Tag: grandchildren

  • 100ನೇ ವರ್ಷದ ಹುಟ್ಟುಹಬ್ಬಕ್ಕೆ 90ರ ಹೆಂಡತಿಯನ್ನು ಮರುಮದುವೆಯಾದ

    100ನೇ ವರ್ಷದ ಹುಟ್ಟುಹಬ್ಬಕ್ಕೆ 90ರ ಹೆಂಡತಿಯನ್ನು ಮರುಮದುವೆಯಾದ

    ಕೋಲ್ಕತ್ತಾ: ಹುಟ್ಟು, ಸಾವು ನಮ್ಮ ಕೈಯಲ್ಲಿ ಇಲ್ಲ. ಆದರೆ ಇರುವಷ್ಟು ದಿನ ಸಂತೋಷವಾಗಿರಬೇಕು ಎಂದು ಹಿರಿಯರು ಹೇಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ 100ನೇ ಹುಟ್ಟುಹಬ್ಬವನ್ನು ಆಚರಿಸುವ ವೇಳೆ 90 ವರ್ಷದ ಹೆಂಡತಿಯನ್ನು ಮರುಮದುವೆ ಮಾಡಿಕೊಂಡಿದ್ದಾನೆ. ಈ ಮದುವೆಯಲ್ಲಿ ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಭಾಗವಹಿಸಿದ್ದರು.

    ಪಶ್ಚಿಮ ಬಂಗಾಳದ ಹಳ್ಳಿಯೊಂದರ ನಿವಾಸಿ ಬಿಸ್ವನಾಥ್ ಸರ್ಕಾರ್, ತಮ್ಮ 100ನೇ ಹುಟ್ಟುಹಬ್ಬವನ್ನು ಆಚರಿಸಲು 90 ವರ್ಷದ ಪತ್ನಿ ಸುರೋಧ್ವನಿ ಸರ್ಕಾರ್ ಅವರನ್ನು ಮರುಮದುವೆ ಮಾಡಿಕೊಂಡಿದ್ದಾರೆ. 100 ನೇ ವರ್ಷಕ್ಕೆ ಕಾಲಿಟ್ಟಾಗ ಬಿಸ್ವನಾಥ್ ಅವರಿಗೆ ಏನಾದರೂ ವಿಶೇಷವಾದದ್ದನ್ನು ಮಾಡಲು ಬಯಸಿದ್ದರು ಹೀಗಾಗಿ ಕುಟುಂಬಸ್ಥರು ಈ ಯೋಚನೆ ಮಾಡಿದ್ದಾರೆ.

    ಮಾವನ ಮದುವೆ ಕುರಿತಾಗಿ ಮಾತನಾಡಿದ ಸೊಸೆ, ಬಿಸ್ವನಾಥ್ ಅವರು ಆರು ಮಕ್ಕಳು, 23 ಮೊಮ್ಮಕ್ಕಳು ಮತ್ತು 10 ಮೊಮ್ಮಕ್ಕಳು ಉಪಸ್ಥಿತಿಯಲ್ಲಿ 90 ವರ್ಷದ ಪತ್ನಿ ಸುರೋಧ್ವನಿ ಅವರನ್ನು ಮರುಮದುವೆಯಾದರು. ಕೆಲವು ತಿಂಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯದ್ದನ್ನು ನೋಡಿದಾಗ ಮರುಮದುವೆ ಮಾಡುವ ಆಲೋಚನೆ ತನಗೆ ಹೊಳೆದಿತ್ತು . ಈ ಬಗ್ಗೆ ನಾನು ಕುಟುಂಬಸ್ಥರಿಗೆ ಹೇಳಿದೆ. ಬೇರೆ ರಾಜ್ಯಗಳಲ್ಲಿ ವಾಸಿಸುವ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಹಳ್ಳಿಗೆ ಬಂದರು ಹೀಗಾಗಿ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಲು ಸಾಧ್ಯವಾಯಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ವಿಶ್ವದ ಸ್ವೀಟೆಸ್ಟ್‌ ಭಯೋತ್ಪಾದಕ: ಅರವಿಂದ್‌ ಕೇಜ್ರಿವಾಲ್‌

