Tag: grand wedding

  • ಅರ್ಜುನ್ ಕಪೂರ್ -ಮಲೈಕಾ ಅರೋರಾ ಮ್ಯಾರೇಜ್ ಡೇಟ್ ಫಿಕ್ಸ್

    ಅರ್ಜುನ್ ಕಪೂರ್ -ಮಲೈಕಾ ಅರೋರಾ ಮ್ಯಾರೇಜ್ ಡೇಟ್ ಫಿಕ್ಸ್

    ಬಾಲಿವುಡ್‌ನ ರಣ್‌ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೋಡಿಯ ನಂತರ ಮತ್ತೊಂದು ಸ್ಟಾರ್ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹೀಗೊಂದು ಸುದ್ದಿ ಬಾಲಿವುಡ್ ಗಲ್ಲಿನಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸುತ್ತಿದೆ.

    ರಣ್‌ಬೀರ್ ಮತ್ತ ಆಲಿಯಾ ಮದುವೆಯ ನಂತರ ಬಿಟೌನ್ ಲವ್ ಬರ್ಡ್ಸ್ ಎಂದೇ ಫೇಮಸ್ ಆಗಿರುವ ಜೋಡಿ ಅರ್ಜುನ್ ಕಪೂರ್ ಮತ್ತು ಮಲೈಕಾ ಮದುವೆ ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಇದೇ ವರ್ಷದ ಕೊನೆಗೆ ಹಸೆಮಣೆ ಏರಲು ಈ ಜೋಡಿ ರೆಡಿಯಾಗಿದೆ.

    ಕಪೂರ್ ಕುಟುಂಬದ ಕುಡಿ ಅರ್ಜುನ್ ಮತ್ತು ಮಲೈಕಾ ತಮ್ಮ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮೂರಕ್ಷರದ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಇದೇ ವರ್ಷ ನವೆಂಬರ್ ಕೊನೆಯಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗಲು ಈ ಜೋಡಿ ಯೋಚಿಸಿದೆಯಂತೆ. ಇದನ್ನೂ ಓದಿ: ಅಟ್ಲೀ ಸಂಭಾವನೆ ಕೇಳಿ ಅಲ್ಲು ಅರ್ಜುನ್ ಶಾಕ್

    ಸಾಕಷ್ಟು ವರ್ಷಗಳಿಂದ ಡೇಟಿಂಗ್‌ನಲ್ಲಿರುವ ಅರ್ಜುನ್ ಮತ್ತು ಮಲೈಕಾ ಜೋಡಿಯ ಮದುವ ಸುದ್ದಿ ಮೂಲಕ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನೆಚ್ಚಿನ ಜೋಡಿಯ ಸಖತ್ ಸುದ್ದಿ ಕೇಳಿ ಫ್ಯಾನ್ಸ್ ಥ್ರೀಲ್ ಆಗಿದ್ದಾರೆ.

  • ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

    ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

    – ರಾಜ್ಯದಲ್ಲಿ ಕೊರೊನಾ ಭೀತಿ ಇದ್ದರೂ ಅದ್ದೂರಿ ಮದುವೆ
    – ಎಂಎಲ್‍ಸಿ ಕವಟಗಿಮಠ ಮಗಳ ಮದುವೆಯಲ್ಲಿ ಗಣ್ಯಾತಿಗಣ್ಯರು ಭಾಗಿ

    ಬೆಳಗಾವಿ: ರಾಜ್ಯಾದ್ಯಂತ ಅದ್ದೂರಿ ಮದುವೆಗೆ ಬ್ರೇಕ್ ಹಾಕಿದ್ದು ನೂರಕ್ಕೂ ಹೆಚ್ಚು ಜನ ಒಂದೆಡೆ ಸೇರಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಆದರೆ ಇದೆಲ್ಲವನ್ನೂ ಗಾಳಿಗೆ ತೂರಿದ ಸರ್ಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.

    ಅಷ್ಟೇ ಅಲ್ಲದೆ ಈ ಮದುವೆಯಲ್ಲಿ ಸಚಿವರು, ಮಾಜಿ ಶಾಸಕರು ಗಣ್ಯಾತಿಗಣ್ಯರು ಸೇರಿದಂತೆ ಸಿಎಂ ಯಡಿಯೂರಪ್ಪ ಅವರು ಕೂಡ ಭಾಗವಹಿಸಿ ನವ ದಂಪತಿಗಳಿಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ. ಸರ್ಕಾರದ ಮುಖ್ಯ ಸಚೇತಕರೇ ಸಿಎಂ ಆದೇಶವನ್ನು ಗಾಳಿಗೆ ತೂರಿದ್ದಾರೆ. ಹಾಗಾದರೆ ಸಿಎಂ ಆದೇಶ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮಗಳ ಮದುವೆಗೆ ಅನ್ವಯವಾಗುದಿಲ್ವಾ ಎಂಬ ಪ್ರಶ್ನೆ ಸಾರ್ವಜನಕರಿಂದ ಕೇಳಿ ಬರುತ್ತಿದೆ.

