿ ಪ್ಲಾನ್

    ರಾಂಚಿ: ತನ್ನ ಇನಿಯನ ಜೊತೆ ಸೇರಿ ಅಜ್ಜನ 11.80 ಲಕ್ಷ ರೂಪಾಯಿ ಹಣ ಲಪಟಾಯಿಸಿದ್ದ ಖತರ್ನಾಕ್ ಮೊಮ್ಮಗಳು ಪೊಲೀಸರ ಅತಿಥಿಯಾಗಿದ್ದಾಳೆ. ಜಾರ್ಖಂಡ್ ರಾಜ್ಯದ ಧನ್‍ಬಾದ್ ನಲ್ಲಿ ಈ ಘಟನೆ ನಡೆದಿದೆ.

    ಧನ್‍ಬಾದ್ ಜಿಲ್ಲೆಯ ಭೂಲಿ ನಿವಾಸಿ ರಾಕೇಶ್ ಕುಮಾರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಮ್ಮ ತಂದೆ-ತಾಯಿ ಖಾತೆಯಿಂದ ಅಕ್ರಮವಾಗಿ 11 ಲಕ್ಷ 80 ಸಾವಿರ ರೂಪಾಯಿ ವರ್ಗವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಪ್ರಕರಣವನ್ನ ಧನ್‍ಬಾದ್ ಸೈಬರ್ ಠಾಣೆಗೆ ವರ್ಗಾಯಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿ ಮತ್ತು ಆಕೆಯ ಪ್ರಿಯಕರನ್ನ ಕೋಲ್ಕತ್ತಾದಲ್ಲಿ ಬಂಧಿಸಿ ಧನ್‍ಬಾದ್ ಗೆ ಕರೆ ತಂದಿದ್ದಾರೆ.

    ಯುವತಿ ಬಿಸಿಸಿಎಲ್ ಸಹಾಯದಿಂದ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಸದ್ಯ ಇಬ್ಬರ ಬಳಿಯಲ್ಲಿದ್ದ 8.25 ಲಕ್ಷ ರೂ. ಹಣ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.