    ನಮ್ಮ ಅಜ್ಜಿಯರು ಜಿಯಾಗಂಜ್‍ನ ಬೆನಿಯಾಪುಕುರ್ ಗ್ರಾಮದಲ್ಲಿ ವಾಸಿಸುತ್ತಿದ್ದರೂ, ನಮ್ಮ ಪೂರ್ವಜರ ಮನೆಯು ಸುಮಾರು ಐದು ಕಿಮೀ ದೂರದಲ್ಲಿರುವ ಬಮುನಿಯಾ ಗ್ರಾಮದಲ್ಲಿದೆ. ನನ್ನ ಅಜ್ಜಿಯನ್ನು ಎರಡು ದಿನಗಳ ಹಿಂದೆ ಅಲ್ಲಿಗೆ ಕರೆದೊಯ್ಯಲಾಯಿತು, ಅಜ್ಜಿ, ಅಜ್ಜನನ್ನು ಮದುವೆಗೆ ತಯಾರು ಮಾಡುವ ಜವಾಬ್ದಾರಿಯನ್ನು ಮೊಮ್ಮಕ್ಕಳು ವಹಿಸಿಕೊಂಡಿದ್ದೇವು.

    ವರನಾದ ಅಜ್ಜನನ್ನು ವಧು ಮನೆಗೆ ಕರೆತರುವಾಗ ಕುದುರೆ-ಬಂಡಿಯಲ್ಲಿ ಪಟಾಕಿ ಸೌಂಡ್ ಮಧ್ಯೆ ಭರ್ಜರಿಯಾಗಿ ಎಂಟ್ರಿಕೊಟ್ಟರು. ದಂಪತಿ ಧೋತಿ-ಕುರ್ತಾ ಮತ್ತು ಸೀರೆಯನ್ನು ಧರಿಸಿ ಮದುವೆಗೆ ಸಿಂಗಾರಗೊಂಡಿದ್ದರು. ನೋಟುಗಳಿಂದ ಮಾಡಿದ ಹಾರಗಳನ್ನು ಬದಲಾಯಿಸಿಕೊಂಡರು. ನಂತರ ರುಚಿಯಾದ ಭೋಜನವನ್ನು ಏರ್ಪಡಿಸಲಾಗಿತ್ತು. ಈ ಸಂತೋಷದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ನೆರೆಹೊರೆಯವರನ್ನೂ ಆಹ್ವಾನಿಸಲಾಗಿತ್ತು.

     

  • ಬಡ ರೈತನ ಸಂಕಷ್ಟಕ್ಕೆ ಮಿಡಿದ ಜ್ಯೋತಿಷಿ ಹೃದಯ- ಎತ್ತುಗಳ ಕೊಡುಗೆ

    ಬಡ ರೈತನ ಸಂಕಷ್ಟಕ್ಕೆ ಮಿಡಿದ ಜ್ಯೋತಿಷಿ ಹೃದಯ- ಎತ್ತುಗಳ ಕೊಡುಗೆ

    – ಅಜ್ಜನಿಗೆ ಉಳುಮೆಯಲ್ಲಿ ಸಹಾಯ ಮಾಡಲು ಹೆಗಲು ಕೊಟ್ಟಿದ್ದ ಮೊಮ್ಮಕ್ಕಳು

    ಮಂಡ್ಯ: ಅಜ್ಜನಿಗೆ ಎತ್ತುಗಳನ್ನು ಕೊಳ್ಳಲು ಕಷ್ಟವಾಗಿರುವ ಕಾರಣ ಇಬ್ಬರು ಮೊಮ್ಮಕ್ಕಳು ನೊಗಕ್ಕೆ ಹೆಗಲು ಕೊಟ್ಟು ವ್ಯವಸಾಯ ಮಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದಲ್ಲಿ ಜರುಗಿತ್ತು. ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಈ ಸುದ್ದಿ ನೋಡಿದ ಜ್ಯೋತಿಷಿ ಕಮಲಾಕರ ಭಟ್ ಅವರು ಬಡ ರೈತನಿಗೆ ಎತ್ತುಗಳನ್ನು ನೀಡಲು ಮುಂದೆ ಬಂದಿದ್ದಾರೆ.