    ಬೆಳಗಾವಿಯ ಉದ್ಯಮ್ ಬಾಗ್‍ನಲ್ಲಿರುವ ಶಗುನ್ ಗಾರ್ಡನ್‍ನಲ್ಲಿ ಮಹಾಂತೇಶ್ ಕವಟಗಿಮಠ ಮಗಳ ಮದುವೆ ನಡೆಯಿತು. ಈ ಮದುವೆಗೆ ಸುಮಾರು ಐದು ಸಾವಿರಕ್ಕೂ ಅಧಿಕ ಜನ ಮದುವೆಗೆ ಆಗಮಿಸಿದ್ದರು. ಅದ್ದೂರಿ ಮದುವೆ ತಡೆಯಲು ಅಧಿಕಾರಿಗಳ ಮಿನಾಮೇಷ ತೋರಿದರು. ಜೊತೆಗೆ ಜಿಲ್ಲಾಡಳಿತ ಹಾಗೂ ಪೊಲೀಸರು ಶ್ರೀರಕ್ಷೆ ಒದಗಿಸಿದ್ದರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಜನಪ್ರತಿನಿಧಿಗಳು:
    ಅದ್ದೂರಿ ಮದುವೆ ನಡೆಸದಂತೆ ಆದೇಶ ಹೊರಡಿಸಿದ್ದ ಸಿಎಂ ಯಡಿಯೂರಪ್ಪ ಅವರ ಆದಿಯಾಗಿ ಜನಪ್ರತಿನಿಧಿಗಳಾದ ಕೇಂದ್ರ ಸಚಿವ ಸುರೇಶ್ ಅಂಗಡಿ, ಸಚಿವ ಶ್ರೀಮಂತ ಪಾಟೀಲ್, ಸಚಿವೆ ಶಶಿಕಲಾ ಜೊಲ್ಲೆ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಮದುವೆಗೆ ಆಗಮಿಸಿದ್ದರು. ಜೊತೆಗೆ ಕಾಶಿ ಜಗದ್ಗುರುಗಳಾದ ಚೆನ್ನಸಿದ್ದರಾಮ ಪಂಡಿತರಾದ್ಯೆ ಶಿವಾಚಾರ್ಯ ಸ್ವಾಮೀಜಿ, ಗದಗದ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು ಭಾಗಿಯಾಗಿದ್ದರು.

  • ಅದ್ಧೂರಿ ಮದುವೆಗೆ ಶೀಘ್ರವೇ ಬ್ರೇಕ್- 5 ಲಕ್ಷಕ್ಕಿಂತ ಜಾಸ್ತಿ ಖರ್ಚು ಮಾಡುವಂತಿಲ್ಲ

    ಅದ್ಧೂರಿ ಮದುವೆಗೆ ಶೀಘ್ರವೇ ಬ್ರೇಕ್- 5 ಲಕ್ಷಕ್ಕಿಂತ ಜಾಸ್ತಿ ಖರ್ಚು ಮಾಡುವಂತಿಲ್ಲ

    ನವದೆಹಲಿ: ಈ ಹಿಂದೆ ಕರ್ನಾಟಕದಲ್ಲಿ ಸರ್ಕಾರ ಅದ್ಧೂರಿ ಮದುವೆಗೆ ಬ್ರೆಕ್ ಹಾಕುವ ಪ್ರಯತ್ನ ಮಾಡಿತ್ತು ಆದರೆ ಈಗ ಲೋಕಸಭೆಯಲ್ಲೂ ಕೂಡ ಅದಕ್ಕೆ ಬ್ರೇಕ್ ಹಾಕುವಂತ ಪ್ರಯತ್ನ ಮಾಡಲಾಗುತ್ತಿದೆ.

    ಬಿಹಾರ ರಾಜಕಾರಣಿ ಪಪ್ಪು ಯಾದವ್ ಪತ್ನಿಯಾದ ಸಂಸದೆ ರಂಜಿತ ರಾಜನ್ ದುಬಾರಿ ಮದುವೆ ವಿರುದ್ಧ ಖಾಸಗಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಮದುವೆಗಳು ಎರಡು ಕುಟುಂಬಗಳನ್ನು ಒಂದು ಮಾಡುವಂತ ಕಾರ್ಯವಾಗಿದೆ. ಆದರೆ ಇತ್ತೀಚಿಗೆ ಅವರ ಸಂಪತ್ತನ್ನು ತೋರಿಸುವ ಕಾರ್ಯಕ್ರಮಗಳಾಗಿವೆ. ಆದ್ದರಿಂದ 5 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿ ಯಾರು ಮದುವೆ ಮಾಡಿಕೊಳ್ಳುತ್ತಾರೆ ಅಂತವರು ಆ ಮೊತ್ತದದಲ್ಲಿ ಶೇಕಡಾ 10ರಷ್ಟು ಹಣವನ್ನು ಬಡಹೆಣ್ಣು ಮಕ್ಕಳ ಮದುವೆಗೆ ದೇಣಿಗೆ ನೀಡಬೇಕು. ಅದಕ್ಕಾಗಿ ಸರ್ಕಾರ ನಿಧಿಯನ್ನು ಸ್ಥಾಪಿಸಲಿದೆ ಎಂದು ತಿಳಿಸಿದ್ದಾರೆ.

    ಇದರಿಂದ ಅದ್ಧೂರಿ ಮದುವೆಗೆ ಬ್ರೆಕ್ ಹಾಕಿದ ಹಾಗೆ ಮತ್ತು ಬಡ ಹೆಣ್ಣು ಮಕ್ಕಳಿಗೆ ಸಹಾಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಮಾರ್ಚ್ 9ರ ನಂತರ ಮುಂದುವರೆಯಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಒಂದು ವೇಳೆ ಈ ಮಸೂದೆ ಅಂಗೀಕಾರವಾಗಿ ಜಾರಿಗೆ ಬಂದ ನಂತರ, ಎಲ್ಲಾ ಮದುವೆಗಳನ್ನು 60 ದಿನಗಳ ಒಳಗೆ ನೋಂದಣಿ ಮಾಡಿಸುವುದು ಕಡ್ಡಾಯ ಎಂದು ಮಸೂದೆಯಲ್ಲಿ ಹೇಳಲಾಗಿದೆ.