    ಎತ್ತುಗಳಿಲ್ಲದ ಕಾರಣ ಅಜ್ಜನಿಗೆ ಕಷ್ಟವಾಗಬಾರದು ಎಂದು ಮೊಮ್ಮಕ್ಕಳು ನೋಗವನ್ನು ಹೊತ್ತು ಹೊಲ ಉಳುಮೆ ಮಾಡುವ ಮೂಲಕ ಸಹಾಯವಾಗಿದ್ದರು. ಈ ಕುರಿತು ಬುಧವಾರ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ವರದಿಯನ್ನು ನೋಡಿದ ಜ್ಯೋತಿಷಿ ಕಮಲಾಕರ ಭಟ್ ಅವರು ಅಜ್ಜನಿಗೆ ಎತ್ತುಗಳನ್ನು ಕೊಡಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಡಾನೆಗಳನ್ನು ಸ್ಥಳಾಂತರಿಸಿ, ಇಲ್ಲವೇ ನಮ್ಮನ್ನೇ ಸ್ಥಳಾಂತರಿಸಿ- ಸರ್ಕಾರಕ್ಕೆ ಮಲೆನಾಡಿಗರ ಆಗ್ರಹ

    ಬಳಘಟ್ಟ ಗ್ರಾಮದ ರೈತ ಸಣ್ಣಸ್ವಾಮಿ ಅವರು 1.5 ಎಕರೆ ಜಮೀನು ಹೊಂದಿದ್ದು, ಬೇಸಾಯ ಮಾಡಲು ಇವರ ಬಳಿ ಎತ್ತುಗಳಿಲ್ಲ. ಕೂಲಿ ಕೊಟ್ಟು ಉಳುಮೆ ಮಾಡಿಸಲು ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಇಲ್ಲ. ಹೀಗಾಗಿ ಸಣ್ಣಸ್ವಾಮಿ ಅವರಿಗೆ ಅವರ ಮೊಮ್ಮಕ್ಕಳಾದ ವರ್ಷಿತಾ, ಅಂಕಿತ ಹೆಗಲು ಕೊಟ್ಟು ಸಹಾಯ ಮಾಡುತ್ತಿದ್ದಾರೆ.

    ಎತ್ತುಗಳ ರೀತಿ ನೊಗ ಹೊತ್ತು ಈ ಇಬ್ಬರು ಹೆಣ್ಣು ಮಕ್ಕಳು ಹೊಲದಲ್ಲಿ ನೆಟ್ಟಿರುವ ರಾಗಿಗೆ ಉಳಿಮೆ ಮಾಡಲು ಸಹಾಯಕರಾಗಿದ್ದಾರೆ. ಕಾಲೇಜಿಗೆ ಹೋಗುವ ಈ ಇಬ್ಬರು ಹೆಣ್ಣು ಮಕ್ಕಳು, ಬಿಡುವಿನ ವೇಳೆ ಜಮೀನಿಗೆ ಬಂದು ಅಜ್ಜನ ಜೊತೆ ಇದೇ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ನಮ್ಮ ಬಳಿ ಎತ್ತುಗಳಿಲ್ಲ ಅದಕ್ಕಾಗಿ ಈ ಪರಿಸ್ಥಿತಿ ಬಂದಿದೆ. ಕೂಲಿ ಕೊಟ್ಟು ವ್ಯವಸಾಯ ಮಾಡುವಷ್ಟು ಶಕ್ತಿ ನಮಗೆ ಇಲ್ಲ. ಯಾರಾದರೂ ಎತ್ತುಗಳನ್ನು ಕೊಡಿಸಿದರೆ ಸಹಾಯವಾಗುತ್ತದೆ ಎಂದು ಅಜ್ಜ ಹಾಗೂ ಮೊಮ್ಮಕ್ಕಳು ಕೇಳಿಕೊಂಡಿದ್ದರು.

  • ಅಜ್ಜನ ಕಷ್ಟಕ್ಕೆ ಮರುಗಿ ಎತ್ತುಗಳಾದ ಮೊಮ್ಮಕ್ಕಳು

    ಅಜ್ಜನ ಕಷ್ಟಕ್ಕೆ ಮರುಗಿ ಎತ್ತುಗಳಾದ ಮೊಮ್ಮಕ್ಕಳು

    – ಹೆಣ್ಣುಮಕ್ಕಳಿಂದಲೇ ನೊಗಕ್ಕೆ ಹೆಗಲು ಕೊಟ್ಟು ಉಳುಮೆ

    ಮಂಡ್ಯ: ಅಜ್ಜನಿಗೆ ಎತ್ತುಗೊಳ್ಳನ್ನು ಕೊಳ್ಳಲು ಕಷ್ಟವಾಗಿರುವ ಕಾರಣ ಇಬ್ಬರು ಮೊಮ್ಮಕ್ಕಳು ನೊಗಕ್ಕೆ ಹೆಗಲು ಕೊಟ್ಟು ವ್ಯವಸಾಯ ಮಾಡುತ್ತಿರುವ ಮನಕಲಕುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮದಲ್ಲಿ ನಡೆದಿದೆ.

    ಬಳಘಟ್ಟ ಗ್ರಾಮದ ರೈತ ಸಣ್ಣಸ್ವಾಮಿ ಅವರಿಗೆ 1.5 ಎಕರೆ ಜಮೀನು ಇದ್ದು, ಬೇಸಾಯ ಮಾಡಲು ಇವರ ಬಳಿ ಎತ್ತುಗಳಿಲ್ಲ. ಕೂಲಿ ಕೊಟ್ಟು ಉಳುಮೆ ಮಾಡಿಸಲು ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ಸಣ್ಣಸ್ವಾಮಿ ಅವರಿಗೆ ಅವರ ಮೊಕ್ಕಳಾದ ವರ್ಷಿತಾ, ಅಂಕಿತ ಹೆಗಲು ಕೊಟ್ಟಿದ್ದಾರೆ. ಇದನ್ನೂ ಓದಿ: ವಿದ್ಯಾಪೀಠಕ್ಕೆ ಬನ್ನಿ – ಕಾಲೇಜ್‌, ಕೋರ್ಸ್‌ಗಳ ಬಗ್ಗೆ ಉಚಿತವಾಗಿ ಮಾಹಿತಿ ಪಡೆದುಕೊಳ್ಳಿ

    ಎತ್ತುಗಳ ರೀತಿ ನೊಗ ಹೊತ್ತು, ಇಬ್ಬರು ಹೆಣ್ಣು ಮಕ್ಕಳು ಹೊಲದಲ್ಲಿ ನೆಟ್ಟಿರುವ ರಾಗಿಗೆ ಉಳಿಮೆ ಮಾಡಲು ಸಹಾಯಕರಾಗಿದ್ದಾರೆ. ಕಾಲೇಜಿಗೆ ಹೋಗುವ ಈ ಇಬ್ಬರು ಹೆಣ್ಣು ಮಕ್ಕಳು, ಬಿಡುವಿನ ವೇಳೆ ಜಮೀನಿಗೆ ಬಂದು ಅಜ್ಜನ ಜೊತೆ ಇದೇ ರೀತಿಯ ಸಹಾಯವನ್ನು ಮಾಡುತ್ತಿದ್ದಾರೆ. ನಮ್ಮ ಬಳಿ ಎತ್ತುಗಳಿಲ್ಲ, ಅದಕ್ಕಾಗಿ ಈ ಪರಿಸ್ಥಿತಿ ಬಂದಿದೆ. ಕೂಲಿ ಕೊಟ್ಟು ವ್ಯವಸಾಯ ಮಾಡುವಷ್ಟು ಶಕ್ತಿ ನಮಗೆ ಇಲ್ಲ. ಯಾರಾದರೂ ಎತ್ತುಗಳನ್ನು ಕೊಡಿಸಿದರೆ ಸಹಾಯವಾಗುತ್ತದೆ ಎನ್ನುತ್ತಾರೆ ಅಜ್ಜ ಹಾಗೂ ಮೊಮ್ಮಕ್ಕಳು.

  • ಆಸ್ತಿ ನೀಡಲು ಒಪ್ಪದ್ದಕ್ಕೆ ಅಜ್ಜನ ಮರ್ಮಾಂಗ ಹಿಚುಕಿ ಕೊಲೆಗೈದ ಮೊಮ್ಮಕ್ಕಳು!

    ಆಸ್ತಿ ನೀಡಲು ಒಪ್ಪದ್ದಕ್ಕೆ ಅಜ್ಜನ ಮರ್ಮಾಂಗ ಹಿಚುಕಿ ಕೊಲೆಗೈದ ಮೊಮ್ಮಕ್ಕಳು!

    ಬಾಗಲಕೋಟೆ: ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜನ ಮರ್ಮಾಂಗವನ್ನು ಹಿಚುಕಿ ಕೊಲೆ ಮಾಡಿದ ಅಮಾನವೀಯ ಘಟನೆ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ನೀರಲಕೇರಿ ಗ್ರಾಮದ ಯಲ್ಲಪ್ಪ ಪಟಾತ್ (85) ಮೃತ ಹಿರಿಯ ವ್ಯಕ್ತಿ. ಯಲ್ಲಪ್ಪ ಅವರ ಮೊಮ್ಮಕ್ಕಳಾದ ಬೀರಪ್ಪ ಪಟಾತ್, ಸೋಮವ್ವ ಕೋರಕೊಪ್ಪ ಕೊಲೆಗೈದ ಆರೋಪಿಗಳು.

    ನಡೆದಿದ್ದು ಏನು?
    ಮೃತ ಅಜ್ಜ ಯಲ್ಲಪ್ಪ ಅವರು ತಮ್ಮ ಪಾಲಿನ ಆಸ್ತಿಯನ್ನು ಮಗಳ ಹೆಸರಿಗೆ ವರ್ಗಾವಣೆ ಮಾಡಲು ಮುಂದಾಗಿದ್ದರು. ಇದಕ್ಕೆ ವಿರೋಧ ವ್ಯಕ್ತಪಡೆಸಿದ ಬೀರಪ್ಪ ಹಾಗೂ ಸೋಮವ್ವ ಆಸ್ತಿ ತಮಗೆ ಮಾತ್ರ ಸೇರಬೇಕೆಂದು ಯಲ್ಲಪ್ಪ ಅವರಿಗೆ ತಾಕೀತು ಮಾಡಿದ್ದರು. ಆದರೆ ಇದಕ್ಕೆ ಯಲ್ಲಪ್ಪ ಒಪ್ಪದೇ ಇದ್ದಾಗ
    ಜೂನ್ 17 ರಂದು ಕೊಲೆ ಮಾಡಿದ್ದಾರೆ.

    ಯಲ್ಲಪ್ಪ ಅವರ ಅಂತ್ಯಸಂಸ್ಕಾರ ಮಾಡಲು ಧಾರ್ಮಿಕ ವಿಧಿವಿಧಾನಕ್ಕೆ ಬೀರಪ್ಪ ಹಾಗೂ ಸೋಮವ್ವ ಮುಂದಾಗಿದ್ದರು. ಕೃತ್ಯದ ಮಾಹಿತಿ ಪಡೆದು ಗ್ರಾಮಕ್ಕೆ ಭೇಟಿ ನೀಡಿದ ಕೆರೂರು ಪೊಲೀಸರು ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು, ಯಲ್ಲಪ್ಪ ಅವರ ಮರ್ಮಾಂಗಕ್ಕೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎನ್ನುವ ಮಾಹಿತಿ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಂಕೆಯ ಆಧಾರದಲ್ಲಿ ಬೀರಪ್ಪ ಪಟಾತ್ ಮತ್ತು ಸೋಮವ್ವ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳಾದ ಬೀರಪ್ಪ ಪಟಾತ್ ಹಾಗೂ ಸೋಮವ್ವ ಕೋರಕೊಪ್ಪರನ್ನು ಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.